-: ಕೊನೆಯ ಅಹೋಮ್ – ಮೊಘಲ್ ಯುದ್ಧ :- ಇಟಕುಲಿ ಕದನ.
* ” ಸರಾಯ್ ಫಾಟ್ ” ಯುದ್ಧ ಮುಗಿದ ವರ್ಷದಲ್ಲೇ ಲಚಿತ್ ತೀವ್ರ ಅನಾರೋಗ್ಯದಿಂದ ತೀರಿಕೊಂಡನು.
* ಅಹೋಮ್ ಜನರು ಕೊಟ್ಟ ಹೊಡೆತ ಹೇಗಿತ್ತೆಂದರೆ ಮುಂದೆ 11 ವರ್ಷಗಳ ಕಾಲ ಮೊಘಲರು ಇತ್ತ ತಲೆಯನ್ನೇ ಹಾಕಲಿಲ್ಲ.
* 1682 ರಲ್ಲಿ ಮೊಘಲರು ಮತ್ತೆ ಅಹೋಮರ್ ಮೇಲೆ ದಾಳಿ ಮಾಡಿದರು.
* ಅಹೋಮ್ ಮತ್ತು ಮೊಘಲರ ನಡುವೆ ನಡೆದ ಕೊನೆಯ ಯುದ್ಧದಲ್ಲಿ ಅಹೋಮರ ರಾಜನಾಗಿದ್ದವನು – ಗಧಾಧರ ಸಿಂಘ
* ಮೊಘಲರ ಸೇನೆ ಮನ್ಸೂರ್ ಖಾನ್ ಎಂಬುವವನ ನೇತೃತ್ವದಲ್ಲಿ ಮುತ್ತಿಗೆ ಹಾಕಿತು. ಈ ಸಲ ಮೊಘಲರನ್ನು ಅತ್ಯಂತ ಯಶಸ್ವಿಯಾಗಿ ಸೋಲಿಸಿ ಓಡಿಸಿದ ಗಧಾಧರ ಸಿಂಘ ಮೊಘಲರ ವಶದಲ್ಲಿದ್ದ ಎಲ್ಲಾ ಅಹೋಮ್ ಪ್ರಾಂತ್ಯಗಳನ್ನು ತನ್ನ ಕೈಗೆ ತೆಗೆದುಕೊಂಡು ಗೆದ್ದುಕೊಂಡನು.
* ಮೊಘಲರನ್ನು ಬ್ರಹ್ಮಪುತ್ರದ ಎಲ್ಲಾ ಭೂಭಾಗಗಳಿಂದ ಓಡಿಸಿ ಮಾನಸ ನದಿಯವರೆಗೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು. ಈ ನಿರ್ಣಾಯಕ ಕದನವನ್ನು ಇಟಕುಲಿ ಕದನವೆಂದು ಕರೆಯಲಾಗಿದೆ. ಇದು ಅಹೋಮ್ ಮತ್ತು ಮೊಘಲರ ನಡುವೆ ನಡೆದ ಕೊನೆಯ ಯುದ್ಧವಾಗಿದೆ.
* ಅಹೋಮ್ ಸೇನೆಯು ಮೊಘಲರನ್ನು 17 ಚಿಕ್ಕ ಮತ್ತು ದೊಡ್ಡ ಯುದ್ಧಗಳಲ್ಲಿ ನಿರಂತರವಾಗಿ ಸೋಲಿಸಿತು.
* 1228 ರಲ್ಲಿ ಸ್ಥಾಪನೆಯಾದ ಅಹೋಮ್ ಸಾಮ್ರಾಜ್ಯ 598 ವರ್ಷಗಳ ದೀರ್ಘ ಆಡಳಿತವನ್ನು ನಡೆಸಿ 1826ರಲ್ಲಿ ಕೊನೆಗೊಂಡಿದೆ.
