6 ರಿಂದ 14 ನೇ ಶತಮಾನದ ಭಾರತ (ಭಾಗ – 02)

 -: ಮಹಮ್ಮದ್ ಘಜ್ನಿ ( 997 – 1030)

* ಘಜ್ನಿಯ ಮತ್ತೊಂದು ಹೆಸರು – ಅಲಪ್ತಗಿನ, ಇವನು ಘಜ್ನಿಯಲ್ಲಿ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿದ.

* ಭಾರತದ ಮೇಲೆ 17 ಬಾರಿ ದಾಳಿ ಮಾಡಿ ಅಪಾರ ಸಂಪತ್ತನ್ನು ಕೊಳ್ಳೆ ಹೊಡೆದ.

* ದಾಳಿಯ ಸಂದರ್ಭದಲ್ಲಿ ಮುಲ್ತಾನದ ದೊರೆ,ರಾಜ ಜಯಪಾಲ, ಭೀಮ ಪಾಲ, ಚಂದೆಲರ ರಾಜ ತ್ರೀಲೋಚನಾ ಪಾಲನನ್ನು ಸೋಲಿಸಿದನು.

* ನಾಗರಕೋಟೆ, ಥಾನೇಶ್ವರ,ಗ್ವಾಲಿಯರ್, ಉಜ್ಜಯಿನಿ ಮೊದಲಾದ ನಗರಗಳ ಮೇಲೆ ದಾಳಿ ಮಾಡಿದ.

* ಗುಜರಾತಿನ ಪ್ರಸಿದ್ಧ ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿದ ಅಲ್ಲಿನ ಶಿವಲಿಂಗವನ್ನು ನಾಶಗೊಳಿಸಿ ಅಪಾರ ಸಂಪತ್ತನ್ನು ಲೂಟಿ ಮಾಡಿದ.

* ಈತನ ಆಸ್ಥಾನದಲ್ಲಿದ್ದ ಅಲ್ಬೇರೊನಿಯು ಎಂಬ ವಿದ್ವಾಂಸ ತಾರಿಖ್ – ಉಲ್ – ಹಿಂದ್ ಎಂಬ ಗ್ರಂಥ ರಚಿಸಿದ್ದಾನೆ.

* ಸಂಪತ್ತನ್ನು ಕೊಳ್ಳೆ ಹೊಡೆಯುವುದು ಇವನ ಉದ್ದೇಶವಾಗಿತ್ತು.

  -: ಮಹಮ್ಮದ್ ಘೋರಿ ( 1149 – 1206) :-

* ಈತನು ಭಾರತದಲ್ಲಿ ಸಾಮ್ರಾಜ್ಯವನ್ನು ಸ್ಥಾಪಿಸುವ ಆಕಾಂಕ್ಷೆಯಿಂದ ಭಾರತದ ಮುಲ್ತಾನಿಗೆ ಮುತ್ತಿಗೆ ಹಾಕುವ ಮೂಲಕ ದಂಡಯಾತ್ರೆಯನ್ನು ಆರಂಭಿಸಿದನು.

* ಮುಲ್ತಾನ ವಶಪಡಿಸಿಕೊಂಡ ನಂತರ ಗುಜರಾತಿನ ಅನಿಲವಾಡದ ಮೇಲೆ ಆಕ್ರಮಣಮ್ಮ ನಡೆಸಿ ವಿಫಲನಾದನು ನಂತರ ಪಂಜಾಬ್ ಪ್ರಾಂತ್ಯವನ್ನು ಹೊಸಪಡಿಸಿಕೊಂಡನು.

* ಪೇಶಾವರ ಈತನ ಸೈನಿಕ ಕೇಂದ್ರವಾಗಿತ್ತು.

