-: ಕೊಡಗು :-
* ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಜಿಲ್ಲೆಯೇ – ಕೊಡಗು
* ಕೊಡಗಿನ ಜನರು ಹೆಚ್ಚು ಮಾತನಾಡುವ ಭಾಷೆ – ಕೊಡವ ಮತ್ತು ಅರೆಭಾಷೆ.
* 17ನೇ ಶತಮಾನದಲ್ಲಿ ಕೊಡಗನ್ನು ಆಳಿದ ಮನೆತನ – ಹಾಲೇರಿ ಮನೆತನ
* ಹಾಲೇರಿ ಮನೆತನದ ಸ್ಥಾಪಕ – ವೀರರಾಜ ( ಮುಂದೆ ಮುದ್ದುರಾಜ ಎಂಬುವವನು ಮುದ್ದು ರಾಜಕೇರಿಯನ್ನು ಕಟ್ಟಿಸಿ. ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ನು. ಮುದ್ದು ರಾಜಕೇರಯೇ ಮಡಿಕೇರಿಯಾಗಿದೆ)
* ಕೊಡಗನ್ನು 18 ನೇ ಶತಮಾನದಲ್ಲಿ ಉತ್ತರಾರ್ಧದಲ್ಲಿ ಹೈದರ ಅಲಿ – ಟಿಪ್ಪು ಸುಲ್ತಾನ್ ರು ಆಳಿದರು. ಆ ಸಂದರ್ಭದಲ್ಲಿ ಕೊಡಗಿನ ರಾಜನಾಗಿದ್ದ ವೀರರಾಜನು ಟಿಪ್ಪುವಿನಿಂದ ಬಂಧಿಯಾಗಿದ್ದ. ಟಿಪ್ಪುವಿನಿಂದ ಬಂಧಿಯಾಗಿದ್ದ ವೀರರಾಜನು ಬ್ರಿಟಿಷರ ಸಹಾಯದಿಂದ ಕೊಡಗನ್ನು ವಶಪಡಿಸಿಕೊಂಡನು.ಟಿಪ್ಪುವಿನ ಮರಣಾಂಂತರ ಬ್ರಿಟಿಷರು ಮತ್ತು ಕೊಡಗಿನ ಅರಸರು ಸ್ನೇಹದಿಂದ ಇದ್ದರು.)
* ಬ್ರಿಟಿಷರು ಕೊಡಗನ್ನು 1834ರಲ್ಲಿ ವರಪಡಿಸಿಕೊಂಡು ಚಿಕ್ಕವೀರರಾಜೇಂದ್ರನನ್ನು ಗಡಿಪಾರು ಮಾಡಿದರು.
* ಬ್ರಿಟಿಷರು ಕೊಡಗನ್ನು ವಿಭಜಿಸಿ ಕೊಡಗಿನ ಭಾಗವಾಗಿದ್ದ ‘ ಅಮರ ಸುಳ್ಯ’ ಕೆನರಾ ಜಿಲ್ಲೆಗೆ ಸೇರಿಸಿದರು.
* ಅಮರ ಸುಳ್ಯ ಹೋರಾಟ :- ಕೆನರಾ ಜಿಲ್ಲೆಯಲ್ಲಿ ರೈತರ ಮೇಲೆ ಕಂದಾಯ ಹೆಚ್ಚಾಗಿದ್ದರಿಂದ ಅಲ್ಲಿನ ರೈತರು ಬಿಟಿಷರ ವಿರುದ್ಧ ಸಶಸ್ತ್ರ ಹೋರಾಟ ಮಾಡಿದರು ಅವರು ಬ್ರಿಟಿಷರನ್ನು ಕೊಡಗಿನಿಂದ ಓಡಿಸಲು ಸಂಕಲ್ಪ ಮಾಡಿದರು ಈ ಹೋರಾಟವನ್ನು 1837ರ ಅಮರ ಸುಳ್ಯ ಹೋರಾಟ ಎನ್ನುತ್ತಾರೆ ಹೋರಾಟಗಾರರು ಸುಳ್ಯ ಪುತ್ತೂರು ಕಾಸರಗೋಡು ಹಾಗೂ ಮಂಗಳೂರನ್ನು 13 ದಿನಗಳ ಕಾಲ ತಮ್ಮ ವಶಕ್ಕೆ ತೆಗೆದುಕೊಂಡರು.ಆದರೆ ಬ್ರಿಟಿಷರು ಈ ಹೋರಾಟಗಾರರನ್ನು ಬಗ್ಗು ಬಡೆದು ಅನೇಕ ಹೋರಾಟಗಾರರನ್ನು ಗೆಲ್ಲಿ ಶಿಕ್ಷೆಗೆ ಒಳಪಡಿಸಿದ್ದರು.
