6 ರಿಂದ 14ನೇ ಶತಮಾನದ ಭಾರತ ( ಭಾಗ- 3)

  -: ಮಹಮ್ಮದ್ ಬಿನ್ ತುಘುಲಕ್ :-

* ಈತ ಪರ್ಶಿಯನ್ ಮತ್ತು ಅರೇಬಿಕ್ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ.ಅಪಾರ ಜ್ಞಾನ ಹೊಂದಿದ್ದರೂ ಆತನಲ್ಲಿ ಅನೇಕ ದೋಷಗಳಿದ್ದವು.

* ಈತ ವ್ಯವಹಾರಿಕ,ಬುದ್ಧಿವಂತಿಕೆ, ಪರಿಜ್ಞಾನ, ತಾಳ್ಮೆಗುಣ, ಮಾನಸಿಕ ಸಮತೋಲನ, ದೂರ ದೃಷ್ಟಿ, ವಾಸ್ತವಿಕವಾದ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇರಲಿಲ್ಲ.

* ಭೂ ಕಂದಾಯಕ್ಕೆ ಸಂಬಂಧಿಸಿದಂತೆ ಭೂಮಿಯ ವಿವರಗಳನ್ನು ಒಳಗೊಂಡ ಅಧಿಕೃತ ದಾಖಲೆ ಪುಸ್ತಕವನ್ನು ತಯಾರಿಸಿದನು.

* ಕೃಷಿ ಇಲಾಖೆಯನ್ನು ಸ್ಥಾಪಿಸಿದ ಮತ್ತು ರೈತರಿಗೆ ಆರ್ಥಿಕ ನೆರವು ನೀಡಿದನು.

* ದೋ – ಅಬ್ ಪ್ರದೇಶಗಳಲ್ಲಿ ಭೂ ಕಂದಾಯ ಹೆಚ್ಚಿಸಿದನು.

* ರಾಜಧಾನಿ ವರ್ಗಾವಣೆ ( 1327):- ತನ್ನ ರಾಜಧಾನಿಯನ್ನು ದೆಹಲಿಯಿಂದ ದೇವಗಿರಿಗೆ ವರ್ಗಾಯಿಸಿದ.ಯಾಕೆಂದರೆ ವಿಶಾಲವಾದ ಸಾಮ್ರಾಜ್ಯಕ್ಕೆ ರಾಜಧಾನಿ ಕೇಂದ್ರ ಭಾಗದಲ್ಲಿರಬೇಕು ಹಾಗೂ ಪರಕೀಯರ ದಾಳಿಗಳಿಂದ ರಕ್ಷಿಸಲು ಅನುಕೂಲಕರವಾಗಿರಬೇಕೆಂದಾಗಿತ್ತು.ಆದರೆ ಜನರು ಸಂಕಷ್ಟಕ್ಕೆಡಾದರೂ.

* ನಾಣ್ಯಗಳ ಮೌಲ್ಯಗಳನ್ನು ತನ್ನ ಕಾಲದ ಬಂಗಾರ ಮತ್ತು ಬೆಳ್ಳಿಯ ಮೌಲ್ಯಕ್ಕೆ ಸರಿಹೊಂದುವಂತೆ ಮಾಡಿದ.

* ‘ ದಿನಾರ’ ಎಂಬ ಬಂಗಾರದ ಮತ್ತು ‘ ಅದಲಿ ‘ ಎಂಬ ಬೆಳ್ಳಿ ನಾಣ್ಯಗಳನ್ನು ಚಲಾವಣೆಗೆ ತಂದನು.

* ನಾಣ್ಯ ಟಂಕಿಸುವುದು ಸರ್ಕಾರದ ಏಕಸ್ವಾಮ್ಯವಾಗಿರಲಿಲ್ಲ.ಆದ್ದರಿಂದ ಸಾರ್ವಜನಿಕರು ಅವುಗಳನ್ನು ಟಂಕಿಸಿದ್ದರಿಂದ ಅವ್ಯವಸ್ಥೆ ಉಂಟಾಯಿತು.

