* ಏಷ್ಯಾ ಖಂಡವು 1°-16′ ಉತ್ತರದಿಂದ 77°-41′ ಉತ್ತರಅಕ್ಷಾಂಶ ಹಾಗೂ 26°- 04′ ಪೂರ್ವದಿಂದ 169° – 40′ ಪಶ್ಚಿಮ ರೇಖಾಂಶಗಳ ನಡುವೆ ವಿಸ್ತರಿಸಿದೆ.
* ಏಷ್ಯಾ ಖಂಡದ ಒಟ್ಟು ಭೌಗೋಳಿಕ ವಿಸ್ತೀಣ೯ -44 ಮಿಲಿಯನ್ ಚದರ ಕಿಲೋ ಮೀಟರ್ (ಶೇ 33% ರಷ್ಟು)
* ಏಷ್ಯಾ ಖಂಡವು ಪೂರ್ಣವಾಗಿ ಉತ್ತರಾರ್ಧ ಗೋಳದ ಮೇಲೆ ಇದೆ.
* ಏಷ್ಯಾದಲ್ಲಿ ಇರುವ ಒಟ್ಟು 48 ದೇಶಗಳು
* ಏಷ್ಯಾವನ್ನು 5 ಪ್ರಾದೇಶಿಕ ಭಾಗಗಳಾಗಿ ವಿಂಗಡಿಸಲಾಗಿದೆ.
1) ಪೂರ್ವ ಏಷ್ಯಾ
2) ಆಗ್ನೇಯ ಏಷ್ಯಾ
3) ದಕ್ಷಿಣ ಏಷ್ಯಾ
4) ನೈಋತ್ಯ ಏಷ್ಯಾ
5) ಮಧ್ಯ ಏಷ್ಯಾ
* ಪೂರ್ವ ಏಷ್ಯಾ :- ಚೀನಾ,ಉತ್ತರ ಕೊರಿಯಾ, ದಕ್ಷಿಣ ಕೊರಿಯಾ, ಜಪಾನ್, ಹ್ಯಾಂಕ್ ಕಾಂಗ್,ತೈವಾನ್ ಮತ್ತು ಮಂಗೋಲಿಯಾ ದೇಶಗಳು ಸೇರಿವೆ.ಇದು ಉತ್ತರದಲ್ಲಿ ವಿಶಾಲವಾದ ರಷ್ಯಾ,ದಕ್ಷಿಣದಲ್ಲಿ ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಗಳ ನಡುವೆ ವಿಸ್ತರಿಸಿದೆ.
* ಆಗ್ನೇಯ ಏಷ್ಯಾ:- ಮಯನ್ಮಾರ್,ಲಾವೋಸ್, ವಿಯೆಟ್ನಾಂ, ಥಾಯ್ಲ್ಯಾಂಡ್, ಕಾಂಬೋಡಿಯ, ಸಿಂಗಾಪುರ್, ಬ್ರುನ್ಹೆ,ಮತ್ತು ಫಿಲಿಪೈನ್ಸ್ ದೇಶಗಳನ್ನು ಒಳಗೊಂಡಿದೆ ಇದೊಂದು ಪರ್ಯಾಯ ದ್ವೀಪ, ದ್ವೀಪ ಸಮೂಹಗಳ .
* ಉದಾ:- ಸುಮಾತ್ರ,ಜಾವಾ, ಸುಲಾವೇಶಿ, ಬೋರ್ನಿಯೊ, ಪಾಪುವ ,ಪಶ್ಚಿಮಕ್ಕೆ ಹಿಂದೂ ಮಹಾಸಾಗರ,ಪೂರ್ವಕ್ಕೆ ಪೆಸಿಫಿಕ್ ಸಾಗರಗಳಿವೆ.
