ಕರ್ನಾಟಕದ ಖನಿಜ ಸಂಪನ್ಮೂಲಗಳು

* ಭಾರತದಲ್ಲಿ ಕಬ್ಬಿಣದ ಅದಿರಿನ ಉತ್ಪಾದನೆಯಲ್ಲಿ ಕರ್ನಾಟಕವು 2ನೇ ಸ್ಥಾನದಲ್ಲಿದೆ.

* ಕರ್ನಾಟಕದಲ್ಲಿ 75% ಕಬ್ಬಿಣದ ಅದಿರಿನ ಗಣಿಗಳಿವೆ.

* ಕರ್ನಾಟಕದಲ್ಲಿ ಅತಿ ಹೆಚ್ಚು ಕಬ್ಬಿಣದ ನಿಕ್ಷೇಪ ಹೊಂದಿರುವ ಜಿಲ್ಲೆ – ಬಳ್ಳಾರಿ 2 ನೇ ಜಿಲ್ಲೆ – ಚಿಕ್ಕಮಂಗಳೂರು.

* ಕುದುರೆಮುಖ ರಾಷ್ಟ್ರೀಯ ಉದ್ಯಾನವನ – ಚಿಕ್ಕಮಗಳೂರು

* ರಾಜ್ಯದಲ್ಲಿ ಉತ್ಪಾದನೆಯಾಗುವ ಕಬ್ಬಿಣದ ಅದಿರನ್ನು ಭದ್ರಾವತಿ ಮತ್ತು ಬಳ್ಳಾರಿ ಸಮೀಪದ ಜಿಂದಾಲ್ ವಿಜಯನಗರ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳಿಗೆ ಉಪಯೋಗಿಸಿ ಉಳಿದ ಭಾಗವನ್ನು ರಫ್ತು ಮಾಡಲಾಗುತ್ತದೆ.

   -: ಮ್ಯಾಂಗನೀಸ್ :-

* ಮ್ಯಾಂಗನೀಸ್ ಅದಿರು ಮುಖ್ಯವಾಗಿ ಪದರುಶಿಲೆ ಮತ್ತು ರೂಪಾಂತರ ಶಿಲೆಗಳಲ್ಲಿ ಆಕ್ಸೈಡ್ ರೂಪದಲ್ಲಿ ದೊರೆಯುತ್ತದೆ.

* ಇದನ್ನು ” ಬಹು ಉಪಯೋಗಿ ಖನಿಜ ” ಎನ್ನುವರು.

* ದೇಶದ ಒಟ್ಟು ನಿಕ್ಷೇಪದಲ್ಲಿ 27% ಭಾಗ ಹೊಂದಿದೆ.

* ಮ್ಯಾಂಗನೀಸ್ ಉತ್ಪಾದನೆಯಲ್ಲಿ ಓಡಿಶಾದ ನಂತರ ಕರ್ನಾಟಕವು 2 ನೇ ಸ್ಥಾನದಲ್ಲಿದೆ.

* ರಾಜ್ಯದಲ್ಲಿ 90% ಮ್ಯಾಂಗನೀಸ್ ನ್ನು ” ಸಂಡೂರು ”ನಲ್ಲಿ ಉತ್ಪಾದಿಸಲಾಗುತ್ತದೆ.

  -: ಮ್ಯಾಂಗನೀಸ್ ನ ಪ್ರಮುಖ ನಿಕ್ಷೇಪಗಳು :-

* ಶಿವಮೊಗ್ಗ – ಶಂಕರಗುಡ್ಡ, ಹೊಸಳ್ಳಿ, ಕುಂಸಿ

* ಚಿತ್ರದುರ್ಗ – ಸಾದರಹಳ್ಳಿ

* ತುಮಕೂರು – ಚಿಕ್ಕನಾಯಕನಹಳ್ಳಿ

* ಉತ್ತರ ಕನ್ನಡ – ಶಿರಸಿ,ಸೂಪ,ಲೊಂಡ, ಉಸ್ಕಾಂಡ

* ಧಾರವಾಡ

* ವಿಜಯಪುರ

* ಚಿಕ್ಕಮಗಳೂರು

  -: ಬಾಕ್ಸೈಟ್ :-

* ಈ ಅದಿರನ್ನು ಅಲುಮಿನಿಯಂ ಲೋಹವನ್ನು ಉತ್ಪಾದಿಸಲು ಅಧಿಕವಾಗಿ ಬಳಸುತ್ತಾರೆ.

* ನಿಕ್ಷೇಪಗಳು :- ಬೆಳಗಾವಿ,ಚಿಕ್ಕಮಂಗಳೂರು, ದಕ್ಷಿಣ ಕನ್ನಡ, ಉಡುಪಿ.

