1) ಮೊದಲನೇ ಕರ್ನಾಟಿಕ್ ಯುದ್ಧ -(1746-1748) :-
* ಡೂಪ್ಲೆಯ ಕೋರಿಕೆಯ ಮೇರೆಗೆ ‘ಲಾಬೋರ್ಡಿನಾ’ ಎಂಬ ಫ್ರೆಂಚ್ ಸೇನಾ ಮುಖ್ಯಸ್ಥನು ಮಾರಿಷಸ್ ನಿಂದ ಬಂದು ಬ್ರಿಟಿಷರಿಂದ ಮದ್ರಾಸ್ ನ್ನು ವಶಪಡಿಸಿಕೊಂಡನು. ಅಸಹಾಯಕರಾದ ಬ್ರಿಟಿಷ್ ರು, ಕರ್ನಾಟಿಕ್ನ ನವಾಬನಾದ ಅನ್ವರುದ್ದಿ ನಲ್ಲಿ ಮೊರೆ ಇಟ್ಟರು.
* ಮದ್ರಾಸ್ ನಿಂದ ಪ್ರೆಂಚರನ್ನು ಹೊರಗಟ್ಟಲು ಅನ್ವರುದ್ಧಿ ನ್ ಕಳುಹಿಸಿಕೊಟ್ಟ ಸೇನೆಯು ಸೋತಿತು.
* ಕೊನೆಗೆ ಕಾಬೋರ್ಡಿನಾನು ಡೂಪ್ಲೆಗೆ ತಿಳಿಸಿದೇ ಬ್ರಿಟಿಷರಿಂದ ಹಣ ಪಡೆದು ಮದ್ರಾಸ್ ನ್ನು ಬಿಟ್ಟು ಕೊಟ್ಟು, ಮಾರಿಷಸ್ ಗೆ ಮರಳಿದನು.
* ಇದರಿಂದ ಕೋಪಗೊಂಡ ಡೂಪ್ಲೆಯು ಮದ್ರಾಸ್ನ್ನು ಮತ್ತೆ ಪಡೆಯುವಲ್ಲಿ ವಿಫಲ ಪ್ರಯತ್ನ ನಡೆಸಿದನು.
* ಅಂತಿಮವಾಗಿ 1ನೇ ಕರ್ನಾಟಿಕ್ ಯುದ್ಧವು ಯುರೋಪಿನಲ್ಲಿ ಫ್ರಾನ್ಸ್ ಮತ್ತು ಇಂಗ್ಲೆಂಡಿನ ನಡುವೆ ಆದ ಎಕ್ಸ್-ಲಾ- ಚಾಫೆಲ್ ಒಪ್ಪಂದದೊಂದಿಗೆ ಮುಕ್ತಾಯವಾಯಿತು.
* 1749 ರಲ್ಲಿ ಚಂದಾಸಾಹೇಬ, ಮುಜಾಫರ್ ಜಂಗ್ ಮತ್ತು ಪ್ರೆಂಚರ ಪಡೆಗಳು ಒಂದಾಗಿ ಅನ್ವರುದ್ದೀನ್ ಸೇನೆಯನ್ನು ಅಂಬೂರ ಕದನದಲ್ಲಿ ಸೋಲಿಸಿದರು. ಈಕದನದಲ್ಲಿ ಅನ್ವರುದ್ದೀನ್ನನ್ನು ಕೊಲ್ಲಲಾಯಿತು. ಪರಿಣಾಮವಾಗಿ ಚಂದಾಸಾಹೇಬ ಕರ್ನಾಟಿಕ್ ನ ನವಾಬನದನು. ಅನ್ವರುದ್ದೀನ್ ನ ಮಗನಾದ ಮಹಮ್ಮದ್ ಅಲಿಯು ಬ್ರಿಟಿಷರ ನೆರವಿನಿಂದ ನೆಲೆನಿಂತನು.
