ಕರ್ನಾಟಕದ ವಾಯುಗುಣ:- ಕರ್ನಾಟಕದಲ್ಲಿ ಉಷ್ಣವಲಯದ ಮಾನ್ಸೂನ್ ವಾಯುಗುಣವಿದೆ ಮತ್ತು ತೇವಾಂಶವುಳ್ಳ ಬೇಸಿಗೆ ತಂಪಾದ ಮತ್ತು ಶುಷ್ಕ ಚಳಿಗಾಲ ಈ ವಾಯುಗುಣದ ಪ್ರಮುಖ ಲಕ್ಷಣವಾಗಿದೆ.
-: ವಾಯುಗುಣದ ಋತುಗಳು :-
1) ಬೇಸಿಗೆ ಕಾಲ (ಮಾರ್ಚ್- ಮೇ)
2) ಮಳೆಗಾಲ ( ಜೂನ್-ಸೆಪ್ಟಂಬರ್)
3) ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ (ಅಕ್ಟೋಬರ್- ನವಂಬರ್)
4) ಚಳಿಗಾಲ (ಡಿಸೆಂಬರ್- ಫೆಬ್ರವರಿ)
1) ಬೇಸಿಗೆ ಕಾಲ:- (ಮಾರ್ಚ್- ಮೇ)
* ಈ ಕಾಲದಲ್ಲಿ ಅತಿಯಾದ ಶಾಖ,ಶುಷ್ಕ ಮತ್ತು ಸೆಖೆಯಿಂದ ಕೂಡಿರುತ್ತದೆ.
* ಏಪ್ರಿಲ್ ಇಂದ ಮೇ ತಿಂಗಳಲ್ಲಿ ಉಷ್ಣಾಂಶ ಗರಿಷ್ಠ ಮಟ್ಟವನ್ನು ತಲುಪುತ್ತದೆ.
* ರಾಯಚೂರಿನಲ್ಲಿ ಪ್ರತಿ ವರ್ಷ 45.6 ಸೆ ಉಷ್ಣಾಂಶ ದಾಖಲಾಗಿರುವುದರಿಂದ ಅದು ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿರುವ ಪ್ರದೇಶವಾಗಿದೆ.
* ಈ ಕಾಲದಲ್ಲಿ ಪರಿಸರಣ ಮಳೆಯಾಗುತ್ತದೆ ಇದು ಸಾಮಾನ್ಯವಾಗಿ ಅಪರಾಹ್ನ ಸಮಯದಲ್ಲಿ ಸಂಭವಿಸುತ್ತದೆ ಸಂಭವಿಸುತ್ತದೆ ಇದು ಕಾಫಿ ಗಿಡಗಳು ಹೂ ಬಿಡಲು ನೆರವಾಗುವುದರಿಂದ ಇದನ್ನು “ಮಾವಿನ ಹೂಯ್ಲು “ಎನ್ನುವರು.
* ಈ ಕಾಲದಲ್ಲಿ ರಾಜ್ಯದ ಒಟ್ಟು ವಾರ್ಷಿಕ ಮಳೆಯಲ್ಲಿ ಶೇಕಡಾ,7% ಭಾಗ ಮಳೆ ಪಡೆಯುತ್ತದೆ.
2) ಮಳೆಗಾಲ ( ಜೂನ್-ಸೆಪ್ಟಂಬರ್):-
* ಇದನ್ನು ” ನೈರುತ್ಯ ಮಾನ್ಸೂನ್ ಮಾರುತಗಳ ಕಾಲ ” ಎಂತಲೂ ಕರೆಯುತ್ತಾರೆ.
* ಅರಬ್ಬೀ ಸಮುದ್ರದ ಮೇಲಿಂದ ಬೀಸುವ ತೇವಾಂಶಭರಿತ ಮಾರುತಗಳನ್ನು ” ಮಲೆನಾಡು ಘಟ್ಟಗಳು ” ತಡೆದು ಅಧಿಕ ಮಳೆ ಸುರಿಸುತ್ತದೆ.