* ಬೆಳಗಾವಿಯೂ ಬಾಕ್ಸೈಟ್ ಉತ್ಪಾದಿಸುವ ಜಿಲ್ಲೆಯಾಗಿದೆ.

* ಬೆಳಗಾವಿ ಮತ್ತು ಖಾನಾಪುರದಲ್ಲಿ ಉತ್ಪಾದಿಸುವ ಅದಿರನ್ನು ಬೆಳಗಾವಿಯ ಅಲುಮಿನಿಯಂ ಕಂಪನಿಯ ಕೈಗಾರಿಕೆಯಲ್ಲಿ ಬಳಸಲಾಗುತ್ತದೆ.

     -: ಚಿನ್ನ :-

* ಅಪರೂಪದ,ಹೊಳೆಯುವ, ಹೆಚ್ಚು ಬೆಲೆ ಬಾಳುವ ಲೋಹ.

* ಭಾರತದಲ್ಲಿ ಅತಿ ಹೆಚ್ಚು ಚಿನ್ನ ಉತ್ಪಾದಿಸುವ ರಾಜ್ಯ – ಕರ್ನಾಟಕ

* 1880 ರಲ್ಲಿ  ” ಜಾನ್ ಟೇಲರ್ ” ಎಂಬುವವನು ಕೋಲಾರದಲ್ಲಿ ಚಿನ್ನದ ಗಣಿಗಾರಿಕೆ ಪ್ರಾರಂಭಿಸಿದನು.

* 1885 ರಲ್ಲಿ ಕೆಜಿಎಫ್ ಅಸ್ತಿತ್ವಕ್ಕೆ ಬರಲು ಕಾರಣವಾಯಿತು.

* ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ನಾಲ್ಕು ಪ್ರಮುಖ ಗಣಿಗಳಿವೆ.

1) ನಂದಿದುರ್ಗ

2) ಮೈಸೂರು ಗಣಿ

3) ಉರಿಗಾಂ

4) ಚಾಂಪಿಯನ್ ರೀಪ್

* ದೇಶದ ಅತ್ಯಂತ ಆಳದ ಗಣಿ – ಚಾಂಪಿಯನ್ ರಿಪ್(3217 KM ) ಇದು ಸ್ಥಗಿತಗೊಂಡಿದೆ.

* ಪ್ರಸ್ತುತ ಭಾರತದ ಅತಿ ದೊಡ್ಡ ಚಿನ್ನದ ಗಣಿ – ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ.

* ತುಮಕೂರು ಜಿಲ್ಲೆಯ,ಬೆಳ್ಳಾರ, ಸಿರಾ ಸಮೀಪವಿರುವ ಅಜ್ಜನಹಳ್ಳಿ ಯಲ್ಲಿ ಚಿನ್ನದ ಅದಿರು ಉತ್ಪಾದಿಸಲಾಗುತ್ತದೆ.

* ಗದಗ ಜಿಲ್ಲೆಯ ಮುಳಗುಂದ,ಕಪ್ಪದಗುಡ್ಡ, ಹಾಸನ ಜಿಲ್ಲೆಯ ಕೆಂಪಿನ ಕೋಟೆ ಮುಂತಾದ ಕಡೆ ಚಿನ್ನದ ನಿಕ್ಷೇಪಗಳಿವೆ.

-: ಕರ್ನಾಟಕದಲ್ಲಿ ಸಾರಿಗೆ ವ್ಯವಸ್ಥೆ :-

* ಕರ್ನಾಟಕದಲ್ಲಿ ಹಾದು ಹೋಗುವ ಅತಿ ಉದ್ದವಾದ ರಾಷ್ಟ್ರೀಯ ಹೆದ್ದಾರಿ – NH13

* NH13 :- ಮಂಗಳೂರು -ಮೂಡಬಿದ್ರಿ-ಕೊಪ್ಪ- ಶಿವಮೊಗ್ಗ- ಚಿತ್ರದುರ್ಗ- ಹೊಸಪೇಟೆ- ಇಳಕಲ್- ವಿಜಯಪುರ ಮಾರ್ಗವಾಗಿ ಸೊಲ್ಲಾಪುರವನ್ನು ಸೇರುತ್ತದೆ.

* ಪ್ರಸ್ತುತ ಕರ್ನಾಟಕದಲ್ಲಿ 14 ರಾಷ್ಟ್ರೀಯ ಹೆದ್ದಾರಿಗಳಿವೆ.

