* ಆಡಳಿತದಲ್ಲಿ ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದ ಗವರ್ನರ್ ಜನರಲ್ ?
-> ಕಾರ್ನವಾಲೀಸ್
* 1773ರಲ್ಲಿ ಇಂಗ್ಲೆಂಡಿನ ಸರ್ಕಾರ ರೆಗ್ಯೂಲೇಟಿಂಗ್ ಕಾಯ್ದೆಯನ್ನು ಭಾರತದಲ್ಲಿ ಜಾರಿಗೊಳಿಸಿತು.
* 1800ರಲ್ಲಿ ನಾಗರಿಕ ಸೇವೆಗೆ ಸೇರಬಯಸುವವರಿಗೆ ಶಿಕ್ಷಣವನ್ನು ನೀಡಲು ಕಾರ್ನವಾಲೀಸ್ ಕೋಲ್ಕತ್ತಾದಲ್ಲಿ ” ಪೋರ್ಟ್ ವಿಲಿಯಂ ಕಾಲೇಜನ್ನು” ಸ್ಥಾಪಿಸಿದನು. ಆದರೆ ಈಸ್ಟ್ ಇಂಡಿಯಾ ಕಂಪನಿಯ ನಿರ್ದೇಶಕರು ಇದಕ್ಕೆ ಬೆಂಬಲ ನೀಡಲಿಲ್ಲ.
* 1853 ರವರೆಗೆ ನಾಗರಿಕ ಸೇವೆಯ ಎಲ್ಲಾ ನೇಮಕಾತಿಗಳನ್ನು ಈಸ್ಟ್ ಇಂಡಿಯಾ ಕಂಪನಿಯ ನಿರ್ದೇಶಕರೇ ಮಾಡಿದರು.
* 1893ರ ನಂತರ ನಾಗರಿಕ ಸೇವೆಗೆ ಎಲ್ಲಾ ನೇಮಕಾತಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ಆಗಬೇಕೆಂಬ ತೀರ್ಮಾನವಾಯಿತು.
* ಹಿಂದೂಸ್ಥಾನದಲ್ಲಿರುವ ಪ್ರತಿಯೊಬ್ಬ ನಿವಾಸಿಯು ಬ್ರಷ್ಟನೆಂದು ಪ್ರತಿಪಾದಿಸಿದವನು ಯಾರು ?
-> ಕಾರ್ನ್ ವಾಲೀಸ್
* 1772 ರಲ್ಲಿ ಗವರ್ನರ್ ಜನರಲ್ ಆಗಿ ವಾರನ್ ಹೇಸ್ಟಿಂಗ್ಸ್ ಅಧಿಕಾರ ವಹಿಸಿಕೊಂಡು ಪ್ರತಿ ಜಿಲ್ಲೆಯಲ್ಲಿ 02 ಬಗೆಯ ನ್ಯಾಯಾಲಯಗಳನ್ನು ಸ್ಥಾಪಿಸಿದನು.
1) ದಿವಾನಿ ಅದಾಲತ್ – ನಾಗರಿಕ ನ್ಯಾಯಾಲಯ
2) ಫೌಜಧಾರಿ ಅದಾಲತ್ – ಅಪರಾಧ ನ್ಯಾಯಾಲಯ
* ಇಲ್ಲಿ ನಾಗರಿಕರ ನ್ಯಾಯಧಾನ ಸಂದರ್ಭದಲ್ಲಿ ಹಿಂದೂಗಳಿಗೆ ಹಿಂದೂಶಾಸ್ತ್ರ ಗ್ರಂಥಗಳ ಪ್ರಕಾರ ಮತ್ತು ಮುಸ್ಲಿಂರಿಗೆ ಷರಿಯತ್ ಕಾನೂನುಗಳ ಪ್ರಕಾರ ನ್ಯಾಯದಾನ ನೀಡಲಾಗುತ್ತಿತ್ತು.
* ಅಪರಾಧ ಪ್ರಕರಣಗಳು ಬಂದಾಗ ಎಲ್ಲಾರಿಗೂ ಇಸ್ಲಾಂ ಕಾನೂನುಗಳ ಪ್ರಕಾರ ವಿಚಾರಣೆ ನಡೆಸಲಾಗುತ್ತಿತ್ತು.
* ವಾರನ್ ಹೇಸ್ಟಿಂಗ್ಸ್ ” ಸೂಪರಿಡೆಂಟ್ ಆಫ್ ಪೋಲಿಸ್ ” ( SP) ಎನ್ನುವ ಹೊಸ ಹುದ್ದೆಯನ್ನು ಸೃಷ್ಠಿಸಿದನು.