* ಅಜ್ಮೀರದ ಅಕ್ರಮಣಕ್ಕೆ ಪ್ರಯತ್ನಿಸಿ ರಜಪೂತ ದೊರೆ 1191ರಲ್ಲಿ ಮೂರನೇ ಪೃಥ್ವಿರಾಜ್ ಚೌಹಾಣನೊಂದಿಗೆ ಮೊದಲನೆ ತುರೈನ್ ಕದನದಲ್ಲಿ ಸೋತನು.ಮತ್ತು ಅಂತರ ನಡೆದ 1192 ರಲ್ಲಿ 2ನೇ ತರೈನ್ ಕದನದಲ್ಲಿ ಪೃಥ್ವಿರಾಜ್ ಚೌಹಾಣನನ್ನು ಸೋಲಿಸಿ ಕೊಂದನು.

* ಘೋರಿಯಾ ದಂಡ ನಾಯಕನಾದ ಕುತ್ಬುದ್ದಿನ್ ಐಬಕ್ ದೆಹಲಿ ವಶಪಡಿಸಿಕೊಂಡನು ಮತ್ತು ಗಂಗಾ ಬಯಲು ಪ್ರದೇಶದ ಇನ್ನಿತರ ರಜಪೂತರನ್ನು ಸೋಲಿಸಿ, ಘೋರಿ ಸಾಮ್ರಾಜ್ಯ ವಿಸ್ತರಿಸಿದ.

* ಉತ್ತರ ಭಾರತದಲ್ಲಿ ಟರ್ಕರ ಆಡಳಿತವು ಆರಂಭವಾಯಿತು.

* ಭಾರತದ ಆಡಳಿತ ನೋಡಿಕೊಳ್ಳಲು ತನ್ನ ಗುಲಾಮ ಕುತ್ಬುದ್ದೀನ್ ಐಬಕ್ನನ್ನು ನೇಮಿಸಿದ.

  -: ದೆಹಲಿ ಸುಲ್ತಾನರು (1206-1526) :-

* ದೆಹಲಿಯನ್ನಾಳಿದ ಸಂತತಿಗಳು

-> ಗುಲಾಮಿ ಸಂತತಿ

-> ಖಿಲ್ಜಿ

-> ತುಘಲಕ್

-> ಸೈಯದ್

-> ಲೋದಿ

  -: ಗುಲಾಮಿ ಸಂತತಿ / ಮ್ಯಾಮಲಕ್ ಸಂತತಿ :-

* ಸ್ಥಾಪಕ – ಕುತ್ಬುದ್ದೀನ್ ಐಬಕ್

* ಇವನು ಮುಸ್ಲಿಂ ಆಡಳಿತವನ್ನು ಭಾರತದಲ್ಲಿ ಮುಂದುವರೆಸಿದನು.

  -: ಕುತುಬುದ್ದೀನ್ ಐಬಕ್ :-

* ಈತನು ಭಾರತದಲ್ಲಿ ದೆಹಲಿ ಸುಲ್ತಾನರ ಆಳ್ವಿಕೆಗೆ ಭದ್ರಬುನಾದಿ ಹಾಕಿದನು.

* ಇವನು ಅಫ್ಘಾನಿಸ್ತಾನದ ತುರ್ಕಿ ಜನಾಂಗಕ್ಕೆ ಸೇರಿದವನು.ಇವನ ಪಾಲಕರು ಖಾಜಿಗೆ ಗುಲಾಮರನ್ನಾಗಿ ಮಾರಿದರು.

* ಘಜ್ನಿ ರಾಜಪಾಲನಾಗಿದ್ದ ಮಹಮದ್ ಘೋರಿ ಇವನನ್ನು ಗುಲಾಮನನ್ನಾಗಿ ಖರೀದಿಸಿದ.

* ಘೋರಿಯಾ ನಂತರ ಸ್ವತಂತ್ರ ರಾಜನಾದನು.ಮತ್ತು ತನ್ನ ಪ್ರಾಬಲ್ಯಗಳಿಸಲು ಇಲ್ತಮಸ್, ನಾಸಿರುದ್ದೀನ್, ಕಬಾಚ್ ರೊಂದಿಗೆ ವೈವಾಹಿಕ ಸಂಬಂಧ ಬೆಳೆಸಿದನು.