* ಇವುಗಳ ಒಟ್ಟು ಉದ್ದ -4491 KM

* ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿರದ ಜಿಲ್ಲೆಗಳು

-> ರಾಯಚೂರು

-> ಕೊಡಗು

* NH4 ಮತ್ತು NH7ಗಳು ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಸುವರ್ಣ ಚತುಷ್ಕೋನ ಹೆದ್ದಾರಿ ಯೋಜನೆ ಹಾಗೂ ಕಾರಿಡಾರ್ ಯೋಜನೆಗಳಿಗೆ ಸೇರಿವೆ.

* ರಾಜ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳು :- NH-13, NH-17, NH- 48,NH – 206, NH – 209, NH -212

  -: ರಾಜ್ಯ ಹೆದ್ದಾರಿಗಳು :-

* ರಾಜ್ಯದಲ್ಲಿ 20,905 KM ಉದ್ದದ ರಾಜ್ಯ ಹೆದ್ದಾರಿ ಇದೆ.

* ಅತಿ ಉದ್ದದ ರಾಜ್ಯ ಹೆದ್ದಾರಿ ಹೊಂದಿರುವ ಜಿಲ್ಲೆ -ಬೆಳಗಾವಿ

* ಅತಿ ಕಡಿಮೆ ಉದ್ದದ ರಾಜ್ಯ ಹೆದ್ದಾರಿ ಹೊಂದಿರುವ ಜಿಲ್ಲೆ – ಬೆಂಗಳೂರು

  -: ಜಿಲ್ಲಾ ರಸ್ತೆಗಳು :-

* ಜಿಲ್ಲಾ ರಸ್ತೆಗಳು ಜಿಲ್ಲಾ ಪಂಚಾಯಿತಿಗೆ ಸೇರುತ್ತವೆ.

* 47,836 ಕಿಲೋಮಿಟರ್ ಉದ್ದದ ಜಿಲ್ಲಾ ರಸ್ತೆಗಳಿವೆ.

* ಅತಿ ಹೆಚ್ಚು ಜಿಲ್ಲಾ ರಸ್ತೆಗಳನ್ನು ಒಳಗೊಂಡ ಜಿಲ್ಲೆ – ತುಮಕೂರು.

* ಅತಿ ಕಡಿಮೆ ಜಿಲ್ಲಾ ರಸ್ತೆಗಳನ್ನು ಒಳಗೊಂಡ ಜಿಲ್ಲೆ – ರಾಯಚೂರು.

* ಕರ್ನಾಟಕದಲ್ಲಿ 1,47,212 ಕಿಲೋಮೀಟರ್ ಗ್ರಾಮೀಣ ರಸ್ತೆಗಳಿವೆ.

      -: ರೈಲು ಸಾರಿಗೆ :-

* ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ರೈಲು ಸಂಚಾರ ಆರಂಭವಾಗಿದ್ದು – 1864 ರಲ್ಲಿ ಇದನ್ನು ಬೆಂಗಳೂರು ಮತ್ತು ಮದ್ರಾಸ್ ನಗರಗಳ ಮಧ್ಯೆ,ಮದ್ರಾಸ್ ರೈಲ್ವೇ ಕಂಪನಿ ನಿರ್ಮಿಸಿತು.1956ರ ವೇಳೆಗೆ 2595 ಕಿಲೋಮೀಟರ್ಗಳಿದ್ದು ಅದು ದಕ್ಷಿಣ ರೈಲ್ವೆ ವಲಯಕ್ಕೆ ಸೇರಿತ್ತು.ಈಗ ನೈರುತ್ಯ ರೈಲ್ವೆ ವಲಯವು ಅಸ್ತಿತ್ವಕ್ಕೆ ಬಂದಿದೆ. ಇದರ ಕೇಂದ್ರ ಕಚೇರಿ – ಹುಬ್ಬಳ್ಳಿ ಕರ್ನಾಟಕದಲ್ಲಿ ಇಂದು ಒಟ್ಟು – 3244 ಕಿಲೋಮೀಟರ್ ಉದ್ದದ ರೈಲು ಮಾರ್ಗಗಳಿವೆ.

* ರೈಲು ಮಾರ್ಗ ಹೊಂದಿರದ ಜಿಲ್ಲೆ – ಕೊಡಗು

   -: ಕೊಂಕಣ ರೈಲು :-

* ಇದು ಪಶ್ಚಿಮ ಕರಾವಳಿಯ ಮಹತ್ವಪೂರ್ಣವಾದ ರೈಲು ಮಾರ್ಗ.