* 1793ರಲ್ಲಿ ಪ್ರತಿ ಜಿಲ್ಲೆಯಲ್ಲೂ ಠಾಣೆಗಳನ್ನಾಗಿ ವಿಭಜಿಸಿ ಪ್ರತಿ ಠಾಣೆಯನ್ನು ಕೋತ್ವಾಲರ ಅಧೀನದಲ್ಲಿಯೂ, ಹಳ್ಳಿಗಳು ಚಾಕಿದಾರರ ಅಧೀನದಲ್ಲೂ ಇರುವಂತೆ ಮಾಡಿದನು.
* 1861ರಲ್ಲಿ ಪೋಲಿಸ್ ಕಾಯ್ದೆಯನ್ನು ಜಾರಿಗೊಳಿಸಲಾಯಿತು.
* 1902ರ ಪೋಲಿಸ್ ಕಮಿಷನ್ ಕಾಯ್ದೆಯು ವಿದ್ಯಾರ್ಹತೆಯನ್ನು ಪಡೆದವರನ್ನು ಅಧಿಕಾರಿ ಹುದ್ದೆಗೆ ನೇಮಿಸುವ ಅವಕಾಶವನ್ನು ಕಲ್ಪಿಸಿತು.
* ಬ್ರಿಟಿಷ್ ಸರ್ಕಾರದಲ್ಲಿ ಭಾರತೀಯರಿಗೆ ಲಭಿಸುತ್ತಿದ್ದ ಅತ್ಯುನ್ನತ ಹುದ್ದೆಯೆಂದರೆ ಸುಬೇದಾರ್
* 1857ರ ಘಟನೆಯ ನಂತರ ” ಪೀಲ್ ” ಎಂಬುವವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಶಿಫಾರಸುಗಳನ್ನು ಬ್ರಿಟಿಷ್ ಸರ್ಕಾರ ಪಡೆಯಿತು.
* 1793ರಲ್ಲಿ ಕಾರ್ನ್ ವಾಲಿಸ್ ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ ಖಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದನು. ಖಾಯಂ ಜಮೀನ್ದಾರಿ ಪದ್ಧತಿ ಕ್ರಮೇಣ ಒರಿಸ್ಸಾ,,ಆಂಧ್ರ , ಪ್ರಾಂತ್ಯಗಳಿಗೆ ವಿಸ್ತರಣೆಯಾಯಿತು.
* ಭೂ ಕಂದಾಯ ನೀತಿಯಿಂದಾಗಿ ಭಾರತದ ರೈತರು ” ಸಾಲದಲ್ಲೇ ಹುಟ್ಟಿ,ಸಾಲದಲ್ಲೇ ಬದುಕಿ,ಸಾಲದಲ್ಲೇ ಸತ್ತರು”- ಚಾರ್ಲ್ಸ್ ಮೆಟಾ ಕಾಫ್
* ಮಹಲ್ವಾರಿ ಪದ್ಧತಿಯನ್ನು ಜಾರಿಗೊಳಿಸಿದವರು – R.M ಬರ್ಡ್ ಮತ್ತು ಜೇಮ್ಸ್ ಥಾಮ್ಸನ್
* ರೈತವಾರಿ ಪದ್ಧತಿಯನ್ನು ಮೊದಲ ಬಾರಿಗೆ ಒಂದು ಪ್ರಯೋಗವಾಗಿ ಬಾರ್ ಮಹಲ್ ಪ್ರಾಂತ್ಯದಲ್ಲಿ ಜಾರಿಗೆ ತಂದವನು – 1792ರಲ್ಲಿ – ಅಲೆಗ್ಸಾಂಡರ್ ರೀಡ್
* ರೈತವಾರಿ ಪದ್ಧತಿಯನ್ನು ಥಾಮಸ್ ಮನ್ರೋ ಮದರಾಸು ಮತ್ತು ಮೈಸೂರು ಪ್ರಾಂತ್ಯಗಳಲ್ಲಿ 1801 ರಲ್ಲಿ ಜಾರಿಗೊಳಿಸಿದನು.
* ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿ – ವಾರನ್ ಹೇಸ್ಟಿಂಗ್ಸ್ ( 1781 ರಲ್ಲಿ )ಇವನು ಕಲ್ಕತ್ತಾ ಮದರಸಾವನ್ನು ಪ್ರಾರಂಭಿಸಿದ.