* ( ಒಮ್ಮೆ ಬ್ರಹ್ಮಪುತ್ರ ನದಿ ದಂಡೆಯಲ್ಲಿ ಮೊಘಲರ ವಿರುದ್ಧ ನಡೆದ ಕಾಲದಲ್ಲಿ ಲಚಿತ್ ಸೋದರ ಮಾವ ಇದ್ದ ಮಾಡಲು ಉದಾಸೀನನಾಗಿ ಎಲ್ಲಾ ಸೈನಿಕರನ್ನು ಅವರವರ ಗೂಡಾರಗಳಿಗೆ ಕಳುಹಿಸಿ ನಿದ್ರೆಗೆ ಜಾರಿದನು .ಇದರಿಂದ ಕೋಪಗೊಂಡ ರಚಿತ ತನ್ನ ಮಾವನ ತಲೆಯನ್ನು ಕತ್ತರಿಸಿ ” ನನಗೆ ನನ್ನ ಮಾವನಿಗಿಂತ ನನ್ನ ಸಾಮ್ರಾಜ್ಯದ ಹಿತವೇ ಮುಖ್ಯ ” ಎಂದನು ಅದರ ಮರು ದಿನವೇ ನಡೆದ ಮೊಘಲರ ವಿರುದ್ಧದ ಕಾಳಗದಲ್ಲಿ ಲಚಿತ್ ಪೌರುಷದಿಂದ ಆ ಹೋರಾಟ ಅಹೋಮ್ ಸಾಮ್ರಾಜ್ಯಕ್ಕೆ ಗೆಲುವು ತಂದು ಕೊಟ್ಟ.)
-: ಭಾರತದಲ್ಲಿ ಮೊಘಲರ ಆಳ್ವಿಕೆ (1526-1707):-
* ಭಾರತದಲ್ಲಿ ಮೊಘಲ್ ಸಾಮ್ರಾಜ್ಯದ ಸ್ಥಾಪಕ – ಬಾಬರ್
* ಬಾಬರ್ ನ ತಂದೆ ” ಉಮರ್ ಶೇಖ್ ” ಮಿರ್ಜಾ ಅಫ್ಘಾನಿಸ್ತಾನದ ಚಿಕ್ಕ ರಾಜ್ಯವಾದ ಪರ್ಘಾನದ ದೊರೆಯಾಗಿದ್ದನು ತಂದೆಯ ಮರಣದಿಂದ ಬಾಬರ್ 11ನೇ ವಯಸ್ಸಿನಲ್ಲಿ ಪರ್ಘಾನದ ಸಿಂಹಾಸನವನ್ನೇರಿದ.
* ದೆಹಲಿ ಸುಲ್ತಾನನಾಗಿದ್ದ ಇಬ್ರಾಹಿಂ ಲೋಧಿಯನ್ನು 1526ರಲ್ಲಿ ನಡೆದ ಮೊದಲ ಪಾಣಿಪತ್ ಕದನದಲ್ಲಿ ಸೋಲಿಸಿ ಭಾರತದಲ್ಲಿ ಮೊಘಲ್ ಸಾಮ್ರಾಜ್ಯ ಸ್ಥಾಪಿಸಿದನು.ಇವನ ರಾಜಧಾನಿ – ದೆಹಲಿ
* 1526ರಲ್ಲಿ ಬಾಬರ್ ಒಂದನೇ ಪಾಣಿಪತ್ ಕದನದಲ್ಲಿ ಇಬ್ರಾಹಿಂ ಲೋಧಿಯನ್ನು ಸೋಲಿಸಿದನು.
* 1527ರಲ್ಲಿ ರಾಣಾ ಸಂಗ್ರಾಮ್ ಸಿಂಗನನ್ನು ಕಣ್ವ ಕದನದಲ್ಲಿ ಸೋಲಿಸಿದನು.
* 1528 ರಲ್ಲಿ ಚಂದೇರಿಯ ಮೇದಿನಿರಾಯ್ ನನ್ನು ಸೋಲಿಸಿದನು.
* 1529 ರಲ್ಲಿ ಫಾಗ್ರಾ ( ಬಾಬರನ ಕೊನೆಯ ಯುದ್ಧ) ಕದನದಲ್ಲಿ ಇಬ್ರಾಹಿಂ ಲೋದಿಯ ಸಹೋದರ ಮೊಹಮ್ಮದ್ ಲೂಧಿಯನ್ನು ಸೋಲಿಸಿದನು.
* ತುಝಕ್ – ಇ-ಬಾಬರಿ / ಬಾಬರ ನಾಮ ವನ್ನ ಬಾಬರ್ ತುರ್ಕಿ ಭಾಷೆಯಲ್ಲಿ ಬರೆದನು.
* ಈ ಗ್ರಂಥದಲ್ಲಿ ರಾಜಕೀಯ ಸಂಘಟನೆಯಲ್ಲದೆ ವಿವಿಧ ನಾಡುಗಳ ಪ್ರಾಕೃತಿಕ ಸೌಂದರ್ಯ ಅಲ್ಲಿನ ಪ್ರಾಣಿ ಸಂಕುಲ,ಸಸ್ಯವರ್ಗ,ಪಕ್ಷಿ, ತೋಟಗಳ ಬಗ್ಗೆ ವರ್ಣಿಸಲಾಗಿದೆ.
