* ಚೋಳರು 4 ಶತಮಾನಕಾಲ ಆಳಿದರು.ರಾಜಧಾನಿ – ತಂಜಾವೂರು.
* ಚೋಳರಲ್ಲಿ ರಾಜ ರಾಜ ಚೋಳ ಮತ್ತು ರಾಜೇಂದ್ರಚೋಳ ಪ್ರಮುಖರು.
* ಬೃಹದೀಶ್ವರ ದೇವಾಲಯವನ್ನು ನಿರ್ಮಿಸಿದವರು ಯಾರು?
-> ರಾಜರಾಜ ಚೋಳ
* ರಾಜರಾಜ ಚೋಳನ ಸಾಮ್ರಾಜ್ಯವು ತುಂಗಭದ್ರಾ ನದಿಯ ದಕ್ಷಿಣಕ್ಕಿದ್ದ ಎಲ್ಲಾ ಪ್ರದೇಶಗಳು ಶ್ರೀಲಂಕಾ ಮತ್ತು ಮಾಲ್ಡೀವ್ಸ್ ದ್ವೀಪ ಗಳನ್ನು ಒಳಗೊಂಡಿತ್ತು.
* ಸಾಮ್ರಾಜ್ಯ ರಕ್ಷಣೆಗಾಗಿ ಪ್ರಭಲವಾದ ಭೂಸೇನೆ ಮತ್ತು ನೌಕಾ ಸೇನೆಯನ್ನು ಕಟ್ಟಿದನು.
* ರಾಜರಾಜ ಚೋಳರ ಮಗ – ರಾಜೇಂದ್ರಚೋಳ
-: ರಾಜೇಂದ್ರ ಚೋಳ:-
* ರಾಜ ರಾಜ ಚೋಳನ ನಂತರ ಅವನ ಮಗ ರಾಜೇಂದ್ರ ಚೋಳನು ಚೋಳ ರಾಜ್ಯದ ಉತ್ತರಾದಿ ಕಾರಿಯಾದನು.
* ಉತ್ತರ ಭಾರತದ ದಂಡೆಯಾತ್ರೆಯೂ ಇವನ ಒಂದು ಪ್ರಮುಖ ಸಾಧನೆ.
* ಈ ವಿಜಯದ ನೆನಪಿಗಾಗಿ ಪಡೆದುಕೊಂಡ ಬಿರುದು -ಗಂಗೈಕೊಂಡ.
* ಅಲ್ಲದೆ ಗಂಗೈಕೊಂಡ ಚೋಳಪುರಂ ಎಂಬ ಹೊಸ ರಾಜಧಾನಿಯನ್ನು ನಿರ್ಮಿಸಿದ ಅಲ್ಲಿ ಬೃಹತ್ ಶಿವ ದೇವಾಲಯವನ್ನು ನಿರ್ಮಿಸಿದನು. ರಾಜಧಾನಿಯ ಸಮೀಪ ನೀರಾವರಿಗೆ ಯೋಗ್ಯವಾದ ಚೋಳ ಗಂಗಂ ಎಂಬ ಭಾರಿ ಕೆರೆಯನ್ನು ತೋರಿಸಿದನು.
* ಆಗ್ನೇಯ ಏಷ್ಯಾದ ಸುಮಾತ್ರದಲ್ಲಿನ ಶ್ರೀವಿಜಯನ ರಾಜ್ಯವನ್ನು ಗೆದ್ದುಕೊಂಡಿದ್ದು ರಾಜೇಂದ್ರನ ಇನ್ನೊಂದು ಗಣನೀಯ ಸಾಧನೆ.
-: ಸಾಹಿತ್ಯ :-
* ಚೋಳರ ಆಳ್ವಿಕೆಯ ಕಾಲವು ತಮಿಳು ಸಾಹಿತ್ಯ ಮತ್ತು ಸಂಸ್ಕೃತಿಯ ಸುವರ್ಣ ಯುಗವಾಗಿತ್ತು.