* ಅಮರ ಸುಳ್ಯ ಹೋರಾಟದ ಪ್ರಮುಖ ನಾಯಕರು.
-> ಪುಟ್ಟಬಸಪ್ಪ
-> ಕಲ್ಯಾಣ ಸ್ವಾಮಿ
-> ಗುಡ್ಡ ಮನೆ ಅಪ್ಪಯ್ಯ ಗೌಡ
* 1956 ರಲ್ಲಿ ಕೊಡಗು ಕರ್ನಾಟಕ ದೊಂದಿಗೆ ವಿಲೀನವಾಯಿತು.
* ಕೊಡಗಿನ ಇಬ್ಬರು ಕಣ್ಮಣಿಗಳು
-> ಕೋಡಂದೆರ ಸುಬ್ಬಯ್ಯ ತಿಮ್ಮಯ್ಯ
-> ಕೋಡಂದೆರ ಮಾದಪ್ಪ ಕಾರ್ಯಪ್ಪ – ಪ್ರಥಮ ಭಾರತೀಯ ಜನರಲ್ ಸ್ವತಃ ಭಾರತದ ಭೂಸೇನೆ ನೌಕಾದಳ ಮತ್ತು ವಾಯುಪಡೆಗಳಿಗೆ ಅಧಿಪತಿಯಾಗಿದ್ದರು. ಕಾರ್ಯಪ್ಪನವರಿಗೆ ಫೀಲ್ಡ್ ಮಾರ್ಷಲ್ ಎಂಬ ಅತ್ಯುನ್ನತ ಪದವಿಯನ್ನು ನೀಡಲಾಯಿತು.
* ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಭಾರತದ ವಿಜಯಕ್ಕೆ ಕಾರಣರಾದ ಕೊಡಗಿನ ಜನರೇ ಕೆ ಎಸ್ ತಿಮ್ಮಯ್ಯ ಪ್ರಮುಖ ವ್ಯಕ್ತಿ.
-: ಕಿತ್ತೂರು :-
* ರಾಣಿ ಚೆನ್ನಮ್ಮನ ಪತಿ – ಮಲ್ಲ ಸರ್ಜಾ
* ರಾಣಿ ಚೆನ್ನಮ್ಮ ಮತ್ತು ಮಲ್ಲಸರ್ಜನ ದತ್ತುಪುತ್ರ – ಶಿವಲಿಂಗ ಸರ್ಜ
* ರಾಣಿ ಚೆನ್ನಮ್ಮ ತನ್ನ ದತ್ತು ಪುತ್ರ ಶಿವಲಿಂಗ ಸರ್ಜನನನ್ನು ದತ್ತು ತೆಗೆದುಕೊಂಡು ರಾಜ್ಯವಾಳಲು ಪ್ರಾರಂಭಿಸಿದಾಗ ದತ್ತು ಪುತ್ರರಿಗೆ ಹಕ್ಕಿಲ್ಲ ಎಂದು ಚೆನ್ನಮ್ಮಳ ಆಡಳಿತವನ್ನು ನಿರಾಕರಿಸಿ ಕಿತ್ತೂರಿನ ಆಡಳಿತವನ್ನು ಬ್ರಿಟಿಷ್ ಸರ್ಕಾರವೇ ವಹಿಸಬೇಕೆಂದು ಶಿಫಾರಸು ಮಾಡಿದ ಆಗಿನ ಧಾರವಾಡ ಕಲೆಕ್ಟರ್ ಯಾರು?
-> ಥ್ಯಾಕರೆ ( ಥ್ಯಾಕರೆ ಐನೂರು ಮಂದಿ ಸೈನಿಕರೊಂದಿಗೆ ಕಿತ್ತೂರಿಗೆ ದಾಳಿ ಇಟ್ಟನು.ಗೋರವಾದ ಯುದ್ಧ ನಡೆಯಿತು ‘ಥ್ಯಾಕರೆ’ ಗುಂಡೇಟಿಗೆ ಅಸುನಿಗಿದನು ಮತ್ತೆ ಬ್ರಿಟಿಷ್ ಸೈನ್ಯ ಕಿತ್ತೂರನ್ನು ಮುತ್ತಿತು.ಚನ್ನಮ್ಮನ ಕಡೆಯವರು ಮೋಸ ಮಾಡಿದರು ಕಿತ್ತೂರಿನ ಸೈನ್ಯ ಸೋತು ಚೆನ್ನಮ್ಮ ಸೆರೆಯಾದಳು ಅವಳನ್ನು ಬ್ರಿಟಿಷರು ‘ ಬೈಲಹೊಂಗಲದಲ್ಲಿ’ ಸೆರೆಯಿಟ್ಟರು.)
