ದಕ್ಷಿಣ ಭಾರತದ ಪ್ರಮುಖ ರಾಜಮನೆತನಗಳು ( All Competative exam notes)

   -: ಶಾತವಾಹನರು:-

* ಮೌರ್ಯರ ನಂತರ ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದವರು – ಶಾತವಾಹನರು .

* ಕರ್ನಾಟಕವನ್ನಾಳಿದ ಮೊದಲ ರಾಜಮನೆತನ – ಶಾತವಾಹನರು .

* ಶಾತವಾಹನರು ‘ಕನ್ನಡದ ಮೂಲದವರೆಂದು’ ಈ ಮನೆತನದ ರಾಜರ ಹೆಸರುಗಳು ಕನ್ನಡದಲ್ಲಿವೆ ಎಂದು ಹೇಳಲಾಗುತ್ತದೆ.( ಉದಾ: ಹಾಲ, ನಾಗನಿಕ, ಪುಲಮಾವಿ)

* ಶಾತವಾಹನರ ರಾಜಧಾನಿ – ಪೈಠಾನ್ / ಪ್ರತಿಷ್ಠಾನ

* ಶಾತವಾಹನರ ಪ್ರಸಿದ್ಧ ದೊರೆ – ಗೌತಮಿಪುತ್ರ ಶಾತಕರಣಿ

* ಇವನು ಅವನತಿಯ ಅಂಚಿನಲ್ಲಿದ್ದ ಶಾತವಾಹನರ ಮನೆತನವನ್ನು ಮತ್ತೆ ಪ್ರವರ್ಧಮಾನಕ್ಕೆ ತಂದನು.

* ಶಾತವಾಹನರ ಯಾವ ರಾಜನು ಶಕರ ನಹಪಾಣನ ನಾಣ್ಯಗಳ ಮೇಲೆತನ್ನ ಹೆಸರನ್ನು ಮರು ಮುದ್ರಿಸಿದನು?

-> ಗೌತಮಿಪುತ್ರ ಶಾತಕಣಿ೯

* ಗೌತಮಿಪುತ್ರ ಶಾತಕರ್ಣಿಯು ಶಕ, ಯವನ, ಪಹ್ಲವ ಎಂಬ ವಿದೇಶಿ ರಾಜಮನೆತನಗಳನ್ನು ಸೋಲಿಸಿದನು.

* ಗೌತಮಿಪುತ್ರ ಶಾತಕರ್ಣಿಯ ಬಿರುದು -ತ್ರೈಸಮುದ್ರ ತೋಯ ಪಿತವಾಹನರ ( ಮೂರು ಸಮುದ್ರಗಳ ನೀರು ಕುಡಿದ ಕುದುರೆಗಳನ್ನು ವಾಹನವಾಗಿ ಉಳ್ಳವನು.

* ಶಿವಮೋಗ್ಗ ಜಿಲ್ಲೆಯ ತಾಳಗುಂದದ ಪ್ರಣವೇಶ್ವರನು ಶಾತವಾಹನರಿಂದ ಪೂಜಿಸಲ್ಪಟ್ಟವನೆಂದು ಶಾಸನದಿಂದ ತಿಳಿದು ಬಂದಿದೆ.

* ಶಾತವಾಹನರ ಆಡಳಿತ ಭಾಷೆ – ಪ್ರಾಕೃತ

* ಶಾತವಾಹನರ ಶಾಸನಗಳಿರುವ ಲಿಪಿ – ಪ್ರಾಕೃತ ಭಾಷೆ ಮತ್ತು ಬ್ರಾಹ್ಮಿ ಲಿಪಿ

* ಶಾತವಾಹನರ ಹಾಲ ಬರೆದ ಕೃತಿ – ಗಾಥಾ ಸಪ್ತಸತಿ – ಪ್ರಾಕೃತ ಭಾಷೆ

* ಗುಣಾಡ್ಯ – ವಡ್ಡಕಥಾ

* ಸರ್ವ ವರ್ಮ – ಕಾತಂತ್ರ ವ್ಯಾಕರಣ

* ಶಾತವಾಹನರು ನಿರ್ಮಿಸಿರುವ ದೊಡ್ಡ ಚೈತ್ಯ ವಿರುವುದು ಎಲ್ಲಿ?