* ಚೋಳರ ಕಾಲದಲ್ಲಿ ಭಕ್ತಿ ಸಾಹಿತ್ಯವು ಹುಲಸಾಗಿ ಬೆಳೆಯಿತು.
* ಚೋಳರ ಕಾಲದ ಭಕ್ತಿ ಸಾಹಿತ್ಯದಲ್ಲಿ ” ಪೆರಿಯಾ ಪುರಾಣ” ಪ್ರಮುಖ ಸ್ಥಾನ ಪಡೆದಿದೆ.
* ಇದೇ ಕಾಲಕ್ಕೆ ಸೇರಿದ ಬರೆದಿರುವ ಕಂಬನ ರಾಮಾಯಣವು ಇಂದಿಗೂ ಜನಪ್ರಿಯವಾಗಿದೆ.
* ಭಾರತದಲ್ಲಿ ಆಡಳಿತ ನಡೆಸಿದ ಬ್ರಿಟಿಷ್ ಅಧಿಕಾರಿಗಳು ಚೋಳರ ದಕ್ಷ ಆಡಳಿತವನ್ನು ಮೆಚ್ಚಿಕೊಂಡು ಚೋಳರ ಕಾಲದ ಗ್ರಾಮಗಳು ಪುಟ್ಟ ಗಣರಾಜ್ಯಗಳಂತೆ ಇದ್ದವೆಂದು ಬಣ್ಣಿಸಿದ್ದಾರೆ.
* ಚೋಳರು ಕಂಚಿನಲ್ಲಿ ನಿರ್ಮಿಸಿದ ನಟರಾಜ ಮರ್ಧನ ನೃತ್ಶ ಶಿಲ್ಪಗಳು ಭಾರತೀಯ ಮೂರ್ತಿ ಶಿಲ್ಪಕ್ಕೆ ನೀಡಿದ ಅಪೂರ್ವ ಕೊಡುಗೆಗಳಾಗಿವೆ.
* ತಾಂಜಾವೂರಿನ ಬೃಹದೀಶ್ವರ ದೇವಾಲಯವು ಅದರ ಮುಂಭಾಗದಲ್ಲಿ ನಂದಿ ವಿಗ್ರಹವು ದಕ್ಷಿಣ ಭಾರತದಲ್ಲಿ ಅತಿ ದೊಡ್ಡದಾಗಿದೆ.
* ಚೋಳರ ಕಾಲದ ಮತ್ತೊಂದು ದೊಡ್ಡ ದೇವಾಲಯವೆಂದರೆ ಗಂಗೈಕೊಂಡ ಚೋಳಪುರಂ ಎಂಬಲ್ಲಿರುವ ಶಿವ ದೇವಾಲಯ.
* ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಸಹಸ್ರವರ್ಷ ತುಂಬಿರುವ ಬೃಹದೀಶ್ವರ ದೇವಾಲಯ ಎಂಬ ಸಾವಿರ ಮುಖಬೆಲೆಯ ನಾಣ್ಯವನ್ನು ಹೊರತಂದಿದೆ.
-: ರಾಷ್ಟ್ರಕೂಟರು :-
* ಚಾಲುಕ್ಯರ ಸಾಮ್ರಾಜ್ಯವು ಅಳಿದು ರಾಷ್ಟ್ರಕೂಟರ ಆಳ್ವಿಕೆ ಪ್ರಾರಂಭವಾಯಿತು.
* ಪಂಪನು ರಾಷ್ಟ್ರಕೂಟರ ಮಾಂಡಲಿಕನಾದ ವೇಮೂಲವಾಡದ ಅರಿಕೇಸರಿಯ ಆಸ್ಥಾನದಲ್ಲಿದ್ದನು.
* ಪಂಪನು ಕನ್ನಡದ ಶ್ರೇಷ್ಠ ಕವಿತ ಇವನು ಕನ್ನಡದಲ್ಲಿ ಮೊಟ್ಟಮೊದಲ ಮಹಾ ಕಾವ್ಯ ರಚಿಸಿದನು. ಆದ್ದರಿಂದ “ಕನ್ನಡದ ಆದಿಕವಿ”ಎಂದು ಕರೆಯುತ್ತಾರೆ.
