* ಕಾನ್ಸ್ಟಾಂಟಿನೋಪಲ್ ‘ ಯುರೋಪಿನ ವ್ಯಾಪಾರದ ಹೆಚ್ಚಾಗಿಲೇಂದೆ ‘ ಪರಿಗಣಿಸಲ್ಪಟ್ಟಿತ್ತು.
* 1453 ರಲ್ಲಿ ಅಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಳ್ಳುವ ಮೂಲಕ ಯುರೋಪಿಯನ್ನರಿಗೆ ಭಾರತಕ್ಕೆ ಬರುವ ಮಾರ್ಗ ಮುಚ್ಚಲ್ಪಟ್ಟಿತು.
* ವಾಸ್ಕೋ – ಡ – ಗಾಮನು 1998 ರಲ್ಲಿ ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ” ಕಾಪ್ಪಡ್ / ಕಪ್ಪಡ ಗ್ರಾಮ ಎಂಬಲ್ಲಿಗೆ ಬಂದು ತಲುಪಿದನು.
* 1869ರಲ್ಲಿ ಕೆಂಪು ಸಮುದ್ರ ಮತ್ತು ಮೆಡಿಟೇರಿಯನ್ ಸಮುದ್ರಗಳನ್ನು ಸಂಪರ್ಕಿಸುವಂತೆ ಭೂಮಿ ಅಗೆದು ಸಂಚಾರಕ್ಕೆ ಅನುಕೂಲವಾಗುವಂತೆ ಭಾರಿ ಕಾಲುವೆಯೊಂದನ್ನು ಈಜಿಪ್ಟ್ ಭೂ ಪ್ರದೇಶದಲ್ಲಿ ನಿರ್ಮಿಸಲಾಯಿತು.ಇದೇ ಪ್ರಸಿದ್ಧ ಸೂಯೆಜ್ ಕಾಲುವೆ .ಈ ಕಾಲುವೆ ನಿರ್ಮಾಣವಾಗುವವರೆಗೂ ವಾಸ್ಕೋಡಿಗಾಮ ಕಂಡುಹಿಡಿದ ಜಲಮಾರ್ಗವೇ ಭಾರತ ಮತ್ತು ಯುರೋಪ್ ನಡುವಿನ ವ್ಯಾಪಾರ ಮಾರ್ಗವಾಗಿತ್ತು.
-: ಪೋರ್ಚುಗೀಸರು :-
* ಭಾರತಕ್ಕೆ ಬಂದ ಮೊಟ್ಟ ಮೊದಲ ಯುರೋಪಿಯನ್ನರು ಹಾಗೂ ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು.
* ಪೋರ್ಚುಗೀಸರ ಮೊಟ್ಟಮೊದಲ ವೈಸರಾಯ್ – ಫ್ರಾನ್ಸಿಸ್ಕೊ – ಡಿ – ಅಲ್ಮೇಡಾ
* ಫ್ರಾನ್ಸಿಸ್ಕೋ -ಡಿ – ಅಲ್ಮೇಡಾ ನೀಲಿ ನೀರಿನ ನೀತಿ (Blue water policy)ಯನ್ನು ಜಾರಿಗೆ ತಂದನು.
* ಅಲ್ಮೆಡಾನ್ ನಂತರ ಬಂದ ಅಲ್ಪನ್ಸೋ – ಡಿ- ಅಲ್ಬಕರ್ಕ್ ಭಾರತದಲ್ಲಿ ಪೋರ್ಚುಗೀಸರ ಸಾಮ್ರಾಜ್ಯದ ನಿಜವಾದ ಸ್ಥಾಪಕ ಎಂದು ಪ್ರಸಿದ್ಧಿಯಾದ.
* ಅಲ್ಬುಕರ್ಕ 1510ರಲ್ಲಿ ಬಿಜಾಪುರ ಸುಲ್ತಾನನಿಂದ ಗೋವಾವನ್ನು ಗೆದ್ದುಕೊಂಡನು.
-: ಡಚ್ಚರು :-
* 1602 ರಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿಯು ಭಾರತಕ್ಕೆ ವ್ಯಾಪಾರಕ್ಕಾಗಿ ಬಂದು ಸೂರತ್, ಬ್ರೋಚ್,ಕಾಂಬೆ, ಕೊಚ್ಚಿನ್, ನಾಗ ಪಟ್ಟಣ, ಮಚಲಿಪಟ್ಟಣ, ಹಾಗೂ ಚಿನ್ಸೂರ್ ಎಂಬಲ್ಲಿ ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಿದರು.
