ಸುರಪುರ ಮತ್ತು ಕೊಪ್ಪಳ ಬಂಡಾಯ (All Competative exam notes)

   -: ಸುರಪುರ :-

ಸುರಪುರ ಈಗಿನ ಯಾದಗಿರಿ ಜಿಲ್ಲಾ ಕೇಂದ್ರದಿಂದ ಸುಮಾರು 150 KM ದೂರದಲ್ಲಿದೆ. ಮೊಘಲರ ಔರಂಗಜೇಬನ ಕಾಲದಿಂದಲೂ ಇದು ಪ್ರಾಮುಖ್ಯತೆಯನ್ನು ಪಡೆದಿತ್ತು.

    -: ವೆಂಕಟಪ್ಪ ನಾಯಕ :-

* ತನ್ನ ತಂದೆ ಕೃಷ್ಣ ನಾಯಕನ ಮರಣಾನಂತರ ಈತನು ಪಟ್ಟಕ್ಕೆ ಬಂದನು.

* 1834 ರಲ್ಲಿ ಜನಿಸಿದ ಇವನು ಅಪ್ರಾಪ್ತ ವಯಸ್ಸಿನಲ್ಲಿಯೇ ಪಟ್ಟವೇರಿದನು.

* ಕೃಷ್ಣ ನಾಯಕನ ಸೋದರನಾಗಿದ್ದ ಪೆದ್ದ ನಾಯಕ ಎಂಬುವವನು ತಗಾದೆ ಮಾಡಲಾಗಿ ಸುರಪುರದ ಆಂತರಿಕ ಚಟುವಟಿಕೆಗಳು (ರಾಜಕೀಯ) ಕ್ಷೋಭೆಗೊಂಡವು.

* 1824ರಲ್ಲಿ ಬ್ರಿಟಿಷರು ‘ ಮೆಡೋಸ್ ಟೇಲರ್ ‘ ಎಂಬುವವನನ್ನು ಪೊಲಟಿಕಲ್ ಏಜೆಂಟ್ ನನ್ನಾಗಿ ನೇಮಿಸಿ. ಸುರಪುರ ಸಂಸ್ಥಾನದ ಮೇಲೆ ಬ್ರಿಟಿಷರು ಪರೋಕ್ಷವಾಗಿ ಹತೋಟಿಯನ್ನು ಸ್ಥಾಪಿಸಿದರು.

* ಮೆಡೋಸ್ ಟೇಲರ್ ಪೆದ್ದ ನಾಯಕನನ್ನು ಸಂಸ್ಥಾನದ ದಿವಾನನನ್ನಾಗಿ ನೇಮಿಸಿದನು.

* ಮೆಡೋಸ್ ಟೇಲರ್ ವೆಂಕಟಪ್ಪನಾಯಕನಿಗೆ ಸೂಕ್ತವಾದ ಶಿಕ್ಷಣವನ್ನು ಕೊಡಿಸುವ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟನು. 1853 ರಲ್ಲಿ ವೆಂಕಟಪ್ಪ ನಾಯಕ ಅಧಿಕಾರಕ್ಕೆ ಬಂದನು.

   -: ಸುರಪುರದಂಗೆ :-

* 1857ರ ಪ್ರಾರಂಭದ ಹೋರಾಟದಲ್ಲಿನ ನಾನಾ ಸಾಹೇಬನ ಪ್ರತಿನಿಧಿಗಳು ಸುರಪುರ ದಲ್ಲಿದ್ದಾರೆ ಎಂಬ ಪುಕಾರು ಕಂಡುಬಂದಿತು ಇದರಿಂದ ಬ್ರಿಟಿಷರು ರಾಜನನ್ನು ಅನುಮಾನದಿಂದ ಕಂಡರು.

* ವೆಂಕಟಪ್ಪ ನಾಯಕನ ಅವಧಿಯಲ್ಲಿನ ಆಡಳಿತದ ಬಗ್ಗೆ ವರದಿ ನೀಡಲು ಬ್ರಿಟಿಷ್ ಸರ್ಕಾರ ಕ್ಯಾಂಪ್ ಬೆಲ್ ಎಂಬ ಅಧಿಕಾರಿಯನ್ನು ನೇಮಿಸಿತು.

* ವೆಂಕಟಪ್ಪ ನಾಯಕನನ್ನು ಕರ್ನಾಟಕ ಚರಿತ್ರೆಯಲ್ಲಿ 1857ರ ಕ್ರಾಂತಿಯ ನಾಯಕನೆಂದು ಇತಿಹಾಸಕಾರರು ವರ್ಣಿಸಿದ್ದಾರೆ.

