7ನೇ ವೇತನ ಆಯೋಗ ವಿಶೇಷ ಚೇತನ ಸರ್ಕಾರಿ ನೌಕರರಿಗೆ ಯಾವೆಲ್ಲಾ ಸೌಲಭ್ಯಗಳನ್ನು ಶಿಫಾರಸ್ಸ ಮಾಡಿದೆ-2024-25.

7ನೇ ವೇತನ ಆಯೋಗ ವಿಶೇಷ ಚೇತನ ಸರ್ಕಾರಿ ನೌಕರರಿಗೆ  ಯಾವೆಲ್ಲಾ ಸೌಲಭ್ಯಗಳನ್ನು ಶಿಫಾರಸ್ಸ ಮಾಡಿದೆ-2024-25.

7ನೇ ವೇತನ ಆಯೋಗ

7ನೇ ವೇತನ ಆಯೋಗ ಕರ್ನಾಟಕ ಸರ್ಕಾರ ರಚಿಸಿದ್ದ ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ 558 ಪುಟಗಳ ಸಂಪುಟ-1ರ ವರದಿಯಲ್ಲಿ ಸರ್ಕಾರಕ್ಕೆ ಹಲವು ಶಿಫಾರಸು ಸಲ್ಲಿಕೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವರದಿಗೆ ಅನುಮೋದನೆ ನೀಡಲಾಗಿದೆ. ವರದಿಯಲ್ಲಿ ವಿಶೇಷ ಚೇತನ ಸರ್ಕಾರಿ ನೌಕರರಿಗೆ ಯಾವ-ಯಾವ ಸೌಲಭ್ಯಗಳನ್ನು ನೀಡಬೇಕು ಎಂದು ಶಿಫಾರಸುಗಳನ್ನು ಮಾಡಲಾಗಿದೆ, ಅವುಗಳ ವಿವರ ಇಲ್ಲಿದೆ.

ಆಯೋಗವು ವಿವಿಧ ಬೇಡಿಕೆಗಳನ್ನು ಹಾಗೂ ಮನವಿಗಳನ್ನು ಪರಿಶೀಲಿಸಿದ್ದು, ಈ ಕೆಳಗಿನಂತೆ ಶಿಫಾರಸ್ಸುಗಳನ್ನು ಮಾಡಿದೆ. ವಾಹನ ಭತ್ಯೆಯನ್ನು ಕೇವಲ ಅಂಥ ಮತ್ತು ಚಲನ ವಲನ ವೈಕಲ್ಯತೆಯುಳ್ಳ ವಿಶೇಷ ಚೇತನ ನೌಕರರಿಗೆ ಮಾತ್ರವೇ ಸೀಮಿತಗೊಳಿಸುವ ಬದಲಾಗಿ ಕೇಂದ್ರ ಸರ್ಕಾರದಲ್ಲಿರುವಂತೆ ಎಲ್ಲಾ ವಿಶೇಷ ಚೇತನ ನೌಕರರಿಗೆ ಈ ಸೌಲಭ್ಯವನ್ನು ವಿಸ್ತರಿಸುವುದು. ವೇತನ ಶ್ರೇಣಿಯ ಪರಿಷ್ಕರಣೆಯೊಂದಿಗೆ ಶೇ.6 ರ ಪ್ರಸ್ತುತ ದರದಲ್ಲಿ ವಾಹನ ಭತ್ಯೆ ಪ್ರಮಾಣವೂ ಹೆಚ್ಚಾಗುವುದರಿಂದ ಆಯೋಗವು ಈ ಕೆಳಗಿನ ಕಾರ್ಯವಿಧಾನದ ಬದಲಾವಣೆಗಳೊಂದಿಗೆ ಈ ದರವನ್ನ ಮುಂದುವರೆಸಲು ಶಿಫಾರಸ್ಸು ಮಾಡುತ್ತದೆ.

Read more...

* ವಿಶೇಷ ಚೇತನರ ಹಕ್ಕುಗಳ ಅಧಿನಿಯಮ 2016 ರ ಅಡಿಯಲ್ಲಿ ಇವರು ನೇಮಕವಾಗಿರುವುದರಿಂದ ವಾಹನ ಭತ್ಯೆಯನ್ನು ಪಡೆಯಲು ಮತ್ತೊಂದು ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸಲು ಒತ್ತಾಯಿಸತಕ್ಕದಲ್ಲ.

* ಇದೇ ಕಾರಣಕ್ಕಾಗಿ ಸಂಬಂಧಪಟ್ಟ ವೇತನ ಬಟವಾಡೆ ಅಧಿಕಾರಿಯನ್ನು (ಡಿಡಿಓ) ವಾಹನ ಭತ್ಯೆ, ಮಂಜೂರು ಮಾಡುವ ಪ್ರಾಧಿಕಾರಿಯನ್ನಾಗಿ ನೇಮಿಸುವುದು.

