-:ಹಾವೇರಿ:-
* 1997 ರಲ್ಲಿ ಧಾರವಾಡದಿಂದ ವಿಭಜನೆ ಮಾಡಿ ರಚಿಸಲಾಯಿತು.
* ಶೇಕಡ 70%ರಷ್ಟು ಕೃಷಿಯನ್ನು ಅವಲಂಬಿಸಿದ್ದಾರೆ.
* ಜಿಲ್ಲೆಯ ವಿಶೇಷತೆ ಸುಧಾರಿತ ಹೈಬ್ರೀಡ್ ಬೀಜಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾರೆ.
* ಬಂಕಾಪುರ ನಗರೇಶ್ವರ ದೇವಾಲಯ
* ದೇವಗುಡ್ಡದ ಮೈಲಾರಲಿಂಗೇಶ್ವರ ದೇವಾಲಯ
* ಚಾಲುಕ್ಯರ ಕಾಲದ ಸಿದ್ಧೇಶರ ದೇವಾಲಯ
* ಗೋಟಗೋಡಿ ಯಲ್ಲಿರುವ ‘ಉತ್ಸವ ರಾಕ್ ಗಾರ್ಡನ್’ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದೆ.
-> ಇಲ್ಲಿರುವ ಶಿಲ್ಪಕಲೆಯ ವಿಗ್ರಹಗಳನ್ನು ನಿರ್ಮಿಸಿದ – ಸೊಲಬಕ್ಕನವರ
* ಶಿಶುನಾಳ ಶರೀಫ್,ಸರ್ವಜ್ಞ, ಕನಕದಾಸ( ಬಾಡ ಗ್ರಾಮ) ಹಾವೇರಿ ಜಿಲ್ಲೆಯವರು.
* ರಾಣೆಬೆನ್ನೂರು ವನ್ಯಮೃಗಧಾಮವಿರುವುದು.
* ಹಾವೇರಿ ಜಿಲ್ಲೆಯ ಕುಮಾರಪಟ್ಟಣಂನಲ್ಲಿ grasim ಕಾರ್ಖಾನೆ ಇದೆ.
-:ಗದಗ್ ಜಿಲ್ಲೆ:-
* 1997 ರಲ್ಲಿ ಧಾರವಾಡ ಜಿಲ್ಲೆಯನ್ನು ವಿಭಜಿಸಿ ಗದಗ್ ಜಿಲ್ಲೆಯನ್ನು ರಚಿಸಲಾಯಿತು.
* ಚಾಲುಕ್ಯರ ಅರಸ ನಿರ್ಮಿಸಿದ ವೀರನಾರಾಯಣ ಮತ್ತು ತ್ರಿಕೋಟೇಶ್ವರ ದೇವಾಲಯಗಳು ಕಲೆ ಮತ್ತು ವಾಸ್ತುಶಿಲ್ಪದ ಅದ್ಭುತಗಳಾಗಿವೆ.
* ಭಾರತದ ಮೊದಲ ಸಹಕಾರಿ ಸಂಸ್ಥೆ ಕಣಗಿನಹಾಳದಲ್ಲಿ ಆರಂಭವಾಯಿತು.
* ಕುಮಾರವ್ಯಾಸ ಗದುಗಿನ ವೀರ ನಾರಾಯಣನನ್ನು ನೆನೆಯುತ್ತಾ ಕಾವ್ಯ ರಚಿಸಿದ ಸಾಹಿತ್ಯ ಇತಿಹಾಸವು ಈ ಸ್ಥಳಕ್ಕೆ ಇದೆ.
* ಕರ್ನಾಟಕ ಭಾರತ ಕಥಾಮಂಜರಿ ಯು “ಕುಮಾರವ್ಯಾಸ ಭಾರತ” ಎಂದೇ ಪ್ರಸಿದ್ಧಿಯಾಗಿದೆ.
