ಜಗತ್ತಿನ ಪ್ರಮುಖ ರಿಲಿಜಿನಗಳಲ್ಲಿ ಮುಖ್ಯವಾದವು ಯಹೂದಿ, ಪಾರ್ಸಿ, ಕ್ರೈಸ್ತ, ಮತ್ತು ಇಸ್ಲಾಂ ಇವು ಪಾಶ್ಚಾತ್ಯ ಪ್ರದೇಶದಗಳಲ್ಲಿ ಜನ್ಮತಾಳಿದವು.ಇವುಗಳನ್ನು ಸೆಮಿಟಿಕ್ ರಿಲಿಜಿನ್ ಗಳು ಎಂದು ಕರೆಯುವರು. ಇವು ಜಗತ್ತಿನಲ್ಲಿ ಅನೇಕ ರಾಷ್ಟ್ರಗಳಲ್ಲಿ ಹರಡಿಕೊಂಡಿವೆ.
* ರಿಲಿಜನ್ಗಳೆಂದರೆ ಈ ಬ್ರಹ್ಮಾಂಡವನ್ನು ಸೃಷ್ಠಿಸಿದ ಗಾಡ್ ನು ಮಾನವ ಪ್ರವಾದಿಗಳಿಗೆ ತಿಳಿಸಿದ ಸತ್ಯವಾದ ಮಾರ್ಗಗಳು
-: ಯಹೂದಿ ರಿಲಿಜನ್ :-
* ರಿಲಿಜನ ಎಂದರೆ ಒಂದಷ್ಟು ನಿಯಮಗಳಿಗೆ ಒಳಪಟ್ಟ ಒಂದುವ್ಯವಸ್ಥೆ
* ಅತಿ ಹಳೆಯ ರಿಲಿಜನ್ – ಯಹೂದಿ / ಜುಡಾಯಿಸಂ
* ಯಾಹೂದಿ ರಿಲಿಜನ್ ಅನುಯಾಯಿಗಳನ್ನು – ಜ್ಯೂಸ್/ ಯಹೂದ್ಯರು ಎಂದು ಬರೆಯುವರು.
* ಯಹೂದಿಯವರ ಅದಿಮ ಭಾಷೆ – ಹಿಬ್ರೂ.
* ಇವರ ದೇವರು – ಯಾವೇ
* ಇವರ ಮೂಲಪುರುಷ – ಅಬ್ರಾಹಂ/ ಏಬ್ರಹಾಂ
* ಪ್ರವಾದಿ – ಮೋಸೆಸ್
-: ಯಹೂದ್ಯರ ಇತಿಹಾಸ :-
* 3000 ವರ್ಷಗಳ ಹಿಂದೆ ಪ್ರಾಚೀನ ಇಸ್ರೇಲ್ ನಲ್ಲಿ 10-12 ಬುಡಕಟ್ಟುಗಳು ವಾಸವಿದ್ದವು ಇವು ನಿರಂತರ ಕಾಳಗದಲ್ಲಿ ತೊಡಗಿಕೊಂಡಿದ್ದವು ಡೇವಿಡ್ ಎಂಬಾತನನ್ನು ಯಹೂದಿಗಳು ತಮ್ಮ ಆದಿ ದೊರೆಯೆಂದು ಭಾವಿಸುತ್ತಾರೆ ಈತ ತನಗಿಂತ ಶಕ್ತಿ ಮತ್ತು ಆಕಾರದಲ್ಲಿ ಶಕ್ತಿಯುತನಾದ ಗೋಲಾಯತ್ ಎಂಬಾತನನ್ನು ಸೋಲಿಸಿ ಯಹೂದಿಗಳಿಗೆ ಅರಸನಾದನು ಈತನ ಮಗ ಸಾಲೊಮನ್ ಪ್ರಸಿದ್ಧ ದೊರೆಯಾಗಿ ದೀರ್ಘಕಾಲ ರಾಜ್ಯಭಾರ ಮಾಡಿದನು.
