ಭಾರತದ ಭೌಗೋಳಿಕ ಸ್ಥಾನ ಹಾಗೂ ಪ್ರಾಕೃತಿಕ ಲಕ್ಷಣಗಳು (All Competative exam notes)

* ಭಾರತವನ್ನು ಒಂದು ‘ ಉಪಖಂಡ’ ಎಂದು ಕರೆಯುತ್ತಾರೆ.

* ಭಾರತವು ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿರುವ ಪರ್ಯಾಯ ದ್ವೀಪವಾಗಿದೆ. ಇದನ್ನು ” ಇಂಡಿಯಾ / ಹಿಂದೂಸ್ತಾನ ” ಎಂದು ಕರೆಯಲಾಗಿದೆ.

* ಇಂಡಿಯಾ ಎಂಬ ಪದ ಸಿಂಧೂ ನದಿಯಿಂದ ಬಳಕೆಗೆ ಬಂದಿದೆ.

* ಭಾರತವೆಂಬ ಹೆಸರು ” ಭರತ ” ಎಂಬ ಪುರಾತನ ಚಕ್ರವರ್ತಿಯಿಂದ ಬಂದಿದೆ.

* ಭಾರತವು ಸಂಪೂರ್ಣವಾಗಿ ಉತ್ತರಾರ್ಧ ಗೋಳದ ಪೂರ್ವದಲ್ಲಿದೆ. ಇದು ಉತ್ತರದಲ್ಲಿ ಅಗಲವಾಗಿದ್ದು,ದಕ್ಷಿಣದಲ್ಲಿ ಕಿರಿದಾದ ತ್ರೀಕೋನಾಕೃತಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಚಾಚಿಕೊಂಡಿದೆ.

* ಭಾರತವು ಒಟ್ಟು 32,87,263 ಚದರ ಕಿಲೋಮೀಟರ್ ನಷ್ಟು ವಿಸ್ತಾರವಾಗಿದೆ. ಇದು ಪ್ರಪಂಚದ 7ನೇ ದೊಡ್ಡ ರಾಷ್ಟ್ರ.

* ಪ್ರಪಂಚದ ಭೂಕ್ಷೇತ್ರದಲ್ಲಿ 2.4% ಭೂಭಾಗವನ್ನು ಭಾರತ ಹೊಂದಿದೆ.

* 2011 ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆಯು 121 ಕೋಟಿ. ಇದು ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ 17,5% ರಷ್ಟು , ಚೀನಾ ನಂತರ 2ನೇ ಸ್ಥಾನದಲ್ಲಿದೆ.

* ಭಾರತವು ಭೌಗೋಳಿಕವಾಗಿ ಉತ್ತರ ಗೋಳರ್ಧ ಹಾಗೂ ಪೂರ್ವ ಗೋಳಾರ್ಧದ ಮಧ್ಯೆದಲ್ಲಿ ನೆಲೆಸಿದೆ.

* ಭಾರತವು ಆಗ್ನೇಯ ಏಷ್ಯಾದ ಒಂದು ಪ್ರಮುಖ ಪರ್ಯಾಯ ದ್ವೀಪ.

* ಭಾರತದ ಪ್ರಧಾನ ಭೂಭಾಗವು 8°4′ ದಿಂದ 37°6′ ಉತ್ತರ ಅಕ್ಷಾಂಶ ಹಾಗೂ 68°7′ ದಿಂದ 97°25′ ಪೂರ್ವ ರೇಖಾಂಶಗಳ ನಡುವೆ ವಿಸ್ತರಿಸಿದೆ.

* ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಇನ್ನೂ ದಕ್ಷಿಣಕ್ಕೆ ವಿಸ್ತರಿಸಿದೆ. ನಿಕೋಬಾರ್ ದ್ವೀಪದ 6°45′ ದಕ್ಷಿಣ ಅಕ್ಷಾಂಶದಲ್ಲಿರುವ ” ಇಂದಿರಾ ಪಾಯಿಂಟ್ ” ಭಾರತದ ಅತ್ಯಂತ ದಕ್ಷಿಣದ ತುದಿಯಾಗಿದೆ.