* ದಖನ್ನನಲ್ಲಿ ಗೆದ್ದ ಪ್ರದೇಶಗಳಲ್ಲಿ ತನ್ನ ಆಡಳಿತ ನಡೆಸಿದನು ಕಾಕತಿಯರ ರಾಜಧಾನಿ ವಾರಂಗಲ್ ವಶಪಡಿಸಿಕೊಂಡು, ಹೊಯ್ಸಳರ ರಾಜಧಾನಿ ದ್ವಾರಸಮುದ್ರವನ್ನು ದ್ವಂಸಗೊಳಿಸಿದನು.

* ದಕ್ಷಿಣದಲ್ಲಿ ಮಧುರೈಯನ್ನು ಗೆದ್ದು,ಅದರ ನಿರ್ವಹಣೆಗೆ ಜಲಾಲುದ್ದೀನ್ ಹಾಸನ್ ಷಾನನ್ನು ರಾಜ ಪಾಲನನ್ನಾಗಿ ನೇಮಿಸಿದನು.

* ಹೀಗೆ ಭಾರತದಲ್ಲಿ ವಿಶಾಲ ಮುಸ್ಲಿಂ ಸಾಮ್ರಾಜ್ಯ ಸ್ಥಾಪಿಸಿದ ದೆಹಲಿ ಸುಲ್ತಾನರಲ್ಲಿ ಮಹಮ್ಮದ್ ಬಿನ್ ತುಘಲಕ್ ಮೊದಲಿಗ.

* ಈತ ದೊಡ್ಡ ಸೈನ್ಯವನ್ನು ಸಂಘಟಿಸಿದ ಆದರೆ ಯಾವುದೇ ಯುದ್ಧ ಕೈಗೊಳ್ಳದೆ ಸಮಯ ಮತ್ತು ಹಣ ಅಪವ್ಯಯ ಮಾಡಿ ರಾಜ್ಯದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟಾಯಿತು.

* ಈತನ ಆಡಳಿತಾವಧಿಯಲ್ಲಿ ದಕ್ಷಿಣ ಭಾರತದಲ್ಲಿ 27 ದಂಗೆಗಳು ನಡೆದವು ವಿಜಯನಗರ(1336),ಬಹುಮನಿ ರಾಜ್ಯಗಳು(1347) ರಾಜ್ಯಗಳ ಉದಯಕ್ಕೆ ಕಾರಣವಾಯಿತು.

  -: ಫಿರೋಜ್ ಷಾ ತುಘುಲಕ್ :-

* ತುಘುಲಕ್ ನಂತರ ಆಳ್ವಿಕೆಗೆ ಬಂದನು.

* ಪ್ರಜೆಗಳಿಗೆ ನೆರವು ನೀಡುವ ಉದ್ದೇಶದಿಂದ ‘ ತುಕ್ಕಾವಿ /’ ತಕಾವಿ’ ಸಾಲ ಮನ್ನಾ ಮಾಡಿದ.

* ಮಹಮ್ಮದ್ ಬಿನ್ ತುಘಲಕ್ ನ ದಾಳಿಗೆ ತುತ್ತಾಗಿದ್ದ ಪ್ರಜೆಗಳಿಗೆ ಪರಿಹಾರ ಹಣ ನೀಡಿದ.

* ಸುಮಾರಿ 20 ತೆರಿಗೆಗಳನ್ನು ರದ್ದುಪಡಿಸಿದ.

* ನಗರ,ಮಸೀದಿ, ಮದರಸಾ,ಅಣೆಕಟ್ಟು, ಕಾಲುವೆಗಳನ್ನು ನಿರ್ಮಿಸಿದನು.