* ಆಗುಂಬೆ ಅಧಿಕ ಮಳೆ ಬೀಳುವ ಸ್ಥಳವಾಗಿದೆ.ಇದನ್ನು ” ದಕ್ಷಿಣ ಚಿರಾಪುಂಜಿ” ಎನ್ನುವರು.
* ಭಾಗಮಂಡಲ,ಮತ್ತು ಹುಲಿಕಲ್ ಗಳು ಇತರೆ ಅಧಿಕ ಮಳೆ ಪಡೆಯುವ ಸ್ಥಳಗಳಾಗಿವೆ.
* ಚಿತ್ರದುರ್ಗದ ಚಳ್ಳಕೆರೆ ಸಮೀಪ ನಾಯಕನಹಟ್ಟಿ ಅತಿ ಕಡಿಮೆ ಮಳೆ ಬೀಳುವ ಸ್ಥಳವಾಗಿದೆ.
* ಈ ಕಾಲದಲ್ಲಿ ಕರ್ನಾಟಕಕ್ಕೆ ಶೇ.80% ರಷ್ಟು ಮಳೆಯಾಗುತ್ತದೆ.
3) ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ ( ಅಕ್ಟೋಬರ್ ನವಂಬರ್):-
* ಇದನ್ನು ” ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ ” ಎಂತಲೂ ಕರೆಯುತ್ತಾರೆ.
* ಉತ್ತರ ಭಾರತದಲ್ಲಿ ಉಷ್ಣಾಂಶ ಕಡಿಮೆಯಾಗಿ ಒತ್ತಡ ಹೆಚ್ಚಾಗುವುದರಿಂದ ನೈರುತ್ಯ ಮಾನ್ಸೂನ ಮಾರುತಗಳು ಈಶಾನ್ಯದಿಂದ ನೈರುತ್ಯಕ್ಕೆ ಬೀಸುತ್ತ ನಿರ್ಗಮಿಸುತ್ತವೆ.
* ಬಂಗಾಳಕೊಲ್ಲಿಯಲ್ಲಾಗುವ ಚಂಡಮಾರುತಗಳ ಪ್ರಭಾವದಿಂದಲೂ ನವಂಬರ್ – ಡಿಸೆಂಬರ್ ತಿಂಗಳಲ್ಲಿ ಮಳೆಯಾಗುತ್ತದೆ.
* ಈ ಕಾಲದಲ್ಲಿ ಶೇ.12% ರಾಜ್ಯದಲ್ಲಿ ಮಳೆಯಾಗುತ್ತದೆ.
4) ಚಳಿಗಾಲ ( ಡಿಸೆಂಬರ್- ಫೆಬ್ರವರಿ):-
* ಸರಾಸರಿ ಉಷ್ಣಾಂಶ 25°-27° ಸೆ.
* ಜನವರಿ ಅತೀ ಕಡಿಮೆ ಉಷ್ಣಾಂಶ ದಾಖಲಾಗುವ ತಿಂಗಳು.
* ” ಕರ್ನಾಟಕ ಪ್ರವಾಸ ಮಾಸ” ಎನ್ನುವರು.
* ಬೆಳಗಾವಿಯಲ್ಲಿ ಕನಿಷ್ಠ ಉಷ್ಣಾಂಶ 6.7° ಇರುತ್ತದೆ.
* ರಾಜ್ಯದಲ್ಲಿ ಶೇ.1% ಮಳೆಯಾಗುತ್ತದೆ.
-: ಮಳೆಯ ಹಂಚಿಕೆ :-
ಮಲೆನಾಡು ಮತ್ತು ಕರಾವಳಿ ಭಾಗಗಳು ಅತೀ ಹೆಚ್ಚು ಮಳೆ ಪಡೆಯುವ ಪ್ರದೇಶಗಳಾಗಿವೆ.