-:ವಿಜಯಪುರ ಜಿಲ್ಲೆ:-
* ಪಿಸುಗುಟ್ಟುವ ಗುಮ್ಮಟ ಗೋಲ್ ಗುಮ್ಮಟ ಇರುವ ಸ್ಥಳ.
* ಯಾವ ಮೊಘಲನ ಸುಲ್ತಾನನಿಂದ ಆದಿಲ್ ಶಾಹಿ ಮನೆತನವು ಕೊನೆಗೊಂಡಿತು?
-> ಔರಂಗಜೇಬ್
* 1724 ರಲ್ಲಿ ವಿಜಯಪುರ ನಿಜಾಮರ ವಶವಾಯಿತು.
* 1760ರಲ್ಲಿ ನಿಜಾಮನಿಂದ ಮರಾಠರ ಪೇಶ್ವೆ ವಶಪಡಿಸಿಕೊಂಡನು.
* 1818ರಲ್ಲಿ ಬ್ರಿಟಿಷರ ವಶವಾಯಿತು
* 1956 ರಲ್ಲಿ ಕರ್ನಾಟಕದಲ್ಲಿ ವಿಲೀನವಾಯಿತು.
* ಆದಿಲ್ ಶಾಹಿ ಅರಸರು 1656 ರಲ್ಲಿ ಗೋಳಗುಮ್ಮಟವನ್ನು ಕಟ್ಟಿಸಿದರು.
* ಗೋಲ್ ಗುಮ್ಮಟ ಭಾರತದ ಅತಿ ದೊಡ್ಡ ಗುಮ್ಮಟವಾಗಿದೆ ಜಗತ್ತಿನಲ್ಲಿ ಎರಡನೆಯ ದೊಡ್ಡ ಗುಮ್ಮಟವಾಗಿದೆ.
* ಇಬ್ರಾಹಿಂ ಆದಿಲ್ ಶಾಹಿ ಬರೆದ ಕೃತಿಗಳು-ಕಿತಾಬ್ ಈ ನವರಸ್ ಇದರಲ್ಲಿ ಸರಸ್ವತಿ ಮತ್ತು ಗಣಪತಿಯ ಸ್ತೋತ್ರ ಬರೆದಿದ್ದಾನೆ.
-:ಬಾಗಲಕೋಟೆ ಜಿಲ್ಲೆ:-
* ವಿಜಯಪುರ ಜಿಲ್ಲೆಯನ್ನು 1997ರಲ್ಲಿ ವಿಭಜಿಸಿ ಬಾಗಲಕೋಟೆ ಜಿಲ್ಲೆಯನ್ನು ರಚಿಸಲಾಯಿತು.
* ಚಾಲುಕ್ಯರ ರಾಜಧಾನಿ -‘ಬಾದಾಮಿ’ ಇಲ್ಲಿದೆ.
* ಗುಳೇದಗುಡ್ಡ ಕಣಗಳ ನೇಯ್ಗೆಗೆ ಹೆಸರುವಾಸಿ.
* ಬಿಳಗಿಯ ಮೊಹರಂ ಹಬ್ಬದ ಆಚರಣೆಗೆ ಪ್ರಸಿದ್ಧಿಯಾಗಿದೆ.
* ಪ್ರಸಿದ್ಧ ಹಿಂದುಸ್ತಾನಿ ಗಾಯಕಿ ಮತ್ತು ನಟಿ ” ಅಮೀರಬಾಯಿ” ಕರ್ನಾಟಕದ ಬಿಳಗಿ ಪಟ್ಟಣದವರು.
* ಇಳಕಲ್ ನ ವಿಜಯ ಮಹಾಂತೇಶ್ವರ ಮಠ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ.
* ಇಳಕಲ್ ಸೀರಿಗೆ ಪ್ರಸಿದ್ಧಿ.
* ಜಮಖಂಡಿಯು ಪಟವರ್ಧನರ ವಶದಲ್ಲಿದ್ದ ಒಂದು ರಾಜ್ಯ ಸಂಸ್ಥಾನ.
