ಅಹೋಮ್ ರಾಜಮನೆತನ, ಮೊಘಲರು ಮತ್ತು ಮರಾಠರು (All Competative exam notes)

 -: ಅಹೋಮ್ ರಾಜಮನೆತನ :-

* ಅಹೋಮ್ ರಾಜವಂಶಸ್ಥರು 13ನೇ ಶತಮಾನದ ಪ್ರಾರಂಭದಲ್ಲಿ ಮೂಲತಃ ಈಗಿನ ಮಯನ್ಮಾರ್ ಮತ್ತು ಥೈಲ್ಯಾಂಡ್ ದೇಶಗಳಿಂದ ಭಾರತದ ಈಗಿನ ಅಸಂಭಾಗದಲ್ಲಿ ಬಂದು ನೆಲೆಸಿದರು.

* ಅಹೋಮ್ ಎಂಬ ಹೆಸರಿನಿಂದಲೇ ಇಂದು ಈ ಭಾಗಕ್ಕೆ ಅಸ್ಸಾಂ ಎಂಬ ಹೆಸರು ಬಂದಿದೆ.

* ಅಹೋಮ್ ರಾಜ ಮನೆತನ ಸ್ಥಾಪನೆಯಾಗಿದ್ದು – 1228 ರಲ್ಲಿ.

* ಸ್ಥಾಪಕ – ಸುಕಪಾ

* ಮೊದಲ ರಾಜಧಾನಿ – ಚೆರಾಯ್ ಡಾಯ್

* 1300 ರ ಸುಮಾರ್ ಗೆ ದೆಹಲಿ ಸುಲ್ತಾನರಾದ ಖಿಲ್ಜಿಗಳು ಅಹೋಮ್ ರ ಮೇಲೆ ದಾಳಿ ಮಾಡಿದರು. ಅಹೋಮ್ ರಾಜ್ಯದ ಸೈನಿಕರು ಇವರ ಸೈನ್ಯವನ್ನು ಸೋಲಿಸಿದರು.

* 1350 ರ ಇಲ್ಯಾಸ್ ಶಾಹಿ ಮತ್ತು ತುಘಲಕ್ ಸೇನೆಗಳು ಕೂಡ ಅಹೋಮದಿಂದ ಪರಭಾವಗೊಂಡಿದ್ದರು.

* 15ನೇ ಶತಮಾನದ ಅಂತ್ಯದ ವೇಳೆಗೆ ಲೂದಿ ಸೇನೆ ಅಹೋಮ ರಾಜ್ಯದ ಮೇಲೆ ದಾಳಿ ಮಾಡಿ ಸೋತು ಹಿಂತಿರುಗಿದರು.

* ಬಂಗಾಳದ ಸುಲ್ತಾನರ ನಿರಂತರ ದಾಳಿಯನ್ನು ಅಹೋಮ್ ಹಿಮ್ಮೆಟ್ಟಿಸಿದರು.

* 1658 ರಲ್ಲಿ ಪಟ್ಟಕ್ಕೆ ಬಂದ ಮೊಗಲ್ ದೊರೆ ಔರಂಗಜೇಬನು ಅಹೋಮ್ ರಾಜ್ಯವನ್ನು ಹೇಗಾದರೂ ವಶಪಡಿಸಿಕೊಳ್ಳಲೇಬೇಕೆಂದು ಹೊಂಚು ಹಾಕಿ,ಅದಕ್ಕಾಗಿ ತನ್ನ ಅತ್ಯಂತ ನಂಬಿಗಸ್ಥ ಸೇನಾನಿಯಾದ ಮೀರ್ ಜುಮ್ಲ ಮತ್ತು ದಿಲೇರ್ ಖಾನ್ ರನ್ನು ಭಾರತದ ಈಶಾನ್ಯ ಭಾಗಕ್ಕೆ ಕಳುಹಿಸಿದನು. ಇವರಿಗೆ ಬಂಗಾಳ ಮತ್ತು ಅಹೋಮ್ ರಾಜ್ಯವನ್ನು ಗೆದ್ದು ಬರುವ ಜವಾಬ್ದಾರಿಯನ್ನು ಹೊರೆಸಿದ್ದನು.

