* ಭಾರತವು ಉಷ್ಣವಲಯದ ಮಾನ್ಸೂನ್ ಮಾದರಿಯ ವಾಯುಗುಣವನ್ನು ಹೊಂದಿದೆ.
* ಈ ಮಾದರಿಯ ವಾಯುಗುಣದಲ್ಲಿ ಮಾರುತಗಳು ವರ್ಷದ ವಿವಿಧ ಋತುಗಳಲ್ಲಿ ಪರಸ್ಪರ ವಿರುದ್ಧ ದಿಕ್ಕಿನಿಂದ ಬೀಸುತ್ತವೆ.
* ಮಾನ್ಸೂನ್ ಎಂಬ ಪದವು ” ಅರೇಬಿಕ್ ” ಭಾಷೆಯ ” ಮೌಸಮ್” ಎಂಬ ಪದದಿಂದ ಬಂದಿದೆ. ಇದರರ್ಥ – ನಿಯತಕಾಲಿಕೆ/ಋತುಮಾನಿಕ
* ವರ್ಷದ ಅರ್ಥ ಭಾಗ ನೈರುತ್ಯ ದಿಕ್ಕಿನಿಂದ ಈಶಾನ್ಯದ ಕಡೆಗೆ ಮಾನ್ಸೂನ್ ಮಾರುತಗಳು ಬೀಸಿದರೆ, ಉಳಿದ ಅವಧಿಯಲ್ಲಿ ಈಶಾನ್ಯ ದಿಂದ ನೈರುತ್ಯದ ಕಡೆಗೆ ಬೀಸುತ್ತವೆ.
* ಭಾರತವು ಭೌಗೋಳಿಕವಾಗಿ ಉಷ್ಣವಲಯ ಹಾಗೂ ಸಮಶೀತೋಷ್ಣ ವಲಯಗಳೆರಡರಲ್ಲಿಯೂ ಹಂಚಿಕೆಯಾಗಿದೆ.
* ಅಕ್ಷಾಂಶ, ಸಮುದ್ರ ಮಟ್ಟದಿಂದಿರುವ ಎತ್ತರ, ಸಾಗರಗಳಿಂದಿರುವ ದೂರ, ಮಾರುತಗಳ ದಿಕ್ಕು, ಪರ್ವತ ಸರಣಿಗಳು ಹಬ್ಬಿರುವ ರೀತಿ, ನಾಗರ ಪ್ರವಾಹಗಳು ಮುಂತಾದವುಗಳು ಭಾರತದ ವಾಯುಗುಣಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ.
* ಭಾರತದಲ್ಲಿ ಕಂಡುಬರುವ ವಾರ್ಷಿಕ ವಾಯುಗುಣವನ್ನು 04 ಋತುಮಾನಗಳಾಗಿ ವಿಂಗಡಿಸಲಾಗಿದೆ.
1) ಬೇಸಿಗೆ ಕಾಲ ( March – May)
2) ನೈರುತ್ಯ ಮಾನ್ಸೂನ್ / ಮುಂಗಾರು ಮಳೆಗಾಲಾ(June – Sept )
3) ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ / ಹಿಂಗಾರು ಮಳೆಗಾಲ ( oct – Nov )
4) ಚಳಿಗಾಲ ( Dec -Feb)
1) ಬೇಸಿಗೆಕಾಲ :-
* ಭಾರತದಲ್ಲಿ ಬೇಸಿಗೆ ಕಾಲವು ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಪ್ರಾರಂಭವಾಗಿ ಮೇ ತಿಂಗಳ ಕೊನೆಯವರೆಗೂ ಮುಂದುವರೆಯುತ್ತದೆ.
* ಈ ಅವಧಿಯಲ್ಲಿನ ಸೂರ್ಯನ ಲಂಬ ಕಿರಣಗಳು ಉತ್ತರಾರ್ಧಗೋಳದ ಮೇಲೆ ಬೀಳುವುದರಿಂದ ಭಾರತದಲ್ಲಿ ಉಷ್ಣಾಂಶ ಅಧಿಕವಾಗಿರುತ್ತದೆ.
