6 ರಿಂದ 14ನೇ ಶತಮಾನದ ಭಾರತ (All Competative exam notes)

  -: ರಜಪೂತರು ( 6 ರಿಂದ 14 ಶತಮಾನ) :-

* ಉತ್ತರ ಭಾರತದಲ್ಲಿ ಗುರ್ಜರ ಪ್ರತಿಹಾರರು, ಗಹಡ್ವಾರು, ಪಾರಮಾರರು,ಚೌಹಾಣರು,ಸೋಲಂಕಿಯರು, ಮತ್ತು ಚಂದೇಲರು ರಜಪೂತ ಮನೆತನಗಳು ಆಳ್ವಿಕೆ ನಡೆಸಿದರು.

  -: ಗುರ್ಜರ ಪ್ರತಿಹಾರರು :-

* ಹರಿಚಂದ್ರನು ಈ ಮನೆತನದ ಆಳ್ವಿಕೆಯನ್ನು ಪ್ರಾರಂಭಿಸಿದನು.

* ಈತನು 4 ಮಕ್ಕಳು ಬೇರೆ ಬೇರೆ ಶಾಖೆಗಳಾದ ಜೋಧಪುರ ನಂದಿಪುರ ಬ್ರೋಚ್ ಮತ್ತು ಉಜ್ಜಯಿನಿಗಳಿಂದ ಆಳ್ವಿಕೆ ನಡೆಸಿದರು.

* ಉಜ್ಜೈನಿಯಲ್ಲಿ ಆಳ್ವಿಕೆ ಮಾಡುತ್ತಿದ್ದ ನಾಗಭಟನು ಪ್ರಮುಖ ದೊರೆಯಾಗಿದ್ದನು ಈತ ಅರಬ್ಬರ ಆಕ್ರಮಣವನ್ನು ಎದುರಿಸಿ ಮತ್ತು ಗುಜರಾತ್, ಮಾಳ್ವ, ರಜಪೂತನಾದವರೆಗೆ ಸಾಮ್ರಾಜ್ಯವನ್ನು ವಿಸ್ತರಿಸಿದ.

* ಇನ್ನೊಬ್ಬ ಪ್ರಮುಖ ದೊರೆಯಾದ ಮಿಹಿರಭೋಜನು ಪಾಲರ ನಾರಾಯಣ ಪಾಲ ನನ್ನು ಸೋಲಿಸಿ ರಾಜ್ಯ ವಿಸ್ತರಿಸಿದ ಅರೋ ಪ್ರವಾಸಿಗ ಸುಲೈಮಾನ್ ಮತ್ತು ಅಲ್-ಮಸಂದ್ ಈತನ ಆಸ್ಥಾನಕ್ಕೆ ಭೇಟಿ ನೀಡಿದ್ದರು.

* ಮಹೇಂದ್ರ ಪಾಲ ಮತ್ತು ಒಂದನೇ ಮಹಿಪಾಲರ ನಂತರ ಈ ಮನೆತನ ಪತನ ಹೊಂದಲು ಪ್ರಾರಂಭಿಸಿತು.

  -: ಗಹಡ್ವಾಲರು:-

* ಈ ಮನೆತನದ ಸ್ಥಾಪಕ ಚಂದ್ರದೇವ ಉತ್ತರ ಭಾರತದ ಬಹು ಭಾಗದಲ್ಲಿ ರಾಜ್ಯಭಾರ ನಡೆಸಿದ

* ಗೋವಿಂದ ಚಂದ್ರ ಪ್ರಸಿದ್ಧ ದೊರೆ ಈತನು ಪಾಲರಿಂದ ಮಗಧ,ಮಾಳ್ವ, ಮತ್ತು ಕಳಿಂಗ ಒರಿಸ್ಸಾ ಅರಸರೊಂದಿಗೆ ಯುದ್ಧ ಮಾಡಿ ರಾಜ್ಯವನ್ನು ವಿಸ್ತರಿಸಿದನು.