* ನಾಸಿರುದ್ದೀನ್, ತಾಜುದ್ದೀನ್ ಸಹ ಘೋರಿ ಗುಲಾಮರಾಗಿದ್ದಾರೆ.

* ಐಬಕ್ ದೆಹಲಿಯಲ್ಲಿ ” ಕುವ್ಹಾತ್ – ಉಲ್- ಇಸ್ಲಾಂ” ಮಸೀದಿಯನ್ನು ಕಟ್ಟಿಸಿದನು.

* ಇವನ ಆಸ್ಥಾನದಲ್ಲಿ ನಿಜಾಮಿ ಮತ್ತು ಪಬ್ – ಇ – ಮದಬ್ಬೀರಯೆಂಬ ವಿದ್ವಾಂಸರಿದ್ದರು.

* ತಾಜುಲ್ ಮಾಸಿರ್ :- ಐಬಕ್ ಬಗ್ಗೆ ಮಾಹಿತಿ ನೀಡುವ ಕೃತಿಯಾಗಿದೆ.

* ಕುತುಬ್ ಮಿನಾರ್:- ದೆಹಲಿಯಲ್ಲಿದೆ.(ಭಾರತದ ಅತ್ಯಂತ ಎತ್ತರದ ಗೋಪುರ). ಐಬಕ್ ನಿರ್ಮಿಸಲು ಆರಂಭಸಿದ. ಇಲ್ತಮಸ್ ಪೂರ್ಣಗೊಳಿಸಿದನು.225 ಅಡಿ ಎತ್ತರವಿದೆ. 5 ಅಂತಸ್ತಿನ ಕಟ್ಟಡಗಳಲ್ಲಿ ಮೆಟ್ಟಿಲುಗಳಿವೆ.

  -: ಇಲ್ತಮಸ್ :-

* ಇಲ್ಬರಿ ಕುಟುಂಬಕ್ಕೆ ಸೇರಿದವನು. ಗ್ವಾಲಿಯರ್ ಆಡಳಿತಗಾರನಾಗಿದ್ದ ಇವನು ಐಬಕನ ಉತ್ತರಾಧಿಕಾರಿಯಾದನು.

* ಇವನನ್ನು ‘ಗುರಾಮರ ಗುರಾಮ’ , ‘ದೆಹಲಿ ಸುಲ್ತಾನರ ನಿಜವಾದ ಸ್ಥಾಪಕ’ ಎಂದು ಕರೆಯುವರು.

* ಇವನು ತಾಜುದ್ದೀನ್ ಎಲ್ದೋಜ ಮತ್ತು ಸಿಂಧ್ನ ನಾಸಿರುದ್ದೀನ್ ಕಬಾಚ್ರ ರನ್ನು ಸೋಲಿಸಿದನು.

* ರಣತಂಬೋರ್, ಮಾಂಡೋರ್, ಗ್ವಾಲಿಯರ್, ಭಿಲ್ಸ್, ಅಜ್ಮೀರ್, ಬನಾರಸ್, ಕನೋಜ್ ಗಳನ್ನ ವಶಿಪಡಿಸಿಕೊಂಡನು.

* ಭಾರತದ ಮೇಲೆ ಪ್ರಥಮ ಬಾರಿಗೆ ಈತನ ಕಾಲದಲ್ಲಿ ಮಂಗೋಲರ ಚಂಗೀಸ್ ಖಾನ್ ನೇತೃತ್ವದಲ್ಲಿ ದಾಳಿ ಮಾಡಿದರು.ಆದರೆ ಇವನ್ನು ಯಶಸ್ವಿಯಾಗಿ ದಾಳಿಯನ್ನು ಹಿಮ್ಮೆಟ್ಟಿಸಿದ.

