ನಮ್ಮಸಂವಿಧಾನ – ಭಾಗ- 02(All Competative exam notes)

   -: Important :-

1) ಕನಿಷ್ಠ ಕೂಲಿ ಕಾಯ್ದೆ – 1948

2) ವರದಕ್ಷಿಣೆ ನಿಷೇಧ ಕಾಯ್ದೆ-1961

3) ಸತಿ ನಿಷೇಧ ಕಾಯ್ದೆ – 1987

4) ಕೌಟುಂಬಿಕ ದೌರ್ಜನ್ಯ ಕಾಯ್ದೆ – 2005

5) ಅನೈತಿಕ ವ್ಯವಹಾರ ಕಾಯ್ದೆ – 1956

6) ಜೀತ ಪದ್ಧತಿ ನಿರ್ಮೂಲನಾ ಕಾಯ್ದೆ – 1976

7) ಮಾನವ ಹಕ್ಕುಗಳ ರಕ್ಷಣಾ ಕಾಯ್ದೆ – 1993

* ಸಂವಿಧಾನದ 86ನೇ ತಿದ್ದುಪಡಿ ಮಾಡಿ 21- A ವಿಧಿಯನ್ವಯ 2002 ರಲ್ಲಿ ಶಿಕ್ಷಣವನ್ನು ಒಂದು ಹಕ್ಕನ್ನಾಗಿ ಪರಿಗಣಿಸಲಾಗಿದೆ. ಇದರನ್ವಯ ” 6 ರಿಂದ 14 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕು” ಕರ್ನಾಟಕ ರಾಜ್ಯ ಶಿಕ್ಷಣವು (RTE) 2009ನ್ನು ಜಾರಿಗೊಳಿಸಿದೆ.

* ಸಾಮಾಜಿಕವಾಗಿ ನಷ್ಠವಾಗಿರುವ ಹಕ್ಕುಗಳ ರಕ್ಷಣೆಗಾಗಿ/ ಸಾರ್ವಜನಿಕ ಹಿತಾಸಕ್ತಿ ರಕ್ಷಿಸುವುದಕ್ಕಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು( Public Interest Litigation) ಹೂಡಲಾಗುತ್ತದೆ.

-: ಮೂಲಭೂತ ಕರ್ತವ್ಯಗಳು (Fundamental Duties) :-

ಸಂವಿಧಾನಕ್ಕೆ 42ನೇ ತಿದ್ದುಪಡಿ ಮಾಡಿ 4′ A’ ಭಾಗ 51A ವಿಧಿಯಲ್ಲಿ 10 ಮೂಲಭೂತ ಕತ೯ವ್ಯಗಳನ್ನು ಸೇರಿಸಲಾಯಿತು 2002 ರಲ್ಲಿ 86 ನೇ ತಿದ್ದುಪಡಿ ಮಾಡಿ” 11ನೇ ಮೂಲಭೂತ ಕರ್ತವ್ಯವನ್ನು ಸೇರಿಸಲಾಗಿದೆ. ಅವು ಈ ಕೆಳಗಿನಂತಿವೆ.

1) ನಮ್ಮ ಸಂವಿಧಾನ,ರಾಷ್ಟ್ರಧ್ವಜ, ರಾಷ್ಟ್ರಗೀತೆಯನ್ನು ಗೌರವಿಸುವುದು.

2) ಸ್ವಾತಂತ್ರ್ಯ ಚಳುವಳಿಯ ಪೂರ್ತಿದಾಯಕ ಆದರ್ಶ ತತ್ವಗಳನ್ನು ಪಾಲಿಸುವುದು.

3) ಸಾರ್ವಭೌಮತೆ,ಏಕತೆ, ಸಮಗ್ರತೆಯನ್ನು ಕಾಪಾಡುವುದು, ರಕ್ಷಿಸುವುದು.

4) ಅಗತ್ಯ ಬಂದಾಗ ರಾಷ್ಟ್ರವನ್ನು ರಕ್ಷಿಸಿ ದೇಶದ ಸೇವೆ ಮಾಡುವುದು.