* ದೀರ್ಘ ಹಗಲು ಮತ್ತು ಸಮುದ್ರಕ್ಕೆ ದೂರವಿರುವ ಉತ್ತರ ಭಾರತವು ಹೆಚ್ಚು ಉಷ್ಣಾಂಶದಿಂದ ಕೂಡಿರುತ್ತದೆ.
* ರಾಜಸ್ಥಾನದ ” ಗಂಗಾ ನಗರವು 52° ಸೆ ” ಗಳಷ್ಟು ಉಷ್ಣಾಂಶವನ್ನು ದಾಖಲಿಸಿದ್ದು ದೇಶದಲ್ಲಿ ಅತಿ ಹೆಚ್ಚು ಉಷ್ಣಾಂಶವನ್ನು ದಾಖಲಿಸಿದ ಪ್ರದೇಶವಾಗಿದೆ.
* ದಕ್ಷಿಣ ಭಾರತವು 03 ಕಡೆಗಳಿಂದ ಸಾಗರಗಳಿಂದಾವೃತವಾಗಿದ್ದು ಇದರ ಉಷ್ಣಾಂಶದಲ್ಲಿ ಹೇಳಿಕೆ ಕಂಡುಬರುತ್ತದೆ ಅದು ಕೇವಲ 32°ಸೆ-35°ಸೆ. ಗಳಷ್ಟು ಕಂಡುಬರುತ್ತದೆ.
* ಈ ಅವಧಿಯಲ್ಲಿ ಉತ್ತರ ಭಾರತದ ಪರ್ವತ ಪ್ರದೇಶ ಮತ್ತು ಪರ್ಯಾಯ ಪ್ರಸ್ಥಭೂಮಿಗಳು ಸಾಕಷ್ಟು ತಂಪಾಗಿರುತ್ತವೆ ಅಲ್ಲಲ್ಲಿ ಸ್ಥಳೀಯ ಉಷ್ಣಾಂಶ ಮತ್ತು ಪ್ರಚಲನ ಪ್ರವಾಹಗಳಿಂದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮಳೆಯಾಗುತ್ತದೆ ಈ ಮಳೆಯನ್ನು ಪಶ್ಚಿಮ ಬಂಗಾಳದಲ್ಲಿ ” ಕಾಲಭೈಸಾಕಿ” ಉತ್ತರ ಪ್ರದೇಶದಲ್ಲಿ ” ಆಂಡಿಸ್ ” ಕರ್ನಾಟಕದಲ್ಲಿ ” ಕಾಫಿ ತುಂತುರು ” ಹಾಗೂ ಕೇರಳದಲ್ಲಿ ” ಮಾವಿನ ಹೂಯ್ಲು ” ಎಂದು ಕರೆಯುತ್ತಾರೆ.
* ಬೇಸಿಗೆಯಲ್ಲಿ ದೇಶವು ವಾರ್ಷಿಕ ಮಳೆಯ 10% ಮಾತ್ರ ಪಡೆಯುತ್ತದೆ.
2) ನೈರುತ್ಯ ಮಾನ್ಸೂನ್ ಮಳೆಗಾಲ :-
* ಭಾರತದಲ್ಲಿ ನೈರುತ್ಯ ಮಾನ್ಸೂನ್ ಎಂದರೆ ” ಮಳೆಗಾಲ” ಎಂದರ್ಥ.
* ಇವುಗಳನ್ನು ” ಮುಂಗಾರು ಮಳೆಗಾಲದ ಮಾರುತಗಳು” ಎನ್ನುವರು.
* ಜೂನ್ ಮತ್ತು ಸೆಪ್ಟೆಂಬರ್ ವರೆಗೆ ಸುರಿಸುತ್ತವೆ.
* ಭಾರತದ ಒಟ್ಟು ಮಳೆಯಲ್ಲಿ 75% ಈ ಕಾಲದಲ್ಲಿ ಬೀಳುವುದು.
