ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮ – ಭಾಗ – 02 (All Competative exam notes)

 -: ಚಾರ್ಟರ್ ಕಾಯ್ದೆಗಳು :-

* ಚಾರ್ಟರ್ ಕಾಯ್ದೆಗಳ ಉದ್ದೇಶ ಭಾರತದಲ್ಲಿದ ಈಸ್ಟ್ ಇಂಡಿಯಾ ಕಂಪನಿ ಪರವಾನಗಿಯನ್ನು ವಿಸ್ತರಿಸುವುದು.1793,1813,1833,ಮತ್ತು1853 ರಲ್ಲಿ ಚಾರ್ಟ್ ರ ಕಾಯ್ದೆಗಳನ್ನು ಜಾರಿಗೆ ತರಲಾಯಿತು. ಈ 4 ಕಾಯ್ದೆಗಳಲ್ಲಿ 1813 ಮತ್ತು 1833 ರ ಕಾಯ್ದೆಗಳು ವಿವಿಧ ಕಾರಣಗಳಿಂದ ಪ್ರಮುಖವಾದವು. ಪ್ರತಿ 20 ವರ್ಷಕ್ಕೊಮ್ಮೆ ಕಂಪನಿಯ ಪರವಾನಗಿಯನ್ನು ನವೀಕರಣ ಮಾಡುವ ಸಂದರ್ಭದಲ್ಲಿ ಇಂಗ್ಲೆಂಡಿನ ಸರ್ಕಾರ ತೆಗೆದುಕೊಂಡ ಹೊಸ ನೀತಿಗಳನ್ನ ಈ ಕಾಯ್ದೆಗಳಲ್ಲಿ ಸೇರಿಸಲಾಗಿದೆ.

 -: 1813 ಚಾರ್ಟರ್ ಕಾಯ್ದೆ :-

* ಈ ಕಾಯ್ದೆಯು ಈಸ್ಟ್ ಇಂಡಿಯಾ ಕಂಪನಿಗೆ ಮುಂದಿನ 20 ವರ್ಷಗಳು ಭಾರತದಲ್ಲಿರುವ ಅಧಿಕಾರವನ್ನು ನೀಡಿತು. ಈ ಕಾಯ್ದೆಯು ಜಾರಿಗೊಳ್ಳುವ ಪೂರ್ವದಲ್ಲಿ ಭಾರತದಲ್ಲಿ ವ್ಯಾಪಾರ ಮಾಡುವ ಅಧಿಕಾರವನ್ನು ಕಂಪನಿಗೆ ಮಾತ್ರವಲ್ಲದೇ ಇಚ್ಚೆಯುಳ್ಳವರೆಲ್ಲರಿಗೂ ಈ ಕಾಯ್ದೆಯು ಅವಕಾಶವನ್ನು ಮುಕ್ತವಾಗಿಸಿತು. ಇದರ ಪರಿಣಾಮವಾಗಿ ಮುಕ್ತ ವ್ಯಾಪಾರದ ಶಕೆ ಆರಂಭಗೊಂಡಿತು.

* ಅನುಮತಿ ಮತ್ತು ಪರಲಾನಗಿಯ ಹೊಸ ಕಾಲ ಆರಂಭವಾಯಿತು.

* ಇನ್ನು ಮುಂದೆ ಗವರ್ನರ್ ಜನರಲ್ ಮತ್ತು ಸೇನೆಯ ಮಹಾಮುಖ್ಯಸ್ಥರನ್ನು (Commonder in Chief) ನಿರ್ದೇಶಕ ಮಂಡಳಿಯು ನೇಮಿಸುವ ಅಧಿಕಾರವನ್ನು ಹೊಂದಿತು.