* ಈ ಸಾಧನೆಯಿಂದ ಬಾಗ್ದಾದ ಖಲೀಫರು ಇಲ್ತಮಶ್ನಿಗೆ ಅಧಿಕೃತ ಅಧಿಕಾರ ಸಮ್ಮತಿಸಿ ಪತ್ರ ನೀಡಿದರು.

* ಈತ ರಾಜ್ಯವನ್ನು ಅನೇಕ ಇಕ್ತಾಗಳನ್ನಾಗಿ ವಿಂಗಡಿಸಿ ಆಡಳಿತ ನಿರ್ವಹಣೆಗಾಗಿ ಇಕ್ತಾದಾರರನ್ನು ನೇಮಿಸಿದನು.

* ಈತ ಬಂಗಾರ ಮತ್ತು ಬೆಳ್ಳಿಯ ನಾಣ್ಯಗಳನ್ನು ಜಾರಿಗೆ ತಂದ.

* ಆಡಳಿತದಲ್ಲಿ ನೆರವಾಗಲು ” 40 ಸರದಾರ ಕೂಟ”/ “ಚಹಲ್ಗಾನಿ ಪದ್ಧತಿ” ನೇಮಿಸಿದನು.

* ದೆಹಲಿಯ ಕುತುಬ್ ಮಿನಾರ್ ಕಾರ್ಯ ಪೂರ್ಣಗೊಳಿಸಿದ.

  -: ರಜಿಯಾ ಸುಲ್ತಾನ್/ರಜಿಯಾಬೇಗಂ :-

* ಇಲ್ತಮಶ್ ನ ಮಗಳು.

* ದೆಹಲಿ ಸಿಂಹಾಸನವನ್ನು ಏರಿದ ಪ್ರಥಮ ಮಹಿಳೆ.

* “ಸುಲ್ತಾನ್” ಎಂಬ ಬಿರುದು ಧರಿಸಿ ಪುರುಷರಂತೆ ವೇಷದರ್ಶಿ ಆಳ್ವಿಕೆ ಮಾಡಿದಳು.

* ಇವಳ ಆಡಳಿತವನ್ನು ಸಹಿಸದ ಪ್ರಾಂತ್ಯಾಧಿಕಾರಿಗಳು ಹತ್ಯೆಗೈದರು.

  -: ಘಿಯಾಸುದ್ದೀನ್ ಬಲ್ಬನ್ :-

* ಈತ ಇಲ್ತಮಶ್ ನ ಗುಲಾಮನಾಗಿದ್ದನು.ತುರ್ಕಿ ಗುಲಾಮರ 40 ಸರ್ದಾರ್/ ಚಹಲ್ಗಾನಿ ಕೂಟದ ಸದಸ್ಯನಾಗಿದ್ದನು.

* ರಜಿಯಾ ಸುಲ್ತಾನಾಳ ಆಸ್ಥಾನದಲ್ಲಿ ” ಅಮೀರ್ – ಇ- ಶಿಕಾರ್” ಹುದ್ದೆಗೆ ನೇಮಕವಾಗಿದ್ದ.

* ಮಂಗೋಲಾರ್ ದಾಳಿಯನ್ನು ತಡೆಗಟ್ಟಿ ರಾಜ್ಯದಲ್ಲಿ ಶಾಂತಿ ಮತ್ತು ಕಾಪಾಡಿದನು.

* ತನ್ನನ್ನು “ದೇವರ ಪ್ರತಿನಿಧಿ”ಎಂದು ಸಾರಿ ನಿರಂಕುಶ ರಾಜ ಪ್ರಭುತ್ವ ಜಾರಿಗೆ ತಂದನು.

* ಬಲ್ಬನನು ಕೈಕುಬಾದನಿಂದ ಹತ್ಯೆಯಾದ.ಅಲ್ಲಿಗೆ ಗುಲಾಮ ಸಂತತಿ ಆಡಳಿತ ಕೊನೆಯಾಯಿತು.

