ಉತ್ತರ ಭಾರತದ ಪ್ರಮುಖ ರಾಜಮನೆತನಗಳು (All Competative exam notes)

     -: ಮೌರ್ಯರು :-

* ಭಾರತದ ಮೊಟ್ಟ ಮೊದಲ ಸಾಮ್ರಾಜ್ಯ – ಮೌಯ೯ ಸಾಮ್ರಾಜ್ಯ – ಸ್ಥಾಪಕ – ‘ಚಂದ್ರಗುಪ್ತ ಮಾಯ೯’

* ಚಂದ್ರಗುಪ್ತ ಮೌರ್ಯ:-

* ತಕ್ಷಶಿಲೆಯ ವಿಷ್ಣುಗುಪ್ತ/ ಚಾಣಕ್ಯ/ಕೌಟಿಲ್ಯ ನಂದ ವಂಶದ ರಾಜನಾದ ಧನನಂದನಿಂದ ಅವಮಾನಿತನಾಗಿದ್ದನು.ಚಾಣಾಕ್ಷಣು ಕುಟಿಲ ತಂತ್ರಗಳಲ್ಲಿ ನಿಪುಣನು ಆಗ ವಿಷ್ಣುಗುಪ್ತನಿಗೆ ಚಾಣಕ್ಯ ಕೌಟಿಲ್ಯ ಎಂಬ ಹೆಸರುಗಳಿದ್ದು.

* ಚಾಣುಕ್ಯನು ಚಂದ್ರಗುಪ್ತ ಮೌರ್ಯನಿಗೆ ಸೈನಿಕ ಮತ್ತು ಇದ್ದ ತರಬೇತಿಯನ್ನು ನೀಡಿ ಸೇನೆಯನ್ನು ಸಜ್ಜುಗೊಳಿಸಲು ನೆರವಾದ.

* ಈ ವೇಳೆಗೆ ಧನನಂದನು ಪ್ರಜೆಗಳ ವಿಶ್ವಾಸ ಕಳೆದುಕೊಂಡಿದ್ದರಿಂದ ಸುಲಭವಾಗಿ ಅವನನ್ನು ಸಿಂಹಾಸನದಿಂದ ಕೆಳಗೆ ಇಳಿಸಲು ಚಂದ್ರಗುಪ್ತ ಮೌರ್ಯನಿಗೆ ಸಾಧ್ಯವಾಯಿತು.

* ವಿಷ್ಣುಗುಪ್ತ/ಚಾಣಕ್ಯನ ‘ಅರ್ಥಶಾಸ್ತ್ರ’ಕೃತಿಯು ರಾಜ ತಂತ್ರಗಳಿಗೆ ಸಂಬಂಧಿಸಿದ ಹಲವು ಸಂಗತಿಗಳನ್ನು ತಿಳಿಸಿದೆ ಈ ಕೃತಿಯು ಮೊದಲ ಬಾರಿಗೆ ಎಲ್ಲಿ ದೊರೆತಿದೆ?

-> ಮೈಸೂರಿನ ಓರಿಂಟಲ್ ಗ್ರಂಥಾಲಯದ ಹಸ್ತಪ್ರತಿ ಸಂಗ್ರಹಾಲಯದಲ್ಲಿ ಮೊಟ್ಟಮೊದಲಿಗೆ ದೊರಕಿತು.

* ಈ ಕೃತಿಯನ್ನು ಪತ್ತೆ ಹಚ್ಚಿದ ವಿದ್ವಾಂಸ ಯಾರೆಂದರೆ?

-> ಆರ್ ರಾಮ ಶಾಸ್ತ್ರಿ

* ಚಂದ್ರಗುಪ್ತನು ಜೈನ ಧರ್ಮವನ್ನು ಸ್ವೀಕರಿಸಿದನು ತನ್ನ ಕೊನೆಯ ದಿನಗಳನ್ನು ಕರ್ನಾಟಕಕ್ಕೆ ಬಂದು ಶ್ರವಣಬೆಳಗೊಳದಲ್ಲಿ” ಸಲ್ಲೇಖನ” ಎಂಬ ಕಠಿಣ ವ್ರತವನ್ನು ಕೈಗೊಂಡು ದೇಹ ತ್ಯಾಗ ಮಾಡಿದನು.

* ಚಂದ್ರಗುಪ್ತ ಮೌರ್ಯನ ನಂತರ ಬಿಂದುಸಾರನು 25 ವರ್ಷಗಳ ಕಾಲ ಆಳ್ವಿಕೆ ಮಾಡಿದನು.

