ವಿಜಯನಗರ ಸಾಮ್ರಾಜ್ಯ ಮತ್ತು ಬಹುಮನಿ ರಾಜ್ಯ (All Competative exam notes)

 -: ವಿಜಯನಗರ ಸಾಮ್ರಾಜ್ಯ :-

* ಹರಿಹರ – ಬುಕ್ಕರು 1336 ರಲ್ಲಿ ತುಂಗಭದ್ರ ನದಿಯ ದಕ್ಷಿಣದಡದ ಮೇಲೆ ಗುರು ವಿದ್ಯಾರಣ್ಯರ ಸಲಹೆಯಂತೆ ಈ ರಾಜ್ಯವನ್ನು ಸ್ಥಾಪಿಸಿದರು.

* ರಾಜಧಾನಿ – ಹಂಪಿ

* ಲಾಂಛನ – ಎಡ ಮುಖದ ವರಾಹ

* ವಿಜಯನಗರ ಸಾಮ್ರಾಜ್ಯವನ್ನು ಆಳಿದ ನಾಲ್ಕು ಮನೆತನಗಳು.

1) ಸಂಗಮ

2) ಸಾಳುವ

3) ತುಳುವ

4) ಅರವೀಡು

* ಸಂಗಮ ವಂಶದ (1336-1486) ಪ್ರಸಿದ್ಧ ದೊರೆಗಳೆಂದರೆ.- ಒಂದನೇ ಹರಿಹರ,ಬುಕ್ಕರಾಯ, ಎರಡನೆಯ ಹರಿಹರ, ಪ್ರೌಢದೇವರಾಯ.

* ಒಂದನೇ ಹರಿಹರ ವಿಜಯನಗರ ಸಾಮ್ರಾಜ್ಯಕ್ಕೆ ಆಸ್ತಿ ಬಾರ ಹಾಕಿ ಹೊಸ ರಾಜಧಾನಿಯನ್ನು ಅಭಿವೃದ್ಧಿಪಡಿಸಿದನು.

  -: ಬುಕ್ಕರಾಯ :-

* ಮಧುರೈ ಸುಲ್ತಾನನನ್ನು ಪದಚ್ಯಿತಿಗೊಳಿಸಿ ಬುಕ್ಕನ ಪುತ್ರ ಕೆಂಪಣನು ಸಾಮ್ರಾಜ್ಯ ವಿಸ್ತರಿಸಿದ ಬಗ್ಗೆ ಕೆಂಪಣ್ಣನ ಹೆಂಡತಿ ಗಂಗಾದೇವಿ ಬರೆದ ” ಮಧುರಾ ವಿಜಯಂ”  ಸಂಸ್ಕೃತ ಕೃತಿಯಲ್ಲಿ ಉಲ್ಲೇಖವಾಗಿದೆ.

* ಬುಕ್ಕರಾಯನು ಕೊಂಡವೀಡಿನ ರೆಡ್ಡಿಗಳನ್ನು ಸೋಲಿಸಿ ಪೆನುಗೊಂಡ ಪ್ರದೇಶವನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು.

* ಚೀನಾ ದೇಶದ ಮಿಂಗ್ ವಂಶದ ಸಾಮ್ರಾಟನ ಆಸ್ಥಾನಕ್ಕೆ ಬುಕ್ಕರಾಯ ರಾಯಭಾರಿಯನ್ನು ಕಳುಹಿಸಿದನು.

* ಈತನ ಬಿರುದು – ವೇದಮಾರ್ಗದ ಪ್ರವರ್ತಕ

* ಇವನ ಆಳ್ವಿಕೆಯಲ್ಲಿ ವಿಜಯನಗರ ರಾಜಧಾನಿ ಆಯಿತು.

  -: ಎರಡನೆಯ ಹರಿಹರ :-

* ಈತ ಕೊಂಡವೀಡು,ಕರ್ನೂಲ್, ನೆಲ್ಲೂರು ಮತ್ತು ಕೋಟೆಗಳನ್ನು ಗೆದ್ದುಕೊಂಡನು.