-: ಅಹೋಮ್ ರಾಜಮನೆತನದ ರಾಜ-ಜಯಧ್ವಜ ಸಿಂಘ :-

* ಮೊಘಲ ಸೇನೆಯು 7000 ಸೈನಿಕರೊಂದಿಗೆ ಮೊದಲು ಬಂಗಾಳದ ಮೇಲೆ ಮುತ್ತಿಗೆ ಹಾಕಿ ಅದನ್ನು ವಶಪಡಿಸಿಕೊಂಡು ನಂತರ ಬ್ರಹ್ಮ ಪುತ್ರ ನದಿಯ ಉದ್ದಕ್ಕೆ ಸಾಗಿ ಅಹೋಮ್ ರಾಜ್ಯವನ್ನು ತಲುಪಿತು.

* ಔರಂಗಜೇಬನ ಸೇನಾನಿ ” ಮೀರ್ ಜುಮ್ಲ” ನ ಸೇನೆಯು ಗುವಾಹಟಿ, ಸಿಮಾಲ್ಗಳು ಮತ್ತು ಆಗ ಅಹೋಮ್ ರಾಜಧಾನಿಯಾಗಿದ್ದ ಗರ್ಗಾಂನ್ನು ವಶಪಡಿಸಿಕೊಂಡಿತು. ಈಯುದ್ಧ ವು ಅಪಾರ ಸಾವುನೋವುಗಳಿಗೆ ಕಾರಣವಾಯಿತು.

* ಈ ಭೀಕರ ಯುದ್ಧದಿಂದಾಗಿ ಅಹೋಮ್ ಸಾಮ್ರಾಜ್ಯವು ತನ್ನ ಬಹುದೊಡ್ಡ ಭೂಭಾಗವನ್ನು ಕಳೆದುಕೊಳ್ಳಬೇಕಾಯಿತು.

* ಜಯ ಧ್ವಜನು ಅತ್ಯಂತ ಅಪಮಾನಕರ ಒಪ್ಪಂದಕ್ಕೆ ಬರಬೇಕಾಯಿತು.

* ಈ ಒಪ್ಪಂದದ ಪ್ರಕಾರ ಜಯಧ್ವಜನು ಖಜಾನೆಯಿಂದ ದೊಡ್ಡ ಪ್ರಮಾಣದ ಸಂಪತ್ತನ್ನು ಯುದ್ಧ ಪರಿಹಾರವಾಗಿ ಮೊಘಲರಿಗೆ ಒಪ್ಪಿಸಬೇಕಾಯಿತು. ಚಿನ್ನ, ಬೆಳ್ಳಿ, ಬೆಲೆಬಾಳುವ ಸಂಪತ್ತನ್ನು ಕೊಡಬೇಕಾಯಿತು.

* ಅಹೋಮ್ ರಾಜ್ಯವು ಆಗ ಆನೆಗಳಿಗೆ ಪ್ರಸಿದ್ಧವಾಗಿತ್ತು.ತನ್ನ ಗಜ ಸೇನೆಯಲ್ಲಿದ್ದ ಬೆಲೆಬಾಳುವ ನೂರಾರು ಆನೆಗಳನ್ನು ಕೂಡ ಆತ ಮೊಘಲರಿಗೆ ಒಪ್ಪಿಸಬೇಕಾಯಿತು.

* ಎಲ್ಲಕ್ಕಿಂತ ಅಪಮಾನಕರ ಸಂಗತಿಯೆಂದರೆ ಜಯಧ್ವಜನು ತನ್ನ 6 ವರ್ಷದ ಮಗಳನ್ನೊ ಕೂಡಾ ಶತ್ರುಗಳ ಕೈಗೆ ಒಪ್ಪಿಸಬೇಕಾಯಿತು.

* ಇದೆಲ್ಲಾ ಒಪ್ಪಂದದಿಂದಾಗಿ ರಾಜ್ಯವು ಅವನ ಕೈಯಲ್ಲಿ ಉಳಿದರೂ ಅವನ ಮಾನಸಿಕ ನೆಮ್ಮದಿ ಹೊರಟೇ ಹೋಯಿತು.ಯುದ್ಧದ ನಂತರ ಬಹಳ ಬೇಗನೆ ಹಾಸಿಗೆ ಹಿಡಿದ ಜಯಧ್ವಜನು, ಸೋಲು ಮತ್ತು ಅಪಮಾನಗಳ ಕೊರಗಿನಿಂದಲೇ ಬಹಳ ಬೇಗ ತೀರಿಕೊಂಡ.

