-: ಮೈಸೂರಿನ ಒಡೆಯರು :-
* ವಿಜಯನಗರ ಸಾಮ್ರಾಜ್ಯ ಪತನ ನಂತರ ತಲೆ ಎತ್ತಿ ಅದರ ಸಂಪ್ರದಾಯಗಳನ್ನು ಮುಂದುವರೆಸಿ ಕಳೆದು ಹೋದ ಕರ್ನಾಟಕದ ಘನತೆ ಸ್ಥಾಪಿಸಿದ ರಾಜ್ಯವೇ ಮೈಸೂರು.
* ಮೈಸೂರು ನಗರದ ಬಳಿಯ ಹರಿನಾಡು ಎಂಬ ಪಾಳೇಯಪಟ್ಟಿನ ಶ್ರೀರಂಗ ಪಟ್ಟಣದ ಮಾಂಡಲಿಕನಿಗೆ ಅಧೀನವಾಗಿ ಚಾಮರಾಜ ಮಾರನಾಯಕ ಎಂಬುವವನ್ನು ಆಳುತ್ತಿದ್ದನು.
* ಗಂಡು ಮಕ್ಕಳಿಲ್ಲದ ಇವನ ಕಾಲಾನಂತರ ಅವನ ದಳವಾಯಿ ಕಾರುಗಳ್ಳಿಯ ಮಾರನಾಯಕನು. ರಾಜ್ಯಾಡಳಿತ ಮಾಡುತ್ತಿದ್ದ ರಾಜಕುಮಾರಿಯನ್ನು ತನಗೆ ವಿವಾಹ ಮಾಡಬೇಕೆಂದು ಒತ್ತಾಯ ಮಾಡಿದನು. ಆದರೆ ಇದಕ್ಕೆ ಯಾರು ಒಪ್ಪಿಗೆ ನೀಡಲಿಲ್ಲ.
* ಇದೇ ವೇಳೆಗೆ ಗುಜರಾತಿನ ದ್ವಾರಕೆಯಿಂದ ಯದುರಾಯನು ತನ್ನ ತಮ್ಮ ಕೃಷ್ಣರಾಯನೊಂದಿಗೆ ಮೈಸೂರಿಗೆ ಬಂದನು. ತಾನಾಗಿಯೇ ಮುಂದೆ ಬಂದು ರಾಣಿಗೆ ಸಹಾಯ ಮಾಡಲು ಒಪ್ಪಿ ಮಾರನಾಯಕನನ್ನು ಕೊಂದನು. ಇದರಿಂದ ಸಂತೋಷಗೊಂಡ ರಾಣಿಯು ತನ್ನ ಮಗಳನ್ನು ಯದುರಾಯರಿಗೆ ವಿವಾಹ ಮಾಡಿಕೊಟ್ಟ ರಾಜ್ಯವನ್ನು ನೀಡಿದಾಗ ಒಡೆಯರ ವಂಶವು ಸ್ಥಾಪನೆ ಆಯಿತು.
* ಮೈಸೂರನ್ನು ಯದುರಾಯರಿಂದ ಜಯಚಾಮರಾಜ ಒಡೆಯರ್ ವರೆಗೆ 25 ಅರಸರುಗಳು ಆಳಿದರು.
* ರಾಜಮುಡಿ ಎಂಬ ಕೀರಿಟವನ್ನು ಮೇಲುಕೋಟೆ ಚೆಲುವನಾರಾಯಣ ಸ್ವಾಮಿಗೆ ಅರ್ಪಿಸಿದ ಮತ್ತು ಮೈಸೂರಿನಲ್ಲಿ ನವರಾತ್ರಿ ಉತ್ಸವ ಪ್ರಾರಂಭಿಸಿದವರು ಯಾರು?
-> ರಾಜ ಒಡೆಯರು
-: ರಾಜ ಒಡೆಯರು (1578-1617):-
* ಸಣ್ಣ ಪಾಳೇಯ ಪಟ್ಟಾಗಿದ್ದ ಮೈಸೂರುನ್ನು ಸಾಕಷ್ಟು ದೊಡ್ದ ರಾಜ್ಯವನ್ನಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
* ಶ್ರೀರಂಗಪಟ್ಟಣವನ್ನು ವಿಜಯನಗರದ ರಾಜಪ್ರತಿನಿಧಿಯಿಂದ ವಶಪಡಿಸಿಕೊಂಡು ರಾಜಧಾನಿಯನ್ನಾಗಿ ಮಾಡಿದರು.