-> ಕಾರ್ಲೆ

* ಶಾತವಾನರ ಪ್ರಮುಖ ನಿಗಮಗಳು – ಪೈಠಾಣ,ಕಾರ್ಲೆ,ಕನೇಹರಿ, ಜುನ್ನಾರ, ನಾಸಿಕ

* ಆಂಧ್ರದ ಧನ್ಯ ಕಟಕ ( ಧರಣಿಕೋಟೆ)

* ಉತ್ತರ ಕನ್ನಡ ಜಿಲ್ಲೆಯ -ವೈ ಜಯಂತಿ

* ಶಾತವಾನರ ಕಾಲದ ಶ್ರೇಣಿಗಳೆಂದರೆ – ಸಂಘಗಳು

* ಶಾತವಾನರ ಕಾಲದ ಧಾನ್ಯ ವ್ಯಾಪಾರಿಗಳ ಸಂಘವನ್ನು ಏನೆಂದು ಕರೆಯುತ್ತಿದ್ದರು?

-> ಧಾನಿಕ ಶ್ರೇಣಿ

* ಶಾತವಾನರ ಕಾಲದಲ್ಲಿ ಶ್ರೇಣಿಗೆ ಒಬ್ಬ ಹಿರಿಯನಿದ್ದು ಅವನನ್ನು ಏನೆಂದು ಕರೆಯುತ್ತಿದ್ದೆ?

-> ಶ್ರೇಷ್ಠ / ಸೆಟ್ಟಿ

     -: ಕದಂಬರು :-

* ಕರ್ನಾಟಕವನ್ನಾಳಿದ ಮೊಟ್ಟ ಮೊದಲ ಕನ್ನಡ ಮನೆತನ – ಕದಂಬರು

* ಅಚ್ಚ ಕನ್ನಡದ ಮೊಟ್ಟ ಮೊದಲ ದೊರೆ – ಮಯೂರವರ್ಮ

* ಕದಂಬರ ರಾಜಧಾನಿ – ಬನವಾಸಿ

* ಕದಂಬರ ಲಾಂಛನ – ಸಿಂಹ

* ಚಿತ್ರದುರ್ಗ ಸಮೀಪದ ಚಂದ್ರವಳ್ಳಿಯ ಕೆರೆಯನ್ನು ದುರಸ್ತಿ ಮಾಡಿದವರು – ಮಯೂರವರ್ಮ

* ಕದಂಬರ ಯಾವ ಅರಸನು ಉತ್ತರ ಭಾರತದ ಪ್ರಸಿದ್ಧ ಗುಪ್ತ ಮನೆತನದ ಜೊತೆಗೆ ವಿವಾಹ ಸಂಬಂಧವನ್ನು ಹೊಂದಿದ್ದನು?

-> ಕಾಕುಸ್ಥವಮ೯ನು

* ಕದಂಬರು ಶೈವರಾಗಿದ್ದು ತಾಳಗುಂದದ ಪುಣವೇಶ್ವರ ಹಾಗೂ ಬನವಾಸಿಯ ಮಧುಕೇಶ್ವರನನ್ನು ಪೂಜಿಸುತ್ತಿದ್ದರು.

* ತಾಳಗುಂದದ ಪ್ರಣವೇಶ್ವರ ಲಿಂಗವು ಕರ್ನಾಟಕದ ಪ್ರಾಚೀನ ಲಿಂಗಲಾಗಿದೆ.

     -: ಗಂಗರು :- ( 600 ವರ್ಷ ಆಳ್ವಿಕೆ)

* ಕದಂಬರು ವಾಯುವ್ಯ ಕರ್ನಾಟಕದಲ್ಲಿ ಆಳುತ್ತಿರುವಾಗ ದಕ್ಷಿಣ ಕರ್ನಾಟದಲ್ಲಿ ಏಳಿಗೆಗೆ ಬಂದವರು. – ಗಂಗರು

* ಗಂಗರು ಕರ್ನಾಟಕದಲ್ಲಿ ದೀರ್ಘಕಾಲ ಆಳಿದ ರಾಜಮನೆತನವಾಗಿದೆ -600 ವರ್ಷಗಳ ಕಾಲ ಆಳ್ವಿಕೆ

* ಗಂಗರ ರಾಜಧಾನಿ – ಕುವಲಾಲ ( ಕೋಲಾರ) , ತಲಕಾಡು (ತಲವನಪುರ)

* ಗಂಗರ ಪ್ರಸಿದ್ಧ ದೊರೆ – ದುರ್ವಿನಿತ

* ದುರ್ವಿನಿತನ ತಾಯಿಯು ಜೇಷ್ಠಾದೇವಿಯು ಯಾವ ಮನೆತನಕ್ಕೆ ಸೇರಿದವಳು?