* ಇಲ್ಲಿ ಅಬುಬಕರ್ ದರ್ಗಾ ಹೆಸರುವಾಸಿಯಾಗಿದೆ.
* ರಬಕ ಕವಿ- ಬನಹಟ್ಟಿ ನೇಯ್ಗೆಯ ಕೇಂದ್ರಗಳು,
* ಈ ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಗಳು-ಕೃಷ್ಣ, ಮಲಪ್ರಭಾ, ಘಟಪ್ರಭಾ.
* ಬಾಗಲಕೋಟೆ ವಿಭಾಗದ ರೈತರು” ಸಿದ್ದು ನ್ಯಾಮೇಗೌಡ” ಅವರ ನೇತೃತ್ವದಲ್ಲಿ ‘ಕೃಷ್ಣ ತೀರದ’ ರೈತರ ಸಂಘ ಕಟ್ಟಿಕೊಂಡು ಹಣ ಮತ್ತು ಸಾಮಗ್ರಿಯನ್ನು ಸಂಗ್ರಹಿಸಿ ಶ್ರಮದಾನದ ಮೂಲಕ “ಚಿಕ್ಕಪಡಸಲಗಿ”ಎಂಬಲ್ಲಿ ಬ್ಯಾರೇಜ್ ನಿರ್ಮಿಸಿದರು ಇದು ದೇಶದಲ್ಲಿ ಪ್ರಥಮ ಖಾಸಗಿ ಬ್ಯಾರೇಜ್ ಆಗಿದೆ.
* ಲಾಲ್ ಬಹದ್ದೂರ್ ಶಾಸ್ತ್ರಿ ಹೆಸರಿನ “ಆಲಮಟ್ಟಿ ಅಣೆಕಟ್ಟು” ಸಿದ್ಧಿಯಾಗಿದೆ.
-:ಬೆಳಗಾವಿ ಜಿಲ್ಲೆ:-
* ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಪಕ್ಕದಲ್ಲಿದೆ.
* ಬೆಳಗಾವಿ ಪ್ರಾಚೀನ ಹೆಸರು- ‘ವೇಣುಗ್ರಾಮ’ ಅಂದರೆ ಬಿದಿರು ಗ್ರಾಮ.
* ಬೆಳಗಾವಿ ಜಿಲ್ಲೆಯ ಪ್ರಾಚೀನ ಗ್ರಾಮ- ಹಲಸಿ( ಕದಂಬರ ಒಂದು ಶಾಖೆಯು ಇದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿತ್ತು)
* ಕಿತ್ತೂರಾಣಿ ಚೆನ್ನಮ್ಮನನ್ನು 1824ರಲ್ಲಿ ಸೋಲಿಸಿ ಬ್ರಿಟಿಷರು ಬೆಳಗಾವಿಯನ್ನು ವಸಪಡಿಸಿಕೊಂಡರು.
* ಯಡೂರಿನ ವೀರಭದ್ರ ದೇವಾಲಯ ಯಾವ ನದಿಯ ದಂಡೆಯ ಮೇಲಿದೆ?
-> ಕೃಷ್ಣ
* ಗೋಕಾಕ್ ಜಲಪಾತವು ಆಕರ್ಷಣೀಯವಾಗಿದೆ.
* 12ನೇ ಶತಮಾನದಲ್ಲಿ ನಿರ್ಮಿಸಿರುವ ಶಾಂತಿನಾಥ ದೇವಾಲಯ ಬೆಳಗಾವಿಯ ಯಾವ ಸ್ಥಳದಲ್ಲಿದೆ?
-> ಶೇಡಬಾಳ
* ಎಲ್ಲಮ್ಮನ ಗುಡ್ಡವು ಪ್ರಸಿದ್ಧ ರೇಣುಕಾ ಎಲ್ಲಮ್ಮನ ಸ್ಥಾನವಾಗಿದೆ.
