-:ಕ್ರೈಸ್ತ ಧರ್ಮ :-
* ಕ್ರೈಸ್ತ ಧರ್ಮವು 2000 ವರ್ಷಗಳ ಹಿಂದಿನದು – ಯೇಸುಕ್ರಿಸ್ತ ( ಸ್ಥಾಪಕ)
* ಕ್ರೈಸ್ತರ ಪವಿತ್ರ ಗ್ರಂಥ – ಬೈಬಲ್
* ಜೀಸಸ್ ಎಂದರೆ – ಯೇಸು
* ಕ್ರೈಸ್ತ ಪದದ ಅರ್ಥ – ರಕ್ಷಕ
* ಯೇಸು “ಬೆಲ್ಲೆಹೆಂ ” ಎಂಬಲ್ಲಿ ಮೇರಿ ಎಂಬಾಕೆಯ ಮಗನಾಗಿ ಜನಿಸಿದನು.
* ಯೇಸುವಿಗೆ 30 ವರ್ಷವಾದಾಗ ಮನೆಯಿಂದ ಹೊರಟು ಬಡವರು ಮತ್ತು ದೀನರ ಸೇವೆ ಮಾಡತೊಡಗಿದನು. ಕರುಣೆಯ ಧರ್ಮದ ಮೂಲವೆಂದು ಕಥೆಗಳ ಮೂಲಕ ಉದಾಹರಣೆ ನೀಡಿ ಉಪದೇಶವನ್ನು ಮಾಡುತ್ತಿದ್ದರು.
* ಯೇಸುವಿನ ಅನುಯಾಯಿಗಳು ಹೆಚ್ಚಾದಂತೆ ಅವನ ವಿರೋಧಿಗಳ ಸಂಖ್ಯೆ ಹೆಚ್ಚಿತು ಧಾರ್ಮಿಕ ಮುಂದಾಳುಗಳು ಯೇಸುವನ್ನು ವಿರೋಧಿಸಿದರು ಏಸು ರಾಜದ್ರೋಹಿ ಎಂದು ತಪ್ಪು ಹೊರಿಸಿ ಅವನನ್ನು ಶಿಲುಬೆಗೆ ಏರಿಸಿದರು.
-: ಯೇಸುವಿನ ಬೋಧನೆಗಳು:-
* ನಾವೆಲ್ಲ ದೇವರ ಮಕ್ಕಳು :ನಾವೆಲ್ಲಾ ಸಹೋದರರು ಎಂದು ಯೇಸು ಸಾರು ಹೇಳಿದನು.
* ಪಾಪುಗಳನ್ನು ಮಾಡದೆ ಶುದ್ಧ ಜೀವನವನ್ನು ನಡೆಸಬೇಕೆಂದು ಬೋಧಿಸಿದನು.
* ನಿಮ್ಮ ನೆರೆಯವರನ್ನು ನಿಮ್ಮಂತೆ ಪ್ರೀತಿಸಿ.
* ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯನ್ನು ತೋರಿಸಿ.
* ಮಾನವನ ಸೇವೆಯೇ ದೇವರ ಸೇವೆ.
-: ಇಸ್ಲಾಂ ಧರ್ಮ:-
* ಇಸ್ಲಾಂ ಧರ್ಮದ ಸ್ಥಾಪಕ – ಪೈಗಂಬರ.
* ಅರಬ್ ದೇಶದ ಮೆಕ್ಕಾನಗರದಲ್ಲಿ ಜನಿಸಿದನು.
* ಮಹಮದ್ ಪೈಗಂಬರ
-> ತಂದೆ -ಅಬ್ದುಲಾ
-> ತಾಯಿ – ಅಮೀನಾ
-> ಹೆಂಡತಿ – ಖದೀಜಾ
-> ಚಿಕ್ಕಪ್ಪ – ಅಬು ತಾಲಿವ್
* ಇಸ್ಲಾಂ ಪದದ ಅರ್ಥ – ಶರಣಾಗತಿ
* ಮುಸ್ಲಿಂ ಎಂದರೆ – ‘ ದೇವರಿಗೆ ಶರಣಾದವರು’
-:ಇಸ್ಲಾಂ ಧರ್ಮದ ಬೋಧನೆಗಳು :-
* ಅಲ್ಲಾನೂ ಹೊರತು ಬೇರೆ ದೇವರಿಲ್ಲ.
* ಮೊಹಮ್ಮದ್ ಅವರು ದೇವರ ಪ್ರವಾದಿ.
