ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ- (All Competative exam notes)

  -: ಆಂಗ್ಲೋ – ಮರಾಠ ಯುದ್ಧಗಳು :-

1) ಮೊದಲ ಆಂಗ್ಲೋ-ಮರಾಠ ಯುದ್ಧ (1775-1782) – ಸಾಲ್ಬಾಯ ಒಪ್ಪಂದ -1782

2) ಎರಡನೇ ಆಂಗ್ಲೋ ಮಾರಾಠ ಯುದ್ಧ(1803-1805)- ಬೆಸ್ಸಿನ್ ಒಪ್ಪಂದ-1802

3) ಮೂರನೇ ಆಂಗ್ಲೋ-ಮರಾಠ ಯುದ್ಧ(1817-1818)

1) ಮೊದಲ ಆಂಗ್ಲೋ ಮರಾಠ ಯುದ್ಧ (1775-1782):-

* ಬಾಕ್ಸರ್ ಕದನದಲ್ಲಿ ಸೋತು ಬ್ರಿಟಿಷರ ಆಶ್ರಯದಲ್ಲಿದ್ದ ಮೊಘಲ ದೊರೆ ಎರಡನೇ ಷಾ ಆಲಂನನ್ನು ಮರಾಠರು ಕರೆತಂದು ಮತ್ತೆ ದೆಹಲಿಯ ಸಿಂಹಾಸನದ ಮೇಲೆ ಕೂರಿಸಿದರು.

* 2 ನೇ ಷಾ ಆಲಂ ಬ್ರಿಟಿಷರಿಗೆ ನೀಡಿದ್ದ ಕೋರ್ ಮತ್ತು ಅಲಹಾಬಾದ್ಗಳನ್ನು ಮರಾಠರಿಗೆ ನೀಡಿದನು ಇದರಿಂದ ಬ್ರಿಟಿಷರು ಮತ್ತು ಮರಾಠರಿಗೂ ವೈರತ್ವ ಉಂಟಾಯಿತು.

* ಇದೇ ಸಮಯದಲ್ಲಿ ಮರಾಠರ ಬಲಿಷ್ಠ ಪೇಶ್ವೆ ಮಾಧವರಾವ್ ತೀರಿಕೊಂಡಿದ್ದು ಮರಾಠರಿಗೆ ತುಂಬಲಾರದ ನಷ್ಟವಾಗಿತ್ತು.

* ನಂತರ ಪೇಶ್ವೆಯ ಸ್ಥಾನಕ್ಕೆ ಮಾಧವರಾವನ ತಮ್ಮ ನಾರಾಯಣನು ಬಂಧನಾದರೂ ಅವನನ್ನು ಅವನ ಚಿಕ್ಕಪ್ಪ ರಘೋಬ(ರಘುನಾಥರಾವ್) ನು ಕೊಲೆ ಮಾಡಿದನು ಇದರಿಂದ ಪೇಶ್ವೆಯ ಸ್ಥಾನಕ್ಕೆ ಕಲಹ ಏರ್ಪಟ್ಟಿತು.

* ನಾನಾ ಪಡ್ನಾ ವಿಸ್ನ್ ನೇತೃತ್ವದಲ್ಲಿ ಪೇಶ್ವೆ ಸ್ಥಾನಾಕಾಂಕ್ಷಿಯಾದ ರಘೋಬನ ಬದಲು ಅವನ ನಾರಾಯಣನ ಮಗ ‘ 2ನೇ ಮಾಧವರಾವ್ ಗೆ’ ಮರಾಠ ಒಕ್ಕೂಟ ಪಟ್ಟ ಕಟ್ಟಿತು.

* ಮರಾಠ ಮನೆತನಗಳಿಂದ ಬೆಂಬಲ ಸಿಗದ ರಘೋಬನು ಬ್ರಿಟಿಷರ ಬೆಂಬಲ ಕೋರಿದ. ಬ್ರಿಟಿಷರು ಈ ಸಂದರ್ಭವನ್ನು ತಮ್ಮ ಲಾಭಕ್ಕೆ ಬಳಸಿಕೊಂಡರು.

* 1775-1782 ರಲ್ಲಿ ನಡುವೆ ಬ್ರಿಟಿಷ್ ಮತ್ತು ಮರಾಠರ ಒಕ್ಕೂಟಗಳ ನಡುವೆ ನಡೆದ ದೀರ್ಘ ಯುದ್ಧದಲ್ಲಿ ಮರಾಠರು ಪ್ರಾರಂಭಿಕ ಯಶಸ್ಸನ್ನು ಸಾಧಿಸಿದರು ಅಂತಿಮವಾಗಿ ಅಹಮದಾಬಾದ್ ನ ಕಳೆದುಕೊಂಡರು.