* ಬಾಬರ್ ಕವಿ ಹಾಗೂ ಉತ್ತಮ ಚರಿತ್ರಕಾರನಾಗಿದ್ದನು.
* ತುಜುಕ್ – ಇ – ಬಾಬರಿಯನ್ನು ಪರ್ಶಿಯನ್ ಭಾಷೆಗೆ ಭಾಷಾಂತರಿಸಿದವನು ?
-> ಅಬ್ದುಲ್ ರಹೀಮ್ ಖಾನ್
* ಬಾಬರನ ಸಮಾಧಿ – ಕಾಬುಲ್
* ಬಾಬರನ ಮಕ್ಕಳು – ಹುಮಾಯೂನ್, ( ಬಾಬರನ ಹಿರಿಯ ಮಗ )ಕಮ್ರಾನ್,ಆಸ್ಕರಿ, ಹಿಂಡಾಲ್
-: ಹುಮಾಯೂನ್ (1530-1540,1555-1556):-
* ಹುಮಾಯೂನ್ ಎಂದರೆ ಅದೃಷ್ಟವಂತ.
* ಹುಮಾಯೂನ್ ನಾಮಾ ಬರೆದವರು – ಗುಲ್ಬದನ್ ಬೇಗಂ
* ಹುಮಾಯೂನ್ ನಿರ್ಮಿಸಿದ ವಸ ನಗರ – ದೀನ್ ಪನ್ನಾ
* 1539 ರಲ್ಲಿ ನಡೆದ ಚೌಸಾ ಕದನದಲ್ಲಿ ಷೇರ್ – ಷಾ ನಿಂದ ಸೋತ ಹುಮಾಯೂನ್ ನೀರು ತರುವ ನಾವಿಕನ ಸಹಾಯದಿಂದ ತಪ್ಪಿಸಿಕೊಂಡು ಆಗ್ರಾ ತಲುಪಿದನು.
* ಹುಮಾಯೂನ್ ಪ್ರಾಣ ಉಳಿಸಿದ ನಾಯಕನಾದ ನಿಜಾಂ ಖಾನ್ನಿಗೆ ಕೊಟ್ಟ ಮಾತಿನಂತೆ ಒಂದು ದಿನ ಸಿಂಹಾಸನದ ಮೇಲೆ ಕುಳ್ಳಿರಿಸಿದನು. ಈ ಘಟನೆಯನ್ನು ಏಕ್ ದಿನ್ ಕಾ ಸುಲ್ತಾನ್ ಎನ್ನುವರು .
-: ಮೊಘಲರ ವಸತಿ ನಿಲಯ :-
* ಹುಮಾಯೂನ್ ಸಮಾಧಿ ( ಹುಮಾಯೂನ್ ಪತ್ನಿ ಹಾಜೀಬೇಗಂ ಕಟ್ಟಿಸಿದಳು.
* 1993ರಲ್ಲಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದೆ.
* ಸಮಾಧಿ ದೆಹಲಿಯಲ್ಲಿದೆ.
-: ಶೇರ್ ಷಾ :-
* ಸೂರ್ ಮನೆತನದ ಸ್ಥಾಪಕ – ಶೇರ್ ಷಾ – ಇವನ ಮೊದಲ ಹೆಸರು ಫರೀದ್,
* ಶೇರ್ ಷಾ ದಕ್ಷಿಣ ಬಿಹಾರದ ದೊರೆಯಾಗಿದ್ದ ‘ ಬಹಾರ್ ಖಾನ್ ‘ ಲೋಹಣಿಯ ಸೇವೆಯಲ್ಲಿದ್ದಾಗ ಒಬ್ಬನೇ ಹುಲಿಯನ್ನು ಕೊಂದಿದ್ದರಿಂದ ಫರೀದನಿಗೆ ಶೇರ್ ಖಾನ್ ಎಂಬ ಬಿರುದು ಬಂದಿತ್ತು.
* ಬಾಬರ್ ಭಾರತದಲ್ಲಿ ಆಡಳಿತ ವಹಿಸಿಕೊಂಡ ನಂತರ ಆತನ ಸೇವೆಗೆ ಸೇರಿ ಮಹತ್ವದ ಪಾತ್ರವಹಿಸಿದನು.