   -: ಕೊಪ್ಪಳದ ವೀರಪ್ಪ :-

ಜಮೀನ್ದಾರ್ ವೀರಪ್ಪ ಬಂಡೆದ್ದು ಕೊಪ್ಪಳ ಮತ್ತು ಸಮೀಪದ ಕೋಟೆಗಳನ್ನು ವಶಪಡಿಸಿಕೊಂಡನು ಕಡಿಮೆ ಸೈನಿಕರ ಬೆಂಬಲ ಹೊಂದಿದ್ದ ವೀರಪ್ಪನ ನೇತೃತ್ವದಲ್ಲಿನ ಬಂಡಾಯವನ್ನು ಸದೆಬಡೆಯಲು ಬ್ರಿಟಿಷರು ಸೈನ್ಯವನ್ನು ನಿಯೋಜಿಸಿದರು ವೀರಪ್ಪ ಸತತವಾಗಿ ಹೋರಾಟ ನಡೆಸಿ ಮರಣ ಹೊಂದಿದನು.

  -: ಹಲಗಲಿಯ ಬೇಡರ ದಂಗೆ :-

* ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನಲ್ಲಿ ಹಲಗಲಿ ಎಂಬುದು ಒಂದು ಪುಟ್ಟ ಗ್ರಾಮ ಹಿಂದೆ ಇದು ಮುಧೋಳ ಸಂಸ್ಥಾನದ ಆಳ್ವಿಕೆಗೆ ಒಳಪಟ್ಟಿತ್ತು.

* 1857ರ ಬಂಡಾಯದ ಸಂದರ್ಭದಲ್ಲಿ ಬ್ರಿಟಿಷರು ತಮ್ಮ ಆಳ್ವಿಕೆಯ ಪ್ರದೇಶಗಳಲ್ಲಿ ಶಸ್ತ್ರಗಳ ಬಳಕೆಯನ್ನು ನಿರ್ಬಂಧಿಸಿ ಕಾನೂನು ಒಂದನ್ನು ಜಾರಿಗೆ ತಂದರು ಇದು ಹಲಗಲಿ ಬೇಡರಿಗೂ ಅನ್ವಯವಾಗಿತ್ತು.

* ಹಲಗಲಿಯ ಬೇಡರು ತಲೆತಲಾಂತರಗಳಿಂದ ಬೇಟೆಯಾಡುವ ಉದ್ದೇಶಕ್ಕೆ ಮುಕ್ತವಾಗಿ ಬಳಸುತ್ತಿದ್ದ ಬಂದೂಕುಗಳನ್ನು ಬ್ರಿಟಿಷರಿಗೆ ಒಪ್ಪಿಸಲು ಸಿದ್ಧರಿರಲಿಲ್ಲ.ಬೇಡರು ತಮ್ಮ ಪರಂಪರಾನುಗತವಾದ ಹಕ್ಕನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಬ್ರಿಟಿಷರ ವಿರುದ್ಧ ಸಿಡಿದೆದ್ದರೂ.

* ಈ ಹೋರಾಟದಲ್ಲಿ ಮಂಟೂರು,ಬೋದಾನಿ ಅಲಗುಂಡಿಯ ಬೇಡರು,ಹಲಗಲಿಯ ಬೇಡರೊಂದಿಗೆ ಸೇರಿಕೊಂಡರು.

* ಬ್ರಿಟಿಷರು ಬಂಡಾಯಗಾರನನ್ನು ಹತ್ತಿಕ್ಕಿ ಗಲ್ಲಿಗೇರಿಸಿದರು.

-: ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು :-

* ಭಾರತೀಯ ನವೋದಯದ ಜನಕ – ರಾಜಾರಾಮ್ ಮೋಹನ್ ರಾಯ್

* ಬ್ರಹ್ಮ ಸಮಾಜದ ಸ್ಥಾಪಕ ರಾಜಾರಾಮ್ ಮೋಹನ್ ರಾಯ್(1828ರಲ್ಲಿ ಸ್ಥಾಪನೆ)

* ಲಾರ್ಡ್ ವಿಲಿಯಂ ಬೆಂಟಿಂಕ್ ಸತಿ ಸಹಗಮನ ಪದ್ಧತಿಯನ್ನು ನಿಷೇಧಿಸಿದನು.

* ಸೌವಾದ ಕೌಮುದಿ ಪತ್ರಿಕೆ -ರಾಜಾರಾಮ ಮೋಹನ್ ರಾಯ್

     -: ಆರ್ಯ ಸಮಾಜ :-

* ಆರ್ಯ ಸಮಾಜವನ್ನು ಸ್ಥಾಪಿಸಿದವರು – 1875ರಲ್ಲಿ ಸ್ವಾಮಿ ದಯಾನಂದ ಸರಸ್ವತಿ.

