-: ಕರ್ನಾಟಕದ ಹೆಸರಿನ ಹಿನ್ನೆಲೆ :-
* ಇದನ್ನು ಕರುನಾಡು ( ಕರ್ +ನಾಡು) ಅಂದರೆ ಕಪ್ಪುಮಣ್ಣಿನ ನಾಡು ಎಂದು ಕರೆಯುತ್ತಿದ್ದರು.
* ತಮಿಳಿನ ” ಶಿಲಪ್ಪಾದಿಕಾರಂ” ಎಂಬ ಪ್ರಾಚೀನ ಕೃತಿಯಲ್ಲಿ ‘ಕರುನಾಟ್’ ಎಂಬ ಶಬ್ದದಿಂದ ಕರ್ನಾಟಕ ಎಂದು ಕರೆದಿರುವುದು ತಿಳಿದುಬರುತ್ತದೆ.
* ಕರುನಾಟ್ ಎಂದರೆ ಎತ್ತರದಲ್ಲಿರುವ ನಾಡು ಎಂದರ್ಥ. ಇದು ಹಿಂದೆ ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ಹಬ್ಬಿತ್ತೆ೦ದು, ನೃಪತುಂಗನ ಆಸ್ಥಾನ ಕವಿ ಶ್ರೀವಿಜಯನ ಗ್ರಂಥ ‘ಕವಿರಾಜಮಾರ್ಗ’ ದಲ್ಲಿ ಉಲ್ಲೇಖಿಸಲಾಗಿದೆ.
* ಮೈಸೂರು ಅರಸರ ಒಡೆತನದಲ್ಲಿದ್ದ ದಕ್ಷಿಣದ 09 ಜಿಲ್ಲೆಗಳನ್ನೊಳಗೊಂಡು 1953 ರಲ್ಲಿ “ಮೈಸೂರು ರಾಜ್ಯ” ವು ಉದಯವಾಯಿತು.
* ನವಂಬರ್ 1 1956 ರಂದು”ವಿಶಾಲ ಮೈಸೂರು ರಾಜ್ಯ” ಅಸ್ತಿತ್ವಕ್ಕೆ ಬಂತು. ಇದರ ನೆನಪಿಗಾಗಿ ನವೆಂಬರ್ ಒಂದನ್ನು ಪ್ರತಿ ವರ್ಷವೂ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ.
* 1973ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.
-: ಭೌಗೋಳಿಕ ಸ್ಥಾನ :-
* ಕರ್ನಾಟಕ ಗೋಡಂಬಿ ಆಕಾರ ಹೊಂದಿದೆ.
* ಉತ್ತರದ ತುದಿ- ಬೀದರ್ ಜಿಲ್ಲೆಯ ಔರಾದ್
* ಪೂರ್ವತುದಿ – ಕೋಲಾರ ಜಿಲ್ಲೆಯ ಮುಳುಬಾಗಿಲು
* ಪಶ್ಚಿಮ ತುದಿ – ಉತ್ತರ ಕನ್ನಡ ಜಿಲ್ಲೆಯ ಕಾರವಾರ
* ದಕ್ಷಿಣತುದಿ – ಚಾಮರಾಜನಗರ ಜಿಲ್ಲೆಯ ಮಾಯಾರ್ ನದಿ.
* ಕರ್ನಾಟಕ ಭಾರತದ ದಕ್ಷಿಣ ಭಾಗದಲ್ಲಿದ್ದು,ಪರ್ಯಾಯ ದ್ವೀಪದ ಪಶ್ಚಿಮ ಮಧ್ಯ ಭಾಗದಲ್ಲಿದೆ.
* ಇದು 11° -31’ಮತ್ತು 18°-45′ ಉತ್ತರ ಅಕ್ಷಾಂಶಗಳು ಹಾಗೂ 74°-12′ ಮತ್ತು 78°-40′ ಪೂರ್ವ ರೇಖಾಂಶಗಳ ಮಧ್ಯ ವಿಸ್ತರಿಸಿದೆ.