* ನೈರುತ್ಯ ಮಾನ್ಸೂನ್ ಮಾರುತಗಳು ಭಾರತವನ್ನು ಎರಡು ಕವಲುಗಳಾಗಿ ಪ್ರವೇಶಿಸುತ್ತವೆ ಅವುಗಳೆಂದರೆ ಅರಬ್ಬಿ ಸಮುದ್ರದ ಶಾಖೆ ಮತ್ತು ಬಂಗಾಳ ಕೊಲ್ಲಿ ಶಾಖೆ
* ಅರಬ್ಬಿ ಶಾಖೆಯು :- ಪಶ್ಚಿಮ ಘಟ್ಟಗಳಿಂದ ತಡೆಯಲ್ಪಟ್ಟು ಘಟ್ಟಗಳ ಪಶ್ಚಿಮ ಭಾಗಕ್ಕೆ ಹೆಚ್ಚು ಮಳೆ ಸುರಿಸುತ್ತವೆ ಈ ಮಾರುತಗಳು ಪೂರ್ವಕ್ಕೆ ಮುಂದುವರೆದಂತೆ ಮಳೆ ಕಡಿಮೆಯಾಗುತ್ತದೆ ಪಶ್ಚಿಮ ಘಟ್ಟಗಳ ಪೂರ್ವ ಭಾಗವು ಮಳೆಯ ನೆರಳಿನ ಪ್ರದೇಶವಾಗಿವೆನಿಸಿದೆ.
* ಬಂಗಾಳಕೊಲ್ಲಿಯ ಶಾಖೆಯು:- ಮಯನ್ಮಾರ್,ಬಾಂಗ್ಲಾದೇಶ, ಭಾರತದ ಈಶಾನ್ಯ ಭಾಗ, ಹಿಮಾಲಯದ ತಪ್ಪಲು ಮತ್ತು ಉತ್ತರ ಮೈದಾನಗಳ ಕಡೆಗೆ ಮಳೆಯನ್ನು ತರುತ್ತವೆ.
* ಉತ್ತರ ಭಾರತದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹೋದಂತೆಲ್ಲ ಮಳೆ ಕಡಿಮೆಯಾಗುತ್ತದೆ.
* ತಮಿಳುನಾಡು ಹೊರತುಪಡಿಸಿ ಭಾರತದ ಹೆಚ್ಚು ಭಾಗಕ್ಕೆ ನೈರುತ್ಯ ಮಾನ್ಸೂನ್ ಮಾರುತಗಳು ಮಳೆಯನ್ನು ಸುರಿಸುತ್ತವೆ.
3) ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ :-
* ಅಕ್ಟೋಬರ್ ತಿಂಗಳ ಕೊನೆಯ ಭಾಗದ ಒಳಗಾಗಿ ಭಾರತದ ಉಪಖಂಡಗಳಲ್ಲಿ ಮಳೆಸುರಿದ ಪರಿಣಾಮವಾಗಿ ಉಷ್ಣಾಂಶವು ಕಡಿಮೆಯಾಗುತ್ತದೆ.
* ಸೂರ್ಯನ ಕಿರಣಗಳು ಈ ಅವಧಿಯಲ್ಲಿ ದಕ್ಷಿಣಾರ್ಧಗೋಳದಲ್ಲಿ ಲಂಬವಾಗಿ ಬೀಳುತ್ತವೆ ಇದರಿಂದಾಗಿ ಉತ್ತರ ಗೋಳಾರ್ಧದಲ್ಲಿ ಉಷ್ಣಾಂಶವು ಕಡಿಮೆಯಾಗಿ ಪರಿಣಾಮವಾಗಿ ಆ ಪ್ರದೇಶವು ಹೆಚ್ಚು ಒತ್ತಡ ಪ್ರದೇಶವಾಗಿ ಪರಿವರ್ತನೆ ಆಗುತ್ತದೆ ಅದಕ್ಕಾಗಿ ನೈರುತ್ಯ ಮಾನ್ಸೂನ್ ಮಾರುತಗಳು ಅಕ್ಟೋಬರ್ ನಿಂದ ಹಿಂದೆ ಸರಿಯಲು ಪ್ರಾರಂಭಿಸುತ್ತವೆ ನಿಧಾನವಾಗಿ ನವಂಬರ್ ತಿಂಗಳ ಅಂತ್ಯದವರೆಗೆ ಇವು ಬೀಸುವ ಅದನ್ನು ನಿಲ್ಲಿಸುತ್ತವೆ ಇದನ್ನೇ ” ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ / ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ ” ಎಂದು ಕರೆಯುವರು.