* ಕೃಷ್ಣೆಯ ಉತ್ತರದ ‘ ಪಾಂಗಳ ‘ ಕೋಟೆಯನ್ನು 1398ರಲ್ಲಿ ವಶಪಡಿಸಿಕೊಂಡನು.

* ಈತ ವೇದಗಳ ಭಾಷಾ ಲೇಖನ ಹರಿಹರನ ಕಾಲದಲ್ಲಿ ಪೂರ್ಣವಾಯಿತು. ಹಾಗಾಗಿ ಇವನನ್ನು ” ವೈದಿಕ ಮಾರ್ಗ ಸ್ಥಾಪನಾಚಾಯ” ಎಂದು ಕರೆಯಲಾಯಿತು.

* ಈತನ ಆಡಳಿತ ಅವಧಿಯಲ್ಲಿ ವಿಜಯನಗರ ವಿಶಾಲ ಪ್ರದೇಶಗಳನ್ನು ಒಳಗೊಂಡಿತ್ತು ವಿಶಾಲ ಪ್ರದೇಶಗಳನ್ನು ಒಳಗೊಂಡಿತ್ತು ಮತ್ತು ಬಹುತೇಕ ದಕ್ಷಿಣಾ ಭಾರತದ ಮೊದಲ ಬಾರಿಗೆ ವಿಜಯನಗರದ ವಶದಲ್ಲಿತ್ತು.

  -: ಎರಡನೇ ದೇವರಾಯ ( ಪ್ರೌಢದೇವರಾಯ ) :-

* ಸಂಗಮ ವಂಶದಲ್ಲಿಯೇ ಶ್ರೇಷ್ಠ ದೊರೆ

* ಬಿರುದು – ಗಜಬೇಂಟೆಕಾರ

* ಈತ ಒರಿಸ್ಸಾದ ಗಜಪತಿ ಕಪಿಲೇಂದ್ರನನ್ನು ಸೋಲಿಸಿ ಕೊಂಡವಿಡುವನ್ನು ಗೆದ್ದನು.

* ಗಡಿ ಪ್ರದೇಶದ ನಾಯಕರನ್ನು ಅಡಗಿಸಿ ಈಶಾನ್ಯ ಗಡಿಯನ್ನು ಕೃಷ್ಣಾ ನದಿಯವರೆಗೂ ವಿಸ್ತರಿಸಿದ.

* ಕೇರಳವನ್ನು ಗೆದ್ದು ಕೇರಳ ಶ್ರೀಲಂಕಾದಿಂದ ಕಪ್ಪ ಕಾಣಿಕೆಗಳನ್ನು ಸ್ವೀಕರಿಸಿದನು ” ದಕ್ಷಿಣ ಪಥದ ಚಕ್ರವರ್ತಿ” ಎನಿಸಿದ.

* ಕುರಾನಿನ ಪ್ರತಿಯನ್ನು ತನ್ನ ಸಿಂಹಾಸನದ ಮೇಲಿಟ್ಟು ಆಳ್ವಿಕೆ ನಡೆಸಿದ.

* ಇವನ ಆಸ್ಥಾನಕ್ಕೆ ಪರ್ಸಿಯಾದ ಅಬ್ದುಲ್ ರಜಾಕ್ – 1 443ರಲ್ಲಿ ಭೇಟಿ ನೀಡಿದನು.”ವಿಜಯನಗರದಂತ ನಗರವನ್ನು ಕಣ್ಣು ಕಂಡಿಲ್ಲ,ಕಿವಿ ಕೇಳಿಲ್ಲ ಏಕೆಂದರೆ ಇದಕ್ಕೆ ಸರಿದೂಗೋ ಪಟ್ಟಣವೇ ಪ್ರಪಂಚದಲ್ಲಿ ಕಾಣಲಾಗದು” ಎಂದನು.

* ಇವನ ಆಸ್ಥಾನದಲ್ಲಿ ಸಂಸ್ಕೃತ ಕವಿ ‘ ಡಿಂಡಿಮ’ ಮತ್ತು ಕನ್ನಡದ ಕವಿ ‘ಲಕ್ಕಣ್ಣ ದಂಡೇಶ್’ ಇದ್ದರು.