* ಎಲ್ಲಾ ಸರ್ಕಾರಿ ನೌಕರರ ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ಭತ್ಯೆಯನ್ನು ಪ್ರತಿ ಮಗುವಿಗೆ ಪ್ರತಿ ಮಾಹೆಯಾನ ರೂ. 1000 ದಿಂದ ರೂ.2000 ಗಳಿಗೆ ಜಾರಿಯಲ್ಲಿರುವ ಷರತ್ತು ಮತ್ತು ನಿಬಂಧನೆಗಳಿಗೊಳಪನ್ನು ಹೆಚ್ಚಿಸುವುದು.
* ಕೆಲಸದ ಸ್ಥಳದಲ್ಲಿ ವಿಶೇಷ ಚೇತನರ ದಕ್ಷತೆಯನ್ನು ಮತ್ತು ಅನಕೂಲತೆಯನ್ನು ಹೆಚ್ಚಿಸುವ ದೃಷ್ಟಿಯಿಂದ 6ನೇ ರಾಜ್ಯ ವೇತನ ಆಯೋಗವು ಶಿಫಾರಸ್ಸು ಮಾಡಿದಂತೆ ಲ್ಯಾಪ್‌ಟಾಪ್‌ಗಳು, ತಾಂತ್ರಿಕ ಸಹಾಯಕರುಗಳು, ಎಐ ಆಧಾರಿತ ಸ್ಮಾರ್ಟ್ ಗ್ಲಾಸ್‌ಗಳು ಮತ್ತು ಇತರ ಸಾಧನಗಳನ್ನು ಕೆಲಸದ ಸ್ಥಳಗಳಲ್ಲಿ ಒದಗಿಸುವುದನ್ನು ಆಯೋಗವು ಪುನರುಚ್ಛರಿಸುತ್ತದೆ.

* ವಿಶೇಷ ಚೇತನರು ತಮ್ಮ ಸ್ವಂತ ಬಳಕೆಗಾಗಿ ಇಂತಹ ಸಾಧನಗಳನ್ನು ಪಡೆದುಕೊಳ್ಳುವುದನ್ನು ಪ್ರೋತ್ಸಾಹಿಸಲು ಬಡ್ತಿರಹಿತ ಮುಂಗಡವನ್ನು ರೂ. 50,000 ಗಳವರೆಗೆ ಅಥವಾ ಉಪಕರಣದ ದರ ಇವೆರಡರಲ್ಲಿ ಯಾವುದು ಕಡಿಮೆಯೋ ಅಷ್ಟನ್ನು ಮಂಜೂರು ಮಾಡುವುದು ಮತ್ತು ಇದನ್ನು 10 ಮಾಸಿಕ ಕಂತುಗಳಲ್ಲಿ ಹಿಂಪಡೆಯುವುದು.

* ವಿಶೇಷ ಚೇತನರಿಗಾಗಿ ವಿನ್ಯಾಸಗೊಳಿಸಲಾದ ವಿಶೇಷ ವಾಹನಗಳ ದರಗಳಲ್ಲಿನ ಏರಿಕೆಯನ್ನು ಗಮನಿಸಿ ಪ್ರಸ್ತುತ ಇರುವ ಗರಿಷ್ಠ ರೂ. 40,000 ಗಳ ಮಿತಿ ಮತ್ತು ವಾಹನ ದರದ ಶೇ.30 ರಷ್ಟಿರುವ ಸಹಾಯಧನವನ್ನು ಅನುಕ್ರಮವಾಗಿ ರೂ. 60,000 ಮತ್ತು ಶೇ.40 ರಷ್ಟಕ್ಕೆ ಜಾರಿಯಲ್ಲಿರುವ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಹೆಚ್ಚಿಸಲು ಆಯೋಗವು ಶಿಫಾರಸ್ಸು ಮಾಡುತ್ತದೆ.

ಮುಂದುವರೆದು, ಎಲ್ಲಾ ಕಛೇರಿಗಳಲ್ಲಿ ವಿಶೇಷ ಚೇತನ ನೌಕರರಿಗಾಗಿ ಫ್ಲೆಕ್ಸಿ ಸಮಯ, ವಿಶೇಷ ಚೇತನ ನೌಕರರಿಗಾಗಿ, ಅಧಾ‌ರ್ ಎನೇಬಲ್ಡ್ ಬಯೋಮೆಟ್ರಿಕ್‌ ಹಾಜರಾತಿ (ಎಇಬಿಎ) ಜಾರಿಗೊಳಿಸುವ ಮತ್ತು ವಿಶೇಷ ಚೇತನ ನೌಕರರ ಕುಂದುಕೊರತೆಗಳ ಶೀಘ್ರ ನಿವಾರಣೆಗಾಗಿ ಸಮರ್ಪಕ ಉಪಕ್ರಮಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಸಲ್ಲಿಸಲಾದ ಮನವಿಗಳನ್ನು ರಾಜ್ಯ ಸರ್ಕಾರವು ಅನುಕೂಲಕರವಾಗಿ ಪರಿಗಣಿಸಬೇಕೆಂದು ಆಯೋಗವು ಶಿಫಾರಸು ಮಾಡಿದೆ.

WhatsApp Group Join Now
Telegram Group Join Now

2 thoughts on “7ನೇ ವೇತನ ಆಯೋಗ ವಿಶೇಷ ಚೇತನ ಸರ್ಕಾರಿ ನೌಕರರಿಗೆ ಯಾವೆಲ್ಲಾ ಸೌಲಭ್ಯಗಳನ್ನು ಶಿಫಾರಸ್ಸ ಮಾಡಿದೆ-2024-25.”

  1. Растения для офиса могут не только придавать стиль, но и очищать от токсинов. Полевые растения отлично подходят для декорирования офиса. Выбирая растения, учитывайте их влажность. Создавайте оптимальные условия для здоровья.
    Растения для влажных условий сильные
    Тропические цветы профессиональные.

    Reply

Leave a Comment