* ಚರ್ಚ್ ಗಳಿಗೆ ಭಾರತಕ್ಕೆ ಪ್ರವೇಶಿಸುವ  ಅಧಿಕೃತ ಅವಕಾಶವನ್ನು ನೀಡಲಾಯಿತು. ಭಾರತೀಯರಲ್ಲಿ ಹೊಸ ಜ್ಞಾನವನ್ನು ಪಸರಿಸುವ, ಅವರ ನೈತಿಕ ಮತ್ತು ಧಾರ್ಮಿಕ ಬದುಕನ್ನು ಎತ್ತರಿಸುವ ಜವಾಬ್ದಾರಿಯನ್ನು ಮಿಶನರಿ ಸಂಸ್ಥೆಗಳು ವಹಿಸಿಕೊಳ್ಳಬೇಕು ಎಂಬುವ ನಿರ್ದೇಶನವನ್ನು ನೀಡಲಾಯಿತು ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಕ್ರೈಸ್ತ ಮಿಷಿನರಿಗಳು ಭಾರತಕ್ಕೆ ಬಂದವು ಕ್ರೈಸ್ತ ಧರ್ಮದ ಪ್ರಚಾರ ಮತ್ತು ಇಂಗ್ಲಿಷ್ ಶಿಕ್ಷಣದ ವಿಸ್ತರಣೆ ಹೆಚ್ಚಾಯಿತು.

  -: 1833ರ ಚಾರ್ಟರ್ ಕಾಯ್ದೆ :-

* ಈ ಕಾಯ್ದೆಯನ್ವಯ ಬಂಗಾಳದ ಗವರ್ನರ್ ಜನರಲ್ ನನ್ನು ಭಾರತದ ಗವರ್ನರ್ ಜನರಲ್ ಆಗಿ ನಾಮಕರಣ ಮಾಡಲಾಯಿತು.

* ಭಾರತದ ಎಲ್ಲಾ ವ್ಯಾಪಾರಿ ಸರಕುಗಳನ್ನು ನಿರ್ದೇಶಿಸುವ,ನಿಯಂತ್ರಿಸುವ ಮೇಲ್ವಿಚಾರಣೆ ನಡೆಸುವ ಅಧಿಕಾರವನ್ನು ಗೌರ್ನರ್ ಜನರಲ್ ಪಡೆದನು.

* ದೇಸಿ ಸಂಸ್ಥಾನಗಳ ಜೊತೆಗೆ ಯುದ್ಧ,ಶಾಂತಿ ಮತ್ತು ರಾಜ ತಾಂತ್ರಿಕ ಸಂಬಂಧದ ಎಲ್ಲಾ ವಿಷಯಗಳನ್ನು ಬಂಗಾಳದ ಕೇಂದ್ರ ಸರ್ಕಾರವೇ ತೀರ್ಮಾನಿಸುವ ಹಕ್ಕನ್ನು ಹೊಂದಿತ್ತು.

* ಗೌರ್ನರ್ ಜನರಲ್ ನ ಕಾರ್ಯಾಂಗ ಸಭೆಯಲ್ಲಿ ಉಳಿದ ಸದಸ್ಯರ ಜೊತೆಗೆ ಗೌರ್ನರ್ ಜನರಲ್ ಗೆ ಯಾವುದಾದರೂ ವಿಷಯದ ಮೇಲೆ ಒಮ್ಮತ ಮಾಡಿದ್ದಾಗ ಅವನು ಬಹುಮತದ ನಿರ್ಣಯವನ್ನು ತಿರಸ್ಕರಿಸಲು ಇದ್ದ ಕಾರಣಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಬೇಕಾಯಿತು.

* ಧರ್ಮ,ಬಣ್ಣ ಮತ್ತು ಹುಟ್ಟಿನ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡುವಂತಿಲ್ಲ ಎನ್ನುವುದು ಈ ಕಾಯ್ದೆಯು ನಿರ್ದೇಶಿಸಿತು.

* ಗೌರ್ನರ್ ಜನರಲ್ ನ ಕಾರ್ಯಾಂಗ ಸಭೆಗೆ ನ್ಯಾಯಾಂಗ ಪರಿಣಿತನನ್ನು ಸದಸ್ಯನನ್ನಾಗಿ ನೇಮಕ ಮಾಡಿಕೊಳ್ಳಬೇಕಾಯಿತು.

* ಎಲ್ಲಾ ಬ್ರಿಟಿಷ್ ವ್ಯಾಪಾರಿ ಕಂಪನಿಗಳಿಗೆ ಭಾರತಕ್ಕೆ ಬರಲು ಮುಕ್ತ ಪರವಾನಿಗೆಯನ್ನು ನೀಡಲಾಯಿತು.