* ಶ್ರೀರಂಗ ಪಟ್ಟಣ, ಮೈಸೂರು ಮೇಲುಕೋಟೆಗಳ ದೇವಾಲಯಗಳ ಜೀರ್ಣೋದ್ಧಾರಕ್ಕೆ ಸೂಕ್ತವಾದ ಏರ್ಪಾಡು ಮಾಡಿದರು.
-: ಚಿಕ್ಕದೇವರಾಜ ಒಡೆಯರ್ -(1673-1704):-
* ಇವರು ಶಿವಾಜಿ ಸೇನೆಯನ್ನು ಮಧುರೆ, ಇಕ್ಕೇರಿ ಮತ್ತು ಬಿಜಾಪುರಗಳಲ್ಲಿ ಹಿಮ್ಮೆಟಿಸಿದರು.
* ಮಾಗಡಿ, ಮಧುಗಿರಿ, ಕೊರಟಗೆರೆ, ಮತ್ತಿತರ ಪ್ರಾಂತ್ಯಗಳನ್ನು ವಶಪಡಿಸಿಕೊಂಡರು.
* ಬೆಂಗಳೂರನ್ನು ಮೊಘಲರ ಸೇನಾನಿಯಿಂದ ಕೊಂಡುಕೊಂಡರು.
* ಇವರ ಬಿರುದುಗಳು :- ಕರ್ನಾಟಕ ಕವಿ ಚಕ್ರವರ್ತಿ, ಅಪ್ರತಿಮ ವೀರ, ತೆಂಕಣ ರಾಜ, ನವಕೋಟಿ ನಾರಾಯಣ
* ಆಡಳಿತದಲ್ಲಿ ನೆರವು ನೀಡಲು ಒಂದು ಸಚಿವ ಸಂಪುಟ ( ಅಠಾರ ಕಛೇರಿ) ಸ್ಥಾಪಿಸಿದರು.
* ಅಂಚೆ – ಕಛೇರಿ ಇವರ ಕಾಲದಲ್ಲಿ ಜಾರಿಯಾಯಿತು.
* ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸಿ ಚಿಕ್ಕದೇವರಾಜ ನಾಲೆ ಮತ್ತು ದೊಡ್ಡ ದೇವರಾಜ ನಾಲೆ ಎಂಬ ಎರಡು ಕಾಲುವೆಗಳನ್ನು ನಿರ್ಮಿಸಿ ಅಧಿಕ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ದೊರೆಯುವಂತೆ ಮಾಡಿದರು.
* ಇವರ ಆಶ್ರಯದಲ್ಲಿ ಕವಿಗಳು – ತಿರುಮಲಾರ್ಯ,ಸಂಚಿ ಹೊನ್ನಮ್ಮ
-: ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ :-
* ಭಾರತದ ಚರಿತ್ರೆಯಲ್ಲಿ 18 ನೇ ಶತಮಾನ ರಾಜಕೀಯ ಸಮಸ್ಯೆಗಳ ಶತಮಾನವೆಂದು ಚಿತ್ರಿಸಲಾಗಿದೆ.ಇದಕ್ಕೆ ಅನೇಕ ಕಾರಣಗಳಿವೆ.
* ಮೊಗಲ್ ಚಕ್ರವರ್ತಿ ಔರಂಗಜೇಬನ ಮರಣ 1707ರಲ್ಲಿ ಸಂಭವಿಸಿದ್ದು ಇದಕ್ಕೆ ಪ್ರಮುಖ ಕಾರಣವಾಗಿದೆ.
* 1704 ರಲ್ಲಿ ಸಂಭವಿಸಿದ ಚಿಕ್ಕ ದೇವರಾಜ ಒಡೆಯರ ಮರಣ ಮೈಸೂರು ರಾಜ್ಯದ ರಾಜಕೀಯ ಬೆಳವಣಿಗೆಯ ಮೇಲೆ ದುಷ್ಪರಿಣಾಮಗಳನ್ನು ಬೀರಿತು.
* ಮೈಸೂರಿನ ಯಾವ ಒಡೆಯರನ್ನು ಐದರಲ್ಲಿ ಗೃಹಬಂಧನದಲ್ಲಿರಿಸಿ ಅಧಿಕಾರಿಗಳನ್ನು ತನ್ನ ಕೈಗೆತ್ತಿಕೊಂಡನು?