* ಕರ್ನಾಟಕ ರಾಜ್ಯ 19.1791.ಚದರ ಕಿಲೋಮೀಟರು ವಿಸ್ತಾರವಾಗಿದ್ದು, ವಿಸ್ತೀರ್ಣದಲ್ಲಿ 8ನೇ ದೊಡ್ಡ ರಾಜ್ಯವಾಗಿದೆ.
* 2011ರ ಜನಗಣತಿಯ ಪ್ರಕಾರ 6.11.30.704 ಜನಸಂಖ್ಯೆಯನ್ನು ಹೊಂದಿದೆ.ಜನಸಂಖ್ಯೆಯಲ್ಲಿ 9ನೇ ಸ್ಥಾನವನ್ನು ಹೊಂದಿದೆ.
* ಭಾರತದ ಭೌಗೋಳಿಕ ವಿಸ್ತೀರ್ಣದಲ್ಲಿ ಕರ್ನಾಟಕದ ವಿಸ್ತೀರ್ಣ ಶೇಕಡ 5.83.
* 31 ಜಿಲ್ಲೆಗಳು,227 ತಾಲೂಕುಗಳು,745 ಹೋಬಳಿಗಳು,343ಪಟ್ಟಣ ಮತ್ತು ನಗರಗಳು,29483 ಹಳ್ಳಿಗಳನ್ನು ಹೊಂದಿದೆ.
* ವಿಸ್ತೀರ್ಣದಲ್ಲಿ ಬೆಳಗಾವಿ ಜಿಲ್ಲೆ ದೊಡ್ಡದಿದೆ (13415 ಚದರ ಕಿ.ಮೀ) ಹಾಗೂ ಬೆಂಗಳೂರು ನಗರ ಚಿಕ್ಕ ಜಿಲ್ಲೆಯಾಗಿದೆ (2196ಚದರ ಕಿಲೋ ಮೀಟರ್).
* ಬೆಂಗಳೂರು – ಕರ್ನಾಟಕದ ರಾಜಧಾನಿ
* ಕರ್ನಾಟಕದಲ್ಲಿ ನಾಲ್ಕು ಕಂದಾಯ ವಿಭಾಗಗಳಿವೆ.
-> ಬೆಂಗಳೂರು ವಿಭಾಗ
-> ಮೈಸೂರು ವಿಭಾಗ
-> ಬೆಳಗಾವಿ ವಿಭಾಗ
-> ಕಲ್ಬುರ್ಗಿ ವಿಭಾಗ
-: ಕರ್ನಾಟಕದ ಪ್ರಾಕೃತಿಕ ವಿಭಾಗಗಳು :-
* ಕರ್ನಾಟಕ ರಾಜ್ಯವು ಭಾರತದ ಪರ್ಯಾಯ ದ್ವೀಪದ ಭಾಗವಾಗಿದೆ.
* ಸಮುದ್ರಮಟ್ಟಕ್ಕೆ 450-900 ಮೀಟರ್ ಎತ್ತರದಲ್ಲಿದೆ ಕೆಲವು ಭಾಗಗಳಲ್ಲಿ 1800 ಮೀಟರ್ ಗಳಿಗಿಂತ ಹೆಚ್ಚು ಎತ್ತರವಿದೆ.
* ಕರ್ನಾಟಕವನ್ನು ಮೂರು ಪ್ರಮುಖ ಪ್ರಾಕೃತಿಕ ವಿಭಾಗಗಳಾಗಿ ವಿಂಗಡಿಸಲಾಗಿದೆ.
1) ಕರಾವಳಿ
2) ಮಲೆನಾಡು
3) ಬಯಲು ಸೀಮೆ
1) ಕರಾವಳಿ/ಕೆನರಾ/ ಕರ್ನಾಟಕ ಕರಾವಳಿ:-
* ಪ್ರಾಕೃತಿಕ ವಿಭಾಗವು ಅರಬ್ಬಿ ಸಮುದ್ರ ಮತ್ತು ಮಲೆನಾಡುಗಳ ಮಧ್ಯೆ ವಿಸ್ತರಿಸಿದೆ.