* ಈ ಕಾಯ್ದೆಯೂ 1830 ದಶಕದ ಭಾರತದ ಆಂತರಿಕ ಮತ್ತು ಇಂಗ್ಲೆಂಡಿನಲ್ಲಿದ್ದ ವಿವಿಧ ರಾಜಕೀಯ ವಿದ್ಯುನ್ಮಾನಗಳ ಮೇಲೆ ಬೆಳಕನ್ನು ಚೆಲ್ಲಿತು.

 -: ಬ್ರಿಟಿಷ್ ಸರ್ಕಾರದ ಕಾಯ್ದೆಗಳು (1858-1947) :-

* ಈಸ್ಟ್ ಇಂಡಿಯಾ ಕಂಪನಿಯ ದುರಾಡಳಿತ ಹಾಗೂ ಭಾರತ ವಿರೋಧಿ ಕಾಯ್ದೆಗಳಿಂದಾಗಿ 1857 ರಲ್ಲಿ ಸಿಪಾಯಿ ದಂಗೆ ಸಂಭವಿಸಿತು ಇದರಿಂದಾಗಿ ಕಂಪನಿಯ ಆಡಳಿತವು ಬ್ರಿಟನ್ ರಾಣಿಗೆ ಹಸ್ತಾಂತರವಾಯಿತು ಈ ಅವಧಿಯಲ್ಲಿ ಜಾರಿಗೆ ಬಂದ ಪ್ರಮುಖ ಕಾಯ್ದೆಗಳೆಂದರೆ ಭಾರತ ಸರ್ಕಾರ ಕಾಯ್ದೆ 1858,1861, 1892, 1909, 1919 ಮತ್ತು 1935 ರ ಕಾಯ್ದೆಗಳು.

-: ಭಾರತ ಸರ್ಕಾರ ಕಾಯ್ದೆ- 1858 :-

* ಭಾರತವು ಬ್ರಿಟಿಷ್ ಸರ್ಕಾರದ ನೇರ ಆಡಳಿತಕ್ಕೆ ಒಳಗಾಯಿತು.

* ನವಂಬರ್ 1 1858 ರಂದು ಬ್ರಿಟಿಷ್ ರಾಣಿ ವಿಕ್ಟೋರಿಯಾ ಒಂದು ಘೋಷಣೆ ಹೊರಡಿಸಿ ತಮ್ಮ ಆಡಳಿತದ ಅವಧಿಯಲ್ಲಿ ಭಾರತದ ಎಲ್ಲಾ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದೆಂದು ಘೋಷಿಸಿದರು.

-: ಈ ಕಾಯ್ದೆಯ ಪ್ರಮುಖ ಅಂಶಗಳು :-

* ಈಸ್ಟ್ ಇಂಡಿಯಾ ಕಂಪನಿಯ ಮಾನ್ಯತೆ ರದ್ದುಗೊಳಿಸಿ,ಭಾರತವನ್ನು ರಾಣಿಯವರ ಆಡಳಿತಕ್ಕೆ ವರ್ಗಾಯಿಸಲಾಯಿತು.

* ಗೌರ್ನರ್ ಜನರಲ್ ಹುದ್ದೆಯ ಪದನಾಮವನ್ನು ಬದಲಾಯಿಸಿ ವೈಸ್ರಾಯ್ ಎಂಬ ಪದನಾಮವನ್ನು ನೀಡಿದರು ವೈಸರಾಯ್ ಆಗಿ ” ಲಾರ್ಡ್ ಕ್ಯಾನಿಂಗ್ ” ನೇಮಕ.

* ” ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ ” ಸ್ಥಾನವನ್ನು ಬ್ರಿಟಿಷ್ ಸರ್ಕಾರ ಸೃಷ್ಟಿಸಿತು ಬ್ರಿಟಿಷ್ ಮಂತ್ರಿ ಮಂಡಲದ ಸದಸ್ಯರಾಗಿದ್ದ ಇವರು ಭಾರತದ ಆಡಳಿತವನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದ್ದರು. ಇವರಿಗೆ ಸಹಾಯ ಮಾಡಲು 15 ಸದಸ್ಯರನ್ನು ಒಳಗೊಂಡ ಭಾರತ ಮಂಡಳಿ ( ಕೌನ್ಸಿಲ್ ಆಫ್ ಇಂಡಿಯಾ) ಅಸ್ತಿತ್ವಕ್ಕೆ ಬಂದಿತು.