* ದಕ್ಷಿಣ ಏಷ್ಯಾ:-ಭಾರತ, ಬಾಂಗ್ಲಾದೇಶ, ಭೂತಾನ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ ಗಳನ್ನು ಒಳಗೊಂಡಿದೆ.ದಕ್ಷಿಣ ಏಷ್ಯಾದ ದೊಡ್ಡ ರಾಷ್ಟ್ರ ” ಭಾರತ” ದಕ್ಷಿಣ ಏಷ್ಯಾ ವನ್ನು ದಕ್ಷಿಣದಲ್ಲಿ ಹಿಂದೂ ಮಹಾಸಾಗರ ಮತ್ತು ಅದರ ಉಪ ಭಾಗಗಳಾದ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರಗಳು ಸುತ್ತುವರಿದ್ದೀವೆ.ಉತ್ತರದಲ್ಲಿ ಹಿಮಾಲಯ ಪರ್ವತ,ಪೂರ್ವಕ್ಕೆ ಮಯನ್ಮಾರ್ ಮತ್ತು ಪಶ್ಚಿಮಕ್ಕೆ ಅಫ್ಘಾನಿಸ್ತಾನಗಳಿವೆ.
* ನೈರುತ್ಯ ಏಷ್ಯಾ :- ಅಫ್ಘಾನಿಸ್ತಾನ, ಬಹ್ರೇನ್, ಸೈಪ್ರಸ್,ಇರಾನ್, ಇರಾಕ್, ಇಸ್ರೇಲ್, ಕುವೈತ್, ಜೋಡಾ೯ನ್,ಓಮನ್, ಕಟಾರ್,ಸಿರಿಯಾ ,ಫಿಲಿಪೈನ್ಸ್, ಸೌದಿ ಅರೇಬಿಯಾ, ಯುಎಇ, ಯೆಮೆನ್,ಟರ್ಕಿ.
* ಈ ವಿಭಾಗವು ಕಪ್ಪು ಸಮುದ್ರದ ದಕ್ಷಿಣ ಭಾಗದಲ್ಲಿದ್ದು,ಪಶ್ಚಿಮಕ್ಕೆ ಮೆಡಿಟರೇನಿಯನ್ ಸಮುದ್ರ,ಮತ್ತು ಪೂರ್ವಕ್ಕೆ ಭಾರತಗಳ ನಡುವೆ ವಿಸ್ತರಿಸುತ್ತದೆ. ಇದು ಬಹಳ ಅರೆ ಮರುಭೂಮಿಗಳಿಂದ ಆವರಿಸಿದ್ದರು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳಿಂದ ಸಮೃದ್ಧಿಯಾಗಿದೆ.
* ಮಧ್ಯ ಏಷ್ಯಾ:- ಇದು ಕ್ಯಾಸ್ಪಿಯನ್ ಸಮುದ್ರದಿಂದ ಪೂರ್ವದಲ್ಲಿ ಚೀನಾದವರೆಗೂ ಹಾಗೂ ಉತ್ತರದಲ್ಲಿ ಕಜಿಗಿಸ್ತಾನದಿಂದ ದಕ್ಷಿಣದಲ್ಲಿ ಇರಾನ್ ಆಫ್ಘಾನಿಸ್ತಾನದ ವರೆಗೂ ವಿಸ್ತರಿಸಿದೆ.
* ಪ್ರಮುಖ ದೇಶಗಳು:- ಕಜಗಿಸ್ತಾನ್,ಕರ್ಗಿಸ್ತಾನ್, ಟಜಗಿಸ್ತಾನ್,ಉಜ್ಬೇಕಿಸ್ತಾನ ಇನ್ನು ಮುಂತಾದ ಪ್ರದೇಶಗಳು.
* ಚೀನಾದ ನೈರುತ್ಯಕ್ಕೆ ಇರುವ ಪ್ರಸ್ಥಭೂಮಿ – ‘ ಯುನ್ನಾನ್ ಪ್ರಸ್ಥಭೂಮಿ’
* ಇದೊಂದು ಉನ್ನತವಾದ ಸುಣ್ಣದ ಕಲ್ಲು ಪ್ರದೇಶ ಇದರ ಮುಂದುವರಿದ ಭಾಗವೇ ‘ಶಾನ್ ಮರುಭೂಮಿ’
* ಏಷ್ಯಾದ ನದಿಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಬಹುದು.