* ಇದು ದಕ್ಷಿಣದಲ್ಲಿ ಮಂಗಳೂರಿನಿಂದ ಉತ್ತರದಲ್ಲಿ ಕಾರವಾರದ ವರೆಗೂ 320 ಕಿಲೋಮೀಟರ್ ಉದ್ದವಾಗಿದ್ದು 12 – 64 ಕಿಲೋಮೀಟರ್ ಅಗಲವಾಗಿದೆ.
* ಸಮುದ್ರಮಟ್ಟದಿಂದ 200 ಮೀಟರ್ ಎತ್ತರವಿದೆ.
* ನವಮಂಗಳೂರು ಬಂದರು “ಕರ್ನಾಟಕದ ಹೆಬ್ಬಾಗಿಲು”/ ಕರ್ನಾಟಕದ ಅತಿ ದೊಡ್ಡ ಬಂದರಾಗಿದೆ.
* ಭಟ್ಕಳ,ಮಲ್ಪೆ, ಕಾರವಾರ್,ಕುಮುಟಾ, ಬೇಲಿಕೆರೆ, ಮತ್ತು ಹೊನ್ನಾವರ ಇವು ಮೀನುಗಾರಿಕಾ ಬಂದರುಗಳು.
* ಮಂಗಳೂರು ಸಮೀಪದ ಸೋಮೇಶ್ವರ,ಉಳ್ಳಾಲ, ಪಣಂಬೂರು,ಉಡುಪಿಯ ಸಮೀಪ, ಮಲ್ಪೆ, ಕಾರವಾರ,ಹೊನ್ನಾವರ ಸಮೀಪದ ಮುರುಡೇಶ್ವರ,ಮರುವಂತೆ ಮತ್ತೆ ಗೋಕರ್ಣ ಸಮೀಪದ ” ಓಂ” ಬೀಚ್ ಪ್ರಮುಖವಾಗಿವೆ.
* ಮಲ್ಪೆ ಸಮೀಪದಲ್ಲಿರುವ ” ಸೇಂಟ್ ಮೇರಿಸ್ ದ್ವೀಪ” / ” ಕೋಕೋನಟ್ ದ್ವೀಪ” ಇದನ್ನು ಸ್ಥಳೀಯವಾಗಿ ತೋನ್ಸೆ ಪಾಲ್ ದೀಪ ಎನ್ನುವರು,ಕಾರವಾರದ ಸಮೀಪದ- ಅಂಜದ್ವೀಪ ,ದೇವಗಡ, ಕಾಂಜಿಗುಡ್ಡ ಪ್ರಮುಖವಾದ ದ್ವೀಪಗಳಾಗಿವೆ.
* ಕರಾವಳಿ ಜನರ ಮುಖ್ಯ ಉದ್ಯೋಗ – ಮೀನುಗಾರಿಕೆ
* ಮುರುಡೇಶ್ವರ ಸಮೀಪದ ” ಪಿಜಿನ್ ಐಲ್ಯಾಂಡ್”( ನೇತ್ರಾಣಿ ದೀಪ) ಪ್ರಮುಖವಾಗಿದೆ.ಇಲ್ಲಿ ಪಾರಿವಾಳಗಳು ಅಧಿಕವಾಗಿರುವುದರಿಂದ ” ಪಿಜನ್ ಐಲ್ಯಾಂಡ್” ಎನ್ನುವರು.
* ದಕ್ಷಿಣ ಕನ್ನಡ,ಉಡುಪಿ, ಉತ್ತರ ಕನ್ನಡ ಜಿಲ್ಲೆಗಳು ಕರಾವಳಿಯ ಜಿಲ್ಲೆಗಳಾಗಿವೆ.
2) ಮಲೆನಾಡು :-
* ನಮ್ಮ ರಾಜ್ಯದ ಪಶ್ಚಿಮ ಘಟ್ಟಗಳ ಭಾಗವನ್ನು ” ಮಲೆನಾಡು” ಎನ್ನುವರು.
* ಇದನ್ನು ” ಸಹ್ಯಾದ್ರಿ ಬೆಟ್ಟಗಳು” ಎಂದು ಕರೆಯುವರು.
* ಇದರ ಉದ್ದ 650 ಕಿಲೋಮಿಟರ್,ಅಗಲ 50-76 ಕಿಲೋಮೀಟರ್.