* ಬ್ರಿಟಿಷ್ ಸತ್ತೆಯನ್ನು ವಿರೋಧಿಸಿದ ಪ್ರಥಮ ಭಾರತೀಯ ನಾರಿಯನ್ನು ಕೀರ್ತಿ ಚೆನ್ನಮ್ಮನಿಗೆ ಸಲ್ಲುತ್ತದೆ.
* ಸಂಗೊಳ್ಳಿ ರಾಯಣ್ಣನ ತಾಯಿ ಹೆಸರು?
-> ಕೆಂಚವ್ವ ( ರಾಯಣ್ಣನ ಜೊತೆಗೆ ಆತನ ಆರು ಮಂದಿ ಸಂಘಡಿಗಳನ್ನು ಗಲ್ಲಿಗೇರಿಸಲಾಯಿತು. ನಂದಗಡದಲ್ಲಿ ಸಮಾಧಿ ಮಾಡಲಾಯಿತು.)
* ರಾಯಣ್ಣನ ಸಮಾಧಿಯ ಮೇಲೆ ಆಲದ ಮರ ನೆಟ್ಟವರು?
-> ಬಿಚ್ಚುಗತ್ತಿ ಚೆನ್ನಬಸವ ( ರಾಯಣ್ಣನ ಅನುಯಾಯಿಯಾಗಿದ್ದ ಚನ್ನಬಸಪ್ಪ ಎಷ್ಟೋ ವರ್ಷಗಳ ಕಾಲ ಬೈರಾಗಿಯಾಗಿ ಅಲ್ಲಿಯೇ ಇದ್ದನಂತೆ)
* ರಾಣಿ ಚೆನ್ನಮ್ಮನ ಕಾಲ – 1824
* ಸಂಗೊಳ್ಳಿ ರಾಯಣ್ಣನ ಕಾಲ – 1829
-: ತುಳುನಾಡು :-
* ಈಗಿನ ಹೆಚ್ಚು ಕಡಿಮೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನು ‘ ತುಳುನಾಡು’ ಎಂದು ಕರೆಯಲಾಗುತ್ತಿತ್ತು.
* ಪುರಾಣ ಸಾಹಿತ್ಯದಲ್ಲಿ ತುಳುನಾಡು ‘ ಪರಶುರಾಮ ಕ್ಷೇತ್ರ’ ಎನ್ನಿಸಿದೆ.
* ತುಳುನಾಡಿನಲ್ಲಿ ಹೆಚ್ಚು ಮಾತನಾಡುವ ಭಾಷೆಗಳು – ತುಳು ,ಕೊಂಕಣಿ,ಬ್ಯಾರಿ
* ಇತಿಹಾಸದ ಕಾಲದಲ್ಲಿ ತುಳುನಾಡನ್ನು – ಕದಂಬ, ಆಳುಪ,ಹೊಯ್ಸಳ, ವಿಜಯನಗರ ಮುಂತಾದ ಅರಸ ಮನೆತನಗಳು ಆಳ್ವಿಕೆ ಮಾಡಿಕೊಂಡು ಬಂದಿವೆ.
* ತುಳುನಾಡನ್ನು ಸುದೀರ್ಘವಾಗಿ ಆಳಿದವರು – ಆಳುಪ ವಂಶದ ಅರಸರು.
* ತುಳುನಾಡಿನ ರಾಜಧಾನಿಗಳು.
-> ಉದ್ಯಾವರ ( ಉದಯಪುರ)
-> ಮಂಗಳೂರು ( ಮಂಗಳಪುರ)
-> ಬಾರಕೂರು
* ರಾಣಿ ಅಬ್ಬಕ್ಕ ಯಾವ ಮನೆತನದ ರಾಣಿ – ಚೌಟ ಅರಸು ಮನೆತನ
* ತುಳುನಾಡಿನ ಅರಸರಲ್ಲಿ ಬಹುತೇಕ ಅರಸರು – ಜೈನರು
* ದ್ವೈತ ಮತ ಸ್ಥಾಪಕ – ಮಧ್ವಾಚಾರ್ಯರು ತುಳುನಾಡಿನವರು.
* ತುಳುನಾಡಿನ ಪ್ರಾಚೀನ ದೇವಾಲಯ – ಮಂಗಳೂರಿನ ಕದ್ರಿಯಲ್ಲಿರುವ ಮಂಜುನಾಥ ದೇವಸ್ಥಾನ.
