7th Pay Commission: What is the Revision of Family Pension of Retired Govt Employees?

7th Pay Commission: ನಿವೃತ್ತ ಸರ್ಕಾರಿ ನೌಕರರ ಕುಟುಂಬ ನಿವೃತ್ತಿ ವೇತನ ಪರಿಷ್ಕರಣೆ ಎಷ್ಟು?

7th Pay Commission:

7th Pay Commission: ರಾಜ್ಯದ 7ನೇ ವೇತನ ಆಯೋಗ ಸರ್ಕಾರಕ್ಕೆ ಸಲ್ಲಿಸಿದೆ  558 ಪುಟಗಳ ಸಂಪುಟ-1ರ ವರದಿಯಲ್ಲಿ ದಿನಾಂಕ 01.12.1985ರ ಪೂರ್ವದಲ್ಲಿ ನಿವೃತ್ತಿಯಾದ ನೌಕರರ ನಿವೃತ್ತಿ ವೇತನ ಮತ್ತು ದಿನಾಂಕ 01.07.2005ರ ಪೂರ್ವದಲ್ಲಿ ನಿವೃತ್ತಿಯಾದವರ ಕುಟುಂಬ ನಿವೃತ್ತಿ ವೇತನದ ಪರಿಷ್ಕರಣೆ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಗಿದೆ. ಈ ಪಿಂಚಣಿಗಳನ್ನು ಏಕೆ ಪರಿಷ್ಕರಣೆ ಮಾಡಬೇಕು ಎಂದು ಶಿಫಾರಸುಗಳನ್ನು ಮಾಡಿದೆ. ಆ ಕುರಿತು ಸಂಪೂರ್ಣ  ಮಾಹಿತಿ ಇಲ್ಲಿದೆ. ಕರ್ನಾಟಕ ಸರ್ಕಾರವು ಆಗಸ್ಟ್ 2024 ರಿಂದಲೇ ಜಾರಿಗೆ ಬರುವಂತೆ 7ನೇ ರಾಜ್ಯ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ.

7ನೇ ವೇತನ ಆಯೋಗದ( 7th Pay Commission:) ನಿರಂತರವಾಗಿ ಮರು ಪ್ರಸ್ತಾಪಿಸಿರುವ ವಿಷಯವೆಂದರೆ ಬಹಳ ವರ್ಷಗಳ ಹಿಂದೆ ನಿವೃತ್ತಿಯಾದ ನೌಕರರ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನದ ಪರಿಷ್ಕರಣೆ. ದಿನಾಂಕ 01.07.2005ರ ಮೊದಲಿಗೆ ನಿವೃತ್ತಿ ಹೊಂದಿರುವ ಕುಟುಂಬ ನಿವೃತ್ತಿ ವೇತನವನ್ನು ಪರಿಷ್ಕರಿಸಲು ಕೋರಿ ಕೃಷಿ ಇಲಾಖೆಯ ಕಾರ್ಯದರ್ಶಿಯವರಿಂದಲೂ ಸಹ 7th Pay Commission: ಆಯೋಗವು ಕೋರಿಕೆಯನ್ನು ಸ್ವೀಕರಿಸಿರುತ್ತದೆ. ಈ ಕುರಿತು ಹಲವಾರು ಮನವಿಗಳನ್ನು ಸ್ವೀಕರಿಸಿರುವುದರಿಂದ, ಆಯೋಗವು ಈ ವಿಷಯವನ್ನು ಇನ್ನೂ ವಿಸ್ತೃತವಾಗಿ ಚರ್ಚಿಸುವ ಅಗತ್ಯತೆಯನ್ನು ಹೊಂದಿದೆ.