* ದಯಾನಂದ ಸರಸ್ವತಿ ಅವರು ” ವೇದಗಳಿಗೆ ಹಿಂತಿರುಗಿ ”ಎಂದು ಹೇಳಿದರು.

* ದಯಾನಂದ್ ಸರಸ್ವತಿಯವರು ” ಜಾತಿಯೂ ಯೋಗ್ಯತೆಯಿಂದ ಹೊರತು ಹುಟ್ಟಿನಿಂದಲ್ಲ ” ಎಂದು ಪ್ರತಿಪಾದಿಸಿದರು.

* ಇವರ ಕೃತಿ: – ಸತ್ಯಾರ್ಥ ಪ್ರಕಾಶ ( ಆರ್ಯ ಸಮಾಜದ ಬೈಬಲ್ )

* ಶುದ್ದೀ ಚಳುವಳಿಯು ಹಾಗೆ ಸಮಾಜದ ಒಂದು ಶಾಖೆಯಾಗಿದೆ.

* ” ಭಾರತೀಯರಿಗೆ ಭಾರತ ” ಎಂಬ ಘೋಷವಾಕ್ಯ ಸ್ವಾಮಿ ದಯಾನಂದ ಸರಸ್ವತಿ.

* ಶುದ್ಧಿ ಚಳುವಳಿ :- ಬೇರೆ ಧರ್ಮಕ್ಕೆ ಮತಾಂತರಗೊಂಡವರನ್ನು ಮತ್ತೆ ಹಿಂದೂ ಧರ್ಮಕ್ಕೆ ತಂದುಕೊಳ್ಳುವುದರ ಮೂಲಕ ಹಿಂದೂ ಧರ್ಮವನ್ನು ಗಟ್ಟಿಗೊಳಿಸುವುದು.

   -: ಪ್ರಾರ್ಥನಾ ಸಮಾಜ- 1867:-

* ಆತ್ಮ ರಾಂ ಪಾಂಡುರಂಗ ಅವರು ಮುಂಬೈನಲ್ಲಿ ಸ್ಥಾಪಿಸಿದರು.

* ” ಮಾನವನ ಸೇವೆಯೇ ಪರಮಾತ್ಮನ ಸೇವೆ ” ಎಂಬುದು ಇದರ ನೆಲೆಗಟ್ಟಾಗಿತ್ತು.

* ಎಂ ಜಿ ರಾನಡೆ ಅವರು ಪ್ರಾರ್ಥನಾ ಸಮಾಜವನ್ನು ಜನಪ್ರಿಯಗೊಳಿಸಿದರು.

* ಈ ಸಂಸ್ಥೆಯ ಪತ್ರಿಕೆ – ‘ ಸುಭೋಧ’

  -: ಸತ್ಯಶೋಧಕ ಸಮಾಜ :-

* ಜ್ಯೋತಿ ಬಾ ಪುಲೆ ಅವರು 1872 ರಲ್ಲಿ ಪುಣೆಯಲ್ಲಿ ಸ್ಥಾಪಿಸಿದರು.

* ” ಸ್ವಾತಂತ್ರ್ಯ ಪ್ರತಿಯೊಬ್ಬ ವ್ಯಕ್ತಿಯ ಅವಶ್ಯಕತೆ ” ಎಂದು ಹೇಳಿದರು.

* ” ಸ್ವಾತಂತ್ರವಿಲ್ಲದಿದ್ದರೆ ವಿಚಾರಗಳನ್ನು ಅಭಿವ್ಯಕ್ತಿಗೊಳಿಸಲು ಸಾಧ್ಯವಿಲ್ಲ ” ಎಂದರು.

* ಗುಲಾಮಗಿರಿ ಪುಸ್ತಕ ಬರೆದವರು – ಜ್ಯೋತಿ ಬಾ ಪುಲೆ

* ಡಾ. ಅಂಬೇಡ್ಕರ್ ಜ್ಯೋತಿಬಾ ಪುಲೆ ಅವರ ತತ್ವಗಳಿಂದ ಪ್ರಭಾವಿತರಾದರು.