5) ಭಾರತೀಯರಲ್ಲಿ ಸಾಮರಸ್ಯ ಮತ್ತು ಸಹೋದರತ್ವ ಭಾವನೆಯನ್ನು ಬೆಳೆಸುವುದು.

6) ನಮ್ಮ ಸಂಘಟಿತ ಸಂಸ್ಕೃತಿಯ ಪರಂಪರೆಯನ್ನು ಗೌರವಿಸಿ ರಕ್ಷಿಸಬೇಕು.

7) ಅರಣ್ಯ,ಜಲ ಸಂಪನ್ಮೂಲ, ಪ್ರಾಣಿ ಪಕ್ಷಿಗಳು ಸೇರಿದಂತೆ ಪ್ರಾಕೃತಿಕ ಪರಿಸರವನ್ನು ರಕ್ಷಿಸುವುದು ಮತ್ತು ಅಭಿವೃದ್ಧಿಗೊಳಿಸುವುದು.

8) ವೈಜ್ಞಾನಿಕ ಹಾಗೂ ಮಾನವೀಯತೆಯ ಗುಣಗಳ ವಿಚಾರಣಾ ಹಾಗೂ ಸುಧಾರಣಾ ಭಾವನೆಯನ್ನು ಬೆಳೆಸಿಕೊಳ್ಳಬೇಕು.

9) ಸಾರ್ವಜನಿಕ ಆಸಕ್ತಿಯನ್ನು ರಕ್ಷಿಸಬೇಕು.

10) ವೈಯಕ್ತಿಕ ಮತ್ತು ಸಾಮೂಹಿಕವಾಗಿ ರಾಷ್ಟ್ರದ ಪ್ರಗತಿಗೆ ಶ್ರಮಿಸಬೇಕು.

11) ತಂದೆ ತಾಯಿ/ಪೋಷಕರು 6-14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣಕ್ಕೆ ಅವಕಾಶವನ್ನು ಕಲ್ಪಿಸಬೇಕು.

  -: ಕೇಂದ್ರ ಸರ್ಕಾರ :-

  ಕೇಂದ್ರ ಶಾಸಕಾಂಗ(Parliament):-

* ಭಾರತವು ಸಂಸದೀಯ ಮಾದರಿ ಸರ್ಕಾರವನ್ನು ಹೊಂದಿದ್ದು,ಕೇಂದ್ರ ಶಾಸಕಾಂಗವನ್ನು ” ಸಂಸತ್ತು” ಎಂದು ಕರೆಯಲಾಗಿದೆ.

* 79 ನೇ ವಿಧಿಯು ಸಂಸತ್ತಿನ ರಚನೆಗೆ ಅವಕಾಶವನ್ನು ಕಲ್ಪಿಸಿದೆ.

* ಸಂಸತ್ತು ಎರಡು ಸದನಗಳಿಂದ ಕೂಡಿದ್ದು,ಮೇಲ್ಮನೆಯನ್ನು ” ರಾಜ್ಯಸಭೆ “ಎಂದು,ಕೆಳಮನೆಯನ್ನು ” ಲೋಕಸಭೆ” ಎಂದು ಕರೆಯಲಾಗಿದೆಎಂದು ಕರೆಯಲಾಗಿದೆ.

   ರಾಜ್ಯಸಭೆ (Council of state)- 80ನೇ ವಿಧಿ:-

* 250 ಸದಸ್ಯರನ್ನು ಒಳಗೊಂಡಿದೆ 238 ಸದಸ್ಯರು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಯ ಸದಸ್ಯರಿಂದ ಆಯ್ಕೆಯಾದರೆ ಉಳಿದ 12 ಸದಸ್ಯರು ಸಾಹಿತ್ಯ,ಕಲೆ, ವಿಜ್ಞಾನ ಮತ್ತು ಸಮಾಜಸೇವೆಯಲ್ಲಿ ವಿಶೇಷ ಅನುಭವ ಪಡೆದವರನ್ನು ರಾಷ್ಟ್ರಪತಿಗಳು ನಾಮಕರಣ ಮಾಡುತ್ತಾರೆ.