* ಸಾಲಿವಾನ ಶಕೆ ಪೂರ್ವ 931ರಲ್ಲಿ ಸಾಲೋಮನ್ ಸತ್ತ ನಂತರ ಯಹೂದಿ ರಾಜ್ಯ ಒಡೆದು ಎರಡು ಪ್ರಾಂತ್ಯಗಳಾದವು ಒಂದು ಇಸ್ರೇಲ್ ಇನ್ನೊಂದು ಜುಡಾ
* ಯಹೂದ್ಯರ ರಿಲಿಜನ್ ಗ್ರಂಥ – ಟೋರಾಗಳು
-: ಯಹೂದರ ಮೇಲೆಆಕ್ರಮಣ :-
* ಸಾಲಿವಾನ ಶಕ ಪೂರ್ವ 334 ರಲ್ಲಿ ಮೆಸಿಡೋನಿಯಾದ ಚಕ್ರವರ್ತಿ ಅಲೆಕ್ಸಾಂಡರ್ ಬ್ಯಾಬಿಲೋನಿಯನ್ನರ ಸಾಮ್ರಾಜ್ಯದ ಮೇಲೆ ಇದ್ದ ಸಾರಿ ಸೋಲಿಸಿದನು. ಇದರಿಂದ ಯಹೂದ್ಯರು ಮತ್ತೆ ಸಂಕಷ್ಟಕ್ಕೆ ಸಿಲುಕಿದರು. ಇದರಿಂದ ಯುರೋಪ್, ಏಷ್ಯಾ, ಆಫ್ರಿಕಾದಂತ ಖಂಡಗಳಲ್ಲಿ ಹರಡಿಕೊಂಡರು.
* ಸಾಲಿವಾನ ಶಕ ಪೂರ್ವ 198 ರ ಸುಮಾರಿಗೆ ಯಹೂದ್ಯರಲ್ಲೆ 02 ಬಣಗಳಾದವು ಇವುಗಳಲ್ಲಿ ಒಂದು ಬಣವು ಮುಂದೆ ‘ ಕ್ರಿಶ್ಚಿಯಾನಿಟಿ’ ಎಂಬ ಹೊಸ ರಿಲಿಜಿಯನ್ ಹುಟ್ಟಿಕೊಂಡಿತು. ಕ್ರಿಶ್ಚಿಯಾನಿಟಿಯನ್ನು ಬೋಧಿಸಿದ ಏಸುಕ್ರಿಸ್ತರು ಮೂಲತಃ ಯಹೂದಿ ಜನಾಂಗದಿಂದಲೇ ಬಂದವರು.
-: ಇಸ್ರೇಲ್ ಉದಯ :-
* ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿಯ ಸರ್ವಾಧಿಕಾರಿಯಾಗಿದ್ದ ಹಿಟ್ಲರ್ ಸುಮಾರು 60 ಲಕ್ಷ ಯಹೂದಿಗಳನ್ನು ಕೊಲ್ಲಿಸಿದನು ಎರಡನೇ ಮಹಾಯುದ್ಧ ಮುಗಿದ ನಂತರ ವಿಶ್ವಸಂಸ್ಥೆಯ ನೆರವಿನೊಂದಿಗೆ ಯಹೂದ್ಯರಿಗೆಂದೇ ” ಇಸ್ರೇಲ್ ” ಎಂಬ ರಾಷ್ಟ್ರವನ್ನು ನಿರ್ಮಿಸಲಾಯಿತು ಪ್ರಪಂಚದಾದ್ಯಂತ ಹರಡಿ ಹೋಗಿದ್ದೆ ಯಹೂದ್ಯರಿಗೆ 3000 ವರ್ಷಗಳ ನಂತರ ತಮ್ಮದೆಂಬ ಮಾತೃಭೂಮಿ ಸಿಕ್ಕಿತು.
* ಹಿಬ್ರೂ ಬೈಬಲ್(ಯಹೂದಿಗಳ ಮೂಲ ಪವಿತ್ರ ಗ್ರಂಥ) ಇದನ್ನು Old testament ಎನ್ನುವರು ಇದರಲ್ಲಿ ಮೂರು ವಿಭಾಗಗಳಿದ್ದವು.ಕಾನೂನು,ಬರಹಗಳು, ಹಾಗೂ ಪ್ರವಾದಿ ಮೋಸೆಸ ಬರಹಗಳು.
-: ಯಹೂದ್ಯರ 10 ಕಟ್ಟಳೆಗಳು :-
* ಬೇರೆ ದೇವರಿಲ್ಲ
* ಮೂರ್ತಿ ಪೂಜೆ ಸಲ್ಲದು
* ದೇವರ ಹೆಸರಿಗೆ ಕಳಂಕಬೇಡ
* ಕಳ್ಳತನ ಮಾಡಬಾರದು
* ಕೊಲೆ ಮಾಡಬಾರದು
* ಇತರರ ಬಗ್ಗೆ ಅಸೂಯೆ ಪಡಬಾರದು
* ಸುಳ್ಳು ಹೇಳಬಾರದು
* ತಂದೆ ತಾಯಿಯನ್ನು ಗೌರವಿಸುವುದು
* ವಸ್ತುಗಳ ಕಲಬೆರಿಕೆ ಮಾಡಬಾರದು
* ಸಬ್ಬತ್ ದಿನವನ್ನು ಪವಿತ್ರವೆಂದು ಕಾಣುವುದು.