* ಇದಕ್ಕೆ ಪ್ರತಿಯಾಗಿ ಜಮ್ಮು ಕಾಶ್ಮೀರದ ” ಇಂದಿರಾ ಕೋಲ್ ” ಭಾರತದ ಅತ್ಯಂತ ಎತ್ತರ ತುತ್ತ ತುದಿಯಾಗಿದೆ.

* ಭಾರತ ಮಧ್ಯಭಾಗದಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತ (23 1/2°ಉ) ವು ಹಾಯ್ದು ಹೋಗಿದೆ.ಮತ್ತು 82 1/2° ಪೂರ್ವ ರೇಖಾಂಶ ( ಪ್ರಯಾಗ / ಅಲಹಾಬಾದ್ ) ವು ದೇಶದ ಮಧ್ಯದಲ್ಲಿ ಆಯ್ದು ಹೋಗಿದೆ ಇದು ಭಾರತದ ಮಧ್ಯ ರೇಖಾಂಶವಾಗಿದ್ದು ಭಾರತೀಯ ” ಆದರ್ಶ ಕಾಲಮಾನವು(IST) ಈ ರೇಖಾಂಶವನ್ನ ಅವಲಂಬಿಸಿದೆ.

* ಭಾರತವು ಒಂದು ಪರ್ಯಾಯ ದ್ವೀಪವಾಗಿದ್ದು ಇದು ಭೂ ಮತ್ತು ಜಲ ಮೇರೆಗಳೆರಡನ್ನೂ ಹೊಂದಿದೆ.

* ಭಾರತವು 15 200 ಕಿಲೋಮೀಟರ್ ಭೂಗಡಿಯನ್ನು 6,100 ಕಿಲೋಮೀಟರ್ ಕರಾವಳಿ( ಜಲಗಡಿಯನ್ನು) ಹೊಂದಿದೆ.

* ಭಾರತವು 7 ರಾಷ್ಟ್ರಗಳೊಡನೆ ಭೂ ಗಡಿ ರೇಖೆಯನ್ನು ಹಂಚಿಕೊಂಡಿದೆ ವಾಯುವ್ಯದಲ್ಲಿ ಪಾಕಿಸ್ತಾನ ಅಫಘಾನಿಸ್ತಾನ ಉತ್ತರದಲ್ಲಿ ಚೀನಾ,ನೇಪಾಳ,ಭೂತಾನ್ ಹಾಗೂ ಪೂರ್ವದಲ್ಲಿ ಮಯನ್ಮಾರ್, ಬಾಂಗ್ಲಾದೇಶಗಳೊಡನೆ ಭೂ ಗಡಿಯನ್ನು ಒಂದಿದೆ ಇದಲ್ಲದೆ ದೇಶದ ದಕ್ಷಿಣದಲ್ಲಿರುವ ಶ್ರೀಲಂಕಾ ಮತ್ತು ನೈರುತ್ಯದಲ್ಲಿರುವ ಮಾಲ್ಡೀಸ್ ದೀಪಗಳು ಸಹ ಭಾರತದ ನೆರೆಯ ರಾಷ್ಟ್ರಗಳಾಗಿವೆ.

-: ಗಡಿ ರೇಖೆಗಳು :-

* ಭಾರತ ಮತ್ತು ಪಾಕಿಸ್ತಾನ – ರಾಡ್ ಕ್ಲಿಪ್

* ಭಾರತ ಮತ್ತು ಚೀನಾ – ಮ್ಯಾಕ್ ಮೋಹನ್

* ಭಾರತ ಮತ್ತು ಆಫ್ಘಾನಿಸ್ತಾನ – ಡ್ಯುರಾಹಂಡ್

* ಭಾರತ ಮತ್ತು ಬಾಂಗ್ಲಾದೇಶ – ರಾಡ್ ಕ್ಲಿಪ್

-: ಪ್ರಾಕೃತಿಕ ವಿಭಾಗಗಳು :-

1) ಉತ್ತರದ ಪರ್ವತಗಳು

2) ಉತ್ತರದ ಮಹಾ ಮೈದಾನ

3) ಪರ್ಯಾಯ ಪ್ರಸ್ಥಭೂಮಿ

4) ಕರಾವಳಿ ಮೈದಾನಗಳು

1) ಉತ್ತರದ ಮೈದಾನಗಳು :-

* ಉತ್ತರದಲ್ಲಿರುವ ಹಿಮಾಲಯ ಪರ್ವತ ಶ್ರೇಣಿಯು ಜಗತ್ತಿನಲ್ಲಿಯೇ ಅತಿ ಎತ್ತರವಾದ ಶಿಖರಗಳನ್ನು ಆಳವಾದ ಕಣಿವೆಗಳನ್ನು ಹಿಮನದಿ ಮುಂತಾದವುಗಳನ್ನು ಹೊಂದಿದೆ.