* ಕಾಶ್ಮೀರ, ಗುಜರಾತ್, ಚೋಳ ಅರಸರೊಂದಿಗೆ ಉತ್ತಮ ಬಾಂಧವ್ಯ ಹೊಂದಿದನು.

  -: ಪಾರಮಾರರು :-

* ಸ್ಥಾಪಕ – ಉಪೇಂದ್ರ ಕೃಷ್ಣರಾಜ

* ರಾಜಧಾನಿ – ಮಾಳ್ವದ ಧಾರ

* ಈ ಮನೆತನದ  ಶಿಯಾಕ್ ದೊರೆಯು ರಾಷ್ಟ್ರಕೂಟರ 2ನೇ ಕೊಟ್ಟಿಗನನ್ನು ಸೋಲಿಸಿ ಅವರ ಮಾಂಡಳಿಕತ್ವದಿಂದ ಮುಕ್ತನಾದನು.

* ಇವರ ಆಸ್ಥಾನದಲ್ಲಿ ಧನಂಜಯ, ಭಟ್ಟಲಾಯುಧ, ಧನಿಕ ಮತ್ತು ಪದ್ಮಗುಪ್ತರೆಂಬ ವಿದ್ವಾಂಸರಿದ್ದರು.

  -: ಚೌಹಾಣರು :-

* ಈ ಮನೆತನವು ರಜಪೂತ ಮನೆತನಗಳಲ್ಲಿ ಪ್ರಮುಖವಾದದ್ದು.

* ಮೂಲತ: ಅಜ್ಮೀರದವನಾದ ಮೂರನೇ ಪೃಥ್ವಿರಾಜ್ ಚೌಹಾಣ್ ನು ಈ ಮನೆತನದ ಪ್ರಸಿದ್ಧ ದೊರೆ.

* 1191ರಲ್ಲಿ ಒಂದನೇ ತರೈನ ಕದನದಲ್ಲಿ ಮಹಮದ್ ಗೊರಿಯನ್ನು ಸೋಲಿಸಿದನು.ಆದರೆ 1192 ರಲ್ಲಿ 2ನೇ ತರೈನ ಕದನದಲ್ಲಿ ಜಯಚಂದ್ರ ಮೋಸ ಮಾಡಿದ್ದರಿಂದ ಘೋರಿ ಕೈಯಲ್ಲಿ ಸೋತು ಕೊಲೆಯಾದನು.

* ಮೂರನೇ ಪೃಥ್ವಿರಾಜನು ಕಾರ್ಯ ಮತ್ತು ಸಾಹಸಕ್ಕೆ ಹೆಸರಾಗಿದ್ದು ” ಪೃಥ್ವಿರಾಜ್ ರಾಸೋ” ಎಂಬ ಹಿಂದಿ ಮಹಾಕಾವ್ಯದಲ್ಲಿ ವರ್ಣನೆ ಇದೆ.

  -: ಸೋಳಂಕಿಯರು :-

* ಸ್ಥಾಪಕ – ಮೊದಲನೇ ಮೂಲರಾಜ

* ಪ್ರಸಿದ್ಧ ದೊರೆ – ಮೊದಲನೆಯ ಭೀಮರಾಯ

* ಭೀಮರಾಯನ ಕಾಲದಲ್ಲಿ ಮಹಮ್ಮದ್ ಘಜ್ನಿ ಗುಜರಾತಿನ ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿದನು ಈ ದಾಳಿಯನ್ನು ತಡೆಯುವಲ್ಲಿ ವಿಫಲನಾಗಿ ತನ್ನ ಪುತ್ರ ಕರ್ಣದೇವನಿಗೆ ಅಧಿಕಾರ ನೀಡಿದನು.

* ಈ ಮನೆತನ ಆಳ್ವಿಕೆಯಲ್ಲಿ ಖ್ಯಾತ ಜೈನ ಪಂಡಿತನಾದ ಹೇಮಚಂದ್ರನು – ” ದೇಸಿನಾಮ ಮಾಲಾ” ಎಂಬ ನಿಘಂಟನ್ನು ಪ್ರಾಕೃತ ಭಾಷೆಯಲ್ಲಿ ರಚಿಸಿದನು.

