ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ ( ಭಾಗ – 05

     -:ಕಲ್ಬುರ್ಗಿ ಜಿಲ್ಲೆ:-

* ಇದೊಂದು ಗಡಿ ಜಿಲ್ಲೆಯಾಗಿದೆ.

* 10 11ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದಿತ್ತು ಎಂದು ಹೇಳಲಾಗುತ್ತದೆ.

* 13ನೇ ಶತಮಾನದಲ್ಲಿ ಪ್ರಸಿದ್ಧ ಬಹುಮನಿ ಅರಸರ ರಾಜಧಾನಿಯಾಗಿತ್ತು.

* ಜಗತ್ತಿನಲ್ಲಿ ಅತಿ ಉದ್ದವಾದ ಅಂದರೆ 29 ಅಡಿ ಉದ್ದದ ಫಿರಂಗಿ ಬಹುಮನಿ ಕಾಲಕ್ಕೆ ಸೇರಿದ್ದು.

* ಇಲ್ಲಿ ಶರಣಬಸವೇಶ್ವರ ದೇವಾಲಯದ ಜಾತ್ರೆಯು ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ.

* ಕಲ್ಬುರ್ಗಿಯಲ್ಲಿ ಬುದ್ಧ ವಿಹಾರವನ್ನು ನಿರ್ಮಿಸಿದವರು -ಸಿದ್ದಾರ್ಥ್

* ಕಲ್ಬುರ್ಗಿಯ ಬುದ್ಧ ವಿಹಾರವನ್ನು ಉದ್ಘಾಟಿಸಿದವರು?

-> ಟಿಬೇಟಿಯನ್ ಧರ್ಮ ಗುರು ದಲೈಲಾಮ

* ಭೀಮಾ ನದಿ ತೀರದಲ್ಲಿ ಗಾಣಗಾಪುರವಿದೆ.( ಇದೊಂದು ಪವಿತ್ರ ಯಾತ್ರಾಸ್ಥಳವಾಗಿದೆ.)

* ಈ ಜಿಲ್ಲೆಯಲ್ಲಿ ಎರಡು ವಿಶ್ವವಿದ್ಯಾಲಯಗಳಿವೆ.

1) ಗುಲ್ಬರ್ಗ ವಿಶ್ವವಿದ್ಯಾಲಯ

2) ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ

* ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿರುವ ಕಂಬ- ಬಾಣಂತಿ ಕಂಬ (52 ಅಡಿ) -ಇದು ನೆಲದ ಮೇಲೆ ನಿಂತಿಲ್ಲ ಇದರ ಬುಡದಿಂದ ತೆಳ್ಳನೆಯ ಬಟ್ಟೆಯನ್ನು ಸರಿಸಬಹುದು.

* ಕಲ್ಬುರ್ಗಿ ಜಿಲ್ಲೆಯ ಮತ್ತೊಂದು ಚಾರಿತ್ರಿಕ ಸ್ಥಳ – ಮರತೂರು -ವಿಜ್ಞಾನಿೇಶ್ವರ ಹುಟ್ಟಿದ ಸ್ಥಳ.

* ಪ್ರಸಿದ್ಧ’ ಹಿಂದೂ ಸಂಹಿತೆ’ ಬರೆದವರು ವಿಜ್ಞಾನೇಶ್ವರ

      -: ಯಾದಗಿರಿ ಜಿಲ್ಲೆ :-

* ಇದೊಂದು ಮೂರು ತಾಲೂಕುಗಳನ್ನೊಳಗೊಂಡ ಚಿಕ್ಕ ಜಿಲ್ಲೆ – ಯಾದಗಿರಿ, ಶಹಾಪುರ,ಸುರಪುರ

* 2010ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು.

* ಈ ಪ್ರದೇಶವನ್ನು ಶಾತವಾಹನರು,ಚಾಲುಕ್ಯರು, ರಾಷ್ಟ್ರಕೂಟರು, ಆದಿಲ್ಸಾಯಿ, ನಿಜಾಮ್ ಶಾಹಿ ಅರಸರು ಆಳ್ವಿಕೆ ನಡೆಸಿದರು.