 -: 1861ರ ಭಾರತೀಯ ಪರಿಷತ್ ಕಾಯ್ದೆ :-

* ಈ ಕಾಯ್ದೆಯು 1857ರ ಘಟನೆಯ ನಂತರ ಜಾರಿಗೊಂಡ ಪ್ರಮುಖ ಕಾಯ್ದೆಯಾಗಿದೆ ಈ ಕಾಯ್ದೆಯ ಮೂಲಕ ಭಾರತೀಯರಿಗೆ ಶಾಸನ ರೂಪಿಸುವ ಪ್ರಕ್ರಿಯೆಯಲ್ಲಿ ಸ್ಥಾನವನ್ನು ಕಲ್ಪಿಸಲಾಯಿತು. ಭಾರತೀಯರು ಬ್ರಿಟಿಷರ ಬಗೆಗೆ ತಿಳಿದಿರುವ ಅಭಿಪ್ರಾಯಗಳನ್ನು ತಿಳಿಯಲು ಭಾರತೀಯರಿಗೆ ಪ್ರಾತಿನಿಧ್ಯ ನೀಡಲಾಯಿತು ಇದನ್ನು ಇಂಗ್ಲಿಷ್ನಲ್ಲಿ ”policy of Assertion ” ಎಂದು ಕರೆಯುತ್ತಾರೆ.

 -: ಈ ಕಾಯ್ದೆಯ ಪ್ರಮುಖ ಅಂಶಗಳು :-

* ವೈಸರಾಯ್ ಕೌನ್ಸಿಲ್ ಗೆ ಭಾರತೀಯರನ್ನು ಅಧಿಕಾರೇತರ ಸದಸ್ಯರಾಗಿ ನಾಮಕರಣ ಮಾಡಲಾಯಿತು.

* ತುರ್ತು ಸಂದರ್ಭದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಅಧಿಕಾರವನ್ನು ಗೌರ್ನರ್ ಜನರಲ್ ಗೆ ನೀಡಲಾಯಿತು.

 -: 1892ರ ಭಾರತೀಯ ಪರಿಷತ್ ಕಾಯ್ದೆ :-

* ಈ ಕಾಯ್ದೆಯು 1861ರ ಕಾಯ್ದೆಯ ಮುಂದುವರಿದ ಕಾಯ್ದೆಯಾಗಿದೆ.

* 1892ರ ಕಾಯ್ದೆಯು, ಭಾರತೀಯ ರಾಗಿದ್ದ ಶಾಸನ ಸಭೆಗಳ ಪ್ರಾತಿನಿಧ್ಯವನ್ನು ಮತ್ತಷ್ಟು ವಿಸ್ತರಿಸಿತು.

 -: ಈ ಕಾಯ್ದೆಯ ಪ್ರಮುಖ ಅಂಶಗಳು :-

* ಕೇಂದ್ರ ಹಾಗೂ ಪ್ರಾಂತೀಯ ಶಾಸನಸಭೆಗಳಲ್ಲಿ ಹೆಚ್ಚುವರಿ ಸದಸ್ಯರ ಸಂಖ್ಯೆಯನ್ನು ಅಧಿಕಗೊಳಿಸಲಾಯಿತು.

* ಶಾಸನಸಭೆಯ ಅಧಿಕಾರವನ್ನು ಹೆಚ್ಚಿಸಿ ಅವುಗಳಲ್ಲಿ ಬಜೆಟ್ ಬಗ್ಗೆ ಚರ್ಚಿಸುವ ಅಧಿಕಾರವನ್ನು ನೀಡಲಾಯಿತು.

* ಆರು ದಿನಗಳ ಮುಂಚೆ ಮುನ್ಸೂಚನೆ ನೀಡಿ ಸಾರ್ವಜನಿಕ ಆಸಕ್ತಿಯ ವಿಷಯಗಳ ಬಗ್ಗೆ ಸರ್ಕಾರವನ್ನು ಪ್ರಶ್ನಿಸುವ ಹಕ್ಕನ್ನು ನೀಡಲಾಯಿತು.

