-: ರಾಷ್ಟ್ರಪತಿಯವರ ಚುನಾವಣಾ ವಿಧಾನ :-
* 54ನೇ ವಿಧಿ -ರಾಷ್ಟ್ರಪತಿಯವರ ಚುನಾವಣೆಗೆ ಸಂಬಂಧಿಸಿದೆ
* 55ನೇ ವಿಧಿ – ಚುನಾವಣಾ ವಿಧಾನವನ್ನು ವಿವರಿಸುತ್ತದೆ.
* 56 ನೇ ವಿಧಿ – ಅಧಿಕಾರವಧಿ (5 years)
* ರಾಷ್ಟ್ರಪತಿಯವರನ್ನು ಲೋಕಸಭೆ ಮತ್ತು ರಾಜ್ಯಸಭೆಯ ಚುನಾಯಿತ ಸದಸ್ಯರು ರಾಜ್ಯಗಳ ಮತ್ತು ದೆಹಲಿ,ಪಾಂಡಿಚೆರಿ, ವಿಧಾನಸಭಾ ಚುನಾಯಿತ ಸದಸ್ಯರಿಂದ ಕೂಡಿದ ಮತದಾರರ ವರ್ಗ ಚುನಾಯಿಸುತ್ತದೆ.
* 57ನೇ ವಿಧಿ- ಮರು ಚುನಾವಣೆಗೆ ಅರ್ಹತೆ.
* 60ನೇ ವಿಧಿ – SC ನ ನ್ಯಾಯಾಧೀಶರು ಇವರಿಗೆ ಪ್ರಮಾಣವಚನ ಬೋಧಿಸುತ್ತಾರೆ.
* 58ನೇ ವಿಧಿ – ಅರ್ಹತೆಗಳು.
-> ಭಾರತದ ಪ್ರಜೆಯಾಗಿರಬೇಕು.
-> 35 ವರ್ಷಕ್ಕಿಂತ ಹೆಚ್ಚು ವಯೋಮಿತಿ ಹೊಂದಿರಬೇಕು.
-> ಸಂಸತ್ ಸದಸ್ಯರಾಗಲು ಇರಬೇಕಾದ ಅರ್ಹತೆಗಳನ್ನು ಹೊಂದಿರಬೇಕು.
* 61ನೇ ವಿಧಿ – ಮಹಾಭಿಯೋಗ.
-: ರಾಷ್ಟ್ರಪತಿಯವರ ಸಂವಿಧಾನಾತ್ಮಕ ಕರ್ತವ್ಯಗಳು ಹಾಗೂ ಜವಾಬ್ದಾರಿಗಳು :-
1) ಕಾರ್ಯಾಂಗ ಅಧಿಕಾರ:-
* ರಾಷ್ಟ್ರದ ಎಲ್ಲಾ ಆಡಳಿತವೂ ರಾಷ್ಟ್ರಪತಿಯವರ ಹೆಸರಿನಲ್ಲಿಯೇ ನಡೆಯುತ್ತವೆ.
* 75ನೇ ವಿಧಿಯ ಪ್ರಕಾರ ಪ್ರಧಾನಮಂತ್ರಿ ನೇಮಕ,ನಂತರ ಪ್ರಧಾನಿ ಸಲಹೆ ಮೇರೆಗೆ ಇತರೆ ಮಂತ್ರಿಗಳ ನೇಮಿಸುತ್ತಾರೆ.
* ಭಾರತದ ಉನ್ನತ ಹುದ್ದೆಗಳಾದ,ಅಟಾರ್ನಿ ಜನರಲ್ ಕಂಟ್ರೋಲರ್ ಅಂಡ್ ಎಡಿಟರ್ ಜನರಲ್(CAG), SC, HC ನ್ಯಾಯಾಧೀಶರು, ರಾಜ್ಯಪಾಲರು, ಹಣಕಾಸು ಆಯೋಗದ ಅಧ್ಯಕ್ಷರನ್ನು, ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ಚುನಾವಣಾ ಆಯುಕ್ತರನ್ನು, ರಕ್ಷಣಾ ಪಡೆಯ ತಂಡನಾಯಕರನ್ನು ನೇಮಿಸುವ ಅಧಿಕಾರ ರಾಷ್ಟ್ರಪತಿಯವರು ಹೊಂದಿರುತ್ತಾರೆ.