* ಬಿಂದುಸಾರನ ಮಗ – ಅಶೋಕ

* ಅಶೋಕನ ಶಾಸನಗಳು ಬ್ರಾಹ್ಮಿ ಲಿಪಿ ಮತ್ತು ಪ್ರಾಕೃತ ಭಾಷೆಯಲ್ಲಿ ದೊರೆತಿವೆ.

* ಕರ್ನಾಟಕದ ಒಂಬತ್ತು ಸ್ಥಳಗಳಲ್ಲಿ 17 ಶಾಸನಗಳು ದೊರೆತಿವೆ.

* ರಾಯಚೂರು ಜಿಲ್ಲೆಯ”ಮಸ್ಕಿ ಶಾಸನ” ಪ್ರಮುಖವಾದದ್ದು ಏಕೆಂದರೆ ಈ ಶಾಸನದಲ್ಲಿ ಮೊಟ್ಟಮೊದಲ ಬಾರಿಗೆ ಅಶೋಕನ ಹೆಸರು ಕಂಡು ಬಂದಿದೆ.

* ದೇವನಾಂಪ್ರಿಯ ಪ್ರಿಯದರ್ಶಿ ಅಶೋಕ ಎಂದು ಮಸ್ಕಿ ಶಾಸನದಲ್ಲಿ ಬರೆಯಲಾಗಿದೆ.( ಇಂದಿಗೆ 180 ವರ್ಷಗಳ ಹಿಂದೆ ಮೊಟ್ಟಮೊದಲ ಬಾರಿಗೆ ಅಶೋಕನ ಶಾಸನಗಳನ್ನು ಬ್ರಿಟಿಷ್ ಅಧಿಕಾರಿ ” ಜೇಮ್ಸ್ ಪ್ರಿನ್ಸೆಪ” ಓದಿದನು.

* 6ನೇ ಶತಮಾನಗಳ ಹಿಂದೆ ದೆಹಲಿಯ ಯಾವ ಸುಲ್ತಾನನ ಅಶೋಕನ ಶಾಸನಗಳನ್ನು ಓದಿಸುವ ಪ್ರಯತ್ನ ನಡೆಸಿ ವಿಫಲನಾದನು?

-> ಫಿರೋಜ್ – ಷಾ – ತುಘಲಕ್

* ಅಶೋಕನು ಪಾಟಲಿಪುತ್ರದಲ್ಲಿ ಮೂರನೇ ಬೌದ್ಧ ಸಮ್ಮೇಳನವನ್ನು ನಡೆಸಿದನು.

     -:ಕುಶಾನರು:-

* 2000 ವರ್ಷಗಳ ಹಿಂದೆ ಗಾಂಧಾರ ( ಅಫ್ಘಾನಿಸ್ತಾನ) ಎಂಬಲ್ಲಿ ಕುಶಾನ ಎಂಬ ರಾಜವಂಶ ಆಳ್ವಿಕೆ ನಡೆಸುತ್ತಿತ್ತು.

* ಸ್ಥಾಪಕ  – ಕುಜುಲ್ಕ ಕಡ್ ಪೀಸಸ್

* ಕನಿಷ್ಕನ ಆಸ್ಥಾನದ ಕವಿ – ಅಶ್ವಘೋಷ ( ಬುದ್ಧ ಚರಿತೆ -ಸಂಸ್ಕೃತದಲ್ಲಿದೆ)

* ಕನಿಷ್ಕನ ಆಸ್ಥಾನದಲ್ಲಿದ್ದ ಶ್ರೇಷ್ಠ ತತ್ವಜ್ಞಾನಿ ಹಾಗೂ ವಿಜ್ಞಾನಿ ಯಾರು?