  -: ಅಲಿಘರ್ ಚಳುವಳಿ:-

* ಈ ಚಳುವಳಿಯ ನಾಯಕ- ಸರ್ ಸೈಯದ್ ಅಹಮದ್ ಖಾನ್

* ಇವರು ಮುಸ್ಲಿಂ ಸಮುದಾಯಕ್ಕೆ ಆಧುನಿಕ ಶಿಕ್ಷಣ ನೀಡುವ ಉದ್ದೇಶದಿಂದಾಗಿ ” ಆಂಗ್ಲೋ ಓರಿಯೆಂಟಲ್ ಕಾಲೇಜನ್ನು” ಪ್ರಾರಂಭಿಸಿದರು.ಇದು ಮುಂದೆ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ಎಂದು ಹೆಸರು ಪಡೆಯಿತು.

   -: ರಾಮಕೃಷ್ಣ ಮಿಷನ್ (1897):-

* ರಾಮಕೃಷ್ಣ ಪರಮಹಂಸರು ಬಂಗಾಳದ ದಕ್ಷಿಣೇಶ್ವರದಲ್ಲಿನ ಕಾಳಿ ದೇವಾಲಯದ ಅರ್ಚಕರು.

* ಸ್ವಾಮಿ ವಿವೇಕಾನಂದರು ಪರಮಾಂಸರ ಶಿಷ್ಯರಾಗಿದ್ದರು.

* 1893ರಲ್ಲಿ ಸ್ವಾಮಿ ವಿವೇಕಾನಂದರು ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಸರ್ವಧರ್ಮ ಸಹಿಷ್ಣುತೆ, ಸಕಲ ಧರ್ಮಗಳು ಸತ್ಯ ಎಂದು ಪ್ರತಿಪಾದಿಸಿ ಭಾರತದ ಹಿರಿಮೆಯನ್ನು ಜಗತ್ತಿಗೆ ಸಾರಿದರು.

* 1896ರಲ್ಲಿ ಸ್ವಾಮಿ ವಿವೇಕಾನಂದರು ವೇದಾಂತ ಸಂಘವನ್ನು ಸ್ಥಾಪಿಸಿದರು.

* ಸ್ವಾಮಿ ವಿವೇಕಾನಂದರು ಪತ್ರಿಕೆಗಳು – ಪ್ರಶುದ್ಧ ಭಾರತ( ಇಂಗ್ಲಿಷ್ ನಲ್ಲಿ), ಉದ್ಯೋದನ( ಬಂಗಾಳಿಯಲ್ಲಿ)

* ಜನವರಿ 12 ರಾಷ್ಟ್ರೀಯ ಯುವಕರ ದಿನ

-: ಥಿಯೋಸಾಫಿಕಲ್ ಸೊಸೈಟಿ ( ಬ್ರಹ್ಮ ವಿದ್ಯಾ ಸಮಾಜ ):-

* ಸ್ಥಾಪಕರು – ಮೇಡಂ ಬ್ಲಾವಟಿಸ್ಕಿ ಮತ್ತು ಕರ್ನಲ್ H.S. ಅಲ್ಕಾಟ್

* ಅನಿಬೆಸೆಂಟ್ ಅವರು ನ್ಯೂ ಇಂಡಿಯಾ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು 1916ರಲ್ಲಿ ಹೋಂ ರೂಲ್ಸ್ ಚಳುವಳಿಯನ್ನು ಪ್ರಾರಂಭಿಸಿದರು.

* 1917ರಲ್ಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸುವ ಮೂಲಕ ಅನಿಬೆಸೆಂಟರು ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ ಮೊದಲ ಮಹಿಳೆಯಾಗಿದ್ದಾರೆ.

  -: ಹೋಂ ರೂಲ್ ಚಳುವಳಿ :-

ಬ್ರಿಟನ್ನಿನ ಹಿಡಿತದಲ್ಲಿದ್ದ ಐರ್ಲೆಂಡ್ ಮತ್ತು ಅಲ್ಲಿನ ಜನ ತಮ್ಮ ಆಡಳಿತವನ್ನು ತಾವೇ ನಡೆಸಿಕೊಳ್ಳುವ ಹಕ್ಕನ್ನು ಸಾಧಿಸಲು ಹೋಂ ರೂಲ್ ಆಂದೋಲನವನ್ನು ನಡೆಸಿದ್ದರು ಇದರಿಂದ ಪ್ರಭಾವಿತರಾದ ಅನಿಬೆಸೆಂಟ್ ಭಾರತದಲ್ಲಿಯೂ ಹೋಮ್ ರೂಲ್ ಚಳುವಳಿಯನ್ನು ಆರಂಭಿಸಿದರು 1916ರಲ್ಲಿ ತಿಲಕರ ನೇತೃತ್ವದಲ್ಲಿ ಪುನಾದಲ್ಲಿ ಮತ್ತು ಅನಿಬೆಸೆಂಟರ ನೇತೃತ್ವದಲ್ಲಿ ಮದ್ರಾಸ್ ನಲ್ಲಿ ಸ್ಥಾಪನೆ ಆಯಿತು.