-: ಕರ್ನಾಟಕದ ಮಣ್ಣುಗಳು :-
* ಇದರಲ್ಲಿ 04 ವಿಧಗಳು
1) ಕೆಂಪು ಮಣ್ಣು ( Red Soil ):-
* ಇದು ಗ್ರಾನೈಟ್, ನೀಸ್,ಶಿಲಾದ್ರವ್ಯಗಳಿಂದ ರೂಪಗೊಂಡಿದ್ದು, ಕಬ್ಬಿಣದ ಆಕ್ಸೈಡ್ ಇರುವುದರಿಂದ ಈ ಮಣ್ಣು ಕೆಂಪಾಗಿರುತ್ತದೆ.
* ಈ ಮಣ್ಣಿನಲ್ಲಿ ಹೆಚ್ಚು ಸುಣ್ಣ ಮತ್ತು ಉಪ್ಪಿನಂಶವಿದ್ದು,ಸಾವಯವ ವಂಶ ಕಡಿಮೆ.
* ಇದು ಅಷ್ಟೊಂದು ಫಲವತ್ತಾದ್ದಲ್ಲ ಮತ್ತು ತೇವಾಂಶ ಉಳಿಸಿಕೊಳ್ಳುವ ಸಾಮರ್ಥ್ಯ ಕಡಿಮೆ.
* ಬೆಳೆಗಳು:- ರಾಗಿ,ನವಣೆ, ಸಜ್ಜೆ, ಜೋಳ, ಹಾರಕ ಮತ್ತು ತಂಬಾಕು ಹಾಗೂ ದ್ವಿದಳ ಧಾನ್ಯಗಳು.
* ಭತ್ತ,,ತರಕಾರಿ ಅಡಿಕೆ, ತೆಂಗು, ಬಾಳೆ ಬೆಳೆಯುತ್ತಾರೆ.
* ಈ ಮಣ್ಣು ತುಮಕೂರು,ಬೆಂಗಳೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಕಂಡು ಬರುತ್ತದೆ.
2) ಕಪ್ಪು ಮಣ್ಣು:-
* ಇದು ಬಸಾಲ್ಟ್ ಶಿಲೆಯ ಶಿಥಿಲಿಕರಣದಿಂದಾಗಿದ್ದು,ಇದರಲ್ಲಿ ಹೆಚ್ಚು ಮೆಗ್ನೀಷಿಯಂ, ಅಲುಮಿನಿಯಂ ಮತ್ತು ಕಬ್ಬಿಣದ ಆಕ್ಸೈಡ್ ಗಳಿರುತ್ತದೆ.
* ಇದನ್ನು ” ಎರೆಮಣ್ಣು”/ ” ಕಪ್ಪು ಹತ್ತಿ ಮಣ್ಣು”( Black cotton Sail) ಎಂದು ಕರೆಯುವರು.
* ಇದಕ್ಕೆ ಹೆಚ್ಚು ದಿನ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಗುಣವಿದೆ.
* ಬೆಳೆಗಳು :- ಹತ್ತಿ,ಜೋಳ, ಕಡಲೆ, ಸೂರ್ಯಕಾಂತಿ, ಮೆಣಸಿನಕಾಯಿ, ಕಬ್ಬು, ತರಕಾರಿ ಮುಂತಾದವುಗಳು.
* ಹಂಚಿಕೆ :- ಧಾರವಾಡ,ಗದಗ, ಬಳ್ಳಾರಿ,, ಕೊಪ್ಪಳ, ಕಲ್ಬುರ್ಗಿ, ಯಾದಗಿರಿ, ಬಾಗಲಕೋಟೆ,, ಬೆಳಗಾವಿ, ರಾಯಚೂರುಗಳಲ್ಲಿ ಹಂಚಿಕೆಯಾಗಿದೆ.
3) ಜಂಬಿಟ್ಟಿಗೆ ಮಣ್ಣು :-
* ಇದು ಅಧಿಕ ಆದ್ರತೆ ಮತ್ತು ಮಳೆ ಬೀಳುವ ಭಾಗಗಳಲ್ಲಿ ಕಂಡುಬರುತ್ತದೆ.
