-: ವಿಧಾನ ಪರಿಷತ್(Legislative council) :-
* 171ನೇ ವಿಧಿ ವಿಧಾನ ಪರಿಷತ್ ರಚನೆಗೆ ಸಂಬಂಧಿಸಿದೆ.
* ಕರ್ನಾಟಕದ ವಿಧಾನ ಪರಿಷತ್ತಿನ ಸದಸ್ಯರ ಸಂಖ್ಯೆ-75
* ಸಂವಿಧಾನದ ಪ್ರಕಾರ ಇದರ ಸದಸ್ಯರ ಸಂಖ್ಯೆಯು ವಿಧಾನ ಸಭೆಯ ಸದಸ್ಯರ ಸಂಖ್ಯೆಯ ಮೂರನೇ ಒಂದರಷ್ಟು ಮೀರುವಂತಿಲ್ಲ ಹಾಗೂ 40 ಸದಸ್ಯರಿಗಿಂತ ಕಡಿಮೆ ಇರುವಂತಿಲ್ಲ.
* ವಿಧಾನಪರಿಷತ್ ಹೊಂದಿರುವ ರಾಜ್ಯಗಳು -ಕರ್ನಾಟಕ, ಮಹಾರಾಷ್ಟ್ರ, ಬಿಹಾರ, ಉತ್ತರಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ=06 ರಾಜ್ಯಗಳು.
* ಚುನಾವಣಾ ವಿಧಾನ:-
* 1/3 ಸದಸ್ಯರು(25)- ಸ್ಥಳೀಯ ಸಂಸ್ಥೆಗಳಿಂದ .
* 1/3 ಸದಸ್ಯರು(25)-ವಿಧಾನಸಭೆಯ ಸದಸ್ಯರಿಂದ.
* 1/2 ಸದಸ್ಯರು(7) – ಪದವೀಧರ ಕ್ಷೇತ್ರದಿಂದ
* 1/12 ಸದಸ್ಯರು(7)- ಶಿಕ್ಷಕರ ಕ್ಷೇತ್ರದಿಂದ
ಚುನಾಯಿಸಲಾಗುತ್ತದೆ.
* 1/6 ಸದಸ್ಯರು(11)-ರಾಜ್ಯಪಾಲರು ನಾಮಕರಣ ಮಾಡುತ್ತಾರೆ.
* ಅರ್ಹತೆಗಳು:-
* ಭಾರತೀಯ ಪೌರನಾಗಿದ್ದು,ಕನಿಷ್ಠ 30 ವರ್ಷ ವಯಸ್ಸಾಗಿರಬೇಕು.
* ಕೇಂದ್ರ ಹಾಗೂ ರಾಜ್ಯ ಸರ್ಕಾರದ ಲಾಭದಾಯಕ ಹುದ್ದೆಯಲ್ಲಿ ಇರಬಾರದು.
* ಅಧಿಕಾರವಧಿ:-
* ಆರು ವರ್ಷಗಳು.
* ಪ್ರತಿ ವರ್ಷಗಳಿಗೊಮ್ಮೆ 1/3ರಷ್ಟು ಸದಸ್ಯರು ನಿವೃತ್ತರಾಗುತ್ತಾರೆ.
* ಇದೊಂದು ಶಾಶ್ವತ ಸದನವಾಗಿದ್ದು,ವಿಸರ್ಜಿಸುವಂತಿಲ್ಲ.
* ಕೋರಂ 1/10 ರಷ್ಟಿರಬೇಕು.
* 182 ನೇ ವಿಧಿ ವಿಧಾನ ಪರಿಷತ್ತಿನ ತಮ್ಮಲ್ಲೇ ಒಬ್ಬರನ್ನು”ಸಭಾಪತಿಯಾಗಿ” ಮತ್ತು ಒಬ್ಬರನ್ನು ಉಪಸಭಾಪತಿಯಾಗಿ ಆಯ್ಕೆ ಮಾಡುತ್ತಾರೆ.