-> ನಾಗಾರ್ಜುನ( ಭಾರತದ ನ್ಯೂಟನ್)

* ಕನಿಷ್ಕನ  ಕಾಲದ ಸಮಕಾಲೀನ ವೈದ್ಯ – ಚರಕ

* ಕನಿಷ್ಕನ ಕಾಲದ ರಾಜಕಾರಣಿ – ಮಾಥರಾ

* ಕನಿಷ್ಕನ ಕಾಲದ ಇಂಜಿನಿಯರ್ – ಅಗಿಸಾಲ

* ಕನಿಷ್ಕನ ಕಾಲದ ಪ್ರಾರ್ಥನಾ ಮಂದಿರ – ಸಂಘರಾಕ್ಷ

* ಕನಿಷ್ಕನ ತಂದೆ ಹೆಸರು – ವಿಮಾ ಕಡ್ ಪೀಸಸ್

* ಬೌದ್ಧ ಧರ್ಮದ ಪ್ರಚಾರಕ್ಕೆ ಕರ್ನಾಟಕದ ಮೈಸೂರು ಹಾಗೂ ಉತ್ತರ ಕನ್ನಡಕ್ಕೆ ಭೇಟಿ ನೀಡಿದ್ದ ಧರ್ಮ ಪ್ರಚಾರಕರು ಯಾರು?

-> ಮೈಸೂರು -ಮಹಾದೇವ

-> ಉತ್ತರ ಕನ್ನಡದ ಬನವಾಸಿ -ರಕ್ಷಿತ್

* ಮಥುರಾ ಕಲಾ ಶಾಲೆಯು ಯಾರ ಆಳ್ವಿಕೆಯ ಕಾಲವನ್ನು ಸುವರ್ಣ ಯುಗ ಎಂದು ಕರೆಯಲಾಗಿದೆ?

->ಕುಶಾನರು

* ಯಾವ ರಾಜವಂಶದಲ್ಲಿ ಆಡಳಿತಗಾರರು ದೇವಪುತ್ರ ಎಂಬ ಬಿರುದನ್ನು ಸ್ವೀಕರಿಸಿದ್ದರು?

-> ಕುಶಾನರ

* ಯಾವ ಕುಶಾನ ರಾಜನು ” ಧರ್ಮ ತಿಡಾ” ಎಂಬ ಹೆಸರನ್ನು ಸ್ವೀಕರಿಸಿದನು?

-> ಕುಜಲ್ ಕಡಪೀಸಸ್

* ಅಫ್ಘಾನಿಸ್ತಾನದಲ್ಲಿ ಕನಿಷ್ಠನ ರಾಜಧಾನಿ ಯಾವುದಾಗಿತ್ತು?

-> ಬೆಗ್ರಾಮ್

* ಕನಿಷ್ಕನ ಆಸ್ಥಾನದಲ್ಲಿದ್ದ ವಿದ್ವಾಂಸರು

-> ಪ್ರಾರ್ಸ್ಟ್, ನಾಗಾರ್ಜುನ, ಚರಕ, ಮಾಥರ, ವಸುಮಿತ್ರ

* ಕನಿಷ್ಕ -1 ನ ಆಳ್ವಿಕೆಯಲ್ಲಿ ನ್ಯಾಯಾಲಯದ ವೈದ್ಯ – ಚರಕ

* ಕುಷಾನರ ಕನಿಷ್ಕ ಯಾವ ಧರ್ಮದ ಅನುಯಾಯಿ ?

-> ಬೌದ್ಧ ಧರ್ಮ ( ಮಹಾಯಾನ)

* ಭಾರತದ ಚಿನ್ನದ ನಾಣ್ಯಗಳನ್ನು ಹೊರಡಿಸಿದ ಕುಷಾಣರ ಮೊದಲ ದೊರೆ – ವಿಮಾಕಡ್ ಪೀಸಸ್

* ಕುಶಾನರನ್ನು ಟೋಟರಿಯನ್ನರು ಎಂದು ಕೂಡಾ ಕರೆಯಲ್ಪಡುತ್ತಾರೆ.

* ಗಾಂಧಾರ ಕಲೆಯ ಸಂಯೋಜನೆ -Indian style +Kushan style

* ಕನಿಷ್ಕನ 2ನೇರಾಜಧಾನಿ – ಮಥುರಾ

* ಕುಶಾನರ ಕಾಲದ ಯಾವ ಕಲಾ ಶಾಲೆಯನ್ನು ಪ್ರಬುದ್ಧ ಶಾಲೆ ಎಂದು ಕರೆಯುತ್ತಾರೆ?

-> ಕೇಶನಾ ಶಾಲೆ

* ಮಥುರಾ ಕಲೆಯಲ್ಲಿ ಉಪಯೋಗಿಸ್ವಲ್ಪ ಶಿಲೆ- ಕೆಂಪು ಮರಳು ಶಿಲೆ( Red sandstone)

     -: ಗುಪ್ತರು :-

* ಸಮುದ್ರಗುಪ್ತನು ಉತ್ತರ ಭಾರತದ 9 ರಾಜರನ್ನು ಸೋಲಿಸಿದನು.

