ಕರ್ನಾಟಕದ ಕೈಗಾರಿಕೆಗಳು( All Competative exam notes)

* ” ಕೈಗಾರೀಕರಣ ಇಲ್ಲವೇ ವಿನಾಶ ” – Sir M ವಿಶ್ವೇಶ್ವರಯ್ಯ.

* ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ ಸ್ಥಾಪಿಸಿದ ರಾಜ್ಯ – ಕರ್ನಾಟಕ.

* Sir M  ವಿಶ್ವೇಶ್ವರಯ್ಯನವರು ದೂರದೃಷ್ಟಿಯಿಂದ ಬಾಬಾಬುಡನ್ ಗಿರಿ ಬೆಟ್ಟಗಳಲ್ಲಿ ( ಇನಾಮ ದತ್ತಾತ್ರೇಯ ಪೀಠ) ಸಿಗುವ ಉತ್ತಮ ಹಾಗೂ ಅಪಾರ ಕಬ್ಬಿಣದ ಅದಿರನ್ನು ಬಳಸಿಕೊಳ್ಳಲು ಶಿವಮೋಗ್ಗ ಜಿಲ್ಲೆಯ ಭದ್ರಾವತಿಯಲ್ಲಿ 1923 ರಲ್ಲಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಸ್ಥಾಪಿಸಲಾಯಿತು. ಇದನ್ನು Mysure Iron and Steel limited ( MISL) ಎಂದು ಕರೆಯಲಾಯಿತು. ಅನಂತರ 1989 ರಲ್ಲಿ ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ( SAIL) ವಹಿಸಿಕೊಡಲಾಯಿತು.ಇಂದು ಇದಕ್ಕೆ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ ಎಂದು ಕರೆಯುತ್ತಾರೆ.

* ರಾಜ್ಯದ ಏಕೈಕ ಖಾಸಗಿ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ – ಜಿಂದಾಲ್ ವಿಜಯನಗರ ಉಕ್ಕು ಲಿಮಿಟೆಡ್.

* ಇದು ಬಳ್ಳಾರಿ ಜಿಲ್ಲೆಯ ತೋರಣಗಲ್ ಎಂಬಲ್ಲಿ 2001ರಲ್ಲಿ ಅತ್ಯಾಧುನಿಕ ಕೊರೆಕ್ಸ್ ತಂತ್ರಜ್ಞಾನವನ್ನು ಉಪಯೋಗಿಸಿ ಸ್ಥಾಪಿಸಲಾಗಿದೆ.

  -: ಹತ್ತಿ ಬಟ್ಟೆ ಕೈಗಾರಿಕೆ :-

* ಮೊಟ್ಟ ಮೊದಲು 1884 ರಲ್ಲಿ M.S.K ಗಿರಣಿ ಕಲ್ಬುರ್ಗಿಯಲ್ಲಿ ಸ್ಥಾಪನೆಗೊಂಡಿತು.ಅನಂತರ ಹುಬ್ಬಳ್ಳಿಯಲ್ಲಿ ಪ್ರಾರಂಭಗೊಂಡವು.

* ಕರ್ನಾಟಕದ ಮ್ಯಾಂಚೆಸ್ಟರ್ – ದಾವಣಗೆರೆ.

* ಪ್ರಸ್ತುತ ಕರ್ನಾಟಕದಲ್ಲಿ 44 ಹತ್ತಿ ಬಟ್ಟೆ  ಗಿರಣಿಗಳಿವೆ.

* ” ಸುವರ್ಣ ಜವಳಿ ನೀತಿ ” ಕರ್ನಾಟಕದಲ್ಲಿ 2008- 13 ರಲ್ಲಿ ಪ್ರಾರಂಭವಾಯಿತು.

  -: ಸಕ್ಕರೆ ಕೈಗಾರಿಕೆ :-

* 19ನೇ ಶತಮಾನದ ಆದಿ ಭಾಗದಲ್ಲೇ ಶ್ರೀರಂಗಪಟ್ಟಣದ ‘ ಪಾಲಳಿ ( ಅಷ್ಟಗ್ರಾಮ) ಮತ್ತು ಚಿಕ್ಕಬಳ್ಳಾಪುರಗಳಲ್ಲಿ ಸಕ್ಕರೆ ತಯಾರಿಸುತ್ತಿದ್ದುದ್ದನ್ನು ” ಸರ್ ಫ್ರಾನ್ಸಿಸ್ ಬುಕಾನನ್ ” ಉಲ್ಲೇಖಿಸಿರುವನು. ಅವು 1847ರಲ್ಲಿಯೇ ಸಕ್ಕರೆಯನ್ನು ಉತ್ಪಾದಿಸುತ್ತಿದ್ದು ,ಲಂಡನ್ನಿನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದುದು ದಾಖಲೆಗಳಿಂದ ತಿಳಿದು ಬಂದಿದೆ.