* ರಾಣಿ ಚೆನ್ನಮ್ಮ ಯೂನಿವರ್ಸಿಟಿ ಇದೆ.
-:ಉತ್ತರ ಕನ್ನಡ:-
* ಭಾರತದ ಬೃಹತ್ ನೌಕಾನೆಲೆ ಸೀಬರ್ಡ್ ಕಾರವಾರದಲ್ಲಿದೆ.
* ಜಿಲ್ಲೆಯ ಒಟ್ಟು ವಿಸ್ತೀರ್ಣದಲ್ಲಿ ಶೇಕಡ 70ರಷ್ಟು ಅರಣ್ಯ ಪ್ರದೇಶವಿದೆ.
* ಮೀನುಗಾರಿಕೆ ಇಲ್ಲಿನ ಜನರ ಪ್ರಮುಖ ಉದ್ಯೋಗ,
* ಈ ಜಿಲ್ಲೆಯ ವಾರ್ಷಿಕ 3000 ಮೀಟರ್ ಮಳೆಯಾಗುತ್ತದೆ.
* ಯಾವ ಪ್ರವಾಸಿಗ ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸವಿದ್ದ ಎಂದು ಹೇಳಲಾಗಿದೆ?
-> ಮೊರಾಕೋದ ಇಬನ್ ಬಟೂಟ
* ಇದು ಬನವಾಸಿಯ ಕದಂಬರ ರಾಜಧಾನಿಯಾಗಿತ್ತು.
* ಇದು 1750 ರಲ್ಲಿ ಮರಾಠರ ವಶವಾಯಿತು.
* 1799 ರಲ್ಲಿ ಬ್ರಿಟಿಷರು ವಶಪಡಿಸಿಕೊಂಡರು 1860ರಲ್ಲಿ ಮುಂಬೈ ಪ್ರಾಂತ್ಯಕ್ಕೆ ಸೇರ್ಪಡೆ.
* ರವೀಂದ್ರನಾಥ ಟ್ಯಾಗೋರ್ 1982 ರಲ್ಲಿ ಇಲ್ಲಿಗೆ ಭೇಟಿ ನೀಡಿದ್ದರು.
* ಕೈಗಾ ಅಣುಸ್ಥಾವರ ಕಾಳಿ ನದಿಯ ಎಡದಂಡೆಯ ಮೇಲಿದೆ.
* ಪ್ರಮುಖ ಬಂದರುಗಳು – ಭಟ್ಕಳ, ಹೊನ್ನಾವರ, ಕಾರವಾರ, ತದಡಿ, ಬೇಲಿಕೆರೆ(ಸಾಗರ ಮಾಲ ಯೋಜನೆಗೆ ಸೇರಿದ ಬಂದರು)
* ಈ ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಗಳು – ಅಘನಾಶಿನಿ,ಶರಾವತಿ, ಕಾಳಿ, ಗಂಗಾವಳಿ
-:ಕಲ್ಬುರ್ಗಿ ವಿಭಾಗ:-
* ಕಲ್ಬುರ್ಗಿ ವಿಭಾಗದಲ್ಲಿ ಜಿಲ್ಲೆಗಳು -07 -ಬಳ್ಳಾರಿ, ಕಲ್ಬುರ್ಗಿ, ಬೀದರ್,, ರಾಯಚೂರು, ಕೊಪ್ಪಳ, ಯಾದಗಿರಿ, ವಿಜಯನಗರ.
* ಕರ್ನಾಟಕದ ಸರ್ಕಾರವು 2000ರಲ್ಲಿ ರಾಜ್ಯದಲ್ಲಿ ಕಲಬುರ್ಗಿ ವಿಭಾಗವು ಹಿಂದುಳಿದಿರುವಿಕೆಯನ್ನು ಕಂಡು ಯಾರ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಅಸಮಾನತೆ ಅಧ್ಯಯನ ಉನ್ನತಾಧಿಕಾರಿ ಸಮಿತಿಯನ್ನು ನೇಮಿಸಿತು.
