ದೇಶದ ವ್ಯವಸ್ಥಿತ ಆಡಳಿತ ನಿರ್ವಹಣೆಗಾಗಿ ಕಾನೂನಿನ ಅವಶ್ಯಕತೆ ಮತ್ತು ಸಂವಿಧಾನ ರಚನೆಯು ರಾಷ್ಟ್ರವನ್ನು ಒಂದು ಚೌಕಟ್ಟಿನಲ್ಲಿ ಹೇಗೆ ನಿಯಂತ್ರಿಸಬೇಕೆಂದು ತಿಳಿಸಿಕೊಡುವ ವ್ಯವಸ್ಥೆಯನ್ನು ” ಸಂವಿಧಾನ ” ಎನ್ನುವರು.
* ಸಂವಿಧಾನದ ಮೊದಲರಚನಾ ಸಭೆ ‘ ಡಿಸೆಂಬರ್ 09- 1946’ ರಂದು ” ಸಚ್ಚಿದಾನಂದ ಸಿನ್ಹಾ” ತಾತ್ಕಾಲಿಕ ಅಧ್ಯಕ್ಷತೆಯಲ್ಲಿ ನಡೆಯಿತು.
* ಡಿಸೆಂಬರ್ 11-1946ರಂದು ಡಾ|| ರಾಜೇಂದ್ರಪ್ರಸಾದ್ ಅವರು ಖಾಯಂ ಅಧ್ಯಕ್ಷರಾದರು. ಈ ಸಭೆಯಲ್ಲಿ ಜವಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯ್ ಪಟೇಲ್, ಡಾ. B.R.ಅಂಬೇಡ್ಕರ್, ಮೌಲಾನಾ ಅಬ್ದುಲ್ ಕಲಾಂ, ಸಿ. ರಾಜಗೋಪಾಲಚಾರಿ, K.M ಮುನ್ಸಿ , T. T.ಕೃಷ್ಣಮಾಚಾರಿ,ಸರೋಜಿನಿ ನಾಯ್ಡು, ಸುಚೇತ ಕೃಪಲಾನಿ, ಕರ್ನಾಟಕದ S. ನಿಜಲಿಂಗಪ್ಪ, K. C.ರೆಡ್ಡಿ,ಕೆಂಗಲ್ ಹನುಮಂತಯ್ಯ, ಟೇಕೂರು ಸುಬ್ರಮಣ್ಯ ಮುಂತಾದವರು ಭಾಗವಹಿಸಿದ್ದರು.
-: ಕರಡು ಸಮಿತಿ :-
ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪರೀಶಿಲಿಸಲು ಈ ಸಮಿತಿಯನ್ನು ರಚಿಸಲಾಯಿತು.ಡಾಕ್ಟರ್ ಬಿ ಆರ್ ಅಂಬೇಡ್ಕರ್ ಇದರ ಅಧ್ಯಕ್ಷರಾದರು,ಈ ಸಮಿತಿಯಲ್ಲಿ ಎನ್ ಗೋಪಾಲಸ್ವಾಮಿ ಅಯ್ಯಂಗಾರ್,ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆಎಂ ಮುನ್ಸಿ, T.T ಕೃಷ್ಣಮಾಚಾರಿ ಮುಂತಾದವರಿದ್ದರು.
-: ಸಂವಿಧಾನ ರಚನೆ :-
* ಸಂವಿಧಾನ ರಚನಾ ಸಭೆಯಲ್ಲಿ ಅವಧಿಯಲ್ಲಿ 145 ದಿನ ಸಭೆ ಸೇರಿತ್ತು.