* ಮರಾಠ ಒಕ್ಕೂಟವು ಯುದ್ಧ ಮುಂದುವರಿಸಲಾಗದೆ ಬ್ರಿಟಿಷರೊಂದಿಗೆ ಸಾಲ್ಬಾಯ್ ಒಪ್ಪಂದವನ್ನು ಮಾಡಿಕೊಂಡರು.

* 2 ನೇ ಮಾಧವ ರಾವ್ ನನ್ನು ಪೇಶ್ವೆಯಾಗಿ ನೇಮಿಸಿತು

-: ಸಹಾಯಕ ಸೈನ್ಯ ಪದ್ಧತಿ :-

ಭಾರತೀಯ ರಾಜ್ಯಗಳನ್ನು ನಿಯಂತ್ರಣಕ್ಕೆ ಒಳಪಡಿಸುವ ಸಲುವಾಗಿ ಸಹಾಯಕ ಸೈನ್ಯ ಪದ್ಧತಿ ಎಂಬ ನೀತಿಯನ್ನು ವೆಲ್ಲೆಸ್ಲಿಯು 1798ರಲ್ಲಿ ಜಾರಿಗೆ ತಂದನು.

-: ಸಹಾಯಕ ಸೈನ್ಯ ಪದ್ಧತಿಯ ನಿಬಂಧನೆಗಳು :-

* ಭಾರತೀಯ ರಾಜ್ಯಗಳನ್ನು ನಿಯಂತ್ರಣಕ್ಕೆ ಒಳಪಡಿಸುವ ಸಲುವಾಗಿ ಈ ಪದ್ಧತಿಯನ್ನು ಜಾರಿಗೆ ತಂದರು.

* ಭಾರತೀಯ ರಾಜನು ಬ್ರಿಟಿಷ್ ಸೈನಿಕ ತುಕಡಿಯನ್ನು ತನ್ನ ರಾಜ್ಯದಲ್ಲಿರಿಸಿಕೊಳ್ಳಬೇಕು.

* ಸೇನೆಯ ವೇತನ ಮತ್ತು ನಿರ್ವಹಣೆಯ ವೆಚ್ಚವನ್ನು ಸಂಬಂಧಪಟ್ಟ ರಾಜವೇ ಭರಿಸಬೇಕು ಇಲ್ಲವೇ ನಿರ್ಧಿಷ್ಟ ಕಂದಾಯ ಪ್ರದೇಶವನ್ನು ಬಿಟ್ಟು ಕೊಡಬೇಕು.

* ರಾಜನ ಆಸ್ಥಾನದಲ್ಲಿ ಬ್ರಿಟಿಷ್ ರೆಸಿಡೆಂಟ್ ನ್ನು ನೇಮಿಸಿಕೊಳ್ಳಬೇಕು.

* ಬ್ರಿಟಿಷರ ಅನುಮತಿ ಇಲ್ಲದೆ ಆಸ್ಥಾನದಲ್ಲಿ ಯಾವುದೇ ಯುರೋಪಿಯನ್ನರನ್ನು ನೇಮಿಸಿಕೊಳ್ಳುವಂತಿಲ್ಲ.

* ಭಾರತದ ಯಾವುದೇ ರಾಜ್ಯಗಳೊಂದಿಗೆ ಯುದ್ಧ/ಸಂಧಾನ ಮಾಡಿಕೊಳ್ಳಬೇಕಾದರೆ ಗವರ್ನರ್ ಜನರಲ್ ಸಮ್ಮತಿಸಬೇಕು.

* ಇದಕ್ಕೆ ಪ್ರತಿಯಾಗಿ ಕಂಪನಿಯು ಆ ರಾಜ್ಯಕ್ಕೆ ಆಂತರಿಕ ಮತ್ತು ಬಾಹ್ಯ ರಕ್ಷಣೆಯನ್ನು ಒದಗಿಸುವುದು.

*( ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ರಾಜ್ಯ ಹೈದರಾಬಾದ್,ನಂತರದಲ್ಲಿ ಮೈಸೂರು, ಔದ್,ತಂಜಾವೂರು,ಮರಾಠ,ಅರ್ಕಟ್, ಪೂನಾ, ಬೀರಾರ್, ಗ್ವಾಲಿಯರ್ ಮುಂತಾದ ರಾಜ್ಯಗಳು ಈ ಒಪ್ಪಂದಕ್ಕೆ ಒಳಪಟ್ಟವು.)

