ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಮತ್ತು ಮೈಸೂರು ಒಡೆಯರು- ಭಾಗ – 02 ( All Competative exam notes)

-: 10ನೇ ಚಾಮರಾಜೇಂದ್ರ ಒಡೆಯರು (1881-1894):-

* ಬ್ರಿಟಿಷ್ ಸರ್ಕಾರವು ತನ್ನ ಆಶ್ವಾಸನೆಯಂತೆ 1881ರಲ್ಲಿ ಮೈಸೂರಿನ ಸಿಂಹಾಸನವನ್ನು ಹತ್ತನೆಯ ಚಾಮರಾಜೇಂದ್ರ ಒಡೆಯರಿಗೆ ವಹಿಸಿತು.

* ಕಮಿಷನರ್ ಆಡಳಿತ ಕೊನೆಗೊಂಡು ರೆಸಿಡೆಂಟ್ ಎಂಬ ಬ್ರಿಟಿಷ್ ಪ್ರತಿನಿಧಿಯನ್ನು ನೇಮಿಸಲಾಯಿತು.

* ಇವರ ಕಾಲದಲ್ಲಿ ” ದಿವಾನ್ ರಂಗಾಚಾರ್ಲು ” ದಿವಾನರಾಗಿದ್ದರು.

* ‘ ಮೈಸೂರು ಪ್ರಜಾಪ್ರತಿನಿಧಿ ಸಭೆ’ಯನ್ನು ಪ್ರಾರಂಭಿಸಿದರು.

* 1881 ರಲ್ಲಿ – ಕೋಲಾರದ ಚಿನ್ನದ ಗಣಿ, 1882 ರಲ್ಲಿ – ಬೆಂಗಳೂರು-ಮೈಸೂರು ರೈಲುಮಾರ್ಗವನ್ನು ಆರಂಭಿಸಿದರು.

* ಸಿವಿಲ್ ಸರ್ವಿಸ್ ಪರೀಕ್ಷೆಯನ್ನು ಆರಂಭಿಸಿದ ಮೈಸೂರು ದಿವಾನರು ?

-> ಕೆ. ಶೇಷಾದ್ರಿ ಅಯ್ಯರ್

* ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ಗಮನ ನೀಡಲು ಮೈಸೂರಿನಲ್ಲಿ ” ಮಹಾರಾಣಿ ಬಾಲಿಕಾ ಪ್ರೌಢಶಾಲೆ” ಯನ್ನು ಸ್ಥಾಪಿಸಿದರು.

* ಚಾಮರಾಜೇಂದ್ರ ಒಡೆಯರ್ ಮೈಸೂರಿಗೆ ಬಂದಿದ್ದ ‘ ವಿವೇಕಾನಂದರಿಗೆ ‘ ಆಶ್ರಯ ನೀಡಿ, ಚಿಕಾಗೋ ಸರ್ವ ಧರ್ಮ ಸಮ್ಮೇಳನಕ್ಕೆ ಹೋಗಲು ಸಹಾಯ ಮಾಡಿದರು.

* 10ನೇ ಚಾಮರಾಜೇಂದ್ರ ಒಡೆಯರ್ ‘ ಬಸವಪ್ಪ ಶಾಸ್ತ್ರಿ’ ಮುಂತಾದ ಕವಿಗಳಿಗೆ ಆಶ್ರಯ ನೀಡಿದ್ದರು.

* ” ಅಭಿನವ ಕಾಳಿದಾಸ ” ಬಿರುದಾಂಕಿತ- ಬಸವಪ್ಪಶಾಸ್ತ್ರಿ ಇವರು ಮೈಸೂರು ರಾಜ್ಯಗೀತೆ – ” ಕಾಯೋ ಶ್ರೀ ಗೌರಿ ” ಕೃತಿಯನ್ನು ರಚಿಸಿದರು.

-: ನಾಲ್ವಡಿ ಕೃಷ್ಣರಾಜ ಒಡೆಯರ್ (1894-1940):-

* ಇವರು ಪ್ರಾಪ್ತ ವಯಸ್ಕರಾಗುವವರೆಗೆ ಅವರ ತಾಯಿ ಮಹಾರಾಣಿ ‘ ವಾಣಿವಿಲಾಸ ಸನ್ನಿಧಾನ ಕೆಂಪುನಂಜಮ್ಮಣ್ಣಿ ‘ ಅವರ ರಾಜಪ್ರತಿನಿಧಿಯಾಗಿ ಆಡಳಿತ ನಡೆಸಿದರು.