2) ಶಾಸನಾಧಿಕಾರ:-
* 85ನೇ ವಿಧಿ – ರಾಷ್ಟ್ರಪತಿಗಳ ಸಂಸತ್ತಿನ ಅಧಿವೇಶನ ಕರೆಯುವುದು,ಮುಂದೂಡುವುದು.
* 86ನೇ ವಿಧಿ – ರಾಷ್ಟ್ರಪತಿ ಎರಡು ಸದನಗಳ ಉದ್ದೇಶಿಸಿ ಮಾತನಾಡುವರು.
* ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ ಹೊಂದಿದ್ದಾರೆ.
* 331 ನೇ ವಿಧಿ ಅನ್ವಯ ಲೋಕಸಭೆಗೆ ಎರಡು ಆಂಗ್ಲೋ ಇಂಡಿಯನ್ ರನ್ನು ನೇಮಿಸುವ ಅಧಿಕಾರ ಹೊಂದಿದ್ದಾರೆ.
* ರಾಜ್ಯಸಭೆಗೆ 12 ಜನರನ್ನು ನಾಮಕರಣ ಮಾಡುವ ಅಧಿಕಾರವಿದೆ.
* ರಾಷ್ಟ್ರಪತಿಯವರು ಎಲ್ಲಾ ಅಧಿಕಾರಿಗಳನ್ನು ಪ್ರಧಾನ ಮತ್ತು ಮಂತ್ರಿಮಂಡಲದ ಸಲಹೆಯಂತೆ ನಿರ್ವಹಿಸುತ್ತಾರೆ.
3) ನ್ಯಾಯಾಂಗಾಧಿಕಾರ:-
* 72ನೇ ವಿಧಿ ಅನ್ವಯ ಕ್ಷಮಾದಾನ ನೀಡುವ,ಶಿಕ್ಷೆ ವಜಾ ಮಾಡುವ/ ಕಡಿಮೆ ಮಾಡುವ,ಶಿಕ್ಷೆಯ ಸ್ವರೂಪ ಬದಲಿಸುವ ಮತ್ತು ಮರಣದಂಡನೆಯನ್ನು ರದ್ದು ಮಾಡುವ ಅಧಿಕಾರ ಹೊಂದಿದ್ದಾರೆ.
* 143 ನೇ ವಿಧಿ ಅನ್ವಯ ರಾಷ್ಟ್ರಪತಿಯವರು ಕಾನೂನಾತ್ಮಕ ಹಾಗೂ ಸಾರ್ವಜನಿಕ ಮಹತ್ವ ಪಡೆದ ವಿಷಯಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಸಲಹೆ ಪಡೆಯಬಹುದು.
* 76ನೇ ವಿಧಿ ಅನ್ವಯ CAG ( ಅಟಾರ್ನಿ ಜನರಲ್) ನೇಮಕ ಮಾಡುವರು.
4) ಹಣಕಾಸಿನ ಅಧಿಕಾರಗಳು :-
* ರಾಷ್ಟ್ರಪತಿಯವರ ಅನುಮತಿ ಇಲ್ಲದೆ ಹಣಕಾಸಿನ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವಂತಿಲ್ಲ.
* 112 ನೇ ವಿಧಿ:- ಕೇಂದ್ರದ ವಾರ್ಷಿಕ ಮುಂಗಡ ಪತ್ರ ( Budget) ನ್ನು ರಾಷ್ಟ್ರಪತಿಯವರ ಒಪ್ಪಿಗೆಯ ಮೇರೆಗೆ ಮಂಡಿಸಲಾಗುತ್ತದೆ.
* 280 ನೇ ವಿಧಿಯ ಪ್ರಕಾರ ” ರಾಷ್ಟ್ರೀಯ ಹಣಕಾಸು ಆಯೋಗ” ರಚಿಸುವ ಅಧಿಕಾರವನ್ನು ಹೊಂದಿದ್ದಾರೆ.
5) ಮಿಲಿಟರಿ ಅಧಿಕಾರಗಳು:-
* ರಾಷ್ಟ್ರ ಅಧ್ಯಕ್ಷರು ಸಮಸ್ತ ಸೇನಾ ಪಡೆಗಳ ಮಹಾದಂಡ ನಾಯಕರಾಗಿದ್ದು,ಭೂಪಡೆ ,ವಾಯುಪಡೆ,ನೌಕಾಪಡೆಯ ದಂಡನಾಯಕರನ್ನು ಸಚಿವ ಸಂಪುಟದ ಸಲಹೆ ಮೇರೆಗೆ ನೇಮಿಸುತ್ತಾರೆ.