-: ಪಾರ್ಸಿ ರಿಲಿಜಿನ್ :-
* ಪಾರ್ಸಿ ರಿಲಿಜಿನ್ ಪರ್ಶಿಯಾ ( ಇರಾನ್ ) ದಲ್ಲಿ ಪ್ರಾರಂಭವಾದರೂ ಭಾರತದಲ್ಲಿ ತನ್ನದೇ ಆದ ಪ್ರಭಾವವನ್ನು ಹೊಂದಿದೆ.
* ಪಾರ್ಸಿ ರಿಲಿಜಿನನ್ನು ಸಾ.ಶ.ಪೂ ಆರನೇ ಶತಮಾನದಲ್ಲಿ ಜರತುಷ್ಟ ಸ್ಥಾಪಿಸಿದನು.ಈತ ಇರಾನಿನ ಒಬ್ಬ ಪ್ರವಾದಿ ಹಾಗೂ ಧಾರ್ಮಿಕ ಸುಧಾರಕ.
* ಈ ರಿಲಿಜಿನ ಅನ್ನು ” ಜೊರಾಸ್ಟ್ರಿಯನ್” ಎಂದು ಕರೆಯಲಾಗುತ್ತದೆ.
* ಪಾರ್ಸಿ ರಿಲೀಜಿನ್ ಗ್ರಂಥವಾದ ಅವೆಸ್ತಾದಲ್ಲಿ ಬರುವ ಪದ್ಯ/ಶ್ಲೋಕರೂಪದ ಸಾಹಿತ್ಯವನ್ನು ‘ ಗಾಥಾ’ಎನ್ನುತ್ತಾರೆ.
* ಸಾ.ಶ.ಪೂ ನಾಲ್ಕನೇ ಶತಮಾನದಲ್ಲಿ ಮ್ಯಾಸಿಡೋನಿಯಾದ ಅಲೆಕ್ಸಾಂಡರ್ ಮಾಡಿದ ದಾಳಿಯಿಂದ ಪಾರ್ಸಿ ರಿಲಿಜಿನ್ ತೊಂದರೆಯನ್ನು ಅನುಭವಿಸಿತ್ತು ಪ್ರಾಚೀನ ಕಾಲದ ಅವೆಸ್ತಾ ಮುಂದೆ ಸಿಗದಂತೆ ಸಂಪೂರ್ಣವಾಗಿ ನಾಶವಾಯಿತು.
-: ಪಾರ್ಸಿ ರಿಲಿಜಿನ್ ನಂಬಿಕೆಗಳು :-
* ಒಳ್ಳೆಯತನ ಯಾವಾಗಲೂ ಗೆಲುವು ಸಾಧಿಸುತ್ತದೆ ಆದ್ದರಿಂದ ಮಾನವನು ಒಳ್ಳೆಯದನ್ನೇ ಆಯ್ಕೆ ಮಾಡಿಕೊಳ್ಳಬೇಕು.
* ಇವರ ದೈವ – ಅಹುರ್ ಮಾಜ್ ದಾ
* ಉಪವಾಸ,ಬ್ರಹ್ಮಚರ್ಯ,ನೈರ್ಮಲ್ಯತೆ- ಆಚರಣೆಗಳಾಗಿವೆ.
-: ಕ್ರೈಸ್ತ ರಿಲಿಜನ್ ( ಕ್ರಿಶ್ಚಿಯಾನಿಟಿ) :-
* ಜೀಸಸ್ ರ ( ಯೇಸು) ಜನನ ಸ್ಥಳ ಜ್ಯೂಡಿಯಾ ಪ್ರಾಂತಕ್ಕೆ ಸೇರಿದ ಜೆರುಸೆಲಂ ನಿಂದ ಐದು ಕಿಲೋಮೀಟರ್ ದೂರದಲ್ಲಿರುವ ಬೆತ್ಲೆಹೆಂ
* ತಂದೆ – ಜೋಸೆಫ್ ತಾಯಿ- ಮೇರಿ
* ಜೀಸಸ್ “ಜಾನ್” ನಿಂದ ದೀಕ್ಷೆ ಸ್ನಾನಕ್ಕೆ ಒಳಗಾದರೂ ಜಾನ್ ಜೀಸಸ್ ರನ್ನು ” ಮಸೀಹ /ಮಹಾ ರಕ್ಷಕ” ಎಂದು ಉದ್ಗರಿಸಿದರು.ಆಗ ಜೀಸಸ್ ರಿಗೆ 30 ವಯಸ್ಸು.