* ಇದನ್ನು ” ಹಿರಿಯರ ಸದನ” ಎಂದು ಕರೆಯಲಾಗುತ್ತದೆ.

* ಇದೊಂದು ಕಾಯಂ ಸದನವಾಗಿದ್ದು,ಇದನ್ನು ಲೋಕಸಭೆಯಂತೆ. ವಿಸರ್ಜಿಸಲಾಗದು.

* ಅಧಿಕಾರ ಅವಧಿ ಆರು ವರ್ಷಗಳಾಗಿದ್ದು,ಪ್ರತಿ ಎರಡು ವರ್ಷಗಳಿಗೊಮ್ಮೆ 1/3 ಸದಸ್ಯರು ನಿವೃತ್ತರಾಗುತ್ತಾರೆ.

-: ಸದಸ್ಯರಾಗಲು ಇರಬೇಕಾದ ಅರ್ಹತೆಗಳು ( 84ನೇ ವಿಧಿ):-

1) ಭಾರತದ ಪ್ರಜೆಯಾಗಿರಬೇಕು.

2) ಕನಿಷ್ಠ 30 ವರ್ಷ ವಯಸ್ಸಾಗಿರಬೇಕು.

3) ಕೇಂದ್ರ/ರಾಜ್ಯ ಸರ್ಕಾರದ ಯಾವುದೇ ಲಾಭದಾಯಕ ಹುದ್ದೆಯಲ್ಲಿ ಇರಬಾರದು.

* ಉಪರಾಷ್ಟ್ರಪತಿಯವರು ರಾಜ್ಯಸಭೆಯ ಅಧ್ಯಕ್ಷರಾಗಿರುತ್ತಾರೆ.

* ರಾಜ್ಯಸಭಾ ಸದಸ್ಯರಲ್ಲಿಯೇ ಒಬ್ಬರನ್ನು ಉಪಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡಿರುತ್ತಾರೆ.

* ಅಧಿವೇಶನ ನಡೆಯಲು ಕನಿಷ್ಠ 1/10 ಕೋರಂ ಇರಬೇಕು.

* ವರ್ಷದಲ್ಲಿ ಎರಡು ಬಾರಿಯಾದರೂ ಅಧಿವೇಶನ  ಸೇರಬೇಕು.

-: ಲೋಕಸಭೆ(81ನೇ ವಿಧಿ)/ಜನತಾ ಸದನ:-

* ಲೋಕಸಭೆ ಸದಸ್ಯರು ಜನರಿಂದ ನೇರವಾಗಿ ಆಯ್ಕೆ ಆಗಿರುವುದರಿಂದ ಇದನ್ನು ಜನತಾ ಸದನ ಎನ್ನುವರು.

* ಒಟ್ಟು ಸದಸ್ಯರ ಸಂಖ್ಯೆ 545 ಇದರಲ್ಲಿ 543 ಸದಸ್ಯರು ಚುನಾವಣೆಯ ಮೂಲಕ ಆಯ್ಕೆಯಾದರೆ,ಉಳಿದ ಎರಡು ಸದಸ್ಯರು ಆಂಗ್ಲೋ ಇಂಡಿಯನ್ನರನ್ನು (331 ನೇ ವಿಧಿಯ ಪ್ರಕಾರ) ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.

* ಲೋಕಸಭೆಯಲ್ಲಿ SC ಜಾತಿಯವರಿಗೆ 79 ಸ್ಥಾನಗಳು ಮತ್ತು ST ಗೆ 41 ಸ್ಥಾನಗಳನ್ನು ಮೀಸಲಿಡಲಾಗಿದೆ.

* ಅಧಿಕಾರವಧಿ 5 ವರ್ಷಗಳು,ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅಧಿಕಾರ ಅವಧಿಯನ್ನು ಒಂದು ವರ್ಷ ವಿಸ್ತರಿಸಬಹುದು.