* ಸಣ್ಣ ಮತ್ತು ಸಿಲಿಕೇಟ್ಗಳು ಮಳೆ ನೀರಿನಲ್ಲಿ ಕರಗಿ,ತಳದ ಮಣ್ಣಿನ ಸ್ತರಗಳಿಗೆ ಸಾಗಿಸಲ್ಪಡುತ್ತವೆ. ಕರಗದಂತಹ ಕಬ್ಬಿಣ, ಮತ್ತು ಅಲುಮಿನಿಯಂ ಗಳು ಮೇಲ್ಪದರದಲ್ಲೇ ಉಳಿಯುತ್ತವೆ.
* ಇದು ಮಳೆಗಾಲದಲ್ಲಿ ಮೃದುವಾಗಿ ಬೇಸಿಗೆಯಲ್ಲಿ ಒಣಗಿ ಗಟ್ಟಿಯಾಗಿ ಲ್ಯಾಟರೈಟ್ ಶಿಲೆಯಾಗುತ್ತದೆ.
* ಈ ಮಣ್ಣಿನಲ್ಲಿ ಗೋಡಂಬಿ,ಕಾಫಿ, ಚಹಾ,ಏಲಕ್ಕಿ, ಮೆಣಸು, ರಬ್ಬರ್, ತೆಂಗು ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ.
* ಉತ್ತರ ಕನ್ನಡ,ಉಡುಪಿ, ದಕ್ಷಿಣ ಕನ್ನಡ, ಕೊಡಗು,, ಚಿಕ್ಕಮಂಗಳೂರು,, ಶಿವಮೊಗ್ಗ ಬೆಳಗಾವಿ ಜಿಲ್ಲೆಗಳಲ್ಲಿ ಕಂಡು ಬರುತ್ತದೆ.
4) ಕರಾವಳಿ ಮೆಕ್ಕಲ ಮಣ್ಣು :-
* ನದಿ,ಸಮುದ್ರದ ಅಲೆಗಳಿಂದ ಸಾಗಿಸಲ್ಪಟ್ಟ ಮಣ್ಣು ಸಮುದ್ರ ತೀರದಲ್ಲಿ ಸಂಗ್ರಹವಾಗಿ, ನಿರ್ಮಾಣವಾಗುತ್ತದೆ. ಹೀಗಾಗಿ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಂಡು ಬರುತ್ತದೆ.
* ಇದರಲ್ಲಿ ಮರಳು ಮತ್ತು ಜೇಡಿ ಮಿಶ್ರಿತವಾಗಿರುವುದರ ಜೊತೆಗೆ ಕೊಳೆತ ಜೈವಿಕಾಂಶಗಳು ಕಂಡುಬರುತ್ತವೆ.
* ಬೆಳೆಗಳು:- ಭತ್ತ,ಗೋಡಂಬಿ, ತೆಂಗು, ಅಡಿಕೆ, ಬಾಳೆ ಮುಂತಾದ ಬೆಳೆಗಳು.
-: ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗ :-
ಪ್ರಕೃತಿದತ್ತವಾಗಿ ಬೆಳೆಯುವ ವಿವಿಧ ಸಸ್ಯ ಸಮುದಾಯವನ್ನು ” ಸ್ವಾಭಾವಿಕ ಸಸ್ಯವರ್ಗ” ಎನ್ನುವರು.ಪರಿಸರ ಸಮತೋಲನವನ್ನು ಕಾಪಾಡುವುದರಲ್ಲಿ ಸಸ್ಯವರ್ಗವು ಪ್ರಮುಖ ಪಾತ್ರ ವಹಿಸುತ್ತದೆ. ಕರ್ನಾಟಕದ ಕಾಡುಗಳಲ್ಲಿ ಶ್ರೀಗಂಧದ ಮರಗಳು ಬೆಳೆಯುವುದರಿಂದ ಕರ್ನಾಟಕವು” ಶ್ರೀಗಂಧದ ನಾಡು” ಎಂದು ಪ್ರಸಿದ್ಧಿಯಾಗಿದೆ.