* ಪ್ರಮುಖ ನಗರಗಳು ಜಾನಪುರ, ಫತೋಬಾದ್, ಹಿಸ್ಸಾರ್,ಫಿರೋಜಪುರ,ಫಿರೋಜಾಬಾದ್ ನಿರ್ಮಿಸಿದನು.

* ಜಾನಾಪುರ – ಅಂದಿನ ಪ್ರಸಿದ್ಧ ವಿದ್ಯಾ ಕೇಂದ್ರ .

  -: ಸಯ್ಯದ್ ಸಂತತಿ -(1414-1451) :-

* ಸ್ಥಾಪಿಸಿದವರು – ಖಿಜರ್ ಖಾನ್ ಸಯ್ಯದ್

* ಈತ ಮುಲ್ತಾನದ ರಾಜಪಾಲನಾಗಿದ್ದನು.

* ಮಹಮ್ಮದ್ ಷಾ,ಅಲ್ಲಾ- ಉದ್ -ದೀನ್ ಹಾಗೂ ಷಾ ಅಲಂ ಈ ಸಂತತಿಯ ಪ್ರಮುಖ ಸುಲ್ತಾನರು.

* ಅಲಂ ಷಾ ನನ್ನು ಬಹಲೋಲ್ ಲೋದಿ ಸೋಲಿಸಿ ಸೈಯದ್ ಸಂತತಿಯನ್ನು ಕೊನೆಗೊಳಿಸಿದನು.

  -: ಲೋದಿ ಸಂತತಿ ( 1451-1526):-

* ಸ್ಥಾಪಕ – ಬಹುಲೋಲ್ ಲೋದಿ

* ದೇವನಹಳ್ಳಿ ನಾಳಿದ ಕೊನೆಯ ಸುಲ್ತಾನ ಸಂತತಿ.

* ಬಹುಲೋಲ್ ಲೋದಿ,ಸಿಕಂದರ್ ಲೋದಿ, ಇಬ್ರಾಹಿಂಲೋದಿ ಈ ಸಂತತಿಯ ಸುಲ್ತಾನರು.

* ಸಿಕಂದರ್ಲೋದಿಯು ಬಿಹಾರ,ಬಂಗಾಳ,ಧೋಲಪುರ್ ಮತ್ತು ಚೆಂದೇರಿಗಳನ್ನು ವಶಪಡಿಸಿಕೊಂಡನು.

* ಕೊನೆಯ ದೊರೆ ಇಬ್ರಾಹಿಂ ಲೋದಿ ಈತನ ಮೇಲೆ ದಾಳಿ ಮಾಡುವಂತೆ ರಾಜ್ಯಪಾಲರಾದ ಅಲಂ ಖಾನ್,ದೌಲತ್ ಖಾನ್ ಅಫ್ಗನ್ನ ರಿಗೆ ಆಮಂತ್ರಣ ನೀಡಿದರು ಅದರಂತೆ ಬಾಬರ್ ಭಾರತದ ಮೇಲೆ ದಾಳಿ ಮಾಡಿ 1526ರಲ್ಲಿ ಪಾಣಿಪತ್ ಕದನದಲ್ಲಿ ಇಬ್ರಾಹಿಂ ಲೋದಿಯನ್ನು ಸೋಲಿಸಿ.ಮೊಘಲರ ಆಳ್ವಿಕೆ ಪ್ರಾರಂಭಿಸಿದನು.

-: ದೆಹಲಿ ಸುಲ್ತಾನರ ಕೊಡುಗೆಗಳು:-

* ತೆರಿಗೆಗಳು :-

1) ಖರಾಜ್ – ಭೂತೆರಿಗೆ

2) ಜಕಾತ್, ಉಶ್ರು, ಖಮ್ಸ್ :- ಯುದ್ಧದಲ್ಲಿ ಲೂಟಿ ಮಾಡಿದ ಸಂಪತ್ತಿನ ತೆರಿಗೆ.