* ಕೇರಳದ ರಾಜಕೀಯದಲ್ಲಿ ಅತ್ಯಂತ ಮಹತ್ವದ ಕಾಲಘಟ್ಟದಲ್ಲಿ ಬದುಕಿ ಅತ್ಯಂತ ಮಹತ್ವವಾದ ಸ್ಥಾನವನ್ನು ಪರಿಕೀಯರಿಂದ ರಕ್ಷಿಸಿದರೆ ಯಾರು ?
-> ರಾಜ ಮಾರ್ತಾಂಡವರ್ಮ ( ವೈನಾಡನ ರಾಜ )
* 1729 ರಿಂದ 1758 ರ ವರೆಗೆ ವೈನಾಡು ಸಂಸ್ಥಾನವನ್ನು ಆಳಿದ ರಾಜ ಮಾರ್ತಾಂಡ ವರ್ಮ ತನ್ನ ಸುತ್ತಮುತ್ತಲಿನ ಸಂಸ್ಥಾನಗಳು ಮತ್ತು ಪರಕಿಯ ಡಚ್ಚರಿಂದ ತನ್ನ ಸಂಸ್ಥಾನವನ್ನು ರಕ್ಷಿಸಿದ ಮುಂದೆ ವೈನಾಡು ಸಂಸ್ಥಾನವನ್ನು ಇಡೀ ದೇಶದಲ್ಲಿ ಎದ್ದು ಕಾಣುವಂತಹ ರಾಜ್ಯವನ್ನಾಗಿ ಮಾರ್ತಾಂಡವರ್ಮ ಕಟ್ಟಿದ.
* ಕರಿ ಮೆಣಸಿನ ಆಸೆಯಿಂದ ವಿದೇಶಿಯರು ನಡೆಸಿದ್ದ ನಿರಂತರ ಆಕ್ರಮಣ ಮತ್ತು ಸಾಮ್ರಾಜ್ಯದಾಹವನ್ನು ಮೆಟ್ಟಿನಿಂದ ವೈನಾಡುವ ಅರಸ ರಾಜ ಮಾರ್ತಾಂಡ ವರ್ಮ ಆಡಳಿತದಲ್ಲಿ ಅನೇಕ ಸುಧಾರಣೆಗಳನ್ನು ಕೈಗೊಂಡನು.
* ರಾಜ ಮಾರ್ತಾಂಡ ವರ್ಮಾ ತನ್ನ ರಾಜಧಾನಿಯನ್ನು ಪದ್ಮನಾಭಪುರದಿಂದ ತಿರುವನಂತಪುರಕ್ಕೆ ಸ್ಥಳಾಂತರಿಸಿದ.ಆತ ತನ್ನ ಸಂಸ್ಥಾನವನ್ನು ವಿಶ್ವ ತಿರುವಾಂಕೂರ್ ಸಂಸ್ಥಾನ ಎಂದು ಹೆಸರಾಗುವಂತೆ ಮಾಡಿದ.
* ರಾಜ ಮಾರ್ತಾಂಡವರ್ಮನಿಗೂ ಮುಂಚೆ ವೈನಾಡನ್ನು ಅವನ ಸಹೋದರ ಮಾವ ರಾಮವರ್ಮ ಆಳ್ವಿಕೆ ಮಾಡುತ್ತಿದ್ದನು ರಾಜ ಮಾರ್ತಾಂಡವರ್ಮ ತನ್ನ 24ನೇ ವಯಸ್ಸಿನಲ್ಲಿ ವೈನಾಡು ಸಂಸ್ಥಾನದ ಗಡಿಯನ್ನು ವಿಸ್ತರಿಸಲು 50 ಸಾವಿರ ಸೈನಿಕರ ಸೈನ್ಯವನ್ನು ಕಟ್ಟಿದನು ಇವನು ಕಾಯಂಕುಳುಂ,ಕೊಚ್ಚಿ, ಪುರಕ್ಕಾಡ್ ಮತ್ತು ವಡಕ್ಕುಂ ಕೂರ್ ಸಂಸ್ಥಾನಗಳ ಜೊತೆಗೂಡಿ ಡಚ್ ಸೇನೆಯು ತೀರ್ವಾಂಕೂರಿನ ಮೇಲೆ ಆಕ್ರಮಣ ಮಾಡಿದಾಗ ಮಾರ್ತಾಂಡ ವರ್ಮ ಪಡೆ ಡಚ್ ಫೋಟೋವನ್ನು ಸೋಲಿಸಿ ನೆಡಮಂಗಡ,ಮತ್ತು ಕೊಟ್ಟಾರಕರ ಎಂಬ ವ್ಯಾಪಾರಿ ಕೇಂದ್ರವನ್ನು ವಶಪಡಿಸಿಕೊಂಡಿತು.