-: 1909ರ ಭಾರತೀಯ ಪರಿಷತ್ ಕಾಯ್ದೆ :-

* ಈ ಕಾಯ್ದೆಯನ್ನು ಮಿಂಟೋ ಮಾರ್ಲೆ ಕಾಯ್ದೆ ಎನ್ನುವರು ಏಕೆಂದರೆ ಮಿಂಟೋ – ಭಾರತದ ವೈಸ್ರಾಯ್ ಆಗಿದ್ದರು ಲಾರ್ಡ್ ಮಾರ್ಲೆ ಭಾರತದ ಸೆಕ್ರೆಟರಿ ಆಫ್ ಸ್ಟೇಟಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಬ್ರಿಟಿಷರು ಭಾರತೀಯರನ್ನು ಒಡೆದು ಆಳುವ ಈ ನೀತಿಯನ್ನು ಬಳಸಿಕೊಂಡರು.

 -: ಈ ಕಾಯ್ದೆಯ ಪ್ರಮುಖ ಅಂಶಗಳು :-

* ಕೇಂದ್ರ ಶಾಸನ ಸಭೆಯ ಸದಸ್ಯರ ಸಂಖ್ಯೆಯನ್ನು 16 ರಿಂದ 60 ಕ್ಕೆ ಹೆಚ್ಚಿಸುವುದು.

* ಪ್ರಾಂತ್ಯಗಳಲ್ಲೂ ಶಾಸನಸಭೆಗಳ ಸದಸ್ಯರ ಸ್ಥಾನಗಳನ್ನು ಹೆಚ್ಚಿಸಲಾಯಿತು.

* ಮೊದಲ ಬಾರಿಗೆ ಚುನಾವಣೆ ಮೂಲಕ ಶಾಸನ ಸಭೆಗೆ ಆಯ್ಕೆಯಾಗಲು ಅವಕಾಶ ನೀಡಲಾಯಿತು.

* ಮುಸ್ಲಿಮರಿಗೆ ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯ ನೀಡುವ ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.

 -: ಭಾರತ ಸರ್ಕಾರದ ಕಾಯ್ದೆ – 1919 :-

* ಈ ಕಾಯ್ದೆಯನ್ನು ಮಾಂಟೆಗೋ – ಚೇಮ್ಸ್ ಫರ್ಡ್ ಸುಧಾರಣಾ ಕಾಯ್ದೆ ಎಂದು ಕರೆಯುವರು.

* ಮೊದಲ ಮಹಾಯುದ್ಧದ ಸಂದರ್ಭದಲ್ಲಿ ( 1914 1918) ಭಾರತೀಯರನ್ನು ಯುದ್ಧದಲ್ಲಿ ಬ್ರಿಟಿಷರ ಪರವಾಗಿ ಭಾಗವಹಿಸಲು ಪ್ರವೇಶದ ಹಿನ್ನೆಲೆಯಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು.

* ಸೆಕ್ರೆಟರಿ ಆಫ್ ಸ್ಟೇಟ್ ಆಗಿದ್ದ ಮಾಂಟೆಗೊ ಅವರು ಬ್ರಿಟನ್ನಿನ ಸಂಸತ್ ನಲ್ಲಿ 20-08- 1917 ರಂದು ಮಾಡಿದ ಘೋಷಣೆಯ ಹಿನ್ನೆಲೆಯಲ್ಲಿ ಈ ಕಾಯ್ದೆ ರೂಪಗೊಂಡಿದೆ.

* ಮಾಂಟೇಗೋ ಅವರು ” ಭಾರತೀಯರಿಗೆ ಅಂತ ಅಂತವಾಗಿ ಜವಾಬ್ದಾರಿ ಸರ್ಕಾರವನ್ನು ನೀಡುವುದೇ ಬ್ರಿಟಿಷ್ ಸರ್ಕಾರದ ಗುರಿ ” ಎಂದು ಘೋಷಿಸಿದರು.

* ಭಾರತದ ವೈಸರಾಯ್ ಆಗಿದ್ದ ಚೇಮ್ಸ್ ಫರ್ಡ್ ಅವರು ರಾಜಕೀಯ ಸುಧಾರಣೆಗಳಿಗೆ ಧ್ವನಿಗೂಡಿಸಿದರು ಪರಿಣಾಮವಾಗಿ 1919ರಲ್ಲಿ ಈ ಕಾಯ್ದೆ ಜಾರಿಗೆ ಬಂದಿತು.