3) ಜೆಸಿಯಾ:- ವಾರಸುದಾರರಿಲ್ಲದ ಆಸ್ತಿ ಮೇಲೆ ತೆರಿಗೆ,ಆಮದು ಸುಂಕ, ಮನೆ ತೆರಿಗೆಗಳು.

* ಉತ್ಬಿ :- ಎಂಬ ವಿದ್ವಾಂಸ ಅರೇಬಿಕ್ ಭಾಷೆಯಲ್ಲಿ ‘ ತಾರಿಖ್ – ಇ – ಯಾವಿನಿ’ ಎಂಬ ಕೃತಿಯನ್ನು ರಚಿಸಿದನು.

* ಹಸನ್ ನಿಜಾಮಿಯೂ ‘ ತಾಜುಲ್ ಮಾಸಿಖ್’ ಎಂಬ ಗ್ರಂಥ ರಚಿಸಿದನು.

* ಜಿಯಾ ಉದ್ದಿನ್ ಬರನಿ – ತಾರಿಖ್ – ಇ – ಫಿರೋಜ್ ಷಾಹಿ

* ಅಮೀರ್ ಖುಸ್ರೋ 6 ಗ್ರಂಥಗಳನ್ನು ರಚಿಸಿದ್ದಾನೆ ಇವನನ್ನು ” ಭಾರತದ ಗಿಳಿ” ಎಂದು ಕರೆಯುವರು.

* ಫಿರೋಜ್ ತುಘಲಕ್ – ಪುತುಹತ್ – ಇ- ಫಿರೋಜ ಫಾಹಿ

* ದೆಹಲಿ ಸುಲ್ತಾನರು ಭಾರತಕ್ಕೆ ” ಇಂಡೋ ಇಸ್ಲಾಮಿಕ್” ಎಂಬ ಹೊಸ ವಾಸ್ತುಶಿಲ್ಪ ಪರಿಚಯಿಸಿದರು.

* ಇಂಡೋ ಇಸ್ಲಾಮಿಕ್ ಶೈಲಿಗೆ ಉದಾಹರಣೆ :- ದೆಹಲಿಯ ಕುವೈತ್ ಹುಲ್ ಇಸ್ಲಾಂ,ಕುತುಬ್ ಮಿನಾರ್,ಅಲೈದರ್ವಾಜಾ, ಜಮೈತ್ ಖಾನಾ ಮಸೀದಿಗಳು.

 -: ಭಾರತದ ಮತ ಪ್ರವರ್ತಕರು :-

  -: ಶಂಕರಾಚಾರ್ಯರು :-

* ಇವರು ಕೇರಳದ ಕಾಲಡಿ ಗ್ರಾಮದ ನಂಬೂದಿರಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.

* ತಂದೆ – ಶಿವಗುರು ತಾಯಿ – ಆರ್ಯಾಂಬ

* ಏಳನೇ ವಯಸ್ಸಿನಲ್ಲಿ ಎಲ್ಲಾ ಸ್ತೋತ್ರಗಳ ಪಾಂಡಿತ್ಯ ಪಡೆದಿದ್ದರು.

* ಗುರು – ಗೋವಿಂದ ಭಗವತ್ಪಾದರು ( ಇವರ ಬಳಿ ವೇದಶಾಸ್ತ್ರಗಳ ಅಧ್ಯಯನ ನಡೆಸಿದರು.)

* ಸಿದ್ಧಾಂತ -” ಅದ್ವೈತ ಸಿದ್ದಾಂತ ”

* ಇವರು ” ಬ್ರಹ್ಮನೊಬ್ಬನೇ ಸತ್ಯ,ಉಳಿದ ಜಗತ್ತು ಮಿತ್ಯ ರೂಪ, ಜೀವನ ಬ್ರಹ್ಮನೇ ಮತ್ತು ಜೀವ ಬ್ರಹ್ಮನಿಂದ ಬೇರೆ ಅಲ್ಲ” ಎಂದರು.