* ಬ್ರಿಟಿಷ್ ಸರ್ಕಾರ ಹೊರಡಿಸಿದ 1909,1919 ಮತ್ತು 1935 ರ ಕಾಯ್ದೆ ಬ್ರಿಟನ್ನಿನ ಸಂಸದೀಯ ವ್ಯವಸ್ಥೆ,ಅಮೆರಿಕ ಬಿಲ್ ಆಫ್ ರೈಟ್ಸ್,ಐರ್ಲೆಂಡಿನ ಸಾಮಾಜಿಕ ನಿರ್ದೇಶಕ ತತ್ವಗಳು ಮುಂತಾದವುಗಳನ್ನು ಅಳವಡಿಸಿಕೊಳ್ಳಲು ನಿರ್ಣಯಿಸಲಾಯಿತು.
* ಅಂತಿಮವಾಗಿ ನವೆಂಬರ್ 26 1949 ರಂದು ಅಂಗೀಕರಿಸಿ ಸಂವಿಧಾನವನ್ನು 1950 ಜೂನ್ 26ರಂದು ಜಾರಿಗೆ ತರಲಾಯಿತು. ಈ ದಿನವನ್ನೇ ಗಣರಾಜ್ಯ ದಿನವಾಗಿ ಆಚರಿಸುತ್ತೇವೆ.
* 1930 ಜನವರಿ 26ರಂದು ಲಾವೂರ್ ಕಾಂಗ್ರೆಸ್ ಅಧಿವೇಶನದಲ್ಲಿ INC ಭಾರತ ” ಪೂರ್ಣ ಸ್ವರಾಜ್ಯ” ಎಂಬ ಘೋಷಣೆಯನ್ನು ಅಂಗೀಕರಿಸಿತ್ತು ಅದರ ನೆನಪಿಗಾಗಿ ನೂತನ ಸಂವಿಧಾನವನ್ನು ಜನವರಿ 26 1950 ರಂದು ಜಾರಿಗೆ ತರಲಾಯಿತು.
* ಕರ್ನಾಟಕದವರಾದ ಬೆನಗಲ್ ನರಸಿಂಹರಾವ್ ( B.N.ರಾವ್) ಅವರು ಸಂವಿಧಾನ ರಚನಾ ಸಮಿತಿಯ ಮುಖ್ಯ ಸಲಹೆಗಾರರಾಗಿ ಕರಡು ಪ್ರತಿಯ ಚೌಕಟ್ಟು ಹಾಗೂ ರಚನೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಇವರು ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಮಂತ್ರಿಗಳು ದಿ ಹೇಗನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು.
-: ಕ್ಯಾಬಿನೆಟ್ ಆಯೋಗ :-
* ಲಾರ್ಡ್ ಪೆಥಿಕ್ ಲಾರೆನ್ಸ್ -> ಭಾರತದ ವ್ಯವಹಾರಗಳ ಕಾರ್ಯದರ್ಶಿ.
* ಸರ್ ಸ್ಟಾ ಪೋರ್ಡ್ ಕ್ರಿಪ್ಸ್ -> ವಾಣಿಜ್ಯ ಮಂಡಳಿಯ ಅಧ್ಯಕ್ಷರು.
* A. V. ಅಲೆಗ್ಸಾಂಡರ್ -> ನೌಕಾಪಡೆಯ ಮುಖ್ಯಸ್ಥ.