1) ಹಿಂದೂ ಮಹಾಸಾಗರ ಸೇರುವ ನದಿಗಳು
2) ಪೆಸಿಫಿಕ್ ಸಾಗರ ಸೇರುವ ನದಿಗಳು
3) ಆರ್ಕ್ಟಿಕ್ಟ್ ಸಾಗರ ಸೇರುವ ನದಿಗಳು
4) ಒಳನಾಡಿನ ನದಿಗಳು
* ಹಿಂದೂ ಮಹಾಸಾಗರ ಸೇರುವ ನದಿಗಳು :- ಸಿರಿಯಾ ಮತ್ತು ಇರಾಕ್ ದೇಶಗಳ ಟೈಗ್ರೀಸ್ ಮತ್ತು ಯುಪ್ರೈಟಿಸ್ ನದಿಗಳು.ಪರ್ಶಿಯಾ ಖಾರಿಯನ್ನು,ಪಾಕಿಸ್ತಾನ ಹಾಗೂ ಭಾರತದ ಸಿಂಧೂ,ಗಂಗಾ, ಬ್ರಹ್ಮಪುತ್ರ ನದಿಗಳು ಹಿಮಾಲಯದಲ್ಲಿರುವ ಪ್ರದೇಶಗಳಲ್ಲಿ ಹುಟ್ಟಿದ ಕ್ಷಣಕ್ಕೆ ಹರಿದು ಹಿಂದೂ ಮಹಾಸಾಗರವನ್ನು ಸೇರುತ್ತವೆ.ಮಯನ್ಮಾರ್ ನ ಸಿಟ್ಟಾಂಗ್, ಸಾಲ್ವಿನ್,ಮತ್ತು ಇರವಾಡಿ ನದಿಗಳು ಬಂಗಾಳಕೊಲ್ಲಿಯನ್ನು ಸೇರುತ್ತವೆ.
* ಪೆಸಿಫಿಕ್ ಸಾಗರ ಸೇರುವ ನದಿಗಳು:- ರಷ್ಯಾದ -ಅಮುರ್
* ಚೀನಾದ – ಹ್ವಾಂಗ್ -ಹೋ ಚಿಯಾಂಗ್,ಜಿಯಾಂಗ್( ಯಾಂಗತ್ಸ) ಮತ್ತು ಸಿರಿಯಾಂಗ್ ನದಿಗಳು ಪೂರ್ವದ ಕಡೆಗೆ ಹರಿಯುತ್ತಾ ಕ್ರಮವಾಗಿ ಓಕಟಸ್ಕ್,ಹಳದಿ ಸಮುದ್ರ ಮತ್ತು ಚೀನಾ ಸಮುದ್ರಗಳನ್ನು ಸೇರುತ್ತವೆ.
* ಆರ್ಕ್ಟಿಕ್ಟ್ ಸಾಗರ ಸೇರುವ ನದಿಗಳು :- ಓವ್, ಯೇನ್ಸಿ ಮತ್ತು ಲೀನ ಎಂಬುವವು ಈ ಗುಂಪಿನ ಪ್ರಮುಖ ನದಿಗಳು.ಇವು ಕೇಂದ್ರದ ಉನ್ನತ ಭಾಗದಲ್ಲಿ ಉಗಮ ಹೊಂದಿ ಉತ್ತರಕ್ಕೆ ಹರಿದು ಆರ್ಕ್ಟಿಕ್ಟ್ ಸಾಗರವನ್ನು ಸೇರುತ್ತವೆ.
* ಒಳನಾಡಿನ ನದಿಗಳು :- ಈ ಗುಂಪಿಗೆ ಸೇರಿದ ನದಿಗಳು ಒಳನಾಡಿನ ಸಮುದ್ರಗಳಿಗೆ ಸೇರುವವು ಉದಾಹರಣೆ:- ವೋಲ್ಗಾ ಮತ್ತು ಯುರಲ್ ನದಿ ಕ್ಯಾಸ್ಪಿಯನ್ ಸಮುದ್ರವನ್ನು ಮತ್ತು ಅಮುದರಿಯ ಮತ್ತು ಸಿರಧರಿಯ ನದಿಗಳು ಅರಬ್ ಸಮುದ್ರವನ್ನು ಸೇರುತ್ತವೆ.