-> ಪುನ್ನಾಟ ರಾಜಮನೆತನ ( ಈ ಮನೆತನದಲ್ಲಿ ಗಂಡು ಸಂತಾನವಿಲ್ಲದ ಕಾರಣ ಪುನ್ನಾಟ ರಾಜ್ಯಕ್ಕೂ ದುರ್ವಿನಿತನೆ ವಾರಸುದಾರನಾದನು. ನೆರೆಯ ಶತ್ರುಗಳನ್ನು ಹಲವು ಯುದ್ಧಗಳಲ್ಲಿ ಮಣಿಸಿ ಗಂಗ ರಾಜ್ಯವನ್ನು ವಿಸ್ತರಿಸಿದನು. ನೀರಾವರಿಗಾಗಿ ಸಾಗರದಂತಹ ಅನೇಕ ಕೆರೆಗಳನ್ನು ಕಟ್ಟಿಸಿದನು.)

* ಭಾರತಿಯ ಕೃತಿ – ಕಿರಾತರ್ಜುನಿಯ

* ಗಂಗರ ಯಾವ ಅರಸನು ಸಂಸ್ಕೃತ ಕವಿ ಭಾರವಿಯ ಕಿರಾತರ್ಜುನಿಯ ಕೃತಿಯ 15 ನೇ ಸರ್ಗಕ್ಕೆ ಭಾಷ್ಯೆ ( ವಿಮರ್ಶೆ) ಬರೆದನು?

-> ದುರ್ವಿನಿತ

* ಗುಣಾಡ್ಯನ ವಡ್ಡಕಥಾವನ್ನು ದುರ್ವಿನಿತ ಸಾಂಸ್ಕೃತಕ್ಕೆ ಭಾಷಾಂತರಿಸಿದನು.

* ಕನ್ನಡದ ಪ್ರಮುಖ ಗದ್ಯ ಬರಹಗಾರರಲ್ಲಿ ದುರ್ವಿನಿತನು ಒಬ್ಬನೆಂದು ಯಾರು ಹೇಳಿದ್ದಾರೆ?

-> ಕವಿರಾಜ ಮಾರ್ಗದಲ್ಲಿ ಶ್ರೀವಿಜಯನು ಹೇಳುತ್ತಾನೆ

* ಕನ್ನಡದ ಮೊಟ್ಟ ಮೊದಲ ಉಪಲಬ್ದ ಗ್ರಂಥ – ಕವಿರಾಜಮಾರ್ಗ

* ದುರ್ವಿನಿತನ ನಂತರ ಬಂದ ಶ್ರೀ ಪುರುಷ,ರಾಚಮಲ್ಲ ಮುಂತಾದವರು ಸಹ ಪ್ರಮುಖರು.

* ಶ್ರೀ ಪುರುಷ ಕೂಡ ದುರ್ವಿನಿತನಂತೆ ಅನೇಕ ಕೆರೆಗಳನ್ನು ನಿರ್ಮಾಣ ಮಾಡಿಸಿದನು.

* ಶ್ರೀ ಪುರುಷನು ನಿರ್ಮಿಸಿದ ಪ್ರಸಿದ್ಧ ಕೆರೆ – ಕುಣಿಗಲ್ ದೊಡ್ಡ ಕೆರೆ

* ಶ್ರೀ ಪುರುಷನ ನಂತರ ಬಂದವನು ರಾಚಮಲ್ಲ, ರಾಚಮಲ್ಲನ ಪ್ರಧಾನಮಂತ್ರಿಯಾಗಿ ಚಾವುಂಡರಾಯನು ವಿಶ್ವ ಪ್ರಸಿದ್ಧ ಗೊಮ್ಮಟೇಶ್ವರ ಮೂರ್ತಿಯನ್ನು ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ನಿರ್ಮಾಣ ಮಾಡಿಸಿದನು.

* ಗಂಗರ ರಾಜ್ಯದಲ್ಲಿದ್ದ ಪಂಥಗಳು -ಬೌದ್ಧ, ಕಾಳ ಮುಖ, ಲೋಕಾಯುತ

* ಗಂಗರು ಜೈನ ಮತ್ತು ವೈದಿಕ ಧರ್ಮಗಳ ಎರಡಕ್ಕೂ ಪ್ರೋತ್ಸಾಹ ನೀಡಿದರು ಕೆಲವು ಅರಸರು ವೈಷ್ಣವ ಮತವನ್ನು ಅವಲಂಬಿಸಿದರು.