  -: ಚಕ್ರಧ್ವಜ ಸಿಂಘ :-

* ಜಯ ಧ್ವಜನ ಮರಣದ ನಂತರ ” ಚಕ್ರಧ್ವಜ ಸಿಂಘ ” ನು ಅಹೋಮ್ ಸಾಮ್ರಾಜ್ಯದ ಅರಸನಾದನು.

* ಇವನ ಕಾಲದಲ್ಲಿ ಸಾಮ್ರಾಜ್ಯದ  ಸ್ಥಿತಿ ಹೇಳಿಕೊಳ್ಳುವಂಂಥದ್ದಾಗಿರಲಿಲ್ಲ . ಬರೀದಾದ ಖಜಾನೆ ಶತ್ರುಗಳ ಮುತ್ತಿಗೆಯಿಂದ ರಾಜ್ಯವು ಕಳಾಹೀನವಾಗಿತ್ತು.

* ಇವನು ತನ್ನ ರಾಜ್ಯವನ್ನು ಮತ್ತೆ ಎತ್ತಿ ನಿಲ್ಲಿಸುವ ಹೆಬ್ಬಯಕೆ ಇತ್ತು. ಅದಕ್ಕಾಗಿ ಒಬ್ಬ ಸಮರ್ಥ ಸೇನಾಪತಿಯ ಹುಡುಕಾಟದಲ್ಲಿದ್ದನು. ಆಗ ಇವನ ಕಣ್ಣಿಗೆ ಬಿದ್ದವನೆ ” ಲಚಿತ್”

* ಚಕ್ರಧ್ವಜ ಸಿಂಘನ ಪ್ರಸಿದ್ಧ ಸೇನಾನಿ – ಲಚಿತ್ ಬೋರ್ಪು ಕನ್

* ಅಹೋಮ್ ಸಾಮ್ರಾಜ್ಯದ ಮುಖ್ಯ ಸೇನಾಪತಿಯ ಹುದ್ದೆಯ ಹೆಸರು – ಬೋರ್ಪು ಕನ್

* ಲಚಿತ್ ಮುಖ್ಯ ಸೇನಾಧಿಪತಿಯಾದ ಮೇಲೆ ಅಹೋಮ್ ಸೈನಿಕರಲ್ಲಿ ಭರವಸೆ ಮೂಡಿಸಿದನು. ನಾಲ್ಕು ವರ್ಷ ರಾಜ್ಯದ ಸೈನಿಕರಿಗೆ ಕಠಿಣ ಸೇನಾ ತರಬೇತಿಯನ್ನು ಆಯೋಜಿಸಿದನು. ಅಶ್ವದಳವನ್ನು ಬಲಪಡಿಸಿದನು. ನೌಕಾದಳವನ್ನು ಸುಸಜ್ಜಿತ ಗೊಳಿಸಲಾಯಿತು. ಅನೇಕ ದೊಡ್ಡ ಯುದ್ಧ ನೌಕೆಗಳನ್ನು ನಿರ್ಮಿಸಲಾಯಿತು. ರಾಜ್ಯದ ಎಲ್ಲಾ ಕೋಟೆಗಳನ್ನು ಬಲಪಡಿಸಿದನು. ರಾಜ್ಯದ ಗಟ್ಟಿಮುಟ್ಟಾದ ಯುವಕರನ್ನು ದೊಡ್ಡ ಸಂಖ್ಯೆಯಲ್ಲಿ ಸೇರಿಸಿಕೊಳ್ಳಲಾಯಿತು. ಶಸ್ತ್ರಾಸ್ತ್ರಗಳನ್ನು ಆಧುನಿಕರಣಗೊಳಿಸಿಲಾಯಿತು.ಮದ್ದು ಗುಂಡುಗಳ ಅಪಾರ ಶೇಖರಣೆಯನ್ನು ಮಾಡಲಾಯಿತು. ಲಚಿತ್ನು ಈ ಯಾವ ಸಿದ್ಧತೆಯ ಸೂಚನೆಯೂ ಮೊಘಲರಿಗೆ ಸಿಗದಂತೆ ಎಚ್ಚರ ವಹಿಸಿದ್ದನು.