* ಜಗತ್ತಿನಲ್ಲಿ ಅತಿ ಶೀತವಾದ ಪ್ರದೇಶ – ವರ್ಕೋಯೆನಸ್ಕ್ ( ಸೈಬೀರಿಯಾ ಪ್ರಾಂತ್ಯ )
* ಭಾರತದ ಅತಿ ಶೀತವಾದ ಪ್ರದೇಶ – ದ್ರಾಸ್
* ಏಷ್ಯಾ ಖಂಡದಲ್ಲಿ ಚಳಿಗಾಲ ಇರುವ ಸಮಯ – ಅಕ್ಟೋಬರ್ -ಮಾರ್ಚ್
* ಸೈಬೀರಿಯಾದ ವರ್ಕೋಯೋನಸ್ಕ್ ಮತ್ತು ಓಮ್ನಿಯಾಕಿನ -51°c ಮತ್ತು70°C ಉಷ್ಣಾಂಶವನ್ನು ದಾಖಲಿಸುತ್ತವೆ.
* ಪ್ರಪಂಚದಲ್ಲಿ ಶೇಕಡಾ 30ರಷ್ಟು ಭಾಗ ಕಬ್ಬಿಣವನ್ನು ಏಷ್ಯಾದಲ್ಲಿ ಉತ್ಪಾದಿಸಲಾಗುತ್ತದೆ.
* ಅತಿ ಹೆಚ್ಚು ಕಬ್ಬಿಣದ ಅದಿರು ಉತ್ಪಾದಿಸುವ ದೇಶ – ಚೀನಾ
* ಪ್ರಪಂಚದಲ್ಲಿ ಅತಿ ಹೆಚ್ಚು ಕಲ್ಲಿದ್ದಲು ನಿಕ್ಷೇಪ ಮತ್ತು ಉತ್ಪಾದನೆ – ಚೀನಾ ( ಭಾರತ ಏಷ್ಯಾದಲ್ಲಿ -ಎರಡನೇ ಸ್ಥಾನ)
* ಪ್ರಪಂಚದಲ್ಲಿ ಶೇಕಡ 25 ರಷ್ಟು ಪೆಟ್ರೋಲಿಯಂ ಅನ್ನು ಏಷ್ಯಾ ಖಂಡದಲ್ಲಿ ಉತ್ಪಾದಿಸಲಾಗುತ್ತದೆ.
Petro – ಎಂದರೆ ಕಲ್ಲು
Oleuam – ಎಂದರೆ ತೈಲ ( ಎರಡು ಲ್ಯಾಟಿನ್ ಭಾಷೆಯ ಪದಗಳಿಂದ ಸಂಯೋಜಿತವಾಗಿದೆ.)
* ಪ್ರಪಂಚದಲ್ಲಿ ಅತಿ ಹೆಚ್ಚು ಪೆಟ್ರೋಲಿಯಂ ಉತ್ಪಾದಿಸುವ ದೇಶ – ಸೌದಿ ಅರೇಬಿಯಾ.
-: ಚೀನಾದ ಪ್ರಮುಖ ಕೈಗಾರಿಕೆಗಳು:-
* ಮಂಚೂರಿಯ ಪ್ರದೇಶ :- ಇಲ್ಲಿ ಕಬ್ಬಿಣ ಮತ್ತು ಉಕ್ಕು,ಎಂಜಿನಿಯರಿಂಗ್ ಮತ್ತು ರಾಸಾಯನಿಕ ಕೈಗಾರಿಕೆಗಳು ಮುಖ್ಯವಾದವು.
* ಲೋಹ ತಯಾರಿಕೆ,ಇಂಜಿನಿಯರಿಂಗ್, ಹಡಗು ನಿರ್ಮಾಣ, ಜವಳಿ ಮತ್ತು ರಾಸಾಯನಿಕ ಕೈಗಾರಿಕೆಗಳು – ಬೀಜಿಂಗ್ ಪ್ರದೇಶ
* ಕಬ್ಬಿಣ ಮತ್ತು ಉಕ್ಕು ಹಾಗೂ ಕೃಷಿ ಉಪಕರಣಗಳು -ಶ್ಯಾನ್ನಿ ಮತ್ತು ಬಾವಟೋವ್
* ಜವಳಿ ಉದ್ಯಮ,ಹಡಗು, ಉಕ್ಕು ತಯಾರಿಕೆ ಮತ್ತು ಇಂಜಿನಿಯರಿಂಗ್ – ಚಾಂಗ್ ಜಿಯಾಂಗ್.