 7th Pay Commission:ಈ ವಿಷಯದ ಹಿನ್ನೆಲೆಯಲ್ಲಿ ಈ ಮುಂದಿನಂತಿದೆ. ದಿನಾಂಕ 01.12.1985ರ ಪೂರ್ವದಲ್ಲಿ ನಿವೃತ್ತಿಯನ್ನು ಹೊಂದಿದ ನೌಕರರು, ಅದರ ನಂತರದ ವರ್ಷಗಳಲ್ಲಿ ನಿವೃತ್ತಿಯಾದ ನೌಕರರಿಗೆ ಹೋಲಿಸಿಕೆ ಮಾಡಿಕೊಂಡಾಗ, ಕಡಿಮೆ ನಿವೃತ್ತಿ ವೇತನವನ್ನು ಪಡೆಯುತ್ತಿದ್ದು, ಇದಕ್ಕೆ ಪ್ರಮುಖ ಕಾರಣವೆಂದರೆ ಅವರು ನಿವೃತ್ತಿಯ ಸಂದರ್ಭದಲ್ಲಿ ಪಡೆದ ಅಂತಿಮ ವೇತನ ಕಡಿಮೆಯಾಗಿದ್ದು ಎಂಬುದನ್ನು ನಾವು ಇಲ್ಲಿ ಗಮನಿಸಿದ 5ನೇ ರಾಜ್ಯ ವೇತನ ಆಯೋಗವು, ಗರಿಷ್ಠ ಅರ್ಹತಾದಾಯಕ ಸೇವೆಯನ್ನು ಸಲ್ಲಿಸಿ ನಿವೃತ್ತಿಯಾದ ನೌಕರರಿಗೆ ಅವರು ನಿವೃತ್ತಿ ಹೊಂದುವ ಸಂದರ್ಭದಲ್ಲಿ ಧಾರಣೆ ಮಾಡಿದ್ದ ಹುದ್ದೆಯ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಕನಿಷ್ಠ ಶೇ.50 ರಷ್ಟು ನಿವೃತ್ತಿ ವೇತನವನ್ನು ನಿಗದಿಪಡಿಸಲು ಶಿಫಾರಸ್ಸು ಮಾಡಿತ್ತು.

7th Pay Commission: ಇಂತಹ ಪಿಂಚಣಿದಾರರಿಗೆ ಯಾವುದೇ ಏಕರೂಪದ ಕುಟುಂಬ ನಿವೃತ್ತಿ ವೇತನದ ದರ ನಿಗದಿಯಾಗಿಲ್ಲ ಮತ್ತು ನೌಕರರು ನಿವೃತ್ತಿ ಸಂದರ್ಭದಲ್ಲಿ ಅಂತಿಮವಾಗಿ ಪಡೆದ ವೇತನದ ಆಧಾರದ ಮೇಲೆ ಪಿಂಚಣಿಯ ಶೇ.15 ರಿಂದ ಶೇ.30 ರವರೆಗೆ ಏರಿಕೆ ಮಾಡಿರುವುದು ಗಮನಿಸಿ, 5ನೇ ವೇತನ ಆಯೋಗವು ಜಾರಿಯಲ್ಲಿರುವ ಕನಿಷ್ಠ ಮತ್ತು ಗರಿಷ್ಠ ಮಿತಿಗೊಳಪಟ್ಟು ಕೊನೆಯ ವೇತನದ ಶೇ 30 ರಷ್ಟು ಏಕರೀತಿಯಾದ ಕುಟುಂಬ ನಿವೃತ್ತಿ ವೇತನವನ್ನು ಸಂದಾಯ ಮಾಡಬೇಕು ಎಂದು ಶಿಫಾರಸ್ಸು ಮಾಡಿರುತ್ತದೆ.