*ದುರ್ವಿನಿತನು ಕನ್ನಡ ಮತ್ತು ಸಂಸ್ಕೃತದ ಪ್ರಸಿದ್ಧ ವಿದ್ವಾಂಸನಾಗಿದ್ದನು.

* ಶ್ರೀ ಪುರುಷ ಬರೆದ ಕೃತಿ – ಗಜ ಶಾಸ್ತ್ರ.

* ಗಂಗರ ಪ್ರಧಾನಿಯಾಗಿದ್ದ ಚಾವುಂಡರಾಯನು ರಚಿಸಿದ ಕೃತಿ -ಚಾವುಂಡರಾಯ ಪುರಾಣ

* ಗಂಗರ ಪ್ರಮುಖ ವಾಸ್ತುಶಿಲ್ಪಗಳು

-> ಮಣ್ಣೆಯ ಕಪಿಲೇಶ್ವರ

-> ತಲಕಾಡಿನ ಪಾತಾಳೇಶ್ವರ

-> ಕೋಲಾರದ ಕೋಲಾರಮ್ಮನ ಗುಡಿ

-> ಶ್ರವಣಬೆಳಗೊಳದ ಜೈನ ಬಸದಿಗಳು

-> ಕಂಬದಳ್ಳಿಯ ಪಂಚಕೂಟ ಬಸದಿ

* ಶ್ರವಣಬೆಳಗೊಳದಲ್ಲಿರುವ 58 ಅಡಿ ಎತ್ತರದ ಏಕಶಿಲಾ ಗೊಮ್ಮಟೇಶ್ವರ ಮೂರ್ತಿ

* ಕಾಳ ಮುಖ :- ಇದೊಂದು ಉಗ್ರ ಶೈವ ಪಂಥ ಈ ಪಂಥದವರು ಮುಖಕ್ಕೆ ಕಪ್ಪು ಮಸಿ ಬಳಿದು ಕೊಳ್ಳುತ್ತಿದ್ದರು ಆದ್ದರಿಂದ ಈ ಹೆಸರು ಬಂದಿದೆ.

* ಲೋಕಾಯುತ :- ಇವರನ್ನು ಚಾರ್ವಾಕರು ಎಂದು ಕರೆಯಲಾಗುತ್ತದೆ ಭೌತವಾದಿಗಳಾದ ಈ ಪಂಥವಾದವರು ವಾಸ್ತವಿಕ ಬದುಕಿನ ಬಗೆಗೆ ನಂಬಿಕೆ ಉಳ್ಳವರಾಗಿದ್ದರು.

     -: ಬಾದಾಮಿ ಚಾಲುಕ್ಯರು :-

* ಬಾದಾಮಿ ಚಾಲುಕ್ಯರ ಸ್ಥಾಪಕ -ಜಯಸಿಂಹ

* ಬಾದಾಮಿ ಚಾಲುಕ್ಯರ ರಾಜ ಲಾಂಛನ – ವರಾಹ

* ಬಾದಾಮಿ ಚಾಲುಕ್ಯರ ಪ್ರಸಿದ್ಧ ದೊರೆ – ಇಮ್ಮಡಿ ಪುಲಕೇಶಿ

* ಪುಲಕೇಶಿ ತನ್ನ ಚಿಕ್ಕಪ್ಪನಾದ ಮಂಗಳೇಶನ ವಿರುದ್ಧ ಯುದ್ಧ ಮಾಡುವ ಮೂಲಕ ರಾಜ್ಯ ಕಸಿದುಕೊಂಡನು.

* ಇಮ್ಮಡಿ ಪುಲಕೇಶಿಯು ಪರ್ಶಿಯಾ ದೇಶದ ಯಾವ ರಾಜನ ಆಸ್ಥಾನಕ್ಕೆ ನಿಯೋಗ ಒಂದನ್ನು ಕಳುಹಿಸಿದನು?

-> ಪಶಿ೯ಯಾ ರಾಜ ಖುಸ್ರು

* ಪರ್ಶಿಯಾದ ರಾಜ ಖುಸ್ರು ತನ್ನ ರಾಯಭಾರಿಯನ್ನು ಪುಲಕೇಶಿ ಆಸ್ಥಾನಕ್ಕೆ ಕಳುಹಿಸಿದನು.