* ಇವರ ಕಾಲದಲ್ಲಿ ಚಿನ್ನದ ಗಣಿ ಸುಧಾರಣೆ, ಕಾಲೇಜು ಸ್ಥಾಪನೆ, ಮಾರಿಕಣಿವೆ ಜಲಾಶಯ ನಿರ್ಮಾಣ,ರೈಲು ಮಾರ್ಗ, ಆಸ್ಪತ್ರೆ ಸ್ಥಾಪನೆ ಹಾಗೂ ಕಾವೇರಿ ಜಲಪಾತವನ್ನು ಉಪಯೋಗಿಸಿಕೊಂಡು ಶಿವನಸಮುದ್ರದಲ್ಲಿ ಜಲವಿದ್ಯುತ್ ಕೇಂದ್ರವನ್ನು ಸ್ಥಾಪಿಸುವ ಕಾರ್ಯಗಳು ನಡೆದವು. ಈ ವಿದ್ಯುತ್ ಕೇಂದ್ರದಿಂದ ಕೋಲಾರದ ಚಿನ್ನದ ಗಣಿಗೂ ನಂತರ ಬೆಂಗಳೂರಿಗೂ ವಿದ್ಯುತ್ ಸರಬರಾಜು ಮಾಡಲು ಅನುಕೂಲವಾಯಿತು. ಭಾರತದಲ್ಲಿ ವಿದ್ಯುತ್ ಪಡೆದ ನಗರಗಳಲ್ಲಿ ಬೆಂಗಳೂರೇ ಮೊದಲನೆಯದು.

* 1902 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಅಧಿಕಾರ ವಹಿಸಿಕೊಂಡರು.

* ಇವರು ಪ್ರಾಥಮಿಕ ಶಿಕ್ಷಣದ ಅಭಿವೃದ್ಧಿಗಾಗಿ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿಯೂ ಶಿಕ್ಷಣ ಶುಲ್ಕವನ್ನು ರದ್ದು ಮಾಡಿದರು.

-: ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿದ್ದ ಪ್ರಖ್ಯಾತ ದಿವಾನರು :-

* ಪಿ. ಎನ್ ಕೃಷ್ಣಮೂರ್ತಿ

* ವಿ ಪಿ ಮಾಧವರಾಯರು

* ಸರ್ ಎಂ ವಿಶ್ವೇಶ್ವರಯ್ಯ

* ಕಾಂತರಾಜ್ ಅರಸ್

* ಸರ್. ಆ ಆಲ್ಬಿ ಯನ್ ಬ್ಯಾನರ್ಜಿ

* ಸರ್ ಮಿರ್ಜಾ ಇಸ್ಮಾಯಿಲ್

* ನಾಲ್ವಡಿ ಕೃಷ್ಣರಾಜ ಒಡೆಯರು ವಿದೇಶಿ ವಿದ್ಯಾಭ್ಯಾಸಕ್ಕೆ ಹೋಗುವವರಿಗೆ ವಿದ್ಯಾರ್ಥಿ ವೇತನ ನೀಡುವ ಪದ್ಧತಿ ಜಾರಿಗೆ ತಂದರು.

* ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯನ್ನು(IISC) 1905ರಲ್ಲಿ ಟಾಟಾ ರವರ ಬೆಂಬಲದಿಂದ ಸ್ಥಾಪಿಸಲಾಯಿತು.(IISC ಗೆ ಭೂಮಿಯನ್ನು ನೀಡಿದವರು ನಾಲ್ವಡಿ ಕೃಷ್ಣರಾಜ ಒಡೆಯರು)

* ಬೆಳಗೊಳದ ಹತ್ತಿರ ಕಾವೇರಿ ನದಿಗೆ ಅಣೆಕಟ್ಟೊಂದನ್ನು ನಿರ್ಮಿಸಲಾಯಿತು.