* ರಾಜ ಮಾರ್ತಾಂಡ ವರ್ಮ ” ನಾವೆಂದೂ ಮೆಣಸಿನ ವ್ಯಾಪಾರದ ಹಕ್ಕನ್ನು ಪರಕೀಯರಿಗೆ ಬಿಟ್ಟುಕೊಡೆವು ” ಎಂದು ಡಚ್ಚರಿಗೆ ಖಾರವಾಗಿ ಪತ್ರ ಬರೆದನು.
* 1741 ರಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿ ಕೊಟ್ಟಾರ ಕರ ಸಂಸ್ಥಾನವನ್ನು ಮುಂದಿಟ್ಟುಕೊಂಡು ತಿರುವಾಂಕೂರಿನ ಮೇಲೆ ಯುದ್ಧವನ್ನು ಸಾರಿತು ಡಚ್ಚರ ಜೊತೆಗೆ ಸ್ಥಳೀಯ ಸಂಸ್ಥಾನಗಳು ಸೇರಿಕೊಂಡಿದ್ದರು ಆದರೆ ಮಾರ್ತಾಂಡವರ್ಮನ ಸೈನ್ಯ ಆ ದಾಳಿಯನ್ನು ಸಮರ್ಥವಾಗಿ ಇಮ್ಮೆಟ್ಟಿಸಿತು ಡಚ್ ಪಡೆಗಳು ಕೊಚ್ಚಿನ್ ಗೆ ಹಿಂತಿರುಗಿದವು.
* ಡಚ್ಚರು ಸಿಲೋನಿ ನಿಂದ ಮತ್ತಷ್ಟು ಪಡೆಗಳನ್ನು ಕರೆಸಿಕೊಂಡು ಮಾರ್ತಾಂಡ ವರ್ಮನ ಮೇಲೆ ದಂಡೆತ್ತಿ ಬಂದರು.
* 1741 ಆಗಸ್ಟ್ 10ರಂದು ” ಕೊಳಚ್ಚಲ್” ಎಂಬಲ್ಲಿ ಮಾರ್ತಾಂಡವರ್ಮನ ಮೇಲೆ ಡಚ್ಚರು ದಾಳಿ ನಡೆಸಿದರು ನಾಲ್ಕು ದಿನಗಳ ಕಾಲ ಭೀಕರ ಕದನ ನಡೆದು ಅಂತಿಮವಾಗಿ ತಿರುವಾಂಕೂರಿನ ಸೈನ್ಯ ಯುದ್ಧದಲ್ಲಿ ಮೇಲುಗೈ ಸಾಧಿಸಿತು 24 ಡಚ್ ಅಧಿಕಾರಿಗಳು ಯುದ್ಧದ ಕೈದಿಗಳಾದರು.
* ಡಚ್ಚರು ಅಪಾರ ಪ್ರಮಾಣದಲ್ಲಿ ನಷ್ಟವನ್ನು ಅನುಭವಿಸಿದರು ಈ ಯುದ್ಧದ ನಂತರ ಮಾರ್ತಾಂಡವರ್ಮ ಸುಮ್ಮನೆ ಕೂರಲಿಲ್ಲ ಇಡೀ ದಕ್ಷಿಣ ಭಾರತದಿಂದ ಡಚ್ಚರನ್ನು ಕಿತ್ತೊಗೆಯಬೇಕೆಂದು ಪಣತೊಟ್ಟ ಕೇರಳ ಮತ್ತು ತಮಿಳುನಾಡಿನಲ್ಲಿ ಮೆಣಸಿನ ವ್ಯಾಪಾರದಲ್ಲಿ ಹಕ್ಕನ್ನು ಸ್ಥಾಪಿಸಿದ ಡಚ್ಚರ ಹಿಡಿತದಲ್ಲಿದ್ದ ಬಂದರುಗಳನ್ನು ಮರಳಿ ಪಡೆದ.