-> ಎರಡನೇ ಕೃಷ್ಣರಾಜ ಒಡೆಯರು.
-: ಆಂಗ್ಲೋ-ಮೈಸೂರು ಯುದ್ಧಗಳು (1767-1799):-
-: ಮೊದಲ ಆಂಗ್ಲೋ-ಮೈಸೂರು ಯುದ್ಧ (1767-1769):-
* ದಕ್ಷಿಣ ಭಾರತದಲ್ಲಿ ಪ್ರಬಲನಾಗಿದ್ದ ಹೈದರಾಲಿಯನ್ನು ಮಟ್ಟ ಹಾಕುವುದು ಬ್ರಿಟಿಷರ ಮುಖ್ಯ ಧ್ಯೇಯವಾಗಿತ್ತು.
* ಮೊದಲ ಆಂಗ್ಲೋ ಮೈಸೂರು ಯುದ್ಧದಲ್ಲಿ ಹೈದರಾಲಿ ಬ್ರಿಟಿಷರನ್ನು ಸೋಲಿಸಿದನು.
* ಮದ್ರಾಸ್ ಒಪ್ಪಂದದೊಂದಿಗೆ ಯುದ್ದವು ಕೊನೆಯಾಯಿತು.
-: ಎರಡನೇ ಆಂಗ್ಲೋ-ಮೈಸೂರು ಯುದ್ಧ (1780-1784):-
* ಹೈದರಾಲಿ ಮತ್ತು ಟಿಪ್ಪು ಸುಲ್ತಾನ ಮತ್ತು ಬ್ರಿಟಿಷರ ವಾರ್ನ್ ಹೇಸ್ಟಿಂಗ್ಸ್ ನ ನಡುವೆ ನಡೆಯಿತು.
* 1771ರಲ್ಲಿ ಮರಾಠರ ಪೇಶ್ವೆ ಮಾಧವರಾವ್ ದಾಳಿ ಮಾಡಿದಾಗ ಮದ್ರಾಸ್ ಒಪ್ಪಂದದಂತೆ ಬ್ರಿಟಿಷರು ಸಹಾಯಕ್ಕೆ ಬರಲಿಲ್ಲ ಇದರಿಂದ ಹೈದರನು ಬ್ರಿಟಿಷರನ್ನು ಶತ್ರುವಾಗಿ ಪರಿಣಗಸಿ ಅವರನ್ನು ಸೋಲಿಸಲು ನಿರ್ಧರಿಸಿದನು.
* ಮಾಹೆಯೂ ಫ್ರೆಂಚರ ವಸಹಾತುವಾಗಿತ್ತು ಇದು ಹೈದರಾಲಿಯ ನಿಯಂತ್ರಣ ಕೊಳಪಟ್ಟಿತ್ತು ಬ್ರಿಟಿಷರು ಮಾಹೆಯನ್ನು ವಶಪಡಿಸಿಕೊಂಡಿದ್ದು ಎರಡನೇ ಮೈಸೂರು ಯುದ್ಧಕ್ಕೆ ಕಾರಣವಾಯಿತು.
* 1780 ರಲ್ಲಿ ಎರಡನೇ ಮೈಸೂರು ಯುದ್ಧವು ಆರಂಭವಾಯಿತು.
* ಹೈದರನು ಕಾಂಚಿಪುರಂನನ್ನು ವಶಪಡಿಸಿಕೊಂಡನು.
* 1781 ರಲ್ಲಿ ಪೋರ್ಟ ನೋವೆ ಎಂಬಲ್ಲಿ ಹೈದರನು ಪರಾಭವಗೊಂಡನು.
* ಪುಲಿಕಾಟ್ ಮತ್ತು ಸೋಲಿಂಗೂರಗಳ ಕದನದಲ್ಲಿಯೂ ಆರ್ಥಿಕ ಹಾನಿ ಅನುಭವಿಸಿದನು.
* 1782 ರಲ್ಲಿ ಹೈದರಾಲಿ ಅನಾರೋಗ್ಯದಿಂದ ನಿಧನಗೊಂಡನು.
* ಹೈದರನ ಮರಣ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಮಲಬಾರ್ ಪ್ರಾಂತ್ಯದಲ್ಲಿ ನಡೆದ ಯುದ್ಧದಲ್ಲಿ ತೊಡಗಿದ್ದನು.