* ಪಂಪನ ಶ್ರೇಷ್ಠ ಮಹಾ ಕಾವ್ಯಗಳು ಯಾವುವು ?
-> ಆದಿಪುರಾಣ
-> ವಿಕ್ರಮಾರ್ಜುನ ವಿಜಯ ( ಪಂಪ ಭಾರತ ಎಂಬ ಹೆಸರಿದೆ)
* ಇದೇ ಕಾಲಕ್ಕೆ ಸೇರಿದ ಮೂರನೇ ಕೃಷ್ಣನ ಆಸ್ಥಾನದಲ್ಲಿದ್ದ ಕನ್ನಡದ ಮಹಾ ಕವಿ ಯಾರು?
-> ಪೊನ್ನ
* ಎಲ್ಲೋರ ಮತ್ತು ಎಲಿಫೆಂಟಾ ಗುಹೆಗಳಲ್ಲಿ ರಾವಣನು ಕೈಲಾಸ ಪರ್ವತವನ್ನು ಎತ್ತುವ ಕಥಾಪ್ರಸಂಗವು ರಮಣೀಯವಾದದ್ದು.
* ಎಲಿಫೆಂಟಾ ಮುಂಬೈ ಬಂದರಿನ ಸಮೀಪದಲ್ಲಿರುವ ಒಂದು ಪುಟ್ಟ ದ್ವೀಪ.ಇಲ್ಲಿನ ಬಾರಿ ಗಾತ್ರದ ಮೂರು ಮುಖ ಉಳ್ಳ ಮಹೇಶ ಮೂರ್ತಿ ಪ್ರಸಿದ್ಧವಾಗಿದೆ.
* ರಾಷ್ಟ್ರಕೂಟರ ಮೊದಲ ಪ್ರಸಿದ್ಧ ದೊರೆ – ಧ್ರುವ- ಧ್ರುವನಮಗ – ಮೂರನೇ ಗೋವಿಂದ.
* ಮೂರನೇ ಗೋವಿಂದನು ಹಿಮಾಲಯದ ತಪ್ಪಲಿನವರೆಗೂ ಯಶಸ್ವಿ ಸೇನಾ ಕಾರ್ಯಾಚರಣೆಯನ್ನು ನಡೆಸಿದನು. ಈ ಮಹತ್ವದ ಸಾಧನೆಯನ್ನು ಅವನ ಶಾಸನಗಳು ಗೋವಿಂದನ ಯುದ್ಧದ ಮದ್ದಾನೆಗಳು, ಗಂಗಾ ನದಿಯ ಪುಣ್ಯ ತೀರ್ಥದ ರುಚಿ ನೋಡಿದವು ಎಂದು ಮನಮೋಹಕವಾಗಿ ವರ್ಣಿಸಿವೆ.
* ಮೂರನೇ ಗೋವಿಂದನ ಮಗ – “ಅಮೋಘವರ್ಷ ನೃಪತುಂಗ”.
-: ಅಮೋಘವರ್ಷ ನೃಪತುಂಗ :-
* ಅಮೋಘವರ್ಷನಗೆ ಪಟ್ಟಾಭಿಷೇಕವಾದಾಗ ಅವನ ವಯಸ್ಸು ಎಷ್ಟು?
-> 14 ವರ್ಷ
* 60 ವರ್ಷಗಳ ಕಾಲ ಆಳ್ವಿಕೆ ನಡೆಸಿದನು.
* ಶ್ರೀವಿಜಯನು ಇವನ ಆಸ್ಥಾನದ ವಿದ್ವಾಂಸ.
* ನೃಪತುಂಗನಿಗೆ ಅತ್ಯಂತ ಇಷ್ಟವಾದ ಸಂಗತಿ ಎಂದರೆ “ತನ್ನ ಪ್ರಜೆಗಳ ಕ್ಷೇಮ”.