* ಮಾರ್ತಾಂಡವರ್ಮನ ಆಳ್ವಿಕೆಯಲ್ಲಿ ಕೊಚ್ಚಿ ವಿಶ್ವದ ಪ್ರಮುಖ ಸಾಂಬಾರೂ ಪದಾರ್ಥಗಳ ಕೇಂದ್ರವಾಗಿ ಗುರುತಿಸಲ್ಪಟ್ಟಿತು ತಿರುವಾಂಕೂರು ಸಂಸ್ಥಾನ ಅತ್ಯಂತ ಶ್ರೀಮಂತ ಸಂಸ್ಥಾನವಾಯಿತು ಅಂತಿಮವಾಗಿ 1753ರಲ್ಲಿ ಆಗಸ್ಟ್ 15 ರಂದು ನಡೆದ ಒಪ್ಪಂದದಲ್ಲಿ ಡಚ್ ಪಡೆಗಳು ತಮ್ಮ ಸಂಪೂರ್ಣ ಅಧಿಕಾರವನ್ನುಕೂರಿಗೆ ಒಪ್ಪಿಸಿ ಶರಣಾದರು.
* ಭಾರತದಲ್ಲಿ ಇಂಗ್ಲೀಷರ ಏಳಿಗೆ ಮತ್ತು ಡಚ್ಚ ಆಗ್ನೇಯ ಏಷ್ಯಾದಲ್ಲಿ ವಶಪಡಿಸಿಕೊಂಡ ದ್ವೀಪಗಳಲ್ಲಿ ಹೆಚ್ಚು ಆಸಕ್ತರಾಗಿದ್ದು ಭಾರತದಲ್ಲಿ ಡಚ್ಚರ ಅವನತಿಗೆ ಕಾರಣವಾದವು.
-: ಇಂಗ್ಲೀಷರು / ಬ್ರಿಟಿಷರು :-
* ಇಂಗ್ಲೆಂಡಿನ ಎಲಿಜಬೆತ್ ರಾಣಿಯು ಸಾ.ಶ 1600 ಡಿಸೆಂಬರ್ 31ರಂದು ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಗೆ ಪೂರ್ವ ದೇಶಗಳೊಂದಿಗೆ ವ್ಯಾಪಾರ ನಡೆಸಲು 15 ವರ್ಷಗಳ ಪರವಾನಿಗೆ ನೀಡಿದಳು.
* ಈಸ್ಟ್ ಇಂಡಿಯಾ ಕಂಪನಿಯು 1613ರಲ್ಲಿ ಔಪಚಾರಿಕವಾಗಿ ವ್ಯಾಪಾರವನ್ನು ಆರಂಭಿಸಿತು.
* ಈ ಕಂಪನಿಗೆ ಮೊಘಲ್ ದೊರೆ ಜಹಾಂಗೀರ್,ಸೂರತ್ ನಲ್ಲಿ ಮೊದಲ ವ್ಯಾಪಾರದಾಸ್ತಾನ ಮಳಿಗೆಯನ್ನು ತೆರೆಯಲು ಫರ್ಮಾನು ನೀಡಿದನು.
* 1617ರಲ್ಲಿ ಇಂಗ್ಲೆಂಡಿನ ರಾಜ ಒಂದನೇ ಜೇಮ್ಸ್ ನ ರಾಯಭಾರಿಯಾಗಿ ಜಹಾಂಗೀರನ ಆಸ್ಥಾನಕ್ಕೆ ”ಸರ್ ಥಾಮಸ್ ರೋ ” ಬಂಧನು.
* ಥಾಮಸ್ ರೋ ಜಹಾಂಗೀರ್ ನಿಂದ ಮೊಗಲ್ ಸಾಮ್ರಾಜ್ಯದ ಕೆಲವೆಡೆಗಳಲ್ಲಿ ಫ್ಯಾಕ್ಟರಿಗಳನ್ನು ಸ್ಥಾಪಿಸಲು ಅನುಮತಿ ಪಡೆದ.