* 1784ರಲ್ಲಿ ಮಂಗಳೂರು ಒಪ್ಪಂದದೊಂದಿಗೆ ಎರಡನೇ ಆಂಗ್ಲೋ-ಮೈಸೂರು ಯುದ್ಧ ಕೊನೆಗೊಂಡಿತು.
* ಹೈದರಾಲಿ ಮತ್ತು ಟಿಪ್ಪು ಸುಲ್ತಾನರು ಭಾರತದಲ್ಲಿ ಮೊದಲ ಬಾರಿಗೆ ಯುದ್ಧದಲ್ಲಿ ರಾಕೆಟ್ ಅನ್ನು ಬಳಸಿದರು.
-: ಮೂರನೇ ಆಂಗ್ಲೋ-ಮೈಸೂರು ಯುದ್ಧ (1790-1792):-
-: ಮೂರನೇ ಆಂಗ್ಲೋ ಮೈಸೂರು ಯುದ್ಧಕ್ಕೆ ನೇರ ಕಾರಣ :-
* ತಿರುವಾಂಕೂರು ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆ ಆ ರಾಜ್ಯದ ರಾಜ ನೆರೆಯ ಕೊಚ್ಚಿ ಸಂಸ್ಥಾನದಲ್ಲಿ ಬ್ರಿಟಿಷರ ಬೆಂಬಲದಿಂದ ಕೋಟೆಯನ್ನು ನಿರ್ಮಿಸಿದನು ಮತ್ತು ಆತನು ಡಚ್ಚರಿಂದ ಆಯಕೋಟಿ ಮತ್ತು ಕಾಂಗನೂರು ಕೋಟೆಗಳನ್ನು ಪಡೆದುಕೊಂಡಿದ್ದನು ಇದು ಮಂಗಳೂರು ಒಪ್ಪಂದದ ಶರತ್ತುಗಳ ಉಲ್ಲಂಘನೆಯಾಗಿತ್ತು.
* ಬ್ರಿಟಿಷರು ಜನರಲ್ ಮೆಡೋಸ್ ನ ನಾಯಕತ್ವದಲ್ಲಿ ಕಾರವಾರ,ಕೊಯಮತ್ತೂರು, ದಿಂಡಿಗಲ್, ಮೊದಲಾದವುಗಳನ್ನು ವಶಪಡಿಸಿಕೊಂಡರು.ಇದಕ್ಕೆ ವಿರುದ್ಧವಾಗಿ ಟಿಪ್ಪು ಸುಲ್ತಾನ್ ಬಾರಾಮಹಲ್ ಪ್ರಾಂತ್ಯವನ್ನು ಮತ್ತು ಸತ್ಯಮಂಗಲವನ್ನು ವಶಪಡಿಸಿಕೊಂಡನು.
* ಈ ಸಮಯದಲ್ಲಿ ಲಾರ್ಡ್ ಕಾರ್ನ್ ವಾಲೀಸ್, ಬ್ರಿಟಿಷ್ ಸೈನ್ಯದ ನಾಯಕತ್ವ ವಹಿಸಿಕೊಂಡನು.
* ಕಾರ್ನ್ ವಾಲೀಸ್ ನಿಜಾಮ ಮತ್ತು ಮರಾಠರ ನೆರವಿನಿಂದ ಯುದ್ಧ ತಿರುವನ್ನು ಪಡೆದುಕೊಂಡಿತು.
* 1792 ರಲ್ಲಿ ಸಂಘಟಿತ ಸೈನ್ಯ ಒಂದೊಂದಾಗಿ ಕೋಟೆಗಳನ್ನು ವಶಪಡಿಸಿಕೊಂಡು ಶ್ರೀರಂಗಪಟ್ಟಣದ ಕಡೆಗೆ ಸಾಗಿತು ರಾತ್ರಿ ವೇಳೆಯಲ್ಲಿ ಕೋಟೆಯನ್ನು ಹಾಳುಗೆಡವಲಾಯಿತು ಇದರಿಂದ ವಿಚಲಿತಗೊಂಡ ಟಿಪ್ಪು ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಳ್ಳಲು ನಿರ್ದರಿಸಿದನು.
* ” ಶ್ರೀರಂಗಪಟ್ಟಣದ ” ಒಪ್ಪಂದ ಅನ್ವಯ ಮೂರನೇ ಆಂಗ್ಲೋ-ಮೈಸೂರು ಯುದ್ಧ ಕೊನೆಗೊಂಡಿತು.