* ದೇವರನ್ನು ಯಾವ ಮೂರ್ತಿಯ ರೂಪದಲ್ಲೂ ಪೂಜಿಸಬಾರದು.
* ಪ್ರತಿಯೊಬ್ಬ ಮುಸಲ್ಮಾನನು ದೇವರ ಸೇವಕನಾಗಬೇಕು ಪ್ರಾಮಾಣಿಕನಾಗಿರಬೇಕು ಎಲ್ಲಾ ಮಾನವರು ಸಮಾನರು.
*ಪ್ರತಿಯೊಬ್ಬ ಮುಸಲ್ಮಾನರು ದಿನಕ್ಕೆ ಐದು ಬಾರಿ ಕಾಬಾದ ದಿಕ್ಕಿಗೆ ಮುಖ ಮಾಡಿ ‘ಪ್ರಾರ್ಥನೆ'(ನಮಾಜ್) ಮಾಡಬೇಕು.
* ಜಕಾತ್ – ರಂಜಾನ್ ತಿಂಗಳಲ್ಲಿ ಹಗಲು ಉಪವಾಸ ಮಾಡಬೇಕು ಶ್ರೀಮಂತರು ಬಡವರಿಗೆ ಕಡ್ಡಾಯವಾಗಿ ದಾನ ನೀಡುವುದು.
* ” ಹಜ್” – ಜೀವನದಲ್ಲಿ ಒಂದು ಸಲವಾದರೂ ಸಾಧ್ಯವಾದರೆ ಮೆಕ್ಕ ಯಾತ್ರೆ ಮಾಡಬೇಕು.
-: ಹೊಸ ಧರ್ಮಗಳ ಉದಯ :-
* 2600 ನೂರು ವರ್ಷಗಳ ಹಿಂದೆ ಗಂಗಾ ನದಿ ಬಯಲಿನಲ್ಲಿ 62 ಹೊಸ ಧರ್ಮಗಳು ಉದಯಿಸಿದವು.
* ಇವುಗಳಲ್ಲಿ ಜೈನ ಧರ್ಮ,ಬೌದ್ಧ ಧರ್ಮ ಮುಖ್ಯವಾಗಿವೆ.
-: ಬೌದ್ಧ ಧರ್ಮ :-
* ಸುಮಾರು 2500 ವರ್ಷಗಳಷ್ಟು ಹಿಂದೆ ಸ್ಥಾಪನೆಯಾಯಿತು.
* ಬುದ್ಧನು ನೇಪಾಳದ ಕಪಿಲವಸ್ತು ಸಮೀಪದ “ಲುಂಬಿನಿ” ಯಲ್ಲಿ ಜನಿಸಿದನು.
* ಬಾಲ್ಯದ ಹೆಸರು – ಸಿದ್ದಾರ್ಥ್
* ತಂದೆ – ಶುದ್ಧೋದನ ( ಶಾಖ್ಯಗಣರಾಜ್ಯದ ಮುಖ್ಯಸ್ಥ)
* ತಾಯಿ – ಮಾಯದೇವಿ
* ಹೆಂಡತಿ – ಯಶೋಧರಾ
* ಮಗ – ರಾಹುಲ
* ಪ್ರೀತಿಯ ಶಿಷ್ಯ – ಆನಂದ
* ಕುದುರೆ – ಕಂಥಕ
* ಸೇವಕ – ಚನ್ನ
* ಗೌತಮ ಬುದ್ಧನ ಬಗ್ಗೆ ಬಾಲ್ಯದಲ್ಲಿಯೇ ” ಇವನು/ ಈ ಮಗು ಲೋಕವನ್ನು ಆಳುವ ರಾಜನಾಗುತ್ತಾನೆ ಇಲ್ಲವೇ ಲೋಕದ ಅಳಲನ್ನು ನಿವಾರಿಸುವ ಸನ್ಯಾಸಿಯಾಗುತ್ತಾನೆ.” ಎಂದು ಭವಿಷ್ಯ ನುಡಿದ ಮಹರ್ಷಿ ಯಾರು ?
