ಸುದ್ದಿಯಲ್ಲಿರುವ ಸುಕನ್ಯಾ ಸಮೃದ್ಧಿ ಯೋಜನೆ

ಸುಕನ್ಯ ಸಮೃದ್ಧಿ ಯೋಜನೆಯ ಠೇವಣಿಯ ಮೇಲಿನ ಬಡ್ಡಿಯನ್ನು ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಖಾತೆಗೆ ಜಮಾ ಮಾಡಲಾಗುತ್ತದೆ. ಜನವರಿ 2024- ಮಾರ್ಚ್ 2024 ತ್ರೈಮಾಸಿಕದಲ್ಲಿ ಯೋಜನೆಯ ಬಡ್ಡಿ ದರ 8.2% ಆಗಿದೆ.

 -: ಯೋಜನೆಯ ಕುರಿತು ಮಾಹಿತಿ :-

* ಸುಕನ್ಯ ಸಮೃದ್ದಿ ಯೋಜನೆಯು (ಎಸ್ ಎಸ್ ವೈ )ಹೆಣ್ಣು ಮಕ್ಕಳಿಗಾಗಿ ಇರುವ ಭಾರತ ಸರ್ಕಾರ ರೂಪಿಸಿರುವ ಸರ್ಕಾರಿ ಬೆಂಬಲಿತ ಸಣ್ಣ ಠೇವಣಿಯಾಗಿದೆ.

* ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಭಾಗವಾಗಿ ಇದನ್ನು ಪ್ರಾರಂಭಿಸಲಾಗಿದೆ.

* ಸಚಿವಾಲಯ :- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

* ಹೆಣ್ಣುಮಗುವಿನ ಪೋಷಕರು ಅಥವಾ ದತ್ತು ಪೋಷಕರು ಅಧಿಸೂಚಿತ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ತಮ್ಮಹೆಣ್ಣು ಮಗುವಿನ ಹೆಸರಿನಲ್ಲಿ ಈಖಾತೆಯನ್ನು ತೆರೆಯಬಹುದು.

* ಬಡ್ಡಿ ದರ :- ಈಯೋಜನೆಯ ಬಡ್ಡಿ ದರವನ್ನು ಕೇಂದ್ರ ಸರ್ಕಾರವು ನಿಗದಿಪಡಿಸುತ್ತಿದ್ದು. ಪ್ರತೀ ತ್ರೈಮಾಸಿಕದಲ್ಲಿ ಈ ದರವನ್ನು ಪರಿಸಿಲಿಸಲಾಗುತ್ತದೆ.

* ತೆರಿಗೆ ವಿನಾಯಿತಿ :- ಆದಾಯ ತೆರಿಗೆ ಕಾಯ್ದೆ , 1961ರ ಸೆಕ್ಷನ್ 80 D ಅಡಿಯಲ್ಲಿ. ಈ ಯೋಜನೆಗೆ ತೆರಿಗೆ ವಿನಾಯಿತಿ ಇದೆ. ಹೂಡಿಕೆ ಮಾಡಿದ ಮೊತ್ತ, ಬಡ್ಡಿಯಾಗಿ ಗಳಿಸಿದ ಮೊತ್ತ ಮತ್ತು ಹಿಂಪಡೆಯಲಾದ ಮೊತ್ತದ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ.

-: ಈ ಯೋಜನೆಯ ಪ್ರಮುಖ ಅಂಶಗಳು :-

* ಯಾವುದೇ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನದ ನಂತರ ಆಕೆಗೆ 10 ವರ್ಷ ತುಂಬವರೆಗೆ ಯಾವುದೇ ಸಮಯದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ತೆರೆಯಬಹುದು.ದತ್ತು ಪೋಷಕರಿಗೂ ಇದೆ ನಿಯಮ ಅನ್ವಯಿಸುತ್ತದೆ.ಪಾಲಕರು ಗರಿಷ್ಠ ಎರಡು ಹೆಣ್ಣು ಮಕ್ಕಳಿಗೆ ಠೇವಣಿಯನ್ನು ತೆರೆಯಬಹುದು.