* ಭದ್ರಾವತಿಯ ಉಕ್ಕಿನ ಕಾರ್ಖಾನೆ,ಸಿಮೆಂಟ್ ಕಾರ್ಖಾನೆ, ಕಾಗದದ ಕಾರ್ಖಾನೆ, ಮಂಡ್ಯದ ಸಕ್ಕರೆ ಕಾರ್ಖಾನೆ, ಮೈಸೂರಿನ ಗಂಧದ ಎಣ್ಣೆ ಕಾರ್ಖಾನೆ,, ಬೆಂಗಳೂರಿನ ಸಾಬೂನಿನ ಕಾರ್ಖಾನೆ, ಬೆಳಗೋಳದ ರಾಸಾಯನಿಕ ವಸ್ತುಗಳು ಮತ್ತು ಕೃತಕ ಗೊಬ್ಬರಗಳ ಕಾರ್ಖಾನೆ ಮುಂತಾದವುಗಳನ್ನು ಸ್ಥಾಪಿಸಲ್ಪಟ್ಟಿದೆ.

* ಪ್ರಸಿದ್ಧ ವಿದ್ವಾಂಸರುಗಳಾದ ಶ್ಯಾಮಶಾಸ್ತಿ ,ಎಂ ಹಿರಿಯಣ್ಣ,ವೀಣೆ ಶೇಷಣ್ಣ, ಸಾಂಬಯ್ಯ, ಬಿಡಾರಂ  ಕೃಷ್ಣಪ್ಪ,ಮುತ್ತಯ್ಯ ಭಾಗವತ್ರ್,ವಾಸುದೇವಾಚಾರ್ಯ,ಟಿ ಚೌಡಯ್ಯ ಮುಂತಾದವರು ನಾಲ್ವಡಿ ಕೃಷ್ಣರಾಜರ ಆಸ್ಥಾನದಲ್ಲಿದ್ದರು.

* ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದ ಆಡಳಿತದಿಂದ ಮೈಸೂರು ” ಮಾದರಿ ರಾಜ್ಯ ” ಎಂಬ ಹೆಸರನ್ನು ಪಡೆದಿತ್ತು.

* ಮಹಾತ್ಮ ಗಾಂಧೀಜಿ ಅವರು ನಾಲ್ವಡಿ ಕೃಷ್ಣರಾಜ ಒಡೆಯರಿಗೆ ” ರಾಜಶ್ರೀ ” ಎಂದು ಕರೆದಿದ್ದಾರೆ.

-: ಜಯಚಾಮರಾಜ ಒಡೆಯರ್ (1940-1950):-

* ಇವರು ಮೂರನೇ ಕೃಷ್ಣರಾಜ ಒಡೆಯರ ದತ್ತುಪುತ್ರ.

* ಮೈಸೂರಿಗೆ 1881ರಲ್ಲಿ ಅಧಿಕಾರವನ್ನು ಪುನರಸ್ತಾಂತರ ಮಾಡಿದವರು – ಲಾರ್ಡ್ ರಿಪ್ಪನ್ ಆದೇಶದ ಅನ್ವಯ ಮದ್ರಾಸ್ ಪ್ರಾಂತ್ಯದ ಬ್ರಿಟಿಷ್ ಗೌರ್ನರ್ ವಿಲಿಯಂ ಆಡಮ್ಸ್

 -: ಇವರ ಕಾಲದಲ್ಲಿ ಇದ್ದ ದಿವಾನರು :-

* ಮಿರ್ಜಾ ಇಸ್ಮಾಯಿಲ್

* ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್

* ನ್ಯಾಪ್ತಿ ಮಾಧವ ರಾವ್

* ಇವರು ಸ್ವತಂತ್ರ ಭಾರತದಲ್ಲಿನ ಮೈಸೂರು ಮೊದಲ ದಿವಾನರಾಗಿದ್ದರು.

  -: ದೊಂಡಿಯಾ ವಾಘ (1800):-

* ಇವನು ಟಿಪ್ಪುವಿನ ಮರಣದ ನಂತರ ಬ್ರಿಟಿಷ್ ವಿರುದ್ಧ ಹೋರಾಡಿದನು.

* ದೊಂಡಿಯಾ ಚನ್ನಗಿರಿಯ ಮರಾಠ ಕುಟುಂಬದಲ್ಲಿ ಜನಿಸಿದನು.ಇವನ ಶೌರ್ಯ ಪರಾಕ್ರಮಗಳಿಂದ ” ವಾಘ್” ಎಂದು ಹೆಸರಾದನು ಮರಾಠಿಯಲ್ಲಿ ವಾಘ್ ಎಂದರೆ ‘ ಹುಲಿ ‘ ಎಂದರ್ಥ.