* ಹಿಮಾಲಯ ಪರ್ವತ ಶ್ರೇಣಿಯು ‘ ಪಾಮಿರ್ ಗ್ರಂಥಿ’ಯಿಂದ ಪ್ರಾರಂಭವಾಗಿ ಪೂರ್ವದಲ್ಲಿ ಅರುಣಾಚಲ ಪ್ರದೇಶದವರೆಗೆ ಸುಮಾರು 2500 ಕಿಲೋಮೀಟರ್ ಉದ್ದವಾಗಿ ಹಬ್ಬಿದೆ ಈ ಮಡಿಕೆ ಪರ್ವತ ಶ್ರೇಣಿಗಳು ಮೂರು ಪ್ರಮುಖ ಶ್ರೇಣಿಗಳನ್ನು ಒಳಗೊಂಡಿದೆ ಇವುಗಳೆಂದರೆ.

ಅ) ಶಿವಾಲಿಕ್ ಶ್ರೇಣಿ( ಹಿಮಾಲಯದ ಪಾದ ಬೆಟ್ಟಗಳು)

ಆ) ಹಿಮಾಚಲ( ಮಧ್ಯ ಹಿಮಾಲಯ)

ಇ) ಮಹಾ ಹಿಮಾಲಯ( ಹಿಮಾದ್ರಿ)

ಅ) ಶಿವಾಲಿಕ್ ಶ್ರೇಣಿ :-

* ಇದು ಹಿಮಾಲಯ ಪರ್ವತಗಳಲ್ಲಿ ಇತ್ತೀಚಿಗೆ ನಿರ್ಮಾಣವಾಗಿದೆ.

* ಇದು ಅತ್ಯಂತ ದಕ್ಷಿಣದಲ್ಲಿರುವ ಸರಣಿ ಹಾಗೂ ಕಡಿಮೆ ಎತ್ತರವನ್ನು ಹೊಂದಿದೆ.

* ಇದನ್ನು ” ಹಿಮಾಲಯದ ಪಾದ ಬೆಟ್ಟಗಳು” ಎಂದು ಕರೆಯುವರು.

* ಇಲ್ಲಿ ಸಮತಟ್ಟಾದ ಮೈದಾನಗಳಿವೆ ಈ ಮೈದಾನಗಳನ್ನು ‘ ಡೂನ್’ ಗಳೆಂದು ಕರೆಯುತ್ತಾರೆ ಉದಾಹರಣೆ: ಡೆಹರಾಡೂನ್,ಕೋಟಾ, ಪಾಟ್ಲಿ, ಚೌಕಾಂಬ, ಉದಾಂಪುರ ಮತ್ತು ಕೋಟ್ಲಾಗಳು.

* ಇವು ಸಮುದ್ರದಿಂದ 600 ರಿಂದ 1500 ಮೀಟರ್ ಎತ್ತರವಾಗಿವೆ.

ಆ) ಹಿಮಾಚಲ / ಮಧ್ಯ ಹಿಮಾಲಯ:-

* ಇದು ಮಹಾ ಹಿಮಾಲಯ ಮತ್ತು ಶಿವಾಲಿಕ್ ಬೆಟ್ಟಗಳ ನಡುವೆ ಸುಮಾರು 3600 ಮೀಟರ್ ನಿಂದ 4500 ಮೀಟರ್ಗಳಷ್ಟು ಎತ್ತರವಾಗಿವೆ.ಇವು 60 ರಿಂದ 80 ಕಿಲೋಮೀಟರ್ ಅಗಲವಾಗಿವೆ ಇಲ್ಲಿ ಅನೇಕ ಸಮಾನಾಂತರ ಶ್ರೇಣಿಗಳಿವೆ.ಉದಾಹರಣೆ ಪೀರ್ ಪಂಜಾಲ್,ಮಹಾಭಾರತ ಶ್ರೇಣಿ, ನಾಗತಿಬ್ಬ,ಮುಸ್ಸೋರಿ ಮುಂತಾದವುಗಳು.