 -: 1919ರ ಕಾಯ್ದೆಯ ಪ್ರಮುಖ ಅಂಶಗಳು :-

* ಕೇಂದ್ರದಲ್ಲಿ ದ್ವಿ ಸದನ ಶಾಸಕಾಂಗ ರಚನೆಗೆ ಅವಕಾಶ ನೀಡಿತು.

* ಅವುಗಳೆಂದರೆ ಶಾಸಕಾಂಗ ಸಭೆ(ಕೆಳಮನೆ) ಮತ್ತು ರಾಜ್ಯಗಳ ಪರಿಷತ್( ಮೇಲ್ಮನೆ) ರಚಿಸಲಾಯಿತು.

* ಭಾರತಕ್ಕೆ ಒಬ್ಬ ಹೈ- ಕಮಿಷನರ್ ಅನ್ನು ನೇಮಕ ಮಾಡಲಾಯಿತು.

* ಸ್ವಯಂ ಆಡಳಿತವು ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಭರವಸೆ ನೀಡಲಾಯಿತು.

* ಕೇಂದ್ರದ ಬಜೆಟ್ ನಿಂದ ಪ್ರಾಂತ್ಯಗಳ ಬಜೆಟ್ ನ್ನು ಬೇರ್ಪಡಿಸಲಾಯಿತು.

* ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ಮುಸ್ಲಿಂ,ಸಿಖ್, ಆಂಗ್ಲೋ ಭಾರತೀಯರು ಮತ್ತು ಯುರೋಪಿಯನ್ನರಿಗೆ ವಿಸ್ತರಿಸಲಾಯಿತು.

 -: 1935 ರ ಭಾರತ ಸರ್ಕಾರ ಕಾಯ್ದೆ :-

* ಭಾರತದ ಸಂವಿಧಾನದ ರಚನೆಗೆ ಈ ಕಾಯ್ದೆಯು ಬುನಾದಿಯಾಗಿದೆ.

* ಈ ಕಾಯ್ದೆಯ ರೂಪಗೊಳ್ಳಲು ಮೋತಿಲಾಲ್ ನೆಹರು ಅವರು ಅಧ್ಯಕ್ಷತೆಯಲ್ಲಿ ತಯಾರಾದ 1928ರ ವರಧಿಯು ಮುಖ್ಯವಾಗಿದೆ.

* ಸಂವಿಧಾನದ ಬಹುತೇಕ ಅಂಶಗಳು ಈ ಕಾಯ್ದೆಯನಾಧರಿಸಿ ರಚಿಸಲಾಗಿದೆ.

* ಈ ಕಾಯ್ದೆಯು ಭಾರತಕ್ಕೆ ಸಂಪೂರ್ಣ ಜವಾಬ್ದಾರಿಯುತ ಸರಕಾರ ರಚಿಸಲು ಅವಕಾಶ ನೀಡಿತು.

* ಇದು ಬ್ರಿಟಿಷ್ ಭಾರತದ ಪ್ರಾಂತ್ಯಗಳಿಗೆ ಮಾತ್ರ ಅನ್ವಯವಾಗದೆ ದೇಶಿಯ ಸಂಸ್ಥಾನಗಳಿಗೆ ಅನ್ವಯವಾಗುವ ಅಂಶಗಳನ್ನು ಒಳಗೊಂಡಿತ್ತು.

 -: 1935 ರ ಕಾಯ್ದೆಯ ಪ್ರಮುಖ ಅಂಶಗಳು :-

* ಬ್ರಿಟಿಷ್ ಪ್ರಾಂತ್ಯಾಗಳು,ದೇಶಿಯ ಸಂಸ್ಥಾನಗಳು ಹಾಗೂ ಆಶ್ರಿತ ರಾಜರನ್ನು ಒಳಗೊಂಡ ಅಖಿಲ ಭಾರತ ಒಕ್ಕೂಟವನ್ನು ರಚಿಸಲು ಅವಕಾಶ ನೀಡಿತು.

* ಕೇಂದ್ರದಲ್ಲಿ ದ್ವಿ ಸರ್ಕಾರವನ್ನು ಸ್ಥಾಪಿಸಲಾಯಿತು.

* ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವಕಾಶ ನೀಡಿತು.