* ಲೋಹ ತಯಾರಿಕೆ ಮತ್ತು ಬೃಹತ್ ಕೈಗಾರಿಕಾ ಸರಕು ತಯಾರಿಕೆ – ವುಹಾನ್ ಪ್ರದೇಶ
* ಏಷ್ಯಾದ ಜನಸಂಖ್ಯೆ – 4.2 ಬಿಲಿಯನ್ ( ಇದು ಪ್ರಪಂಚದ ಜನಸಂಖ್ಯೆ 60ರಷ್ಟು ಭಾಗದಷ್ಟು ಆಗಿದೆ.)
* ಏಷ್ಯಾ ಖಂಡದ ಸರಾಸರಿ ಜನಸಾಂದ್ರತೆ – ಪ್ರತಿ ಚದರ ಕಿಲೋ ಮೀಟರ್ ಗೆ 96 ಜನರು.
* ಏಷ್ಯಾದ ಅತ್ಯಂತ ಕೆಳಮಟ್ಟದ ಬಿಂದು – ಮೃತ ಸಮುದ್ರ (ಸಮುದ್ರ ಮಟ್ಟಕ್ಕಿಂತ 35 ಮೀಟರ್ ಕೆಳಗೆ)
* ಪ್ರಪಂಚದಲ್ಲಿ ಹೆಚ್ಚಿನ ಸಂಖ್ಯೆಯ ಹಿಮನದಿಗಳು ಇರುವ ಪರ್ವತ ಶ್ರೇಣಿ – ಕಾರಕೋರಂ ಪರ್ವತ.
* ಕ್ಷೇತ್ರ ಮತ್ತು ಜನಸಂಖ್ಯೆಯಲ್ಲಿ ಏಷ್ಯಾದ ಚಿಕ್ಕ ದೇಶ – ಮಾಲ್ಡಿವ್ಸ್
* ಏಷ್ಯಾ ಖಂಡದ ಅತ್ಯಂತ ಎತ್ತರವಾದ ಬಿಂದು – ಮೌಂಟ್ ಎವರೆಸ್ಟ್ ( 8848 ಮೀಟರ್)
* ಟಿಬೆಟ್ ಪ್ರಪಂಚದ ಅತಿ ಎತ್ತರವಾದ ಪ್ರಸ್ಥಭೂಮಿ.ಇದನ್ನು ಪ್ರಪಂಚದ ಮೇಲ್ಚಾವಣಿ ಎಂದು ಕರೆಯಲಾಗಿದೆ.
* ಕ್ಯಾಸ್ಪಿಯನ್ ಸಮುದ್ರವೂ ಪ್ರಪಂಚದ ಅತ್ಯಂತ ವಿಶಾಲವಾದ ಒಳನಾಡಿನ ಜಲರಾಶಿಯಾಗಿದೆ.
* ದಕ್ಷಿಣ ಸೈಬೇರಿಯದಲ್ಲಿರುವ ಬೈಕಲ್ ಸರೋವರವು ಪ್ರಪಂಚದಲ್ಲಿ ಆಳವುಳ್ಳದ್ದು.
-: ಯುರೋಪ್ ‘ ಏಷ್ಯಾದ ಪರ್ಯಾಯ ದ್ವೀಪ’ :-
* ಯುರೋಪ್ 10° ಪಶ್ಚಿಮದಿಂದ 60° ಪೂರ್ವ ರೇಖಾಂಶ ಹಾಗೂ 36° ಉತ್ತರದಿಂದ 72° ಉತ್ತರ ಅಕ್ಷಾಂಶಗಳಲ್ಲಿ ನೆಲೆಗೊಂಡಿದೆ.
* ಯುರೋಪ್ ಪ್ರಪಂಚದ ಎರಡನೇ ಚಿಕ್ಕ ಖಂಡ.
* ಯುರೋಪ್ ಖಂಡ ಭಾರತದ ವಿಸ್ತೀರ್ಣಕ್ಕಿಂತ ಮೂರು ಪಟ್ಟು ದೊಡ್ಡದು.
* ಯುರೋಪ್ ಖಂಡವು ಭೂಮಿಯ ಒಟ್ಟು ವಿಸ್ತೀರ್ಣದಲ್ಲಿ ಶೇಕಡ 7% ರಷ್ಟು ಭಾಗವನ್ನು ಹೊಂದಿದೆ.