* ಇಲ್ಲಿ ಕಾಂಗ್ರಾ ಮತ್ತು ಕುಲು ಪ್ರಸಿದ್ಧ ಕಣಿವೆಗಳಿವೆ.

* ಸಿಮ್ಲಾ,ನೈನಿತಾಲ್, ರಾಣಿಖೇತ್, ಮತ್ತು ಡಾರ್ಜಿಲಿಂಗ್ ಗಿರಿಧಾಮಗಳಿವೆ.

ಇ) ಹಿಮಾಲಯ/ಹಿಮಾದ್ರಿ:-

* ಹಿಮಾಲಯ ಪರ್ವತಗಳಲ್ಲಿ ಅತಿ ಎತ್ತರವಾದ ಹಾಗೂ ಮೊದಲು ನಿರ್ಮಿತ ಗೊಂಡಿರುವ ಸರಣಿಯಾಗಿದೆ.

* ಇದು ಸಂಪೂರ್ಣವಾಗಿ ಹಿಮದಿಂದ ಆವೃತವಾಗಿದೆ ಆದುದರಿಂದ ಇದನ್ನು ಹಿಮಾದ್ರಿ ಎಂದು ಕರೆಯುತ್ತಾರೆ.

* ಸಮುದ್ರ ಮಟ್ಟದಿಂದ ಈ ಶ್ರೇಣಿಯೂ 6000 ಮೀಟರ್ ನಿಂದ 8,000 ಮೀಟರ್ ಗಿಂತಲೂ ಹೆಚ್ಚು ಎತ್ತರವಾಗಿದೆ ಪ್ರಪಂಚದಲ್ಲಿಯೇ ಅತ್ಯುನ್ನತ ಶಿಖರವಾದ ” ಮೌಂಟ್ ಎವರೆಸ್ಟ್( 8848 M) ನೇಪಾಳ ಮತ್ತು ಟಿಬೆಟ್ ಮಧ್ಯದಲ್ಲಿದೆ ಈ ಸರಣಿಯಲ್ಲಿರುವ ಇತರೆ ಮುಖ್ಯ ಶಿಖರಗಳೆಂದರೆ ಕಾಂಚನಗಂಗಾ,ದವಳಗಿರಿ, ನಂದಾದೇವಿ, ಗೌರಿಶಂಕರ ಇವು ಅನೇಕ ಹಿಮ ನದಿಗಳನ್ನು ಹೊಂದಿದೆ.

* ಗಂಗೋತ್ರಿ ಗಂಗಾ ನದಿಯ ಉಗಮ ಸ್ಥಾನ.

* ಕಾಶ್ಮೀರದ ಬುರ್ಜಿಲ್,ಜೋಜಿಲಾ,ಹಿಮಾಚಲ ಪ್ರದೇಶದ ಬಾರಾಲಾಫಚ್ ಇತ್ಯಾದಿ ಕಣಿವೆ ಮಾರ್ಗಗಳು ಉತ್ತಮ ಸಂಚಾರ ಸೌಲಭ್ಯವನ್ನು ಒದಗಿಸುವುದಲ್ಲದೆ ಪ್ರವಾಸಿಗರಿಗೆ ಆಕರ್ಷಣೀಯ ಕೇಂದ್ರಗಳಾಗಿವೆ.

* ಮಹಾ ಹಿಮಾಲಯದ ಸರಣಿಯ ಉತ್ತರಕ್ಕಿರುವ ಮಡಿಕೆ ಪರ್ವತಗಳನ್ನು ” ಹೊರ ಹಿಮಾಲಯ ” ಎಂದು ಕರೆಯುತ್ತಾರೆ ಇದರಲ್ಲಿ ಕಾರ ಕೋರಂ ಪರ್ವತ ಶ್ರೇಣಿ ಹಾಗೂ ಕೈಲಾಸ ಪರ್ವತಗಳಿವೆ ಗಾಡ್ವಿನ್ ಆಸ್ಟಿನ್/k2 ಎನ್ನುವುದು ಭಾರತದ ಅತ್ಯಂತ ಎತ್ತರವಾದ (8611 M) ಶಿಖರವಾಗಿದೆ ಲಡಾಕ್ ಪ್ರಸ್ಥಭೂಮಿಯ ಇದೆ ಪ್ರದೇಶದಲ್ಲಿ ಕಂಡು ಬರುತ್ತದೆ.

