political science:ಭಾರತದ ಸಂವಿಧಾನ-2024.
ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ವಾಟ್ಸ್ ಅಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ.
political science: ನಮ್ಮ ದೇಶವು ಸ್ವಾತಂತ್ರ್ಯ ನಂತರ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಈ ಸಮಯದಲ್ಲಿ ಪಾಕಿಸ್ತಾನದಿಂದ ವಲಸೆ ಬಂದ ನಿರಾಶ್ರಿತರಿಗೆ ಪುನರ್‌ವಸತಿ ಕಲ್ಪಿಸುವುದು, ಸಂಸ್ಥಾನಗಳ ವಿಲೀನೀಕರಣ, ಕಾನೂನು ಸುವ್ಯವಸ್ಥೆಗೊಳಿಸುವುದು ಮುಂತಾದ ಸವಾಲುಗಳಿದ್ದವು. ಸಂಸ್ಥಾನಗಳ ವಿಲೀನೀಕರಣವನ್ನು ಸರ್ದಾರ್ ವಲ್ಲಭಬಾಯಿ ಪಟೇಲರು ಯಶಸ್ವಿಯಾಗಿ ಸಾಧಿಸಿದರು. ದೇಶದ ವ್ಯವಸ್ಥಿತ ಆಡಳಿತ ನಿರ್ವಹಣೆಗಾಗಿ ಕಾನೂನಿನ ಅವಶ್ಯಕತೆ ಮತ್ತು ಸಂವಿಧಾನದ ರಚನೆಯಂತಹ ಸವಾಲನ್ನು ಕೂಡಾ ಸಮರ್ಪಕವಾಗಿ ನಿರ್ವಹಿಸಲಾಯಿತು. ಇಂತಹ ಸಂವಿಧಾನದ ರಚನೆ, ಅದರ ಲಕ್ಷಣಗಳು ಮತ್ತು ಅದರಲ್ಲಿ ಪ್ರಸ್ತಾಪಿತವಾಗಿರುವ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ತಿಳಿಯೋಣ.
ಕ್ಯಾಬಿನೆಟ್ ನಿಯೋಗ :
• ಫೆಥಿಕ್ ಲಾರೆನ್ಸ್ ಭಾರತದ ವ್ಯವಹಾರಗಳ ಕಾರ್ಯದರ್ಶಿ.
• ಸರ್ ಸ್ಟಾಫೋರ್ಡ್ ಕ್ರಿಪ್ಸ್ – ವಾಣಿಜ್ಯ ಮಂಡಳಿಯ ಅಧ್ಯಕ್ಷ .
• ಎ. ವಿ. ಅಲೆಕ್ಸಾಂಡರ್- ನೌಕಾ ಪಡೆಯ ಮುಖ್ಯಸ್ಥ .
ಭಾರತಸಂವಿಧಾನರಚನಾ ಸಭೆ :
ಇಡೀ ರಾಷ್ಟ್ರವನ್ನು ಒಂದು ಚೌಕಟ್ಟಿನಲ್ಲಿ ಹೇಗೆ ನಿಯಂತ್ರಿಸಬೇಕೆಂದು ತಿಳಿಸಿ ಕೊಡುವ ವ್ಯವಸ್ಥೆಯನ್ನು ಸಂವಿಧಾನ ಎನ್ನುತ್ತಾರೆ. ಇಂತಹ ಸಭೆಯೊಂದರ ರಚನೆಗೆ ಸಂಬಂಧಿಸಿದಂತೆ ಮೋತಿಲಾಲ್ ನೆಹರೂ ಸಮಿತಿಯ ಶಿಫಾರಸ್ಸು ಮತ್ತು ರಾಷ್ಟ್ರೀಯ ಕಾಂಗ್ರೆಸ್‌ನ ಕರಾಚಿ ಅಧಿವೇಶನದ ನಿರ್ಣಯಗಳು ಒತ್ತಾಯಿಸಿದವು.
ನೂತನ ಸಂವಿಧಾನದ ಮೊದಲ ರಚನಾ ಸಭೆ ಡಿಸೆಂಬರ್ 9, 1946 ರಂದು ನಡೆಯಿತು. ಡಿಸೆಂಬರ್ 11, 1946 ರಂದು ಡಾ. ರಾಜೇಂದ್ರಪ್ರಸಾದ್‌ರವರು ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯಲ್ಲಿ ಜವಾಹರ್‌ಲಾಲ್ ನೆಹರೂ,ಸರ್ದಾರ್ ವಲ್ಲಭಬಾಯಿ ಪಟೇಲ್, ಡಾ. ಬಿ.ಆರ್. ಅಂಬೇಡ್ಕರ್, ಮೌಲಾನಾ ಅಬುಲ್ ಕಲಾಂ ಆಜಾದ್, ಸಿ. ರಾಜಗೋಪಾಲಾಚಾರಿ, ಕೆ.ಎಂ. ಮುನ್ನಿ, ಟಿ.ಟಿ. ಕೃಷ್ಣಮಾಚಾರಿ, ಶ್ರೀಮತಿ ಸರೋಜಿನಿ ನಾಯ್ಡು, ಶ್ರೀಮತಿ ಸುಚೇತಾ ಕೃಪಲಾನಿ, ಕರ್ನಾಟಕ ಎಸ್. ನಿಜಲಿಂಗಪ್ಪ, ಕೆ.ಸಿ. ರೆಡ್ಡಿ, ಕೆಂಗಲ್ ಹೆನುಮಂತಯ್ಯ, ಟೇಕೂರು ಸುಬ್ರಮಣ್ಯಂ ಮತ್ತಿತರರು ಭಾಗವಹಿಸಿದ್ದರು.