* ಈ ಅವಧಿಯಲ್ಲಿ ಭಾರತ ಪಡೆಯುವ ವಾರ್ಷಿಕ ಮಳೆ ಪ್ರಮಾಣ- 13%
4) ಚಳಿಗಾಲ :-
* ಡಿಸೆಂಬರ್ ನಿಂದ ಪ್ರಾರಂಭವಾಗಿ ಫೆಬ್ರವರಿ ಕೊನೆಯವರೆಗೂ ಮುಂದುವರೆಯಾಗುತ್ತದೆ.
* ಈ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರ,ಹಿಮಾಚಲ ಪ್ರದೇಶ ಹಾಗೂ ಉತ್ತರದ ಮೈದಾನ ಪ್ರದೇಶಗಳಲ್ಲಿ ಅತಿ ಕಡಿಮೆ ಉಷ್ಣಾಂಶ ಕಂಡುಬರುತ್ತದೆ.
* ಭಾರತವು ತನ್ನ ವಾರ್ಷಿಕ ಮಳೆಯ 2% ಮಾತ್ರ ಈ ಅವಧಿಯಲ್ಲಿ ಪಡೆಯುತ್ತದೆ.
* ಚಳಿಗಾಲವು ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಕಾಲವಾಗಿದೆ
* ವಾರ್ಷಿಕ ಮಳೆಯ ಪ್ರಮಾಣ :-
* ಬೇಸಿಗೆಕಾಲ – (10% ಭಾರತ)- ( ಕರ್ನಾಟಕ – 7%)
* ನೈರುತ್ಯ ಮಾನ್ಸೂನ್ ಕಾಲ – ( ಭಾರತ – 75%)-( ಕರ್ನಾಟಕ – 80%)
* ಈಶಾನ್ಯ ಮಾರುತಗಳ ಕಾಲ – ( ಭಾರತ- 13%)-(ಕರ್ನಾಟಕ-12%)
* ಚಳಿಗಾಲ – ( ಭಾರತ-2%) – ( ಕರ್ನಾಟಕ-1%)
* ದೇಶದ ಸರಾಸರಿ ಮಳೆಯ ಪ್ರಮಾಣ – 118 Cm
ಮಳೆಯ ಹಂಚಿಕೆಯ ಆಧಾರದ ಮೇಲೆ ಭಾರತವನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ:-
1) ಕಡಿಮೆ ಮಳೆಯ ಪ್ರದೇಶ
2) ಸಾಧಾರಣ ಮಳೆ ಪಡೆಯುವ ಪ್ರದೇಶ
3) ಅಧಿಕ ಮಳೆಯ ಪ್ರದೇಶ
1) ಕಡಿಮೆ ಮಳೆಯ ಪ್ರದೇಶ :-
* ಈ ಪ್ರದೇಶದಲ್ಲಿ ವಾರ್ಷಿಕ ಸುಮಾರು 50 ಸೆಂಟಿಮೀಟರ್ ಗಳಿಗಿಂತ ಕಡಿಮೆ ಮಳೆ ಬೀಳುತ್ತದೆ.