* ಹೈದ್ರಾಬಾದಿನಲ್ಲಿ ಮುಜಾಫರ್ ಜಂಗನು ಚಂದಾಸಾಹೇಬ ಮತ್ತು ಫ್ರೆಂಚರ ಸಹಾಯದಿಂದ ನಾಸಿರ್ ಜಂಗ್ ನನ್ನು ಕೊಂದು ನಿಜಾಮನಾದನು,ಆದರೆ ಸ್ವಲ್ಪ ದಿನಗಳಲ್ಲಿಯೇ ಹತ್ಯೆಗಿಡಾದನು. ಅವನ ಸ್ಥಾನಕ್ಕೆ ಫ್ರೆಂಚರು ಅಸಫ್ ಜಾನನ ಇನ್ನೊಬ್ಬ ಮಗನಾದ ಸಲಾಬತ್ಜಂಗ್ ನನ್ನು ನಿಜಾಮನಾಗಿ ಮಾಡಿದರು.
2) ಎರಡನೇ ಕರ್ನಾಟಿಕ್ ಯುದ್ಧ – ( 1749-1754):-
* ಬದಲಾದ ಸನ್ನಿವೇಶದಲ್ಲಿ ಫ್ರೆಂಚರು ಅಸಫ್ ಜಾನ ಇನ್ನೊಬ್ಬ ಮಗನಾದ ಸಲಾಬತ್ ಜಂಗನನ್ನು ಹೈದರಾಬಾದಿಂದ ನಿಜಾಮನಾಗಿ ಮಾಡಿ, ಅವನ ರಕ್ಷಣೆಗಾಗಿ ಆ ಸ್ಥಾನದಲ್ಲಿ ಫ್ರೆಂಚರು ತಮ್ಮ ಸೈನ್ಯಸಹಿತ ‘ ಬುಸ್ಸಿ’ ಎಂಬ ಅಧಿಕಾರಿಯನ್ನು ನೇಮಿಸಿದ್ದರು.ಮತ್ತೊಂದು ಕಡೆ ಪಂಚರ ಬೆಂಬಲದಿಂದ ಚಂದ ಸಾಹೇಬನು ಕರ್ನಾಟಿಕ್ನ ನವಬನಾಗಿದ್ದನು.
* ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿ ರಾಬರ್ಟ್ ಕ್ಲೈವನು ಕರ್ನಾಟಿಕದ ರಾಜಧಾನಿ ಆರ್ಕಾಟಿನ ಮೇಲೆ ಆಕ್ರಮಣ ಮಾಡಿದನು ಫ್ರೆಂಚರು ಮತ್ತು ಚಂದ ಸಾಹೇಬನನ್ನು ಕ್ಲೈವ್ ಸೋಲಿಸಿದನು.ಅಂತಿಮವಾಗಿ ಈ ಯುದ್ಧದಲ್ಲಿ ಚಂದ ಸಾಹೇಬನನ್ನು ಹತ್ಯೆ ಮಾಡಲಾಯಿತು ಅವನ ಸ್ಥಾನಕ್ಕೆ ಬ್ರಿಟಿಷರು ಅನ್ವರುದ್ದಿನ ಮಗನಾದ ಮಹಮದ್ ಅಲಿಯನ್ನು ನವಾಬನಾಗಿ ನೇಮಕ ಮಾಡಿದರು.
* ಎರಡನೇ ಕರ್ನಾಟಿಕ್ ಯುದ್ಧವು ” ಪಾಂಡಿಚೆರಿ ಒಪ್ಪಂದದೊಂದಿಗೆ ” ಕೊನೆಯಾಯಿತು.
3) ಮೂರನೇ ಕರ್ನಾಟಿಕ್ ಯುದ್ಧ -(1756-1763):-
* ಫ್ರೆಂಚರ ಕೌಂಟ್ -ಡಿ – ಲ್ಯಾಲಿ 1760ರಲ್ಲಿ ವಾಂಡಿವಾಷ್ ಕೋರ್ಟಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದನು ನಿರ್ಣಾಯಕ ವಾಂಡಿವಾಷ್ ಕದನದಲ್ಲಿ ಬ್ರಿಟಿಷ್ ಸೇನಾಧಿಕಾರಿ ಸರ ಐರ್ ಕೂಟನು ಫ್ರೆಂಚರನ್ನು ಸೋಲಿಸಿದ ನಲ್ಲದೆ ಬುಸ್ಸಿಯನ್ನು ಸೆರೆಹಿಡಿದನು ಲಾಲಿಯೂ ತಪ್ಪಿಸಿಕೊಂಡು ಪಾಂಡಿಚೆರಿಯಲ್ಲಿ ತಲೆಮೆರೆಸಿಕೊಂಡನು ಅಂತಿಮವಾಗಿ ಸರ್ ಐರ್ ಕೂಟನು ಪಾಂಡಿಚರಿಗೂ ಮುತ್ತಿಗೆ ಹಾಕಿದಾಗ ಲಾಲಿಯೂ 1761 ರಲ್ಲಿ ಬೇಷರತ್ತಾಗಿ ಶರಣಾದನು.