-: ಶೇರ್ ಷಾ ನ ಆಡಳಿತ ವ್ಯವಸ್ಥೆ :-
* ಈತನ ಸಾಮ್ರಾಜ್ಯ ಅಸ್ಸಾಂ,ಗುಜರಾತ್ ಮತ್ತು ಕಾಶ್ಮೀರಗಳನ್ನು ಹೊರತುಪಡಿಸಿ ಇಡೀ ಉತ್ತರ ಭಾರತವನ್ನು ಒಳಗೊಂಡಿತ್ತು.
* ಶೇರ್ ಷಾ ನ ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳಲು ದಿವಾನ್ – ಇ-ಇನ್ಸಾ, ದಿವಾನ್-ಇ-ಆರಿಜ್, ದಿವಾನ್-ಇ-ಖಾಜಾ ಮತ್ತು ಬರೀದ್ – ಇ – ಮುಮಾಲಿಕ್ ಎಂಬ ಉಪ ಇಲಾಖೆಗಳಿದ್ದವು.
-: ಶೇರ್ ಷಾ ನ ಕಾಲದ ಪ್ರಮುಖ ನಾಲ್ಕು ರಾಜ್ಯ ಮಾರ್ಗಗಳು :-
1) ಸೋನಾರಗಾಂವದಿಂದ ಆರಂಭಿಸಿ ಆಗ್ರಾ,ದಿಲ್ಲಿ ಮತ್ತು ಲಾಹೋರ್ ಗಳ ಮೂಲಕ ಸಿಂಧೂ ನದಿ ತೀರದವರೆಗೆ ಈ ಮಾರ್ಗವನ್ನು ‘ ಸಡಕ್- ಇ-ಆಜಂ’ ಎಂದು ಕರೆದರು.
2) ಆಗ್ರಾ ದಿಂದ ಬರಾಹನಪುರ
3) ಆಗ್ರಾ ದಿಂದ ಚಿತ್ತೋಡದವರೆಗೆ
4) ಲಾಹೋರದಿಂದ ಮುಲ್ತಾನಡೆವರೆಗೆ.
* ರಾಜಮಾರ್ಗದ ಎರಡು ಬದಿಗೆ ನೆರಳು ನೀಡುವ ಮರಗಳನ್ನು ಹಾಗೂ ಪ್ರವಾಸಿಗರಿಗೆ ನೆರವಾಗಲು 1700 ವಿಶ್ರಾಂತಿ ಗೃಹಗಳನ್ನು ( ಸರಾಯಿ ) ನಿರ್ಮಿಸಿದ್ದರು.
* ಶೇರ್ ಷಾ ” ದಾಮ್” ಎಂಬ ಬೆಳ್ಳಿಯ ನಾಣ್ಯವನ್ನು ಜಾರಿಗೆ ತಂದನು ಈತನ ಬೆಳ್ಳಿಯ ರೂಪಾಯಿ ನಾಣ್ಯದ ತೂಕ 180 ಗುಲಗಂಜಿ ಇದನ್ನು ಎಲ್ಲಾ ಮೊಘಲ್ ದೊರೆಗಳು ಮುಂದುವರಿಸಿಕೊಂಡು ಬಂದರು.
-: ಅಕ್ಬರ್ :-
* ಮೊಘಲ್ ಅರಸರಲ್ಲಿ ಅತ್ಯಂತ ಪ್ರಸಿದ್ಧ ಹಾಗೂ ಮೊಘಲರ ಏಕೈಕ ಅನಕ್ಷರಸ್ಥ ದೊರೆ.
* ಅಕ್ಬರ್ ಸಿಂಧ್ ನ ಅಮರಕೋಟೆಯಲ್ಲಿ ಜನಿಸಿದನು.
* ಹೂಮಾಯೂನ್ ನ ಮರಣದ ನಂತರ ಬಂಗಾಳದ ದೊರೆ ಮೊಹಮದ್ ಅಬ್ದಾಲಿಯ ದಂಡನಾಯಕನಾದ ಹೇಮು ದೆಹಲಿ ಮತ್ತು ಆಗ್ರಾಗಳನ್ನು ವಶಪಡಿಸಿಕೊಂಡನು ಹೀಗಾಗಿ 1556ರಲ್ಲಿ ಹೇಮು ಮತ್ತು ಅಕ್ಬರ್ ನಡುವೆ ಎರಡನೇ ಪಾಣಿಪತ್ ಕದನ ನಡೆಯಿತು ಈ ಯುದ್ಧದಲ್ಲಿ ಅಕ್ಬರ್ ಜಯಶಾಲಿಯಾದನು ಈ ಸಂದರ್ಭದಲ್ಲಿ ಅಕ್ಬರ್ ನ ನೆರವಿಗೆ ಆತನ ರಾಜ ಪ್ರತಿನಿಧಿ ಹಾಗೂ ಪ್ರಧಾನಮಂತ್ರಿಯಾಗಿದ್ದ ಬೈರಾಮ್ ಖಾನ್ನು ಬಂದನು.