* ರಾಜಸ್ಥಾನದ ಥಾರ್ ಮರುಭೂಮಿ ಆಗುವ ಅದಕ್ಕೆ ಹೊಂದಿಕೊಂಡಿರುವಂತೆ ಪಂಜಾಬ್,ಹರಿಯಾಣ, ಗುಜರಾತಿನ ಕಚ್ ಪ್ರದೇಶ ಮತ್ತು ಜಮ್ಮು ಕಾಶ್ಮೀರ, ಮಹಾರಾಷ್ಟ್ರದ ಪೂರ್ವ ಭಾಗ, ಕರ್ನಾಟಕದ ಒಳನಾಡು ಕಡಿಮೆ ಮಳೆ ಬೀಳುವ ವಲಯವಾಗಿದೆ.
* ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ” ರೊಯ್ಲಿ ಯು” ವಾರ್ಷಿಕ ಸರಾಸರಿ ಮಳೆಯೂ 8.3 ಸೆಂಟಿಮೀಟರ್ ಗಳಾಗಿದೆ ಇದು ಭಾರತದಲ್ಲಿ ಅತಿ ಕಡಿಮೆ ಮಳೆ ಪಡೆಯುವ ಪ್ರದೇಶವಾಗಿದೆ.
2) ಸಾಧಾರಣ ಮಳೆ ಪಡೆಯುವ ಪ್ರದೇಶ :-
* ಇಲ್ಲಿ ವಾರ್ಷಿಕ 50ರಿಂದ 250 ಸೆಂಟಿ ಮೀಟರ್ ಮಳೆ ಬೀಳುತ್ತದೆ.
* ಈ ಭಾಗಗಳನ್ನು ಅತಿ ಕಡಿಮೆ ಹಾಗೂ ಅತಿ ಹೆಚ್ಚು ಮಳೆ ಪ್ರದೇಶಗಳನ್ನು ಬಿಟ್ಟು ಭಾರತದ ಉಳಿದೆಲ್ಲ ಭಾಗಗಳನ್ನು ಒಳಗೊಂಡಿರುವುದು.
3) ಅಧಿಕ ಮಳೆ ಪಡೆಯುವ ಪ್ರದೇಶ :-
* ವಾರ್ಷಿಕ ಸುಮಾರು 250cmಗಳಿಗಿಂತ ಹೆಚ್ಚು ಮಳೆ ಬೀಳುವ ಭಾಗಗಳನ್ನು ಅಧಿಕ ಮಳೆ ಬೀಳುವ ಪ್ರದೇಶಗಳೆಂದು ಗುರುತಿಸುತ್ತವೆ.
* ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗ,ಅಸ್ಸಾಂ ಹಾಗೂ ಇತರ ಪೂರ್ವ ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳ ಈ ವಲಯದಲ್ಲಿ ಸೇರುತ್ತವೆ.
* ಮೇಘಾಲಯದ ” ಮೌಸಿನ್ ರಾಮ್ ” ದೇಶದಲ್ಲಿ ಅಧಿಕ ಮಳೆ ಪಡೆಯುವುದು ಇದು ಪ್ರಪಂಚದಲ್ಲಿ ಅತಿ ಹೆಚ್ಚು ಮಳೆಯನ್ನು ದಾಖಲಿಸಿದೆ.
* ಭಾರತದ ಜನತೆಯ ಪ್ರಧಾನ ಉದ್ಯೋಗವು ವ್ಯವಸಾಯವಾಗಿರುವುದರಿಂದ ನೈಋತ್ಯ ಮಾನ್ಸೂನ್ ಮಾರುತಗಳು ಒಂದು ವಿಧದಲ್ಲಿ ದೇಶದ ವ್ಯವಸಾಯವನ್ನು ನಿಯಂತ್ರಿಸುತ್ತವೆ.
* ಈ ಮಳೆ ವಿಫಲವಾದರೆ ಬರಗಾಲ ಬರುವುದು ಆದ್ದರಿಂದಲೇ ಭಾರತದ ವ್ಯವಸಾಯವನ್ನು ” ಮಾನ್ಸೂನ್ ಜೊತೆಯಲ್ಲಿ ಆಡುವ ಜೂಜಾಟ ” ಎಂದು ಕರೆಯುತ್ತಾರೆ.
Super information
Thank you sir