* ಯಾದಗಿರಿ ಜಿಲ್ಲೆಯಲ್ಲಿ ಅತ್ಯಂತ ಅಪರೂಪ ಮತ್ತು ಉಪಯುಕ್ತ ಯುರೇನಿಯಂ ಖನಿಜ ದೊರೆಯುತ್ತದೆ ಪರಿಷ್ಕರಿಸಿದ ಯುರೇನಿಯಂ ಖನಿಜವು ರಕ್ಷಣಾ ಉದ್ದೇಶಕ್ಕೆ ಮತ್ತು ವಿದ್ಯುತ್ ಉತ್ಪಾದನೆಗೆ ಉಪಯುಕ್ತವಾದ ಸಂಪನ್ಮೂಲವಾಗಿದೆ.

* ಯಾದಗಿರಿಯಲ್ಲಿರುವ ದೊಡ್ಡ ಕಾರ್ಖಾನೆ

1) ಕೋರ್ ಗ್ರೀನ್ ಶುಗರ್ & ಫ್ಯೂಯಲ್ಸ ಪ್ರೈವೇಟ್ ಲಿಮಿಟೆಡ್.

* ಶಹಾಪುರ ತಾಲೂಕಿನಲ್ಲಿ ಬೆಟ್ಟದ ಸಾಲು ಮಲಗಿದ ಬುದ್ಧನಂತೆ ಕಾಣುತ್ತದೆ.

     -: ಬೀದರ್ ಜಿಲ್ಲೆ :-

* ಈ ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಗಳು – ಮಾಂಜರಾ, ಕಾರಂಜಾ, ಮಲ್ಲಾಮರಿ, ಮಳಕಿನಾಲಾ

* ಬೀದರ್ ನಗರಕ್ಕೆ ಭೇಟಿ ನೀಡಿದ್ದ ಸಿಖ್ ಗುರು- ಗುರುನಾನಕ್ ( ಇಲ್ಲಿ ಬೃಹತ್ ಗುರುದ್ವಾರದಿದೆ. ಇದನ್ನು ಗುರುನಾನಕ ಜರಾ ಎಂದು ಕರೆಯಲಾಗುತ್ತದೆ.

* ಅತ್ಯಂತ ವಿಶಿಷ್ಠವಾದ ನರಸಿಂಹ ಜರಣಿ ಎಂಬ ಪವಿತ್ರ ಸ್ಥಳವಿದೆ.

* ಈ ಜಿಲ್ಲೆಯಲ್ಲಿ 435 ಚದರ ಕಿಲೋಮೀಟರ್ ಅರಣ್ಯ ಪ್ರದೇಶವಿದೆ.

* ಈ ಅರಣ್ಯ ಪ್ರದೇಶವನ್ನು ಮೀಸಲು ಅರಣ್ಯ, ಸಂರಕ್ಷಿತ , ಮತ್ತು ಮುಕ್ತ ಅರಣ್ಯ ಎಂದು ಮೂರು ಭಾಗಗಳನ್ನಾಗಿ ಮಾಡಲಾಗಿದೆ.

* ರಂಗೀನ್ ಮಹಲ್ ಬೀದರ್ ನಲ್ಲಿದೆ.

* ಇದು 1424 ರ ನಂತರ ಬಹುಮನಿ ಅರಸರ ರಾಜಧಾನಿಯಾಗಿತ್ತು.

     -: ರಾಯಚೂರು ಜಿಲ್ಲೆ:-

* ಈ  ಜಿಲ್ಲೆಯನ್ನು ದೋ-ಅಬ್ ಪ್ರದೇಶವೆಂದು ಕರೆಯಲಾಗಿದೆ.

* ದಕ್ಷಿಣದಲ್ಲಿರುವ ತುಂಗಭದ್ರಾ ಮತ್ತು ಉತ್ತರಕ್ಕಿರುವ ಕೃಷ್ಣಾ ನದಿಗಳ ನಡುವಿನ ಪ್ರದೇಶವಾಗಿದೆ.

* ಭತ್ತದ ಕಣಜ – ರಾಯಚೂರ

* ಇಲ್ಲಿ ನೂರಕ್ಕೂ ಹೆಚ್ಚು ಅಕ್ಕಿಯ ಮಿಲ್ ಗಳು ಇವೆ.

* ಸುಮಾರು 5000 ಟನ್ ಸಾಮರ್ಥ್ಯದ ಸೈತ್ಯಾಗಾರವನ್ನು ಇಲ್ಲಿ ಸ್ಥಾಪಿಸಲಾಗಿದೆ.