* ಅಕ್ಬರ್ ತನ್ನ ಬೃಹತ ಸೈನ್ಯದ ಬಲದಿಂದ ಮಾಳ್ವ,ಜೈಪುರ, ಗೊಂಡ್ವಾನ್, ಚಿತ್ತೋಡ, ರಣತಂಬೂರ್, ಕಾಲಿಂಜರ್,ಗುಜರಾತ್,ಬಂಗಾಳ ರಾಜ್ಯಗಳ ಮೇಲೆ ವಿಜಯ ಸಾಧಿಸಿದನು.
* 1576ರಲ್ಲಿ ಜೂನ್ 18 ರಂದು ಅಕ್ಬರ್ ದಂಡ ನಾಯಕ ಮಾನಸಿಂಗ್ ರಾಣಾ ಪ್ರತಾಪ್ ಸಿಂಗನನ್ನು ಹಳದಿಘಾಟ್ ಕದನದಲ್ಲಿ ಸೋಲಿಸಿದನು.
* 1585ರಲ್ಲಿ ಕಾಬುಲ್ ಆಕ್ರಮಣದ ಸಂದರ್ಭದಲ್ಲಿ ಅಕ್ಬರ್ ನ ಮಿತ್ರ ಬೀರಬಲ್ ಪ್ರಾಣ ಕಳೆದುಕೊಂಡನು.
* ಅಕ್ಬರ್ನು 1582ರಲ್ಲಿ ” ದೀನ್ – ಇ-ಇಲಾಯಿ” ಎಂಬ ಹೊಸ ಪಂಥವನ್ನು ಸ್ಥಾಪಿಸಿದನು. ದಿನ್ – ಇ – ಇಲಾಯಿ ಸಾರ್ವರೋಡನೇ ಶಾಂತಿ( ಸಲ್-ಇ-ಕುಲ್ ) 8 ತತ್ವವನ್ನು ಆಧರಿಸಿತ್ತು.
* ದೀನ್ – ಇ- ಇಲಾಯಿಯ ಧರ್ಮದ ಧಾರ್ಮಿಕ ಗುರು-ಅಬ್ದುಲ್ ಪಜಲ್.
* ಅಕ್ಬರ್ ಹಿಂದುಗಳ ಮೇಲಿನ ‘ ಜಿಜಿಯಾ’ ತೆರಿಗೆಯನ್ನು ರದ್ದುಗೊಳಿಸಿದ.
* ಔರಂಗಜೇಬ ಈ ತೆರಿಗೆಯನ್ನು ಪುನಹ ಪ್ರಾರಂಭಿಸುತ್ತಾನೆ.
* ಅಕ್ಬರನಿಗೆ ಸರ್ಕಾರದ ಆಡಳಿತದಲ್ಲಿ ನೆರವು ನೀಡಲು ವಕೀಲ್,ದಿವಾನ್, ಮೀರ್ ಬಕ್ಷಿ ಹಾಗೂ ಮುಖ್ಯ ಸದರ್ ಗಳೆಂಬ 04 ಜನ ಮಂತ್ರಿಗಳಿದ್ದರು.
* ಅಕ್ಬರ್ ಜುಬ್ತಿ ಪದ್ಧತಿ ( ರೈತವಾರಿ ಪದ್ಧತಿ) ಜಾರಿಗೆ ತಂದನು.
* ಅಕ್ಬರ್ ಪತೇಪುರ್ ಸಿಕ್ರಿಯಲ್ಲಿ ದೌಲತ್ ಖಾನ್, ಖ್ವಾಜಾ ಭಾಘ, ದಪ್ತರ್ ಖಾನಾ, ಇಬಾದತ್ ಖಾನಾ, ಮುಕ್ತಬ ಖಾನ್, ಜೋಧಾಬಾಯಿ ಅರಮನೆ,ಪಂಚಮಹಲ್, ಬೀರಬಲ್ಲಮನೆ, ಕಬುತರ್ ಖಾನಾ ಮುಂತಾದ ಸ್ಮಾರಕಗಳನ್ನು ನಿರ್ಮಿಸಿದ್ದಾನೆ.