* ಅಮೋಘ ವರ್ಷ ಮಾನ್ಯಖೇಟ ಪಟ್ಟಣವನ್ನು ನಿರ್ಮಿಸಿದನು.
* ಅಮೋಘವರ್ಷನ ಆಸ್ಥಾನಕ್ಕೆ ಬಂದ ಅರಬ್ ಪ್ರವಾಸಿಗ ಯಾರು?
-> ಸುಲೈಮಾನ್
* ಸುಲೈಮಾನ್ ಆ ಕಾಲದ 4 ವಿಶ್ವದ ವಿಶಾಲವಾದ ಸಾಮ್ರಾಜ್ಯಗಳಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯ ಒಂದಾಗಿತ್ತೆಂದು ಅರಬ್ ಪ್ರವಾಸಿಗ ಬಣ್ಣಿಸಿದ್ದಾನೆ. ( ಉಳಿದ ಮೂರು ಸಾಮ್ರಾಜ್ಯಗಳು ರೋಮನ್, ಅರಬ್, ಚೈನಿ)
-: ಮೂರನೇ ಕೃಷ್ಣ :-
* ಮೂರನೇ ಕೃಷ್ಣನು ಚೋಳರನ್ನು ಪರಬಹುಗೊಳಿಸಿ ರಾಮೇಶ್ವರದವರೆಗೂ ತನ್ನ ಸೈನ್ಯದೊಂದಿಗೆ ಜಯಭೇರಿ ಬಾರಿಸಿದನು ಈ ವಿಜಯದ ನೆನಪಿಗಾಗಿ ಅಲ್ಲಿ ವಿಜಯ ಸ್ತಂಭವನ್ನು ದೇವಾಲಯವನ್ನು ಸ್ಥಾಪಿಸಿದನು.
* ಸಿಂಹಳದ ಅರಸರಿಂದ ಕಪ್ಪ ಸಂಗ್ರಹಿಸಿದನು.
* ಮೂರನೇ ಕೃಷ್ಣ,ಮೂರನೇ ಗೋವಿಂದನಂತೆ ಉತ್ತರ ಭಾರತದಲ್ಲಿ ಅತ್ಯಂತ ಯಶಸ್ವಿ ದಂಡಯಾತ್ರೆ ನಡೆಸಿದನು.
* ಮೂರನೇ ಕೃಷ್ಣನ ಆಶ್ರಯ ಪಡೆದಿದ್ದ ಕನ್ನಡದ ಕವಿ – ಪೊನ್ನ
* ಮೂರನೇ ಕೃಷ್ಣ ನಂತರ ರಾಷ್ಟ್ರಕೂಟರ ಆಡಳಿತ ಅವನತಿ ಹೊಂದಲಾರಂಭಿಸಿತು.
* ರಾಷ್ಟ್ರಕೂಟರು ವೈದಿಕರಾಗಿದ್ದು ಶೈವ ಮತ್ತು ವೈಷ್ಣವ ಮತಗಳನ್ನು ಅನುಸರಿಸಿದ್ದರು.
* ರಾಷ್ಟ್ರಕೂಟರ ದೊರೆಗಳು ಕನ್ಹೇರಿಯಲ್ಲಿ ಬೌದ್ಧ ಧರ್ಮಕ್ಕೆ ದಾನ ನೀಡಿರುವ ಕುರಿತು ಶಾಸನಗಳು ಮಾಹಿತಿ ಕೊಡುತ್ತವೆ.
-: ಕಲ್ಯಾಣ ಚಾಲುಕ್ಯರು :-
* ರಾಷ್ಟ್ರಕೂಟರ ನಂತರ ಕಲ್ಯಾಣ ಚಾಲುಕ್ಯರು ಮತ್ತೊಮ್ಮೆ ಬೀದರ್ ಜಿಲ್ಲೆಯ ಬಸವಕಲ್ಯಾಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಅಧಿಕಾರಕ್ಕೆ ಬಂದರು.