* ದೊಂಡಿಯಾ ವಾಘ್ ಒಂದು ಸೈನ್ಯವನ್ನು ಸುಸಜ್ಜಿತಗೊಳಿಸಿ ಬಂಡಾಯದ ಬಾವುಟವನ್ನು ಹಾರಿಸಿದನು.ಶಿವಮೊಗ್ಗ ಮತ್ತು ಬಿದನೂರಿನ ಕೋಟೆಗಳನ್ನು ವಶಪಡಿಸಿಕೊಂಡನು.

* ಚಿತ್ರದುರ್ಗದ ಕೋಟೆಯನ್ನು ವಶಪಡಿಸಿಕೊಳ್ಳಲು ವಿಫಲನಾದನು.

* ಗೌರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿ ಬಂಡಾಯವನ್ನು ಹತ್ತಿಕ್ಕಲು ಪ್ರಾರಂಭಿಸಿದನು.

* ದೊಂಡಿಯಾನ ನಿಯಂತ್ರಣದಲ್ಲಿದ್ದ ಶಿವಮೊಗ್ಗ,ಹೊನ್ನಾಳಿ, ಹರಿಹರ, ಮೊದಲಾದವುಗಳ ಮೇಲೆ ಆಕ್ರಮಣವನ್ನು ಬ್ರಿಟಿಷ್ ಸೈನ್ಯ ನಡೆಸಿತು.

* ಬ್ರಿಟಿಷರು ನಿಜಾಮ ಮತ್ತು ಮರಾಠರ ಸೈನ್ಯದ ಸಹಾಯದಿಂದ ” ಯಾಪಲ ಪೆರವಿ ” ಎಂಬ ಸ್ಥಳದಲ್ಲಿ ಕಾರ್ಯಚರಣೆ ನಡೆಸಿ ” ಕೋನಗಲ್” ಎಂಬ ಸ್ಥಳದಲ್ಲಿ ದೊಂಡಿಯಾವಾಘ್ನ ನನ್ನು ಹತ್ಯೆಗೈದರು.

-: ಕಿತ್ತೂರಿನ ಬಂಡಾಯ ವೀರರಾಣಿ ಚೆನ್ನಮ್ಮ(1824):-

* ಕಿತ್ತೂರು,ಬೆಳಗಾಂ ಮತ್ತು ಧಾರವಾಡ ಜಿಲ್ಲೆಗಳ ನಡುವೆ ಇರುವ ಒಂದು ಊರು.

* ಕಿತ್ತೂರು ಸಂಸ್ಥಾನದ ಮಲ್ಲಸರ್ಜನ ನಂತರ ಅವನ ಹಿರಿಯ ಮಗ ಶಿವಲಿಂಗ ರುದ್ರ ಸರ್ಜಾ ಕಿತ್ತೂರು ಆಡಳಿತವನ್ನು ನಿರ್ವಹಿಸಲು ಪ್ರಾರಂಭಿಸಿದನು.

* ಶಿವಲಿಂಗ ರುದ್ರಸರ್ಜ ಮರಾಠರ ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯವನ್ನು ನೀಡಿದನು. ಇದರಿಂದಾಗಿ ಬ್ರಿಟಿಷರು ಆ ಸಂಸ್ಥಾನವನ್ನು ವಂಶ ಪಾರಂಪರ್ಯವಾಗಿ ಆತನಿಗೆ ನೀಡಿದ್ದು ಪ್ರತಿಯಾಗಿ ವಾರ್ಷಿಕ ಕಾಣಿಕೆಯನ್ನು ಪಡೆದುಕೊಳ್ಳುವಂತಾಯಿತು ಈ ಒಪ್ಪಂದ ” ಥಾಮಸ್ ಮನ್ರೋ ”ನ ಕಾಲದಲ್ಲಿ ಜಾರಿಗೊಳಿಸಲ್ಪಟ್ಟಿತ್ತು.

* ಶಿವಲಿಂಗ ರುದ್ರಸರ್ಜನ ಮರಣ ನಂತರ ‘ ಶಿವಲಿಂಗಪ್ಪ’ ಎಂಬ ಹುಡುಗನನ್ನು ದತ್ತು ಪಡೆದ ಚೆನ್ನಮ್ಮ ಆಡಳಿತವನ್ನು ನಿರ್ವಹಿಸಲು ಪ್ರಾರಂಭಿಸಿದಳು.