* ತುಳು ನಿಘಂಟನ್ನು ರಚಿಸಿದವರು – ಮೆನ್ನರ್ ( ಜರ್ಮನಿ)
* ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಸುಂದರವಾದ ಅವಲೋಕಿತೇಶ್ವರನ ಬೃಹದಾಕಾರದ ಕಂಚು ಶಿಲ್ಪವಿದೆ ಇದು ಒಂದು ಸಹಸ್ರ ವರ್ಷಗಳಷ್ಟು ಹಳೆಯದು.
* ತುಳುನಾಡಿನ ಸ್ವಾತಂತ್ರ ಹೋರಾಟದಲ್ಲಿ ಪ್ರಮುಖರು
-> ಕಾರ್ನಾಡ್ ಸದಾಶಿವ ರಾವ್
-> ಅತ್ತಾವರ ಯಲ್ಲಪ್ಪ
* ದೇಶಭಕ್ತರೆಂದು ಕರೆಸಿಕೊಂಡ ಕಾರ್ನಾಡು ಸದಾಶಿವ ರಾವ್ ಮಾಡಿರುವ ಹರಿಜನ ಸೇವೆ ಮರೆಯಲಾಗದು ದಲಿತ ವರ್ಗದ ಹಲವು ಮಕ್ಕಳಿಗೆ ತಮ್ಮ ಮನೆಯಲ್ಲಿ ಊಟ ಹಾಕುತ್ತಿದ್ದರು.
* ಸುಭಾಷ್ ಚಂದ್ರ ಬೋಸ್ ಅವರು ಸ್ಥಾಪಿಸಿದ ” ಆಜಾದ್ ಹಿಂದ್ ಸರ್ಕಾರದ” ಮಂತ್ರಿಮಂಡಲದಲ್ಲಿ ಮಂತ್ರಿಗಳಾಗಿದ್ದ ತುಳುನಾಡಿನ ಸ್ವಾತಂತ್ರ್ಯ ಹೋರಾಟಗಾರ ಯಾರು?
-> ಅತ್ತಾವರ ಯಲ್ಲಪ್ಪ – ನೇತಾಜಿ ಅವರ ಆಜಾದ್ ಹಿಂದ್ ಫೌಜಿನಲ್ಲಿ 15 ವರ್ಷಗಳ ಕಾಲ ಸೇನಾಧಿಕಾರಿಯಾಗಿದ್ದರು.
* ಅಸ್ಪೃಶ್ಯತೆಯ ವಿರುದ್ಧ ಚಳವಳಿ ದಲಿತ ಹೆಣ್ಣು ಮಕ್ಕಳಿಗಾಗಿ ಶಿಕ್ಷಣ ಮುಂತಾದ ದಲಿತೋದ್ಧಾರ ಕಾರ್ಯಗಳನ್ನು ಮಾಡಿದವರು – ಕುದ್ಮುಲ್ ರಂಗರಾವ್ ಮುಂಚೂಣಿಯಲ್ಲಿದ್ದರೂ.
* ಗರೋಡಿ ಪದದ ಅರ್ಥ – ಆರಾಧನಾ ಕೇಂದ್ರ
-: ಹೈದರಾಬಾದ್ ಕರ್ನಾಟಕ / ಕಲ್ಯಾಣ ಕರ್ನಾಟಕ :-
* ಹಲಗಲಿ ಬೇಡರ ದಂಗೆ :- 1857ರಲ್ಲಿ ಬ್ರಿಟಿಷರು ಜಾರಿಗೆ ತಂದ ಸಶಸ್ತ್ರ ಕಾಯ್ದೆಯಂತೆ ಭಾರತೀಯರು ಸರ್ಕಾರದ ಅಪ್ಪಣೆ ಪಡೆದುಕೊಂಡು ಆಯುಧಗಳನ್ನು ಇರಿಸಿಕೊಳ್ಳಬೇಕಾಗಿತ್ತು. ಇದರಿಂದ ಬೇಡರಿಗೂ ಮತ್ತು ಬ್ರಿಟಿಷರಿಗೂ ಘರ್ಷಣೆ ನಡೆದು ದಾಳಿಯಲ್ಲಿ ಅನೇಕ ಬೇಡ ವೀರರು ಮರಣ ಹೊಂದಿದರು.
* ಹಲಗಲಿ ದಂಗೆಯ ಪ್ರಮುಖ ನಾಯಕರು – ಜಡಗ, ಬಾಲ,ರಾಮಿ – ಈ ದಂಗೆಯಲ್ಲಿ 290 ಜನರನ್ನು ಸೆರೆ ಹಿಡಿಯಲಾಯಿತು 19 ಮಂದಿಯನ್ನು ಗಲ್ಲಿಗೇರಿಸಲಾಯಿತು.