2) ಉತ್ತರ ಮಹಾ ಮೈದಾನ :-

* ಹಿಮಾಲಯದ ಪರ್ವತ ಶ್ರೇಣಿಗಳು ಭಾರತದ ಜನಜೀವನದ ಮೇಲೆ ಅಪಾರ ಪ್ರಭಾವವನ್ನು ಬೀರಿದೆ.

* ಉತ್ತರ ಭಾರತದ ಮಹಾ ಮೈದಾನವನ್ನು ಸಟ್ಲೆಜ್ ಗಂಗಾ ಮೈದಾನವೆಂತಲೂ ಕರೆಯುತ್ತಾರೆ.

* ಇದು  ಉತ್ತರದಲ್ಲಿ ಹಿಮಾಲಯ ಪರ್ವತಗಳು ಹಾಗೂ ದಕ್ಷಿಣದಲ್ಲಿ ಪರ್ಯಾಯ ಪ್ರಸ್ಥಭೂಮಿಯ ನಡುವೆ ಕಂಡುಬರುವುದು ಈ ಮೈದಾನವು ಪಶ್ಚಿಮದ ಸಿಂಧು ನದಿಯ ಮೈದಾನದಿಂದ ಪೂರ್ವದಲ್ಲಿ ಬ್ರಹ್ಮಪುತ್ರ ಕಣಿವೆಯವರೆಗೂ ವಿಸ್ತರಿಸಿದೆ.

* ಪಶ್ಚಿಮದಿಂದ ಪೂರ್ವಕ್ಕೆ ಸುಮಾರು 200400 ಕಿಲೋಮೀಟರ್ ಉದ್ದವಾಗಿರುವ ಈ ಮೈದಾನವು 70 ರಿಂದ 500 ಕಿಲೋಮೀಟರ್ ಅಗಲವಾಗಿದೆ ಈ ಮೈದಾನವು ಬಹುತೇಕವಾಗಿ ಸಮತಟ್ಟಾಗಿದೆ.

* ಹಿಮಾಲಯದ ತಪ್ಪಲಿನಲ್ಲಿ ನದಿಗಳು ಮೈದಾನವನ್ನು ಪ್ರವೇಶಿಸುವ ಕಡೆ ಅವುಗಳು ಹೊತ್ತು ತಂದ ದಪ್ಪ ಚೂರುಗಳನ್ನು ಸಂಚಿಸಿದ ಮಣ್ಣೆ-ಬಬರ್ ಮಣ್ಣು

* ಪುರಾತನ ಕಾಲದಿಂದ ಸಂಚಿತವಾಗಿರುವ ಮೆಕ್ಕಲು ಮಣ್ಣಿನ ವಲಯವನ್ನು ” ಭಂಗರ್ ” ಎನ್ನುವರು.

* ಇತ್ತೀಚಿನ ಅವಧಿಯಲ್ಲಿ ಸಂಚರಿತಗೊಂಡು ನಿರ್ಮಿತವಾಗಿರುವ ಮೆಕ್ಕಲು ಮಣ್ಣನ್ನು ” ಖದರ್ ” ಎಂದು ಕರೆಯುವರು.

* ಮೌಂಟ್ ಎವರೆಸ್ಟ್ ಪರ್ವತದ ಎತ್ತರವನ್ನು ಮೊದಲ ಬಾರಿಗೆ ನಿಖರವಾಗಿ ಗುರುತಿಸಿದವರು – ರಾಧಾ ನಾಥನ್ ಸಿಕ್ದರ್ – ಇವರು ಭಾರತದಲ್ಲಿ ನಡೆಯುತ್ತಿದ್ದ ಟ್ರಿಗೋನ್ ಮೆಟ್ರಿಕಲ್ ಸರ್ವೆಯಲ್ಲಿ ಉದ್ಯೋಗಿಯಾಗಿದ್ದರು.