* ಲೋಕಸಭಾ ಸದಸ್ಯರಲ್ಲಿ ಒಬ್ಬರನ್ನು ಸಭಾಧ್ಯಕ್ಷರನ್ನಾಗಿ(Speaker) -93 ನೇ ವಿಧಿ ಅನ್ವಯ,ಮತ್ತೊಬ್ಬರನ್ನು ಉಪಸಾಧಿಪಾದಕ್ಷರನ್ನಾಗಿ (Depuity Speaker) ಆಯ್ಕೆ ಮಾಡುತ್ತಾರೆ.

  -: ಸದಸ್ಯರ ಅರ್ಹತೆಗಳು :-

* ಭಾರತದ ಪ್ರಜೆಯಾಗಿರಬೇಕು.

* ಕನಿಷ್ಠ 25 ವರ್ಷ ವಯಸ್ಸಾಗಿರಬೇಕು.

* ಕೇಂದ್ರ/ರಾಜ್ಯ ಸರ್ಕಾರದ ಯಾವುದೇ ಲಾಭದಾಯಕ ಹುದ್ದೆಯಲ್ಲಿ ಇರಬಾರದು.

 -: ಸಂಸತ್ತಿನ ಅಧಿಕಾರ ಮತ್ತು ಕಾರ್ಯಗಳು :-

1) ಶಾಸನ ರಚನಾ ಕಾರ್ಯ :-

* ಸಂಸತ್ತು ಮೂಲಭೂತವಾಗಿ ಕಾನೂನು ಮಾಡುವ ಅಂಗವಾಗಿದೆ.

* ಕೇಂದ್ರ ಪಟ್ಟಿಯಲ್ಲಿನ 100 ವಿಷಯಗಳಿಗೆ ಸಂಬಂಧಿಸಿದಂತೆ ಶಾಸನ ಮಾಡುವ ಅಧಿಕಾರ ಬಂದಿದೆ.

* ಹಣಕಾಸಿನ ಮಸೂದೆಯನ್ನು ಯಾವುದೇ ಸದನದಲ್ಲಿ ಮಂಡಿಸಬಹುದು.

* ಮಸೀದಿಯ ಪರ ಮತ್ತು ವಿರೋಧವಾಗಿ ಸಮ ಮತಗಳು ಬಂದಾಗ ಸಭಾಧ್ಯಕ್ಷರು ತಮ್ಮ ನಿರ್ಣಾಯಕ ಮತ ಚಲಾಯಿಸಬಹುದು.

* ಮಸೂದೆಯ ಬಗ್ಗೆ ಸದನಗಳ ನಡುವೆ ಭಿನ್ನಾಭಿಪ್ರಾಯ ಮಾಡಿದರೆ ರಾಷ್ಟ್ರಾಧ್ಯಕ್ಷರು 108 ನೇ ವಿಧಿಯ ಪ್ರಕಾರ ಜಂಟಿ ಅಧಿವೇಶನ ಕರೆಯುವರು.

* ಯಾವುದೇ ಮಸೂದೆಯು ರಾಷ್ಟ್ರಪತಿ ಒಪ್ಪಿಗೆ ನಂತರ ಮಸೂದೆಯು ಶಾಸನವಾಗಿ ಜಾರಿಗೆ ಬರುತ್ತದೆ.

  2) ಆಡಳಿತ ಅಧಿಕಾರ :-

* ಪ್ರಧಾನ ಮಂತ್ರಿ ಮತ್ತು ಮಂತ್ರಿ ಮಂಡಲ ನಿಜವಾದ ಕಾರ್ಯಂಗವಾಗಿದೆ.

* ಕೇಂದ್ರ ಮಂತ್ರಿ ಮಂಡಲವು ಸಂಸತ್ತಿಗೆ ಜವಾಬ್ದಾರಿಯಾಗಿರುತ್ತದೆ.

* ಸರ್ಕಾರದ ನೀತಿ ಸಾಧನೆಗಳ ಬಗ್ಗೆ ಲೋಕಸಭೆಯ ಬಹುಸಂಖ್ಯಾತ ಸದಸ್ಯರಿಗೆ ವಿಶ್ವಾಸವಿಲ್ಲವೆಂದಾದರೆ ಸರ್ಕಾರ (ಪ್ರಧಾನಮಂತ್ರಿ ಹಾಗು ಮಂತ್ರಿಮಂಡಲ) ರಾಜೀನಾಮೆ ನೀಡಬೇಕಾಗುತ್ತದೆ.