* ಪ್ರಾಂತ್ಯಗಳಲ್ಲಿ ” ದ್ವಿ ಸರ್ಕಾರ ” ಪದ್ಧತಿಯನ್ನು ರದ್ದುಗೊಳಿಸಿ ಪ್ರಾಂತ್ಯಗಳಿಗೆ ಸ್ವಾಯತ್ತತೆ ನೀಡಲಾಯಿತು.

* ಭಾರತದಲ್ಲಿ ಫೆಡರಲ್ ಕೋರ್ಟ್ ಸ್ಥಾಪನೆಗೆ ಅವಕಾಶ ನೀಡಿತು.

* ಎಲ್ಲಾ ಬ್ರಿಟಿಷ್ ವ್ಯಾಪಾರಿ ಕಂಪನಿಗಳಿಗೆ ಭಾರತಕ್ಕೆ ಬರಲು ಪರವಾನಿಗೆ ನೀಡಿದ ಚಾರ್ಟರ್ ಕಾಯ್ದೆ?

-> 1833ರ ಚಾರ್ಟರ್ ಕಾಯ್ದೆ

* ‘ ಧರ್ಮ ಬಣ್ಣ ಮತ್ತು ಹುಟ್ಟಿನ ಆದರದ ಮೇಲೆ ಯಾವುದೇ ತಾರತಮ್ಯ ಮಾಡುವಂತಿಲ್ಲ’ ಎನ್ನುವುದನ್ನು ನಿರ್ದೇಶಿಸಿದ ಕಾಯ್ದೆ ?

-> 1833 ಚಾರ್ಟರ್ ಕಾಯ್ದೆ

* ಶಾಸನಸಭೆಯ ಅಧಿಕಾರವನ್ನು ಹೆಚ್ಚಿಸಿ ಅವುಗಳಲ್ಲಿ ಬಜೆಟ್ ಬಗ್ಗೆ ಚರ್ಚಿಸುವ ಅಧಿಕಾರವನ್ನು ನೀಡಿದ ಕಾಯ್ದೆ?

-> 1892ರ ಭಾರತೀಯ ಪರಿಷತ್ ಕಾಯ್ದೆ.

* ಮುಸ್ಲಿಮರಿಗೆ ಪ್ರತ್ಯೇಕ ರಾಜಕೀಯ ಪ್ರಾತಿನಿತ್ಯ ನೀಡುವ ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ಜಾರಿಗೆ ತಂದ ಕಾಯ್ದೆ?

-> 1909ರ ಮಿಂಟೋ ಮಾರ್ಲೆ ಕಾಯ್ದೆ/ 1909ರ ಭಾರತೀಯ ಪರಿಷತ್ ಕಾಯ್ದೆ

* ಭಾರತಕ್ಕೆ ಒಬ್ಬ ಹೈ ಕಮಿಷನರನ್ನು ನೇಮಕ ಮಾಡಲು ಶಿಫಾರಸು ಮಾಡಿದ ಕಾಯ್ದೆ ಯಾವುದು?

-> ಭಾರತ ಸರ್ಕಾರದ 1919ರ ಕಾಯ್ದೆ / ಮಾಂಟೆಗೋ ಜೇಮ್ಸ್ ಫರ್ಡ್ ಸುಧಾರಣಾ ಕಾಯ್ದೆ-1919

* ”ಪ್ರತ್ಯೇಕ ಚುನಾವಣಾ ಮತಗಟ್ಟೆ ” ವ್ಯವಸ್ಥೆಯನ್ನು ಮುಸ್ಲಿಂ,ಸಿಖ್ ಆಂಗ್ಲೋ ಭಾರತೀಯರು ಮತ್ತು ಯುರೋಪಿಯನ್ನರಿಗೆ ವಿಸ್ತರಿಸಿದ ಕಾಯ್ದೆ?

-> ಭಾರತ ಸರ್ಕಾರ ಕಾಯ್ದೆ-1919

* ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಫೆಡರಲ್ ಕೋರ್ಟ್ ಸ್ಥಾಪನೆಗೆ ಅವಕಾಶ ನೀಡಿದ ಕಾಯ್ದೆ?

-> 1935 ರ ಭಾರತ ಸರ್ಕಾರ ಕಾಯ್ದೆ

 

WhatsApp Group Join Now
Telegram Group Join Now

Leave a Comment