-: ಸಸ್ಯವರ್ಗದ ವಿಧಗಳು :-
1) ನಿತ್ಯ ಹರಿದ್ವರ್ಣ ಕಾಡುಗಳು :-
* 250 ಸೆಂಟಿಮೀಟರ್ ಗಳಿಗಿಂತ ಅಧಿಕ ವಾರ್ಷಿಕ ಮಳೆ ಬೀಳುವ ಭಾಗಗಳಲ್ಲಿ ಈ ಕಾಡುಗಳು ಕಂಡುಬರುತ್ತವೆ.
* ಇವು ಅಧಿಕ ಮಳೆ ಮತ್ತು ಅಧಿಕ ಉಷ್ಣಾಂಶಗಳಿಂದ ಇಲ್ಲಿಯ ಮರಗಳು ದಟ್ಟವಾಗಿ ಬೆಳೆಯುತ್ತವೆ.
* ಸೂರ್ಯನ ಕಿರಣಗಳು ನೆಲಕ್ಕೆ ತಲುಪುವಂತೆ ದಟ್ಟವಾಗಿರುತ್ತವೆ.
* ಇಲ್ಲಿ ಪ್ರಮುಖವಾಗಿ ಬೀಟೆ,ತೇಗ, ಮತ್ತಿ, ನಂದಿ, ದೂಪ, ಹೊನ್ನೆ,ಹೆಬ್ಬಲಸು ಮರಗಳು ಬೆಳೆಯುತ್ತವೆ.
* ಈ ಕಾಡುಗಳು,ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಂಗಳೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಕಂಡುಬರುತ್ತವೆ.
2) ಎಲೆ ಉದುರುವ ಕಾಡುಗಳು :-
* ವಾರ್ಷಿಕವಾಗಿ 60 ರಿಂದ 120 cm ಮಳೆ ಬೀಳುವ ಭಾಗಗಳಲ್ಲಿ ಕಂಡುಬರುತ್ತವೆ.
* ನೀರಿನ ಆವಿಯನ್ನು ತಡೆಗಟ್ಟಲು ಚಳಿಗಾಲದಲ್ಲಿ ಎಲೆಯನ್ನು ಉದುರಿಸುತ್ತವೆ.
* ಪ್ರಮುಖ ಮರಗಳು:- ತೇಗ, ಹೊನ್ನೆ,ಮತ್ತಿ, ಬೇವು, ಮಾವು,ಹಲಸು, ಮುತ್ತುಗ ಬಾಗೆ, ಆಲ, ಶ್ರೀಗಂಧ ಮತ್ತು ಬಿದರು.
* ಜಿಲ್ಲೆಗಳು :- ಚಿಕ್ಕಮಂಗಳೂರು,ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಯ ಪೂರ್ವ ಭಾಗ, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ ಮುಂತಾದವು.
3) ಮಿಶ್ರ ಬಗೆಯ ಕಾಡುಗಳು :-
* ವಾರ್ಷಿಕವಾಗಿ 120 ರಿಂದ 150cm ಮಳೆ ಬೀಳುವ ಭಾಗಗಳಲ್ಲಿ ಕಂಡುಬರುತ್ತವೆ.
* ನಿತ್ಯ ಹರಿದ್ವರ್ಣ ಮತ್ತು ಎಲೆ ಉದುರುವ ಮರಗಳು ಬೆಳೆಯುವ ಸಸ್ಯವರ್ಗವೇ ಮಿಶ್ರ ಬಗೆಯ ಕಾಡುಗಳು.
* ಜಿಲ್ಲೆಗಳು :- ಉಡುಪಿ,ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗಿನ ಪೂರ್ವ ಭಾಗ, ಚಿಕ್ಕಮಂಗಳೂರು, ಹಾಸನ ಮತ್ತು ಮೈಸೂರಿನ ಕೆಲವು ಭಾಗಗಳಲ್ಲಿ ಕಂಡುಬರುತ್ತವೆ.