* ಯಾವ ಚಿತ್ರವನ್ನು ಪುಲಕೇಶಿಯು ಪರ್ಶಿಯಾದ ರಾಜ ಖುಸ್ರು ಕಳುಹಿಸಿದ ರಾಯಭಾರಿಯನ್ನು ಸ್ವಾಗತಿಸುತ್ತಿರುವ ಚಿತ್ರವು – ಅಜಂತಾದ ಒಂದನೇ ಗುಹೆಯಲ್ಲಿರುವ ಅರುಣ ಚಿತ್ರ

* ಐಹೊಳೆಯ ಲಾಡ್ ಖಾನ್ ದೇವಾಲಯ,ದುರ್ಗಾ/ಸೂರ್ಯ ದೇವಾಲಯ,ಮೇಗುತಿಗುಡಿ, ಹುಚ್ಚಮಲ್ಲಿ ಗುಡಿ

* ದೇವಾಲಯಗಳ ವಾಸ್ತುಶಿಲ್ಪದ ತೊಟ್ಟಿಲು – ‘ಐಹೊಳೆ’

* ಬಾದಾಮಿಯ ಗುಹಾಲಯದಲ್ಲಿರುವ ನಟರಾಜ ಮತ್ತು ವಿಷ್ಣುವಿನ ಉಬ್ಬು ಶಿಲ್ಪಗಳು ಅದ್ಭುತವಾಗಿವೆ.

* ಐಹೊಳೆಯ ದೇವಾಲಯಗಳಲ್ಲಿ ಲಾಡ ಖಾನ್ ದೇವಾಲಯವು ಅತ್ಯಂತ ಹಳೆಯ ದೇವಾಲಯವಾಗಿದೆ ಇದೊಂದು ಶಿವನ ದೇವಾಲಯ ಕೆಲವು ವರ್ಷಗಳ ಹಿಂದೆ ಲಾಡ್ ಖಾನ್ ಎಂಬ ಸಂತನು ಇಲ್ಲಿ ನೆಲೆಸಿದ್ದರಿಂದ ಈ ಹೆಸರು ಬಂದಿದೆ.

* ಐಹೊಳೆಯಲ್ಲಿರುವ ಸೂರ್ಯ ದೇವಾಲಯವನ್ನು ‘ ದುರ್ಗ ದೇವಾಲಯ’ ಎಂದು ಕರೆಯುವರು.

* ಈ ದೇವಾಲಯವು ಕೋಟೆ ಆವಣದಲ್ಲಿ ಇರುವುದರಿಂದ ಇದನ್ನು ದುರ್ಗ ದೇವಾಲಯ ಎಂದು ಕರೆಯುತ್ತಾರೆ ಕೋಟೆಯನ್ನು ದುರ್ಗಾ ಎಂದು ಕರೆಯುವುದುಂಟು.

* ಪಟ್ಟದಕಲ್ಲಿನ ದೇವಾಲಯಗಳಲ್ಲಿ ವಿರೂಪಾಕ್ಷ ದೇವಾಲಯವು ಸುಂದರವಾದ ಮತ್ತು ದೊಡ್ಡ ದೇವಾಲಯವಾಗಿದೆ.

* ಪಟ್ಟದಕಲ್ಲಿನ ಚಾಲುಕ್ಯ ದೊರೆಗಳ ಪಟ್ಟಾಭಿಷೇಕ ನೆರವೇರಿತ್ತಿತ್ತು ಎಂದು ಹೇಳಲಾಗುತ್ತದೆ.

     -: ಪಲ್ಲವರು :-

* ಪಲ್ಲವರ ರಾಜವಂಶವು ದಕ್ಷಿಣ ಭಾರತದ ಒಂದು ಪ್ರಸಿದ್ಧ ರಾಜವಂಶ.