  -: ಕೃಷ್ಣದೇವರಾಯ :-

* ತುಳುವ ಸಂತತಿಯ ನರಸ ನಾಯಕ ಹಾಗೂ ಎರಡನೇ ಹೆಂಡತಿ ನಾಗಲಾಂಬಿಕೆಯ ಪುತ್ರ

* ವಿಜಯನಗರ ಸಾಮ್ರಾಜ್ಯದಲ್ಲಿ ಅತ್ಯಂತ ಶ್ರೇಷ್ಠ ದೊರೆ

* ಉಮ್ಮತ್ತೂರಿನ ಮಾಂಡಲಿಕ ಗಂಗರಾಜನನ್ನು ಸೋಲಿಸಿ ಶಿವನಸಮುದ್ರದ ಕೋಟೆಯನ್ನು ವಶಪಡಿಸಿಕೊಂಡನು.

* ರಾಯಚೂರು ಕೋಟೆಯನ್ನು ವಶಪಡಿಸಿಕೊಂಡ.

* ಗೋವಾವನ್ನು ವಿಜಯಪುರ ಸುಲ್ತಾನನಿಂದ ಗೆಲ್ಲಲು ಪೋರ್ಚುಗೀಸರಿಗೆ ನೆರವು ನೀಡುವ ಮೂಲಕ ಅವರೊಂದಿಗೆ ವ್ಯಾಪಾರ ಸಂಬಂಧ ಬೆಳೆಸಿದ.

* ಉದಯಗಿರಿ ಕೋಟೆಯನ್ನು ಗೆದ್ದುಕೊಂಡನು.ಇದನ್ನು ಗೆಲ್ಲುವಾಗ ಇವನು ” ನಾನು ಗೆಲ್ಲಲಾರದಂತ ಪ್ರಬಲ ಕೋಟೆ ಇದು ? ಒಂದೇ ದಿನದಲ್ಲಿ ಈ ಕೋಟೆಯನ್ನು ಗೆದ್ದು ಬಿಡೇನು ” ಎಂದನು.

* ಕಳಿಂಗದ ರಾಜಧಾನಿ ‘ ಕಟಕ್’ ಅನ್ನು ಜಯಸಿ, ಗಜಪತಿ ಪ್ರತಾಪರುದ್ರನನ್ನು ಸೋಲಿಸಿ ಶಾಂತಿ ಒಪ್ಪಂದವನ್ನು ಮಾಡಿಕೊಂಡನು.

* ವಿಜಯಪುರದ ಆದಿಲ್ ಷಾನನ್ನು ಸೋಲಿಸಿ ರಾಯಚೂರನ್ನು ಗೆದ್ದನು. ಮುತ್ತಿಗೆಯ ಆರಂಭದಲ್ಲಿ ಸೈನಿಕರಿಗೆ ” ಈಪ್ರಪಂಚದಲ್ಲಿ ಎಲ್ಲರೂ ಸಾಯಲೇಬೇಕು.ಯುದ್ಧದಲ್ಲಿ ಮಾಡಿದರೆ ಸ್ವರ್ಗ ಗೆದ್ದರೆ ವಿಜಯಲಕ್ಷ್ಮೀ . ಹೇಡಿಗಳಾಗಬೇಡಿ ”  ಎಂದು ಹುರಿದುಂಬಿಸಿದನು.

* ರಾಯಚೂರು, ಬೀದರ್, ಕಲ್ಬುರ್ಗಿ ಕೋಟೆಗಳನ್ನು ವಶಪಡಿನೆಕೊಂಡನು.

* ಬಹುಮನಿ ರಾಜ್ಯದ ಪ್ರಧಾನಿ ಖಾಸೀಂ ಬರೀದನನ್ನು ಸೋಲಿಸಿ,ಅವನು ಬಂಧಿಸಿದ್ದ ಬಹುಮನಿ ರಾಜಪುತ್ರನನ್ನು ಬೀದರ್ ನಲ್ಲಿ ಬಹುಮನಿ ಸಿಂಹಾಸನದ ಮೇಲೆ ಪ್ರತಿಷ್ಠಾಪಿಸಿ ” ಯವನರಾಜಪ್ರತಿಷ್ಠಾಪನಾಚಾರ್ಯ” ಎಂಬ ಬಿರುದು ಪಡೆದನು.