* ಸಂಸತ್ತಿನ ಒಪ್ಪಿಗೆಯ ಮೇರೆಗೆ ಯುದ್ಧ ಮತ್ತು ಶಾಂತಿಯನ್ನು ಘೋಷಿಸುವ ಅಧಿಕಾರ ಇವರಿಗಿದೆ.
6) ತುರ್ತು ಪರಿಸ್ಥಿತಿಯ ಅಧಿಕಾರಗಳು:-
* ಮೂರು ಸಂದರ್ಭಗಳಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಬಹುದು.
1) ರಾಷ್ಟ್ರೀಯ ತುರ್ತು ಪರಿಸ್ಥಿತಿ(352ನೇ ವಿಧಿ):-
ಇಡೀ ದೇಶಕ್ಕೆ ಅಥವಾ ದೇಶದ ಯಾವುದೇ ಭಾಗದ ಭದ್ರತೆಗೆ ಯುದ್ಧ/ಹೊರಗಿನ ಆಕ್ರಮಣಕ್ಕೆ ಧಕ್ಕೆ ಉಂಟಾದಾಗ/ ಆಂತರಿಕ ಗಲಭೆಗಳಿಂದ ಧಕ್ಕೆ ಉಂಟಾದರೆ ತುರ್ತು ಪರಿಸ್ಥಿತಿ ಘೋಷಿಸಬಹುದು
* ಭಾರತದಲ್ಲಿ ಇದುವರೆಗೆ ಮೂರು ಬಾರಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
1) 1962ರಲ್ಲಿ ಭಾರತ – ಚೀನಾ.
2) 1971ರಲ್ಲಿ ಭಾರತ – ಪಾಕಿಸ್ತಾನ ( ಬಾಹ್ಯ ತುರ್ತು ಪರಿಸ್ಥಿತಿಗಳು)
3) 1975 ರಲ್ಲಿ ಆಂತರಿಕ ದಂಗೆ (ಆಂತರಿಕ ತುರ್ತು ಪರಿಸ್ಥಿತಿ)
2) 356 ನೇ ವಿಧಿ ರಾಜ್ಯ ತುರ್ತು ಪರಿಸ್ಥಿತಿ:-
ರಾಜ್ಯ ಒಂದರ ರಾಜ್ಯಪಾಲರ ವರದಿ ಆಧಾರದ ಮೇಲೆ ಅಥವಾ ಇತರೆ ಕಾರಣಕ್ಕಾಗಿ ರಾಜ್ಯ ಸರ್ಕಾರ ಸಂವಿಧಾನದ ನಿಯಮಗಳಿಗೆ ಅನುಗುಣವಾಗಿ ಆಡಳಿತ ನಡೆಸದೇ ಇದ್ದರೆ 356ನೇ ವಿಧಿ ಅನ್ವಯ,ರಾಷ್ಟ್ರಪತಿಗಳು ತುರ್ತು ಪರಿಸ್ಥಿತಿ ಘೋಷಿಸಬಹುದು.
3) ಆರ್ಥಿಕ ತುರ್ತು ಪರಿಸ್ಥಿತಿ(360 ನೇ ವಿಧಿ):-
ದೇಶದ ಆರ್ಥಿಕ ಭದ್ರತೆಗೆ ತೊಂದರೆಯಾದರೆ ರಾಷ್ಟ್ರಪತಿಗಳು 360 ನೇ ವಿಧಿ ಅನ್ವಯ ಹಣಕಾಸಿನ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು ಆದರೆ ಇದನ್ನು ಇದುವರೆಗೂ ಘೋಷಿಸಿಲ್ಲ.
-: ರಾಷ್ಟ್ರಪತಿಗಳ ವಿವೇಚನಾಧಿಕಾರಗಳು:-
* ಲೋಕಸಭೆಯ ಸಾವರ್ತಿಕ ಚುನಾವಣೆಯಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯದಿದ್ದಾಗ ಯಾವುದೇ ಪಕ್ಷದ ನಾಯಕರನ್ನು ಸರ್ಕಾರ ರಚಿಸುವಂತೆ ಆಮಂತ್ರಿಸುವ ಅಧಿಕಾರವಿದೆ.