* ಥ್ಯಾಕರೆ ಆಗ ಧಾರವಾಡದ ಕಲೆಕ್ಟರ್ ಆಗಿ ಮತ್ತು ಪೊಲಿಟಿಕಲ್ ಏಜೆಂಟಾಗಿದ್ದನು ಇವನು ಬಾಂಬೆಯ ಗವರ್ನರ್ ಗೆ ದತ್ತಕದ ಬಗ್ಗೆ ವರದಿಯನ್ನು ಸಲ್ಲಿಸಿ ದತ್ತು ಮಕ್ಕಳಿಗೆ ನೀಡುವುದನ್ನು ನಿರಾಕರಿಸಿ ಕಿತ್ತೂರಿನ ಆಡಳಿತವನ್ನು ವಶಪಡಿಸಿಕೊಳ್ಳಲು ಯತ್ನಿಸಿದನು.

* ಕಿತ್ತೂರಿನ ಸೈನ್ಯ ಬ್ರಿಟಿಷ್ ಸೈನ್ಯದ ಮೇಲೆ ದಾಳಿ ಮಾಡಿತು ಈ ದಾಳಿಯಲ್ಲಿ ಥ್ಯಾಕರೆ ಗುಂಡೇಟಿಗೆ ಬಲಿಯಾದನು.

* ಕಿತ್ತೂರನ್ನು ವಶಪಡಿಸಿಕೊಳ್ಳಲೇಬೇಕೆಂಬ ದೃಢಸಂಕಲ್ಪದಿಂದ ಬ್ರಿಟಿಷರು ಮತ್ತಷ್ಟು ಸನ್ನದ್ಧರಾದರು.

* ” ಕರ್ನಲ್ ಡೀಕ್ ”ನ ನೇತೃತ್ವದಲ್ಲಿ ಬ್ರಿಟಿಷ್ ಸೈನ್ಯ ಕಿತ್ತೂರಿಗೆ ಮುತ್ತಿಗೆ ಹಾಕಿತ್ತು ಕಿತ್ತೂರು ಬ್ರಿಟಿಷರ ವಶವಾಯಿತು. ಬ್ರಿಟಿಷರು ಚೆನ್ನಮ್ಮ ಮತ್ತು ಮೊದಲಾದವರನ್ನು ಬೈಲಹೊಂಗಲ ಕೋಟೆಯ ಹಿರೇಮನೆಯಲ್ಲಿ ಇಡಲಾಯಿತು. ಚನ್ನಮ್ಮ ಜೈಲಿನಲ್ಲಿ ಮರಣ ಹೊಂದಿದಳು.

 -: ಸಂಗೊಳ್ಳಿ ರಾಯಣ್ಣ (1829-1830):-

* ರಾಯಣ್ಣ ಬ್ರಿಟಿಷರ ಆಡಳಿತ ಯಂತ್ರದ ಪ್ರಮುಖ ಅಂಗವಾಗಿದ್ದ ತಾಲೂಕು ಕಚೇರಿಗಳು ಖಜಾನೆಗಳನ್ನು ಲೂಟಿ ಮಾಡಿದನು.

* ಬ್ರಿಟಿಷರು ರಾಯಣ್ಣನನ್ನು ರಾಣಿ ಚೆನ್ನಮ್ಮನ ಕುಂಬಾಕಿನಿಂದ ಸೈನಿಕರ ಕಾರ್ಯಚರಣೆಗಳನ್ನು ನಡೆಸುತ್ತಿದ್ದಾನೆಂದು ಭಾವಿಸಿ, ಚೆನ್ನಮ್ಮನನ್ನು ಬಯಲುಹೊಂಗಲದಿಂದ ಕೂಸುಗಲ್ಲಿನ ಸೆರೆಮನೆಗೆ ಸ್ಥಳಾಂತರಿಸಲಾಯಿತು.

* ರಾಯಣ್ಣನನ್ನು ಸೆರೆ ಹಿಡಿಯಲು ಬ್ರಿಟಿಷರು ಒಂದು ಸಂಚನ್ನು ರೂಪಿಸಿದರು ಕಿತ್ತೂರಿನ ಚೆನ್ನಮ್ಮಳನ್ನು ವಿರೋಧಿಸುತ್ತಿದ್ದ ದೇಸಾಯಿಗಳನ್ನು ಪ್ರಚೋದಿಸಿದರು ಅಮಲ್ದರ್ನಾಗಿದ್ದ ಕೃಷ್ಣರಾಯ ಎಂಬುವನನ್ನು ಈ ಸಂಚಿಗೆ ಕೈ ಜೋಡಿಸಿದನು.ಸಂಚಿಗೆ ಬಲಿಯಾದ ರಾಯಣ್ಣನನ್ನು ಬಂಧಿಸಿ ಬ್ರಿಟಿಷರು ಧಾರವಾಡಕ್ಕೆ ಕರೆತಂದರು.