  -: ಖಿಲ್ಜಿ ಸಂತತಿ :-

* ಈ ಸಂತತಿಯ ಸ್ಥಾಪಕ – ಜಲಾಲುದ್ದೀನ್ ಖಿಲ್ಜಿ

* ಅಲ್ಲಾವುದ್ದೀನ್ ಖಿಲ್ಜಿ, ಇವನನ್ನು ಕೊಲೆ ಮಾಡಿ ಅಧಿಕಾರಕ್ಕೆ ಬಂದನು.

  -: ಅಲ್ಲಾವುದ್ದೀನ್ ಖಿಲ್ಜಿ :-

* ಇವನು ಬಾಲ್ಯದಲ್ಲಿ ಜಲಾಲುದ್ದೀನ್ ಖಿಲ್ಜಿಯ ಆಶ್ರಯದಲ್ಲಿ ಬೆಳೆದನು.

* ಮಂಗೋಲರ್ ದಾಳಿಯನ್ನು ಹಿಟ್ಟಿಸಿದಲ್ಲದೆ ಉತ್ತರ ಮತ್ತು ದಕ್ಷಿಣ ಭಾರತದ ಅರಸರನ್ನು ಸೋಲಿಸಿ ಅಪಾರ ಸಂಪತ್ತನ್ನು ಲೂಟಿ ಮಾಡಿದ.

* ಗುಜರಾತಿನ ವಾಘೇಲ ವಂಶದ ರಜಪೂತ ದೊರೆ ಇಮ್ಮಡಿ ಕರ್ಣದೇವ,ರಣತಂಬೋರದ ಹಮ್ಮಿರದೇವ,ಚಿತ್ತೂರದ ರಾಜ ಭೀಮಸಿಂಗನನ್ನು ಸೋಲಿಸಿದನು.

* ಈತನ ದಂಡ ನಾಯಕನಾದ ಮಲ್ಲಿಕಾಫರ್ ದಕ್ಷಿಣ ಭಾರತದ ದಂಡಯಾತ್ರೆ ನಡೆಸಿ ಅಪಾರ ಹಿಂಸಾಚಾರ,ಸಂಪತ್ತು, ಲೂಟಿ, ಕೊಲೆ-, ಸುಲಿಗೆ ನಡೆಸಿದನು.

* ದೇವಗಿರಿ,ವಾರಂಗಲ್, ದ್ವಾರಸಮುದ್ರ ಮತ್ತು ಮಧುರೈಗಳ ಮೇಲೆ ದಾಳಿ ಮಾಡಿ ಅವುಗಳ ಅವನತಿಗೆ ಕಾರಣನಾದನು.. ಆದರೆ ಗೆದ್ದ ಪ್ರದೇಶಗಳನ್ನು ತನ್ನ ರಾಜ್ಯದಲ್ಲಿ ಸೇರಿಸಿಕೊಳ್ಳದೆ ಸಂಪತ್ತನ್ನು ಲೂಟಿ ಮಾಡಿದನು.

* ಇವನ ಮೂರನೇ ಮಗ ಕೂತ್ಬುದ್ದಿನ್ ಮುಬಾರಕ್ ನಾಕು ವರ್ಷ ಅಧಿಕಾರ ನಡೆಸಿ ಖುಸ್ತುಎಂಬ ಸೈನಿಕನಿಂದ ಕೊಲೆಯಾದ.

* ಫಾಜಿ ಮಲ್ಲಿಕ್(ಫೀಯಾಸುದ್ದೀನ್ ತುಘುಲಕ್) ಖಸ್ತುವನ್ನು ಕೊಂದು ತುಘಲಕ್ ಸಂತತಿ ಸ್ಥಾಪಿಸಿದನು.

  -: ಆಡಳಿತಾತ್ಮಕ ಸುಧಾರಣೆಗಳು :-

* ಧಾರ್ಮಿಕ ದತ್ತಿ,ಇನಾಮ್ ಭೂಮಿ ಮತ್ತು ಸಹಾಯಧನಗಳನ್ನು ರದ್ದುಗೊಳಿಸಿದನು.