* ದಕ್ಷಿಣ ಭಾರತದ 12 ರಾಜರನ್ನು ಸೋಲಿಸಿದನು.

* ಸಮುದ್ರಗುಪ್ತನ ಬಿರುದು – ಕವಿರಾಜ

* ಸಮುದ್ರಗುಪ್ತನು ವೀಣೆ ನುಡಿಸುವ ಚಿತ್ರವಿರುವ ನಾಣ್ಣಗಳು ದೊರೆತಿವೆ.

* ಸಮುದ್ರಗುಪ್ತನ ಮಂತ್ರಿ – ವಸುಬಂಧು ( ಬೌದ್ಧ ವಿದ್ಯಾಂ ಸ)

* ಸಮುದ್ರ ಗುಪ್ತನ ಪುತ್ರ – 2ನೇ ಚಂದ್ರಗುಪ್ತ

* 2ನೇ ಚಂದ್ರಗುಪ್ತನ ಪ್ರಮುಖ ಸಾಧನೆ – ಗುಜರಾತಿನಲ್ಲಿ 3 ಶತಮಾನಗಳಿಂದ ಹೆಚ್ಚು ಕಾಲ ಆಳ್ವಿಕೆ ನಡೆಸುತ್ತಿದ್ದ ಸತ್ರ ಪರವನನ್ನು ಚಂದ್ರಗುಪ್ತನು ಸೋಲಿಸಿದನು.

* 2 ನೇ ಚಂದ್ರ ಗುಪ್ತನ ಬಿರುದು – ವಿಕ್ರಮಾದಿತ್ಯ

* 2ನೇ ಚಂದ್ರಗುಪ್ತನ ಆಸ್ಥಾನದ ಪ್ರಖ್ಯಾತ ಕವಿ – ಕಾಳಿದಾಸ

* ಎರಡನೇ ಚಂದ್ರಗುಪ್ತನ ಸ್ಥಾನಕ್ಕೆ ಭೇಟಿ ನೀಡಿದ ಚೀನಿ ಯಾತ್ರಿಕ – ಫಾಹಿಯಾನ್ ( ಕೃತಿ – ಘೋ-ಕೊ-ಕಿ)

* ಫಾಹಿಯಾನ ಗುಪ್ತರ ಆಸ್ಥಾನಕ್ಕೆ ಭೇಟಿ ನೀಡಿದ ಉದ್ದೇಶ  -ಬೌದ್ಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವುದು ಮತ್ತು ಧಾರ್ಮಿಕ ಗ್ರಂಥಗಳ ಪ್ರತಿಗಳನ್ನು ತನ್ನೊಂದಿಗೆ ತೆಗೆದುಕೊಳ್ಳುವುದು ಅವನ ಉದ್ದೇಶವಾಗಿತ್ತು.

* ಕಾಳಿದಾಸನ ಶ್ರೇಷ್ಠ ನಾಟಕ -“ಅಭಿಜ್ಞಾನ ಶಾಕುಂತಲ”

* ‘ ಕವಿಕುಲಗುರು’ ಎಂದು ಕೂಡ ಪ್ರಸಂಸೆ ಮಾಡಲಾಗಿದೆ.

* ಶೂದ್ರಕನ – ಮೃಚಕಟಿಕ

* ವಿಶಾಖದತ್ತನ  – ಮುದ್ರಾ ರಾಕ್ಷಸ,ದೇವಿ ಚಂದ್ರಗುಪ್ತ

* ವಿಷ್ಣು ಶರ್ಮ – ಪಂಚತಂತ್ರ

* ಅಮರಸಿಂಹ – ಅಮರಕೋಶ

* ಗುಪ್ತರ ಕಾಲದ ದಶಾವತಾರ ದೇವಾಲಯದಲ್ಲಿರುವ ವಿಷ್ಣುವಿನ ಮೂರ್ತಿ ಶಿಲ್ಪ ಎಲ್ಲಿದೆ?

-> ದೇವಗಡ (ಮಧ್ಯ ಪ್ರದೇಶ್)

* ಸಾರಾನಾಥದಲ್ಲಿರುವ 128 ಅಡಿ ಎತ್ತರದ ಧಮೇಖ್  ಸ್ತೂಪವು ಗುಪ್ತರ ಕಾಲದ ಅನುಪಮ ನಿರ್ಮಾಣವಾಗಿದೆ.