* ” ಜಗತ್ತು ಒಂದು ಮಾಯೆ,ಬ್ರಹ್ಮ ಮಾತ್ರ ಸತ್ಯ”

* ಜೀವಾತ್ಮನಿಗೆ ಪ್ರತ್ಯೇಕ ಅಸ್ತಿತ್ವವಿಲ್ಲವೆಂದು ಪ್ರತಿಪಾದಿಸಿದ ಶಂಕರರು ಇದನ್ನೇ ” ನಾನೇ ಬ್ರಹ್ಮನು”/ ” ಅಹಂ ಬ್ರಹ್ಮಾಸ್ಮಿ” ಎಂಬುದಾಗಿ ಪ್ರತಿಪಾದಿಸಿದರು.

* ಇವರ ಗ್ರಂಥಗಳು :- ಶಂಕರ ಭಾಷ್ಯ,ಆನಂದ ಲಹರಿ,ಸೌಂದರ್ಯ ಲಹರಿ, ಶಿವಾನಂದ ಲಹರಿ,ವಿವೇಕ ಚೂಡಾಮಣಿ, ಪ್ರಬುದ್ಧ ಸುಧಾಕರ, ಹಾಗೂ ದಕ್ಷಿಣಾ ಮೂರ್ತಿ ಸ್ತೋತ್ರ .

* ಇವರು ಭಜಗೋವಿಂದಾ ಸ್ತೋತ್ರವು ಅತ್ಯಂತ ಜನಪ್ರಿಯವಾಗಿದೆ.

* ಶಂಕರರು ಕಾಲ್ನಡಿಗೆಯಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತದಲ್ಲಿ ಸಂಚರಿಸಿ ತಮ್ಮ ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿದರು.

* ಅದ್ವೈತ ಸಿದ್ದಾಂತದ ಪ್ರಚಾರಕ್ಕಾಗಿ ಭಾರತದಲ್ಲಿ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿದರು.

1) ಬದರಿನಾಥ – ಜ್ಯೋತಿರ್ ಪೀಠ (ಉತ್ತರಾಖಂಡ)

2) ದ್ವಾರಕಾ -ಕಾಳಿಕಾ ಪೀಠ (ಗುಜರಾತ್)

3) ಶೃಂಗೇರಿ – ಶಾರದಾ ಪೀಠ (ಕರ್ನಾಟಕ)

4) ಪೂರಿ – ಗೋವರ್ಧನಪೀಠ ( ಒರಿಸ್ಸಾ )

  -: ರಾಮಾನುಜಾಚಾರ್ಯರು :-

* ಚೆನ್ನೈ ಹತ್ತಿರ ಶ್ರೀ ಪಿರಂಬದೂರು ಎಂಬ ಹಳ್ಳಿಯಲ್ಲಿ ಜನಿಸಿದರು.

* ತಂದೆ – ಕೇಶವ ಸೋಮಯಾಜಿ ತಾಯಿ – ಕಾಂತಿಮತಿ

* ಕಂಚಿಯಲ್ಲಿ ಯಾದವ ಪ್ರಕಾಶರ ಬಳಿ ವೇದ ಉಪನಿಷತ್ತುಗಳ ಅಧ್ಯಯನ ಮಾಡಿದರು.

* ಶ್ರೀರಂಗಕ್ಕೆ ತೆರಳಿ ಅಲ್ಲಿ ಮಠದ ಪೀಠಾಧೀಶರಾದರು.