* ಯಹೂದಿಗಳು ಜೀಸಸ್ ರನ್ನು ತಮ್ಮ ಧಾರ್ಮಿಕ ಮುಖಂಡರಾಗಿ ಸ್ವೀಕರಿಸಿದರು.
* ಜೀಸಸ್ ರು 12 ಜನ ಶಿಷ್ಯರನ್ನು ಹೊಂದಿದ್ದರು. ಅವರನ್ನು ಅಪೋಸಲ್ಸ್ ಎಂದು ಕರೆಯಲಾಗಿದೆ.
* ಇವರ ಮೊದಲ ಅನುಯಾಯಿ – ಪೀಟರ್
* ಯೇಸುವನ್ನು ಎಲ್ಲಿ ಶಿಲುಬೆಗೇರಿಸಲಾಯಿತು?
-> ಗೋಲ್ಗೊಥಾ ಬೆಟ್ಟದಲ್ಲಿ
-: ಬೋಧನೆಗಳು :-
* ದೇವರನ್ನು ತಂದೆಯ ಸ್ಥಾನದಲ್ಲಿ ಕಲ್ಪಿಸಿಕೊಳ್ಳುವಂತೆ ಬೋಧಿಸಿದರು ಮಾನವರು ದೇವರ ಮಕ್ಕಳು.
* ಮಾನವ ಸಂಕುಲದ ಭಾತೃತ್ವವನ್ನು ಬೋಧಿಸಿದರು.
* ಆಡಂಬರದ ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆ ಇಟ್ಟಿರಲಿಲ್ಲ.
* ಮಾನವನು ತಾನು ಮಾಡಿದ ತಪ್ಪುಗಳಿಂದಾಗಿ ಪಶ್ಚಾತಾಪ ಪಟ್ಟರೆ ಅವನು ದೇವರಿಂದ ಕ್ಷಮೆಯನ್ನು ಪಡೆಯುತ್ತಾನೆ.
* “ಪರರು ನಿನಗೇನು ಮಾಡಬೇಕೆಂಬ ಕಲ್ಪನೆಯನ್ನು ನೀನು ಹೊಂದಿದ್ದೀಯೇ ಅದನ್ನು ನೀನು ಪರರಿಗೆ ಮಾಡು”
* ಮಾನವನ ಸೇವೆಯನ್ನು ಮಾಡಿದರೆ ಅದು ದೇವರ ಸೇವೆಗೆ ಸಮಯ ಎಂಬ ವಿಷಯಕ್ಕೆ ಪ್ರಾಮುಖ್ಯತೆ ನೀಡಿದರು.
* ಈ ರಿಲಿಜಿಯನ್ ಯುರೋಪಿನ ಅತ್ಯಂತ ಹರಡಿತು
* ಬೈಬಲ್ – ಇವರ ಗ್ರಂಥವಾಗಿದೆ.
* ಚಕ್ರವರ್ತಿಯಾದ ಕಾನ್ಸ್ಟಾಂಟೈನ್ ನ ಆಳ್ವಿಕೆಯ ಅವಧಿಯಲ್ಲಿ ಕ್ರಿಶ್ಚಿಯಾನಿಟಿಯು ರೂಮ್ ನ ರಾಜ್ಯ ಮತವಾಯಿತು.
-: ಇಸ್ಲಾಂ ರಿಲಿಜನ್ :-
* ಇಸ್ಲಾಂ ರಿಲಿಜನ್ ಪ್ರವರ್ತಕರು – ಪ್ರವಾದಿ ಮಹಮದ್ ಪೈಗಂಬರರು.
* ಇವರು 570ರಲ್ಲಿ ಮೆಕ್ಕಾದಲ್ಲಿ ಜನಿಸಿದರು.
* ಅಬ್ದುಲ್ಲಾ ಹಾಗೂ ಅಮೀನ ಇವರ ತಂದೆ ತಾಯಿಗಳು
* ಚಿಕ್ಕ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು ಇವರು ಚಿಕ್ಕಪ್ಪನ ಹಾರೈಕೆಯಲ್ಲಿ ಬೆಳೆದರು.
* ಶ್ರೀಮಂತ ವಿಧವೆ ಖದೀಜಾ ಬಳಿ ಕೆಲಸಕ್ಕೆ ಸೇರಿ ನಂತರ ಅವಳನ್ನೇ ಮದುವೆಯಾದರು ಇವರಿಗೆ ಇಬ್ಬರು ಪುತ್ರರು ಮತ್ತು ನಾಲ್ಕು ಪುತ್ರಿಯರಿದ್ದರು.