* 1763 ರಲ್ಲಿ ” ಪ್ಯಾರಿಸ್ ಒಪ್ಪಂದದೊಂದಿಗೆ” ಯುದ್ಧವು ಕೊನೆಗೊಂಡಿತು.
* ಭಾರತದಲ್ಲಿ ಬ್ರಿಟಿಷ್ ಅಧಿಕಾರವನ್ನು ಕಟ್ಟಿದ ಪ್ರಥಮ ಅಧಿಕಾರಿ – ರಾಬರ್ಟ್ ಕ್ಲೈವ್.
-: ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ :-
* 1717ರಲ್ಲಿ ಮೊಘಲ್ ದೊರೆ ಫಾರೂಕ್ ಶಿಯಾರನು ಬಂಗಾಳದಲ್ಲಿ ಮುಕ್ತ ವ್ಯಾಪಾರ ನಡೆಸಲು ಕಂಪನಿಗೆ ನೀಡಿದ ದಸ್ತಕಗಳೇ ಅದರ ಲಾಭಕ್ಕೆ ಕಾರಣವಾಯಿತು.
* ದಸ್ತಕ :- ಯಾವುದೇ ತೆರಿಗೆ ಇಲ್ಲದೆ ಸರಕುಗಳ ಅಮದು ಮತ್ತು ರಫ್ತು ಮಾಡಲು ಹಾಗೂ ಸರಕುಗಳ ಸಾಗಾಣಿಕೆ ಮಾಡಲು ಬೇಕಾದ ಪರವಾನಿಗೆ ಪತ್ರ.
-: ಪ್ಲಾಸಿ ಕದನ – 1757 :-
* ಬಂಗಾಳದ ನವಬನಾದ ಅಲಿವರ್ದಿ ಖಾನನು 1756 ರಲ್ಲಿ ನಿಧನನಾದನು ನಂತರ ಅವನ ಮೊಮ್ಮಗನಾದ ಸಿರಾಜ್ -ಉದ್-ದೌಲನು ಅಧಿಕಾರಕ್ಕೆ ಬಂದನು ಯುವ ನವಪನಾದ ಸಿರಾಜುದ್ದೌಲ್ನಿಗೂ ಮತ್ತು ಬ್ರಿಟಿಷರಿಗೂ 1757ರಲ್ಲಿ ಇತಿಹಾಸ ಪ್ರಸಿದ್ಧ ಪ್ಲಾಸಿ ಕದನ ನಡೆಯಿತು.
-: ಪ್ಲಾಸಿ ಕದನಕ್ಕೆ ಕಾರಣಗಳು :-
* ದಸ್ತಕಗಳ ದುರುಪಯೋಗ
* ಅನುಮತಿ ಇಲ್ಲದೆ ಕೋಟೆಯ ದುರಸ್ತಿ
* ಕಪ್ಪು ಕೋಣೆಯ ದುರಂತ
-: ಕಪ್ಪು ಕೋಣೆಯ ದುರಂತ :-
* ಸಿರಾಜನು ಪೋರ್ಟ್ ವಿಲಿಯಂ ಕೋಟೆಯನ್ನು ಸುಲಭವಾಗಿ ಗೆದ್ದು,ಕೆಲವರನ್ನು ಸೆರೆಹಿಡಿದ.
* ಸಿರಾಜನ ಆಕ್ರಮಣದಲ್ಲಿ ಸೆರೆಸಿಕ್ಕ 146 ಬ್ರಿಟಿಷರನ್ನು ಚಿಕ್ಕ ಕೊಠಡಿ ಒಂದರಲ್ಲಿ ಬಂಧಿಸಿಟ್ಟನು . ಅವರು 123 ಮಂದಿ ಅಸುನೀಗಿದರು. ಇದನ್ನು ಕಪ್ಪು ಕೋಣೆಯ ದುರಂತ ಎಂದು ಕರೆಯಲಾಗಿದೆ ಈ ಸುದ್ದಿ ಕೇಳಿ ರಾಬರ್ಟ್ ಕ್ಲೈವ್ ಉಗ್ರ ಕೋಪದಲ್ಲಿ ಬಲಿಷ್ಠ ಸೇನೆಯೊಂದಿಗೆ ಬಂಗಾಳಕ್ಕೆ ಬಂದನು.