* ಎರಡನೇ ಮೂಲರಾಜನು ಮೊಹಮದ್ ಘೋರಿಯನ್ನು ಮೌಂಟ್ ಅಬು ಸಮೀಪ ಸೋಲಿಸಿದನು.

* ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕನಾದ ‘ ಉಲು ಘ ಖಾನ್ ಮತ್ತು ನುಸ್ರತ್ ಖಾನ್’ ರು ಕರ್ಣ ದೇವನನ್ನು ಸೋಲಿಸಿ, ಈ ಪ್ರಾಂತ್ಯವನ್ನು ವಿಲೀನಗೊಳಿಸಿದರು.

  -: ಚಂದೇಲರು :-

* ಪಾರಮಾರರ ನಂತರ ರಾಜ್ಯ ಸ್ಥಾಪಿಸಿದರು. ಇವರು ಪ್ರತಿಹಾರರ ಮಾಂಡಲೀಕರ  ಆಳ್ವಿಕೆಯಲ್ಲಿದ್ದರು.

* ಪ್ರಸಿದ್ಧ ಅರಸ – ಡಂಗ – ಇವನು ಪ್ರತಿಹಾರರಿಂದ ಸ್ವಾತಂತ್ರ್ಯ ಘೋಷಿಸಿಕೊಂಡನು.

* ಪಾಲರು ಮತ್ತು ಆಂಧ್ರರನ್ನು ಸೋಲಿಸಿ ರಾಜ್ಯವನ್ನು ವಿಸ್ತರಿಸಿದನು.

* ಹಿಂದೂಷಾಯಿ ರಾಜ ಜಯಪಾಲನಿಗೆ ಮುಸ್ಲಿಂ ರ ವಿರುದ್ಧ ಸೈನಿಕ ನೆರವು ನೀಡಿದ

* ಈತನ ಬಿರುದು – ಮಹಾರಾಜಾಧಿರಾಜ

* ಈತ ಸ್ವತಃ ವಿದ್ವಾಂಸನಾಗಿದು, ಹಲವಾರು ವಿದ್ವಾಂಸರಿಗೆ ಆಶ್ರಯ ನೀಡಿದ್ದ.

* ಈ ಮನೆತನದ ಅವಧಿಯಲ್ಲಿ ಭವಭೂತಿಯು ಸಂಸ್ಕೃತದಲ್ಲಿ ” ಮೂಲತಿ ಮಾಧವ” ಉತ್ತರ ರಾಮಚರಿತ ಮತ್ತು ಮಹಾವೀರ ಚರಿತ ಕಾವ್ಯಗಳನ್ನು ರಚಿಸಿದರು.

* ಈ ರಾಜ್ಯವನ್ನು ಖಿಲ್ಜಿ ಸುಲ್ತಾನರು ಗೆದ್ದುಕೊಂಡರು.

  -: ರಜಪೂತರ ಕೊಡುಗೆಗಳು :-

* ಇವರು ಕ್ಷತ್ರೀಯವಾಗಿದ್ದು, ಹಿಂದೂ ಧರ್ಮದ ಅನೇಕ ಹಬ್ಬಗಳನ್ನು ಆಚರಿಸುತ್ತಿದ್ದರು.

* ಸ್ತ್ರೀಯರಿಗೂ ಪುರುಷರಂತೆ ಸಮಾನ ಸ್ಥಾನಮಾನವಿತ್ತು.

ಸತಿ, ಜೋಹರ್ ಪದ್ಧತಿ ಅಸ್ತಿತ್ವದಲ್ಲಿದ್ದವು.

* ಸ್ಟಯಂವರದ ವಿವಾಹ ಪದ್ಧತಿ ರಾಜಮನೆತನಗಳಲ್ಲಿ ರೂಢಿಯಲ್ಲಿತ್ತು.

* ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ ಮುಂಜ ರಾಜನು ಪದ್ಮಗುಪ್ತ ಹಲಾಯುಧ ಎಂಬ ಕವಿಗಳಿಗೆ ಆಶ್ರಯ ನೀಡಿದ್ದನು.

* ಭೋಜರಾಜನ ಕಾಲದಲ್ಲಿ ಶಾಂತಿಸೇನ ( ಪ್ರಭಾಚಂದ್ರಸೂರಿ) , ಘನಪಾಲ ಎಂಬ ಜೈನ ಪಂಡಿತರು ಆಶ್ರಯ ಪಡೆದಿದ್ದರು.

* ಜಯದೇವನ ” ಗೀತೆ ಗೋವಿಂದ ” ಭಾರವೀಯ ‘ ಕಿರಾತಾರ್ಜುನೀಯ’  ಭತ್ಯರಹರಿಯ ‘ ರಾವಣನ ವಧಾ’ ಮಹೇಂದ್ರ ಪಾಲನಾ ‘ ಕಾವ್ಯ ಮೀಮಾಂಸೆ’ ತಾವೇಗಳು ಇವರ ಕಾಲದಲ್ಲಿ ರಚನೆಯಾದವು.

* ಪ್ರಮುಖ ನಾಟಕಗಳು :- ರಾಜಶೇಖರ ರಚಿಸಿದ “ಬಾಲನಾರಾಯಣ” ಮತ್ತು ” ಕರ್ಪೂರ ಮಂಜರಿ” ಭವಭೂತಿ ರಚಿಸಿದ ” ಮಹಾವೀರ ಚರಿತ” ಹಾಗೂ ಉತ್ತರ ರಾಮಚರಿತ

* ಪ್ರಮುಖ ಕೃತಿಗಳು :- ಕಲ್ಲಣ್ಣ – ರಾಜ ತರಂಗಿಣಿ, ಜನಿಕನ – ಪೃಥ್ವಿರಾಜ ವಿಜಯ ಮತ್ತು ಹೇಮಚಂದ್ರನ – ಕುಮಾರ ಪಾಲಚರಿತ

* ರಜಪೂತ ಅರಸರ ಜೀವನ ಕೃತಿಗಳಾದ – ಪೃಥ್ವಿರಾಜ್ ರಾಸೋವನ್ನು ಚಂದಾ ಬರ್ದಾಯಿ ಮತ್ತು ಭೋಜಪ್ರಬಂಧವನ್ನು ಬಲ್ಲಾಳ ಎಂಬುವನು ರಚಿಸಿದನು.

* ವಿದ್ಯಾ ಕೇಂದ್ರಗಳು :- ನಳಂದ,ಕಾಶಿ,ವಿಕ್ರಮಶೀಲ,ಉಜ್ಜಯಿನಿ

  -: ಕಲೆ ಮತ್ತು ವಾಸ್ತು ಶಿಲ್ಪ :-

* ರಜಪೂತ ಅರಸರು ಚಿತ್ತೋಡ,ಮಾಂಡು, ರಣತಂಬೋರ್, ಜೋಧ್ ಪುರ್ ಹಾಗೂ ಗ್ವಾಲಿಯರ್ಗಳಲ್ಲಿ ವಿಶಾಲವಾದ ಕೋಟೆಗಳನ್ನು ನಿರ್ಮಿಸಿದರು.

* ಮೌಂಟ್ ಅಬುದಲ್ಲಿ ದಿಲ್ವಾರ್ದೇವಾಲಯ,ವಿಮಲಾ ವಸಾಯಿ,ಲೂನಾ ತಸಾಯಿ ದೇವಾಲಯಗಳು ಸುಂದರ ಕಾಲ ಕೃತಿಯಿಂದ ಕೂಡಿವೆ.