* ಮೆಕ್ಕಾದ ಒಂದು ಗುಹೆಯಲ್ಲಿ ಧ್ಯಾನಸಕ್ತರಾಗಿ ದೇವದೂತನ ಧ್ವನಿ ಆಲಿಸಿದನುಆ ದೇವದೂತನ ಮಹಮ್ಮದ್ ಪೈಗಂಬರನ್ನು “ನೀನು ಅಲ್ಲಾನ ( ದೇವರ ) ಪ್ರವಾದಿ” ಎಂದು ಉದ್ಗರಿಸಿದನು.
* ಇಸ್ಲಾಂನ ಗ್ರಂಥ – ‘ಕುರಾನ್’
* ಮೆಕ್ಕಾದ ಸಾಂಪ್ರದಾಯಿಕ ವರ್ಗ ಇವರನ್ನು ವಿರೋಧಿಸಿದ್ದರಿಂದ 622 ರಲ್ಲಿ ಮೆಕ್ಕದಿಂದ ಮದೀನಾದ ಕಡೆಗೆ ಪಯಣಿಸಿದರು ಈ ಪ್ರಯಾಣವು ಎಂಬ ಹೆಸರಿನಿಂದ ಇತಿಹಾಸದಲ್ಲಿ ಪ್ರಸಿದ್ಧವಾಗಿದೆ.
* ಕೊನೆಯ ದಿನಗಳಲ್ಲಿ ಮತ್ತೆ ಮೆಕ್ಕಾಗಿ ಬಂದು ಅಲ್ಲಿಯೇ ಕೊನೆಯುಸಿರೆಳೆದರು
-: ಇಸ್ಲಾಂನ ತತ್ವಗಳು ಮತ್ತು ಆಚರಣೆಗಳು( ಮಹಮ್ಮದ್ ಪೈಗಂಬರರ ಬೋಧನೆಗಳು)
* ಇಸ್ಲಾಂ ಏಕದೇವೋಪಾಸನೆಯಲ್ಲಿ ನಂಬಿಕೆಯುಳ್ಳದ್ದಾಗಿದೆ. ” ಅಲ್ಲಾ ಮುಸ್ಲಿಂನ ದೇವರು ಮೊಹಮ್ಮದ್ ಪೈಗಂಬರ ಅವರ ಪ್ರವಾದಿ.”
* ಮಹಮ್ಮದ್ ಪೈಗಂಬರರು ” ಆತ್ಮಕ್ಕೆ ಸಾವಿಲ್ಲ”ಮತ್ತು ತಪ್ಪಿತಸ್ಥರ ಮುಂದೆ ಬೆಂಕಿಯ ಶಿಕ್ಷೆಗೆ ಒಳಪಡುವವರು”ಎಂದರು.
* ಮಹಮ್ಮದ್ ಪೈಗಂಬರ್ ಸದಾಚಾರಕ್ಕೆ ಒತ್ತು ಕೊಟ್ಟರು ತಪ್ಪುಗಳನ್ನು ಕ್ಷಮಿಸುವ ಗುಣಗಳನ್ನು ಹೊಂದಲು ಮಾನವನು ಪ್ರಯತ್ನಿಸಬೇಕು ಎಂದರು.
-: ಇಸ್ಲಾಂನ ನಿಯಮಗಳು:-
* ಕಲೀಮಾ :- ದೇವರು ಒಬ್ಬನೇ ಅವನೇ ಅಲ್ಲಾ ಪೈಗಂಬರ್ ಅವರ ಪ್ರವಾದಿ.
* ನಮಾಜ್:- ಐದು ಬಾರಿ ಪ್ರತಿದಿನ ಕಾಬಾದ ಕಡೆಗೆ ಮುಖ ಮಾಡಿ ಪ್ರಾರ್ಥನೆ ಮಾಡುವುದು.
* ರೋಜಾ :- ಉಪವಾಸ
* ಜಕಾತ್ :- 1/4 ಭಾಗವನ್ನು ದಾನವಾಗಿ ನೀಡುವುದು
* ಹಜ್ :- ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮೆಕ್ಕಾಕ್ಕೆ ಭೇಟಿ ನೀಡಬೇಕು.
* ಮೊಹಮದ್ ಪೈಗಂಬರರ ಉತ್ತರಾಧಿಕಾರಿಗಳನ್ನು ಖಲೀಫರು ಎನ್ನುವರು.
* ಮೊದಲನೇ ಖಲಿಫಾ – ಅಬೂಬಕರ
Can you be more specific about the content of your article? After reading it, I still have some doubts. Hope you can help me.