* ರಾಬರ್ಟ್ ಕ್ಲೈಮ್ ಮೊದಲು ನವಬನ ವಿರೋಧಿಗಳಾದ ಮಾಣಿಕ್ ಚಂದ,ನೇಮಿಚಂದ್, ಜಗತ್ ಸೇಠ್( ಬಂಗಾಳದ ಲೇವಾದೇವಿಗಾರ) ಮೊದಲಾದ ಶ್ರೀಮಂತರನ್ನು ತನ್ನತ್ತ ಸೆಳೆದುಕೊಂಡನು. ನಂತರ ಸಿರಾಜನ ಸೇನಾಪತಿಯಾದ ವೀರ್ ಜಾಫರನಿಗೆ ನವಬನನ್ನಾಗಿ ಮಾಡುವ ಆಮಿಷ ಒಡ್ಡಿ ಯುದ್ಧದಲ್ಲಿ ತಟಸ್ಥವಾಗಿರಲು ರಾಜ್ಯವನ್ನು ಒಪ್ಪಿಸಿದನು. ಇದರಿಂದ ಧೈರ್ಯಗೊಂಡ ರಾಬರ್ಟ್ ಕ್ಲೈವ್ನು 1757 ಜೂನ್ 23ರಂದು ಸಿರಾಜ್ – ಉದ್ – ದೌಲ್ ನ ಮೇಲೆ ಕದನ ಸಾರಿದನು ಕ್ಲಾಸಿ ಎಂಬಲ್ಲಿ ನಡೆದ ಕದನದಲ್ಲಿ ಯೋಜಿಸಿದಂತೆಯೇ ಎಲ್ಲವೂ ನಡೆಯಿತು ಯುದ್ಧ ಭೂಮಿಯಿಂದ ತಪ್ಪಿಸಿಕೊಂಡ ಸಿರಾಜು – ಉದ್ – ದೌಲನ್ನು ನನ್ನು ಸೆರೆ ಹಿಡಿದುಕೊಳ್ಳಲಾಯಿತು.
-: ಪ್ಲಾಸಿ ಕದನದ ಪರಿಣಾಮಗಳು :-
* ಮಿರ್ಜಾಫರ್ ಬಂಗಾಳದ ನವಾಬನಾದನು.
* ಬ್ರಿಟಿಷ್ ಕಂಪನಿಯು ಬಂಗಾಳ ಪ್ರಾಂತ್ಯದಲ್ಲಿ ವ್ಯಾಪಾರ ನಡೆಸಲು ಅನಿರ್ಬಂಧಿತ ಹಕ್ಕನ್ನು ಪಡೆಯಿತು.
* ಸಿರಾಜನು ಕಲ್ಕತ್ತಾದ ಮೇಲೆ ನಡೆಸಿದ ಆಕ್ರಮಣಕ್ಕೆ ಯುದ್ಧದ ಪರಿಹಾರವಾಗಿ ಮೀರ್ ಜಾಫರನು ಕಂಪನಿಗೆ 17 ಕೋಟಿ 70 ಲಕ್ಷ ರೂಪಾಯಿಗಳನ್ನು ನೀಡಿದನು.
* ಮೀರ್ ಜಾಫರನು ಕಂಪನಿಗೆ ಮತ್ತು ನೌಕರರ ಕೈ ಗೊಂಬೆ ಆಗುವ ಮೂಲಕ ನಿರಂತರ ಶೋಷಣೆಗೆ ಒಳಗಾದನು. ಇದರಿಂದ ನವಬನ ಬೊಕ್ಕಸ ಬರಿದಾಯಿತೇ ವಿನ: ಧನಪಿಶಾಚಿಗಳಾದ ಕಂಪನಿಯ ಅಧಿಕಾರಿಗಳ ತೃಪ್ತಿ ಮಾತ್ರ ತೀರಲಿಲ್ಲ ಪರಿಣಾಮವಾಗಿ ಬ್ರಿಟಿಷರು ಮೀರ್ ಜಾಫರ್ ನನ್ನು ಅಸಮರ್ಥನೆಂದು ಬಿಂಬಿಸಿ ನವಾಬನ ಸ್ಥಾನದಿಂದ ಪದಚ್ಯುತಿಗೋಳಿಸಿ ಅವನಾ ಅಳಿಯನಾದ ವೀರ್ ಖಾಸಿಮ್ ನನ್ನು ಬಂಗಾಳದ ನವಬನನ್ನಾಗಿ ನೇಮಿಸಿದರು.