-: ಗುವಾಟಿಯ ವಶ :-

* ಮೊಗಲರೊಂದಿಗೆ ನಡೆದ ಯುದ್ಧದಲ್ಲಿ ಹಿಂದೆ ಗುವಾಹಟಿಯು ಅಹೋಮ್ ವಂಶದ ಕೈತಪ್ಪಿ ಮೊಘಲರ ಪಾಲಾಗಿತ್ತು ಅದರ ಮುಖ್ಯಸ್ಥನಾಗಿ ರಶೀದ್ ಖಾನ್ ಎಂಬಾತನು ಆರಿಸಿ ಬಂದನು. 1667 ರಲ್ಲಿ ಅವನ ಸ್ಥಾನಕ್ಕೆ ಫಿರೋಜ್ ಖಾನ್ ಎಂಬುವನು ಬಂದು ಕೂತನು ಈತ ವಿಲಾಸಿ,ಕ್ರೂರಿ, ಲಂಪಟ, ತನ್ನ ವಿಲಾಸಕ್ಕಾಗಿ ಅಸ್ಸಾಮಿಯ ಯುವತಿಯರನ್ನು ಕಳುಹಿಸಿ ಕೊಡಬೇಕೆಂದು ಈತ ಚಕ್ರ ದ್ವಜ ಸಿಂಘನಿಗೆ ಆಜ್ಞೆ ಮಾಡಿದನು ಈ ಘಟನೆಯು ಅಹೋಮಿ ಜನರ ಆತ್ಮಭಿಮಾನವನ್ನು ಕೆರಳಿಸಿತು ಮೊಘಲರನ್ನು ಹೇಗಾದರೂ ಮಾಡಿ ಅಹೋಮ್ ನೆಲದಿಂದ ಓಡಿಸಬೇಕೆಂದು ಅವರು ಸಂಕಲ್ಪ ಇದಕ್ಕಾಗಿ ಮೊದಲು ಅಹೋಮಿ ಸೈನಿಕರು ” ಇಟಕುಲಿ ” ಕೋಟೆಯನ್ನು ವಶಪಡಿಸಿಕೊಂಡರು.

* ಮರುದಿನವೆ ಲಚಿತ್ ತನ್ನ ನೇತೃತ್ವದಲ್ಲಿ ದೊಡ್ಡದೊಂದು ಸೇನೆಯನ್ನು ಆ ಕೋಟೆಗೆ ಮುತ್ತಿಗೆ ಹಾಕಿಸಿ ಅಲ್ಲಿದ್ದ ಮೊಗಲ್ ಅಧಿಕಾರಿಗಳನ್ನು,ಸೈನಿಕರನ್ನು ಓಡಿಸಿದನು.ಗುವಾಹಟಿಯು. ಅಹೋಮ್ ರಾಜ್ಯಕ್ಕೆ ಮರಳಿ ಬಂತು.

  -: ಅಲಬೋಯ್ ಕಾಳಗ :-

* ಗುವಾಹಟಿಯು ಕೈ ತಪ್ಪಿದ ವಿಷಯವನ್ನು ತಿಳಿಯುತ್ತಲೇ ಔರಂಗಜೇಬನು ಕೆಂಡಮಂಡಲನಾದನು ಮತ್ತೊಮ್ಮೆ ಮೊಗಲ್ ಸೇನೆ ಯುದ್ಧ ಸನ್ನದ್ಧವಾಗಿತ್ತು. ಈ ಸಲ 70000 ಸೈನಿಕರನ್ನು ಅಹೋಮ್ ರಾಜ್ಯದ ಮೇಲೆ ದಾಳಿ ನಡೆಸಲಿ ಎಂದು ಕಳುಹಿಸಲಾಯಿತು.

* ಎರಡು ಸೇನೆಗಳು ಅಲಬೋಯ್ ಎಂಬ ಮೈದಾನದಲ್ಲಿ ಎದುರಾದವು ಭೀಕರ ಕಾಳಗ ನಡೆಯಿತು.

* ಅಹೋಮ್ ಸೇನೆಗಿಂತಲು ಮೊಗಲರ ಸೇನೆ ಹೆಚ್ಚು ಬಲಿಷ್ಠ ವಾಗಿತ್ತು ಅಶ್ವಗಳು ಸಂಖ್ಯೆಯಲ್ಲಿದ್ದವು ಅಹೋಮ್ ಸೈನಿಕರು ದೊಡ್ಡ ಸಂಖ್ಯೆಯ ಮೊಘಲರನ್ನು ಕೊನೆಗೂ ಸೋಲಿಸಿದರು.