* ಸಂಸತ್ತಿನ ವಿಶ್ವಾಸವಿರುವವರೆಗೂ ಮಂತ್ರಿಮಂಡಲ ಅಧಿಕಾರದಲ್ಲಿ ಮುಂದುವರೆಯುತ್ತದೆ ಅಧಿಕಾರ ಕಳೆದುಕೊಂಡಾಗ ಮಂತ್ರಿಮಂಡಲ ಅಧಿಕಾರದಲ್ಲಿ ಮುಂದುವರೆಯಲಾಗುವುದಿಲ್ಲ.

 3) ಹಣಕಾಸಿನ ಅಧಿಕಾರ:-

* ಲೋಕಸಭೆಯ ರಾಷ್ಟ್ರದ ಹಣಕಾಸಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದೆ.

* ಹಣಕಾಸಿನ ಮಸೂದೆಯನ್ನು 107ರ ವಿಧಿಯ ಪ್ರಕಾರ ಲೋಕಸಭೆಯಲ್ಲಿ ಮಂಡಿಸಬೇಕು ಲೋಕಸಭೆಯ ಅನುಮೋದನೆ ಪಡೆದ ನಂತರ ರಾಜ್ಯಸಭೆಗೆ ಕಳಿಸಲಾಗುತ್ತದೆ ಆಗ ರಾಜ್ಯಸಭೆ ಸ್ವೀಕರಿಸಿ 14 ದಿನದೊಳಗೆ ತನ್ನ ಒಪ್ಪಿಗೆ ನೀಡಿ ಲೋಕಸಭೆಗೆ ಹಿಂತಿರುಗಿಸಬೇಕು ಹಿಂತಿರುಗಿಸದೆ ಹೋದರೆ ಮಸೂದೆ ಅಂಗೀಕಾರ ಪಡೆದಿದೆ ಎಂದು ಪರಿಗಣಿಸಿ ಅದನ್ನು ರಾಷ್ಟ್ರಪತಿ ಅನುಮೋದನೆಗೆ ಕಳಿಸಲಾಗುತ್ತದೆ.

  4) ನ್ಯಾಯಾಂಗ ಅಧಿಕಾರ:-

* 61ನೇ ವಿಧಿಯ ಪ್ರಕಾರ ಮಹಾಭಿಯೋಗ ಪ್ರಕ್ರಿಯೆಯ ಮೂಲಕ ರಾಷ್ಟ್ರಪತಿಯವರನ್ನು ಪದಚ್ಯುತಿಗೊಳಿಸುವ ಅಧಿಕಾರವನ್ನು ಸಂಸತ್ತು ಹೊಂದಿದೆ.

* ಸರ್ವೋಚ್ಛ ಹಾಗೂ ನ್ಯಾಯಾಲಯಗಳ ಸದಸ್ಯರು,ಮುಖ್ಯ ಚುನಾವಣಾ ಆಯುಕ್ತರು,ಕಂಟ್ರೋಲ್ ಮತ್ತು ಆಡಿಟ್ ಜನರಲ್ ರವರನ್ನು ಪದಚ್ಯುತಿಗೊಳಿಸುವಂತೆ ರಾಷ್ಟ್ರ ಅಧ್ಯಕ್ಷರಿಗೆ ಶಿಫಾರಸು ಮಾಡುವ ಅಧಿಕಾರ ಹೊಂದಿದೆ

5) ಸಂವಿಧಾನ ತಿದ್ದುಪಡಿ ಮಾಡುವ ಅಧಿಕಾರ :-

* ಸಂವಿಧಾನ ತಿದ್ದುಪಡಿ ಮಾಡುವ ವಿಷಯದಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಸಮನಾಗಿ ಅಧಿಕಾರವಿರುತ್ತದೆ.

* ತಿದ್ದುಪಡಿ ಮಸೂದೆಯನ್ನು ಯಾವುದೇ ಸದನದಲ್ಲಿ ಮೊದಲು ಮಂಡಿಸಬಹುದು.