* ಏಷ್ಯಾ ಕಂಡವನು ಯುರೋಪ್ನಿಂದ ಬೇರ್ಪಡಿಸಿದ್ದು.
-> ಯುರಲ್ ಪರ್ವತ
-> ಕಕಾಸಸ್ ಪರ್ವತ
-> ಕ್ಯಾಸ್ಪಿಯನ್ ಸಮುದ್ರ
* ಯುರೋಪಿನ ಎತ್ತರವಾದ ಶಿಖರ – ಮೌಂಟ್ ಬ್ಲಾಂಕ್ (4807)
* ಯುರೋಪ್ನ ಅತ್ಯಂತ ತಗ್ಗಾದ ಸ್ಥಳ – ಕ್ಯಾಸ್ಪಿಯನ್ ಸಮುದ್ರ
* ಯುರೋಪ್ ಒಂದು ದೊಡ್ಡ ಪರ್ಯಾಯ ದ್ವೀಪ.ಈ ಖಂಡದಲ್ಲಿ ಹಲವು ಪರ್ಯಾಯ ದ್ವೀಪಗಳಿವೆ.
-> ಸ್ಕಾಂಡೆನೇವಿಯ,ದಬೀರಿಯಾ, ಜಟ್ಲ್ಯಾಂಡ್, ಬಾಲ್ಕನ ಆದ್ದರಿಂದ ಯುರೋಪನ್ನು ” ಪರ್ಯಾಯ ದ್ವೀಪಗಳ ಪರ್ಯಾಯ ದ್ವೀಪ” ಎಂದು ಕರೆಯಲಾಗಿದೆ.
* ಯುರೋಪ್ ಖಂಡದ ವಾಯುಗುಣ – ಸಮಶೀತೋಷ್ಣ ವಲಯದ ವಾಯುಗುಣ.
* ಅಗಸೆಯು ಯುರೋಪಿನ ಪ್ರಮುಖ ನಾರು ಬೆಳೆ.
* ಬಲಿಗೇರಿಯಾ ಮತ್ತು ಪೋಲ್ಯಾಂಡ್ಗಳ ಯುರೋಪಿನಲ್ಲಿ ಅತಿ ಹೆಚ್ಚು ತಾಮ್ರ ಉತ್ಪಾದಿಸುವ ದೇಶಗಳು.
* ಸುಮಾರು 500 ವರ್ಷಗಳಿಗೂ ಹೆಚ್ಚು ಕಾಲ ಯುರೋಪನ್ನು ಪ್ರಪಂಚದ ಹೃದಯ ಭಾಗವೆಂದು ಕರೆಯಲಾಗುತ್ತಿತ್ತು .
* ಬ್ಲಾಕ್ ಫಾರೆಸ್ಟ್ ಎನ್ನುವುದು ಅರಣ್ಯವಲ್ಲ.ಅದೊಂದು ಪರ್ವತ ಪ್ರದೇಶ.ದಕ್ಷಿಣ ಜರ್ಮನಿಯಲ್ಲಿದೆ.ಇದರ ಒಳ ಭಾಗವು ದಟ್ಟಡವಿಯಿಂದಾಗಿ ಕತ್ತಲಾಗಿರುವುದರಿಂದ ಈ ಹೆಸರು ಬಂದಿದೆ.
* ಬ್ರಿಟನ್ ಅಥವಾ ಗ್ರೇಟ್ ಬ್ರಿಟನ್ ಯುರೋಪಿನ ಬಹುದೊಡ್ಡ ದ್ವೀಪವಾಗಿದ್ದು ಇಂಗ್ಲೆಂಡ್,ಸ್ಕಾಟ್ಲಂಡ್ ಮತ್ತು ವೇಲ್ಸ್ ಗಳನ್ನು ಒಳಗೊಂಡಿದೆ. ಉತ್ತರ ಐರ್ಲೆಂಡನ್ನು ಸೇರಿಸಿಕೊಂಡು ಇದು ಸಂಯುಕ್ತ ರಾಜ್ಯ (ಯು.ಕೆ)ವಾಗಿದೆ.