* ಈ ಯೋಜನೆಯಡಿ ಒಂದು ಖಾತೆಗೆ ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ 250 ರೂಪಾಯಿಗಳಿಂದ ಗರಿಷ್ಠ 1.5 ಲಕ್ಷ ರೂಪಾಯಿಗಳಷ್ಟನ್ನು ಹೂಡಿಕೆ ಮಾಡಬಹುದು.

* ಈ ಖಾತೆಗೆ ಪಾಲಕರು 15 ವರ್ಷಗಳಷ್ಟು ಕಾಲ ಹಣವನ್ನು ಕಟ್ಟಬಹುದು.ಈ ಯೋಜನೆಯ ಪಕ್ವತೆಯ ಅವಧಿ 21 ವರ್ಷಗಳು.ಅಂದರೆ 21 ವರ್ಷಗಳ ನಂತರ ಖಾತೆಯಿಂದ ಹಣ ಹಿಂತಿರುಗಿ ತೆಗೆದುಕೊಳ್ಳಬಹುದು.

* ಈ ಯೋಜನೆಗಾಗಿ ಮಾಡಿದ ಹೂಡಿಕೆಯನ್ನು ಹೆಣ್ಣು ಮಗುವಿನ ಮದುವೆ ಮತ್ತು ಶಿಕ್ಷಣಕ್ಕಾಗಿ ಬಳಸಬಹುದು.

-: ವಿದ್ಯಾ ಸಮೀಕ್ಷೆ ಕೇಂದ್ರಕ್ಕೆ ವಿಶ್ವ ಬ್ಯಾಂಕ್ ನಿಯೋಗ ಭೇಟಿ :-

21 ದೇಶಗಳ ಪ್ರತಿನಿಧಿಗಳನ್ನು ಒಳಗೊಂಡ ವಿಶ್ವ ಬ್ಯಾಂಕ್ ನಿಯೋಗವು ಇತ್ತೀಚೆಗೆ ಗುಜರಾತಿನ ಗಾಂಧಿನಗರದಲ್ಲಿರುವ ವಿದ್ಯಾ ಸಮೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದೆ.

-: ವಿದ್ಯಾ ಸಮೀಕ್ಷಾ ಕೇಂದ್ರದ ಬಗ್ಗೆ ತಿಳಿಯಿರಿ :-

* ವಿದ್ಯಾರ್ಥಿಗಳ ಕಲಿಕಾ ಫಲಿತಾಂಶಗಳಲ್ಲಿ ದೊಡ್ಡ ಬದಲಾವಣೆಯನ್ನು ತರಲು ದತ್ತಾಂಶಗಳನ್ನು ಹಾಗೂ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಗುರಿಯನ್ನು ಇದು ಹೊಂದಿದೆ.

* ಶಿಕ್ಷಣ ಸಚಿವಾಲಯ(MOE ) ನಿರ್ವಹಿಸುವ ಎಲ್ಲಾ ಯೋಜನೆಗಳ ಡೇಟಾ ಅಥವಾ ದತ್ತಾಂಶಗಳನ್ನು ಈ ಕೇಂದ್ರಗಳ ಮೂಲಕ ದತ್ತಾಂಶ ಭಂಡಾರಗಳಲ್ಲಿ ಸಂಗ್ರಹಿಸಲಾಗುತ್ತದೆ.

* ಈ ಕೇಂದ್ರಗಳು 15 ಲಕ್ಷಕ್ಕೂ ಹೆಚ್ಚು ಶಾಲೆಗಳು,96 ಲಕ್ಷಕ್ಕೂ ಮಿಕ್ಕಿ ಶಿಕ್ಷಕರು ಹಾಗೂ 26 ಕೋಟಿ ವಿದ್ಯಾರ್ಥಿಗಳ ಅಂಕಿ ಸಂಖ್ಯೆ ಮಾಹಿತಿಯನ್ನು ಒಳಗೊಂಡಿರುತ್ತದೆ.

