1) ಪ್ರಾಥಮಿಕ ವಲಯ :-
ಈ ವಲಯವು ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಾದ ತೋಟಗಾರಿಕೆ, ಪಶುಪಾಲನೆ, ರೇಷ್ಮೆಗಾರಿಕೆ, ಕೋಳಿ ಸಾಕಾಣಿಕೆ, ಮೀನು ಸಾಕಾಣಿಕೆ,ಪುಷ್ಟಕೃಷಿ ಮುಂತಾದವುಗಳನ್ನು ಒಳಗೊಂಡಿದೆ.
* ಶೇ.52% ಕ್ಕಿಂತ ಹೆಚ್ಚಿನ ಜನರು ತಮ್ಮ ಜೀವನ ನಿರ್ವಹಣೆಗಾಗಿ ಕೃಷಿಯನ್ನು ನೇರವಾಗಿ ಮತ್ತು ಪರೋಕ್ಷವಾಗಿ ಅವಲಂಬನೆಯಾಗಿದ್ದಾರೆ.
* ಕೃಷಿ ಒಂದು ಮುಖ್ಯ ಉದ್ದೇಶವಾಗಿದ್ದರೂ ಸಹ,ಕೃಷಿಕರ ಸ್ಥಿತಿಗತಿ ಇನ್ನೂ ತೃಪ್ತಿಕರವಾಗಿಲ್ಲ ಅದಕ್ಕೆ ಕಾರಣಗಳೆಂದರೆ.
1) ಬಹುತೇಕ ಕೃಷಿಕರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದಾರೆ.
2) ಕೃಷಿಯು ಸಾಗುವಳಿ ಭೂಮಿಯ ಬಹುದೊಡ್ಡ ಭಾಗ ಮಳೆಯಾಶ್ರಿತವಾಗಿದೆ.
3) ಕೃಷಿ ವಲಯದಲ್ಲಿ ಉತ್ಪಾದಕತೆಯು ಬಹಳ ಕಡಿಮೆ ಇದೆ.
4) ಬಹುತೇಕ ಕೃಷಿಕರು ಆಧುನಿಕ ಕೃಷಿ ಉಪಕರಣಗಳು ಮತ್ತು ಹೊಸ ಉತ್ಪಾದನಾ ತಂತ್ರಗಳ ಅಳವಡಿಕೆಯಲ್ಲಿ ಹಿಂದುಳಿದಿದ್ದಾರೆ.
5) ಮಧ್ಯವರ್ತಿಗಳ ಉಪಟಾಳದಿಂದಾಗಿ ಕೃಷಿಕರು ತಮ್ಮ ಉತ್ಪತ್ತಿನಗಳಿಗೆ ಯೋಗ್ಯ ಬೆಲೆಯನ್ನು ಪಡೆಯುತ್ತಿಲ್ಲ.
ಸರ್ಕಾರವು ದೇಶದಲ್ಲಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಕೃಷಿಕರ ಸ್ಥಿತಿಗತಿಗಳನ್ನು ಸುಧಾರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.
2) ದ್ವಿತೀಯ ವಲಯ :-
ಇದನ್ನು ” ತಯಾರಿಕ ವಲಯ ” ಎಂದು ಕರೆಯುತ್ತಾರೆ. ಇಲ್ಲಿ ಕಚ್ಚಾ ವಸ್ತುಗಳನ್ನು ಸಿದ್ಧಪಡಿಸಿದ ಉತ್ಪನ್ನಗಳನ್ನಾಗಿ ಪರಿವರ್ತಿಸಲಾಗುತ್ತದೆ.
ಈ ವಲಯವನ್ನು 3ವಿಧಗಳಲ್ಲಿ ವಿಂಗಡಿಸಲಾಗಿದೆ.
1) ಕೃಷಿ ಆಧಾರಿತ ಕೈಗಾರಿಕೆಗಳು
2) ಅರಣ್ಯ ಆಧಾರಿತ ಕೈಗಾರಿಕೆಗಳು
3) ಖನಿಜ ಆಧಾರಿತ ಕೈಗಾರಿಕೆಗಳು
-> ಕೈಗಾರಿಕೆಗಳ ಒಡೆತನದ ಆಧಾರದ ಮೇಲೆ 02 ಗುಂಪುಗಳನ್ನಾಗಿ ವರ್ಗಿಕರಿಸಲಾಗಿದೆ.