-> ಅಸಿತ ಮಹರ್ಷಿ
( ಸನ್ಯಾಸಿಯ ಮಾತುಗಳನ್ನು ಆಲಿಸಿದ ಶುದ್ಧೋದನ ತನ್ನ ಮಗನನ್ನು ರಾಜನನ್ನಾಗಿಸಬೇಕೆಂದು ಬಯಸಿ ಸಿದ್ಧಾರ್ಥನಿಗೆ ದುಃಖ ವೈರಾಗ್ಯಗಳ ಸಂಬಂಧಗಳೇ ಬಾರದಂತೆ ಸುಖ ಸಂತೋಷದ ವಾತಾವರಣದಲ್ಲಿ ಬೆಳೆಸಿದನು. ಆದರೂ ಸಿದ್ದಾರ್ಥನ ಮನಸು ಅಶಾಂತವಾಗಿಯೇ ಇತ್ತು)
* ಒಮ್ಮೆ ನಗರ ಪ್ರದಕ್ಷಿಣೆಯ ಸಂದರ್ಭದಲ್ಲಿ ಅವನ ಕಣ್ಣಿಗೆ ಆಕಸ್ಮಿಕವಾಗಿ ಓರ್ವ ವೃದ್ಧ ,ರೋಗಿ , ಸನ್ಯಾಸಿ ಹಾಗೂ ಶವಯಾತ್ರೆಯ ದೃಶ್ಯಗಳು ಬಿದ್ದವು ಈ ನಾಲ್ಕು ಸನ್ನಿವೇಶಗಳು ಅವನಲ್ಲಿ ವೈರಾಗ್ಯ ಮೂಡಿಸಿ ದುಃಖದ ಮೂಲವನ್ನು ಕಂಡುಹಿಡಿಯಲು ಪ್ರೇರೇಪಿಸಿದವು.
* ಒಂದು ದಿನ ರಾತ್ರಿ ಸಿದ್ಧಾರ್ಥನು ಯಾರಿಗೂ ತಿಳಿಸದೆ ಪರಿವಾರ ಮತ್ತು ಅರಮನೆಯನ್ನು ತೊರೆದು ಕುದುರೆಯನ್ನೇರಿ ಹೊರಟನು.ದುಃಖ ನಿರ್ವಹಣೆಗಾಗಿ ಹಲವಾರು ಗುರುಗಳನ್ನು ಕಂಡು ಮಾರ್ಗದರ್ಶನ ಪಡೆದ ಆದರು ಅವನಿಗೆ ದುಃಖದ ಮೂಲ ಕುರಿತು ಉತ್ತರ ಸಿಗಲಿಲ್ಲ.
* ಕೊನೆಗೆ ಬಿಹಾರದ ” ಗಯಾ” ಎಂಬಲ್ಲಿ ಅರಳಿ ಮರದ ಕೆಳಗೆ ಕುಳಿತು ಅನೇಕ ದಿನಗಳ ಕಾಲ ಧ್ಯಾನಸ್ತಾನದನು ಕೊನೆಗೆ ಅಲ್ಲಿ ಜ್ಞಾನೋದಯ ಪಡೆದು ಸಿದ್ಧಾರ್ಥನು ಬುದ್ಧನಾದನು. ಬುದ್ಧನೆಂದರೆ ” ಜ್ಞಾನಿ” / ತಿಳಿದವನು ಎಂದರ್ಥ.
* ಬುದ್ಧನು ತನ್ನ ಮೊದಲ ಪ್ರವಚನ ನೀಡಿದ್ದು ಎಲ್ಲಿ?
-> ಸಾರಾನಾಥದ ಜಿಂಕೆವನದಲ್ಲಿ ವಾರಣಾಸಿ ಬಳಿ
* ಬುದ್ಧನು ಉತ್ತರ ಪ್ರದೇಶದ ವಾರಣಾಸಿಯ ಬಳಿ ಸಾರನಾಥದಲ್ಲಿ (ಜಿಂಕೆ ವನ) ತನ್ನ ಮೊದಲ ಉಪದೇಶವನ್ನು ಐದು ಶಿಷ್ಯರಿಗೆ ನೀಡಿದನು. ಈ ಘಟನೆಯನ್ನು ” ಧರ್ಮ ಚಕ್ರ ಪ್ರವರ್ತನ” ಎಂದು ಕರೆಯುತ್ತಾರೆ.
* ಮುಂದೆ ಬುದ್ಧನು ಬಿಹಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 40 ವರ್ಷಗಳು ಸಂಚರಿಸಿ ಉಪದೇಶ ನೀಡಿದನು ಬುದ್ಧನ ಕೀರ್ತಿ ಕ್ರಮೇಣ ಅಲೆಗಳ ಪ್ರಸರಿಸಿತು.