* ಮೊಟ್ಟ ಮೊದಲ ಆಧುನಿಕ ಸಕ್ಕರೆ ಕೈಗಾರಿಕೆಯನ್ನು 1933 ಮೈಸೂರು ಸಕ್ಕರೆ ಕಂಪನಿ ಮಂಡ್ಯದಲ್ಲಿ ಪ್ರಾರಂಭವಾಯಿತು.

* ಪ್ರಸ್ತುತ 47 ಸಕ್ಕರೆ ಕೈಗಾರಿಕೆಗಳು ರಾಜ್ಯದಲ್ಲಿವೆ. ಸಕ್ಕರೆ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿ 3 ನೇ ಸ್ಥಾನದಲ್ಲಿದೆ.

* ಕರ್ನಾಟಕದ ಸಕ್ಕರೆ ನಗರ – ಮಂಡ್ಯ

* ಕರ್ನಾಟಕದ ಸಕ್ಕರೆ ಜಿಲ್ಲೆ – ಬೆಳಗಾವಿ

* ಕಬ್ಬಿನ ಸಿಪ್ಪೆ ಮತ್ತು ಕಾಕಂಬಿಗಳು ಈ ಉದ್ಯಮದಿಂದ ದೊರೆಯುವ ಉಪ ಪದಾರ್ಥಗಳು.

* ಕಬ್ಬಿಣ ಸಿಪ್ಪೆಯಿಂದ ಕಾಗದ ತಯಾರಿಕೆ ಹಾಗೂ ಇಂಧನವನ್ನು ಮತ್ತು ಕಾಕಂಬಿಯಿಂದ ಮಧ್ಯಸಾರವನ್ನು ಉತ್ಪಾದಿಸುವವರು.

    -: ಕಾಗದ ಕೈಗಾರಿಕೆ :-

* ಭದ್ರಾವತಿಯಲ್ಲಿ ” ಮೈಸೂರು ಪೇಪರ್ ಮಿಲ್ ಲಿಮಿಟೆಡ್ ” ಕಾರ್ಖಾನೆಯೂ 1936ರಲ್ಲಿ ಪ್ರಾರಂಭಗೊಂಡಿತು.

* ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಖಾಸಗಿ ಕಂಪನಿಯಿಂದ ದಾಂಡೇಲಿಯಲ್ಲಿ ಸ್ಥಾಪನೆಗೊಂಡಿತು.

* ಕರ್ನಾಟಕ ವರ್ಷಕ್ಕೆ 3.6 ಲಕ್ಷ ಟನ್ ಕಾಗದ ವಸ್ತುಗಳನ್ನು ಉತ್ಪಾದಿಸುತ್ತದೆ.

   -: ಸಿಮೆಂಟ್ ಕೈಗಾರಿಕೆ :-

* ರಾಜ್ಯದ ಮೊದಲ ಸಿಮೆಂಟ್ ಕಾರ್ಖಾನೆಯು 1939ರಲ್ಲಿ ಭದ್ರಾವತಿಯಲ್ಲಿ ಸ್ಥಾಪಿಸಲಾಯಿತು.

* ಬಾಗಲಕೋಟೆ,ತುಮಕೂರು ಜಿಲ್ಲೆಯ ಅಮ್ಮಸಂದ್ರ,ಕಲ್ಬುರ್ಗಿ ಜಿಲ್ಲೆಯ ಶಹಬಾದ್ಗಳಲ್ಲಿ ನಂತರದಲ್ಲಿ ಸ್ಥಾಪಿತಗೊಂಡಿವೆ.

* ಕರ್ನಾಟಕದ ಪ್ರಮುಖ ಸಿಮೆಂಟ್ ಕೈಗಾರಿಕೆಗಳು :- ವಾಡಿ, ಲೋಕಾಪುರ,ಇಟ್ಟಿಗೆಹಳ್ಳಿ, ಮಡಿಕೇರಿ,ಕಂಚಿಪುರ,ಕಲದಗಿ, ಕುರಕುಂಟ,ಸೇಡಂ, ಚಿತ್ತಾಪುರ.