-> ಡಿ ಎಂ ನಂಜುಂಡಪ್ಪ
* ಕಲ್ಬುರ್ಗಿ ವಿಭಾಗದ ಜಿಲ್ಲೆಗಳಿಗೆ ವಿಶೇಷ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸಂವಿಧಾನದ ಅನುಚ್ಛೇದ 371( ಜೆ ) ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಿದೆ.
* ಕಲ್ಬುರ್ಗಿ ವಿಭಾಗ 1948ರಲ್ಲಿ ನಿಜಾಂ ಸಂಸ್ಥಾನ ಭಾರತದ ರಾಜ್ಯದಲ್ಲಿ ವಿಲೀನಗೊಂಡಿತು.
* ರಾಜ್ಯ ಪುನರ್ ವಿಂಗಡಣೆ ಯೋಜನೆಯ ಪ್ರಕಾರ 1956 ರಲ್ಲಿ ನಿಜಾಂ ಸಂಸ್ಥಾನದ ವರ್ಷದಲ್ಲಿದ್ದ ಬೀದರ್, ಕಲ್ಬುರ್ಗಿ, ರಾಯಚೂರು ಜಿಲ್ಲೆಗಳು ಕರ್ನಾಟಕದಲ್ಲಿ ವಿಲೀನಗೊಂಡವು.
* ಬಹುಮನಿ ಮತ್ತು ವಿಜಯನಗರ ಆಳ್ವಿಕೆಯ ನಂತರ ಅನೇಕ ಪಾಳೇಗಾರರು ಈ ಪ್ರದೇಶದಲ್ಲಿ ಸ್ವತಂತ್ರರಾದರೂ ಅವರಲ್ಲಿ ಹರಪನಹಳ್ಳಿ, ಜರೀಮಲೆ, ಸಂಡೂರು,ಸುರಪುರ ಪಾಳೆಗಾರರು ಪ್ರಸಿದ್ಧರಾಗಿದ್ದಾರೆ.
* ಸುರಪುರ ನಾಯಕ ಕೃಷ್ಣಪ್ಪ ನಾಯಕ ಮಗ-ವೆಂಕಟಪ್ಪ ನಾಯಕ -(ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ತಿಳಿದುಕೊಂಡಿದ್ದ ವೆಂಕಟಪ್ಪ ನಾಯಕ ಬ್ರಿಟಿಷರ ವಿರುದ್ಧ ಹೋರಾಟಕ್ಳಿದರು.ಆದರೆ ವೆಂಕಟಪ್ಪ ನಾಯಕನನ್ನು ಸೆರೆಹಿಡಿದ ಬ್ರಿಟಿಷರು ಸುರಪುರವನ್ನು’ಹೈದರಾಬಾದ್ ನಿಜಾಮನಿಗೆ,ಕೊಡುಗೆಯಾಗಿ ನೀಡಿದರು ಹೀಗೆ ಬೀದರ್ ಕಲಬುರ್ಗಿ ರಾಯಚೂರು ಜಿಲ್ಲೆಗಳು ನಿಜಾಂ ಸಂಸ್ಥಾನದ ಭಾಗವಾದವು.ಈ ಜಿಲ್ಲೆಗಳು 1956 ರಲ್ಲಿ ಕರ್ನಾಟಕದಲ್ಲಿ ವಿಲೀನವಾದವು)
-:ಹೈದರಾಬಾದ್ ಕರ್ನಾಟಕ ಪ್ರದೇಶದ ವಿಮೋಚನಾ ಹೋರಾಟ:-
* ಹೈದರಾಬಾದ್ ಕರ್ನಾಟಕ ಸ್ವಾತಂತ್ರ್ಯ ಹೋರಾಟದ ನೇತೃತ್ವವನ್ನು ವಹಿಸಿದ್ದವರು- ಸ್ವಾಮಿ ರಮಾನಂದ ತೀರ್ಥರು
* ಸರ್ದಾರ್ ಶರಣಗೌಡ,ಇನಾಮ್ದಾರ್, ಶಿವಮೂರ್ತಿ ಅಳವಂಡಿ, ಶಿರೂರು ವೀರಭದ್ರಪ್ಪ, ಪ್ರಭುರಾಜ್ ಪಾಟೀಲ್, ಸಂಗನಾಳ ಪುಂಡಲಿಕಪ್ಪ ಇವರು ಹೈದರಾಬಾದ್ ಕರ್ನಾಟಕದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು.