* ಗುಪ್ತರ ಕಾಲದ ಶ್ರೇಷ್ಠ ಗಣಿತ ಮತ್ತು ಖಗೋಳ ಶಾಸ್ತ್ರಜ್ಞ – ಆರ್ಯಭಟ ( ಆರ್ಯಭಟಿಯ – ಕೃತಿ)

* ಬ್ರಹ್ಮಗುಪ್ತ – ಸೊನ್ನೆಯನ್ನು ಕಂಡುಹಿಡಿದವ.

* ವರಾಹಮಿಹಿರ – ಬೃಹತ್ ಸಂಹಿತಾ,ಪಂಚ ಸಿದ್ದಾಂತಿಕ

* ವಾತ್ಸಾಯನ – ಕಾಮಸೂತ್ರ

* ಗುಪ್ತರ ಕೊನೆಯ ದೊರೆ – ಸ್ಕಂದಗುಪ್ತ

* ಗುಪ್ತರ ಸ್ಥಾಪಕ – ಶ್ರೀಗುಪ್ತ

* ವಾಗ್ಭಟ – ಅಷ್ಟಾಂಗ ಹೃದಯ ಸಂಹಿತ

* ಪಾದರಸವನ್ನು ಔಷಧಿಯಾಗಿ ಮೊದಲ ಬಾರಿಗೆ ಬಳಕೆಗೆ ತಂದ ಕೀರ್ತಿ ಭಾರತೀಯ ವೈದ್ಯರಿಗೆ ಸಲ್ಲುತ್ತದೆ.

* ಕಾಳಿದಾಸನ ನಾಟಕಗಳು – ಅಭಿಜ್ಞಾನ ಶಾಕುಂತಲಾ,ಮಾಳವಿಕಾಗ್ನಿ ಮಿತ್ರ,ವಿಕ್ರಮೊರ್ವಸಿಯ

* ಕಾಳಿದಾಸನ ಕಾವ್ಯಗಳು – ರಘುವಂಶ,ಕುಮಾರ ಸಂಭವ, ಋತು ಸಂಹಾರ,ಮೇಘದೂತ

* ಗುಪ್ತರ ಕಾಲದ ಗುಹೆಗಳು 1819 ರಲ್ಲಿ ಪತ್ತೆಯಾಗಿವೆ.

* ಮೆಹರೌಲಿಯ ಕಬ್ಬಿಣ ಕಂಬದ ತೂಕ – 6 ಟನ್ , 23ಅಡಿ ಎತ್ತರ [19ನೇ ಶತಮಾನದ ಆರಂಭದ ವರೆಗೂ ಯುರೋಪಿನ ಯಾವ ನಿಪುಣಕಮ್ಮಾರನಿಗೂ ಅಂತ ಕಂಬವನ್ನು ಎರಕಹೋಯಲು ಸಾಧ್ಯವಾಗುತ್ತಿರಲಿಲ್ಲ]

     -: ವರ್ಧನರು :-

* ವರ್ಧನರ ಸ್ಥಾಪಕ – ಪುಷ್ಯಭೂತಿ( ತಂದೆ),ಪ್ರಭಾಕರವರ್ಧನ (ಮಗ)-ರಾಜವರ್ಧನ ( ಮಗ- 1) ಹರ್ಷವರ್ಧನ -(ಮಗ-2), ರಾಜಶ್ರೀ ( ರಾಜವರ್ಧನ ಮತ್ತು ಹರ್ಷವರ್ಧನನ ತಂಗಿ)

* ಹರ್ಷವರ್ಧನ ಸಿಂಹಾಸನವೇರಿದಾಗ 16 ವರ್ಷದ ಯುವಕನಾಗಿದ್ದನು.

* ರಾಜವರ್ಧನನ್ನು ತಂಗಿ ರಾಜಶ್ರೀಯನ್ನು ಗೃಹವರ್ಮ

ನಿಗೆ ಕೊಟ್ಟು ಮದುವೆ ಮಾಡಿದನು.