3) ಪರ್ಯಾಯ ಪ್ರಸ್ಥಭೂಮಿ :-

* ಪರ್ಯಾಯ ಪ್ರಸ್ಥಭೂಮಿಯು ಭಾರತದ ಭೂ ಸ್ವರೂಪಗಳ ವಿಭಾಗಗಳಲ್ಲಿ ಅತಿ ದೊಡ್ಡದು ಅಲ್ಲದೆ ಭೂ ಇತಿಹಾಸದ ಪ್ರಕಾರ ಇದು ಅತಿ ಪುರಾತನವಾಗಿದ್ದು,ಭೂಖಂಡಗಳ ಆರಂಭದಲ್ಲಿದ್ದ ಗೊಂಡ್ವಾನ್ ಬುರಾಶಿಯ ಒಂದು ಭಾಗವಾಗಿದೆ ಎಂದು ಭೂ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

* ಈ ಪ್ರಸ್ಥಭೂಮಿಯು ಸಟ್ಲೆಜ್ – ಗಂಗಾ ಮೈದಾನದ ದಕ್ಷಿಣದಲ್ಲಿ ಹಿಂದೂ ಮಹಾಸಾಗರದವರೆಗೂ ಚಾಚಿಕೊಂಡಿದೆ ಇದರ ಒಟ್ಟು ಕ್ಷೇತ್ರ 16 ಲಕ್ಷ ಚದರ ಕಿಲೋ ಮೀಟರ್.

* ಇದು ಉತ್ತರದಲ್ಲಿ ಅರಾವಳಿ ಪರ್ವತದಿಂದ ದಕ್ಷಿಣದ ಕನ್ಯಾಕುಮಾರಿವರೆಗೂ ವಿಸ್ತರಿಸಿದೆ.

* ಪಶ್ಚಿಮದಲ್ಲಿ ಪಶ್ಚಿಮ ಘಟ್ಟಗಳಿಂದ ಪೂರ್ವದಲ್ಲಿ ಜಾರ್ಖಂಡ್ ರಾಜಮಹಲ್ ಬೆಟ್ಟಗಳವರೆಗೂ ಸುಮಾರು 1400 ಕಿಲೋಮೀಟರ್ ಅಗಲವಾಗಿದೆ.

* ಇದು ಪಶ್ಚಿಮದಲ್ಲಿ ಅರಬ್ಬಿ ಸಮುದ್ರ,ಪೂರ್ವದಲ್ಲಿ ಬಂಗಾಳ ಕೊಲ್ಲಿ ಹಾಗೂ ದಕ್ಷಿಣದಲ್ಲಿ ಹಿಂದೂ ಮಹಾಸಾಗರಗಳನ್ನು ಇದು ಒಳಗೊಂಡಿದೆ.

* ಈ ಪ್ರಸ್ಥಭೂಮಿಯ ಉತ್ತರದಲ್ಲಿ ವಿಂಧ್ಯ ಪರ್ವತಗಳು,ಸಾತ್ಪುರ್ ಬೆಟ್ಟ, ಅರಾವಳಿ ಬೆಟ್ಟ, ಮಾಳ್ವ ಪ್ರಸ್ಥಭೂಮಿ,ಛೋಟಾನಾಗಪುರ್ ಪ್ರಸ್ಥಭೂಮಿಗಳಿದ್ದು ಇವುಗಳ ಮಧ್ಯದಲ್ಲಿ ನರ್ಮದಾ ಹಾಗೂ ದಾಮೋದರ್ ನದಿಗಳಲ್ಲದೆ ಅನೇಕ ಚಿಕ್ಕ ನದಿಗಳು ಹರಿಯುತ್ತವೆ ಇವುಗಳೆಲ್ಲವನ್ನು ಕೇಂದ್ರ ಪ್ರಸ್ಥಭೂಮಿ ಎನ್ನುವರು.