* ಕಲ್ಯಾಣ ಚಾಲುಕ್ಯರ ಮೊದಲ ದೊರೆ – ಎರಡನೇ ತೈಲಪ
* ಕಲ್ಯಾಣ ಚಾಲುಕ್ಯರ ಪ್ರಸಿದ್ಧ ದೊರೆ – ಆರನೇ ವಿಕ್ರಮಾದಿತ್ಯ
* 6ನೇ ವಿಕ್ರಮಾದಿತ್ಯನು ಅಧಿಕಾರಕ್ಕೆ ಬಂದ ಸವಿನೆನಪಿಗಾಗಿ ಚಾಲುಕ್ಯ ವಿಕ್ರಮ ಶಕೆಯನ್ನು ಆರಂಭಿಸಿದನು.
* 6ನೇ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ಕವಿಗಳು – ಬಿಲ್ಲಣ ( ವಿಕ್ರಮಾಂಕ ದೇವ ಚರಿತೆ ) , ವಿಜ್ಞಾನೇಶ್ವರ – ( ಮಿತಾಕ್ಷರ ಸಂಹಿತೆ)
* ಮಿತಾಕ್ಷರ ಸಂಹಿತೆ – ಇಂದು ಕಾನೂನು ಪದ್ಧತಿಯ ಪ್ರಮಾಣ ಗ್ರಂಥವೆಂದು ಮುನ್ನಡೆ ಪಡೆದಿದೆ.
* ವಿಕ್ರಮಾದಿತ್ಯನ ಮಗ – ಮೂರನೇ ಸೋಮೇಶ್ವರ ಕೃತಿ – ಮಾನಸೋಲ್ಲಾಸ ( ಸಂಸ್ಕೃತ ವಿಶ್ವಕೋಶ)
* ಮೂರನೇ ಸೋಮೇಶ್ವರನ ಬಿರುದು – “ಸರ್ವಜ್ಞ ಚಕ್ರವರ್ತಿ”
* ಮೂರನೇ ಸೋಮೇಶ್ವರನ ಕಾಲದಲ್ಲಿ ಚಾಲುಕ್ಯ ರಾಜ್ಯದ ವಿಸ್ತಾರವೂ ಕುಗ್ಗಿತು.
* ರನ್ನನ ಬಿರುದು – ಕವಿ ಚಕ್ರವರ್ತಿ ಕಾವ್ಯ – ಸಾಹಸ ಭೀಮ ವಿಜಯ ( ಗದಾಯುದ್ಧ )
* ಕಲ್ಹಣ – ರಾಜ ತರಂಗಿಣಿ
* ಮೂರನೇ ಸೋಮೇಶ್ವರ – ಮಾನಸೊಲ್ಲಾಸ
-: ಹೊಯ್ಸಳರು :-
* ಹೊಯ್ಸಳರ ಪ್ರಸಿದ್ಧ ಅರಸು – ವಿಷ್ಣುವರ್ಧನ ಮತ್ತು ಮೂರನೇ ಬಲ್ಲಾಳ
-: ವಿಷ್ಣುವಧ೯ನ :-
* ವಿಷ್ಣುವರ್ಧನನು ಚೋಳ ಮತ್ತು ಪಾಂಡ್ಯರನ್ನು ಸೋಲಿಸಿ ಅವರ ವಶದಲ್ಲಿದ್ದ ಪ್ರದೇಶಗಳನ್ನು ಗೆದ್ದುಕೊಂಡನು.
* ಇವನು ಜೈನ ಮತಿಯನಾಗಿದ್ದು , ಅನಂತರ ವೈಷ್ಣವ ಪಂಥವನ್ನು ಸ್ವೀಕರಿಸಿದನು.
* ಆತನ ರಾಣಿಯು ಶಾಂತಲೆಯು ಜೈನಮತದಲ್ಲಿ ಮುಂದುವರಿದಳು. ” ನಾಟ್ಯ ಸರಸ್ವತಿ” ಎಂದು ಪ್ರಸಿದ್ಧಿ ಪಡೆದಳು.