* ಮಾಳ್ವದ ರಾಜ ಗೃಹ ವರ್ಮನನ್ನು ಕೊಂದು ರಾಜಶ್ರೀಯನ್ನು ಕನೌಜ್ ನಲ್ಲಿ ಬಂದಿಸಿಟ್ಟನು.ಆಗ ರಾಜಾ ವರ್ಧನನು ದಂಡೆತ್ತಿ ಹೋಗಿ ಮಾಡುವ ಸೇನೆಯನ್ನು ಸೋಲಿಸಿದ ನಾದರೂ ಗೌಡ ದೇಶದ ಶಶಾಂಕನಿಂದ ಕೊಲ್ಲಲ್ಪಟ್ಟನು ಇಂತಹ ಸಮಯದಲ್ಲಿ ಹರ್ಷವರ್ಧನನು 16ನೇ ವಯಸ್ಸಿನಲ್ಲಿ ಅಧಿಕಾರಕ್ಕೆ ಬಂದನು.

* ಇವತ್ತಿಗೆ ಬಂಧನದಿಂದ ಬಿಡುಗಡೆ ಹೊಂದಿ ವಿದ್ಯಾಪರ್ವತದ ಅರಣ್ಯದಲ್ಲಿ ಅಲೆಯುತ್ತಾದ್ದ ವಿಧವೆ ತಂಗಿ ರಾಜಶ್ರೀಯನ್ನು ಪತ್ತೆ ಮಾಡಿದನು.

* ಮುಂದೆ ಭಾವನಾದ ಗ್ರಹವರ್ಮನ ಮೌಖರಿ ರಾಜ್ಯ ಕೂಡ ಹರ್ಷವರ್ಧನನ ಆಳ್ವಿಕೆಗೆ ಒಳಪಟ್ಟಿತು.

* ನಂತರ ಅಣ್ಣ ರಾಜ್ಯವರ್ಧನನ ಸಾವಿಗೆ ಕಾರಣನಾದ ಶಶಾಂಕನ ಮೇಲೆ ಇದ್ದ ಸಾರಿದನು.

* ಹರ್ಷವರ್ಧನನು 40 ವರ್ಷಗಳ ಆಳ್ವಿಕೆ ನಡೆಸಿದನು.

* ಹರ್ಷವರ್ಧನನ ಕಲಿ ಮಾತ್ರವಲ್ಲ ಕವಿಯು ಆಗಿದ್ದನು.

* ಹರ್ಷವರ್ಧನ ರಚಿಸಿದ ಮೂರು ನಾಟಕಗಳು – ಪ್ರಿಯದರ್ಶಿಕಾ,ರತ್ನಾವಳಿ,ನಾಗನಂದ

* ಹ್ಯೂಯನ್ ತ್ಸಾಂಗ್ (Hiuen Tsang) ಹರ್ಷವರ್ಧನನ ಆಸ್ಥಾನದ ವಿದೇಶಿ ಯಾತ್ರಿಕನಾಗಿದ್ದನು.ಕೃತಿ – ಸಿ-ಯು-ಕಿ ( ಪಶ್ಚಿಮ ರಾಜ್ಯದ ದಾಖಲೆ- Record of western Kingdom)

* ಬಾಣಭಟ್ಟ ಬರೆದ ಕೃತಿ -ಹರ್ಷ ಚರಿತೆ

* ನಳಂದ ವಿಶ್ವವಿದ್ಯಾಲಯ :- ಇದನ್ನು ಗುಪ್ತರ ದೊರೆ ಕುಮಾರ ಗುಪ್ತನು ಕಟ್ಟಿಸಿದನು. ನಳಂದ ವಿಶ್ವವಿದ್ಯಾಲಯದಲ್ಲಿ ಶಿಕ್ಷಣಕ್ಕಾಗಲಿ,ಊಟ ವಸತಿಗಳಿಗಾಗಲಿ ಶುಲ್ಕವಿರಲಿಲ್ಲ. ಈ ಎಲ್ಲಾ ಖರ್ಚನ್ನು ನಿರ್ವಹಿಸಲು 100 ಗ್ರಾಮಗಳ ಆದಾಯವು ಮೀಸಲಾಗಿದ್ದು. ಸಾಮ್ರಾಟ ಹರ್ಷವರ್ಧನ ಈ ಎಲ್ಲಾ ಮಹಾವಿದ್ಯಾಲಯದ ಪೋಷಕರಲ್ಲಿ ಒಬ್ಬ. ವಿದ್ಯಾರ್ಥಿ ಜೀವನವು ಕಟ್ಟುನಿಟ್ಟಾಗಿತ್ತು. ಶ್ರೇಷ್ಠ ಪಂಡಿತ ಅಧ್ಯಾಪಕ ವರ್ಗದಲ್ಲಿದ್ದರು.

 

WhatsApp Group Join Now
Telegram Group Join Now

Leave a Comment