1) ಸಾರ್ವಜನಿಕ ವಲಯ
2) ಖಾಸಗಿ ವಲಯ
* ಬಹುರಾಷ್ಟ್ರೀಯ ಕಂಪನಿಗಳು (Multi National Company):-
ಎರಡು /ಎರಡಕ್ಕಿಂತ ಹೆಚ್ಚಿನ ದೇಶಗಳಲ್ಲಿ ಉದ್ಯಮಿಗಳನ್ನು ಹೊಂದಿ ಆರ್ಥಿಕ ವ್ಯವಹಾರವನ್ನು ನಡೆಸುತ್ತಿರುವ ಉದ್ಯಮಗಳು.
ಉದಾಹರಣೆ :- Samsung – ದಕ್ಷಿಣ ಕೊರಿಯಾ,Sony – Japan.
* 1991ರ ಆರ್ಥಿಕ ಸುಧಾರಣೆಗಳ ನಂತರ ಖಾಸಗೀಕರಣವು ಹೆಚ್ಚು ಮಹತ್ವ ಪಡೆದಿದೆ.
3) ತೃತೀಯ ವಲಯ :-
ಇದನ್ನು ” ಸೇವಾ ವಲಯ ” ಎಂದು ಕರೆಯುತ್ತಾರೆ.
ಉದಾಹರಣೆ :- a) ಬ್ಯಾಂಕ್ಗಳು :- ಜನರಿಂದ ಠೇವಣಿಗಳನ್ನು ಸಂಗ್ರಹಿಸಿ, ಅಗತ್ಯವಿರುವವರಿಗೆ ಹಣಕಾಸಿನ ಸಹಾಯವನ್ನು ಒದಗಿಸುವ ಸಂಸ್ಥೆಗಳು.
b) ವಿಮೆ :- ವಿಮೆಯು ಹಣಕಾಸು ನಷ್ಟದ ವಿರುದ್ಧದ ಒಂದು ರಕ್ಷಣೆಯ ದಾರಿಯಾಗಿದೆ.
c) ಸಾರಿಗೆ
d) ಸಂಪರ್ಕ
e) ಆರೋಗ್ಯ :- ” ಆರೋಗ್ಯವೇ ಭಾಗ್ಯ ” WHO ದ ಪ್ರಕಾರ ದೈಹಿಕ, ಮಾನಸಿಕ,ಸಾಮಾಜಿಕ ಮತ್ತು ಬೌದ್ಧಿಕ ಅಸ್ವಸ್ಥತೆಯಿಂದ ಮುಕ್ತವಾಗಿರುವುದು.
* ಮರಣ ದರ ಪ್ರತಿ 1000 ಕ್ಕೆ – 7. 2 %
* ಶಿಶು ಮರಣ ದರ ಪ್ರತಿ 1000 ಕ್ಕೆ – 47
* ಮಕ್ಕಳ ಮರಣದರವು ಪ್ರತಿ ಸಾವಿರಕ್ಕೆ 15ಕ್ಕೆ ಹೇಳಿಕೆಯಾಗಿದೆ.
* 2011 ರಲ್ಲಿ ಸರಾಸರಿ ನಿರೀಕ್ಷಿತ ಜೀವಿತಾವಧಿ – 69.9 years ಗೆ ಹೆಚ್ಚಿದೆ.
d) ಶಿಕ್ಷಣ(education ):-
ಗಾಂಧೀಜಿಯವರ ಪ್ರಕಾರ ಶಿಕ್ಷಣವೆಂದರೆ ‘ ಶಿಕ್ಷಣವು ಮಗುವಿನ ವ್ಯಕ್ತಿತ್ವದಲ್ಲಿ ಸರ್ವಾಂಗೀಣ ಅಭಿವೃದ್ಧಿಯನ್ನು ತರುವುದು’
* ಸಾಕ್ಷರತೆಯನ್ನು ಹೆಚ್ಚಿಸಲು ಸರ್ಕಾರವು ಜಾರಿಗೆ ತಂದಿರುವ ಯೋಜನೆಗಳು :-
* ರಾಷ್ಟ್ರೀಯ ಸಾಕ್ಷರತಾ ಮಿಷನ್ – 1988
* ಸರ್ವ ಶಿಕ್ಷಣ ಅಭಿಯಾನ – (SSA) -2001
* ಮಧ್ಯಾಹ್ನದ ಬಿಸಿಯೂಟ ಯೋಜನೆ – 1995
* ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ – (RMSA) – 2009
* ಸಾಕ್ಷರ ಭಾರತ ಕಾರ್ಯಕ್ರಮ – 2009ರಲ್ಲಿ
-: ಕರ್ನಾಟಕ ಅರ್ಥ ವ್ಯವಸ್ಥೆ :-
* ಕರ್ನಾಟಕದ ವಿಸ್ತೀರ್ಣ – 1.91.791.ಚದರ ಕಿಲೋಮೀಟರ್
* ಕರ್ನಾಟಕವು ದೇಶದ ಆರನೇ ದೊಡ್ಡ ರಾಜ್ಯವಾಗಿದೆ.