* ಇದೊಂದು ಗಡಿ ಜಿಲ್ಲೆಯಾಗಿದೆ.

* ಕೋಳಿ ಸಾಕಾಣಿಕೆಗೆ ಹೆಸರುವಾಸಿಯಾಗಿದೆ.

* ಈ ನಗರದಲ್ಲಿರುವ ಶಾಕೋತ್ಪನ್ನ ವಿದ್ಯುತ್ ಸ್ಥಾವರ ಬೃಹತ್ ಪ್ರಮಾಣದಲ್ಲಿ ವಿದ್ಯುತ್ ತಯಾರಿಸುತ್ತದೆ.

* ರಾಜ್ಯದಲ್ಲಿ ಬಳಕೆಯಾಗುತ್ತಿರುವ ಒಟ್ಟು ವಿದ್ಯುತ್ ನಲ್ಲಿ ಶೇಕಡ 48 ರಷ್ಟು ಇಲ್ಲಿದ್ದಲೇ ಬರುತ್ತದೆ.

* ದೇಶದ ಎಲ್ಲಾ ನಗರಗಳಿಗೂ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ರಾಯಚೂರು ನಗರದ ಮೇಲೆ ಹಾದು ಹೋಗುತ್ತದೆ.- ಹೈದರಾಬಾದ್ ಮುಂಬೈ ಚೆನ್ನೈ ಬೆಂಗಳೂರಿಗೆ ಸಂಪರ್ಕ ನೀಡುವ ರೈಲ್ವೆ ಮಾರ್ಗ ಇಲ್ಲಿದೆ.

* ತಾಲೂಕುಗಳು- ಸಿಂಧನೂರು ರಾಯಚೂರು ಲಿಂಗಸೂರ್ ದೇವದುರ್ಗ ಮಾನವಿ

     -: ಕೊಪ್ಪಳ ಜಿಲ್ಲೆ :-

* ಕೊಪ್ಪಳ ನಗರವನ್ನು ಜಯನಗರ ಕಾಶಿ ಎಂದು ಕರೆಯುತ್ತಾರೆ – ಜೈನರಿಗೆ ಇದು ಪವಿತ್ರ ಕ್ಷೇತ್ರವಾಗಿತ್ತು.

* ಮಾಲ್ಕಿ ಗುಂಡ ಗವಿಮಠದಲ್ಲಿ ಅಶೋಕನ ಶಿಲಾಶಾಸನಗಳು ದೊರೆತಿವೆ.

* 1857ರ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಕೊಪ್ಪಳ ಪ್ರಾಂತ್ಯದ ಮುಂಡರಗಿ ಭೀಮರಾವ್ರನ್ನು ಯೋಧ ಬಂಡೆದ್ದ ಬ್ರಿಟಿಷರ ಯುದ್ಧದಲ್ಲಿ ನಾನು ಬಲಿಯಾದನು.

* ಕೊಪ್ಪಳದ ಇಟಗಿಯಲ್ಲಿರುವ ಮಹಾದೇವ ದೇವಾಲಯವನ್ನು ದೇವಾಲಯಗಳ ಚಕ್ರವರ್ತಿ ಎಂದು ಕರೆಯಲಾಗುತ್ತದೆ.

* ಕಿನ್ನಾಳದಲ್ಲಿ ಮರದ ಆಟಿಕೆ ಮಾಡುವ ಸಾಂಪ್ರದಾಯಿಕ ಕಲಾವಿದರ ನೆಲೆಯಾಗಿದೆ ಗೊಂಬೆಗಳಿಗೆ ಪ್ರಸಿದ್ಧಿಯಾಗಿದೆ.

* ವಿಜಯನಗರ ಅರಸರ ಆರಂಭಿಕ ರಾಜಧಾನಿ ಆನೆಗೊಂದಿ ಕೊಪ್ಪಳ ಜಿಲ್ಲೆಯಲ್ಲಿದೆ.

* ಕೊಪ್ಪಳ ಪ್ರದೇಶವನ್ನು ತಿರುಳ್ ಗನ್ನಡ ಪ್ರದೇಶವೆಂದು ಕರೆಯಲಾಗುತ್ತದೆ.