* ಸ್ವತಃ ಸಾಹಿತಿಯಾದ ಇವರು ” ಅಮುಕ್ತ ಮೌಲ್ಯ ( ತೆಲುಗು) ” ಜಾಂಬವತಿ ಕಲ್ಯಾಣ ಎಂಬ ಸಂಸ್ಕೃತ ನಾಟಕವನ್ನು ರಚಿಸಿದನು.

* ಸಂಸ್ಕೃತ ಕೃತಿಗಳು :- ರಸಮಂಜರಿ,ಉಷಾ ಪರಿಣಯ, ಮದಲಸ ಚರಿತ.

* ಈತನ ಆಸ್ಥಾನದಲ್ಲಿ ಅಷ್ಟ ದಿಗ್ಗಜರೆಂಬ ಕವಿಗಳಿದ್ದರು .ಅಲ್ಲ ಸಾನಿ ಪೆದ್ದಣ್ಣ,ನಂದಿ ತಿಮ್ಮಣ್ಣ, ದೂರ್ಜಟಿ,ತೆನಾಲಿ ರಾಮಕೃಷ್ಣ….

* ಹಂಪೆಯಲ್ಲಿ ಕೃಷ್ಣ ದೇವಾಲಯವನ್ನು ಕಟ್ಟಿಸಿದನು ಮತ್ತು ಹಂಪೆಯ ವಿರೂಪಾಕ್ಷ ದೇವಾಲಯದ ಮಹಾರಂಗಮಂಟಪವನ್ನು ನಿರ್ಮಿಸಿದನು.

* ಇವನ ಆಸ್ಥಾನಕ್ಕೆ ಪೋರ್ಚುಗೀಸ್ ಪ್ರವಾಸಿಗಳಿಂದ ಡು ರೇಟ್ ಬಾರ್ಬೊಸ್ ಮತ್ತು ಡೋಮಿಂಗ್ ಫಯಾಸ್ ಭೇಟಿ ನೀಡಿದ್ದರು.

 -: ವಿಜಯನಗರ ಸಾಮ್ರಾಜ್ಯದ ಪತನ :-

* ಕೃಷ್ಣದೇವರಾಯನ ನಂತರ ಅತ್ಯುತ್ತರಾಯ ಮತ್ತು ಸದಾಶಿವರಾಯ ಆಳಿದರು.

* ಕೃಷ್ಣದೇವರಾಯನ ಅಳಿಯ ಅರವಿಡು ವಂಶದ ರಾಮರಾಯ ಆಡಳಿತವನ್ನು ನಿಯಂತ್ರಿಸಿದನು ದಖ್ಖನ್ ಸುಲ್ತಾನರ ರಾಜರು ಆಗಾಗ ನಡೆಸುತ್ತಿದ್ದ ದಾಳಿಗೆ ಪ್ರತೀಕವಾಗಿ ರಾಮರಾಯ ವಿಜಯಪುರ ಹಾಗೂ ಗೋಲ್ಕೊಂಡ ರಾಜ್ಯಗಳ ಪ್ರದೇಶಗಳನ್ನು ಹೊಸಪಡಿಸಿಕೊಂಡನು ಇದು ಕದನಕ್ಕೆ ಪ್ರಚೋದನೆ ನೀಡಿತು.

* ದಖನ್ನಿನ ಸುಲ್ತಾನರು 1565 ರಲ್ಲಿ ನಾಲ್ಕು ರಾಜ್ಯಗಳ ಒಕ್ಕೂಟ ಸೈನ್ಯ ವಿಜಯನಗರ ಸಾಮ್ರಾಜ್ಯದ ಮೇಲೆ ದಾಳಿ ಮಾಡಿತು ಇದರಲ್ಲಿ ರಾಮರಾಯ ಸೋತು ಹತನಾದನು.

* ವಿಜಯ ಸಾಧಿಸಿದ ಸುಲ್ತಾನರು ವಿಜಯನಗರವನ್ನು ಕೊಳ್ಳೆ ಹೊಡೆದರು ಹಂಪಿಯನ್ನು ಆಳು ಕೊಂಪೆಯಾಯಿತು.