-: ರಾಜ್ಯ ಕಾರ್ಯಾಂಗ :-
ರಾಜ್ಯ ಕಾರ್ಯಂಗವು ರಾಜ್ಯಪಾಲರು,ಮುಖ್ಯಮಂತ್ರಿ, ಮಂತ್ರಿಮಂಡಲವನ್ನು ಒಳಗೊಂಡಿದೆ.ರಾಜ್ಯಪಾಲರು ಸಂವಿಧಾನಾತ್ಮಕವಾಗಿ ಮುಖ್ಯಸ್ಥರಾದರೆ. ಮುಖ್ಯಮಂತ್ರಿಯನ್ನು ಒಳಗೊಂಡ ಮಂತ್ರಿಮಂಡಲವೇ ನಿಜವಾದ ಕಾರ್ಯಾಂಗವಾಗಿದೆ.
-: ರಾಜ್ಯಪಾಲರು(Governor ) :-
* ರಾಜ್ಯಪಾಲರು ರಾಜ್ಯದ ಮುಖ್ಯಸ್ಥರು
* 155 ನೇ ವಿಧಿ : ಪ್ರಧಾನ ಮಂತ್ರಿ ಮತ್ತು ಮಂತ್ರಿಮಂಡಲದ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿಗಳು ರಾಜ್ಯಪಾಲರನ್ನು ನೇಮಿಸುತ್ತಾರೆ.
* 153 ನೇ ವಿಧಿ: ಪ್ರತಿಯೊಂದು ರಾಜ್ಯ ರಾಜ್ಯಪಾಲರನ್ನ ಹೊಂದಿರಬೇಕು.ಅಥವಾ 2/2ಕ್ಕಿಂತ ಹೆಚ್ಚು ರಾಜ್ಯಗಳ ರಾಜ್ಯಪಾಲರಾಗಿ ಏಕಕಾಲದಲ್ಲಿ ಕಾರ್ಯ ನಿರ್ವಹಿಸಬಹುದು.
* 156 ನೇ ವಿಧಿ : ಇವರ ಅಧಿಕಾರಾವಧಿ 05 ವರ್ಷಗಳು
* 157 ನೇ ವಿಧಿ : ಇವರ ಅರ್ಹತೆಗಳು.
-> ಭಾರತದ ಪ್ರಜೆಯಾಗಿರಬೇಕು.
-> ಕನಿಷ್ಠ 35 ವರ್ಷ ವಯಸ್ಸಾಗಿರಬೇಕು.
-> ಲಾಭದಾಯಕ ಹುದ್ದೆಯಲ್ಲಿರಬಾರದು.
* 158ನೇ ವಿಧಿ ಇವರ ವೇತನ, ಭತ್ಯೆ,ಸೌಲಭ್ಯಗಳಿಗೆ ಸಂಬಂಧಿಸಿದ. ಇವರಿಗೆ ರಾಜ ಭವನವನ್ನು ನೀಡಲಾಗಿದೆ ಇದು ಬೆಂಗಳೂರುನಲ್ಲಿದೆ.
* 154ನೇ ವಿಧಿ ರಾಜ್ಯದಲ್ಲಿ ಕಾರ್ಯಾಂಗದ ಎಲ್ಲಾ ಅಧಿಕಾರಗಳು ರಾಜ್ಯಪಾಲರಲ್ಲಿ ಕೇಂದ್ರೀಕೃತವಾಗಿವೆ. ಇವರು ರಾಜ್ಯದ ಮುಖ್ಯಮಂತ್ರಿ ಸಲಹೆ ಮೇರೆಗೆ ಇತರೆ ಮಂತ್ರಿಗಳನ್ನು ನೇಮಿಸುತ್ತಾರೆ ಎಲ್ಲಾ ವಿಶ್ವವಿದ್ಯಾಲಯದ ಕುಲಪತಿಗಳು ಇವರೇ ಆಗಿರುತ್ತಾರೆ.
* ಇವರು ಅಧಿವೇಶನ ಕರೆಯುವ,ಮುಂದೂಡುವ ಮತ್ತು ಮುಖ್ಯಮಂತ್ರಿಗಳ ಶಿಫಾರಸ್ಸಿನ ಮೇರೆಗೆ ವಿಧಾನಸಭೆ ವಿಸರ್ಜಿಸುವ ಅಧಿಕಾರವಿದೆ.