* ಆದರೆ ಈ ವಿಷಯವನ್ನು ಸಂಭ್ರಮಿಸುವ ಸ್ಥಿತಿಯಲ್ಲಿ ಅಹೋಮ್ ಸೈನಿಕರಗಿರಲಿಲ್ಲ ಏಕೆಂದರೆ ಅವರ ಕಡೆಯಲ್ಲೂ ಸಾವಿರಾರು ಸೈನಿಕರು ಸತ್ತೇ ಬಿದ್ದಿದ್ದರು. ಲಚಿತ್ ಕೂಡ ಹತ್ತಾರು ಕತ್ತಿ ಏಟುಗಳೊಂದಿಗೆ ಬದುಕುಳಿದಿದ್ದ ಈ ಕಾಳಗದಲ್ಲಿ ಅಹೋಮ್ ರಾಜ್ಯ ಗೆದ್ದರೂ ಅದರ ಮರು ವರ್ಷವೇ ಚಕ್ರಧ್ವಜನು ಮರಣ ಹೊಂದಿದನು.

  -: ಸರಾಯ್ ಘಾಟ್ ಸಂಗ್ರಾಮ :-

* 1670ರಲ್ಲಿ ಚಕ್ರಧ್ವಜ ಸಿಂಘನು ತೀರಿಕೊಂಡ ಬಳಿಕ ಉದಯಾದಿತ್ಯ ಸಿಂಗನು ಅಧಿಕಾರ ವಹಿಸಿಕೊಂಡನು ಸೋತು ಮರಳಿದ ಮೊಘಲರು ತಮ್ಮ ಸೇಡು ತೀರಿಸಿಕೊಳ್ಳಲು ಸಮಯ ಕಾಯುತ್ತಿದ್ದರು.

* 1761 ರಲ್ಲಿ ಅವರಿಗೆ ಅನುಕೂಲವಾದ ಅವಕಾಶವೆಂದು ಒದಗಿ ಬಂದಿತ್ತು. ಅಹೋಮ್ ರಾಜ್ಯದ ಒಂದಷ್ಟು ಭಾಗಗಳಲ್ಲಿ ಸೇನಾ ಬಲ ಕಡಿಮೆ ಸಂಖ್ಯೆಯಲ್ಲಿದ್ದ ಅಲ್ಲಿದ್ದ ಸುಲಭವಾಗಿ ಒಳನೋಗಬಹುದೆಂದು ಬೇಹುಗಾರಿಕ ಸುದ್ದಿ ಮೊಘಲರನ್ನು ತಲುಪಿತು.

* ತಡ ಮಾಡದೆ ಸೇನೆ ಸಜ್ಜುಗೊಳಿಸಿದ ಮೊಘಲರು ಯುದ್ಧಸನದರಾದರು ಈ ಸಲ ಯಾವುದೇ ಕಾರಣಕ್ಕೂ ಸೋಲಬಾರದೆಂದು ನೌಕಾದಳಕ್ಕೆ ವಿಶೇಷ ಗಮನ ಕೊಟ್ಟರು ಬೃಹತ್ತಾದ 40 ಹಡಗುಗಳನ್ನು ನಿರ್ಮಿಸಿಕೊಂಡರು.

* 1671ರಲ್ಲಿ ಸಾರಾಯಘಾಟ್ ಎಂಬಲ್ಲಿ ಮೊಘಲ್ ಮತ್ತು ಅಹೋಮ್ ಸೇನೆಗಳು ಬ್ರಹ್ಮಪುತ್ರ ನದಿಯಲ್ಲಿ ಎದುರಾದವು.ಮೊಘಲರ ಯುದ್ಧ ನೌಕೆಗಳಿಗೆ ಹೋಲಿಸಿದರೆ ಅಹೋಮರ ನೌಕೆಗಳು ಬಹುಪಾಲು ಸಣ್ಣವು ಇದು ಮೊಘಲರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿತು.