* ಮುಂದೆ ಪೆನುಗೊಂಡ,ಚಂದ್ರಗಿರಿ,ಕೊನೆಗೆ ವೆಲ್ಲೂರುಗಳಿಂದ ಅರವಿಡು ವಂಶದ ಆಡಳಿತ 1646 ರ ವರೆಗೆ ಮುಂದುವರೆಯಿತು.

* ಕರ್ನಾಟಕದಲ್ಲಿ ಮೈಸೂರು,ಕೆಳದಿ ಚಿತ್ರದುರ್ಗ, ಯಲಹಂಕ ಮುಂತಾದ ವಿಜಯನಗರ ಸಾಮಾಂತರು ಸ್ವತಂತ್ರರಾದರೂ.

  -: ವಿಜಯನಗರ ಸಾಮ್ರಾಜ್ಯದ ಕೊಡುಗೆಗಳು :-

* ಸಾಮ್ರಾಜ್ಯವು ರಾಜ್ಯ,ನಾಡು ಹಾಗೂ ಗ್ರಾಮಗಳೆಂಬ ಆಡಳಿತ ಘಟಕವಿತ್ತು.

* 1368 ರಿಂದ ಯುದ್ಧದಲ್ಲಿ ಫಿರಂಗಿಗಳ ಉಪಯೋಗ ಆರಂಭವಾಯಿತು.

* ಸೈನ್ಯದಲ್ಲಿ ನೌಕಾಪಡೆ ಇತ್ತು.

* ” ಹೊನ್ನಮ್ಮ” ಎಂಬುವಳು ಎರಡನೇ ದೇವರಾಯನ ಆಸ್ಥಾನದಲ್ಲಿ ವರದಿಗಾರಳಾಗಿದ್ದಳು.

* ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆ ” ಕುಸ್ತಿ” ಹರಿಯಕ್ಕ ಎಂಬುವಳು ಆ ಕಾಲದ ಖ್ಯಾತ ಮಹಿಳಾ ಕುಸ್ತಿಪಟು.

* ವೃತ್ತಿ ಆಧಾರಿತ ಜಾತಿ ವ್ಯವಸ್ಥೆ ಜಾರಿಯಲ್ಲಿತ್ತು.

* ಹೋಳಿ,ದೀಪಾವಳಿ ಮತ್ತು ದಸರಾ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸುತ್ತಿದ್ದರು.

* ದಸರಾ ಹಬ್ಬವು ಹಂಪಿಯಲ್ಲಿ ರಾಜಾಶ್ರಯದಲ್ಲಿ ವೈಭವದಿಂದ ನಡೆಯುತ್ತಿತ್ತು.

* ಅನಂತಪುರ ಜಿಲ್ಲೆಯ ಗುತ್ತಿ ಸಮೀಪದ ” ವಜ್ರಕೂರ್” ವಜ್ರದ ಕೇಂದ್ರವಾಗಿತ್ತು.

* ಭಟ್ಕಳ ಕಬ್ಬಿಣದ ಅದಿರಿನ ಕೇಂದ್ರವಾಗಿತ್ತು.

* ಕ್ಯಾಲಿಕಟ್(ಕೇರಳ) ನಲ್ಲಿ ನೀಲಗಳು ಹೇರಳವಾಗಿ ದೊರೆಯುತ್ತಿದ್ದವು.

* ಪುಲಿಕಾಟ್ ನಲ್ಲಿ ಗುಲಾಬಿ ಹೂಗಳ ಸುಗಂಧದ ದ್ರವ್ಯ ತಯಾರಿಸಲಾಗುತ್ತಿತ್ತು.

* ವಿದೇಶಿ ಪ್ರವಾಸಿಗ ಬಾರ್ಬೊಸ್ :- ” ಕ್ರೈಸ್ತ ನೇ, ಯಹೂದಿಯೇ,ಮಹಮ್ಮದಿಯನೇ ಅಥವಾ ಹಿಂದೂವೇ ಯಾರಾದರೂ ನೀರಾತಂಕವಾಗಿ ಈ ರಾಜ್ಯದಲ್ಲಿ ವಾಸಿಸಬಹುದು”

* ಕನ್ನಡ,ಸಂಸ್ಕೃತ, ತಮಿಳು ಭಾಷೆಯಲ್ಲಿ ಸಾಹಿತ್ಯ ಕೃತಿಗಳು ರಚನೆಯಾದವು.