7th Pay Commission:  ಈ ಶಿಫಾರಸ್ಸುಗಳಿಗೆ ವಿಭಿನ್ನವಾಗಿ, ಅಂತಹ ನಿವೃತ್ತಿಯಾದ ನೌಕರರ ಮತ್ತು ಕುಟುಂಬಗಳಿಗೆ ಅವರ ವಯಸ್ಸಿನ ಆಧಾರದ ಮೇಲೆ ಅವರ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಹೆಚ್ಚಿಸುವ ಪರಿಹಾರವನ್ನು ನೀಡುವಂತೆ ಸರ್ಕಾರವು ನಿರ್ಧರಿಸಿರುತ್ತದೆ. ಅದರಂತೆ, ದಿನಾಂಕ 01.04.2006 ರಂದು 80 ಮತ್ತು 85 ವರ್ಷಗಳ ನಡುವಿನ ವಯಸ್ಸಿನ ನಿವೃತ್ತ ನೌಕರರಿಗೆ ಶೇ.20 ರಷ್ಟು ಹೆಚ್ಚುವರಿ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು, 85 ರಿಂದ 90 ವರ್ಷದವರಿಗೆ ಶೇ. 30 ಮತ್ತು 90 ವರ್ಷಗಳ ಮೇಲ್ಪಟ್ಟ ನೌಕರರಿಗೆ ಶೇ. 50 ರಷ್ಟು ಹೆಚ್ಚುವರಿ ನಿವೃತ್ತಿ ವೇತನವನ್ನು ನೀಡಲಾಗಿದೆ. ಇದನ್ನು ಕೇವಲ ದಿನಾಂಕ 01.07.1993ಕ್ಕೆ ಮೊದಲು ನಿವೃತ್ತಿಯಾದ ನೌಕರರಿಗೆ ಮಾತ್ರ ಅನ್ವಯಿಸಲಾಗಿದ್ದು.

ಸರ್ಕಾರ ಏಕೆ ಅಂಗೀಕರಿಸಿಲ್ಲ?:

7th Pay Commission: ಈ ವಿಷಯವನ್ನು 6ನೇ ರಾಜ್ಯ ವೇತನ ಆಯೋಗ ಸಹ ಪರಿಶೀಲಿಸಿದ್ದು, ದಿನಾಂಕ 01.12.1985ರ ಮೊದಲೇ ನಿವೃತ್ತಿಯಾದ ನೌಕರರಿಗೆ ಪಾವತಿಸಬಹುದಾದ ನಿವೃತ್ತಿ ವೇತನವನ್ನು ಮತ್ತು ದಿನಾಂಕ 01.07.2005ಕ್ಕೆ ಮೊದಲು ನಿವೃತ್ತಿಯಾದ ನೌಕರರ ಕುಟುಂಬ ನಿವೃತ್ತಿ ವೇತನವನ್ನು ಗಣನೀಯವಾಗಿ ಕಡಿಮೆ ಇರುವುದನ್ನು ಗಮನಿಸಿದ, 5ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಪುನರುಚ್ಚರಿಸಿ, ಆತ ಅಥವಾ ಆಕೆಯು ನಿವೃತ್ತಿ ಸಂದರ್ಭದಲ್ಲಿ ಧಾರಣೆ ಮಾಡಿದ್ದ ಹುದ್ದೆಗೆ ಅನ್ವಯವಾಗುವಂತೆ ಕನಿಷ್ಠ ಪರಿಷ್ಕೃತ ವೇತನ ಶ್ರೇಣಿಯನ್ನು ಶೇ. 50ರಷ್ಟಕ್ಕೆ ನಿವೃತ್ತಿ ವೇತನವನ್ನು ಪರಿಷ್ಕರಣೆ ಮಾಡಬೇಕು ಮತ್ತು ಕುಟುಂಬ ನಿವೃತ್ತಿ ವೇತನವನ್ನು ಶೇ. 30ರಷ್ಟಕ್ಕೆ ನಿಗದಿಗೊಳಿಸಬೇಕು ಎಂದು ಶಿಫಾರಸ್ಸು ಮಾಡಿದೆ.

