ಮತಪ್ರವರ್ತಕರು / ಸಿದ್ಧಾಂತ / ಕೃತಿಗಳು.
-: ಶಂಕರಾಚಾರ್ಯರು :-
* ಜನನ – ಕೇರಳದ ಕಾಲಡಿ.
* ತಂದೆ – ಶಿವಗುರು
* ತಾಯಿ – ಆರ್ಯಾಂಬ
* ಸಿದ್ಧಾಂತ – ಅದ್ವೈತ
* ಗುರು – ಗೋವಿಂದ ಭಗವತ್ಪಾದರ ( ಇವರ ಬಳಿ ವೇದ- ಶಾಸ್ತ್ರಗಳ ಅಧ್ಯಯನ ನಡೆಸಿದರು.)
-: ಕೃತಿಗಳು :-
* ಶಂಕರಭಾಷ್ಯ
* ಆನಂದ ಲಹರಿ
* ಸೌಂದರ್ಯ ಲಹರಿ
* ವಿವೇಕ ಚೂಡಾಮಣಿ
* ಪ್ರಬುದ್ಧ ಸುಧಾಕರ
* ದಕ್ಷಿಣಾಮೂರ್ತಿ ಸ್ತೋತ್ರ
-: ಶಂಕರಾಚಾರ್ಯರು ಸ್ಥಾಪಿಸಿದ ಪೀಠಗಳು :-
* ಬದರಿ – ಜ್ಯೋತಿರ್ ಪೀಠ
* ದ್ವಾರಕಾ – ಕಾಳಿಕಾಪೀಠ
* ಪುರಿ – ಗೋವರ್ಧನ ಪೀಠ
* ಶೃಂಗೇರಿ – ಶಾರದಾ ಪೀಠ
* ಕಂಚಿ – ಕಾಮಕೋಟಿ ಪೀಠ
-: ಶಂಕರಾಚಾರ್ಯ ಬೋಧನೆಗಳು :-
ಆತ್ಮ ಮತ್ತು ಪರಮಾತ್ಮ ಎರಡು ಒಂದೇ, ಜೀವಾತ್ಮನಿಗೆ ಪ್ರತ್ಯೇಕ ಅಸ್ತಿತ್ವ ಇಲ್ಲ, ಸಕಲ ಜೀವರಾಶಿಗಳಲ್ಲಿ ಚೇತನ ಶ್ರೇಷ್ಠವಾದದ್ದು, ಸಮಾನತೆಯ ತತ್ವ.
* ಅತ್ಯಂತ ಜನಪ್ರಿಯ ಸ್ತೋತ್ರ – ಭಜ ಗೋವಿಂದಂ
* ಶಂಕರಾಚಾರ್ಯರು ಕಾಲ್ನಡಿಗೆಯಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಭಾರತದಲ್ಲಿ ಸಂಚರಿಸಿ ತಮ್ಮ ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿದರು.
-: ರಾಮಾನುಜಾಚಾರ್ಯರು :-
* ಜನನ – ಚೆನ್ನೈ ಸಮೀಪದ ಪೆರಂಬದೂರ್
* ತಂದೆ – ಕೇಶವ ಸೋಮಯಾಜಿ
* ತಾಯಿ – ಕಾಂತಿಮತಿ
* ಗುರುಗಳು – ಯಾದವ ಪ್ರಕಾಶ
* ಸಿದ್ದಾಂತ – ವಿಶಿಷ್ಟಾದ್ವೈತ
-: ಕೃತಿಗಳು :-
* ವೇದಾಂತ ಸಂಗ್ರಹ
* ವೇದಾಂತ ಸಾರ
* ವೇದಾಂತ ದೀಪಿಕ
* ಶ್ರೀ ಭಾಷ್ಯಾ
-: ಪ್ರತಿಪಾದಿಸಿದ ಮತ :-
” ಶ್ರೀ ವೈಷ್ಣವ ಮತ” ಆದ್ದರಿಂದ ಈ ವರ ಶಿಷ್ಯರನ್ನು ‘ ಶ್ರೀ ವೈಷ್ಣವರು ‘ ಎಂದು ಕರೆಯಲಾಯಿತು .