* ಶಾಸಕಾಂಗ ಅಂಗೀಕರಿಸಿದ ಮಸೂದೆಗೆ ತಮ್ಮ ಅಂಕಿತವನ್ನು ಹಾಕುವ,ತಡೆ ಹಿಡಿಯುವ ಅಧಿಕಾರವಿದೆ. ಅವಶ್ಯಕತೆ ಇದ್ದಲ್ಲಿ 200ನೇ ವಿಧಿಯ ಪ್ರಕಾರ ರಾಜ್ಯಾಧ್ಯಕ್ಷರ ಕಾಯ್ದೆಯಿಸಿರುವ ಅಧಿಕಾರ ಹೊಂದಿದ್ದಾರೆ.ಇದು ಇವರ ವಿವೇಚನಾಧಿಕಾರ.
* ರಾಜ್ಯಪಾಲರು ಒಪ್ಪಿಗೆ ಇಲ್ಲದೆ ಹಣಕಾಸಿನ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸುವಂತಿಲ್ಲ ರಾಜ್ಯದ ಹಣಕಾಸು ಆಯೋಗವನ್ನು ನೇಮಿಸುವ ಅಧಿಕಾರ ಹೊಂದಿದ್ದಾರೆ.
* ಅಪರಾಧ ಮಾಡಿ ಶಿಕ್ಷೆಗೆ ಗುರಿಯಾದವರಿಗೆ ಕ್ಷಮಾಧಾನ ನೀಡುವ,ಶಿಕ್ಷೆಯನ್ನು ಕಡಿಮೆ ಮಾಡುವ, ಮುಂದೂಡುವ/ ಶಿಕ್ಷೆಯನ್ನು ಬದಲಾಯಿಸುವ ಅಧಿಕಾರ ಇವರಿಗಿದೆ-161ನೇ ವಿಧಿ.
* ರಾಜ್ಯದ ಅಡ್ವಕೇಟ್ ಜನರಲ್ ( 165 ನೇ ವಿಧಿ) ಮತ್ತು ಜಿಲ್ಲಾ ನ್ಯಾಯಾಧೀಶರನ್ನು ನೇಮಿಸುವ ಅಧಿಕಾರವಿದೆನೇಮಿಸುವ ಅಧಿಕಾರವಿದೆ.
-: ರಾಜ್ಯ ಮಂತ್ರಿಮಂಡಲ (State Council of Minister):-
* ಸಂವಿಧಾನದ 163 ನೇ ವಿಧಿ ರಾಜ್ಯ ಮಂತ್ರಿ ಮಂಡಲಕ್ಕೆ ಅವಕಾಶ ಕಲ್ಪಿಸಿದೆ.
* ಇದು ಮುಖ್ಯಮಂತ್ರಿಗಳ ನಾಯಕತ್ವದಲ್ಲಿ ರಾಜ್ಯದ ಆಡಳಿತ ನಿರ್ವಹಿಸುತ್ತದೆ.
* ಮುಖ್ಯಮಂತ್ರಿಗಳು ಮಂತ್ರಿಮಂಡಲ ಮತ್ತು ಸಚಿವ ಸಂಪುಟದ ಮುಖ್ಯಸ್ಥರಾಗಿರುತ್ತಾರೆ.
* ಮಂತ್ರಿಮಂಡಲ ರಾಜ್ಯ ವಿಧಾನಸಭೆಗೆ ಜವಾಬ್ದಾರಿಯುತವಾಗಿರುತ್ತದೆ.
-: ಮುಖ್ಯಮಂತ್ರಿ :-
* ಇವರು ರಾಜ್ಯ ಸರ್ಕಾರದ ಮುಖ್ಯಸ್ಥರಾಗಿದ್ದಾರೆ.
* 164 ನೇ ವಿಧಿ ರಾಜ್ಯಪಾಲರು ಮುಖ್ಯಮಂತ್ರಿಯನ್ನು ನೇಮಿಸುತ್ತಾರೆ.