* ಕೆಲವು ಸಂದರ್ಭದಲ್ಲಿ ಸಂವಿಧಾನ ತಿದ್ದುಪಡಿಗೆ ರಾಜ್ಯ ವಿಧಾನಸಭೆಗಳ ಸಹ ಮತವು ಅವಶ್ಯಕವಾಗಿದೆ.

6) ಇತರೆ ಅಧಿಕಾರಗಳು :-

* SC ಹಾಗೂ HC ನ್ಯಾಯಾಲಯದ ಅಧಿಕಾರ ಮತ್ತು ವ್ಯಾಪ್ತಿಯ ಬಗ್ಗೆ ಕಾನೂನು ರೂಪಿಸುವುದು.

* 2/2 ಕ್ಕಿಂತ ಹೆಚ್ಚು ರಾಜ್ಯಗಳಿಗೆ ಒಂದೇ HC ನ್ಯಾಯಾಲಯದ ಸ್ಥಾಪನೆ ಅಧಿಕಾರ.

* ಹೊಸ ರಾಜ್ಯಗಳ ಸೃಷ್ಟಿ,ಹೆಸರು ಬದಲಾವಣೆ,ರಾಜ್ಯದ ಗಡಿ ನಿರ್ಧರಿಸುವುದು.

* ರಾಷ್ಟ್ರೀಯ ತುರ್ತು ಪರಿಸ್ಥಿತಿ,ರಾಜ್ಯ ಹಾಗೂ ಹಣಕಾಸಿನ ತುರ್ತು ಪರಿಸ್ಥಿತಿಯನ್ನು ಅನುಮೋದಿಸುವುದು.

 -: ಕೇಂದ್ರ ಕಾರ್ಯಂಗ ( 52-78ನೇ ವಿಧಿ) :-

* ಕೇಂದ್ರ ಶಾಸಕಾಂಗ ರೂಪಿಸುವ ಕಾರ್ಯಗಳನ್ನು ಜಾರಿಗೊಳಿಸುವುದೇ ಕಾರ್ಯಾಂಗ.

* ಕಾರ್ಯಾಂಗವು ರಾಷ್ಟ್ರಪತಿ,ಪ್ರಧಾನ ಮಂತ್ರಿ,ಅಟಾರ್ನಿ ಜನರಲ್ ಮತ್ತು ಮಂತ್ರಿಮಂಡಲವನ್ನು ಒಳಗೊಂಡಿರುತ್ತದೆ.

* ರಾಷ್ಟ್ರಪತಿಗಳು ನಾಮ ಮಾತ್ರ ಕಾರ್ಯಾಂಗದ ಮುಖ್ಯಸ್ಥರಾದರೆ ಪ್ರಧಾನಮಂತ್ರಿಯನ್ನು ಒಳಗೊಂಡ ಮಂತ್ರಿಮಂಡಲ ನಿಜವಾದ ಕಾರ್ಯಂಗವಾಗಿದೆ.

  -: ರಾಷ್ಟ್ರಪತಿಗಳು :-

* ಇವರು Order of Precedence ನಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ.

* 52ನೇ ವಿಧಿಯು ರಾಷ್ಟ್ರಪತಿ ಸ್ಥಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ.

* ರಾಷ್ಟ್ರಪತಿಯವರು ಸಂವಿಧಾನದ ಮುಖ್ಯಸ್ಥರು,ಭಾರತದ ಪ್ರಥಮ ಪ್ರಜೆ, ಕಾರ್ಯಾಂಗದ ಮುಖ್ಯಸ್ಥರು ಹಾಗೂ ಮೂರು ಸೇನಾಪದಗಳ ( ವಾಯುಪಡೆ,ಭೂಪಡೆ, ನೌಕಾಪಡೆ) ಮಹಾದಂಡ ನಾಯಕರು ಆಗಿದ್ದಾರೆ ಸರ್ವೋನ್ನತ ಸ್ಥಾನವನ್ನು ಹೊಂದಿದ್ದಾರೆ.

* ಇವರ ಅಧಿಕಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.

 

WhatsApp Group Join Now
Telegram Group Join Now

Leave a Comment