* ದೇಶದ ಒಟ್ಟು ಉತ್ಪಾದನೆಯಲ್ಲಿ 8% ಕರ್ನಾಟಕದಲ್ಲಿ ಉತ್ಪಾದಿಸಲಾಗುತ್ತದೆ.

  -: ಮಾಹಿತಿ ತಂತ್ರಜ್ಞಾನ ಉದ್ಯಮಗಳು :-

* ಕರ್ನಾಟಕದ ಬೆಂಗಳೂರನ್ನು ಭಾರತದ ಸಿಲಿಕಾನ್ ಸಿಟಿ ಎಂದು ಕರೆಯುವರು.

* ಬೆಂಗಳೂರಿನಲ್ಲಿ 1500ಕ್ಕೂ ಹೆಚ್ಚು IT BT ಕೈಗಾರಿಕೆಗಳಿವೆ.

* ಬೆಂಗಳೂರಿನ ಇನ್ಫೋಸಿಸ್,ವಿಪ್ರೊ ಮೊದಲಾದ ಪ್ರತಿಷ್ಠಿತ ಕಂಪೆನಿಗಳು.

   -: ಕರ್ನಾಟಕದ ಕೈಗಾರಿಕಾ ವಲಯಗಳು :-

* ಬೆಂಗಳೂರು – ಕೋಲಾರ – ತುಮಕೂರು ಕೈಗಾರಿಕಾ ವಲಯ ( ಇದು ಹೆಚ್ಚು ಕೈಗಾರಿಕೆಗಳನ್ನು ಹೊಂದಿರುವ ಪ್ರದೇಶವಾಗಿದೆ )

* ಬೆಳಗಾವಿ – ಧಾರವಾಡ ವಲಯ

* ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ

* ಬಳ್ಳಾರಿ – ರಾಯಚೂರು – ಕೊಪ್ಪಳ ಜಿಲ್ಲಾ ಕೈಗಾರಿಕಾ ವಲಯ

* ಮೈಸೂರು – ಮಂಡ್ಯ ಕೈಗಾರಿಕಾ ವಲಯ

 -: ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳು :-

* ಕರ್ನಾಟಕ ಪ್ರವಾಸೋದ್ಯಮ ನಿಗಮ ಸ್ಥಾಪನೆ – 1974( KSTDC)

* ಯುನೆಸ್ಕೋ ಪಟ್ಟಿಗೆ ಸೇರಿದ ಕರ್ನಾಟಕದ ಸ್ಥಳಗಳು – ಹಂಪಿ,ಪಟ್ಟದಕಲ್ಲು, ಪಶ್ಚಿಮ ಘಟ್ಟಗಳು

* ಕರ್ನಾಟಕ 1996 – 97 ರಲ್ಲಿ ಉತ್ತಮ ಪ್ರವಾಸೋದ್ಯಮ ನಿರ್ವಹಣಾ ರಾಜ್ಯವೆಂದು ಪ್ರಶಸ್ತಿ ಪಡೆದಿದೆ.

* ಕುದುರೆಮುಖ ಗಿರಿಧಾಮ – ಚಿಕ್ಕಮಂಗಳೂರು

* ನಂದಿ ಬೆಟ್ಟ/ ನಂದಿ ಗಿರಿಧಾಮ – ಚಿಕ್ಕಬಳ್ಳಾಪುರ – ಇಲ್ಲಿ ಗಾಂಧಿ ಭವನ ನಿರ್ಮಿಸಲಾಗಿದೆ ಗಾಂಧೀಜಿಯವರು ಆರೋಗ್ಯ ಸುಧಾರಣೆಗಾಗಿ ನಂದಿ ಬೆಟ್ಟದಲ್ಲಿ ತಂಗಿದ್ದರು.

* ಬಿಳಿಗಿರಿರಂಗನ ಬೆಟ್ಟ – ಚಾಮರಾಜನಗರ

* ಆಗುಂಬೆ – ಶಿವಮೊಗ್ಗ, ಕೆಮ್ಮಣ್ಣು ಗುಂಡಿ – ಚಿಕ್ಕಮಂಗಳೂರು.