* ಪ್ರಮುಖ ಮರಗಳು :-ತೇಗ, ಹೊನ್ನೆ,ಮತ್ತಿ,ನಂದಿ, ದಿಂಡಿಗ,ಶ್ರೀಗಂಧ, ಹಲಸು ಮತ್ತು ಬಿದಿರು.
4) ಹುಲ್ಲುಗಾವಲು ಮತ್ತು ಕುರುಚಲು ಸಸ್ಯಗಳು :-
* 60 cm ಗಿಂತ ಕಡಿಮೆ ವಾರ್ಷಿಕ ಮಳೆ ಬೀಳುವ ಪ್ರದೇಶದಲ್ಲಿ ಕಂಡುಬರುತ್ತವೆ.
* ಪ್ರಮುಖ ಗಿಡಮರಗಳು:- ಕಳ್ಳಿ,ಕತ್ತಾಳಿ, ಕರಿ ಜಾಲಿ, ಬೇಲ,ಈಚಲು, ಹಂಚಿ ಕುಂತಿ, ಆಲ, ಬೇವು,ಅರಳಿ ಮುಂತಾದವು.
* ಜಿಲ್ಲೆಗಳು:- ಬೀದರ್,ಕಲ್ಬುರ್ಗಿ, ಯಾದಗಿರಿ, ರಾಯಚೂರ್, ಕೊಪ್ಪಳ, ವಿಜಯಪುರ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಕಂಡುಬರುತ್ತವೆ.
* ಕರಾವಳಿ ಅಂಚಿನಲ್ಲಿರುವ ನದಿ ಮುಖಜಭೂಮಿ,ಅಳಿವೆಗಳು ಹಾಗೂ ಮರಳು ದಂಡಗಳ ಭಾಗಗಳಲ್ಲಿ ಬಿಳಿಲುಗಳಿಂದ ಕೂಡಿದ ಸಸ್ಯಗಳಿವೆ ಇವು ಉಪ್ಪು ನೀರಿನಲ್ಲಿ ಬೆಳೆಯುವ ವಿಶಿಷ್ಟವಾದ ಸಾಮರ್ಥ್ಯವನ್ನು ಹೊಂದಿದೆ ಇದನ್ನೇ ” ಮ್ಯಾಂಗ್ರೋವ್ ಸಸ್ಯಗಳು ” ಎನ್ನುವರು.
* ಸುಮಾರು 1400 ಮೀಟರ್ ಎತ್ತರದಲ್ಲಿರುವ ಕುದುರೆಮುಖ,ಬಾಬಾಬುಡನ್ ಗಿರಿ,( ಇನಾಮ್ ದತ್ತಾತ್ರೇಯ ಪೀಠ) ಬಿಳಿಗಿರ್ ರಂಗನ್ ಬೆಟ್ಟ,ಕೊಡಗಿನ ಬ್ರಹ್ಮಗಿರಿ ಸರಣಿಗಳ ಇಳಿಜಾರುಗಳಿಂದ ಕೂಡಿವೆ. ಮತ್ತು ಈ ಭಾಗಗಳಲ್ಲಿ ” ಶೋಲಾ ಕಾಡುಗಳು ” ಬೆಳೆಯುತ್ತವೆ.
-: ಅರಣ್ಯಗಳ ಹಂಚಿಕೆ :-
* ಕರ್ನಾಟಕದಲ್ಲಿ ದಾಖಲಾದ ಅರಣ್ಯ ಪ್ರದೇಶ 43.4 ಲಕ್ಷ ಚದರ ಕಿಲೋಮೀಟರ್ಗಳು ಇದು ರಾಜ್ಯದ ಭೌಗೋಳಿಕ ಪ್ರದೇಶದಲ್ಲಿ ಶೇಕಡ 22,6 ರಷ್ಟಿದೆ.
* ಭಾರತದಲ್ಲಿ ಅರಣ್ಯಗಳನ್ನುಳ್ಳ ರಾಜ್ಯಗಳಲ್ಲಿ ಕರ್ನಾಟಕ ಏಳನೇ ಸ್ಥಾನದಲ್ಲಿದೆ.