2) ಎರಡನೇ ಆಂಗ್ಲೋ ಮರಾಠ ಯುದ್ಧ (1803-1805):-

* ಮರಾಠ ಮನೆತನಗಳ ನಾಯಕರ ನಡುವಿನ ಸಂಘರ್ಷವೇ ಈ ಯುದ್ಧಕ್ಕೆ ಕಾರಣವಾಯಿತು.

* ಹೋಳ್ಕರ್ ಮನೆತನದ ಯಶವಂತ್ ರಾಯ್ ಒಂದು ಕಡೆಯಾದರೆ ಸಿಂಧಿಯಾ ಮನೆತನದ ದೌಲತ್ ರಾವ್ ಮತ್ತು ಪೇಶ್ವೆ ಎರಡನೇ ಬಾಜಿರಾವ್ ಇನ್ನೊಂದು ಕಡೆಗಿದ್ದರು.

* 1802 ರಲ್ಲಿ ಹೋಳ್ಕರ್ ಸೈನ್ಯವು ಸಿಂಧಿಯಾ ಮತ್ತು ಪೇಶ್ವೆಯ ಸೈನ್ಯವನ್ನು ಸೋಲಿಸಿತು.

* ಪೇಶ್ವೆ 2ನೇ ಬಾಜಿರಾವ್ ಇಂಗ್ಲಿಷರ ಸಹಾಯ ಯೋಚಿಸಿದನು.

* ಲಾರ್ಡ್ ವೆಲ್ಲೆಸ್ಲಿ ಗೆ ಮರಾಠರ ಆಂತರಿಕ ವಿಚಾರದಲ್ಲಿ ಪ್ರವೇಶಿಸಲು ಅವಕಾಶ ಸಿಕ್ಕಿತು.

* ಪೇಶ್ವೆಯ 2ನೇ ಬಾಜಿರಾವ್ ಬೆಸ್ಸಿನ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದನು.

* 2ನೇ ಬಾಜಿರಾವ್ ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದ್ದನ್ನು ವಿರೋಧಿಸಿ ಹೋಳ್ಕರ್, ಭೋಂಸ್ಲೆ,ಸಿಂಧಿಯಾ ಮೊದಲಾದ ಮರಾಠ ಮನೆತನಗಳು ಒಗ್ಗೂಡಿದವು.

* 1803-1805ರ ವರೆಗೆ ಮರಾಠ ಮನೆತನಗಳ ಸೇನೆಯನ್ನು ವೆಲ್ಲೆಸಿಯು ಅನೇಕ ಯುದ್ಧಗಳಲ್ಲಿ ಮಣಿಸಿದ. ಆದರೆ ವೆಲ್ಲೆಸ್ಲಿ ಯು ಯುದ್ಧ ಪ್ರಿಯ ನೀತಿಯಿಂದ ಕಂಪನಿಗೆ ಸಾಲದ ಹೊರೆ ಹೆಚ್ಚಿತು. ಇದರಿಂದ ತೀವ್ರ ಟೀಕೆಗೆ ಒಳಗಾದ ವೆಲ್ಲೆಸ್ಲಿಯು ತನ್ನ ಹುದ್ದೆಗೆ ರಾಜೀನಾಮೆ. ನೀಡಿ ಸ್ವದೇಶಕ್ಕೆ ಮರಳಿದ. ಇದರಿಂದ ಆ ಪ್ರದೇಶದಲ್ಲಿ ತಾತ್ಕಾಲಿಕ ಶಾಂತಿ ನೆಲೆಸಿತು.

* ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮರಾಠರ ಪೇಶ್ವೆ ಯಾರು ?

-> 2ನೇ ಬಾಜೀರಾವ್

3) 3 ನೇ ಅಂಗ್ಲೋ ಮರಾಠ ಯುದ್ಧ(1817-1818):-

* ಮರಾಠ ಮನೆತನಗಳು ತಮ್ಮ ಘನತೆ ಮತ್ತು ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿದವು.

* ಪೇಶ್ವೆ 2ನೇ ಬಾಜೀರಾವ್ ಕೂಡ ಬ್ರಿಟಿಷರ ನಿಯಂತ್ರಣದಿಂದ ಮುಕ್ತಗೊಳ್ಳಲು ಹವಣಿಸುತ್ತಿದ್ದನು.