* ಉತ್ತರದ ಸಂತ ರಮಾನಂದರು, ರಾಯಿದಾಸ ಇವರ ರಾಮಾನುಜರ ಸಿದ್ಧಾಂತದಿಂದ ಪ್ರಭಾವಿತರಾದರು. ಇದರಿಂದಾಗಿ ಉತ್ತರ ಭಾರತದಲ್ಲಿ ಭಕ್ತಿ ಪಂಥ ಬೆಳೆಯಲು ದಾರಿಯಾಯಿತು.
* ವಿಜಯನಗರ ತುಳುವ, ಅರವಿಡು ದೊರೆಗಳು ಶ್ರೀ ವೈಷ್ಣವ ಪಂಥದ ಅನುಯಾಯಿಗಳು.
-: ದಕ್ಷಿಣ ಭಾರತದಲ್ಲಿನ ಕೆಲವು ಪ್ರಮುಖ ಶ್ರೀ ವೈಷ್ಣವ ಮಠಗಳು :-
* ಯತಿರಾಜ ಮಠ – ಮೇಲುಕೋಟೆ ಮತ್ತು ಶ್ರೀ ಪೇರಂಬದೂರು
* ಪರಕಾಲ ( ಬ್ರಹ್ಮತಂತ್ರ ಮಠ ) – ಮೈಸೂರು
* ಅಹೋಬಲ ಮಠ – ಅಹೋಬಲ ( ಗುಂಟೂರು , ಆಂಧ್ರ ಪ್ರದೇಶ)
* ಅಂಡವನ್ ಮಠ – ಶ್ರೀರಂಗಂ
* ವಾಮೈಮಲೈ ಮಠ – ಸುಚೀಂದ್ರ
-: ರಾಮಾನುಜಾಚಾರ್ಯರ ಬೋಧನೆಗಳು :-
ಆತ್ಮ ಮತ್ತು ಪರಮಾತ್ಮ ಒಂದಾಗಲು ಸಾಧ್ಯವಿಲ್ಲ, ಮುಕ್ತಿ ಸಾಧನೆಗೆ ಭಕ್ತಿ ಮಾರ್ಗ ಮುಖ್ಯ, ಆಸೆಗಳಿಂದ ದೂರವಾಗಿ ಆತ್ಮ ಪರಿಶುದ್ಧತೆಯಿಂದ ಭಗವಂತನಿಗೆ ಶರಣಾಗಬೇಕು.
-: ಮಧ್ವಾಚಾರ್ಯರು :-
* ಜನನ – ಉಡುಪಿಯ ಪಾಜಕ
* ತಂದೆ – ಮದ್ವಗೇಹ ಭಟ್ಟ
* ತಾಯಿ – ವೇದಾವತಿ
* ಗುರುಗಳು – ಅಚ್ಯುತಪ್ರೇಕ್ಷಕ
* ಸಿದ್ಧಾಂತ – ದ್ವೈತ ಸಿದ್ದಾಂತ
* ಹಡಗಿನಲ್ಲಿ ಗೋಪಿಚಂದನವೆಂಬ ಮಣ್ಣಿನ ಗುಡ್ಡೆಯಲ್ಲಿದ್ದ ಶ್ರೀ ಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು.