* ಬುದ್ಧನು ಬಿಹಾರದ ” ಕುಶಿನಗರದಲ್ಲಿ” ಮರಣ ಹೊಂದಿದನು.
-: ಬುದ್ಧನ ಉಪದೇಶಗಳು:-
* ಶುದ್ಧ ಜೀವನ ಮತ್ತು ಚಿಂತನೆಗಳ ಮೂಲಕ ಜ್ಞಾನವನ್ನು ಗಳಿಸುವುದೇ ಬುದ್ಧನ ಉಪದೇಶಗಳ ಗುರಿಯಾಗಿತ್ತು. ( ಬುದ್ಧನು ಇದನ್ನು ದಮ್ಮು ಎಂದು ಕರೆದನು.)
* ಜಗತ್ತು ಅಪಾರ ದುಃಖದಿಂದ ಕೂಡಿದೆ ಆಸೆಯೇ ದುಃಖದ ಮೂಲ ಆಸೆಯನ್ನು ಜಯಿಸಿದವರು ನಿರ್ವಾಣ ಹೊಂದುವುದು.
* ದುಃಖದ ನಿವಾರಣೆಗಾಗಿ ಒಳ್ಳೆಯ,ಒಳ್ಳೆಯ ಸಂಕಲ್ಪ, ಒಳ್ಳೆಯ ಮಾತು ಮತ್ತು ಒಳ್ಳೆಯ ಕಾರ್ಯ ಮೊದಲಾದ ಎಂಟು ಮಾರ್ಗಗಳನ್ನು ಸೂಚಿಸಿದನು ಇವನ್ನು “ಅಷ್ಟಾಂಗ ಮಾರ್ಗ” ಎಂದು ಕರೆಯುವರು.
-:ಬುದ್ಧನ ಜೀವನದ ನಾಲ್ಕು ಘಟ್ಟಗಳು:-
1) ಮಹಾಪರಿತ್ಯಾಗ
2) ಜ್ಞಾನೋದಯ
3) ಧರ್ಮ ಚಕ್ರ ಪರಿವರ್ತನಾ
4) ಮಹಾಪರಿ ನಿರ್ವಾಣ
* ಬುದ್ಧನ ಮೂಲ ಬೋಧನೆಗಳು ಎಂದರೆ ನಾಲ್ಕು ಆರ್ಯ ಸತ್ಯಗಳು,ಅಷ್ಟಾಂಗ ಮಾರ್ಗ
-: ನಾಲ್ಕು ಆರ್ಯ ಸತ್ಯಗಳು:-
* ಜಗತ್ತು ದುಃಖಮಯವಾಗಿದೆ.
* ಆಸೆಯೇ ದುಃಖದ ಮೂಲ.
* ಆಸೆಯನ್ನು ಬಿಟ್ಟು ದುಃಖವನ್ನು ಕೊನೆಗೊಳಿಸುವ ದಾರಿಯೇ ಅಷ್ಟಾಂಗ ಮಾರ್ಗ.
* ಆಸೆಯನ್ನು ಗೆದ್ದು ದುಃಖವನ್ನು ದಾಟಬಹುದು.
-: ಬೌದ್ಧ ಧರ್ಮದ ತ್ರಿಪೀಟಕಗಳು:-
* ವಿನಯ ಪಿಟಕ
* ಸುತ್ತ ಪಿಟಕ
* ಅಭಿದಮ್ಮ ಪಿಟಕ
(ಸಿದ್ದಾರ್ಥನ ಅರಮನೆಯನ್ನು ತೊರೆಯಲು ನದಿ ವಿವಾದ ಕಾರಣವೆಂಬ ಇನ್ನೊಂದು ಮಾಹಿತಿ ಇದೆ. ಎರಡು ರಾಜ್ಯಗಳ ನಡುವೆ ನೀರಿನ ಹಂಚಿಕೆಯ ಬಗ್ಗೆ ವಿವಾದ ಉಂಟಾಗಿ ಸಿದ್ದಾರ್ಥನ ಕಡೆಯವರು ಇದಕ್ಕೆ ಸಿದ್ಧವಾಗುವುದು ಆತನಿಗೆ ಇಷ್ಟವಾಗದೆ ವಿರೋಧಿಸಿ ಆನಂತರ ಅರಮನೆಯನ್ನು ತ್ಯಜಿಸಿದನೆಂದು ಹೇಳಲಾಗುತ್ತದೆ) – ಇದು ಡಾ. ಬಿ.ಆರ್ ಅಂಬೇಡ್ಕರ್ ಪುಸ್ತಕದ ಮಾಹಿತಿ.