* ಹೊಯ್ಸಳ ಮನೆತನ 670 ವರ್ಷಗಳ ಹಿಂದೆ ಕೊನೆಗೊಂಡಿತು.
-: ಹೊಯ್ಸಳ ದೇವಾಲಯಗಳ ಪ್ರಮುಖ ಲಕ್ಷಣಗಳು :-
* ಈ ದೇವಾಲಯಗಳು ನಕ್ಷತ್ರಾಕಾರದ ಜಗುಲಿಯ ಮೇಲೆ ಬಳಪದ ಕಲ್ಲಿನಿಂದ ನಿರ್ಮಾಣವಾಗಿದೆ.
* ದೇವಾಲಯದ ಒಳಗಿನ ನವರಂಗದ ಕಂಬಗಳು ಅತ್ಯಂತ ನುಣುಪಾಗಿದೆ.
* ಹೊರಭಿತ್ತಿ ( ಗೋಡೆ)ಯ ಮೇಲೆಪುರಾಣ ಮತ್ತು ಮಹಾಕಾವ್ಯಗಳ ಕಥೆಗಳನ್ನು ನಿರೂಪಿಸುವ ಶಿಲ್ಪಗಳಿವೆ.
* ಹಳೇಬಿಡಿನ – ಹೊಯ್ಸಳೇಶ್ವರ
* ಬೇಲೂರಿನ – ಚನ್ನಕೇಶವ ದೇವಾಲಯ
* ಸೋಮನಾಥಪುರದ – ಕೇಶವ ದೇವಾಲಯ ಪ್ರಮುಖವಾಗಿದೆ.
* ಚನ್ನಕೇಶವ ದೇವಾಲಯ ನಿರ್ಮಿಸಿದ ಪ್ರಮುಖ ಶಿಲ್ಪಿಗಳು – ಬಳ್ಳಿಗಾವೆಯ ದಾಸೋಜ , ಗದುಗಿನ ನಾಗೋಜ
* ಚೆನ್ನಕೇಶವ ದೇವಾಲಯದಲ್ಲಿನ ” ಸಾಲಬಂಚಿಕೆ”/ ” ಮದನಿಕೆ” ಶಿಲ್ಪಗಳು ಕಣ್ಮನ ಸೆಳೆಯುತ್ತವೆ.
* ಸೋಮನಾಥಪುರದ ಕೇಶವ ದೇವಾಲಯವನ್ನು ಕಂಡು ‘ ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೇ ಶಿಲ್ಲೆಯ ವಿ ಗುಡಿಯು ಕಲೆಯ ಬಲೆಯು’ ಎಂದು ಪ್ರಶಂಸಿದವರು ಯಾರು?
-> ಕುವೆಂಪು
* ಹೊಯ್ಸಳ ಕಾಲದ ಶ್ರೇಷ್ಠ ಕವಿಗಳು
-> ಜನ್ನ – ಯಶೋಧರ ಚರಿತ
-> ಹರಿಹರ – ಗಿರಿಜಾ ಕಲ್ಯಾಣ
-> ರಾಘವಾಂಕ – ಹರಿಚ್ಚಂದ್ರ ಕಾವ್ಯ
-> ಹರಿಹರ – ರಗಳೆಯ ಕವಿ
* ಅಚ್ಚ ಕನ್ನಡದಲ್ಲಿ ಕಬ್ಬಿಗರ ಕಾವ್ಯ ಬರೆದವರ – ಅಂಡಯ್ಯ – ಇವರು ಕೂಡ ಹೊಯ್ಸಳ ಕಾಲದ ಕವಿ.
* ಸಾಲಭಜಿಂಕ / ಮದನಿಕೆ :- ಕಂಬಗಳಿಗೆ ಬೋದಿಗೆಗೆ ಜೋಡಿಸಿರುವ ಅಲಂಕಾರಮಯವಾದ ಸ್ತೀ ವಿಗ್ರಹ .
* ರಗಳೆ :- ಒಂದು ಬಗೆಯ ಪದ್ಯ ಪ್ರಕಾರ.