* ಯುದ್ಧದ ಪ್ರಾರಂಭದಲ್ಲಿ ಅಹೋಮ್ ಸೇನೆ ಹೆದರಿ ಇಮ್ಮೆಟ್ಟಿದಂತೆ ಕಂಡಿತು ಈ ಸಮಯದಲ್ಲಿ ಅಹೋಮ್ ಸೇನೆಯ ದೌರ್ಬಲ್ಯದ ಸುದ್ದಿ ಲಚಿತ್ ಗೆ ತಲುಪಿತು.

* ಲಚಿತ್ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರೂ ಈ ಕೆಟ್ಟ ಸುದ್ದಿಯನ್ನು ಕೇಳಿ ಚಂಗನೆ ನೆಗೆದು ಎದ್ದನು ವೈದ್ಯರ ಸಲಹೆ ವಿರುದ್ಧವಾಗಿ ಆತ ಯುದ್ಧಕ್ಕೆ ಹೊರಟು ನಿಂತನು.

* ಇಡೀ ರಾಜ್ಯದಲ್ಲಿ ನಾನೊಬ್ಬನೇ ಹೋರಾಡಬೇಕಾಗಿ ಬಂದರು ನಾನು ಹಿಮ್ಮೆಟ್ಟವನಲ್ಲ.ಎಂದು ಘರ್ಜಿಸಿ ಕತ್ತಿ ಹಿಡಿದನು.ತನ್ನ ಸೈನಿಕರಲ್ಲಿ ಹುಮ್ಮಸ್ಸು ತುಂಬಿದನುತುಂಬಿದನು. ಅಹೋಮ್ ಸೇನೆಯು ಯುದ್ವತ್ಸಾಹದಿಂದ ರಣಘೋಷ ಮಾಡುತ್ತ ಮುನ್ನುಗ್ಗಿತು.

* ಅಹೋಮ್ ರ ಸಣ್ಣ ಸಣ್ಣ ನಾವೇಗಳು ದೊಡ್ಡ ನೌಕೆಗಳಿಗಿಂತ ಹಲವು ಪಟ್ಟು ವೇಗದಲ್ಲಿ ಮುನ್ನುಗ್ಗಲು ಪ್ರಾರಂಭಿಸಿ, ಮೊಘಲರ ನೌಕಗಳಿಗೆ ನದಿಯಲ್ಲೇ ಕೋಟೆ ಕಟ್ಟಿದವು ಅಲ್ಲದೆ ಅಲ್ಲಲ್ಲಿ ನಿಲ್ಲಿಸಿದ್ದ ಜಲಕೋಟೆಗಳಿಂದ ( ನೀರಿನಲ್ಲಿ ನಿರ್ಮಿಸಿದ ಎತ್ತರದ ಗೋಡೆಗಳು) ಫಿರಂಗಿಗಳ ಮೂಲಕ ಮದ್ದು ಗುಂಡುಗಳನ್ನು ಆರಿಸ ತೊಡಗಿದರು.

* ನದಿಯ ಮೇಲಿಂದಲೇ ನಡೆದ ಭಾರತದ ವಿಶೇಷ ಯುದ್ಧವೆಂದರೆ ” ಸರಾಯ್ ಘಾಟ ಸಂಗ್ರಾಮ ” ಇತಿಹಾಸದಲ್ಲಿ ದಾಖಲಾಯಿತು.

* ಅಹೋಮ್ ಸೈನಿಕರ ಕೆಚ್ಚೆದೆಯ ಹೋರಾಟದಿಂದ ಮೊಘಲರ ನೌಕಾಸೇನೆಯ ಮುಖ್ಯಸ್ಥನಾದ ” ಮುನ್ನಾವರ್ ಖಾನ್ ” ಗುಂಡಿಗೆ ಬಲಿಯಾಗಿ ಉಳಿದನು.ಮೊಘಲ್ ಸೇನೆಯ ಮೂರು ಮುಖ್ಯ ಅಧಿಕಾರಿಗಳಿಲ್ಲದೆ ಸುಮಾರು ನಾಲ್ಕು ಸಾವಿರ ಮಂದಿ ಸತ್ತು ನದಿ ಗುರುಳಿದರು. ಅಹೋಮ್ ಸೇನೆ ಕೊನೆಗೂ ಯುದ್ಧವನ್ನು ಗೆದ್ದಿತು.

 

 

WhatsApp Group Join Now
Telegram Group Join Now

Leave a Comment