* 1948 ರಲ್ಲಿ ಕೇಂದ್ರ ಸರ್ಕಾರ ನೇರ ಕಾರ್ಯಚರಣೆ(ಆಪರೇಷನ್ ಪೋಲೋ) ಮೂಲಕ ಸೆಪ್ಟೆಂಬರ್ 17ರಂದು ಭಾರತದ ರಾಜ್ಯದಲ್ಲಿ ವಿಲೀನಗೊಳಿಸಿದರು.
* ಆದಿಕವಿ ಪಂಪನಿಗೆ ಆಶ್ರಯ ನೀಡಿದ ದೊರೆ – ಅರಿ ಕೇಸರಿ
* ಪಂಪನ ಮಹಾಕಾವ್ಯ -ವಿಕ್ರಮಾರ್ಜುನ ವಿಜಯ
* ಕನ್ನಡದ ಮೂರು ರತ್ನತ್ರೆಯರು – ಪಂಪ,ಪೊನ್ನ, ರನ್ನ ವಿಭಾಗದವರು
* ಪಂಪ – ಅಣ್ಣಿಗೇರಿಯಲ್ಲಿ ಜನನ- ವೇಮಲವಾಡ – ಜೀವನ
* ರನ್ನ – ಮುಧೋಳ
* ಕನ್ನಡದ ಪ್ರಥಮ ವ್ಯಾಕರಣ ಗ್ರಂಥ- ಶಬ್ದಮಣಿ ದರ್ಪಣ(ಕರ್ತೃ- ಕೇಶಿರಾಜ) – ಕಲ್ಬುರ್ಗಿಯವರು
* ಕಲ್ಬುರ್ಗಿ ವಿಭಾಗದ ರಾಯಚೂರು ಜಿಲ್ಲೆಯ ದಾಸ ಸಾಹಿತ್ಯದ ತವರೂರು.
* ಬೀದರ್ ಜಿಲ್ಲೆ – ಬಿದರಿ ಕಲೆ
* ಕಿನ್ನಾಳದ -ಗೊಂಬೆಗಳು
* ಕೊಪ್ಪಳದ – ಕೌದಿಗಳು
* ಕಲ್ಬುರ್ಗಿಯಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯವಿದೆ.
* ಕಲ್ಬುರ್ಗಿಯಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ.
* ರಾಯಚೂರು ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾಲಯ.
* ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ,
* ಬೀದರ್ನಲ್ಲಿ ಪಶು ಸಂಗೋಪನಾ, ಮೀನುಗಾರಿಕೆ ವಿಶ್ವವಿದ್ಯಾಲಯ.
* ಕಲ್ಬುರ್ಗಿಯಲ್ಲಿ ಪ್ರಸಿದ್ಧ ಬುದ್ಧ ವಿಹಾರವಿದೆ.
* ಬಳ್ಳಾರಿ ರಾಯಚೂರು ಕಲ್ಬುರ್ಗಿ ಬೀದರ್ನಲ್ಲಿ ವೈದ್ಯಕೀಯ ಕಾಲೇಜುಗಳಿವೆ.