* ವಿಧಾನಮಂಡಲದ ಯಾವುದೇ ಸದನದ ಸದಸ್ಯರು ಅಂದರೆ ವಿಧಾನಸಭೆ ಅಥವಾ ವಿಧಾನ ಪರಿಷತ್ತಿನ ಸದಸ್ಯರನ್ನು ಮಂತ್ರಿಯಾಗಿ ನೇಮಿಸಬಹುದು.
* ಅಧಿಕಾರವಧಿ ಐದು ವರ್ಷಗಳು/ರಾಜ್ಯಪಾಲರ ಇಚ್ಛೆಯ ಪರ್ಯಂತ.
* ಮುಖ್ಯಮಂತ್ರಿ ಮತ್ತು ಇತರ ಮಂತ್ರಿಗಳು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಬೇಕು.
* ವಿಧಾನಮಂಡಲ(ವಿಧಾನಸಭೆ) ಅಥವಾ ವಿಧಾನಪರಿಷತ್ತಿನ ಸದಸ್ಯನಲ್ಲದ ವ್ಯಕ್ತಿಯನ್ನು ಮಂತ್ರಿಯನ್ನಾಗಿ ನೇಮಿಸಿಕೊಳ್ಳಬಹುದು. ಅಂತ ವ್ಯಕ್ತಿಯು ನಿಯಮಕಗೊಂಡ ಆರು ತಿಂಗಳ ಒಳಗಾಗಿ ವಿಧಾನಸಭೆ/ ವಿಧಾನ ಪರಿಷತ್ತಿಗೆ ಚುನಾಯಿಸಲ್ಪಡಬೇಕು.
-: ನ್ಯಾಯಾಂಗ :-
1) ಸರ್ವೋಚ್ಚ ನ್ಯಾಯಾಲಯ(Supreme court):-
* ಇದು ಜನವರಿ 28 1950 ರಂದು ಅಸ್ತಿತ್ವಕ್ಕೆ ಬಂದಿತು.
* ಇದು “ಮನವಿಯ ಅಂತಿಮ ನ್ಯಾಯಾಲಯ”ವಾಗಿದೆ. ಇದನ್ನು” ಮೂಲಭೂತ ಹಕ್ಕುಗಳ ರಕ್ಷಕ” ಮತ್ತು” ಒಕ್ಕೂಟ ವ್ಯವಸ್ಥೆ ರಕ್ಷಕ” ಎನ್ನುವರು.
* 124ನೇ ವಿಧಿ ಇದರ ರಚನೆಯ ಬಗ್ಗೆ ಹೇಳುತ್ತದೆ.
* ಇದು ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ 34 ನ್ಯಾಯಾಧೀಶರಿದ್ದಾರೆ.
* ಈ ನ್ಯಾಯಾಲಯ ದೆಹಲಿಯಲ್ಲಿದೆ.
-: ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಅರ್ಹತೆಗಳು :-
* ಭಾರತದ ಪ್ರಜೆಯಾಗಿರಬೇಕು.
* ಯಾವುದೇ ಹೈಕೋರ್ಟಿನಲ್ಲಿ ಕನಿಷ್ಠ ಐದು ವರ್ಷಗಳ ಕಾಲ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಬೇಕು ಅಥವಾ ಯಾವುದೇ ಉಚ್ಛ ನ್ಯಾಯಾಲಯದಲ್ಲಿ ಹತ್ತು ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಬೇಕು.
* ರಾಷ್ಟ್ರಪತಿಯವರ ಅಭಿಪ್ರಾಯದಲ್ಲಿ ನ್ಯಾಯ ನಿಪುಣರಾಗಿರಬೇಕು.
* ವೇತನ:- ಮುಖ್ಯ ನ್ಯಾಯಾಧೀಶರ ವೇತನ – 2.80.000
ಇತರೆ ನ್ಯಾಯಾಧೀಶರ ವೇತನ -2.50.000
* ಅಧಿಕಾರವಧಿ:- ಮುಖ್ಯ ನ್ಯಾಯಾಧೀಶರ ಅಧಿಕಾರ ಅವಧಿ- 65ವರ್ಷ
ಇತರೆ ನ್ಯಾಯಾಧೀಶರ ಅಧಿಕಾರಾವಧಿ -62 ವರ್ಷ.