* 1831ರಲ್ಲಿ ” ನಂದಗಡದಲ್ಲಿ ” ರಾಯಣ್ಣನನ್ನು ಗಲ್ಲಿಗೇರಿಸಲಾಯಿತು.

 -: ಅಮರ ಸುಳ್ಯ ಬಂಡಾಯ :-

* ಕೊಡಗಿನಲ್ಲಿ ಆಡಳಿತ ನಡೆಸುತ್ತಿದ್ದ ಚಿಕ್ಕವೀರರಾಜೇಂದ್ರನನ್ನು ಬ್ರಿಟಿಷರು 1834ರಲ್ಲಿ ಪದಚ್ಯುತಿಗೊಳಿಸಿ ಅವನನ್ನು ಬೆಂಗಳೂರಿನ ಮೂಲಕ ವೆಲ್ಲೂರಿಗೆ ತರುವಾಯ ಕಾಶಿಗೆ ಸಾಗಿಸಿದರು.

* ಚಿಕ್ಕವೀರರಾಜೇಂದ್ರನ ಪದಚ್ಯತಿ ಕೊಡಗಿನಲ್ಲಿ ರಾಜಕೀಯ ಅಸಮಾಧಾನವನ್ನು ಸೃಷ್ಟಿಸಿತು.

* ಇದರ ವಿರುದ್ಧ ಸ್ವಾಮಿ ಅಪರಾಂಪರ,ಕಲ್ಯಾಣಸ್ವಾಮಿ, ಪುಟ್ಟಬಸಪ್ಪ ಸಶಸ್ತ್ರ ಬಂಡಾಯವನ್ನು ಸಂಘಟಿಸಿದರು ಈ ಮೂವರು ಪದಚ್ಯುತಿ ರಾಜನ ವಂಶಸ್ಥರೆಂದು ಹೇಳಿಕೊಂಡರು.

* ಸ್ವಾಮಿ ಅಪರಾಂಪರ ಬಂಡಾಯದ ಮುಖ್ಯಸ್ಥನಾದನು 1835 ರಲ್ಲಿ ಇವನನ್ನು ಬ್ರಿಟಿಷರು ಸೆರೆ ಹಿಡಿದು ಬೆಂಗಳೂರಿಗೆ ರವಾನಿಸಿದರು ಕಲ್ಯಾಣ ಸ್ವಾಮಿ 1837 ರಲ್ಲಿ ಬಂಧಿಸಲ್ಪಟ್ಟನು ಆತನನ್ನು ಮೈಸೂರಿನ ಸೆರೆಮನೆಯಲ್ಲಿ ಇಡಲಾಯಿತು.

* ಪುಟ್ಟಬಸಪ್ಪ :- ಕೆಳಕೊಡಗಿನ ಜನರು ಕಲ್ಯಾಣ ಸ್ವಾಮಿಯ ನಿಧನ ನಂತರ ಬಂಡಾಯನ್ನು ಮುಂದುವರಿಸಿದರು ಕೆನರ ಪ್ರಾಂತ್ಯದ ಸುಳ್ಯ,ಬೆಳ್ಳಾರ ಮತ್ತು ಪುತ್ತೂರು ಮೊದಲಾದ ಸ್ಥಳಗಳು ಅಮರ ಸುಳ್ಯದ ಬಂಡಾಯದ ಕೇಂದ್ರ ಸ್ಥಾನಗಳಾಗಿದ್ದವು. ಬ್ರಿಟಿಷ್ ಸೈನ್ಯ ಕೊಡಗಿನಲ್ಲಿ ಸ್ಥಳೀಯರ ಸಹಾಯದಿಂದ ಪುಟ್ಟಬಸಪ್ಪ,ಲಕ್ಷ್ಮಪ್ಪ, ಬಂಗರಸ, ಕೆದಂಬಾಡಿ,ರಾಮಯ್ಯಗೌಡರು,ಗುಡ್ಡೆಮನೆ ಅಯ್ಯಪರನ್ನು ಬಂಧಿಸಿ ಗಲ್ಲಿಗೇರಿಸಲಾಯಿತು.

 

WhatsApp Group Join Now
Telegram Group Join Now

Leave a Comment