* ಕರ್ನಾಟಕದಲ್ಲಿ 31 ಜಿಲ್ಲೆಗಳು 240 ತಾಲೂಕುಗಳಿವೆ.
* ಕರ್ನಾಟಕದಲ್ಲಿ 60% ಕ್ಕಿಂತ ಹೆಚ್ಚು ದುಡಿಯುವ ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ.
* ಕರ್ನಾಟಕದಲ್ಲಿ ಸಾಗುವಳಿಗೆ ಒಳಪಟ್ಟ ಪ್ರದೇಶದಲ್ಲಿ ಶೇಕಡ 30%ರಷ್ಟು ನೀರಾವರಿ ಶೇಕಡ 70% ಮಳೆಯ ಮೇಲೆ ಅವಲಂಬಿತವಾಗಿದೆ.
* ಕರ್ನಾಟಕದಲ್ಲಿ ” ಕರ್ನಾಟಕ ಕೃಷಿ ಆಧಾರಿತ ಕೈಗಾರಿಕೆ ಸಂಸ್ಥೆಗಳು” ( KAIC) 1967 ರಲ್ಲಿ ಸ್ಥಾಪನೆಯಾಗಿದೆ.
* KAIC -KARNATAKA AGRO INDUSTRIES OPERATION
* ಕರ್ನಾಟಕ ಹಾಲಿನ ಉತ್ಪಾದನೆಯಲ್ಲಿ – ಎರಡನೇ ಸ್ಥಾನದಲ್ಲಿದೆ.
* ಕರ್ನಾಟಕ ಹಾಲು ಒಕ್ಕೂಟ (KMF ) ರಾಜ್ಯಮಟ್ಟದ ಸಹಕಾರಿ ಸಂಘಟನೆ ಯಾಗಿದ್ದು,ಕ್ಷೀರ ಅಭಿವೃದ್ಧಿ ಕಾರ್ಯಾಚರಣೆ ಅಡಿಯಲ್ಲಿ ರಾಜ್ಯದಲ್ಲಿ ಡೈರಿ ಅಭಿವೃದ್ಧಿಯನ್ನು ಕಾರ್ಯಗತಗೊಳಿಸುತ್ತದೆ.
* ಕರ್ನಾಟಕ 320 ಕಿಲೋಮೀಟರ್ ಉದ್ದದ ಕರಾವಳಿಯನ್ನು ಹೊಂದಿದೆ.
* ಭಾರತದ ಒಟ್ಟು ಮೀನು ಉತ್ಪಾದನೆಗೆ ಕರ್ನಾಟಕದ ಕೊಡುಗೆ – 6.7%
* ರಾಜ್ಯದಲ್ಲಿ 7 ಮೀನುಗಾರಿಕಾ ಬಂದರುಗಳಿವೆ ಅವುಗಳೆಂದರೆ :- ಕಾರವಾರ, ತದ್ರಿ,ಹೊನ್ನಾವರ, ಭಟ್ಕಳ, ಮಲ್ಪೆ, ಗಂಗೊಳ್ಳಿ, ಮಂಗಳೂರು.
* HAL – Hindustan aeronautical limited ಕಾರ್ಖಾನೆ ಬೆಂಗಳೂರಿನಲ್ಲಿದೆ.
ಇದು ಭಾರತೀಯ ವಾಯುದಳಕ್ಕಾಗಿ ಮತ್ತು ದೇಶಿಯ ಯುದ್ಧ ವಿಮಾನಗಳ ತಯಾರಿಕೆಗೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ತನ್ನನ್ನು ಸಮರ್ಪಿಸಿಕೊಂಡಿದೆ.