-: ಅಧಿಕಾರ ಕಾರ್ಯಗಳು :-
* ಮೂಲ ಅಧಿಕಾರ ವ್ಯಾಪ್ತಿ:- (131 ನೇ ವಿಧಿ):- ಕೇಂದ್ರ ಹಾಗೂ ರಾಜ್ಯಗಳ(ಸರ್ಕಾರ)ನಡುವಿನ ವಿವಾದ ಎರಡು/ ಎರಡಕ್ಕಿಂತ ಹೆಚ್ಚು ರಾಜ್ಯಗಳ ನಡುವಿನ ವಿವಾದವನ್ನು ಬಗೆಹರಿಸುವ ಅಧಿಕಾರ ಹೊಂದಿದೆ.
* 132 ನೇ ವಿಧಿ(ಮನವಿಯ ವ್ಯಾಪ್ತಿ):- ಈ ವ್ಯಾಪ್ತಿಗಳ ಪಡುವ ವಿಷಯಗಳನ್ನು ನಾಲ್ಕು ವಿಧಗಳಾಗಿ ವರ್ಗೀಕರಿಸಲಾಗಿದೆ.
1) ಸಂವಿಧಾನಾತ್ಮಕ ಪ್ರಕರಣಗಳು
2) ನಾಗರಿಕ ಪ್ರಕರಣಗಳು
3) ಕ್ರಿಮಿನಲ್
4) ವಿಶೇಷ ಪ್ರಕರಣಗಳು
* 143 ನೇ ವಿಧಿ : ಸಲಹಾ ಅಧಿಕಾರ ವ್ಯಾಪ್ತಿ.
* ಸುಪ್ರೀಂ ಕೋರ್ಟ್ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ 32ನೇ ವಿಧಿ ಅನ್ವಯ ರಿಟ್ಗಳನ್ನು ಹೊರಡಿಸುತ್ತದೆಹೊರಡಿಸುತ್ತದೆ.
-: ಉಚ್ಚ ನ್ಯಾಯಾಲಯ(High court):-
* 214 ನೇ ವಿಧಿಯ ಪ್ರಕಾರ ಪ್ರತಿಯೊಂದು ರಾಜ್ಯದಲ್ಲೂ ಹೈಕೋರ್ಟ್ ಇರಬೇಕು ಅಥವಾ ಎರಡು ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಿಗೆ ಒಂದೇ ನ್ಯಾಯಾಲಯ ಇರಬಹುದು.
* ಒಬ್ಬ ಮುಖ್ಯ ನ್ಯಾಯಾಧೀಶರು ಮತ್ತು ಇತರೆ ನ್ಯಾಯಾಧೀಶರನ್ನು ಒಳಗೊಂಡಿರುತ್ತದೆ.
* ಭಾರತದಲ್ಲಿ ಪ್ರಸ್ತುತ 25 ಹೈಕೋರ್ಟ್ ಗಳಿವೆ.
* 216 ನೇ ವಿಧಿ ಉಚ್ಚ ನ್ಯಾಯಾಲಯದ ರಚನೆಗೆ ಸಂಬಂಧಿಸಿದೆ.
-: ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಅರ್ಹತೆಗಳು :-
* ಭಾರತದ ಪ್ರಜೆಯಾಗಿರಬೇಕು.
* ಕನಿಷ್ಠ 10 ವರ್ಷಗಳ ಕಾಲ ನ್ಯಾಯಾಲಯದ ಕಚೇರಿಯಲ್ಲಿ ನ್ಯಾಯಾಧೀಕಾರಿಯಾಗಿ ಸೇವೆ ಸಲ್ಲಿಸಿರಬೇಕು ಅಥವಾ 10 ವರ್ಷಗಳ ಕಾಲ ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿರಬೇಕು.