* 1792 ರಲ್ಲಿ ಬನಾರಸ್ಸಿನಲ್ಲಿ ಸ್ವತಂತ್ರ ಕಾಲೇಜನ್ನು ಆರಂಭಿಸಿದ ಬ್ರಿಟಿಷ್ ಅಧಿಕಾರಿ – ಜೋನಾಥನ್ ಡಂಕನ್
* ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿದವನು ?
-> ಚಾರ್ಲ್ಸ್ ಗ್ರಾಂಟ್
* 1828 ರಲ್ಲಿ ವಿಲಿಯಂ ಬೆಂಟಿಕ್ ಗವರ್ನರ್ ಜನರಲ್ ಆಗಿ ನೇಮಕಗೊಂಡ ನಂತರ ಬ್ರಿಟಿಷ್ ಶಿಕ್ಷಣದ ವಿಸ್ತರಣೆಗೆ ಮತ್ತಷ್ಟು ವಿಶೇಷ ಪ್ರೋತ್ಸಾಹ ದೊರೆಯಿತು.
* ವಿಲಿಯಂ ಬೆಂಟಿಕ್ ಸಾರ್ವಜನಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ನೇಮಕವಾದ ಸಮಿತಿಗೆ ಮೆಕಾಲೆಯನ್ನು ಅಧ್ಯಕ್ಷನನ್ನಾಗಿ ಮಾಡಲಾಯಿತು.
* ಮೆಕಾಲೆಯು ಕೊಟ್ಟ ವರದಿಯೇ ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿಯಾಯಿತು.
* ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಮೇಕಾಲಯ ಪ್ರಮುಖ ಅಂಶವೆಂದರೆ?
” ರಕ್ತ ಮತ್ತು ಮಾಂಸಗಳಲ್ಲಿ ಭಾರತೀಯರಾಗಿಯು ,ಅಭಿರುಚಿ ಮತ್ತು ಅಭಿಪ್ರಾಯ ನೀತಿ ಬುದ್ಧಿವಂತಿಕೆಯಲ್ಲಿ ಇಂಗ್ಲಿಷರಾಗುವ,ಹೊಸ ಭಾರತೀಯ ವಿದ್ಯಾವಂತ ವರ್ಗವನ್ನು ಸೃಷ್ಟಿ ಮಾಡುವುದು ”
* ಚಾಲ್ಸ್ ವುಡ್ ನ ( 1854) ಆಯೋಗದ ಶಿಫಾರಸ್ಸುಗಳ ಆಧಾರದ ಮೇಲೆ ಅಂದಿನ ಗವರ್ನರ್ ಜನರಲ್ ಆದ ಲಾರ್ಡ್ ಡಾಲ್ ಹೌಸಿಯು ಕಲ್ಕತ್ತಾ ಬಾಂಬೆ ಮತ್ತು ಮದರಸಗಳಲ್ಲಿ ನೂತನ ವಿಶ್ವವಿದ್ಯಾಲಯಗಳನ್ನು 1857 ರಲ್ಲಿ ಸ್ಥಾಪಿಸಿದನು.
-: ಸಂವಿಧಾನಾತ್ಮಕ ಬೆಳವಣಿಗೆ :-
* ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯ ಅವಧಿಯಲ್ಲಿ ಜಾರಿಗೊಂಡ ಕಾಯ್ದೆಗಳು ( 1773-1858)
-: 1773ರ ರೆಗ್ಯುಲೇಟಿಂಗ್ ಕಾಯ್ದೆ :-
* ವಾರ್ಷಿಕವಾಗಿ ಈಸ್ಟ್ ಇಂಡಿಯಾ ಕಂಪನಿಯಿಂದ ಬ್ರಿಟಿಷ್ ಸರ್ಕಾರ ಪಡೆಯುತ್ತಿದ್ದ ತೆರಿಗೆ ಹಣವನ್ನು ” ಅಪರಾಧ ತೆರಿಗೆ ” ಎಂದು ಟೀಕಿಸಿದ ಇಂಗ್ಲೆಂಡಿನ ಶಾಸನಸಭೆಯ ಸದಸ್ಯ ಯಾರು?