ಕರಡು ಸಮಿತಿ:
ಸಂವಿಧಾನ ರಚನಾ ಸಭೆಯು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವರವಾಗಿ ಪರಿಶೀಲಿಸಲು ಅನೇಕ” ಸಮಿತಿಗಳನ್ನು ರಚಿಸಿತು. ಅವುಗಳಲ್ಲಿ ಮುಖ್ಯವಾದುದು ಕರಡು ಸಮಿತಿ. ಡಾ. ಬಿ.ಆರ್. ಅಂಬೇಡ್ಕರ್ ಅದರ ಅಧ್ಯಕ್ಷರಾಗಿದ್ದರು. ಇವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ‘ಸಂವಿಧಾನದ ಶಿಲ್ಪಿ’ ಎಂದು ಕರೆಯಲಾಗಿದೆ. ಈ ಸಮಿತಿಯಲ್ಲಿ ಎನ್. ಗೋಪಾಲಸ್ವಾಮಿ ಅಯ್ಯಂಗಾರ್, ಅಲ್ಲಾದಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಂ. ಮುನ್ನಿ, ಟಿ.ಟಿ. ಕೃಷ್ಣಮಾಚಾರಿ ಮುಂತಾದ ಮುತ್ಸದ್ಧಿಗಳು ಸದಸ್ಯರುಗಳಾಗಿದ್ದರು.
ಸಂವಿಧಾನದ ರಚನೆ :
ಸಂವಿಧಾನ ರಚನಾ ಸಭೆ ಈ ಅವಧಿಯಲ್ಲಿ 145 ದಿನ ಸಭೆ ಸೇರಿತ್ತು. ಈ
ಸಮಿತಿಗಳು ನಿರಂತರವಾಗಿ ಕೆಲಸ ನಿರ್ವಹಿಸಿ ವಿಷಯಗಳ ಬಗ್ಗೆ ಚರ್ಚೆ ನಡೆಸಿದವು ಮತ್ತು ಕರಡು ಸಂವಿಧಾನವನ್ನು ರಚಿಸಿತು. ಬ್ರಿಟೀಷ್ ಸರ್ಕಾರ ಹೊರಡಿಸಿದ 1909, 1919 ಮತ್ತು 1935ರ ಕಾಯಿದೆ. ಬ್ರಿಟನ್ನಿನ ಸಂಸದೀಯ ವ್ಯವಸ್ಥೆ, ಅಮೆರಿಕಾದ ಬಿಲ್ ಆಫ್ ರೈಟ್ಸ್, ಐಗ್ಲೆಂಡಿನ ಸಾಮಾಜಿಕ ನಿರ್ದೇಶಕ ತತ್ವಗಳು ಮುಂತಾದವುಗಳನ್ನು ಅಳವಡಿಸಿಕೊಳ್ಳಲು ನಿರ್ಣಯಿಸಲಾಯಿತು. ಅಂತಿಮವಾಗಿ ನವೆಂಬರ್ 26, 1949 ರಂದು ಅಂಗೀಕರಿಸಲ್ಪಟ್ಟು ಜನವರಿ 26, 1950 ರಂದು ಜಾರಿಗೆ ಬಂದಿತು. ಈ ದಿನವನ್ನೇ ಗಣರಾಜ್ಯ ದಿನವಾಗಿ ಆಚರಿಸುತ್ತೇವೆ.
ಪ್ರಮುಖ ಅಂಶಗಳು :
• 1930 ಜನವರಿ 26 ರಂದು ಲಾಹೋರ್ ಅಧಿವೇಶನದಲ್ಲಿ ಭಾರತ ಪೂರ್ಣ ಸ್ವರಾಜ್ಯ ಎಂಬ ಘೋಷಣೆ ಅಂಗೀಕರಿಸಿತ್ತು. ಅದರ ಸವಿನೆನಪಿಗಾಗಿ ನೂತನ ಸಂವಿಧಾನವನ್ನು ಜನವರಿ 26, 1950 ರಂದು ಜಾರಿಗೆ ತರಲಾಯಿತು.
• ಕರ್ನಾಟಕದವರಾದ ಬೆನಗಲ್ ನರಸಿಂಗರಾವ್‌ರವರು ಸಂವಿಧಾನ ರಚನಾ ಸಮಿತಿಯ ಮುಖ್ಯ ಸಲಹೆಗಾರರಾಗಿ ಕರಡು ಪ್ರತಿಯ ಚೌಕಟ್ಟು ಹಾಗೂ ರಚನೆಯಲ್ಲಿ ಮುಖ್ಯ ಪಾತ್ರವಹಿಸಿದರು. ಇವರು ಜಮ್ಮು-ಕಾಶ್ಮೀರ ಸಂಸ್ಥಾನದ ಪ್ರಧಾನಮಂತ್ರಿಗಳಾಗಿ, ದಿ ಹೇಗ್‌ನಲ್ಲಿರುವ ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು.
http://www.bellingham-jude-cz.biz
last news about bellingham jude
https://bellingham-jude-cz.biz