-: ಭಾರತ ಸಂವಿಧಾನದ ಪ್ರಸ್ತಾವನೆ:-
” ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ,ಸಮಾಜವಾದಿ,ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಮತ್ತು ಅದರ ಸಮಸ್ತ ನಾಗರಿಕರಿಗೆ ಸಾಮಾಜಿಕ,ಆರ್ಥಿಕ ಮತ್ತು ರಾಜಕೀಯ ನ್ಯಾಯ:
ವಿಚಾರ,, ಅಭಿವ್ಯಕ್ತಿ ವಿಶ್ವಾಸ, ಧರ್ಮ ಶ್ರದ್ಧೆ ಮತ್ತು ಉಪಸನಾ ಸ್ವಾತಂತ್ರ್ಯ :
ಸ್ಥಾನಮಾನ ಹಾಗೂ ಅವಕಾಶ,ಸಮಾನತೆ ದೊರೆಯುವಂತೆ ಮಾಡಲು ಮತ್ತು ವ್ಯಕ್ತಿ ಗೌರವವನ್ನು( ರಾಷ್ಟ್ರದ ಏಕತೆಯನ್ನು ಹಾಗೂ ಅಖಂಡತೆಯನ್ನು) ಸುನಿಶ್ಚಿತಗೊಳಿಸಿ ಅವರಲ್ಲಿ ಭಾತೃತ್ವ ಭಾವನೆಯನ್ನು ವೃದ್ಧಿಗೊಳಿಸಲು ಶ್ರದ್ಧಾಪೂರ್ವಕವಾಗಿ ಸಂಕಲ್ಪ ಮಾಡಿದವರಾಗಿ:
ನಮ್ಮ ಸಂವಿಧಾನ ಸಭೆಯಲ್ಲಿ 1949 ನೇ ಇಸವಿ ನವಂಬರ್ ತಿಂಗಳ 26ನೇ ತಾರೀಕು ಈ ದಿವಸ ಈ ಮೂಲಕ ಈ ಸಂವಿಧಾನವನ್ನು ಅಂಗೀಕರಿಸಿ ಅಧಿನೇಮಿಸಿ ಅರ್ಪಿಸಿಕೊಂಡಿದ್ದೇವೆ”
* ಈ ಪ್ರಸ್ತಾವನೆಯನ್ನು ಡಿಸೆಂಬರ್ 13 1946 ರಂದು ನೆಹರು ಮಂಡಿಸಿದ ” ಧ್ಯೇಯಗಳ ನಿರ್ಣಯ” (Objective Resolution) ವನ್ನು ನಮ್ಮ ಸಂವಿಧಾನ ರಚನಾ ಸಭೆಯ ಜನವರಿ 22 1947 ರಂದು ಅಂಗೀಕರಿಸಿತು ಪ್ರಸ್ತಾವನೆಯನ್ನು ಕೆಲವರು ” ಸಂವಿಧಾನದ ಒಡವೆ ( Jewel)” ಎಂದು ಬಣ್ಣಿಸಿದರೆ K.M. ಮುನ್ಸಿಯವರು ” ರಾಜಕೀಯ ಜಾತಕ ” ಎಂದು ಕರೆದಿದ್ದಾರೆ.
* Note :- ಪ್ರಸ್ತಾವನೆಯನ್ನು 1976ರ 42ನೇ ತಿದ್ದುಪಡಿ ಕಾಯ್ದೆಯ ಮೂಲಕ ಇದುವರೆಗೆ ಒಂದು ಬಾರಿ ತಿದ್ದುಪಡಿ ಮಾಡಿ ಈ ಕಾಯ್ದೆಯ ಮೂಲಕ ಸಮಾಜವಾದಿ,ಜಾತ್ಯಾತೀತತೆ, ಮತ್ತು ಸಮಗ್ರತೆ ಎಂಬ ಮೂರು ಪದಗಳನ್ನು ಸೇರಿಸಿದರು.
-: ಭಾರತ ಸಂವಿಧಾನದ ಪ್ರಮುಖ ಲಕ್ಷಣಗಳು :-
1) ಲಿಖಿತ ಮತ್ತು ಬೃಹತ್ ಸಂವಿಧಾನ :- ನಮ್ಮ ಸಂವಿಧಾನವು ಲಿಖಿತ ರೂಪದಲ್ಲಿದೆ ಮೂಲತಹ 22 ಭಾಗಗಳು,8 ಅನುಸೂಚಿಗಳು ಮತ್ತು 450ಕ್ಕೂ ಅಧಿಕ ವಿಧಿಗಳನ್ನು ಒಳಗೊಂಡಿದೆ.
