7th Pay Commission: ಮುಂದಿನ ವಾರವೇ ತುಟ್ಟಿಭತ್ಯೆ DA ಶೇ.3ರಷ್ಟು ಹೆಚ್ಚಳ ಆದೇಶ?

7th Pay Commission: ಮುಂದಿನ ವಾರವೇ ತುಟ್ಟಿಭತ್ಯೆ DA ಶೇ.3ರಷ್ಟು ಹೆಚ್ಚಳ ಆದೇಶ?

7th Pay Commission

7th Pay Commission: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸುಮಾರು 1.2 ಕೋಟಿ ಕೇಂದ್ರ ಸರ್ಕಾರಿ ನೌಕರರಿಗೆ ಇನ್ನೊಂದು ವಾರದಲ್ಲಿ ಸಿಹಿ ಸುದ್ದಿ ನೀಡಲಿದೆ. ಮುಂದಿನ ವಾರ ಮಾರ್ಚ್ 13ರಂದು ಹೋಳಿಹಬ್ಬವನ್ನು ಆಚರಿಸಲಾಗುತ್ತದೆ. ಈ ವೇಳೆಗೆ ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಸಿಹಿ ಸುದ್ದಿ ಘೋಷಿಸುವ ಸಾಧ್ಯತೆ ಇವೆ. ನೌಕರರು ಬಹುನಿರೀಕ್ಷೆಯಿಂದ ಜನವರಿ 2025ರ ಮೊದಲ DA ಮತ್ತು DR ಹೆಚ್ಚಳ ಆದೇಶಕ್ಕೆ ಕಾಯುತ್ತಿದ್ದಾರೆ.

ಪ್ರತಿ ವರ್ಷವು 2 ಬಾರಿ ತುಟ್ಟಿಭತ್ಯೆ ಹಾಗೂ ತುಟ್ಟಿ ಪರಿಹಾರ ಏರಿಕೆ ಆಗುತ್ತವೆ. ಕೇಂದ್ರ ಸರ್ಕಾರ ಪ್ರತಿ ವರ್ಷ ಜನವರಿ ಹಾಗೂ ಜುಲೈನಲ್ಲಿ ತುಟ್ಟಿ ಭತ್ಯೆಯ ಪರಿಷ್ಕರಣೆ ಮಾಡುತ್ತದೆ. ಇದರಿಂದ ನೌಕರರಿಗೆ ಹಣದುಬ್ಬರ, ಆರ್ಥಿಕ ಹೊರೆ ಎದುರಿಸಲು ಅನುಕೂಲ ಮಾಡಿಕೊಡುತ್ತದೆ. ಜನವರಿಯಲ್ಲಿ ಅಂತಿಮಗೊಳಿಸಿದ DA ಹೆಚ್ಚಳ ಮಾರ್ಚ್‌ನಲ್ಲಿ ಅಂದರೆ ಹೋಳಿ ಹಬ್ಬದ ವೇಳೆಗೆ ಪ್ರಕಟಿಸುತ್ತದೆ. ಅದೇ ರೀತಿ ಜುಲೈ ಹೆಚ್ಚಳವನ್ನು ಸಾಮಾನ್ಯವಾಗಿ ಪ್ರತಿ ಅಕ್ಟೋಬರ್ ಅಂತ್ಯ ಇಲ್ಲವೇ ನವೆಂಬರ್‌ ಮೊದಲ ವಾರ ಪ್ರಕಟಿಸುತ್ತದೆ. ಆಗಾಗಿ ನೌಕರರಿಗ ದೀಪಾವಳಿ ಭರ್ಜರಿ ಗಿಫ್ಟ್ ಸಿಗುತ್ತದೆ.

ಇದೀಗ ಪ್ರಸಕ್ತ ವರ್ಷದ ಜನವರಿ ತಿಂಗಳ ತುಟ್ಟಿಭತ್ಯೆ ಏರಿಕೆಗೆ ನೌಕರರು ಹಾಗೂತುಟ್ಟಿ ಪರಿಹಾರಕ್ಕಾಗಿ ಕೇಂದ್ರ ಪಿಂಚಣಿದಾರರು ಕಾಯುತ್ತಿದ್ದಾರೆ. ಮುಂದಿನ ವಾರ ಹೋಲಿ ಹಬ್ಬದ ಹೊತ್ತಿಗೆ ಶೇಕಡಾ 3ರಷ್ಟು ಪರಿಷ್ಕರಣೆ ಮಾಡಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಲಿದೆ ಎಂದು ತಿಳಿದು ಬಂದಿದೆ.

ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ದೆಹಲಿಯಲ್ಲಿ ಬುಧವಾರ ಮಾರ್ಚ್ 5 ಸಚಿವ ಸಂಪುಟ ಸಭೆ ನಡೆಯಿತು. ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (DA) ಹೆಚ್ಚಳದ ಬಗ್ಗೆ ಈ ವೇಳೆ ಚರ್ಚೆ ನಡೆದಿಲ್ಲ ಎನ್ನಲಾಗುತ್ತಿದೆ. ಇದು ಪ್ರತಿ ವರ್ಷದ ಪ್ರಕ್ರಿಯೆ ಆದ್ದರಿಂದ ಎಂದಿನಂತೆ ಸಕಾಲಕ್ಕೆ ಆದೇಶಿಸಬಹುದು ಅಂತಲೂ ಹೇಳಲಾಗುತ್ತದೆ.

ಈ ಹಿಂದಿನ ತುಟ್ಟಿಭತ್ಯೆ ಪರಿಷ್ಕರಣೆ ನೋಡುವುದಾದರೆ, 7ನೇ ವೇತನ ಆಯೋಗ(7th Pay Commission)ದಡಿಯಲ್ಲಿ ಕಳೆದ ವರ್ಷ 2024 ರ ಜುಲೈ ನಲ್ಲಿ ತುಟ್ಟಿಭತ್ಯೆ ಏರಿಕೆ ಆಗಿತ್ತು. ಆಗ ಶೇಕಡಾ 3ರಷ್ಟು ಎರಿಕೆ ಮಾಡಿದ್ದರಿಂದ ಶೇಕಡಾ 50ರಷ್ಟಿದ್ದ ತುಟ್ಟಿಭತ್ಯ ಪ್ರಮಾಣವು ಶೇಕಡಾ 53 ಕ್ಕೆ ತಲುಪಿತು.

ಅದರ ಹಿಂದಿನದ್ದು ಅಂದರೆ 2024ರ ಮಾರ್ಚ್ 7 ರಂದು ಸಚಿವ ಸಂಪುಟ ತುಟ್ಟಿ ಭತ್ಯೆ ಏರಿಕೆ ಮಾಡಿತ್ತು. ಆಗ ಶೇಕಡಾ 4ರಷ್ಟು ತುಟ್ಟಿಭತ್ಯೆ ಹೆಚ್ಚಿಸಿದ್ದರಿಂದ ಶೇಕಡಾ 46 ರಷ್ಟಿದ್ದ ಡಿಎ ಪ್ರಮಾಣ ಶೇಕಡಾ 50ಕ್ಕೆ ತಲುಪಿತು. ಈ ಬಾರಿ ಶೇಡಕಾ 3ರಷ್ಟು ಹೆಚ್ಚಳ ಮಾಡಿದರೆ, ಹಾಲಿ ತುಟ್ಟಿಭತ್ಯೆ ಪ್ರಮಾಣ 53ರಿಂದ 56ಕ್ಕೆ ತಲುಪಲಿದೆ.

7th Pay Commission: ಹೊಸ ವೇತನ ಆಯೋಗ ಜಾರಿ ಯಾವಾಗ?

ಇನ್ನು 7ನೇ ವೇತನ ಆಯೋಗದ(7th Pay Commission) ಅವಧಿಯು ಮುಂದಿನ 09 ತಿಂಗಳು ಮಾತ್ರವೇ ಇದೆ. ಇದಾದ ಬಳಿಕ 08 ನೇ ವೇತನ ಆಯೋಗ ಜಾರಿ ಮಾಡಬೇಕಿದೆ. ಇದಕ್ಕಾಗಿ ಕೇಂದ್ರ ಸಿದ್ಧತೆ ಮಾಡಿಕೊಂಡಿದೆ. ಈ ಹೊಸ ವೇತನ ಆಯೋಗದ ಮೇಲೂ ನೌಕರರಿಗೆ ಅಪಾರ ನಿರೀಕ್ಷೆಗಳು ಇವೆ. ಏಕೆಂದರೆ ಈ 8ನೇ ವೇತನ ಆಯೋಗ ಜಾರಿಯಾದರೆ, ಮೂಲ ವೇತನ ಹಾಗೂ ಇತರ ಭತ್ಯೆಗಳು ಗಮನಾರ್ಹವಾಗಿ ಹೆಚ್ಚಾಗಲಿದೆ ಎಂದು ನೌಕರರು ಲೆಕ್ಕಾಚಾರ ಹಾಕಿದ್ದಾರೆ. ಇದರ ಅನುಷ್ಠಾನ ಆದೇಶ ಕುರಿತು ನೌಕರರು ಕಾಯುತ್ತಿದ್ದಾರೆ.

WhatsApp Group Join Now
Telegram Group Join Now