* ಸಂಸತ್ತು ಅಂಗೀಕರಿಸಿದ ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಿದಾಗ ಅದನ್ನು ಮತ್ತೊಮ್ಮೆ ಮರುಪರಿಶೀಲನೆಗೆ ವಾಪಸ್ಸು ಕಳುಹಿಸಬಹುದು.
* ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರವಿದೆ.
-: ಪ್ರಧಾನ ಮಂತ್ರಿ(prime minister):-
* ರಾಷ್ಟ್ರಪತಿಯವರು ರಾಷ್ಟ್ರದ ಮುಖ್ಯಸ್ಥರಾಗಿದ್ದಾರೆ,ಪ್ರಧಾನಿ ಸರ್ಕಾರದ ಮುಖ್ಯಸ್ಥರು.
* ಪ್ರಧಾನ ಮಂತ್ರಿ ಮಂತ್ರಿ ಮಂಡಲದ ಮುಖ್ಯಸ್ಥರು,ಸಚಿವ ಸಂಪುಟದ ಮುಖ್ಯಸ್ಥರಾಗಿದ್ದಾರೆ.
* 74(1) ವಿಧಿಯು – ಪ್ರಧಾನಿ ಹುದ್ದೆಗೆ ಅವಕಾಶ ಕಲ್ಪಿಸಿದೆ.
* 75ನೇ ವಿಧಿಯ ಪ್ರಕಾರ ರಾಷ್ಟ್ರಪತಿಗಳು ಪ್ರಧಾನಮಂತ್ರಿಯನ್ನು ನೇಮಿಸುತ್ತಾರೆ.
* ಅವಿಶ್ವಾಸ ಗೊತ್ತುವಳಿ:-
ಅಧಿಕಾರದಲ್ಲಿರುವ ಪ್ರಧಾನಮಂತ್ರಿ ಹಾಗೂ ಮಂತ್ರಿ ಮಂಡಲದ ಮೇಲೆ ಲೋಕಸಭೆಯನ್ನು ಬಹು ಸಂಖ್ಯಾತ ಸದಸ್ಯರು ವಿಶ್ವಾಸ ಕಳೆದುಕೊಂಡರೆ,ಸಮರ್ಥನೆಯನ್ನು ಹಿಂತೆಗೆದುಕೊಂಡರೆ ಪ್ರಧಾನಿ ಹಾಗೂ ಮಂತ್ರಿಮಂಡಲ ರಾಜೀನಾಮೆ ಕೊಡಬೇಕಾಗುತ್ತದೆ, ಇದನ್ನೇ” ಅವಿಶ್ವಾಸ ಗೊತ್ತುವಳಿ” ಎನ್ನುವರು.
* ರಾಜ್ಯಸಭಾ ಸದಸ್ಯರು ಹಾಗೂ ವಿಧಾನಪರಿಷತ್ ಸದಸ್ಯರಿಗೆ ಭಾಗವಹಿಸುವ ಅವಕಾಶ ನೀಡಿಲ್ಲ.
* ಭಾರತದಲ್ಲಿ ಇದುವರೆಗೆ ಸುಮಾರು 34 ಅವಿಶ್ವಾಸ ಗೊತ್ತುವಳಿ ನಿರ್ಣಯ ಅಂಗೀಕರಿಸಲಾಗಿದೆ.
-: ರಾಜ್ಯ ಸರ್ಕಾರ( State Government):-
ಭಾರತವು 28 ರಾಜ್ಯಗಳು 8 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಒಕ್ಕೂಟ ರಾಷ್ಟ್ರವಾಗಿದೆ.ರಾಜ್ಯಗಳು ಕೂಡ ತಮ್ಮದೇ ಆದ ಶಾಸಕಾಂಗ, ಕಾರ್ಯಾಂಗಗಳನ್ನು ಹೊಂದಿವೆ. ಸಂಸತ್ತಿನಂತೆ ರಾಜ್ಯಗಳು ಎರಡು ಸದನಗಳಿದ್ದು, ಕೆಲವು ಮಾತ್ರ( ವಿಧಾನಸಭೆ) ಹೊಂದಿದ್ದು,ಮೇಲ್ಮನೆ(ವಿಧಾನ ಪರಿಷತ್) ಇರುವುದಿಲ್ಲ.