* ದೇವರಾಯನದುರ್ಗ – ತುಮಕೂರು,ಜೋಗಿ ಮಟ್ಟಿ – ಕರ್ನಾಟಕದ ಊಟಿ ( ಚಿತ್ರದುರ್ಗ)

* ಕೊಡಚಾದ್ರಿ – ಶಿವಮೊಗ್ಗ, ಹಿಮವದ್ ಗೋಪಾಲಸ್ವಾಮಿ ಬೆಟ್ಟ – ಚಾಮರಾಜನಗರ

* ಮಧುಗಿರಿಯ ಏಕಶಿಲಾ ಬೆಟ್ಟ – ತುಮಕೂರು , ಯಾಣ – ಉತ್ತರ ಕನ್ನಡ, ಮಡಿಕೇರಿ – ಕೊಡಗು

* ಅತಿ ಹೆಚ್ಚು ಜಲಪಾತಗಳನ್ನು ಹೊಂದಿರುವ ಜಿಲ್ಲೆ – ಉತ್ತರ ಕನ್ನಡ

* ಜೋಗ ಜಲಪಾತ – 253 M ಎತ್ತರದಿಂದ ಧುಮುಕುತ್ತದೆ – ಶಿವಮೊಗ್ಗ . ರಾಜ,ರಾಣಿ, ರೋರರ್, ರಾಕೆಟ್ ಎಂದು ಕರೆಯುವ – 04 ಸೀಳುಗಳಾಗಿ ಧುಮುಕುತ್ತದೆ.

* ಗಗನಚುಕ್ಕಿ, ಭರಚುಕ್ಕಿ ಜಲಪಾತ – ಕಾವೇರಿ ನದಿ ( ಮಂಡ್ಯ ಜಿಲ್ಲೆಯ ಶಿವನಸಮುದ್ರ)

* ಅಬ್ಬೆ ( Abbey falls ) – ಮಡಿಕೇರಿ

* ಹೆಬ್ಬೆ ಫಾಲ್ಸ್ ( Hebbe falls ) – ಚಿಕ್ಕಮಂಗಳೂರು

* ಕರ್ನಾಟಕದ ನಯಾಗ – ಗೋಕಾಕ್ ಜಲಪಾತ ( ಘಟಪ್ರಭಾ ನದಿ)

-: ಕರ್ನಾಟಕದ 5 ರಾಷ್ಟ್ರೀಯ ಉದ್ಯಾನವನಗಳು :-

1) ನಾಗರಹೊಳೆಯ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ – ಕೊಡಗು ಮತ್ತು ಮೈಸೂರು