-: ಬಕ್ಸರ್ ಕದನ :-
* ಮೀರ್ ಖಾಸಿಂ ಸಹ ಆರಂಭದಲ್ಲಿ ಕಂಪನಿಗೆ ನಿಷ್ಠೆಯಿಂದ ಇದ್ದನು.
* 2 ಲಕ್ಷ ಪೌಂಡ್ ಹಣದ ಜೊತೆಗೆ ಕೆಲವು ಪ್ರದೇಶಗಳನ್ನು ಕಂಪನಿಗೆ ಬಿಟ್ಟುಕೊಟ್ಟ.
* ಆದರೆ ನಂತರದಲ್ಲಿ ಶೀಘ್ರವೇ ತನ್ನನ್ನು ಸ್ವತಂತ್ರ ರಾಜನೆಂದು ಭಾವಿಸಿದ್ದೇನೆ ದಸ್ತಕಗಳ ದುರ್ಬಳಕೆಯನ್ನು ಪರಿಶೀಲಿಸಿ, ಬಂಗಾಳದ ಎಲ್ಲಾ ವ್ಯಾಪಾರವನ್ನು ಸುಂಕ ಮುಕ್ತ ಎಂದು ಘೋಷಿಸಿದನು ಇದರಿಂದ ಭಾರತೀಯರು ಸುಂಕವಿಲ್ಲದೆ ವ್ಯಾಪಾರ ನಡೆಸುವ ಮೂಲಕ ಬ್ರಿಟಿಷರೊಡನೆ ನೇರ ಸ್ಪರ್ಧೆಗಳಿದರು ಪರಿಣಾಮ ಬ್ರಿಟಿಷರ ವ್ಯಾಪಾರಕ್ಕೆ ಭಾರಿ ಬೆಳೆದ ಬಿದ್ದಿತು ಬ್ರಿಟಿಷರಿಗೆ ನವಬನನ್ನು ವಿರೋಧಿಸಲು ಇದಿಷ್ಟೇ ಸಾಕಿತ್ತು.
* ಬ್ರಿಟಿಷರು ಮೀರ್ ಖಾಸಿಂನನ್ನು ಇಳಿಸಿ ಮತ್ತೆ ಮೀರ್ ಜಾಫರ್ ನನ್ನು ನವಾಬನನ್ನಾಗಿ ಮಾಡಿದರು.
* ಬ್ರಿಟಿಷರ ಕುಟಿಲತೆಯನ್ನು ಅರಿತಿದ್ದ ಮೀರ್ ಖಾಸಿಂ ಬ್ರಿಟಿಷರ ವಿರುದ್ಧ ಸಂಘಟನಾತ್ಮಕ ಹೋರಾಟಕ್ಕೆ ಮುಂದಾದನು. ಈ ನಿಟ್ಟಿನಲ್ಲಿ ಮುಂದುವರೆದು ಮೀರ್ ಖಾಸಿಂನು ಮೊಘಲ ದೊರೆ 2ನೇ ಷಾ ಆಲಂ ಮತ್ತು ಔದ್ ನ ಷೂಜ್ – ಉದ್ – ದೌಲರೊಂದಿಗೆ ಒಪ್ಪಂದ ಮಾಡಿಕೊಂಡನು ಪರಿಣಾಮವಾಗಿ ಮೀರ್ ಖಾಸಿಂನ ನೇತೃತ್ವದ ಮೂರು ಸಂಯುಕ್ತ ಸೇನೆಗಳು ‘ ಹೆಕ್ಟರ್ ಮನ್ರೋ’ ನೇತೃತ್ವದ ಬ್ರಿಟಿಷ್ ಸೇನೆಯನ್ನು 1764ರಲ್ಲಿ ಬಕ್ಸರ್ ಎಂಬಲ್ಲಿ ಮುಖಾಮುಖಿಯಾದವು . ಅಂತಿಮವಾಗಿ ಯುದ್ಧದಲ್ಲಿ ಮೀರ್ ಕಾಸಿಂ ಸೋತು ಪಲಾಯನ ಮಾಡಿದರೆ ಷಾ ಆಲಂ ಶರಣಾಗತನದನು.