* ಇವರು ವೈಷ್ಣವ ಮೂಲಕ ಪ್ರಚಾರ ಮಾಡಿದರು ಆದ್ದರಿಂದ ಶೈವ ಧರ್ಮಾವಲಂಬಿಯಾದ ಚೋಳ ದೊರೆಯ ಒಂದನೇ ಕುಲೋತಗ ಚೋಳ ಇವರಿಗೆ ಕಿರುಕುಳ ನೀಡಿದ್ದರಿಂದ ಮೇಲುಕೋಟೆಗೆ ಬಂದರು ಆಗ ಕರ್ನಾಟಕದಲ್ಲಿ ವಿಷ್ಣುವರ್ಧನ ದೊರೆಯು ಇವರನ್ನು ಸ್ವಾಗತಿಸಿದ ಇವರು “ಚೆಲುವ ನಾರಾಯಣ” ದೇವಾಲಯವನ್ನು ಕಟ್ಟಿಸಿದರು.

* ಗ್ರಂಥಗಳು :- ವೇದಾಂತ ಸಂಗ್ರಹ,ವೇದಾಂತ ಸಾರಾ, ವೇದಾಂತ ದೀಪಿಕಾ, ಶ್ರೀ ಭಾಷ್ಯ ಹಾಗೂ ಗೀತಾ ಭಾಷೆ

* ಪ್ರತಿಪಾದಿಸಿದ ಸಿದ್ಧಾಂತ – ವಿಶಿಷ್ಟಾದ್ವೈತ

* ಪ್ರತಿಪಾದಿಸಿದ ಮತ – ‘ಶ್ರೀ ವೈಷ್ಣವ ಮತ’ ಆದ್ದರಿಂದ ಇವರ ಶಿಷ್ಯರನ್ನು ಶ್ರೀವೈಷ್ಣವರು ಎಂದು ಕರೆಯಲಾಯಿತು.

* ಉತ್ತರದ ಸ್ವಂತ ರಮಾನಂದರು,ರಾಯ್ ದಾಸ ಇವರು ರಾಮಾನುಜರ ಸಿದ್ಧಾಂತದಿಂದ ಪ್ರಭಾವಿತರಾದರು. ಇದರಿಂದಾಗಿ ಉತ್ತರ ಭಾರತದಲ್ಲಿ ಭಕ್ತಿ ಪಂಥ ಬೆಳೆಯಲು ದಾರಿಯಾಯಿತು.

* ವಿಜಯನಗರ ತುಳುವ ,ಅರವಿಡು ದೊರೆಗಳು ಶ್ರೀ ವೈಷ್ಣವ ಪಂತದ ಅನುಯಾಯಿಗಳು.

* ದಕ್ಷಿಣ ಭಾರತದಲ್ಲಿನ ಕೆಲವು ಪ್ರಮುಖ ಶ್ರೀ ವೈಷ್ಣವ ಮಠಗಳು:-

1) ಯತಿರಾಜ ಮಠ – ಮೇಲುಕೋಟೆ ಮತ್ತು ಶ್ರೀ ಪಿರಂಬದೂರು

2) ಪರಕಾಲ ( ಬ್ರಹ್ಮತಂತ್ರ ಮಠ) – ಮೈಸೂರು

3) ಅಹೋಬಲ ಮಠ – ಅಹೋಬಲ (ಗುಂಟೂರು ಆಂಧ್ರ ಪ್ರದೇಶ)

4) ಅಂಡವನ್ ಮಠ – ಶ್ರೀರಂಗಂ

5) ವಾಮೈಮಲೈ ಮಠ – ಸುಚೀಂದ್ರ

  -: ಮಧ್ವಾಚಾರ್ಯರು :-

* ಕರ್ನಾಟಕದ ಉಡುಪಿ ಹತ್ತಿರದ ಪಾಜಕ ಗ್ರಾಮದಲ್ಲಿ ಜನಿಸಿದರು.

* ತಂದೆ – ನಡಿಲ್ಲಾಯ ನಾರಾಯಣ ಭಟ ತಾಯಿ – ವೇದವತಿ

* ಇವರ ಆರಾಧ್ಯ ದೈವ – ವಿಷ್ಣು

* ಗುರು – ಅಚ್ಯುತ ಪ್ರೇಕ್ಷಕರು

* ಸಿದ್ಧಾಂತ – ದ್ವೈತ

* ಹಡಗಿನಲ್ಲಿ ಗೋಪಿಚಂದನವೆಂಬ ಮಣ್ಣಿನ ಗುಡ್ಡೆಯಲ್ಲಿದ್ದ ಶ್ರೀ ಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು.