* ಉತ್ತರ ಕನ್ನಡ ಜಿಲ್ಲೆಯ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿದೆ ನಂತರದ ಸ್ಥಾನದಲ್ಲಿ ಶಿವಮೊಗ್ಗ ಮತ್ತು ಚಾಮರಾಜನಗರ ಕ್ರಮವಾಗಿವೆ.
* ವಿಜಯಪುರ ಅತಿ ಕಡಿಮೆ ಅರಣ್ಯ ಹೊಂದಿದೆ.
-: ನಿಮಗಿದು ತಿಳಿದಿರಲಿ :-
* ಬೆಂಗಳೂರು ಸಮೀಪ ರಾಮೋಹಳ್ಳಿಯಲ್ಲಿ ಅತಿ ದೊಡ್ಡ ಆಲದ ಮರವಿದೆ.
* ಶಿಡ್ಲಘಟ್ಟದ ಟಿ ವೆಂಕಟಪುರ ಬಳಿ ಅತಿ ದೊಡ್ಡ ಬೇವಿನ ಮರವಿದೆ.
* ಸವಣೂರಿನ ಬಳಿ ಬೃಹತ್ ಹುಣಸ ಮರವಿದೆ.
-: ಪ್ರಾಣಿ ಸಂಪತ್ತು :-
* ಪ್ರಪಂಚದಲ್ಲಿ ಗುರುತಿಸಲ್ಪಟ್ಟ ಜೀವವೈವಿಧ್ಯ ಉಲ್ಲಾಸ ತಾಣ (Hot Spot ) ಗಳಲ್ಲಿ ಸಹ್ಯಾದ್ರಿ ಸರಣಿಗಳು ಸೇರುವೆ ಇತ್ತೀಚಿಗೆ ಅದು ವಿಶ್ವ ಪಾರಂಪರಿಕ ಪ್ರದೇಶವೆಂದು ಘೋಷಿಸಿದೆ.
* ಭಾರತದ ಒಟ್ಟು ಆನೆಗಳಲ್ಲಿ ಶೇಕಡ 25ರಷ್ಟು ಮತ್ತು ಹುಲಿಗಳಲ್ಲಿ ಶೇಕಡಾ 10ರಷ್ಟು ಭಾಗ ಕರ್ನಾಟಕದಲ್ಲಿವೆ.
* ಚಿರತೆ,ಕಾಡುಹಂದಿ,ಕಾಡೆಮ್ಮೆ, ಕಡವೇ, ಜಿಂಕೆ, ಕರಡಿ, ಮುಳ್ಳಂದಿ, ಮೊದಲಾದ ಪ್ರಾಣಿಗಳಿವೆ.
* ಕರ್ನಾಟಕದಲ್ಲಿ 5 ಹುಲಿ ಸಂರಕ್ಷಣಾ ವಲಯಗಳಿವೆ.
1) ಬಂಡಿಪುರ
2) ನಾಗರಹೊಳೆ
3) ಭದ್ರಾ
4) ಅಣಸಿ
5) ಬಿಳಿಗಿರಂಗ ಬೆಟ್ಟ
* ಕರ್ನಾಟಕದ ಪ್ರಸಿದ್ಧ ಪಕ್ಷಿಧಾಮ ರಂಗನತಿಟ್ಟು ( ಮಂಡ್ಯ) ಮತ್ತು ಇದು ಇತ್ತೀಚೆಗೆ ” ರಾಮ್ ಸಾರ್ ತಾಣ”ಕ್ಕೆ ಸೇರಿದ ಕರ್ನಾಟಕದ ಮೊದಲ ಪ್ರದೇಶವಾಗಿದೆ.
* ಕರ್ನಾಟಕದಲ್ಲಿ 5 ರಾಷ್ಟ್ರೀಯ ಉದ್ಯಾನವನಗಳಿವೆ.
1) ಬಂಡಿಪುರ
2) ಬನ್ನೇರುಘಟ್ಟ
3) ನಾಗರಹೊಳೆ
4) ಅಂಶಿ
5) ಕುದುರೆಮುಖ