* ದಕ್ಷಿಣದಲ್ಲಿ ದಖನ್ ಪ್ರಸ್ಥಭೂಮಿ ಇದ್ದು,ಮಹಾದೇವ, ಮೈಕಲ್ ಶ್ರೇಣಿ, ಅಮರಕಂಟಕ ಬೆಟ್ಟಗಳು ರಾಜ್ಮಹಲ್ ಬೆಟ್ಟಗಳು ಇದರ ಉತ್ತರದಲ್ಲಿವೆ.

* ಪಶ್ಚಿಮ ಘಟ್ಟಗಳನ್ನು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಸಹ್ಯಾದ್ರಿ ಎನ್ನುವರು.

* ದಕ್ಷಿಣ ಭಾರತದ ಅತ್ಯುನ್ನತ ಶಿಖರ ಅನೈಮುಡಿ(2665M)

* ಪೂರ್ವ ಗಿರಿಯ ಬೆಟ್ಟಗಳು ಮತ್ತು ಪಶ್ಚಿಮ ಘಟ್ಟಗಳು ನೀಲಗಿರಿ ಬೆಟ್ಟಗಳಲ್ಲಿ ಸಂದಿಸುತ್ತವೆ.

4) ಕರಾವಳಿ ಮೈದಾನ :-

* ಭಾರತವು ದ್ವೀಪಗಳನ್ನು ಹೊರತುಪಡಿಸಿ 6100 ಕಿಲೋಮೀಟರ್ ಉದ್ದ.ಕರಾವಳಿಯನ್ನು ಹೊಂದಿದೆ.

* ಭಾರತದ ಪಶ್ಚಿಮ ಕರಾವಳಿಯು 1500 ಕಿಲೋಮೀಟರ್ಗಳಷ್ಟು ಉದ್ದವಾಗಿದೆ.

* ಮರ್ಮ ಗೋವಾ ಬಂದರು, ಗೋವಾ

* ಕೊಚ್ಚಿನ್ – ಕೇರಳ

* ಕಾಂಡ್ಲಾ – ಗುಜರಾತ್

* ಕಾರವಾರ,ಮಂಗಳೂರು- ಕರ್ನಾಟಕ

* ಚಿಲ್ಕ್ ಸರೋವರ- ಒಡಿಸ್ಸಾ

* ಪುಲಿಕಾಟ್ ಸರೋವರ- ಆಂಧ್ರಪ್ರದೇಶ

* ಉತ್ಕಲ್ ತೀರ – ಓಡಿಸ್ಸಾ

* ಪೂರ್ವ ಕರಾವಳಿಯನ್ನು – ಉತ್ಕಲ್ ಮತ್ತು ಕೋರಮಂಡಲ ತೀರ ಎಂದು ವಿಂಗಡಿಸಲಾಗಿದೆ.

* ಭಾರತಕ್ಕೆ ಸೇರಿರುವ ಒಟ್ಟು ದ್ವೀಪಗಳು 247

* ಬಂಗಾಳಕೊಲ್ಲಿಯಲ್ಲಿ -204 ದ್ವೀಪಗಳಿವೆ

* ಅರಬ್ಬಿ ಸಮುದ್ರದಲ್ಲಿ – 43 ದ್ವೀಪಗಳಿವೆ.

* ಮನ್ನಾರ್ ಕಾರಿಯಲ್ಲಿ ಕೆಲವು ಹವಳದ ದಿಬ್ಬಗಳಿವೆ.

* ಬಂಗಾಳ ಕೊಲ್ಲೆಯಲ್ಲಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಗಟ್ಟಿಯಾದ ಜ್ವಾಲಾಮುಖಿ ನಿರ್ಮಿತ ಶಿಲೆಗಳಿಂದ ಕೂಡಿದೆ.

* ಲಕ್ಷದ್ವೀಪಗಳು ಹವಳದ ದ್ವೀಪಗಳಾಗಿವೆ .

* ಭಾರತದ ದಕ್ಷಿಣ ತುದಿಯು ನಿಕೋಬಾರ್ ದ್ವೀಪದ ದಕ್ಷಿಣ ತುದಿಯಲ್ಲಿದೆ ಇದನ್ನು ಇಂದಿರಾ ಪಾಯಿಂಟ್ ಎಂದು ಕರೆಯುವರು.

 

WhatsApp Group Join Now
Telegram Group Join Now

Leave a Comment