-: ವಿಷಯ :-
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಎಲ್ ಪಿ ಜಿ ಸಿಲಿಂಡರ್ ದರದಲ್ಲಿ ಸಿಗುವ ₹300 ಸಬ್ಸಿಡಿ ಮೊತ್ತವನ್ನು ಮುಂದಿನ ಹಣಕಾಸು ವರ್ಷದ ಅಂತ್ಯದವರೆಗೆ ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ವಿಸ್ತರಿಸಿದೆ.
-: ಪ್ರಧಾನ ಮಂತ್ರಿ ಉಜ್ವಲ ಯೋಜನೆ ಬಗ್ಗೆ ತಿಳಿಯಿರಿ :-
* ಈ ಯೋಜನೆಯ ಬಡತನ ರೇಖೆಗಿಂತ ಕೆಳಗಿರುವ (BPL ) ಕುಟುಂಬಗಳ ಮಹಿಳೆಯರಿಗೆ ಲಿಕ್ವಿ ಫೈಡ್ ಪೆಟ್ರೋಲಿಯಂ ಗ್ಯಾಸ್ (LPG ) ಸಿಲಿಂಡರ್ ಗಳ ಸಂಪರ್ಕಗಳನ್ನು ಒದಗಿಸಲು ರೂಪಿತವಾದ ಯೋಜನೆಯಾಗಿದೆ.
* ಈ ಯೋಜನೆಯನ್ನು 2016 ರ ಮೇ 1ರಂದು ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ” ಶುದ್ಧ ಇಂಧನ, ಉತ್ತಮ ಜೀವನ ” ಎಂಬ ಘೋಷಣೆಯೊಂದಿಗೆ ಪ್ರಾರಂಭಿಸಲಾಯಿತು.
* ಸಚಿವಾಲಯ :-
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ.
-: ಯೋಜನೆಯ ಉದ್ದೇಶ :-
* ಮಹಿಳೆಯರ ಮತ್ತು ಮಕ್ಕಳ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಶುದ್ಧವಾದ ಅಡಿಗೆ ಇಂಧನ – ಎಲ್ ಪಿ ಜಿ ಯನ್ನು ಒದಗಿಸುವುದು.
* ಹಾಗಾಗಿ ಅಡಿಗೆ ಮನೆಗಳಲ್ಲಿ ಸೌದೆಯ ಒಲೆಯಿಂದ ಬರುವ ಹೊಗೆಯಿಂದ ತಮ್ಮ ಆರೋಗ್ಯದ ವಿಷಯದಲ್ಲಿ ಮಹಿಳೆಯರು ರಾಜಿ ಮಾಡೋಕೊಳ್ಳಬೇಕಾಗಿಲ್ಲ
* ವಿಶೇಷವಾಗಿ ಗ್ರಾಮೀಣ ಭಾರತದಲ್ಲಿ,ಮಹಿಳಾ ಸಬಲೀಕರಣವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ, ಪ್ರತಿ ಮನೆಯ ಮಹಿಳೆಯರ ಹೆಸರಿನಲ್ಲಿ LPG ಸಂಪರ್ಕಗಳನ್ನು ಈ ಯೋಜನೆ ಅಡಿ ನೀಡಲಾಗುತ್ತದೆ.
* ಸಾಮಾಜಿಕ ಆರ್ಥಿಕ ಜಾತಿ ಗಣತಿ ಅಂಕಿ ಸಂಖ್ಯೆ 2011ರ ಮೂಲಕ BPL ಕುಟುಂಬಗಳನ್ನು ಗುರುತಿಸಲಾಗುತ್ತದೆ.
-: ಉಜ್ವಲ 2,0 :-
* 2021-2022 ರ ಕೇಂದ್ರ ಬಜೆಟ್ ನಲ್ಲಿ ಉಜ್ವಲ 2.0 ವನ್ನು ಘೋಷಿಸಲಾಗಿದೆ.
* ಪ್ರಮುಖವಾಗಿ ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಘೋಷಿಸಲಾಗಿದೆ.
* ಇತರ ರಾಜ್ಯಗಳಿಗೆ ಕೆಲಸಕ್ಕೆ ಬರುವ ಕಾರ್ಮಿಕರು,ಉಜ್ವಲ ಯೋಜನೆಗೆ ತಮ್ಮ ಅಲ್ಲಿನ ವಿಳಾಸ ಪುರಾವೆಯನ್ನು ನೀಡುವುದು ಕಷ್ಟವಾಗುವುದರಿಂದ,ಅವರು ಸ್ವಯಂ ಘೋಷಣೆ ಮಾಡಿ ಉಜ್ವಲ ಯೋಜನೆಯ ಫಲಾನುಭವಿಗಳಾಗಲು ಉಜ್ವಲ 2.0 ಅನು ಮಾಡಿಕೊಡುತ್ತದೆ.