* ಜನರಲ್ಲಿ ರಾಷ್ಟ್ರೀಯ ಚಳುವಳಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆರಂಭಿಸಲಾದ ವಾಚನಾಲಯ ಚಳುವಳಿ ಮತ್ತುಎರಡನೆಯದು ಮಕ್ಕಳಿಗೆ ಶಿಕ್ಷಣ ನೀಡುವುದಕ್ಕಾಗಿ ಮತ್ತು ಸ್ವಾತಂತ್ರ್ಯ ಹೋರಾಟದ ಬಗ್ಗೆ ತರಬೇತಿ ನೀಡಲು ರಾಷ್ಟ್ರೀಯ ಶಾಲೆಗಳನ್ನು ಸ್ಥಾಪಿಸಲ್ಪಟ್ಟವು. ಆನ ನಾಲ್ಕು ರಾಷ್ಟ್ರೀಯ ಶಾಲೆಗಳು.
1) ನೂತನ್ ವಿದ್ಯಾಲಯ(1907)
2) ಉಸ್ಮಾನಿಯಾ ರಾಷ್ಟ್ರೀಯ ಶಾಲೆ -ಚಿಂಚೋಳಿ
3) ವಿದ್ಯಾನಂದ ಗುರುಕುಲ (1922)
4) ಹಮ್ ಧರ್ಮ ರಾಷ್ಟ್ರೀಯ ಶಾಲೆ ರಾಯಚೂರು(1922)
* ಕಲ್ಬುರ್ಗಿ ವಿಭಾಗದ ಸ್ವಾತಂತ್ರ್ಯ ಚಳುವಳಿಗೆ ಪ್ರೇರಣೆಯಾದ ಎರಡು ಚಳುವಳಿಗಳು ಯಾವುವು?
-> ಆರ್ಯ ಸಮಾಜದ ಚಳುವಳಿ
-> ವಂದೇ ಮಾತರಂ ಚಳುವಳಿ
* ಕಲ್ಬುರ್ಗಿ ವಿಭಾಗದಲ್ಲಿ ಯಾರು ಯಾವ ಸಂಘವನ್ನು ಕಟ್ಟಿದರು.
-> ಮಹಾಗಾಂವ್ ನಲ್ಲಿ ಕಲ್ಯಾಣ ಶೆಟ್ಟಿ ಅವರು ಸ್ವಾತಂತ್ರ್ಯ ಹೋರಾಟ ನಡೆಸಲು ತರುಣ ಸಂಘವನ್ನು ಕಟ್ಟಿದರು.
* ಈ ತರುಣ ಸಂಘದ ಅಧ್ಯಕ್ಷರಾಗಿ ಮಹಾಗಾಂವ್ ನ ಚಂದ್ರಶೇಖರ್ ಪಾಟೀಲ್ ಅವರು ಅಧ್ಯಕ್ಷರಾಗಿ ಮುನ್ನಡೆಸಿದರು.
* ಶ್ರೀ ರಮಾನಂದ ತೀರ್ಥರು ಕಲ್ಬುರ್ಗಿ ವಿಭಾಗದ ಹೋರಾಟಗಾರರು.
* ರಾಯಚೂರು ಜಿಲ್ಲೆಯನ್ನು ವಿಭಜಿಸಿ ಕೊಪ್ಪಳ ಜಿಲ್ಲೆಯನ್ನು ರಚಿಸಿದ ವರ್ಷ- 1997
* ಗುಲ್ಬರ್ಗವನ್ನು ವಿಭಜಿಸಿ ಯಾದಗಿರಿ ಜಿಲ್ಲೆಯನ್ನು ರಚಿಸಿದ ವರ್ಷ ಏಪ್ರಿಲ್ 10 2010.
* ಸನ್ನತಿ ಕಲ್ಬುರ್ಗಿ ವಿಭಾಗದ ಪ್ರಸಿದ್ಧವಾದ ಸ್ಮಾರಕ
* ಕಲ್ಬುರ್ಗಿಯ ಮಾನ್ಯಖೇಟ ಯಾವ ನದಿಯ ದಡದಲ್ಲಿದೆ – ಕಾಗಿಣಾ ನ