     -: ಬಳ್ಳಾರಿ ಜಿಲ್ಲೆ :-

* ಬಳ್ಳಾರಿ ಜಿಲ್ಲೆಗೆ ಬಳ್ಳಾರಿ ಎಂದು ಹೆಸರು ಬರಲು ಕಾರಣವೇನು?

-> ಈ ನಗರದಲ್ಲಿ ದುರ್ಗಮ್ಮ ದೇವಾಲಯದಲ್ಲಿರುವ ದೇವತೆಯನ್ನು “ಬಳರಿ” ಎಂದು ಕರೆಯಲಾಗುತ್ತಿತ್ತು ಇದರಿಂದಾಗಿ ಈ ಜಿಲ್ಲೆಗೆ ಬಳ್ಳಾರಿ ಎಂದು ಹೆಸರು ಬಂದಿದೆ.

* 1953ರಲ್ಲಿ ಮೈಸೂರು ಸಂಸ್ಥಾನಕ್ಕೆ ಸೇರಿಸಲಾಯಿತು.

* 1956ರಲ್ಲಿ ಕಲ್ಬುರ್ಗಿ ವಿಭಾಗಕ್ಕೆ ಸೇರಿಸಲಾಯಿತು.

* ಹಂಪಿಯಲ್ಲಿರುವ ಉಗ್ರ ನರಸಿಂಹ ಅಜಾರ ರಾಮದೇವ್ ದೇವಾಲಯ ಕಮಲ್ ಮಹಲ್ ವಿರೂಪಾಕ್ಷ ದೇವಾಲಯ

* ಸಂಡೂರಿನ – ಕುಮಾರಸ್ವಾಮಿ ದೇವಾಲಯ

* ಕುರುವತ್ತಿಯ – ಮಲ್ಲಿಕಾರ್ಜುನ ದೇವಾಲಯ

* ಬಾಗಳಿಯ -ಕಲ್ಲೇಶ್ವರ ದೇವಾಲಯಗಳು ಪ್ರಸಿದ್ಧವಾಗಿದೆ

* “ತೋರಣಗಲ್ಲು” – ಬೃಹತ್ ಕೈಗಾರಿಕಾ ಕೇಂದ್ರವಾಗಿದೆ. -ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯು ಆಧುನಿಕತೆಯ ಸೂಚಿಯಾಗಿದೆ.

* ದೋಣಿ ಮಲ್ಲೇನಲ್ಲಿರುವ ಬೃಹತ್ ಎನ್ ಎಂ ಡಿ ಸಿ ಯು (National mineral development corporation)ಸಾರ್ವಜನಿಕ ವಲಯದ ಪ್ರಸಿದ್ಧ ಕಬ್ಬಿಣ ಅದಿರು ಹೊರ ತೆಗೆಯುವ ಉದ್ಯಮೆಯಾಗಿದೆ.

   -: ಇತಿಹಾಸವನ್ನು ಮೂರು ಪ್ರಧಾನ ಕಾಲಗಳಾಗಿ ವರ್ಗೀಕರಿಸಲಾಗಿದೆ:-

1) ಪ್ರಾಗೈತಿಹಾಸ ಕಾಲ ( pre -historic period)

2) ಪೂರ್ವಭಾವಿ ಇತಿಹಾಸ ಕಾಲ (proto historic period)

3) ಇತಿಹಾಸ ಕಾಲ (Historic period)

   -: ಪ್ರಾಗೈತಿಹಾಸ ಕಾಲದ 3 ಹಂತಗಳು :-

1) ಹಳೆ ಶಿಲಾಯುಗ

2) ಮಧ್ಯ ಶಿಲಾಯುಗ

3) ನವಾ ಶಿಲಾಯುಗ

  -: ಹಳೆಯ ಶಿಲಾಯುಗ :-

* ಮೊದಲ  ಬಾರಿಗೆ ಬೆಂಕಿಯ ಪರಿಚಯವಾದದ್ದು ಹಳೆಯ ಶಿಲಾಯುಗದಲ್ಲಿ

* ಹಳೆಯ ಶಿಲಾಯುಗದ ಪ್ರಮುಖ ನೆಲೆಗಳು ಯಾವುವು?