* ಚಂದೇಲರು ಮಧ್ಯಪ್ರದೇಶದ ಖುಜರಾಹೋದ ಖಂಡರಾಯ ಮಹಾದೇವಾಲಯವನ್ನು ಕಟ್ಟಿಸಿದರು ಇವರ ಕಾಲದಲ್ಲಿ ನಿರ್ಮಿತವಾದ ದೇವಾಲಯಗಳಲ್ಲಿ ಶಿವ ಮತ್ತು ವಿಷ್ಣುವಿನ ಮಂದಿರಗಳು ಹೆಚ್ಚಾಗಿವೆ.

* ಇವರ ಚಿತ್ರಕಲಾ ಶೈಲಿಯನ್ನು ರಾಜಸ್ಥಾನಿ ಕಲಾಶೈಲಿ ಮತ್ತು ಪಹಾರಿ ಕಲಾಶೈಲಿ ಎಂದು ವರ್ಗೀಕರಿಸಲಾಗಿದೆ. ಮೇವಾರ್,ಬಿಕಾನೇರ್,ಜೋಧ್ ಪುರ, ಜೈಸಲ್ಮೇರ್ ಮತ್ತು ಬುನಿಗಳಲ್ಲಿ ರಾಜಸ್ಥಾನಿ ಶೈಲಿಯ ಚಿತ್ರಕಲೆಗಳನ್ನು ಕಾಣಬಹುದಾಗಿದೆ. ಖಸೋಲಿ,ಜಮ್ಮು, ಗರ್ವಾಲ್ ಗಳಲ್ಲಿ ಪಹಾರಿ ಕಲಾ ಶೈಲಿಯ ಚಿತ್ರಕಲೆಗಳನ್ನು ಕಾಣಬಹುದಾಗಿದೆ.

  -: ರಜಪೂತರ ಸಾಂಪ್ರದಾಯಗಳು :-

* ಸ್ವಯಂವರ :- ಪ್ರಾಚೀನ ಕಾಲದಲ್ಲಿ ಕ್ಷತ್ರಿಯ ಕನ್ಯೆಯರು ಅವ್ವಾನಿಸಿದವರಲ್ಲಿ ಪತಿಯನ್ನು ಆಯ್ಕೆ ಮಾಡಿಕೊಳ್ಳುವುದು.

* ರಕ್ಷಾ ಬಂಧನ:- ರಜಪೂತ ಮಹಿಳೆಯರು ಪುರುಷರ ಮುಂಗೈಗೆ ರಾಖಿ ಕಟ್ಟಿ ಆತನನ್ನು ಸಹೋದರನೆಂದು ತಿಳಿಯುವುದು.

-: ಕಾಶ್ಮೀರದ ಕಾರ್ಕೋಟ ಸಾಮ್ರಾಜ್ಯ ( 625 -855)

* ಈ ಸಾಮ್ರಾಜ್ಯವನ್ನು 625 ರಲ್ಲಿ ರಾಜ ದುರ್ಲಭ ವರ್ಧನ್ ನಿಂದ ಸ್ಥಾಪಿತವಾಯಿತು.

* ದುರ್ಲಭ ವರ್ಧನ ಮಗ ದುರ್ಲಭಕ (ಪ್ರತಾಪಾದಿತ್ಯ), ಈತನಿಗೆ ಮೂರು ಜನ ಮಕ್ಕಳು.

1) ಚಂದ್ರಾಪೀಡ ( ವಜ್ರಾದಿತ್ಯ)

2) ತಾರಾಪೀಡ ( ಉದಯಾದಿತ್ಯ)

3) ಮುಕ್ತಾ ಪೀಡ ಇವರಲ್ಲಿ ಮುಕ್ತ ಪೀಡ ಪ್ರಮುಖ ದೊರೆ

  -: ಮುಕ್ತಾ ಪೀಡ ( ಲಲಿತಾದಿತ್ಯ) :-

* ಇವನು ಕನ್ಯಾಕುಬ್ಜ( ಕನೌಜ) ಯಶವರ್ಮನನ್ನು,ಕಾಬುಲ್ ಪ್ರಾಂತ್ಯದ ಶಾಹಿ ವಂಶಸ್ಥರನ್ನು ಸೋಲಿಸಿ ಪರಮಾಕ್ರಮ ಮೆರೆದನು.