2) ಸರಳ ಮತ್ತು ಕಠಿಣ ಸಂವಿಧಾನ
3) ಸಂಸದೀಯ ಸರ್ಕಾರ ಪದ್ಧತಿ
4) ಗಣತಂತ್ರ ವ್ಯವಸ್ಥೆ
5) ಸಂಯುಕ್ತ ಪದ್ಧತಿ :- ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರ ಹಂಚಿಕೆಯಾಗಿದೆ ಕೇಂದ್ರ ಪಟ್ಟಿ – 100,ವಿಷಯಗಳು, ರಾಜ್ಯ ಪಟ್ಟಿ 61 ವಿಷಯಗಳು, ಮತ್ತು ಸಮವರ್ತಿ ಪಟ್ಟಿ 52 ವಿಷಯಗಳು ಒಳಗೊಂಡಿದೆಒಳಗೊಂಡಿದೆ.
6) ಮೂಲಭೂತ ಹಕ್ಕುಗಳು :- ಸಂವಿಧಾನದ 3 ನೇ ಭಾಗದಲ್ಲಿ 12 -35 ನೇ ವಿಧಿಗಳು ಮೂಲಭೂತ ಹಕ್ಕುಗಳ ಬಗ್ಗೆ ತಿಳಿಸುತ್ತದೆ ಆರು ಮೂಲಭೂತ ಹಕ್ಕುಗಳಿವೆ ಇವುಗಳನ್ನು ಅಮೆರಿಕದಿಂದ ಎರವಲು ಪಡೆಯಲಾಗಿದೆ.
1) ಸಮಾನತೆಯ ಹಕ್ಕು (14-18)
2) ಸ್ವಾತಂತ್ರ್ಯದ ಹಕ್ಕು (19-22)
3) ಶೋಷಣೆಯ ವಿರುದ್ಧದ ಹಕ್ಕು (23-24)
4) ಧಾರ್ಮಿಕ ಹಕ್ಕು(25-28)
5) ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು(29-30)
6) ಸಂವಿಧಾನದ ಪರಿಹಾರ ಹಕ್ಕು( 32ನೇ ವಿಧಿ)
7) ರಾಜ್ಯನೀತಿ ನಿರ್ದೇಶಕ ತತ್ವಗಳು.
8) ಮೂಲಭೂತ ಕರ್ತವ್ಯಗಳು.
9) ಸ್ವತಂತ್ರ ಮತ್ತು ಏಕೀಕೃತ ನ್ಯಾಯಾಂಗ ವ್ಯವಸ್ಥೆ.
10) ಏಕ ಪೌರತ್ವ .
11) ವಯಸ್ಕರ ಮತದಾನ ಪದ್ಧತಿ.
12) ಪಕ್ಷ ಪದ್ದತಿ.
-: Important :-
* 1895ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪ್ರಜೆಗಳ ಹಕ್ಕುಗಳ ಬಗ್ಗೆ ಆಗ್ರಹ ಪಡಿಸಿತು.
* 1895ರಲ್ಲಿ ಬಾಲಗಂಗಾಧರ್ ತಿಲಕ್ ತಮ್ಮ ” ಸ್ವರಾಜ್ಯ ಬಿಲ್” ನಲ್ಲಿ ಹಕ್ಕುಗಳಿಗಾಗಿ ಒತ್ತಾಯಿಸಿದ್ದರು.
* 1925ರಲ್ಲಿ ಅನಿಬೆಸೆಂಟ್ ” ಕಾಮನ್ವೆಲ್ತ್ ಆಫ್ ಇಂಡಿಯಾ” ಬಿಲ್ ನಲ್ಲಿ ವ್ಯಕ್ತಿ ಸ್ವಾತಂತ್ರ್ಯ,ಆತ್ಮಸಾಕ್ಷಿ ಸ್ವಾತಂತ್ರ, ವಾಕ್ ಸ್ವಾತಂತ್ರ, ಕಾನೂನಿನ ಮುಂದೆ ಸಮಾನರು ಎಂಬುದನ್ನು ಪ್ರತಿಪಾದಿಸಿದರು.