* ಪಲ್ಲವರ ರಾಜಧಾನಿ – ತಮಿಳುನಾಡಿನ ಕಂಚಿ

* 300 ವರ್ಷಗಳ ಕಾಲ ಆಳಿದರು ಪ್ರಸಿದ್ಧ ಅರಸ – ನರಸಿಂಹವರ್ಮ

* ನರಸಿಂಹವರ್ಮನ ಬಿರುದು – ಮಹಾಮಲ್ಲ(ನರಸಿಂಹವರ್ಮನು ಚಾಲುಕ್ಯ ರಾಜ್ಯದ ಮೇಲೆ ದಂಡೆತ್ತಿ ಹೋಗಿ ಇಮ್ಮಡಿ ಪುಲಕೇಶಿಯನ್ನು ಸೋಲಿಸಿ ಬಾದಾಮಿಯನ್ನು ಗೆದ್ದುಕೊಂಡನು. ಈ ವಿಜಯದ ಸಂಕೇತವಾಗಿ ನರಸಿಂಹವರ್ಮ ಪಡೆದ ಬಿರುದು – ” ವಾತಾಪಿಕೊಂಡ”)

* ನರಸಿಂಹವರ್ಮನು ಮಾಮಲ್ಲಾಪುರ (ಈಗಿನ ಮಹಾಬಲಿಪುರ) ರೇವುಪಟ್ಟಣವನ್ನು ಸುಂದರ ನಗರವನ್ನಾಗಿ ಅಭಿವೃದ್ಧಿಪಡಿಸಿದನು.

* ಪಲ್ಲವರ ಯಾವ ಅರಸನ ಕಾಲದಲ್ಲಿ ಏಳು ಕಲ್ಲಿನ ರಥಗಳಿದ್ದವು – ನರಸಿಂಹವರ್ಮ (ಜಗತ್ಪ್ರಸಿದ್ಧವಾದ ಈ ರಥಗಳನ್ನು ಒಂದೊಂದೇ ಕಲ್ಲಿನಲ್ಲಿ ಕೆತ್ತಲಾಗಿದೆ.)

* ಗಂಗಾವರಣ ಎಂಬ ಉಬ್ಬು ಶಿಲ್ಪ ಇರುವುದು ಎಲ್ಲಿ ?

-> ಮಹಾಬಲಿಪುರ ( ಈ ಕೆತ್ತನೆಯಲ್ಲಿ ಭಗೀರಥನ ತಪಸ್ಸು ಮಾಡಿ ಗಂಗೆಯನ್ನು ಭೂಮಿಗೆ ತರಲು ಪ್ರಯತ್ನಿಸುವ ಚಿತ್ರಣವಿದೆ ಇದೊಂದು ಪ್ರಸಿದ್ಧ ಹುಬ್ಬು ಶಿಲ್ಪವಾಗಿದೆ.)

* ಪಲ್ಲವರ ಮಹಾಬಲಿಪುರದ ಸಮುದ್ರ ತೀರದಲ್ಲಿ ನಿರ್ಮಿಸಲಾದ ಶಿವಾ ದೇವಾಲಯವಿದೆ.

* ಕಂಚಿಯ ಕೈಲಾಸನಾಥ ಮತ್ತು ವೈಕುಂಠ (ಎರಡನೇ ನಂದಿವರ್ಮನ) ಪೆರುಮಾಳ್ ದೇವಾಲಯಗಳಿವೆ. – ನಿರ್ಮಾತೃ -ಎರಡನೇ ನರಸಿಂಹವರ್ಮ

* ಪಲ್ಲವರ ಪ್ರಸಿದ್ಧ ದೊರೆ – ನರಸಿಂಹವರ್ಮ ಬಿರುದು – ಮಹಾಮಲ್ಲ,ವಾತಾಪಿಕೊಂಡ.

* ವಿಶ್ವ ಪರಂಪರೆಯ ತಾಣ:- ಜಗತ್ತಿನ ಕೆಲವು ಅಪೂರ್ವ,ಅಮೂಲ್ಯ ತಾಣಗಳು ವಿಶ್ವ ಪರಂಪರೆಗೆ ಸೇರಿದ್ದು ಎಂಬುದಾಗಿ ವಿಶ್ವಸಂಸ್ಥೆ ಘೋಷಣೆ ಮಾಡಿದೆ. ಇವುಗಳಿಗೆ ವಿಶೇಷ ಸಂರಕ್ಷಣೆ ನೀಡಲಾಗುತ್ತದೆ. ಕರ್ನಾಟಕದಲ್ಲಿ ಹಂಪಿ ಮತ್ತು ಪಟ್ಟದಕಲ್ಲು ಈ ಪಟ್ಟಿಗೆ ಸೇರಿವೆ.

WhatsApp Group Join Now
Telegram Group Join Now

Leave a Comment