* ದಕ್ಷಗೂಢಾಚಾರಗಳನ್ನು ರಚಿಸಿದ.ಮದ್ಯಪಾನ,ಮಾದಕ ವಸ್ತುಗಳ ಮಾರಾಟ, ಪಗಡೆ ಆಟಗಳನ್ನು ನಿಷೇಧಿಸಿದ. ಪ್ರಜೆಗಳಿಂದ ಅಧಿಕ ತೆರಿಗೆ ಸಂಗ್ರಹಿಸಲು ಆದೇಶ ನೀಡಿದ.

  -: ಸೈನಿಕ ಸುಧಾರಣೆಗಳು :-

* ಸೈನಿಕರಿಗೆ ನಗದು ರೂಪದಲ್ಲಿ ವೇತನ ನೀಡುವ ಹೊಣೆಯನ್ನು ಸೈನಿಕ ಮಂತ್ರಿಗೆ ನೀಡಲಾಯಿತು.

* ಕುದುರೆಗಳಿಗೆ ಮುದ್ರೆ ಹಾಕುವ ಪದ್ಧತಿ ( ದಾಗ್ ) ಜಾರಿಗೆ ತಂದನು.

* ಸೈನಿಕ ಹಾಗೂ ಕುದುರೆಗಳ ಬಗ್ಗೆ ವಿವರ ನೀಡುವ ದಾಖಲೆ ಇಡಲಾಯಿತು.

  -: ವಾಣಿಜ್ಯ ಸುಧಾರಣೆಗಳು :-

* ಜೀವನಾ ಅವಶ್ಯಕ ವಸ್ತುಗಳ ಮೇಲೆ ಬೆಲೆಯನ್ನು ಅಲ್ಪ ಪ್ರಮಾಣದ ಲಾಭದ ಮೇಲೆ ನಿಗದಿಪಡಿಸಿದನು ಉದಾರಣೆ ಧಾನ್ಯ, ಸಕ್ಕರೆ, ಉಪ್ಪು, ಬಟ್ಟೆ.

* ಮಾರುಕಟ್ಟೆಗಳ ನಿಯಂತ್ರಣಕ್ಕಾಗಿ “ಸಹನಾ- ಇ- ಮಂಡಿ”ಎಂಬ ಉನ್ನತ ಅಧಿಕಾರಿಯನ್ನು ನೇಮಿಸಿದ.

  -: ತುಘುಲಕ್ ಸಂತತಿ :-

* ಈ ಸಂತತಿಯ ಸ್ಥಾಪಕ – ಫೀಯಾಸುದ್ದೀನ ತುಘಲಕ್

* ಕೆಲವು ಉದಾರ ಆಡಳಿತ ನೀತಿಯಿಂದ ದೆಹಲಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿದ.

* ಮಂಗೋಲರ್ ದಾಳಿ ತಡೆಗಟ್ಟಲು ಗಡಿ ಭದ್ರಪಡಿಸಿದ.

* ರೈತರಿಗೆ ನೀರಾವರಿ ಕಾಲುವೆಗಳನ್ನು ನಿರ್ಮಿಸಿ ಭೂಕಂದಾಯ ಕಡಿಮೆ ಮಾಡಿದ.

* ಕುದುರೆ ಮತ್ತು ಕಾಲಾಳುಗಳ ಮೂಲಕ ಅಂಚೆ ಪದ್ದತಿ ಪ್ರಾರಂಭಿಸಿದ.

* ದೆಹಲಿ ಬಳಿ ” ತುಘಲಕಾಬಾದ್” ಕೋಟೆ ಕಟ್ಟಿಸಿದನು.

* ವಾರಂಗಲ್,ಮಧುರೈ ವಶಪಡಿಸಿಕೊಂಡ ಗುಜರಾತ್ ಬಂಗಾಳದಲ್ಲಿ ಸುವ್ಯವಸ್ಥೆ ಕಾಪಾಡಿದನು.

WhatsApp Group Join Now
Telegram Group Join Now

Leave a Comment