1945 ರ ವರದಿ 1946 ರ ಕ್ಯಾಬಿನೆಟ್ ಮಿಷನ್ ”ಮೂಲಭೂತ ಹಕ್ಕುಗಳನ್ನು” ಬೆಂಬಲಿಸಿದವು.
1) ಸಮಾನತೆಯ ಹಕ್ಕು(14-18ನೇ ವಿಧಿಗಳು):-
* 14ನೇ ವಿಧಿ :- ಕಾನೂನಿನ ಮುಂದೆ ಎಲ್ಲರೂ ಸಮಾನರು.
* 15 ನೇ ವಿಧಿ:- ಧರ್ಮ,ಜಾತಿ, ಲಿಂಗ, ಜನಾಂಗ ಇವುಗಳ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ.
* 16ನೇ ವಿಧಿ :- ಸಾರ್ವಜನಿಕ ಉದ್ಯೋಗದಲ್ಲಿ ಸಮಾನ ಅವಕಾಶ.
* 17ನೇ ವಿಧಿ:- ಅಸ್ಪೃಶ್ಯತೆ
* 18ನೇ ವಿಧಿ:- ಬಿರುದು,ಬಾವಲಿಗಳ ಪದ್ಧತಿ.
2) ಸ್ವಾತಂತ್ರ್ಯದ ಹಕ್ಕು(19-22 ನೇ ವಿಧಿ):-
* 19 ನೇ ವಿಧಿ:- ವಾಕ್ ಸ್ವಾತಂತ್ರ ಹಾಗೂ ಇತರೆ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ
* 20ನೇ ವಿಧಿ:- ಅಪರಾಧಗಳ ಬಗ್ಗೆ ಅಪರಾಧಿ ಎಂದು ನಿರ್ಣಯಿಸುವ ಸಂಬಂಧದಲ್ಲಿ ರಕ್ಷಣೆ.
* 21ನೇ ವಿಧಿ:- ಶಿಕ್ಷಣ ಒಂದು ಮೂಲಭೂತ ಹಕ್ಕು(6-14ವರ್ಷ ವಯಸ್ಸಿನ ಮಕ್ಕಳು)
* 22ನೇ ವಿಧಿ:- ಅಕ್ರಮ ಬಂಧನ ಮತ್ತು ಸೆರೆವಾಸದ ವಿರುದ್ಧ ರಕ್ಷಣೆ.
3) ಶೋಷಣೆಯ ವಿರುದ್ಧದ ಹಕ್ಕು(23-24ವಿಧಿ):-
* 23 ನೇ ವಿಧಿ:- ಮಾನವ ಅಕ್ರಮ ಮಾರಾಟ ಮತ್ತು ಬಲವಂತದ ದುಡಿಮೆ ನಿಷೇಧ.
* 24 ನೇ ವಿಧಿ:- ಅಪಾಯಕಾರಿ ಸ್ಥಳಗಳಲ್ಲಿ ಮಕ್ಕಳನ್ನು ನೇಮಿಸಿಕೊಳ್ಳದಂತೆ ನಿಷೇಧಿಸುತ್ತದೆ.
4) ಧಾರ್ಮಿಕ ಸ್ವಾತಂತ್ರ್ಯ(25-28):-
* 25 ನೇ ವಿಧಿ:- ಆತ್ಮ ಸಾಕ್ಷಿ ಸ್ವಾತಂತ್ರ,ಒಂದು ಧರ್ಮವನ್ನು ಪಾಲಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ.
* 26 ನೇ ವಿಧಿ:- ಧಾರ್ಮಿಕ ವಿಚಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯ.