* ಸಮುದ್ರ ಮಟ್ಟದಿಂದ ಬೀಸುವ ಮಳೆಯ ಮಾರುತಗಳನ್ನು ತಡೆದು 200 ಸೆಂಟಿಮೀಟರ್ ಗಿಂತ ಹೆಚ್ಚು ಮಳೆ ಪಡೆಯುತ್ತವೆ.
* ಇಲ್ಲಿನ ಎತ್ತರದ ಪರ್ವತ ಶಿಖರಗಳು – ಮುಳ್ಳಯ್ಯನಗಿರಿ,ಕುದುರೆಮುಖ, ಕಲ್ಹತ್ತಗಿರಿ,ರುದ್ರಗಿರಿ, ದೇವಿರಮ್ಮನ ಬೆಟ್ಟ(ಚಿಕ್ಕಮಂಗಳೂರು ಜಿಲ್ಲೆ) ಇದಲ್ಲದೆ ಬಲ್ಲಾಳ ರಾಯಣ್ಣದುರ್ಗ, ಮೆರ್ತಿಗುಡ್ಡ,ಪುಷ್ಪಗಿರಿ, ಕೊಡಚಾದ್ರಿ, ಇವು ಪಶ್ಚಿಮ ಘಟ್ಟದ ಉನ್ನತ ಶಿಖರಗಳಾಗಿವೆ.
* ಮುಳ್ಳಯ್ಯನಗಿರಿ – 1913 ಮೀಟರ್ ಇದ್ದು ರಾಜ್ಯದಲ್ಲೇ ಅತಿ ಎತ್ತರವಾಗಿದೆ.
-: ಪ್ರಮುಖ ಘಾಟ್/ಘಟ್ಟ ಮಾರ್ಗಗಳು :-
1) ಚಾರ್ಮುಡಿ ಘಾಟ್ – ಮಂಗಳೂರು-> ಚಿಕ್ಕಮಂಗಳೂರು
2) ಶಿರಾಡಿ ಘಾಟ್ – ಹಾಸನ -> ಸಕಲೇಶಪುರ -> ಮಂಗಳೂರು
3) ಆಗುಂಬೆ ಘಾಟ್ – ಶಿವಮೊಗ್ಗ -> ಉಡುಪಿ
4) ಹುಲಿಕಲ್ ಘಾಟ್ – ಶಿವಮೊಗ್ಗ -> ಕುಂದಾಪುರ
* ಮಲೆನಾಡು ಅಧಿಕ ಮಳೆ ಪಡೆಯುವುದರಿಂದ ನಿತ್ಯ ಹರಿದ್ವರ್ಣ ಕಾಡುಗಳು ಕಂಡುಬರುತ್ತವೆ.
* ಇದು ಕರ್ನಾಟಕದ ಹಲವು ನದಿಗಳ ಉಗಮ ಸ್ಥಾನವಾಗಿದೆ ಇವುಗಳು ಅನೇಕ ಜಲಪಾತಗಳನ್ನು ನಿರ್ಮಿಸಿವೆ.
* ಭಾರತದಲ್ಲಿ ಎತ್ತರವಾದ ” ಜೋಗ್ ಫಾಲ್ಸ್” ಶರಾವತಿ ನದಿಗೆ ನಿರ್ಮಿತವಾಗಿದೆ.
* ಪ್ರಮುಖ ಜಲಪಾತಗಳು – > ಉಂಚಳ್ಳಿ,ಮಾಗೋಡು, ಅಬ್ಬಿ,ಶಿವನಸಮುದ್ರ ಜಲಪಾತಗಳು.
* ಅಧಿಕ ಕಾಫಿ ಬೆಳೆಯುವದರಿಂದ ಚಿಕ್ಕಮಂಗಳೂರನ್ನು ” ಕಾಫಿ ನಾಡು” ಎನ್ನುವರು.
* ಕೊಡಗನ್ನು ” ಕರ್ನಾಟಕದ ಕಾಶ್ಮೀರ” ಎನ್ನುವರು.