* 1817ರಲ್ಲಿ ಪೇಶ್ವೆಯು ಪೂನಾದಲ್ಲಿ ಬ್ರಿಟಿಷ್ ರೆಸಿಡೆನ್ಸಿಯ ಮೇಲೆ ದಾಳಿ ನಡೆಸಿ ಸುಟ್ಟನು.

* ನಾಗಪುರದ ‘ ಅಪ್ಪಾಸಾಹೇಬ ‘ ಮತ್ತು ‘ ಮಲ್ಹಾರ್ ರಾವ್ ‘ ಹೋಳ್ಕರ್ ಕೂಡ ಬ್ರಿಟಿಷರ ವಿರುದ್ಧ ದಂಗೆ ಎದ್ದು ಸೋತರು.

* ಅಂತಿಮವಾಗಿ ಪೇಶ್ವೆ 2ನೇ ಬಾಜೀರಾಯನು ಬ್ರಿಟಿಷರ ವಿರುದ್ಧ ದಂಗೆ ಎದ್ದು 1818ರಲ್ಲಿ ” ಕೋರೆಗಾವ್ ಮತ್ತು ಅಷ್ಠಿ ಯುದ್ಧಗಳಲ್ಲಿ ” ಸೋತು ಶರಣಾದನು.

* ಬ್ರಿಟಿಷರು ಪೇಶ್ವೆ ಪದವಿಯನ್ನು ರದ್ದೆಗೊಳಿಸಿ ಬಾಜೀರಾಯನಿಗೆ ವಿಶ್ರಾಂತಿ ವೇತನ ನೀಡಿದರು. ಬದಲಿಗೆ ಶಿವಾಜಿಯ ವಂಶಸ್ಥ ” ಪ್ರತಾಪ ಸಿಂಹ ”ನನ್ನು ಸಣ್ಣ ರಾಜ್ಯ ಸತಾರದಲ್ಲಿ ಪ್ರತಿಷ್ಠಾಪಿಸಿ, ಮರಾಠರ ಸಾಂಪ್ರದಾಯಿಕ ಮುಖಂಡನನ್ನಾಗಿಸುವ ಮೂಲಕ ಮರಾಠರ ಪ್ರತಿರೋಧವನ್ನು ನಿಗ್ರಹಿಸಿದರು.

-: ಆಂಗ್ಲೋ ಸಿಖ್ ಯುದ್ಧಗಳು :-

* 1839ರಲ್ಲಿ ರಣಜಿತ್ ಸಿಂಗ್ ಮರಣದ ನಂತರ ಪಂಜಾಬಿನಲ್ಲಿ ರಾಜಕೀಯ ಅರಾಜಕತೆ ತಲೆ ಎತ್ತಿತು. 1809 ರ ನಿರಂತರ ಮೈತ್ರಿ ಒಪ್ಪಂದವನ್ನು ಉಲ್ಲಂಘಿಸಿ ಪಂಜಾಬನ್ನು ಆಕ್ರಮಿಸಲು ಬ್ರಿಟಿಷರು ಸಂಚು ರೂಪಿಸಿದ್ದರು.

* 1854 ರಲ್ಲಿ ಬ್ರಿಟಿಷರಿಗೂ ಪಂಜಾಬ್ ಸೈನಕ್ಕೂ ಯುದ್ಧ ಆರಂಭವಾಯಿತು.ಯುದ್ಧದಲ್ಲಿ ಸೋತ ಸಿಖರು ಅವಮಾನಕರ ” ಲಾಹೋರ್ ಒಪ್ಪಂದಕ್ಕೆ ” 1846 ರಲ್ಲಿ ಸಹಿ ಹಾಕಬೇಕಾಗಿತ್ತು. ಅಂದಿನಿಂದ ಬ್ರಿಟಿಷ್ ರೆಸಿಡೆಂಟನ್ನು ಪಂಜಾಬಿನ ನಿಜವಾದ ಆಡಳಿತಗಾರನಾದನು. ಹೀಗೆ ಪಂಜಾಬ್ ಬ್ರಿಟಿಷರ ಆಶ್ರಿತ ರಾಜ್ಯವಾಯಿತು.

