Indian Navy Recruitment: ಭಾರತೀಯ ರಕ್ಷಣಾ ಇಲಾಖೆಯಲ್ಲಿ1800 ಉದ್ಯೋಗಗಳ ನೇಮಕಾತಿ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Indian Navy Recruitment:ಭಾರತೀಯ ರಕ್ಷಣಾ ಇಲಾಖೆ ವ್ಯಾಪ್ತಿಯಲ್ಲಿ ವಿವಿಧ 1800 ಹುದ್ದೆಗಳು ಖಾಲಿ ಇವೆ. ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಅದರಲ್ಲೂ ನೌಕಾ ಇಲಾಖೆ ವ್ಯಾಪ್ತಿಯಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳು ಫೆಬ್ರವರಿ 10ರೊಳಗೆ ಅರ್ಜಿ ಸಲ್ಲಿಸಬೇಕು. ಎಂದು ಇಲಾಖೆ ಅಧಿಸೂಚನೆ ಮಾಹಿತಿ ನೀಡಿದೆ.
ಭಾರತೀಯ ನೌಕಪಡೆಯ ವ್ಯಾಪ್ತಿಯಲ್ಲಿ ಕುಕ್, ಡೆಕ್ ರೇಟಿಂಗ್ ಹುದ್ದೆಗಳು ಸೇರಿದಂತೆ ಒಟ್ಟು 1800 ಹುದ್ದೆಗಳು ಖಾಲಿ ಇವೆ. ಉದ್ಯೋಗಾಸಕ್ತರಿಗೆ ಇದು ಒಂದು ಸುವರ್ಣ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿ ಮತ್ತು ವೇತನ, ವಿದ್ಯಾರ್ಹತೆ, ಶೈಕ್ಷಣಿಕ ಮಾಹಿತಿ ಇಲ್ಲಿದೆ ಈ ಸಂಪೂರ್ಣ ಮಾಹಿತಿ ತಿಳಿದ ಕೂಡಲೇ ಅರ್ಜಿ ಸಲ್ಲಿಸಬೇಕು.
ಭಾರತೀಯ ಮರ್ಚೆಂಟ್ ನೇವಿ ನೇಮಕಾತಿ
• ನೇಮಕಾತಿ ಸಂಸ್ಥೆ: ಇಂಡಿಯನ್ ಮರ್ಚೆಂಟ್ ನೇವಿ.
• ಹುದ್ದೆಗಳು ಹೆಸರು: ಕುಕ್ , ಡೆಕ್ ರೇಟಿಂಗ್
• ಹುದ್ದೆಗಳ ಸಂಖ್ಯೆ: 1800
• ಉದ್ಯೋಗ ಸ್ಥಳ : ಭಾರತ
• ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಫೆಬ್ರವರಿ 10
ಹುದ್ದೆಗಳ ಇತರೆ ಮಾಹಿತಿ, ಡೆಕ್ ರೇಟಿಂಗ್ ಹುದ್ದೆಗಳು 399, ಎಂಜಿನ್ ರೇಟಿಂಗ್ ಪೋಸ್ಟ್ 201, ಇಲಿಶಿಯನ್ 290 ಪೋಸ್ಟ್, ವೆಲ್ಡರ್/ಸಹಾಯಕ 60 ಹುದ್ದೆಗಳು, ಮೆಸ್ ಬಾಯ್ 188 ಹಾಗೂ ಕುಕ್ ಹುದ್ದೆಗಳು 466 ಸೇರಿ ಒಟ್ಟು 1800 ಖಾಲಿ ಇವೆ.
ಶೈಕ್ಷಣಿಕ ವಿದ್ಯಾರ್ಹತೆ ಏನಿರಬೇಕು?
ಅಧಿಸೂಚನೆ ಪ್ರಕಾರ, ಮೆಸ್ ಬಾಯ್, ಕುಕ್, ಡೆಕ್ ರೇಟಿಂಗ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC ಉತ್ತೀರ್ಣವಾಗಿರಬೇಕು. ಇಂಜಿನ್ ರೇಟಿಂಗ್ PUC ಉತ್ತೀರ್ಣವಾಗಿರಬೇಕು ಎಂದು ತಿಳಿಸಲಾಗಿದೆ.
ವಯೋಮಿತಿ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ವಿವರ ನೋಡುವುದಾದರೆ, ಡೆಕ್ ರೇಟಿಂಗ್, ಇಂಜಿನ್ ರೇಟಿಂಗ್ ಹುದ್ದೆಗಳಿಗೆ ಅಭ್ಯರ್ಥಿಗಳಿಗೆ ಕನಿಷ್ಠ 17.5 ರಿಂದ ಗರಿಷ್ಠ 25 ವರ್ಷಗಳು, ಇಲೆಕ್ಟ್ರಿಷಿಯನ್, ವೆಲ್ಡರ್, ಮೆಸ್ ಬಾಯ್, ಕುಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಕನಿಷ್ಠ 17.5 ರಿಂದ ಗರಿಷ್ಠ 27 ವರ್ಷಗಳು ಇರಬೇಕು ಎಂದು ಅಧಿಸೂಚನೆ ತಿಲಳಿಸಲಾಗಿದೆ.
ಅರ್ಜಿ ಶುಲ್ಕ.
ಎಲ್ಲ ವಯೋಮಾನದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು 100 ರೂಪಾಯಿ ನಿಗದಿ ಮಾಡಲಾಗಿದೆ. ಈ ಹಣವನ್ನು ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಪಾವತಿಸಬೇಕು ಎಂದು ತಿಳಿಸಲಾಗಿದೆ.
ಆಯ್ಕೆ ಪ್ರಕ್ರಿಯೆ.
ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನ ನಡೆಯಲಿದೆ. ಆಯ್ಕೆ ಆಗುವವರಿಗೆ ಭಾರತದಲ್ಲಿ ಪೋಸ್ಟಿಂಗ್ ಮಾಡಲಾಗುವುದು.
ವೇತನ ಶ್ರೇಣಿ.
ಒಟ್ಟು ಹುದ್ದೆಗಳ ಪೈಕಿ ಕನಿಷ್ಠ 38000 ರೂಪಾಯಿ ಮತ್ತು ಗರಿಷ್ಠ 85000 ರೂಪಾಯಿವರೆಗೆ ವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಯ ಪ್ರಕ್ರಿಯೆ.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿ ಸಲ್ಲಿಕೆಗೆ https://www.indianmerchantnavy.com/ ಇಲ್ಲಿ ನೀಡಲಾಗಿರುವ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಗತ್ಯ ದಾಖಲೆಗಳ ಸಹಿತ ಕೊನೆಯ ದಿನಕ್ಕೂ ಮೊದಲೇ ಅರ್ಜಿ ಸಲ್ಲಿಸಬೇಕು.
• WEBSITE – CLICK HERE