ಅಂಗವಿಕಲ ಆರೈಕೆದಾರರಿಗೆ ಮಾಸಿಕ 1000₹ ಪ್ರೋತ್ಸಾಹಧನ .

ಅಂಗವಿಕಲ ಆರೈಕೆದಾರರಿಗೆ ಮಾಸಿಕ 1000₹ ಪ್ರೋತ್ಸಾಹಧನ.

ಫಲಾನುಭವಿಗಳ ಆಯ್ಕೆಗೆ ಸರ್ಕಾರ ಆದೇಶ

   ರಾಜ್ಯದಲ್ಲಿ ಸೆರೆಬ್ರಲ್ ಪಾಲ್ಸಿ, ಮಸ್ಕಲರ್‌ ಡಿಸ್ಟ್ರಾಪಿ, ಪಾರ್ಕಿನ್ಸನ್, ಮಲ್ಟಿಪಲ್ ಸ್ಪೆರಾ ಕಾಯಿಲೆಗಳಿಂದಾಗಿ ಅಂಗವೈಕಲ್ಯದಿಂದ ಬಳಲುತ್ತಿ ರುವ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ತಿಂಗಳು 1 ಸಾವಿರ ರು. ಪ್ರೋತ್ಸಾಹಧನ ನೀಡಲು ತಕ್ಷಣ ಫಲಾನುಭವಿಗಳ ಆಯ್ಕೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಬಜೆಟ್‌ನಲ್ಲಿ ಬಾಲ್ಯದಲ್ಲಿ ಕಂಡುಬರುವ ಚಲನೆಯ ಅಸ್ವಸ್ಥತೆ (ಸೆರೆಬ್ರಲ್ ಪಾಲ್ಸಿ), ಅನುವಂಶಿಕ

ಸ್ನಾಯು ದೌರ್ಬಲ್ಯ, ಮಲ್ಟಿಪಲ್ ಸ್ಪೆರಾಸಿಸ್ ಹಾಗೂ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವವರ ಆರೈಕೆದಾರರಿಗೆ ಪ್ರತಿ ತಿಂಗಳು 1 ಸಾವಿರ ರುಪಾಯಿ ಪ್ರೋತ್ಸಾಹ ಘೋಷಿಸಿದ್ದರು. ಧನ

ಇದರ ಜತೆಗೆ ಹೊಸ ಯೋಜನೆಯಲ್ಲಿ ಬೆನ್ನು ಹುರಿ ಅಪಘಾತದ ಅಂಗವಿಕಲರು, ಬುದ್ದಿ ಮಾಂದ್ಯತೆ 2 ಬಗೆಯನ್ನು ಸೇರಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಬೆನ್ನುಹುರಿ ಅಪಘಾತ ಅಂಗವಿ ‘ಲರು ಹಾಗೂ ಬುದ್ದಿ ಮಾಂದ್ಯತೆ ಕುರಿತ ಪ್ರಸ್ತಾವನೆಗೆ ತಾತ್ಕಾಲಿಕ ತಡೆ ನೀಡಲಾಗಿದೆ.

WhatsApp Group Join Now
Telegram Group Join Now