-> ಮಧ್ಯ ಪ್ರದೇಶ್   ಬೋಲಾನ್ ಕಣಿವೆ

-> ಕರ್ನಾಟಕದ  ಹುಣಸಿಗಿ ಮತ್ತು ಬೈಚವಾಳ ಪ್ರದೇಶ

-> ಆಂಧ್ರಪ್ರದೇಶದ ಕರ್ನೂಲ್ ಮತ್ತು ಅಮರಾವತಿ

-> ತಮಿಳುನಾಡಿನ ಅತ್ತಿರಾಮ್ ಪಕ್ಕಂ

* ಹಳೆಯ ಶಿಲಾಯುಗದ ಕಾಲವನ್ನು 5 ಲಕ್ಷ ವರ್ಷಗಳಿಂದ 12,000 ವರ್ಷಗಳವರೆಗೆ ಇದು ಮಾನವರ ಇತಿಹಾಸದ ಆರಂಭಿಕ ಹಂತವಾಗಿದೆ

   -: ಮಧ್ಯಶಿಲಾಯುಗ :-

* ಹಳೆಯ ಶಿಲಾಯುಗ ಮತ್ತು ನವಶಿಲಾಯುಗ ನಡುವಿನ ಸ್ಥಿತ್ಯಂತರ ಕಾಲವಾಗಿದೆ.

* ಈ ಯುಗವನ್ನು ಸೂಕ್ಷ್ಮ ಶಿಲಾಯುಗ ಎಂದು ಕರೆಯುವರು.

* ಮಧ್ಯ ಶಿಲಾಯುಗದ ಪ್ರಮುಖ ನೆಲೆಗಳು

-> ಮಧ್ಯಪ್ರದೇಶದ ಬಿಂಬೆಟ್ಕ, ಆದಮ್ ಗರ್

-> ಕರ್ನಾಟಕದ ಬ್ರಹ್ಮಗಿರಿ,ಕನಗನಹಳ್ಳಿ

-> ರಾಜಸ್ಥಾನದ ಬಾಗೋರ್,ಗಣೇಶ್ವರ

-> ಪಶ್ಚಿಮ ಬಂಗಾಳದ ಬಿರ್ ಬಾನ್ಪುರ

-> ಆಂಧ್ರ ಪ್ರದೇಶದ ವಾನ್ ಪಸಾರಿ

-> ಉತ್ತರ ಪ್ರದೇಶದ ಸರಾಯ್ – ನಹರರಾಯ್

* ಮಧ್ಯ ಶಿಲಾಯುಗದ ಕಾಲವು 12,000 ವರ್ಷಗಳಿಂದ ಒಂಬತ್ತು ಸಾವಿರ ವರ್ಷಗಳವರೆಗೆ ಇದ್ದಿದ್ದು ಸಾಮಾನ್ಯವಾಗಿ ಗುರುತಿಸುವುದು ಉಂಟು.

   -: ನವ ಶಿಲಾಯುಗ :-

* ಭಾರತ ಉಪಖಂಡದಲ್ಲಿ ಕೃಷಿಯ ಆರಂಭಿಕ ಕುರುಹುಗಳು ಕಂಡುಬಂದದ್ದು ಎಲ್ಲಿ?

-> ಪಾಕಿಸ್ತಾನದ ಮೆಹರಗರ್ ನೆಲೆಯಲ್ಲಿ

* ಕಾಶ್ಮೀರದ ” ಬುರ್ಜ್ ಹೋಮ್” ಪ್ರದೇಶದ ಜನರು ನೆಲದೊಳಗೆ ಗುಹೆಗಳನ್ನು ನಿರ್ಮಿಸಿಕೊಂಡಿದ್ದರು.

* ನವಾಸಿಲಯೋಗದಲ್ಲಿ ಪತ್ತೆಯಾದ ಆಯುಧ ಉತ್ಪಾದನಾ ನೆಲೆ?

-> ಬಳ್ಳಾರಿಯ ಸಮೀಪದ ಸಂಗನಕಲ್ಲು

* ನವಸಿಲ ಆಯೋಗದ ಪ್ರಮುಖ ನೆಲೆಗಳು ಯಾವುವು?

-> ಕರ್ನಾಟಕದ ಬನಹಳ್ಳಿ ಬ್ರಹ್ಮಗಿರಿ ಬೂದಿಹಾಳ ಹಳ್ಳೂರು ಪಿಕ್ಲಿಹಾಳ ಟಿ ನರಸೀಪುರ ಉತ್ನೂರು ಬಿಹಾರದ ಚಿರಾಂಡ್

* 9000 ದಿಂದ 5000 ವರ್ಷಗಳವರೆಗೆ ನವಶೀಲಯುಗದ ಕಾಲವಿತ್ತು.