2) ಬಂಡಿಪುರ ರಾಷ್ಟ್ರೀಯ ಉದ್ಯಾನವನ – ಚಾಮರಾಜನಗರ

3) ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ – ಬೆಂಗಳೂರು

4) ಕುದುರೆಮುಖ ರಾಷ್ಟ್ರೀಯ ಉದ್ಯಾನವನ – ಚಿಕ್ಕಮಂಗಳೂರು

5) ಅನ್ಷಿ ರಾಷ್ಟ್ರೀಯ ಉದ್ಯಾನವನ – ಉತ್ತರ ಕನ್ನಡ

 -: ಕರ್ನಾಟಕದ ವನ್ಯಜೀವಿಧಾಮಗಳು :-

* ಮುತ್ತೋಡಿ – ಶಿವಮೊಗ್ಗ ಮತ್ತು ಚಿಕ್ಕಮಂಗಳೂರು

* ದಾಂಡೇಲಿ – ಉತ್ತರ ಕನ್ನಡ

* ಕೊಕ್ಕರೆ ಬೆಳ್ಳೂರು – ಮಂಡ್ಯ

* ಗುಡವಿ – ಶಿವಮೊಗ್ಗ

* ಅರಬಿ ತಿಟ್ಟು -ಮೈಸೂರು

* ಬ್ರಹ್ಮಗಿರಿ – ಕೊಡಗು

* ದರೋಜಿ ಕರಡಿಧಾಮ – ಬಳ್ಳಾರಿ

* ದುಬಾರೆ ಆನೆ ಧಾಮ – ಕೊಡಗು

* ಪುಷ್ಪಗಿರಿ – ಕೊಡಗು

* ಕಾವೇರಿ ವನ್ಯಜೀವಿಧಾಮ – ರಾಮನಗರ ಮಂಡ್ಯ ಚಾಮರಾಜನಗರ

* ಮಂಡಗದ್ದೆ – ಶಿವಮೊಗ್ಗ

* ಭದ್ರಾ – ಚಿಕ್ಕಮಂಗಳೂರು

* ರಂಗನತಿಟ್ಟು – ಮಂಡ್ಯ

* ಭೀಮಗಡ – ಖಾನಾಪುರ – ಬೆಳಗಾವಿ

* ಕಾಳಿ ಟೈಗರ್ ರಿಸರ್ವ್ – ಉತ್ತರ ಕನ್ನಡ

* ತಲಕಾವೇರಿ – ಕೊಡಗು

* ಮೂಕಾಂಬಿಕಾ ವನ್ಯಜೀವಿಧಾಮ – ಕೊಲ್ಲೂರು- ಉಡುಪಿ

* ಜಯಮಂಗಲ ಕೃಷ್ಣಮೃಗಧಾಮ – ತುಮಕೂರು

* ಉದ್ಯಾನ ನಗರಿ – ಬೆಂಗಳೂರು

* ವಾಣಿಜ್ಯ ನಗರಿ – ಬೆಂಗಳೂರು

* ಸಾಂಸ್ಕೃತಿಕ ಮತ್ತು ಅರಮನೆಗಳ ನಗರ – ಮೈಸೂರು

 -: ಕರ್ನಾಟಕದ ಪ್ರಮುಖ ಬೀಚ್ ಗಳು :-

* ಓಂ ಬೀಚ್ – ಗೋಕರ್ಣ ( ಉತ್ತರ ಕನ್ನಡ)

* ಪ್ಯಾರಡೈಸ್ ಬೀಚ್, Half moon ಬೀಚ್, ನಿರ್ವಾಣ ಬೀಚ್, ಕುಡ್ಲೆ ಬೀಚ್ ( ಗೋಕರ್ಣ)

* ಉಲ್ಲಾಳ ಬೀಚ್,ಪಣಂಬೂರು ಬೀಚ್, ಸೋಮೇಶ್ವರ ಬೀಚ್, ಸಸಿ ಹಿತ್ತಲು ಬೀಚ್,ಮುಕ್ಕ ಬೀಚ್,, ತಣ್ಣೀರು ಬಾವಿ ಬೀಚ್ ( ಮಂಗಳೂರು )

* ಬೆಳಕೇರಿ ಬೀಚ್ – ಅಂಕೋಲಾ

* Baadlo beach – ಕುಮಟಾ

* ಸೇಂಟ್ ಮೇರಿಸ್ ಐಸ್ಲ್ಯಾಂಡ್ – ಉಡುಪಿ

* ಮತ್ತು ಬೀಚ್, ಹೊಡೆ ಬೀಚ್,ಮಲ್ಪೆ,ಮರವಂತೆ, Kaiup beach, ಕೊಡಿ ಬೀಚ್ , ಪಡುಬಿದ್ರೆ ( ಉಡುಪಿ )

* ಮುರುಡೇಶ್ವರ ಬೀಚ್,ಕಾಸರಗೋಡು ಬೀಚ್,ಕಾರ್ವಾರ್ ಬೀಚ್,ದೇವ ಭಾಗ ಬೀಚ್ ( ಉತ್ತರ ಕನ್ನಡ )

* Tilmati beach – ಕಾರವಾರ

 -: ದ್ವೀಪಗಳು :-

* ದೇವಗಡ ಕೂರ್ಮಗಡ – ಕಾರವಾರ

* ನೇತ್ರಾಣಿ – ಮುರುಡೇಶ್ವರ

* ಬಸವರಾಜ ದುರ್ಗ ದ್ವೀಪ

* ನಿಸರ್ಗಧಾಮ ದ್ವೀಪ

* ಅಂಗೋದಿವಾ ದ್ವೀಪ.