* ಕೊಡಗು ಕಿತ್ತಳೆ ಹಣ್ಣನ್ನು ಹೆಚ್ಚಾಗಿ ಬೆಳೆಯುವುದರಿಂದ ” ಕಿತ್ತಳೆ ನಾಡು” ಎಂದು ಕರೆಯುವರು.
* ಮಲೆನಾಡನ್ನು ” ಜೀವ ವೈವಿಧ್ಯತ ವಲಯ” ಎಂದು ಗುರುತಿಸಿದೆ.
* ಹಾಸನ,ಕೊಡಗು,, ಶಿವಮೊಗ್ಗ ಚಿಕ್ಕಮಂಗಳೂರು ಪ್ರಮುಖವಾದ ಮಲೆನಾಡು ಜಿಲ್ಲೆಗಳಾಗಿವೆ.
3) ಬಯಲುಸೀಮೆ :-
* ಮಲೆನಾಡಿನ ಪೂರ್ವ ದಿಕ್ಕಿನಲ್ಲಿ ವಿಶಾಲ ಮೈದಾನವಿದ್ದು,ಸರಾಸರಿ 450-760 ಮೀಟರ್ ಎತ್ತರದಲ್ಲಿದೆ.
* ಇದು ಕೃಷ್ಣ,ಕಾವೇರಿ, ತುಂಗಭದ್ರಾ ಜಲಾಶಯ ಪ್ರದೇಶಗಳನ್ನು ಹೊಂದಿದೆ.
* ಇದನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.
1) ಉತ್ತರ ಬಯಲು ಸೀಮೆ
2) ದಕ್ಷಿಣ ಬಯಲು ಸೀಮೆ
1) ಉತ್ತರ ಬಯಲು ಸೀಮೆ:-
* ಇದು ಕಪ್ಪು ಮನೆನಿಂದ ಕೂಡಿದ್ದು,ಸಮುದ್ರ ಮಠದಿಂದ ಸರಾಸರಿ 356-610 ಮೀಟರ್ ಎತ್ತರವಾಗಿದೆ.
* ಪ್ರಮುಖ ಗುಡ್ಡಗಳು – ನರಗುಂದ ಗುಡ್ಡ,ಪರಸಗಡ ಗುಡ್ಡ, ಇಳಕಲ್ ಗುಡ್ಡ.
* ಸೌವದತ್ತಿ ಹಾಗೂ ಬಾದಾಮಿಯ ಪೂರ್ವದಲ್ಲಿ ಸುಣ್ಣದ ಕಲ್ಲಿನ ಕೆಲವು ಭಾಗಗಳು ಸ್ತರಂಭದಿಂದ ಕೂಡಿದೆ.
* ಪ್ರಮುಖ ಜಲಪಾತಗಳು – ಘಟಪ್ರಭಾ ನದಿಗೆ ಇರುವ ಗೋಕಾಕ್ ಜಲಪಾತ(62 ಮೀಟರ್),ಛಾಯಾ ಭಗವತಿ ಜಲಪಾತ, ಸೊಗಲ ಜಲಪಾತ.
* ಬೇಸಿಗೆಯಲ್ಲಿ ಅಧಿಕ ಬಿಸಿಲು ಇರುವುದರಿಂದ ” ಬಿಸಿಲು ನಾಡು” ಎನ್ನುವರು.
* ಜಿಲ್ಲೆಗಳು – ಬೀದರ್, ವಿಜಯಪುರ, ಕಲ್ಬುರ್ಗಿ, ಯಾದಗಿರಿ, ಗದಗ್, ಕೊಪ್ಪಳ, ರಾಯಚೂರು, ಹಾವೇರಿ,, ಬಳ್ಳಾರಿ,, ಬಾಗಲಕೋಟೆ.
2) ದಕ್ಷಿಣ ಬಯಲುಸೀಮೆ :-
* ತುಂಗಭದ್ರ ನದಿ ಪಾತ್ರದಿಂದ ದಕ್ಷಿಣದ ಚಾಮರಾಜನಗರ ಜಿಲ್ಲೆಯವರೆಗೂ ಹಬ್ಬಿದೆ.