* ಇದು ಮಂಗಳೂರು – ಮುಂಬೈ ನಡುವಿನ ಪ್ರಯಾಣದ ಅವಧಿ 41 ಗಂಟೆಗಳಿಂದ 18 ಗಂಟೆಗಳಿಗೆ ಕಡಿಮೆಯಾಗಿದೆ, ಇದರ ಉದ್ದ ಕರ್ನಾಟಕದಲ್ಲಿ – 273 ಕಿಲೋಮೀಟರ್

* ಇದರಲ್ಲಿ 13 ಪ್ರಮುಖ ಮತ್ತು 310 ಇತರೆ ಸೇತುವೆಗಳಿವೆ. ಅವುಗಳಲ್ಲಿ ಶರಾವತಿ ಸೇತುವೆ(22K M) ಅತ್ಯಂತ ಉದ್ದವಾಗಿದೆ ಕಾಳಿ ನದಿ ಸೇತುವೆ (1.2 KM ) ಉದ್ದವಾಗಿದೆ.

   -: ಮೆಟ್ರೋ ರೈಲು :-

* 2011 ಅಕ್ಟೋಬರ್ 20ರಂದು ಬೆಂಗಳೂರು ನಗರದ ಬೈಯಪ್ಪನಹಳ್ಳಿಯಿಂದ  M G ರಸ್ತೆಯವರೆಗೂ ಕಾರ್ಯಾರಂಭಗೊಂಡಿದೆ.

    -: ವಾಯು ಸಾರಿಗೆ :-

* ಕರ್ನಾಟಕದಲ್ಲಿ ಮೊದಲು ವಿಮಾನಯಾನ 1946ರಲ್ಲಿ ಬೆಂಗಳೂರು – ಹೈದ್ರಾಬಾದ್ ಮಧ್ಯೆ ” ಡೆಕ್ಕನ್ ಏರ್ವೇಸ್ ” ಎಂಬ ಕಂಪನಿಯು ಪ್ರಾರಂಭಿಸಿತು.

* ಭಾರತೀಯ ವಿಮಾನ ಸಂಚಾರವು 1953ರಲ್ಲಿ ರಾಷ್ಟ್ರೀಕರಣಗೊಂಡು ಇಂಡಿಯನ್ ಏರ್ಲೈನ್ಸ್ ಸಂಸ್ಥೆ ಆರಂಭಗೊಂಡ ಮೇಲೆ ಬೆಂಗಳೂರಿನಿಂದ ವಿವಿಧ ಕೇಂದ್ರಗಳಿಗೆ ವಿಮಾನಯಾನದ ಸೌಲಭ್ಯವು ಕಲ್ಪಿಸಲಾಯಿತು.

* ರಾಜ್ಯದ ರಾಜಧಾನಿ ಬೆಂಗಳೂರು 1996ರಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವೆಂದು ಘೋಷಿಸಲ್ಪಟ್ಟಿತು.

* ಬೆಳಗಾವಿ,ಹುಬ್ಬಳ್ಳಿ, ಮೈಸೂರು, ಮಂಗಳೂರಿನಲ್ಲಿ ದೇಶಿಯ ವಿಮಾನ ನಿಲ್ದಾಣಗಳಿವೆ ಹೊಸದಾಗಿ ಕಲ್ಬುರ್ಗಿಯಲ್ಲಿ ನಿರ್ಮಾಣಗೊಂಡಿದೆ.

* ಈ ಹಿಂದೆ ಬೆಂಗಳೂರು ನಗರದ HAL ವಿಮಾನ ನಿಲ್ದಾಣದಲ್ಲಿದ್ದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅಲ್ಲಿದ್ದ 34 ಕಿ.ಮೀ ದೂರದಲ್ಲಿ ದೇವನಹಳ್ಳಿಗೆ ದಿನಾಂಕ 24 5 2018 ರಂದು ಸ್ಥಳಾಂತರಿಸಲಾಗಿದೆ.

* HAL ವಿಮಾನ ನಿಲ್ದಾಣವನ್ನು ಈಗ ಪೈಲೆಟ್ಗಳ ತರಬೇತಿಗೆ ಬಳಸಲಾಗುತ್ತಿದೆ.

* ಹೊಸದಾಗಿ ನಿರ್ಮಿಸಿದ ದೇವನಹಳ್ಳಿ ವಿಮಾನ ನಿಲ್ದಾಣವು ಭಾರತದ ಮೊದಲ ಹಸಿರು ಕ್ಷೇತ್ರದ ವಿಮಾನ ನಿಲ್ದಾಣವಾಗಿದೆ. ( Green field Airport )

    -: ಜಲ ಸಾರಿಗೆ :-

* ಹಡಗು ನಿಲ್ಲುವ ಸಮುದ್ರ ತೀರದ ಸ್ಥಳವನ್ನು ಬಂದರುಗಳು ಎನ್ನುವರು.