-> ಎಡ್ಮಂಡ್ ಬರ್ಕ್
* ಕಂಪನಿ ಅಧಿಕಾರಿಗಳು ಭಾರತದಲ್ಲಿ ನಡೆಸುತ್ತಿರುವ ಅನೈತಿಕ ವ್ಯವಹಾರಗಳು ಗೊತ್ತಿದ್ದರೂ ಯಾವುದೇ ಕ್ರಮವನ್ನು ಜರಗಿಸದೆ ಸುಮ್ಮನಿದ್ದುದ್ದೆ ಎಡ್ಮಂಡ ಬರ್ಕ್ ಮೇಲಿನಂತೆ ಹೇಳಲು ಕಾರಣವಾಗಿತ್ತು. ಇವರು ಸಂಪಾದಿಸಿದ ಹಣದ ಪ್ರಮಾಣ ಎಷ್ಟಿತ್ತೆಂದರೆ ಇಂಗ್ಲೆಂಡಿನ ರಾಜಕೀಯ ವ್ಯವಸ್ಥೆಯನ್ನು ಬುಡಮೇಲು ಮಾಡಬಹುದೆನ್ನುವ ಅತ್ಯಂತ ಆತಂಕ ಇಂಗ್ಲೆಂಡಿನಲ್ಲಿ ಅನೇಕರಿಗಿತ್ತು. ಈ ಹಿನ್ನೆಲೆಯಲ್ಲಿ ರೇಗುಲೇಟಿಂಗ್ ಕಾಯ್ದೆ 1773 ರಲ್ಲಿ ಜಾರಿಗೊಂಡಿತು.
-: ರೆಗ್ಯುಲೇಟಿಂಗ್ ಕಾಯ್ದೆಯ ಲಕ್ಷಣಗಳು :-
* ಈ ಕಾಯ್ದೆಯು ಜಾರಿಗೆ ಬರುವ ಪೂರ್ವದಲ್ಲಿ ಬ್ರಿಟಿಷರ ದಿನದಲ್ಲಿದ್ದ ಪ್ರಾಂತ್ಯಗಳನ್ನು ಮೂರು ಪ್ರೆಸಿಡೆನ್ಸಿಗಳಾಗಿ ವಿಂಗಡಿಸಿತು ಅವುಗಳೆಂದರೆ ಬಂಗಾಳ ಮುಂಬೈ ಮತ್ತು ಮದ್ರಾಸ್ ಪ್ರೆಸಿಡೆನ್ಸಿಗಳು ಅವುಗಳು ಪ್ರತ್ಯೇಕವಾಗಿಯೂ ಮತ್ತು ಸ್ವತಂತ್ರವಾಗಿಯೂ ಕಾರ್ಯನಿರ್ವಹಿಸುತ್ತಿದ್ದವು ಈ ಕಾಯ್ದೆಯ ಪ್ರಕಾರ ಬಂಗಾಳದ ರೆಸಿಡೆನ್ಸಿಯು ಉಳಿದ ಎರಡು ಪ್ರೆಸಿಡೆನ್ಸಿಗಳ ಮೇಲೆ ಅಧಿಕಾರವನ್ನು ಪಡೆಯಿತು.
* ಬಂಗಾಳದ ಗವರ್ನರ್ ಅನ್ನು ಮೂರು ಪ್ರೆಸಿಡೆನ್ಸಿಗೆ ಗೌರ್ನರ್ ಆದನು.
* ಗವರ್ನರ್ ಜನರಲ್ನಿಗೆ ಬಾಂಬೆ ಮತ್ತು ಮದ್ರಾಸ್ ಪ್ರೆಸಿಡೆನ್ಸಿಗಳಿಗೆ ನಿರ್ದೇಶಿಸುವ ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ಮಾಡುವ ಅಧಿಕಾರವನ್ನು ಈ ಕಾನೂನು ನೀಡಿತು.
* ಬಂಗಾಳ ಸರ್ಕಾರದ ಮತ್ತು ಇಂಗ್ಲೆಂಡಿನ ನಿರ್ದೇಶಕ ಮಂಡಳಿಯ (Court of Directors) ಪೂರ್ವಾನುಮತಿ ಇಲ್ಲದೆ ಯಾರ ಮೇಲೆ ಯುದ್ಧ ಘೋಷಿಸುವಂತಿಲ್ಲ. ಅಥವಾ ಶಾಂತಿಯ ಸಂಧಾನವನ್ನು ನಡೆಸುವಂತಿಲ್ಲ ತೀರಾ ತುರ್ತಾದ ಸಂದರ್ಭಗಳಲ್ಲಿ ಮಾತ್ರ ಇಂತಹ ನಿಬಂಧನೆಗಳಿಂದ ವಿನಾಯಿತಿ ಇತ್ತು.