* ಇಂಗ್ಲೀಷರು 1639ರಲ್ಲಿ ಚಂದ್ರಗಿರಿಯ ರಾಜನಿಂದ ಮದ್ರಾಸ್ನಿಂದ ಭೂಮಿಯನ್ನು ಪಡೆದು ಸೇಂಟ್ ಜಾರ್ಜ್ ಪೋರ್ಟ್ ಎಂಬ ಬಲಿಷ್ಠ ಕೋಟೆಯನ್ನು ಕಟ್ಟಿದರು ಮುಂದೆ ಇಂಗ್ಲೆಂಡಿನ ರಾಜಕುಮಾರ ಎರಡನೇ ಚಾರ್ಲ್ಸ್ ನು ಬಾಂಬೆಯನ್ನು 1668ರಲ್ಲಿ ಕಂಪನಿಗೆ ವಾರ್ಷಿಕ 10 ಪೌಂಡ್ ಗಳಿಗೆ ಬಾಡಿಗೆಗೆ ವಹಿಸಿಕೊಟ್ಟ.
* ಬ್ರಿಟಿಷರು 1690ರ ದಶಕದಲ್ಲಿ ಬಂಗಾಳದ ರಾಜ್ಯಪಾಲನಿಂದ ಗೂಗ್ಲಿ ನದಿಯ ದಂಡೆಯ ಮೇಲೆ ಸುತನುತಿ/ ಸುಹನ್ನತಿ ,ಕಲ್ಕತ್ತಾ ಮತ್ತು ಗೋವಿಂದಪುರ ಎಂಬ ಮೂರು ಹಳ್ಳಿಗಳನ್ನು ಖರೀದಿಸಿ ಪೋರ್ಟ್ ವಿಲಿಯಂ ಎಂಬ ಕೋಟೆಯನ್ನು ಕಟ್ಟಿಸಿದರು. ಇದರ ಸುತ್ತ ಕೊಲ್ಕತ್ತಾ ನಗರ ಬೆಳೆಯಿತು.
-: ಫ್ರೆಂಚರು :-
* ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ 1664 ರಲ್ಲಿ ಆರಂಭವಾಯಿತು.
* ಈ ಕಂಪನಿಯು ತನ್ನ ಪ್ರಥಮ ದಾಸ್ತಾನು ಮಳೆಗೆಯನ್ನು ” ಸೂರತ್ ನಲ್ಲಿ” ಆರಂಭಿಸಿತು.
* ಫ್ರೆಂಚರು 1674ರಲ್ಲಿ ವಾಲಿಕೊಂಡ ಪುರಂ ನ ಸ್ಥಳೀಯ ಮುಸ್ಲಿಂ ಅಧಿಕಾರಿಯಿಂದ ಪಡೆದರು. ಈ ವಾಲಿಕೊಂಡ ಪುರಂ ವೇ ಪ್ರಸ್ತುತ ಪಾಂಡಿಚೇರಿ/ಪುದುಚೇರಿ ಇದು ಫ್ರೆಂಚರು ಭಾರತ ತೊರೆದು ಹೋಗೋವರೆಗೂ ಅವರ ರಾಜಧಾನಿಯಾಗಿತ್ತು.
* 1746ರಲ್ಲಿ ಪಾಂಡಿಚೆರಿಯ ಗೌರ್ನರ್ ಆಗಿ ಬಂದ ಡ್ಯೂಪ್ಲಿ ಎಂಬ ಮಹತ್ವಕಾಂಕ್ಷಿ ಅಧಿಕಾರಿಯು ದಕ್ಷಿಣ ಭಾರತದಲ್ಲಿ ಫ್ರೆಂಚರ ಅಧಿಪತ್ಯವನ್ನು ಸ್ಥಾಪಿಸಲು ಪ್ರಯತ್ನಿಸಿದನು ಇದು ಇಂಗ್ಲೀಷರೊಡನೆ ಸಂಘರ್ಷ ಕೇಳಿದ್ದು ಕರ್ನಾಟಿಕ ಯುದ್ಧಗಳಿಗೆ ಕಾರಣವಾಯಿತು.
-: ಕರ್ನಾಟಿಕ್ ಯುದ್ಧಗಳು :-
1) ಮೊದಲ ಕರ್ನಾಟಿಕ್ ಯುದ್ಧ – (1746-1748)
2) ಎರಡನೇ ಕರ್ನಾಟಿಕ್ ಯುದ್ಧ – (1749-1754)
3) ಮೂರನೇ ಕರ್ನಾಟಿಕ್ ಯುದ್ದ -( 1756-63)