* ಕೆಂಪು ಮಣ್ಣಿನಿಂದ ಕೂಡಿದ ಪ್ರಸ್ಥಭೂಮಿಯಾಗಿದೆ.
* ಈ ಪ್ರದೇಶ 900-975 ಮೀಟರ್ ಎತ್ತರ ಉಳ್ಳದ್ದಾಗಿದೆ.
* ಪ್ರಮುಖ ಬೆಟ್ಟಗಳು – ಚಿತ್ರದುರ್ಗ ಬೆಟ್ಟಗಳು,ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾರಾಯಣದುರ್ಗ, ಸಾವನದುರ್ಗ, ಶಿವಗಂಗೆ, ತುಮಕೂರಿನ ಮಧುಗಿರಿ ಬೆಟ್ಟ( ಇದು ಏಷ್ಯಾ ಖಂಡದಲ್ಲಿ ಅತಿ ದೊಡ್ಡ ಏಕಶಿಲಾ ಬೆಟ್ಟ).
* ನಂದಿ ಬೆಟ್ಟ,ಚಾಮುಂಡಿ ಬೆಟ್ಟ, ಚನ್ನಕೇಶವ ಬೆಟ್ಟ, ಕವಿಲೇ ದುರ್ಗ ಮುಂತಾದವು.
* ಪಾಲಾರ್,ಪೆನ್ನಾರ್ ಇಲ್ಲಿ ಹರಿಯುವ ಪ್ರಮುಖ ನದಿಗಳು.
ಸಮಾಜಶಾಸ್ತ್ರ
-: ಕುಟುಂಬ :-
ಕುಟುಂಬವು ಭಾರತದ ಪ್ರಾಚೀನ ಪಾರಂಪರಿಕ ವ್ಯವಸ್ಥೆಯಾಗಿದ್ದು ತಂದೆ- ತಾಯಿ, ಮಕ್ಕಳು, ಮೊಮ್ಮಕ್ಕಳು ನಡುವೆ ಉಂಟಾಗುವ ಸಂಬಂಧಗಳ ವ್ಯವಸ್ಥೆಯನ್ನು ಕುಟುಂಬ ಎನ್ನುವರು.
* ಕುಟುಂಬ ಮತ್ತು ಪೀಳಿಗೆಗಳು /ತಲೆಮಾರುಗಳು:- ಹಿರಿಯ ಪೋಷಕರು ಒಂದನೇ ತಲೆಮಾರಿಗೆ ಸೇರಿಸಲ್ಪಟ್ಟಿದ್ದರೆ ಪೋಷಕರು ಎರಡನೇ ತಲೆಮಾರಿಗೆ ಸೇರಿರುತ್ತಾರೆ ಮಕ್ಕಳು ಮೂರನೇ ತಲೆಮಾರಿಗೆ ಸೇರಿರುತ್ತಾರೆ.
-: ಕುಟುಂಬದ ಪ್ರಕಾರಗಳು :-
1) ಪಿತೃ ಪ್ರಧಾನ ಕುಟುಂಬ
2) ಮಾತೃ ಪ್ರಧಾನ ಕುಟುಂಬ
3) ಆಧುನಿಕ ಕೇಂದ್ರ ಕುಟುಂಬ.
* ಅವಿಭಕ್ತ ಕುಟುಂಬ:- ಅವಿಭಕ್ತ ಕುಟುಂಬದಲ್ಲಿ ಪತಿ,ಪತ್ನಿ ಅವರ ಮಕ್ಕಳು ಮೊಮ್ಮಕ್ಕಳು ಮರಿ ಮಕ್ಕಳು ಹೀಗೆ ಎರಡಕ್ಕಿಂತ ಹೆಚ್ಚು ತಲೆಮಾರಿನ ಜನರಿರುತ್ತಾರೆ,. ಸಾಮಾನ್ಯವಾಗಿ ಒಂದೇ ಮನೆಯಲ್ಲಿ ವಾಸಿಸುವ ನಿರ್ದಿಷ್ಟ ರಕ್ತ ಸಂಬಂಧಗಳಿಂದ ಪರಸ್ಪರ ಸಂಬಂಧಗಳಾಗಿರುವ ಜನರ ಗುಂಪು.