” ಅಜ್ಞಾನದ ಭ್ರಮೆ ”
ನಮ್ಮಲ್ಲಿ ಏಕೆ ಒಮ್ಮತವಿಲ್ಲ ಎನ್ನುವುದನ್ನು ವಿವರಿಸಲು ಸ್ವಾಮಿ ವಿವೇಕಾನಂದರು ತಮ್ಮ ಉಪನ್ಯಾಸದಲ್ಲಿ ಹೇಳಿದ ಘಟನೆ ಇದು.
ಒಂದು ಕಪ್ಪೆ ಬಾವಿಯಲ್ಲಿ ವಾಸವಾಗಿತ್ತು.ಆ ಕಪ್ಪೆಯಲ್ಲಿ ಬಹುಕಾಲದಿಂದಲೂ ಇತ್ತು.ಅದು ಅಲ್ಲೇ ಹುಟ್ಟಿ,ಅಲ್ಲೇ ಬೆಳೆದಿತ್ತು. ಇನ್ನು ಸಣ್ಣ ಕಪ್ಪೆಯಾಗಿತ್ತು ಅದು. ಹೀಗಿರುವಾಗ ಒಂದು ದಿನ ಸಮುದ್ರದ ಕಪ್ಪೆ ಯೊಂದು ಅಲ್ಲಿಗೆ ಅಚಾನಕ್ಕಾಗಿ ಬಂದುಬಿತ್ತು.
ಬಾವಿಯ ಕಪ್ಪೆ:- ” ನೀನು ಎಲ್ಲಿದ್ದ ಬಂದೆ ?”
ಸಮುದ್ರದ ಕಪ್ಪೆ :- ” ನಾನು ಸಮುದ್ರದಿಂದ ಬಂದೆ ”
ಬಾವಿಯ ಕಪ್ಪೆ :- ” ಸಮುದ್ರವೇ ! ಅದೆಷ್ಟು ದೊಡ್ಡದು? ಅದು ನನ್ನ ಬಾವಿಯಷ್ಟು ದೊಡ್ಡದೇ?” ಎಂದು ಹೇಳಿ ಬಾವಿಯ ಒಂದು ಕಡೆಯಿಂದ ಮತ್ತೊಂದು ಕಡೆಗೆ ನೆಗೆಯಿತು.
ಸಮುದ್ರ ಕಪ್ಪೆ :- ” ಅಯ್ಯಾ ನನ್ನ ಸ್ನೇಹಿತನೇ,ಸಮುದ್ರವನ್ನು ಬಾವಿಗೆ ಹೇಗೆ ಹೋಲಿಸಬಲ್ಲೆ?”
ಬಾವಿಯ ಕಪ್ಪೆ ಇನ್ನೊಂದು ಸಲ ನೆಗೆದು, ” ನಿನ್ನ ಸಮುದ್ರ ಎಷ್ಟು ದೊಡ್ಡದು?” ಎಂದು ಕೇಳಿತು.
ಸಮುದ್ರ ಕಪ್ಪೆ :- ” ಎಂತಹ ಹುಚ್ಚುತನ ನಿನ್ನದು! ಸಮುದ್ರವನ್ನು ನಿನ್ನ ಬಾವಿಗೆ ಹೋಲಿಸುವೆಯಲ್ಲ?” ಎಂದಿತು.
ಬಾವಿಯ ಕಪ್ಪೆ :- ” ಅದು ಹೇಗಾದರೂ ಇರಲಿ ,ನನ್ನ ಬಾವಿಗಿಂತ ದೊಡ್ಡದು ಯಾವುದು ಇಲ್ಲ.ಇದಕ್ಕಿಂತ ದೊಡ್ಡದು ಯಾವುದು ಇರಲಾರದು.ಇವನೊಬ್ಬ ಸುಳ್ಳುಗಾರ.ಇವನನ್ನು ಹೊರಗೆ ನೂಕಿ” ಎಂದಿತು.
-: ಈ ಘಟನೆಯಿಂದ ಕಲೆಯಬೇಕಾದ ಅಂಶಗಳು :-
ಪ್ರತಿಯೊಂದು ಧರ್ಮದವರು ತಮ್ಮ ಧರ್ಮವೆಂಬ ಬಾವಿಯಲ್ಲಿರುವ ಕಪ್ಪೆಗಳಂತೆ ಇದ್ದಾರೆ.ಅದರಿಂದ ಹೊರಗೆ ಬಂದು ಇತರ ಕಪ್ಪೆಗಳೊಡನೆ ಹೋಲಿಸಿಕೊಳ್ಳುವುದಿಲ್ಲ.ಎಲ್ಲಾ ಬಾವಿಗೂ ನೀರನ್ನು ಒದಗಿಸುವ ಮಳೆ, ಆ ಮಳೆಗೆ ನೀರನ್ನು ಒದಗಿಸುವ ಮಹಾಸಾಗರ ಇವುಗಳ ಕಡೆ ಗಮನವೇ ಕೊಡುವುದಿಲ್ಲ. ಅಲ್ಪ ಮಾನವರಾಗುವುದನ್ನು ಬಿಟ್ಟು ವಿಶ್ವಮಾನವರಾಗೋಣ.