ದಿನಾಂಕ 01.07.2005 ಕ್ಕೂ ಮೊದಲೇ ನಿವೃತ್ತಿಯಾದ ನೌಕರರ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಸೌಲಭ್ಯಗಳನ್ನು ಮೂರು ಸಂದರ್ಭಗಳಲ್ಲಿ ಅಂದರೆ ದಿನಾಂಕ 01.07.2005, 01.04.2012 ಮತ್ತು 01.07.2017 ರಂದು ಪರಿಷ್ಕರಣೆ ಮಾಡಲಾಗಿರುತ್ತದೆ ಎಂದು ಹಾಗೂ 6ನೇ ರಾಜ್ಯ ವೇತನ ಆಯೋಗದ ಶಿಫಾರಸು ಪರಿಗಣಿಸಿದಲ್ಲಿ ಹಲವಾರು ಆಡಳಿತಾತ್ಮಕ ಸಮಸ್ಯೆಗಳು ಎದುರಾಗಬಹುದು ಎಂಬ ಈ ಆಧಾರದ ಮೇಲೆ ರಾಜ್ಯ ಸರ್ಕಾರವು ಈ ಶಿಫಾರಸ್ಸನ್ನು ಅಂಗೀಕರಿಸಿರುವುದಿಲ್ಲ.

7th Pay Commission: ಇಂತಹ ಪಿಂಚಣಿದಾರರು ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ವಾಸ್ತವವಾಗಿ ಮೂರು ಬಾರಿ ಪರಿಷ್ಕರಿಸಲಾಗಿದ್ದರೂ ನೌಕರನು ನಿವೃತ್ತಿಯ ಸಂದರ್ಭದಲ್ಲಿ ಅಂತಿಮವಾಗಿ ಪಡೆದ ವೇತನದ ಆಧಾರದ ಮೇಲೆ ಪರಿಷ್ಕರಣೆಗಳನ್ನು ಮಾಡಲಾಗಿರುತ್ತದೆ. ಮತ್ತೊಂದು ರೀತಿಯಲ್ಲಿ ನೋಡಿದರೆ, ಬಹಳ ವರ್ಷಗಳ ಹಿಂದೆ, ಅಂದರೆ 1985ರ ಪೂರ್ವದಲ್ಲಿ ನಿವೃತ್ತಿಯಾದ ಪಿಂಚಣಿದಾರರು, 5ನೇ ಮತ್ತು 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಿದ್ದಲ್ಲಿ ಅವರು ಪಡೆಯಬಹುದಾಗಿದ್ದ ನಿವೃತ್ತ ವೇತನಕ್ಕಿಂತಲೂ ಗಣನೀಯವಾಗಿ ಕಡಿಮೆ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವುದು ಮುಂದುವರೆದಿದೆ.

7th Pay Commission:  ಈ ಹಿನ್ನಲೆಯಲ್ಲಿ, ಕೇಂದ್ರ ಸರ್ಕಾರಿ ಪಿಂಚಣಿದಾರರಿಗೆ ನೀಡುತ್ತಿರುವ ದರದಲ್ಲಿಯೇ ರಾಜ್ಯ ಸರ್ಕಾರವು 80 ವರ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ನಿವೃತ್ತಿ ವೇತನದಾರರಿಗೆ ಮತ್ತು ಕುಟುಂಬ ಪಿಂಚಣಿದಾರರಿಗೆ ಹೆಚ್ಚುವರಿ ನಿವೃತ್ತಿ ವೇತನವನ್ನು ನೀಡಲಾಗುತ್ತಿದೆ ಎಂಬುದನ್ನು ನಾವು ಇಲ್ಲಿ ಗಮನಿಸಬಹುದಾಗಿದೆ. ಈ ಹಿಂದೆ ಉಲ್ಲೇಖಿಸಿದಂತೆ ಇದು ಹೆಚ್ಚು ಕಡಿಮೆ ದಿನಾಂಕ 01.07.1993ರ ಮೊದಲೇ ನಿವೃತ್ತಿಯಾದ ನೌಕರರಿಗೆ ನೀಡಲಾಗುತ್ತಿರುವ ಹೆಚ್ಚುವರಿ ವೇತನದ ಮಾದರಿಯಲ್ಲಿದೆ. ಇದರ ಪರಿಣಾಮವಾಗಿ, 80 ವರ್ಷ ಮೇಲ್ಪಟ್ಟಿರುವ ಎಲ್ಲಾ ಪಿಂಚಣಿದಾರರಿಗೆ ವಿಸ್ತರಿಸಲಾಗಿರುವ ಹಿನ್ನೆಲೆಯಲ್ಲಿ ಮೇಲೆ ಉಲ್ಲೇಖಿಸಿದಂತೆ ಇಂತಹ ನಿವೃತ್ತ ವೇತನದಾರರಿಗೆ ಮತ್ತು ಕುಟುಂಬ ವೇಶನದಾರರಿಗೆ ನೀಡಲಾದ ಪರಿಹಾರವು ಯಾವುದೇ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿರುವುದಿಲ್ಲ.