-: ಬಕ್ಸಾರ್ ಕದನದ ಪರಿಣಾಮಗಳು :-
* ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ಮೇಲಿನ ” ದಿವಾನಿ” ಹಕ್ಕನ್ನು ಎರಡನೇ ಷಾ ಆಲಂ ನೀಡಿದನು.
* ಷಾ ಆಲಂ ವಾರ್ಷಿಕ 26 ಲಕ್ಷ ರೂಪಾಯಿಗಳನ್ನು ಪಡೆದು ಬಂಗಾಳದ ಮೇಲಿನ ತನ್ನ ಹಕ್ಕನ್ನೆಲ್ಲಾ ಬಿಟ್ಟು ಕೊಡಬೇಕಾಯಿತು.
* ಔದ್ ನ ನವಾಬನಾದ ಷೂಜ್ – ಉದ್ – ದೌಲನು ಕಂಪನಿಗೆ ಯುದ್ಧ ನಷ್ಟವಾಗಿ 50 ಲಕ್ಷ ರೂಪಾಯಿಗಳನ್ನು ಕೊಡಬೇಕಾಯಿತು.
* ಮೀರ್ ಜಾಫರ್ ಮರಣ ಹೊಂದಿದ್ದರಿಂದ ಅವನ ಮಗನಿಗೆ ವಿಶ್ರಾಂತಿ ವೇತನ ನೀಡಿ, ಬಂಗಾಳದ ಪೂರ್ಣ ಆಡಳಿತವನ್ನು ಕಂಪನಿಯು ನಿರ್ವಹಿಸ ತೊಡಗಿತು.
* ಅಂತಿಮವಾಗಿ ಬಕ್ಸಾರ್ ಕದನವು ಬ್ರಿಟಿಷರು ಬಂಗಾಳ,ಬಿಹಾರ ಮತ್ತು ಒರಿಸ್ಸಾದ ನಿಜವಾದ ಒಡೆಯರೆಂದು ದೃಢೀಕರಿಸಿತು. ಹಾಗೂ ಔದ್ ಕೂಡ ಅವರ ದಿನದಲ್ಲಿ ಉಳಿಯುವಂತಾಯಿತು.
* 1765ರಲ್ಲಿ ರಾಬರ್ಟ್ ಕ್ಲೈವ್ ” ದ್ವಿಪ್ರಭುತ್ವ” ಪದ್ಧತಿಯನ್ನು ಜಾರಿಗೆ ತಂದನು.
* ದಿವಾನಿ ಹಕ್ಕು :- ” ಭೂ ಕಂದಾಯ ಮುಸಲಿ ಮಾಡುವ ಹಕ್ಕು ”
-: Important :-
* 1600ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಇಂಗ್ಲೆಂಡಿನಲ್ಲಿ ಸ್ಥಾಪನೆಯಾಯಿತು.
* 1602 ರಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿ ಪ್ರಾರಂಭವಾಯಿತು.
* 1617ರಲ್ಲಿ ಮೊಘಲ್ ಸುಲ್ತಾನ ಜಹಂಗೀರ್ ನು ಈಸ್ಟ್ ಇಂಡಿಯಾ ಕಂಪನಿಗೆ ಪಶ್ಚಿಮ ಕರಾವಳಿಯ ಸೂರತ್ ನಲ್ಲಿ ಹಾಗೂ ಪೂರ್ವ ಕರಾವಳಿಯ ಹೂಗ್ಲಿಯಲ್ಲಿ ವ್ಯಾಪಾರ ಮಾಡಲು ಅನುಮತಿಯನ್ನು ನೀಡಿದನು.
* 1639ರಲ್ಲಿ ಇಂಗ್ಲೀಷರು ತಮ್ಮ ಮೊದಲ ದಾಸ್ತಾನು ಕೋಟೆಯನ್ನು ಮದ್ರಾಸ್ನಲ್ಲಿ ಸ್ಥಾಪಿಸಿದರು.
* 1664ರಲ್ಲಿ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯು ಸ್ಥಾಪನೆಗೊಂಡಿದೆ.