* 27 ನೇ ವಿಧಿ:- ಒಂದು ನಿರ್ದಿಷ್ಟ ಧರ್ಮದ ಪೋಷಣೆಗಾಗಿ ತೆರಿಗೆ ಪಾವತಿಸುವ ಸ್ವಾತಂತ್ರ್ಯ.
* 28ನೇ ವಿಧಿ:- ಧಾರ್ಮಿಕ ಬೋಧನಾ ಸ್ವಾತಂತ್ರ
5) ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು(29-30 ನೇ ವಿಧಿ):-
* 29 ನೇ ವಿಧಿ:- ಅಲ್ಪಸಂಖ್ಯಾತರ ಹಿತಾಸಕ್ತಿ ಸಂರಕ್ಷಣೆ.
* 30 ನೇ ವಿಧಿ:- ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಅಲ್ಪಸಂಖ್ಯಾತ ಹಕ್ಕು .
6) ಸಂವಿಧಾನದ ಪರಿಹಾರ ಹಕ್ಕು(32):-
* ಯಾವುದೇ ವ್ಯಕ್ತಿ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಒಳಗಾದರೆ ಅಂತಹ ವ್ಯಕ್ತಿಯು 32ನೇ ವಿಧಿ ಅಡಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗುವಬಹುದು.
* 32ನೇ ವಿಧಿ ಅಡಿಯಲ್ಲಿ ರಿಟ್ಗಳನು ಹೊರಡಿಸಲಾಗುತ್ತದೆ.
-: ರಿಟ್ಗಳು:-
1) ಬಂದಿ ಪ್ರತ್ಯಕ್ಷ ಕರಣ(Habeas corpus):-
ಬಂಧನಕ್ಕೊಳಗಾದ ವ್ಯಕ್ತಿಯನ್ನು 24 ಗಂಟೆ ಒಳಗಾಗಿ ಹತ್ತಿರದ ನ್ಯಾಯಾಲಯ/ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು.
2) ಪರಮಾದೇಶ( Mandamus):-
ತನ್ನ ಕರ್ತವವನ್ನು ನಿರ್ವಹಿಸದೆ ಇರುವ ಸರ್ಕಾರಿ ಅಧಿಕಾರಿ/ಸಾರ್ವಜನಿಕ ಪ್ರಾಧಿಕಾರಕ್ಕೆ ಅದನ್ನು ನಿರ್ವಹಿಸುವಂತೆ ನ್ಯಾಯಾಲಯಕ್ಕೆ ಆದೇಶಿಸುತ್ತಾರೆ.
3) ಉತ್ಪ್ರೇಕ್ಷಣಾಲೇಖ(Certiorari):-
ಕೆಳ/ಅದೀನ ನ್ಯಾಯಾಲಯಗಳಿಂದ ಪ್ರಕರಣಗಳನ್ನು ಉನ್ನತ ನ್ಯಾಯಾಲಯಗಳಿಗೆ ವರ್ಗಾಯಿಸುವಂತೆ ಹೊರಡಿಸುವ ಆಜ್ಞೆ.
4) ಪ್ರತಿಬಂಧಕಾಜ್ಞೆ( Prohibition):-
ಕೆಳ ನ್ಯಾಯಾಲಯಗಳು ತನ್ನ ಕಾರ್ಯ ವ್ಯಾಪಿಯನ್ನು ಮೀರದಂತೆ ಅವುಗಳಿಗೆ ಸರ್ವೋಚ್ಚ ನ್ಯಾಯಾಲಯ/ಹೈಕೋರ್ಟ್ ನೀಡುವ ಆಜ್ಞೆ ಇದಾಗಿದೆ.
5) ಕೋ- ವಾರೆಂಟೋ(Quo-warranto):-
ಈ ವಿಶೇಷ ಆನೆಯನ್ನು ಕಾನೂನುಬಾಹಿರವಾಗಿ ಒಂದು ಸಾರ್ವಜನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿಯ ವಿರುದ್ಧ ಹೊರಡಿಸಬಹುದು.