* ಅಷ್ಟಮಠಗಳು :- ಪಲಿಮಾರು,ಅದಮಾರು, ಕೃಷ್ಣಾಪುರ, ಪುತ್ತಿಗೆ, ಶಿರೂರು, ಸೋದೆ ಮಠ, ಕಾಣೆಯೂರು, ಪೇಜಾವರ.

* ವಿಷ್ಣು/ನಾರಾಯಣ ಒಬ್ಬನೇ ಸರ್ವೋತ್ತಮ ಎಂದರು.

* ಕೃತಿಗಳು :- ಗೀತಾ ಭಾಷ್ಯ,ಗೀತಾ ತಾತ್ಪರ್ಯ ನಿರ್ಣಯ, ಮಹಾಭಾರತ ತಾತ್ಪರ್ಯ ನಿರ್ಣಯ, ವಿಷ್ಣು  ತಾತ್ಪರ್ಯ ನಿರ್ಣಯ,ಭಾಗವತ ತಾತ್ಪರ್ಯ ನಿರ್ಣಯ,ಸೋತ್ರ ಭಾಷ್ಯ

 -: ಬಸವೇಶ್ವರರು :-

* ಇವರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಇಂಗಳೇಶ್ವರ ಎಂಬಲ್ಲಿ ಜನಿಸಿದರು. ” ವಿಶ್ವದ ಮಾನವರೆಲ್ಲರೂ ಸಮಾನರು ಹುಟ್ಟಿನಿಂದ ಯಾರು ಅಸ್ಪೃಶ್ಯರಲ್ಲ” ಎಂದರು.

* ತಂದೆ – ಮಾದರಸ  ತಾಯಿ – ಮಾದಲಾಂಬಿಕೆ

* ಶೈವ ಗುರುಗಳ ಸಾನಿಧ್ಯದಲ್ಲಿ ಲಿಂಗ ದೀಕ್ಷೆ ಪಡೆದರು.

* ವೀರಶೈವ ಮತವನ್ನು ಪ್ರಚಾರ ಪಡಿಸಿದರು.

* ತಮ್ಮ ಕಾರ್ಯ ದಕ್ಷತೆಯಿಂದ ಕಲಚೂರಿ ಅರಸ ಬಿಜ್ಜಳನ ಭಂಡಾರದ ಅಧಿಕಾರಿಯಾದರು.

* ಸಮಾಜದ ಸ್ವಾವಲಂಬನೆಗೆ ” ಕಾಯಕ ” ತತ್ವವನ್ನು ಪ್ರತಿಪಾದಿಸಿದರು. ” ಕಾಯಕವೇ ಕೈಲಾಸ ” ಎಂದು ಸಾರಿದರು.

* ತತ್ವ – ಶಕ್ತಿ ವಿಶಿಷ್ಟಾದ್ವೈತ

* ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ” ಅನುಭವ ಮಂಟಪ”ವನ್ನು ಸ್ಥಾಪಿಸಿದರು.

* ಪ್ರಮುಖ ಅನುಯಾಯಿಗಳು :- ಅಲ್ಲಮ ಪ್ರಭು,ಅಕ್ಕಮಹಾದೇವಿ, ಸಿದ್ದರಾಮಯ್ಯ, ಮೋಳಿಗೆ ಮಾರಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಮಾದರ ಚೆನ್ನಯ್ಯ, ಹರಳಯ್ಯ, ಕಿನ್ನರಿಬೊಮ್ಮಯ್ಯ.

WhatsApp Group Join Now
Telegram Group Join Now

Leave a Comment