* ಕಲ್ಕತ್ತದಲ್ಲಿ ಈ ಕಾಯ್ದೆಯ ಮೇರೆಗೆ ” ಸುಪ್ರೀಂ ಕೋರ್ಟ್ ” ಸ್ಥಾಪನೆಯಾಯಿತು ಈ ನ್ಯಾಯಾಲಯದಲ್ಲಿ ಒಬ್ಬರು ಮುಖ್ಯ ನ್ಯಾಯಾಧೀಶರು ಮತ್ತು ಮೂರು ಜನ ಸಾಮಾನ್ಯ ನ್ಯಾಯಾಧೀಶರು ಕಾರ್ಯ ನಿರ್ವಹಿಸಿದ್ದರು.
-: 1784ರ ಪಿಟ್ಸ್ ಇಂಡಿಯಾ ಕಾಯ್ದೆ :-
* 1773ರ ರೆಗ್ಯುಲೇಟಿಂಗ್ ಕಾಯ್ದೆಯಲ್ಲಿ ಕೆಲವು ಅನಿಶ್ಚಿತತೆಗಳು ಇದ್ದವು.ಇವುಗಳನ್ನು ನಿವಾರಿಸುವುದರ ಜೊತೆಗೆ ಬ್ರಿಟಿಷ್ ಸರ್ಕಾರದ ಅಧಿಕಾರವನ್ನು ಮತ್ತು ಕಂಪನಿ ಸರ್ಕಾರಕ್ಕೆ ಇದ್ದ ಅಧಿಕಾರದ ಮಿತಿಗಳನ್ನು ಸ್ಪಷ್ಟ ಪಡಿಸುವುದೇ ಈ ಕಾಯ್ದೆಯ ಉದ್ದೇಶವಾಗಿತ್ತು.
* ಈ ಕಾಯ್ದೆಯಡಿ ನಿಯಂತ್ರಣ ಮಂಡಳಿ ಹುಟ್ಟಿಕೊಂಡಿತು ಇದರಲ್ಲಿ ಆರು ಜನ ಕಮಿಷನರ್ ಒಳಗೊಂಡ ಸಂಸ್ಥೆಯಾಯಿತು ಇದು ಹಿಂದೆ ಇದ್ದ ನಿರ್ದೇಶನ ಮಂಡಳಿಯ ಜಾಗದಲ್ಲಿ ನಿಯಂತ್ರಣ ಮಂಡಳಿ ಹುಟ್ಟಿಕೊಂಡಿತು.
* ಈ ನಿಯಂತ್ರಣ ಮಂಡಳಿ ನಾಗರಿಕ,ಮಿಲಿಟರಿ, ಕಂದಾಯದ ವಿಷಯಗಳಲ್ಲಿ ನಿರ್ದೇಶಿಸುವ, ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ನಡೆಸುವ ಅಧಿಕಾರವನ್ನು ಪಡೆದಿತ್ತು .ಇಂಗ್ಲೆಂಡಿನಲ್ಲಿ ನಿರ್ದೇಶಕ ಮಂಡಳಿ ಮತ್ತು ನಿಯಂತ್ರಣ ಮಂಡಳಿ ಎರಡು ಜಾರಿಯಲ್ಲಿದ್ದವು.
* ” ಭಾರತೀಯರು ತಮ್ಮ ಸಾರ್ವಭೌಮತ್ವವನ್ನು ಬ್ರಿಟಿಷ್ ರಾಜ್ಯ ಸತ್ತೆಯಲ್ಲಿ ಹೆಸರಿನಲ್ಲಿ ಪಡೆದಿದ್ದಾರೆ ವಿನ: ಅವರದೇ ಸ್ವಂತ ಹಕ್ಕಲ್ಲ ” ಎಂದು ಪಿಟ್ಸ್ ಇಂಡಿಯಾ ಕಾಯ್ದೆಯಲ್ಲಿ ಹೇಳುವ ಮೂಲಕ ಭಾರತೀಯರ ರಾಜಕೀಯ ಹಕ್ಕುಗಳನ್ನು ನಿರ್ಣಾಯಕವಾಗಿ ಮೊಟಕುಗಳಿಸಿತು ಈ ಕಾಯ್ದೆಯು ಭಾರತದಲ್ಲಿದ್ದ ಕಂಪನಿಯ ಅಧಿನದ ಪ್ರದೇಶಗಳಿಗೆ ಇಂಗ್ಲೆಂಡಿನ ಸರ್ಕಾರವೇ ಅಂತಿಮ ಸಾರ್ವಭೌಮನೆಂದು ಘೋಷಿಸಿತು.