* ಈ ಕೇಂದ್ರಗಳ ನಿಯಂತ್ರಣ ಕೊಠಡಿಗಳು ಕೃತಕ ಬುದ್ಧಿಮತ್ತೆ ಮತ್ತು ಮೆಸೇಜ್ ಲರ್ನಿಂಗ್( ಯಂತ್ರ ಕಲಿಕೆ) ಅನ್ನು ಬಳಸಿ ಸಂಗ್ರಹವಾದ ಈ ದತ್ತಾಂಶಗಳನ್ನು ಅರ್ಥಪೂರ್ಣವಾಗಿ ವಿಶ್ಲೇಷಿಸುತ್ತವೆ.

   -: ಪ್ರಮುಖ ಉದ್ದೇಶ :-

* ಸಮಗ್ರ ಶಿಕ್ಷಣ ನೀತಿಯ ವ್ಯಾಪ್ತಿಯಲ್ಲಿ ಬರುವ ವಿವಿಧ ರೀತಿಯ ಯೋಚನೆಗಳು ಅಥವಾ ಚಟುವಟಿಕೆಗಳ ಪ್ರಸ್ತುತ ಸ್ಥಿತಿಗತಿಯನ್ನು ಪರಿಣಾಮಕಾರಿಯಾಗಿ ತಿಳಿಯುವುದು.

* ವಿದ್ಯಾರ್ಥಿಗಳ ಕಲಿಕಾ ಫಲಿತಾಂಶಗಳು,ಶಾಲೆ ಬಿಟ್ಟ ವಿದ್ಯಾರ್ಥಿಗಳ ಸಂಖ್ಯೆಯನ್ನು ಪತ್ತೆ ಹಚ್ಚುವುದು.ಹಾಗೂ ದಾಖಲಾದ ವಿದ್ಯಾರ್ಥಿಗಳ ಜಾಡನ್ನು ಹಿಡಿಯುವುದು ಮತ್ತು ಶಿಕ್ಷಕರು ಹಾಗೂ ಶಾಲೆಗಳಿಗೆ ಅಗತ್ಯವಿರುವ ಬೆಂಬಲ ನೀಡುವುದು.

   -: ಈ ಕೇಂದ್ರದ ಮಹತ್ವ :-

* ಸಮಗ್ರ ಶಿಕ್ಷಣ ನೀತಿಯ ವ್ಯಾಪ್ತಿಯಲ್ಲಿ ಬರುವ ವಿವಿಧ ರೀತಿಯ ಯೋಚನೆಗಳು ಅಥವಾ ಚಟುವಟಿಕೆಗಳ ಪ್ರಸ್ತುತ ಸ್ಥಿತಿಗತಿಯನ್ನು  ಪರಿಣಾಮಕಾರಿಯಾಗಿ ತಿಳಿಯುವುದು.

* ವಿದ್ಯಾರ್ಥಿಗಳ ಕಲಿಕೆಯ ಫಲಿತಾಂಶಗಳು,ಶಾಲೆ ಬಿಟ್ಟ ವಿದ್ಯಾರ್ಥಿಗಳ ಸಂಖ್ಯೆಯನ್ನು ಪತ್ತೆ ಹಚ್ಚುವುದು ಮತ್ತು ದಾಖಲಾದ ವಿದ್ಯಾರ್ಥಿಗಳ ಜಾಡನ್ನು ಹಿಡಿಯುವುದು ಮತ್ತು ಶಿಕ್ಷಕರು ಹಾಗೂ ಶಾಲೆಗಳಿಗೆ ಅಗತ್ಯವಿರುವ ಬೆಂಬಲವನ್ನು ನೀಡುವುದು.

* ಧನಸಹಾಯ :- ಈ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರವು ಪ್ರತಿ ರಾಜ್ಯಕ್ಕೆ ಒಟ್ಟು ನಿಧಿಯಲ್ಲಿ ಎರಡರಿಂದ ಐದು ಕೋಟಿ ರೂಪಾಯಿಗಳವರೆಗೆ ಹಣವನ್ನು ನಿಗದಿಪಡಿಸುತ್ತದೆ.

WhatsApp Group Join Now
Telegram Group Join Now

Leave a Comment