5ನೇ ಮತ್ತು 6ನೇ ರಾಜ್ಯ ವೇತನ ಆಯೋಗಗಳು ಈ ಪರಿಸ್ಥಿತಿಯ ಕುರಿತು ಪ್ರಸ್ತಾಪಿಸಿರುವ ವಿಷಯವು ಇನ್ನೂ ಹಾಗೆಯೇ ಉಳಿದಿರುವುದರಿಂದ ದಿನಾಂಕ 01.12.1985ರ ಮೊದಲೇ ನಿವೃತ್ತಿ ಹೊಂದಿರುವ ಯಾವುದೇ ನೌಕರನು ಆತ ಅಥವಾ ಆಕೆಯು ನಿವೃತ್ತಿಯ ಸಂದರ್ಭದಲ್ಲಿ ಧಾರಣೆ ಮಾಡಿದ್ದ ಹುದ್ದೆಯ ಪ್ರಸ್ತುತ ವೇತನದ ಕನಿಷ್ಟ ಮೊತ್ತದ ಶೇ.50 ರಷ್ಟನ್ನ ಆತ ಅಥವಾ ಆಕೆಗೆ ಸಲ್ಲಬೇಕಾದ ನಿವೃತ್ತಿ ವೇತನವೆಂದು ಪರಿಗಣಿಸಿ ಮತ್ತು ದಿನಾಂಕ 1/7/2005ರ ಪೂರ್ವದಲ್ಲಿ ನಿವೃತ್ತಿಯಾದ ನೌಕರರಿಗೆ ಆತ ಅಥವ ಆಕೆಯ ನಿವೃತ್ತಿಯ ಸಂದರ್ಭದಲ್ಲಿ ಧಾರಣೆ ಮಾಡಿದ್ದ ಹುದ್ದೆಯ ಪ್ರಸ್ತುತ ವೇತನದ ಕನಿಷ್ಠ ಮೊತ್ತದ ಶೇ 30ರಷ್ಟು ಕುಟುಂಬ ನಿವೃತ್ತಿ ವೇತನವನ್ನು ನಿಗದಿಪಡಿಸಬೇಕೆಂದು ಈ ಆಯೋಗವು ಪುನರುಚ್ಚರಿಸುತ್ತದೆ. ಈ ಶಿಫಾರಸ್ಸನ್ನು ಭವಿಷ್ಯಾವರ್ತಿಯಾಗಿ ಮಾತ್ರ ಜಾರಿಗೆ ಬರುವಂತೆ ಅನ್ವಯಿಸತಕ್ಕದ್ದು. ಇಂತಹ ನಿವೃತ್ತಿ ವೇತನದಾರ ಮತ್ತು ಕುಟುಂಬ ನಿವೃತ್ತಿವೇತನದಾರರ ಸಂಖ್ಯೆಯು ಅತಿ ಕಡಿಮೆ ಇದ್ದು,ಮತ್ತು ಅವರ ಪಿಂಚಣಿಯ ಪರಿಷ್ಕರಣೆಯಿಂದ ಒಟ್ಟಾರೆ ವೇತನ ವೆಚ್ಚದ ಮೇಲೆ ಹಾಗುವ ಪರಿಣಾಮವು ಸೀಮಿತವಾದದ್ದು ಎಂದು ಈ ಆಯೋಗ ತಿಳಿಸಿದೆ.

ಧನ್ಯವಾದಗಳು…….
WhatsApp Group Join Now
Telegram Group Join Now