* ಸೇಂಟ್ ಮೇರಿಸ್ – ಉಡುಪಿ

* ಸದಾಶಿವಗಡ – ಉತ್ತರ ಕನ್ನಡ

* ಅಂಜಾದೀವ್ – ದಕ್ಷಿಣ ಗೋವಾ

* ಮಡ್ಲಿಮಗಡ – ಕಾರವಾರ

* ಸನ್ಯಾಸಿ ದ್ವೀಪ – ಉತ್ತರ ಕನ್ನಡ

  -: ಯಾತ್ರಾ ಸ್ಥಳಗಳು :-

* ಧರ್ಮಸ್ಥಳ – ದಕ್ಷಿಣ ಕನ್ನಡ

* ಶೃಂಗೇರಿ – ಚಿಕ್ಕಮಂಗಳೂರು

* ಹೊರನಾಡು – ಚಿಕ್ಕಮಂಗಳೂರು

* ಆದಿಚುಂಚನಗಿರಿ – ಮಂಡ್ಯ

* ಬಂದೇ ನವಾಜ್ ದರ್ಗಾ – ಗುಲ್ಬರ್ಗ

* ಕೊಲ್ಲೂರು – ಉಡುಪಿ

* ಗೋಕರ್ಣ – ಉತ್ತರ ಕನ್ನಡ

* ಉಳುವಿ – ಉತ್ತರ ಕನ್ನಡ

* ಕಾರ್ಕಳ – ಉಡುಪಿ

* ಶಿರಸಿ – ಉತ್ತರ ಕನ್ನಡ

* ಶ್ರವಣಬೆಳಗೊಳ – ಹಾಸನ

* ಕೂಡಲಸಂಗಮ – ಬಾಗಲಕೋಟೆ

* ಮೇಲುಕೋಟೆ – ಮಂಡ್ಯ

* ದೇವರಗುಡ್ಡ – ಹಾವೇರಿ

* ಕುಕ್ಕೆ – ದಕ್ಷಿಣ ಕನ್ನಡ

* ಮಲ್ಲಿಕ್ ರಹಾನ್ ದರ್ಗಾ – ಶಿರಾ

* ಸೆಂಟ್ ಫಿಲೋಮಿನಾ ಚರ್ಚ್ – ಮೈಸೂರು

* ರೋಜಾರಿಯೋ ಕೆಥೆಡ್ರಲ್ ಚರ್ಚ್ – ಮಂಗಳೂರು

  -: ಕರ್ನಾಟಕದ ಕೋಟೆಗಳು :-

* ರಾಮದುರ್ಗ,ಬೈಲ್ಹೊಂಗಲ,ಹೂಲಿ,ಶಿರಸಂಗಿ ಕೋಟೆ – ಬೆಳಗಾವಿ

* ಸ್ತಂದಗಿರಿ,ಗುಡಿಬಂಡೆ, ನಂದಿ ಹಿಲ್ಸ್- ಚಿಕ್ಕಬಳ್ಳಾಪುರ

* ಹುಲಿಯೂರುದುರ್ಗ,ಮಧುಗಿರಿ, ದೇವರಾಯನದುರ್ಗ – ತುಮಕೂರು

* ಪರಸಗಡ,ಭೀಮಗಡ, ವಲ್ಲಬಗಡ, ಮನ್ನೊಳಿ ಪೋರ್ಟ್ – ಬೆಳಗಾವಿ

* ಉಚ್ಚಂಗಿ,ಚನ್ನಗಿರಿ – ದಾವಣಗೆರೆ

* ಅಲಸಂಗಿ,ನಾಗಬಿನಾಳ, ಹಿರೇಮುರಾಳ, ಹೊನ್ನಳ್ಳಿ – ಬಿಜಾಪುರ

* ಕೆಳದಿ ಕೋಟೆ – ಶಿವಮೊಗ್ಗ

* ಮಧುಗಿರಿ – ತುಮಕೂರು

* ಬಸವರಾಜ ದುರ್ಗ – ದಕ್ಷಿಣ ಕನ್ನಡ

* ಮಂಜುರಾಬಾದ್ – ಸಕಲೇಶಪುರ,ಹಾಸನ

* ಮಿರ್ಜಾನ್ ಫೋರ್ಟ್ – ಕುಮುಟಾ ( ಉತ್ತರ ಕನ್ನಡ)

* ಜಲದುರ್ಗ – ರಾಯಚೂರು

* ಅಸ್ನೋಡು – ಉತ್ತರ ಕನ್ನಡ

* ಕಾಪು – ಉಡುಪಿ

* ಕಮ್ಮಟದುರ್ಗ – ಕೊಪ್ಪಳ

* ಜಮಲಾಬಾದ್ – ದಕ್ಷಿಣ ಕನ್ನಡ

* ನಂದಿ ಬೆಟ್ಟ – ಚಿಕ್ಕಬಳ್ಳಾಪುರ

* ಪಾವಗಡ – ತುಮಕೂರು

* ಕವಲೆದುರ್ಗ – ಶಿವಮೊಗ್ಗ

* ದರಿಯಾ ಬಹದ್ದೂರ್ ಗಡ – ಉಡುಪಿ

WhatsApp Group Join Now
Telegram Group Join Now

2 thoughts on “ಕರ್ನಾಟಕದ ಕೈಗಾರಿಕೆಗಳು( All Competative exam notes)”

Leave a Comment