-: ರಾಜ್ಯ ಶಾಸಕಾಂಗ(State Legislature/ವಿಧಾನಮಂಡಲ) 168ನೇ ವಿಧಿ :-
* ರಾಜ್ಯ ವಿಧಾನ ಮಂಡಲವು ರಾಜ್ಯಪಾಲರು,ವಿಧಾನಸಭೆ ಹಾಗೂ ವಿಧಾನ ಪರಿಷತ್ತನ್ನು ಹೊಂದಿರುತ್ತದೆ.
* ರಾಜ್ಯ ಶಾಸಕಾಂಗದ ಕೆಳಮನೆಯನ್ನು’ವಿಧಾನಸಭೆ’ ಮೇಲ್ಮನೆಯನ್ನು’ ವಿಧಾನ ಪರಿಷತ್’ ಎಂತಲೂ ಕರೆಯುವರು.
* ಸಂವಿಧಾನದ 168 ರಿಂದ 212 ರವರೆಗಿನ ವಿಧಿಗಳು ರಾಜ್ಯ ಶಾಸಕಾಂಗಕ್ಕೆ ಸಂಬಂಧಿಸಿವೆ.
-: ವಿಧಾನಸಭೆ(Legislative Assembly) ಜನತಾ ಸದನ:-
* 170 ನೇ ವಿಧಿ ಇದರ ರಚನೆಗೆ ಸಂಬಂಧಿಸಿದೆ.
* ವಿಧಾನಸಭೆ ಸದಸ್ಯರ ಸಂಖ್ಯೆ ಆ ರಾಜ್ಯದ ಜನಸಂಖ್ಯೆಯನ್ನು ಆಧರಿಸುತ್ತದೆ.ಅದೇ ರೀತಿ ವಿಧಾನ ಪರಿಷತ್ ಸದಸ್ಯರ ಸಂಖ್ಯೆಯು ಆ ರಾಜ್ಯದ ವಿಧಾನಸಭಾ ಸದಸ್ಯರ 1/3 ಭಾಗದಷ್ಟು ಇರುತ್ತದೆ.
* ವಿಧಾನಸಭಾ ಸದಸ್ಯರ ಸಂಖ್ಯೆ 500ಕ್ಕಿಂತ ಹೆಚ್ಚಿರಬಾರದು.60ಕ್ಕಿಂತ ಕಡಿಮೆ ಇರಬಾರದು.
* ಆದರೆ ಚಿಕ್ಕ ರಾಜ್ಯಗಳ ಸದಸ್ಯರ ಸಂಖ್ಯೆ ಕಡಿಮೆ ಇದೆ ಉದಾಹರಣೆ:- ಮಿಜೋರಾಂ ಮತ್ತು ಗೋವಾದಲ್ಲಿ ತಲಾ 40 ಸದಸ್ಯರಿದ್ದಾರೆ.
* ಕರ್ನಾಟಕ ವಿಧಾನ ಸಭೆಯ ಸದಸ್ಯರ ಸಂಖ್ಯೆ = 224+1( ಆಂಗ್ಲೋ ಇಂಡಿಯನ್)
-: 170 ನೇ ವಿಧಿಯ ಪ್ರಕಾರ ವಿಧಾನಸಭಾ ಸದಸ್ಯನಾಗಲು ಬೇಕಾದ ಅರ್ಹತೆಗಳು:-
* ಭಾರತದ ಪ್ರಜೆಯಾಗಿರಬೇಕು.
* ಕನಿಷ್ಠ 25 ವರ್ಷ ವಯಸ್ಸಾಗಿರಬೇಕು.
* ಕೇಂದ್ರ/ರಾಜ್ಯ ಸರ್ಕಾರದ ಯಾವುದೇ ಹುದ್ದೆಯಲ್ಲಿ ಇರಬಾರದು.
-: ಅಧಿಕಾರ ಅವಧಿ :-
* ಐದು ವರ್ಷ.
* ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿಯಲ್ಲಿರುವಾಗ ಒಂದು ಬಾರಿಗೆ ಒಂದು ವರ್ಷ ವಿಸ್ತರಿಸಬಹುದು.
* 178ನೇ ವಿಧಿ ಅನ್ವಯ ತಮ್ಮಲ್ಲಿ ಒಬ್ಬ ಸಭಾಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ.
* ಸಭಾಧ್ಯಕ್ಷರು ಸದನದಲ್ಲಿ ಶಾಂತಿ ಮತ್ತು ಶಿಸ್ತು ಕಾಪಾಡುತ್ತದೆ ಇವರ ನಿರ್ಣಾಯಕ ಮತ ಚಲಾಯಿಸುತ್ತಾರೆ.