-> ನ್ಯಾಷನಲ್ ಏರೋ ಸ್ಪೇಸ್ ಲ್ಯಾಬೋರೇಟರ್ (NAL)
-> ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್ (BHEL)
-> ಭಾರತೀಯ ದೂರವಾಣಿ ಕಾರ್ಖಾನೆ (ITI)
-> ಭಾರತೀಯ ಅರ್ಥ್ ಮೂವರ್ಸ್ Ltd (BEML)
-> ಭಾರತ್ ಎಲೆಕ್ಟ್ರಾನಿಕ್ಸ್ Ltd (BEL)
-> ಹಿಂದುಸ್ತಾನ್ ಮೆಷಿನ್ ಟೂಲ್ಸ್ (HMT )
ಇವೆಲ್ಲವೂ ಕರ್ನಾಟಕದಲ್ಲಿ ಬೆಂಗಳೂರಿನಲ್ಲಿವೆ.
* ಭಾರತ ರತ್ನ ಸರ್ವೆ ವಿಶ್ವೇಶ್ವರಯ್ಯನವರು 1913ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ (SBM) ಸ್ಥಾಪಿಸಿದರು.
* ಕರ್ನಾಟಕದ ಬ್ಯಾಂಕಿಂಗ್ ಉದ್ಯಮದ ತೊಟ್ಟಿಲುಗಳು -ದಕ್ಷಿಣ ಕನ್ನಡ,ಉಡುಪಿ.
* ಕೆನರಾ ಬ್ಯಾಂಕ್,ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ವಿಜಯ ಬ್ಯಾಂಕ್, ಇವುಗಳು ಕರ್ನಾಟಕದಲ್ಲಿರುವ ಸಾರ್ವಜನಿಕ ವಲಯದ ಬ್ಯಾಂಕುಗಳಾಗಿವೆ.
* ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕನ್ನು ( RRB ) ಸ್ಥಾಪಿಸಿದ ಬ್ಯಾಂಕ್ – ಕೆನರಾ ಬ್ಯಾಂಕ್
* ಪ್ರಸ್ತುತ ರಾಜ್ಯದಲ್ಲಿ 27 ಸಾರ್ವಜನಿಕ ವಲಯದ ಬ್ಯಾಂಕುಗಳಿದ್ದು, 16 ಖಾಸಗಿ ವಾಣಿಜ್ಯ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತವೆ.
* IDBI, AXIS, ICICI, ಇಂಡಸ್ ಮುಂತಾದವುಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಬ್ಯಾಂಕುಗಳಾಗಿವೆ.
* ರಾಜ್ಯದಲ್ಲಿ ವಿದ್ಯುತ್ ಶಕ್ತಿಯ ಉತ್ಪಾದನೆಯ ಪ್ರಮುಖ ಮೂಲ – ಜಲವಿದ್ಯುತ್ ಶಕ್ತಿ.
* ವಿದ್ಯುತ್ ಶಕ್ತಿ ಉತ್ಪಾದನೆ ಘಟಕಗಳು ” ಕರ್ನಾಟಕ ವಿದ್ಯುತ್ ಶಕ್ತಿ ನಿಗಮ ನಿಯಮಿತ”( KPTCL) ದ ಮಾಲಿಕತ್ವ ಮತ್ತು ನಿಯಂತ್ರಣಕ್ಕೆ ಒಳಪಟ್ಟಿದೆ.
* ಸಾರಿಗೆಯನ್ನು ಆರ್ಥಿಕ ಅಭಿವೃದ್ಧಿಯ ಕೀಲಿ ಕೈ ಎನ್ನುವರು.
* ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ – 2000 ರಲ್ಲಿ ಪ್ರಾರಂಭವಾಯಿತು.
* ಕರ್ನಾಟಕದ ರಾಜ್ಯ ರಸ್ತೆ ಸಾರಿಗೆ ನಿಗಮವು ಸರ್ಕಾರಿ ಸ್ವಾಮ್ಯದ ಉದ್ಯಮವಾಗಿದ್ದು ಇದನ್ನು ನಾಲ್ಕು ನಿಗಮಗಳಾಗಿ ವಿಂಗಡಿಸಲಾಗಿದೆ.
1) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ( KSRTC)
2) ಬೆಂಗಳೂರು ಮಹಾನಗರ ಸಾರಿಗೆ ನಿಗಮ (BMTC)
3) ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC)
4) ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NEKRTC)
* ನೈರುತ್ಯ ರೈಲ್ವೆ ವಲಯದ ಕೇಂದ್ರ ಕಚೇರಿ – ಹುಬ್ಬಳ್ಳಿ
* ಕರ್ನಾಟಕ ರಾಜ್ಯವು 320 ಕಿಲೋಮೀಟರ್ ಉದ್ದದ ಕರಾವಳಿಯನ್ನು ಹೊಂದಿದ್ದು ಒಂದು ದೊಡ್ಡ ಬಂದರು ಹಾಗೂ 12 ಸಣ್ಣ ಬಂದರುಗಳನ್ನು ಒಳಗೊಂಡಿದೆ.ಇವುಗಳಲ್ಲಿ ಕಾರವಾರ,ಬೇಲಿಕೆರೆ, ಮಲ್ಪೆ ಹಾಗೂ ಮಂಗಳೂರು ಬಂದರುಗಳು ಗಣನೀಯ ಪ್ರಮಾಣದ ಸರಕೂ ಸಾಗಣೆಯನ್ನು ನಿರ್ವಹಿಸುತ್ತವೆ. ನೋವ ಮಂಗಳೂರು ಬಂದರು ಕೇಂದ್ರ ಸರ್ಕಾರದ ಒಡೆತನದಲ್ಲಿದೆ.
* ಬೆಂಗಳೂರು ಬಳಿಯ ದೇವನಹಳ್ಳಿಯಲ್ಲಿ ದೇಶದಲ್ಲಿ ಮೊಟ್ಟಮೊದಲ ಅಚ್ಚ ಹಸಿರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ ಕರ್ನಾಟಕದ ಇತರೆ ನಗರಗಳಾದ ಮಂಗಳೂರು,ಹುಬ್ಬಳ್ಳಿ, ಮೈಸೂರಿನಲ್ಲಿ ವಿಮಾನ ನಿಲ್ದಾಣಗಳಿವೆ.
* ಭಾರತ್ ಸಂಚಾರ ನಿಗಮ್ ನಿಯಮಿತ (BSNL) ಇದು ಸಾರ್ವಜನಿಕ ವಲಯದ ದೂರಸಂಪರ್ಕ ವ್ಯವಸ್ಥೆಯಾಗಿದೆ ಸ್ಥಾಪನೆಯಾಗಿದ್ದು ಸೆಪ್ಟೆಂಬರ್ 15 2000.
* ಕನಿಷ್ಠ ಅಗತ್ಯತಾ ಕಾರ್ಯಕ್ರಮದ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಒದಗಿಸುತ್ತಿರುವ ಪ್ರಾಥಮಿಕ ಆರೋಗ್ಯ ಮೂಲ ಸೌಲಭ್ಯವು ಜನರ ಅಗತ್ಯತೆಗಳನ್ನು ಈಡೇರಿಸುತ್ತದೆ.
* ಕರ್ನಾಟಕದಲ್ಲಿ 3359 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ 435 ಸಮುದಾಯ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
* ಜನನಿ ಸುರಕ್ಷಾ ಯೋಜನೆ ಪ್ರಾರಂಭವಾಗಿದ್ದು ಏಪ್ರಿಲ್ 12 2005 ರಲ್ಲಿ,
* ಯಶಸ್ವಿನಿ ಯೋಜನೆ – 1 ಜೂನ್ 2003
* ಮಡಿಲು ಯೋಜನೆ – 1 ಅಕ್ಟೋಬರ್ 2007
* 2011ರಲ್ಲಿ ಕರ್ನಾಟಕದ ಸಾಕ್ಷರತೆ – 75,6 %
* ಕರ್ನಾಟಕ ಜ್ಞಾನ ಆಯೋಗ ಸ್ಥಾಪನೆ ಯಾದದ್ದು – 2008 ಸೆಪ್ಟೆಂಬರ್
* ಉದ್ದೇಶ :- ಉನ್ನತ ಶಿಕ್ಷಣ ವಿಸ್ತರಿಸುವುದು,ಬೆಳೆಯುತ್ತಿರುವ ಕೈಗಾರಿಕೆ ಮತ್ತು ಸೇವಾ ವಲಯಗಳ ಅಗತ್ಯತೆಗಳನ್ನು ಪೂರೈಸುವುದು ಅದರ ಜೊತೆಗೆ ಜಾಗತಿಕ ಸವಾಲುಗಳನ್ನು ಎದುರಿಸುವುದು.
* ನಿರ್ವಹಣೆ ಎಂಬುದು ಬೇರೆಯವರಿಂದ ಕೆಲಸವನ್ನು ಮಾಡಿಸುವ ಒಂದು ಕಲೆಯಾಗಿದೆ – J. L. ಹೇನ್ಸ್