   -: ಲೋಹಗಳ ಯುಗ :-

* ಮಾನವನು ಮೊಟ್ಟ ಮೊದಲ ಬಾರಿಗೆ ಬಳಸಿದ ಲೋಹ – ತಾಮ್ರ

* ಲೋಹಯುಗದ ಜನರು ತಾಮ್ರಕ್ಕೆ ತವರನ್ನು ಸೇರಿಸಿ ಕಂಚು ಉತ್ಪಾದಿಸುವುದನ್ನು ಕಲಿತರು.

* ಕಂಚು ತಾಮ್ರಕ್ಕಿಂತ ಗಡುಸಾದ ಮಿಶ್ರ ಲೋಹ

* ತಾಮ್ರ ಮತ್ತು ಕಂಚಿನ ಶಿಲಾಯುಗದ ಆಧಾರಗಳು ದೊರೆತಿರುವುದು -ಕರ್ನಾಟಕದ ಹಳ್ಳೂರು ಬನಹಳ್ಳಿ ಬ್ರಹ್ಮಗಿರಿ.

  -: ಕಬ್ಬಿಣ ಯುಗ :-

* 3500 ವರ್ಷಗಳ ಹಿಂದೆಯೇ ದಕ್ಷಿಣ ಭಾರತದಲ್ಲಿ ಬಳಕೆಗೆ ಬಂದಿತ್ತು

* ಕಬ್ಬಿಣ ಯುಗಕ್ಕೆ ಸೇರಿದ ಕರ್ನಾಟಕದ ಪ್ರಮುಖ ನಲೆಗಳು – ಬನಹಳ್ಳಿ ,ಹಿರೇ ಬೆನಕಲ್ಲು , , ಹೆಗಡೆಹಳ್ಳಿ , ನರಸೀಪುರ ,ಹೆಮ್ಮಿಗ,ಹಳ್ಳೂರು,ಜಡಿಗೇನಹಳ್ಳಿ, ಸಾವನದುರ್ಗ, ಹುತ್ರಿದುರ್ಗ,ಪಾಂಡವರ ದಿಣ್ಣೆ ಮೊದಲಾದವುಗಳು.

* ಸರಿಸೃಪ -ನೆಲದ ಮೇಲೆ ಹರಿದಾಡುವ ಜೀವಿಗಳು. ಉದಾಹರಣೆ: ಹಾವುಗಳು

* ಉಭಯವಾಸಿ- ನೀರು ಮತ್ತು ನೆಲ ಎರಡರ ಮೇಲೆ ವಾಸಿಸುವ ಜೀವಿಗಳು. ಉದಾಹರಣೆ: ಆಮೆ ,ಕಪ್ಪೆ

*  ಸಸ್ತನಿ – ತನ್ನ ಮರಿಗಳಿಗೆ ಹಾಲುಣಿಸುವ ಜೀವಿಗಳು. ಉದಾಹರಣೆ: ಹಸು,ಮೇಕೆ

* ದ್ವಿಪಾದಿ – ಎರಡು ಕಾಲುಗಳಲ್ಲಿ ನೆಲದ ಮೇಲೆ ಓಡಾಡುವ ಜೀವಿ. ಉದಾಹರಣೆ: ಮನುಷ್ಯ,ಗೊರಿಲ್ಲಾ

* ಆಧುನಿಕ ಮಾನವರು ಎಲ್ಲಿ ದೈಹಿಕ ರಚನೆಯನ್ನು ಮೊಟ್ಟಮೊದಲು ಹೊಂದಿದ್ದರು?

-> ದಕ್ಷಿಣ ಆಫ್ರಿಕಾ( ಇವರು ಆಫ್ರಿಕಾದಿಂದ ಪ್ರಪಂಚದ ವಿವಿಧ ಭಾಗಗಳಿಗೆ ವಲಸೆ ಹೋಗಿ ನೆಲೆಸಿದರೆಂದು ಹೇಳಲಾಗುತ್ತದೆ)

 

 

 

 

WhatsApp Group Join Now
Telegram Group Join Now

Leave a Comment