* ಕಿಸಾಗೋತಮಿ:-
-> ಬುದ್ಧ ಗುರುವಿಗೆ ಸಂಬಂಧಿಸಿದಂತೆ ಈ ಕಥೆಯು ಪ್ರಚಲಿತವಾಗಿದೆ ಕಿಸಾಗೋತಮಿ ತನ್ನ ಪ್ರೀತಿಯ ಪುಟ್ಟ ಮಗುವನ್ನು ಕಳೆದುಕೊಂಡಿದ್ದಳು ಅವಳಷ್ಟು ದುಕ್ಕಿತಳಾಗಿದ್ದಾಳೆಂದರೆ ಮಗುವಿನ ಮೃತದೇಹವನ್ನು ಹೊತ್ತುಕೊಂಡು ಬೀದಿಬೀದಿಗಳಲ್ಲಿ ಅಲೆದಾಡಿ ತನ್ನ ಮಗುವಿಗೆ ಮರುಜನ್ಮ ನೀಡಿರೆಂದು ರೋಧಿಸುತ್ತಿದ್ದಳು.ಇದನ್ನು ಕಂಡು ಮನಸು ಕರಗಿ ಓರ್ವನು ಅವಳನ್ನು ಬುದ್ಧ ನೆಡೆಗೆ ಒಯ್ಯುತ್ತಾನೆ ಆದರೆ ‘ ಸಾವು ಕಾಣದ ಮನೆಯ ಸಾಸಿವೆ ಬೇಕೆನಗೆ’ ಎಂದನು.
ಬುದ್ಧನ ವಚನವನ್ನು ಕೇಳಿ ಸಂತಸದಿಂದ ಹಿರಿ ಹಿಗ್ಗಿದ ಕಿಸಾಗೋತಮಿ ಸಾವು ಕಾಣದ ಮನೆಯನ್ನು ಹುಡುಕುತ್ತಾ ಊರೆಲ್ಲಾ ಸುತ್ತಾಡಿದಳು.ಎಲ್ಲಾ ಮನೆಗಳಲ್ಲಿ ಒಬ್ಬರಲ್ಲದಿದ್ದರೆ ಇನ್ನೊಬ್ಬರು ತಂದೆ ತಾಯಿ ತಂಗಿ ತಮ್ಮ ಪತಿ ಪತ್ನಿ ಮಕ್ಕಳು ಮಾವ ಅತ್ತೆ ಅಜ್ಜ ಅಜ್ಜಿ ಮರಣವನ್ನು ಹೊಂದಿದ್ದರು.
* ಬುದ್ಧನ ಉಪದೇಶಗಳು ಇರುವ ಪ್ರಾಚೀನ ಗ್ರಂಥವೆಂದರೆ – ಸುತ್ತ ಪಿಟಕ ( ಪಾಲಿ ಭಾಷೆಯಲ್ಲಿದೆ)
-: ಜೈನ ಧರ್ಮ:-
* ಮಹಾವೀರನ ತಂದೆ – ಸಿದ್ಧಾರ್ಥನು ಕುಲವೊಂದರ ಮುಖ್ಯಸ್ಥ.
* ತಾಯಿ – ತ್ರಿಶಲಾದೇವಿ
* ಹೆಂಡತಿ – ಯಶೋಧ
* ಮಹಾವೀರನು 12 ವರ್ಷಗಳ ತಪಸ್ಸನ್ನು ಮಾಡಿ ಕೊನೆಗೆ ದಿವ್ಯ ಜ್ಞಾನವನ್ನು ಪಡೆದು ‘ ಜಿನ, ಎನ್ನಿಸಿದ.
* ಜಿನಾ ಎಂದರೆ:- ಮೋಹವನ್ನು ಗೆದ್ದವನು.
* ಮಹಾವೀರನ ಅನುಯಾಯಿಗಳೇ – ಜೈನರು
* ಮಹಾವೀರನ ಮರಣ – ಬಿಹಾರದ ಪಾವಪುರಿ
* ಜೈನ ಧರ್ಮದ ಎರಡು ಪಂಗಡಗಳು
-> ಶ್ವೇತಾಂಬರ
-> ದಿಗಂಬರ
* ಬಿಳಿಯ ವಸ್ತ್ರ ತೊಡುವ ಪಾರ್ಶ್ವನಾಥನ ಅನುಯಾಯಿಗಳೆ – ಶ್ವೇತಾಂಬರರು.