-: ಮಧ್ವಾಚಾರ್ಯರ ಕೃತಿಗಳು :-
* ಗೀತಾ ಭಾಷ್ಯಾ
* ಗೀತಾ ತಾತ್ಪರ್ಯ ನಿರ್ಣಯ
* ಮಹಾಭಾರತ ತಾತ್ಪರ್ಯ ನಿರ್ಣಯ
* ಭಾಗವತ ತಾತ್ಪರ್ಯ
* ವಿಷ್ಣು ತಾತ್ಪರ್ಯ
* ಸೂತ್ರಭಾಷ್ಯ
-: ಮಧ್ವಾಚಾರ್ಯರ ಅಷ್ಟಮಠಗಳು :-
1. ಪಲಿಮಾರು
2. ಅದಮಾರು
3. ಕೃಷ್ಣಾಪುರ
4. ಪುತ್ತಿಗೆ
5. ಶಿರೂರು
6. ಸೋದೆ ಮಠ
7. ಕಾಣಿಯೂರು
8. ಪೇಜಾವರ
-: ಮಧ್ವಾಚಾರ್ಯರ ಬೋಧನೆಗಳು :-
ಜಗತ್ತು ಮಾಯೆಯಲ್ಲ, ಪರಮಾತ್ಮನಿಗೂ ಮತ್ತು ಜೀವಗಳಿಗೂ ಸ್ವಾಮಿ ಸೇವಕ ಸಂಬಂಧವಿದೆ, ವಿಷ್ಣುವನ್ನು ಭಕ್ತಿಯಿಂದ ಪೂಜಿಸುವುದರಿಂದ ಮುಕ್ತಿ ಸಾಧ್ಯ .
-: ಬಸವಣ್ಣನವರು :-
* ಜನನ – ಇಂಗಳೇಶ್ವರ (ಬಸವನ ಬಾಗೇವಾಡಿ)
* ತಂದೆ – ಮಾದರಸ
* ತಾಯಿ – ಮಾದಲಾಂಬಿಕೆ
* ಶೈವ ಗುರುಗಳ ಸಾನಿಧ್ಯದಲ್ಲಿ ಲಿಂಗ ದೀಕ್ಷೆ ಪಡೆದರು.
* ಸಿದ್ದಾಂತ – ಶಕ್ತಿ ವಿಶಿಷ್ಟಾದ್ವೈತ
-: ಬಸವಣ್ಣನವರ ಕೃತಿಗಳು :-
* ವಚನ ಸಾಹಿತ್ಯ
* ವೀರಶೈವ ಮತವನ್ನು ಪ್ರಚಾರಪಡಿಸಿದರು
* ತಮ್ಮ ಕಾರ್ಯ ದಕ್ಷತೆಯಿಂದ ಕಲಚೂರಿ ಅರಸ ಬಿಜ್ಜಳನ ಬಂಡಾರದ ಅಧಿಕಾರಿಯಾಗಿದ್ದರು.
* ಸಮಾಜದ ಸ್ವಾವಲಂಬನೆಗೆ ” ಕಾಯಕ ” ತತ್ವವನ್ನು ಪ್ರತಿಪಾದಿಸಿದರು ” ಕಾಯಕವೇ ಕೈಲಾಸ ” ಎಂದು ಸಾರಿದರು.
* ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ” ಅನುಭವ ಮಂಟಪವನ್ನು” ಸ್ಥಾಪಿಸಿದರು.
-: ಬಸವೇಶ್ವರರ ಬೋಧನೆಗಳು :-
ಶಿವಶರಣರು ಜಾತಿ ಭೇದವನ್ನು ಮಾಡಬಾರದು, ಆತ್ಮ ಪರಿಶುದ್ಧತೆಗೆ ಭಕ್ತಿಯ ನಿಜವಾದ ಮಾರ್ಗ , ಕಾಯಕ ತತ್ವದ ಪ್ರತಿಪಾದನೆ, ಸಮಾಜದ ಅಂಕು ಡೊಂಕುಗಳ ವಿಡಂಬನೆ, ಮಾನವರೆಲ್ಲರೂ ಸಮಾನರು, ಹುಟ್ಟಿನಿಂದ ಯಾರೂ ಅಸ್ಪೃಶ್ಯರಲ್ಲ.
-: ಪ್ರಮುಖ ಅನುಯಾಯಿಗಳು :-
ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ದರಾಮ, ಮೋಳಿಗೆ ಮಾರಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಮಾದಾರ್ ಚೆನ್ನಯ್ಯ, ಹರಳಯ್ಯ, ಕಿನ್ನರಿಬೊಮ್ಮಯ್ಯ.