* ಕರ್ನಾಟಕದಲ್ಲಿ 25 ಸಣ್ಣ ಮತ್ತು ದೊಡ್ಡ ಪ್ರಮಾಣದ ಬಂದರುಗಳಿವೆ.

* 1957ರಲ್ಲಿ ಬಂದರು ಅಭಿವೃದ್ಧಿ ಇಲಾಖೆಯು ಸ್ಥಾಪಿ ತಗೊಂಡು ಸೌಲಭ್ಯಗಳ ವಿಸ್ತರಣೆ ಆರಂಭಗೊಂಡಿತು.

* ನವಮಂಗಳೂರು 1974 ಮೇ 4ರಂದು ಭಾರತದ 9ನೇ ಬಂದರಾಗಿ ಘೋಷಿಸಲ್ಪಟ್ಟಿದೆ.

* ಇದನ್ನು ” ಕರ್ನಾಟಕದ ಹೆಬ್ಬಾಗಿಲು ” ಎಂದು ಕರೆಯುವರು.

* ಹಳೆಯ ಮಂಗಳೂರು ಬಂದರು,ಮಲ್ಪೆ, ಹಂಗಾರಕಟ್ಟೆ,ಕುಂದಾಪುರ, ಪಡುಬಿದ್ರಿ, ಭಟ್ಕಳ, ಹೊನ್ನಾವರ, ಬೇಲಿಕೇರಿ, ತದ್ರಿ,ಮತ್ತು ಕಾರವಾರ ಪ್ರಮುಖ ಬಂದರುಗಳಾಗಿವೆ.

* ಕಾರವಾರ ಬಂದರು ಅತಿ ಸುಂದರವಾದ ಬಂದರು ಎಂದು ಪ್ರಸಿದ್ಧಿ .

* ಇದು ಸರ್ವ ಋತು ಬಂದರಾಗಿದ್ದು ತನ್ಮೂಲಕ ಕಬ್ಬಿಣದ ಅದಿರು,ಮ್ಯಾಂಗನೀಸ್,ಗ್ರಾನೈಟ್ ಹಾಗೂ ವ್ಯವಸಾಯ ಉತ್ಪನ್ನಗಳು ರಫ್ತು ಆಗುತ್ತದೆ.

  -: ರಾಷ್ಟ್ರೀಯ ಭಾವೈಕ್ಯ :-

* ಒಂದು ರಾಷ್ಟ್ರದ ಜನ ನಾವೆಲ್ಲ ಒಂದೇ ಎನ್ನುವ ಭಾವನೆ ರಾಷ್ಟ್ರೀಯ ಭಾವೈಕ್ಯ

* ಈ ದೇಶದಲ್ಲಿ 1652 ಭಾಷೆ ಮತ್ತು ಉಪಭಾಷೆಗಳನ್ನು ಮಾತನಾಡುವ ಜನರಿದ್ದಾರೆ.

* 22 ಭಾಷೆಗಳನ್ನು ನಮ್ಮ ಸಂವಿಧಾನ ಅಂಗೀಕರಿಸಿದೆ.

* ಭಾರತವು ವಿವಿಧ ಭಾಷೆಗಳ ತವರೂರಾಗಿದೆ.

* ಭಾರತ ಒಂದು ಜಾತ್ಯತೀತ ರಾಷ್ಟ್ರ, ಧರ್ಮವಿರೋಧಿ ರಾಷ್ಟ್ರವಲ್ಲ.

-: ಸಾಮಾಜಿಕರಣ ಹಾಗೂ ಕುಟುಂಬದ ಸಂಬಂಧಗಳು :-

* ಮಾನವನು ಸಾಮಾಜಿಕ ವ್ಯಕ್ತಿಯಾಗಿ ರೂಪಗೊಳ್ಳುವ ಕ್ರಿಯೆ – ಸಾಮಾಜಿಕರಣ .

* ತಾಯಿಯೇ ಮಗುವಿನ ಮೊದಲ ಗುರು.

  -: ಸಮುದಾಯ :-

* ಅತಿ ಹೆಚ್ಚು ಬುಡಕಟ್ಟು ಜನಾಂಗವನ್ನು ಹೊಂದಿರುವ ದೇಶ – ಆಫ್ರಿಕಾ

* ಅತಿ ಹೆಚ್ಚು ಬುಡಕಟ್ಟು ಜನಾಂಗವನ್ನು ಹೊಂದಿರುವ ಎರಡನೇ ದೇಶ – ಭಾರತ

WhatsApp Group Join Now
Telegram Group Join Now

Leave a Comment