* ರಾಷ್ಟ್ರಕೂಟರ ಜೊತೆ ಸ್ನೇಹ ಸಂಬಂಧಗಳನ್ನು ಬೆಳೆಸಿಕೊಂಡನು.

* ತನ್ನ ಸಾಮ್ರಾಜ್ಯವನ್ನು ಟರ್ಕಿಯವರಿಗೆ ವಿಸ್ತರಿಸಿದನು.

* ಲಲಿತಾದಿತ್ಯನ ಆಸ್ಥಾನ ಕವಿಯಾದ ಕಲ್ಹಣನ ಇತಿಹಾಸ ಗ್ರಂಥವಾದ ರಾಜತರಂಗಣಿಯಲ್ಲಿ ಇವನ ಬಗ್ಗೆ ಬಹಳಷ್ಟು ವಿವರಗಳು ಸಿಗುತ್ತವೆ.

* ಅಲ್ಬರೊನಿ ಬರೆದ ” ತಾರಿಖ್ – ಇ-ಹಿಂದ್” ಕೃತಿಯು ಈತನ ಸಾಹಸಗಳ ಬಗ್ಗೆ ಕೊಂಡಾಡುತ್ತದೆ.

 -: ತಲೆಗೆ ಕಾರ್ಕೋಟರ ಕೊಡುಗೆಗಳು :-

* ಶೈವ,ಬೌದ್ಧ ಪಂಥಗಳ ಸನಾತನ ಧರ್ಮದ ಎಲ್ಲಾ ಜನಾಂಗದವರಿಗೂ ಸ್ವಾತಂತ್ರವಿತ್ತು.

* ಮುಕ್ತಪೀಡನು ದೇಶದಲ್ಲಿ ಅತ್ಯಂತ ಭವ್ಯವಾದ ಮಾರ್ತಾಂಡ ಸೂರ್ಯ ದೇವಾಲಯವನ್ನು ನಿರ್ಮಿಸಿದನು. ಇದು ವಿಶಾಲವಾದ ಕೆರೆಯ ಮೇಲೆ ತೇಲುವಂತೆ ನಿರ್ಮಾಣವಾಗಿದೆ.

* ಕೊನಾರ್ಕ್ ಸೂರ್ಯ ದೇವಾಲಯ (Odisha) built by I narasingha Deva.

* ಸೂರ್ಯ ದೇವಾಲಯ

* ಮುಕ್ತಪೀಡನ ರಾಜಧಾನಿ – ಪಾರ್ಸೋ ಸ್ಪೋರ್/ ಪರಿಹಾಸಪುರ

* ಕಾರ್ಕೋಟಕರು – ಸೂರ್ಯೋಪಾಸಕರಾಗಿದ್ದರು.

* ವಸುಗುಪ್ತನ ಶೈವ ಸೂತ್ರ ಈ ಅವಧಿಯಲ್ಲಿ ರಚನೆಯಾಗಿತ್ತು .

* ಖ್ಯಾತ ತತ್ವಶಾಸ್ತ್ರಜ್ಞ ಕವಿ ಅಭಿನವ ಗುಪ್ತ ಕಾರ್ಕೋಟಕ ಕಾಲದವನಾಗಿದ್ದ.

* ಲಲಿತಾದಿತ್ಯನ ಕಾಲವನ್ನು ಕಾರ್ಕೋಟಕ ವಂಶದ ಚಿನ್ನದ ಯುಗ ಎನ್ನುವರು ಏಕೆಂದರೆ ಈತನ ಕಲೆ ಸಂಸ್ಕೃತಿ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದ.

* ಕಲ್ಹಣನು ಲಲಿತಾದಿತ್ಯನ ಆಸ್ಥಾನದ ಕವಿಯಾಗಿದ್ದನು.

WhatsApp Group Join Now
Telegram Group Join Now

Leave a Comment