-: ಶ್ರೀರಂಗಪಟ್ಟಣ ಒಪ್ಪಂದದ ಶರತ್ತುಗಳು :-
* ಟಿಪ್ಪು ತನ್ನ ಅರ್ಧ ರಾಜ್ಯ ಬಿಟ್ಟುಕೊಡುವುದು.
* 3 ಕೋಟಿ ರೂಪಾಯಿಗಳನ್ನು ಯುದ್ಧ ನಷ್ಟ ಭರ್ತಿಯಾಗಿ ಕೊಡುವುದು.
* ಯುದ್ಧ ನಷ್ಟ ಭರ್ತಿಗೆ ಗ್ಯಾರಂಟಿಯಾಗಿ ತನ್ನ ಎರಡು ಗಂಡು ಮಕ್ಕಳನ್ನು ಒತ್ತೆಯಾಗಿಡುವುದು.
* ಯುದ್ಧದ ಸಂದರ್ಭದಲ್ಲಿ ಸೆರೆ ಹಿಡಿಯಲಾಗಿದ್ದ ಸೈನಿಕರನ್ನು ಬಿಡುಗಡೆಗೊಳಿಸುವುದು ಇದರ ಅನ್ವಯ ಶ್ರೀರಂಗಪಟ್ಟಣದಿಂದ ಬ್ರಿಟಿಷರ ನೇತೃತ್ವದಲ್ಲಿನ ಸೈನ್ಯ ಹಿಂತೆಗೆಯಿತು.
-: ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ (1799):-
* ಟಿಪ್ಪು ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿನ ಸೋಲನ್ನು ವೈಯಕ್ತಿಕವಾಗಿ ಸ್ವೀಕರಿಸಿ ಅದನ್ನು ಪ್ರಮುಖ ಸವಾಲ್ ಎಂದು ಸ್ವೀಕರಿಸಿದನು.
* ಒಪ್ಪಂದದ ಅನ್ವಯ ಬ್ರಿಟಿಷರ ನೇತೃತ್ವದ ಮಿತ್ರಕೂಟಕ್ಕೆ ನೀಡಬೇಕಾದ ಭೂಪ್ರದೇಶಗಳು ಮತ್ತು ಹಣವನ್ನು ಚಾಚು ತಪ್ಪದೆ ಸಲ್ಲಿಸಿ ಒತ್ತೆಯಳಾಗಿ ಕಳುಹಿಸಿಕೊಟ್ಟಿದ್ದ ತನ್ನ ಇಬ್ಬರು ಮಕ್ಕಳನ್ನು ಕರೆಸಿಕೊಂಡನು.
* ಟಿಪ್ಪು ಬ್ರಿಟಿಷರ ದಿನದಲ್ಲಿದ್ದ ಮಲಯಾಳಂ ಮಾತನಾಡುವ ಭೂಪ್ರದೇಶಗಳು ನ್ಯಾಯಯುತವಾಗಿ ತನಗೆ ಸಲ್ಲಬೇಕೆಂದು ವಾದಿಸಿದನು. ಆದರೆ ಬ್ರಿಟಿಷರು ಇದನ್ನು ಪೃಷ್ಟಕರಿಸಲಿಲ್ಲ.
* ಲಾರ್ಡ್ ವೆಲ್ಲೆಸ್ಲಿ 1798ರಲ್ಲಿ ಭಾರತದ ಗವರ್ನರ್ ಆಗಿ ನೇಮಕಗೊಂಡನು.
* ಟಿಪ್ಪು ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಳ್ಳಲು ನಿರಾಕರಿಸಿದನು. ಇದರಿಂದಾಗಿ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧವು ಆರಂಭವಾಯಿತು.
* 1799ರಲ್ಲಿ ಯುದ್ಧ ಆರಂಭವಾಯಿತು ಈ ಯುದ್ಧದಲ್ಲಿ ಟಿಪ್ಪು ಸಾವಿರ 1799 ರಲ್ಲಿ ಹತನಾದನು.
* ಒಂದು ಸಣ್ಣ ಭೌಗೋಳಿಕ ಪ್ರದೇಶವು ಮೈಸೂರು ಒಡೆಯರ ರಾಜವಂಶದ ಪ್ರತಿನಿಧಿಗೆ ವರ್ಗಾಯಿಸಲ್ಪಟ್ಟಿತು.
* ಈ ಪ್ರದೇಶದ ತರುವಾಯ ಮೈಸೂರು ಸಂಸ್ಥಾನ ವೆಂದು ಹೆಸರಾಯಿತು.