* ರಾಮಿ :- ಹಲಗಲಿ ದಂಗೆಯಲ್ಲಿ ಮೂರು ಜನ ಬ್ರಿಟಿಷ್ ಸೈನಿಕರನ್ನು ಗುಂಡಿಕ್ಕಿ ಕೊಂದ ರಾಮಿ ವೀರ ಮರಣ ಹೊಂದುತ್ತಾಳೆ.
* ಸಿಂಧೂರ ಲಕ್ಷ್ಮಣ :- ಸಾಂಗ್ಲಿ ಜಿಲ್ಲೆ ಜತ್ ತಾಲೂಕಿನ ಸಿಂದೂರು ಗ್ರಾಮದಲ್ಲಿನ ಬೇಡರ ಸಾಬು ಮತ್ತು ನರಸವ್ವ ಎಂಬ ದಂಪತಿಗಳಿಗೆ ಜನಿಸಿದ ಮಗನೇ – ಲಕ್ಷ್ಮಣ
* ಸಿಂಧೂರು ಗ್ರಾಮವು ಇನಾಮದಾರ್ (ಗೌಡ) ಆಳ್ವಿಕೆಯಿಂದ ತತ್ತರಿಸಿತ್ತು ಲಕ್ಷ್ಮಣನು ಅವರ ವಿರುದ್ಧ ಬಂಡೆದ್ದನು.ಕ್ರಮೇಣ ಬ್ರಿಟಿಷರಿಗೂ ವಿರೋಧಿಯಾದನು.
* ಲಕ್ಷ್ಮಣನು ಬ್ರಿಟಿಷರ ಖಜಾನೆಗಳನ್ನು ಮತ್ತು ಶ್ರೀಮಂತರನ್ನು ದೋಚಿ ಹಣವನ್ನು ಬಡವರಿಗೆ ಹಂಚುತ್ತಿದ್ದನು ಸಮಾಜಮುಖಿಯಾಗಿ ಶೋಷಿತರ ಸೇವೆ ಮಾಡುತ್ತಿದ್ದ ಊರ ಚಾವಡಿಯ ಮುಂದೆ ಲಕ್ಷ್ಮಣನನ್ನು ಕರೆಸಿ ಕಳ್ಳತನದ ಬಗ್ಗೆ ವಿಚಾರಣೆ ನಡೆಸಿದಾಗ ಅವನಿಗೆ ಅವಮಾನ ಆಯಿತು ಅಲ್ಲಿಂದ ಆತ ಪರಾರಿಯಾದನು ಪೊಲೀಸ್ ಅಧಿಕಾರಿ ಒಬ್ಬನನ್ನು ಕೊಂದಿದ್ದರಿಂದ ಅವನನ್ನು ಹಿಡಿಯಲು ಬ್ರಿಟಿಷರು ಶತಪ್ರಯತ್ನ ಮಾಡಿದರು ಮುಂದೆ ಅವನು ಬ್ರಿಟಿಷರ ಗುಂಡೇಟಿಗೆ ಬಲಿಯಾದನು.
* ಸಿಂದೂರು ಲಕ್ಷ್ಮಣನ ಸಮಾಧಿ ಇರುವುದು – ಬೀಳಗಿ
* ಸುರಪುರದ ವೆಂಕಟಪ್ಪ ನಾಯಕನನ್ನು ಬ್ರಿಟಿಷರು ವಶಕೊಳ್ಳಪಡಿಸಿದ ಹೈದರಾಬಾದ್ ನಿಜಾಮನ ಪ್ರಧಾನ ಮಂತ್ರಿ ಯಾರು?
-> ಸಾಲಾರ್ ಜಂಗ್
* ಹೈದರಾಬಾದ್ ಕರ್ನಾಟಕದಲ್ಲಿ ನಿಜಾಮನು ಕಾಲಗಪ್ತಿ ಎಂಬ 53 ಕರಾಳ ನಿಯಮಗಳನ್ನು ಜಾರಿಗೆ ತಂದು ಜನರ ಮೂಲಭೂತ ಸ್ವತಂತ್ರವನ್ನು ಹತ್ತಿಕ್ಕಿದನು.
* ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದಲ್ಲ ಇತ್ತೇದಾರ್ -ಉಲ್ – ಮುಸಲ್ ಮೀನ ಎಂಬ ಸಂಘವನ್ನು ಕಟ್ಟಿದವರು?
-> ಕಾಸಿಂರಜವಿ