* 1848ರಲ್ಲಿ ಪಂಜಾಬಿನ ಮೇಲೆ ನೇರ ಬ್ರಿಟಿಷ್ ಆಳ್ವಿಕೆಯನ್ನು ಹೇರಲು ಹೊರಟಾಗ ಸಿಖರು ಪ್ರತಿಭಟಿಸಿದರು ಈ ಪ್ರತಿಭಟನೆಗಳ ನೇತೃತ್ವ ವಹಿಸಿದವರು ” ಚಟ್ಟಾರ್ ಸಿಂಗ್ ” , ಅಟ್ಟಾರಿ ವಾಲ್ ಮತ್ತು ಮೂಲ ರಾಜ ” ಇವರು ಕ್ರಮವಾಗಿ ಲಾಹೋರ್ ಮತ್ತು ಮುಲ್ತಾನ್ ಗಳಲ್ಲಿ ವಹಿಸಿದ್ದರು ಮತ್ತೆ ಇಲ್ಲಿ ಸಿಖ್ ರಿಗೆ ಸೋಲಾಯಿತು ಅಂತಿಮವಾಗಿ ಡಾಲ್ ಹೌಸಿಯು ಪಂಜಾಬ್ ಅನ್ನು ಬ್ರಿಟಿಷರ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿದನು.

* ಡಾಲ್ ಹೌಸಿಯು 1848ರಲ್ಲಿ ಭಾರತಕ್ಕೆ ಗೌರ್ನರ್ ಜನರಲ್ ಆಗಿ ಬಂದನು ಇವನು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದನು ಈ ನೀತಿಯಿಂದಾಗಿ ಸತಾರ,ಜೈಪುರ್, ಸ0ಬಲ್ ಪುರ್ ,ಉದಯಪುರ, ಝಾನ್ಸಿ,ನಾಗಪುರ ಮೊದಲಾದವುಗಳು ಪ್ರಮುಖವಾದವುಗಳಾಗಿವೆ.

-: ರಣಜಿತ್ ಸಿಂಗ್- ಸಿಖ್ ರ್ ಪ್ರಸಿದ್ಧ ದೊರೆ :-

* 1780 ರಲ್ಲಿ ಜನಿಸಿದ ರಣಜಿತ್ ಸಿಂಗ್ ನು ಸಿಖ್ ರ 12 ಮಿಸ್ಲ್ ( ಒಕ್ಕೂಟ) ಗಳಲ್ಲಿ ಒಂದಾದ ಸುಖರ್ ಚಾಕೀಯಾ ನಾಯಕ ಮಹಾಸಿಂಗನ ಮಗ.

* ಹತ್ತನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡನು ಅವನು ಸಣ್ಣ ಪ್ರದೇಶದ ಒಕ್ಕೂಟದ ಮುಖ್ಯಸ್ಥನಾಗಿದ್ದನು.

* ಕಾಬೂಲಿನ ಜಮಾನ್ -ಷಾ ಭಾರತದ ಮೇಲೆ ದಂಡಯಾತ್ರೆ ಕೈಗೊಂಡಾಗ ರಣಜೀತನು ಅವನಿಗೆ ಸಲ್ಲಿಸಿದ ಸೇವೆಗೆ ಮಟ್ಟ ” ರಾಜಾ ” ಎಂಬ ಪದವಿ ಯೊಂದಿಗೆ ಲಾಹೋರಿನ ರಾಜ್ಯಪಾಲನಾಗಿ ನೇಮಕಗೊಂಡನು ಆಗ ರಣಜಿತ್ ಸಿಂಗನಿಗೆ ಕೇವಲ 19 ವರ್ಷ.

* ಸಿಖ್ ಸಮುದಾಯದ ಮೇಲೆ ಸಂಪೂರ್ಣ ಪರಮಾಧಿಕಾರ ಪಡೆಯುವುದೇ ಇವನ ಪರಮದೇಯವಾಗಿತ್ತು.

* 1809ರಲ್ಲಿ ರಣಜಿತ್ ಸಿಂಗ್ ನು ಅಮೃತಸರದಲ್ಲಿ ” ನಿರಂತರ ಮೈತ್ರಿ ” ಒಪ್ಪಂದಕ್ಕೆ ಸಹಿ ಹಾಕಿದನು.

* ಇವನ ಸೈನ್ಯವು ಕೇವಲ ಸಿಖ್ ರಿಗೆ ಸೀಮಿತಗೊಂಡಿರದೆ ಗುರ್ಖಾಗಳು, ಹೂಣರು,ಪಠಾಣರು,ಮುಸಲ್ಮಾನರಿಂದ ಕೂಡಿತ್ತು.

* ಲಾಹೋರಿನಲ್ಲಿ ಫಿರಂಗಿಗಳನ್ನು ತಯಾರಿಸಲು ಎರಕ ಹೊಯ್ಯುವ ಕಾರ್ಖಾನೆಯನ್ನು ತೆರೆದನು.

 

WhatsApp Group Join Now
Telegram Group Join Now

Leave a Comment