* ಬಟ್ಟೆಯನ್ನೇ ಧರಿಸದ ಮಹಾವೀರ್ ನ ಅನುಯಾಯಿಗಳೇ – ದಿಗಂಬರರು
* ಕರ್ನಾಟಕದ ಶ್ರವಣಬೆಳಗೊಳ ಜೈನರ ಪ್ರಸಿದ್ಧ ಧಾರ್ಮಿಕ ಕೇಂದ್ರ.
* ಜೈನ ಧರ್ಮದಲ್ಲಿರುವ 5 ನೈತಿಕ ತತ್ವಗಳು
1) ಸತ್ಯ
2) ಅಹಿಂಸೆ
3) ಆಸ್ತೆಯ (ಕದಿಯದಿರುವುದು)
4) ಅಪರಿಗ್ರಹ ( ಅವಶ್ಯಕತೆಗಳಿಗಿಂತಲೂ ಹೆಚ್ಚು ಪದಾರ್ಥಗಳನ್ನು ಸಂಗ್ರಹಿಸದೇ ಇರುವುದು.
5) ಬ್ರಹ್ಮಚರ್ಯ ( ಇಂದ್ರಿಯಗಳನ್ನು ತನ್ನ ವಶದಲ್ಲಿಟ್ಟುಕೊಳ್ಳುವುದು.)
* 2500 ವರ್ಷಗಳಷ್ಟು ಹಿಂದಕ್ಕೆ ಹೋಗೋಣ ಅದು ಬುದ್ಧನಕಾಲ ಆ ಕಾಲದಲ್ಲಿ ಸಿಂಧು ಗಂಗಾ ನದಿ ಬಯಲಿನಲ್ಲಿ 16 ಚಿಕ್ಕಪುಟ್ಟ ರಾಜ್ಯಗಳಿದ್ದವು. ಬೌದ್ಧರ ಸಾಹಿತ್ಯದಲ್ಲಿ ಇವುಗಳನ್ನು ” ಮಹಾ ಜನಪದಗಳು” ಎಂದು ಕರೆಯಲಾಗುತ್ತದೆ ಅವುಗಳಲ್ಲಿ ಮಗದ,ಕೋಸಲ ಮತ್ತು ವತ್ಸ ಎಂಬ ಮಹಾ ಜನಪದ ಪ್ರಮುಖ ವಾಗಿದ್ದವು ಅಲ್ಲಿ ರಾಜರ ಆಳ್ವಿಕೆ ಇತ್ತು.
* ಗಣರಾಜ್ಯಗಳು:- ಇದೇ ಕಾಲದಲ್ಲಿ ಹಲವಾರು ಜನ ಪ್ರತಿನಿಧಿಗಳ ಆಳ್ವಿಕೆ ರಾಜ್ಯದಲ್ಲಿತ್ತು ಅವುಗಳನ್ನು ‘ ಗಣರಾಜ್ಯಗಳು’ ಎಂದು ಕರೆಯುತ್ತಿದ್ದರು.
* ಗಣರಾಜ್ಯಗಳಲ್ಲಿ ಪ್ರಮುಖವಾದವು -‘ ವಜ್ಜಿ( ವೃಜಿ) ಗಣರಾಜ್ಯ’ ಅದು ಹಲವಾರು ಗಣರಾಜ್ಯಗಳ ಒಳಗೊಂಡಿದ್ದು ಒಕ್ಕೂಟವಾಗಿತ್ತು ಬಿಹಾರದ ” ವೈಶಾಲಿ” ಪಟ್ಟಣವಾದ ರಾಜಧಾನಿ.
* ವೈರಾಗ್ಯ :- ಪ್ರಪಂಚದ ಎಲ್ಲಾ ಬಗೆಯ ಆಸೆಗಳನ್ನು ತ್ಯಜಿಸುವಿಕೆ.
* ದಿಗಂಬರ :- ದಿಕ್ಕುಗಳನ್ನೇ ಬಟ್ಟೆಯಾಗಿ ಹೊಂದಿರುವವ
* ನಿರ್ವಾಣ :- ಹುಟ್ಟು ಮತ್ತು ಸಾವುಗಳ ಚಕ್ರದಿಂದ ಪಾರಾಗುವುದು.