* ಬಾಲ ಗಂಗಾಧರ ತಿಲಕ್ ” ಮರಾಠ ಮತ್ತು ಕೇಸರಿ ” ಪತ್ರಿಕೆಗಳನ್ನು ನಡೆಸಿದರೆ, ಅನಿಬೆಸೆಂಟರು ‘ ನ್ಯೂ ಇಂಡಿಯಾ ಕಾಮನ್ ವ್ಹೀಲ್ ‘ ಪತ್ರಿಕೆಗಳ ಮೂಲಕ ಪ್ರಚಾರ ಮಾಡಿದರು.

   -: ಸಮಾಜಶಾಸ್ತ್ರ :-

-: ಸಾಮಾಜಿಕ ಸ್ತರ ವಿನ್ಯಾಸ :-

* ಸಾಮಾಜಿಕ ಸ್ತರ ವಿನ್ಯಾಸವೆಂದರೆ ಜನರನ್ನು ಆದಾಯ ಶಿಕ್ಷಣ,ಜಾತಿ, ಬಣ್ಣ, ಲಿಂಗ, ಉದ್ಯೋಗ,ಬುದ್ಧಿಶಕ್ತಿ ಮೊದಲಾದವುಗಳ ಆಧಾರದ ಮೇಲೆ ಮೇಲು ಕೀಳು ಎಂದು ವಿಂಗಡಿಸುವುದಾಗಿದೆ.

* ” ಮಾನವ ಕುಲ ತಾನೊಂದೆ ವಲಂ ” –  ಆದಿ ಕವಿ ಪಂಪ

* ಸಂವಿಧಾನದ 17ನೇ ವಿಧಿಯು ಅಸ್ಪೃಶ್ಯತಾ ಆಚರಣೆಯನ್ನು ನಿಷೇಧಿಸಿದೆ.

* ಭಾರತ ಸರ್ಕಾರ – ಅಸ್ಪೃಶ್ಯತಾ ಅಪರಾಧಗಳ ಕಾಯ್ದೆಯನ್ನು 1955ರಲ್ಲಿ ಜಾರಿಗೊಳಿಸಿದೆ ಜಾರಿಗೊಳಿಸಿದೆ ಇದೇ ಕಾಯ್ದೆಯನ್ನು ತಿದ್ದುಪಡಿ ಮಾಡಿ 1976ರಲ್ಲಿ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಎಂದು ಮಾರ್ಪಾಡುಗೊಳಿಸಲಾಗಿದೆ.

* 1989ರ ಶಾಸನವು ಅಸ್ಪೃಶ್ಯತೆಯ ನಿರ್ಮೂಲನೆ ಕುರಿತಾದ ವಿಶೇಷ ಜವಾಬ್ದಾರಿಗಳನ್ನು ರಾಜ್ಯ ಸರ್ಕಾರಗಳಿಗೆ ವಹಿಸಿದೆ.

* ಸಂವಿಧಾನದ 15,16, 17, 38 ಮತ್ತು 46ನೇ ವಿಧಿಗಳು ಭಾರತೀಯ ಪ್ರಜೆಗಳ ನಡುವೆ ಯಾವುದೇ ಬಗೆಯ ತಾರತಮ್ಯ ಮಾಡಬಾರದೆಂದು ತಿಳಿಸುತ್ತದೆ.

* 16(4),320(4) ನೇ ವಿಧಿಗಳು ಉದ್ಯೋಗ ವಲಯದಲ್ಲಿ SC, ST ಗೆ ಮೀಸಲಾತಿ ಘೋಷಿಸಿವೆ.

* 29 ನೇ ವಿಧಿ- ಶೈಕ್ಷಣಿಕ ಸೌಲಭ್ಯ ಘೋಷಿಸಿದೆ.

* 25 ನೇ ವಿಧಿ- ಜನರೆಲ್ಲರಿಗೂ ಸಾರ್ವಜನಿಕ ಧಾರ್ಮಿಕ ಕೇಂದ್ರಗಳಿಗೆ ಪ್ರವೇಶಿಸುವ ಮುಕ್ತ ಅವಕಾಶ ಘೋಷಿಸಿದೆ.

* ಅಸ್ಪೃಶ್ಯತೆಯು ಹಿಂದೂ ಸಮಾಜಕ್ಕೆ ಹತ್ತಿದ ಕಳಂಕ ಎಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದಾರೆ.

 

WhatsApp Group Join Now
Telegram Group Join Now

Leave a Comment