* ರಾಷ್ಟ್ರಪತಿಯವರ ಅಭಿಪ್ರಾಯದಲ್ಲಿ ನ್ಯಾಯ ನಿಪುಣರಾಗಿರಬೇಕು.
* ನಿವೃತ್ತಿ: 62 ವರ್ಷ ವಯಸ್ಸು(ಸಂವಿಧಾನದ 15ನೇ ತಿದ್ದುಪಡಿ ಕಾಯ್ದೆ 1963) ನಿವೃತ್ತಿ ವಯಸ್ಸನ್ನು 60 ರಿಂದ 62ಕ್ಕೆ ಹೆಚ್ಚಿಸಿದೆ.
* ವೇತನ : ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ -2.50.000
* ಉಚ್ಚ ನ್ಯಾಯಾಲಯದ ಇತರೆ ನ್ಯಾಯಾಧೀಶರಿಗೆ -2.25.000.
* 226ನೇ ವಿಧಿ : ಪ್ರಕಾರ ಉಚ್ಚ ನ್ಯಾಯಾಲಯ ಐದು ರೀತಿಯ ರಿಟ್ ಗಳನ್ನು ಹೊರಡಿಸುತ್ತದೆ.
* ಉಚ್ಚ ನ್ಯಾಯಾಲಯವು ಕೇಂದ್ರ ಹಾಗೂ ರಾಜ್ಯ ಶಾಸಕಾಂಗ ಮತ್ತು ಕಾರ್ಯಾಂಗಗಳ ಕ್ರಮಗಳ ಸಂವಿಧಾನ ಬದ್ಧತೆಯನ್ನು ಪರಿಶೀಲಿಸುವ ಅಧಿಕಾರವನ್ನು ಹೊಂದಿದೆ ಇದನ್ನು ” ನ್ಯಾಯಿಕ ವಿಮಶೆ೯” ಎಂದು ಕರೆಯುತ್ತಾರೆ.
* ಉಚ್ಚ ನ್ಯಾಯಾಲಯವನ್ನು “ಸಂವಿಧಾನ ರಕ್ಷಕ” ಎಂದು ಕರೆಯುತ್ತಾರೆ.
-: ನಿಮಗಿದು ತಿಳಿದಿರಲಿ :-
* 1862ರಲ್ಲಿ ಬ್ರಿಟಿಷರು ಭಾರತದಲ್ಲಿ ಮೊದಲ ಬಾರಿಗೆ ಕಲ್ಕತ್ತಾ,ಬಾಂಬೆ, ಮದ್ರಾಸ್ ಗಳಲ್ಲಿ ಮೂರು ಹೈಕೋರ್ಟ್ ಗಳನ್ನು ಸ್ಥಾಪಿಸಿದರು.
* ಪಂಜಾಬ್,ಹರಿಯಾಣ ರಾಜ್ಯಗಳಿಗೆ ಚಂಡಿಗಡದಲ್ಲಿ ಒಂದೇ ಉಚ್ಚ ನ್ಯಾಯಾಲಯವಿದೆ ಅದೇ ರೀತಿ ಅಸ್ಸಾಂ, ಮಣಿಪುರ, ಮೇಘಾಲಯ, ತ್ರಿಪುರ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಅರುಣಾಚಲ ಪ್ರದೇಶಗಳಿಗೆ ಅಸ್ಸಾಂನ ಗೌಹಾಟಿಯಲ್ಲಿರುವ ಒಂದೇ ಹೈಕೋರ್ಟ್
* ಕರ್ನಾಟಕದಲ್ಲಿ ಇತ್ತೀಚೆಗೆ ಬೆಂಗಳೂರು ನ್ಯಾಯಾಲಯದ ಜೊತೆಗೆ ಧಾರವಾಡ ಮತ್ತು ಕಲ್ಬುರ್ಗಿಯಲ್ಲಿ ಸಂಚಾರಿ ಪೀಠಗಳನ್ನು ಸ್ಥಾಪಿಸಲಾಗಿದೆ ಸಂಚಾರಿ ಪೀಠಗಳನ್ನು ಸ್ಥಾಪಿಸಲಾಗಿದೆ.
Thank you so much sir