* ರತ್ನಾಕರವರ್ಣಿ – ಭರತೇಶ ವೈಭವ

* ಚಾಮರಸನ – ಪ್ರಭುಲಿಂಗಲೀಲೆ

* ಕುಮಾರವ್ಯಾಸನ – ಕರ್ನಾಟ ಭಾರತ / ಕಥಾಮಂಜರಿ

* ಭೀಮಕವಿಯು ಫಾಲ್ಕುರಿಕೆ ಸೋಮನಾಥನ ತೆಲುಗು ಕೃತಿ ” ಬಸವ ಪುರಾಣ”ವನ್ನು ಕನ್ನಡದಲ್ಲಿ ಬರೆದಿದ್ದಾನೆ.

* ವೀರಶೈವರ ವಚನಗಳ ಸಂಕಲನವಾದ ” ಶೂನ್ಯ ಸಂಪಾದನೆ” ರಚನೆಯಾಯಿತು.

* ಲಕ್ಕಣ್ಣ ದಂಡೇಶನ – ಶಿವ ತತ್ವ ಚಿಂತಾಮಣಿ

* ಕನಕದಾಸ – ಮೋಹನ ತರಂಗಿಣಿ,ನಳ ಚರಿತ್ರೆ, ಹರಿಭಕ್ತ ಸಾರ, ಮತ್ತು ರಾಮ ಧ್ಯಾನ ಚರಿತೆ.

* ಪುರಂದರದಾಸರು,ಕನಕದಾಸರು, ಶ್ರೀಪಾದರಾಯರು, ವ್ಯಾಸರಾಯರು, ದಾಸ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದರು.

  -: ಸಂಸ್ಕೃತದಲ್ಲಿ :-

* ವಿದ್ಯಾರಣ್ಯರ – ಶಂಕರ ವಿಜಯ ಮತ್ತು ಸರ್ವದರ್ಶನ

* ಸಾಯಣಾಚಾರ್ಯರು – ವೇದಾರ್ಥ ಪ್ರಕಾಶ,ವೇದ ಭಾಷ್ಯ,ಆಯುರ್ವೇದ ಸುಧಾನಿಧಿ, ಪುರುಷಾರ್ಥ ಸುಧಾನಿಧಿ.

* ಗಂಗಾದೇವಿ – ಮಧುರಾ ವಿಜಯಂ

* ಎರಡನೇ ದೇವರಾಯನ ಆಸ್ಥಾನದ ಕವಿ ಶ್ರೀನಾಥನು ” ಕವಿ ಚಕ್ರವರ್ತಿ” ಎಂಬ ಬಿರುದು ಪಡೆದಿದ್ದ.

* ಅಲ್ಲಸಾನಿ ಪೆದ್ದಣ್ಣ – ಮನುಚರಿತಮು

* ತೆನಾಲಿ ರಾಮಕೃಷ್ಣ – ಉಭಟಾರಾಧ್ಯ ಚರಿತಂ

* ತಿಮ್ಮಣ್ಣ – ಜಾತಹ ಪಹರಣಂ

* ಪರಂಜ್ಯೋತಿಯರ್ – ತಿರುವಳ್ಯಾಡಲ್ ಪುರಾಣಂ

* ಶ್ರೀ ಕೃಷ್ಣದೇವರಾಯನು ನಿರ್ಮಿಸಿದ ಮಹಾನವಮಿ ದಿಬ್ಬದಲ್ಲಿ ನವರಾತ್ರಿ ಉತ್ಸವ ನಡೆಯುತ್ತಿತ್ತು.

* ವಿಜಯನಗರದ ಪ್ರಾಚೀನ ದೇವಾಲಯ – ಹಂಪಿಯ ವಿರೂಪಾಕ್ಷ ದೇವಾಲಯ.

WhatsApp Group Join Now
Telegram Group Join Now

Leave a Comment