scholarship Aadhaar: ವಿದ್ಯಾರ್ಥಿ ವೇತನಕ್ಕೆ ಆಧಾರ್ ಅಡ್ಡಿ,18 ಲಕ್ಷ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ | 8 ಲಕ್ಷ ವಿದ್ಯಾರ್ಥಿಗಳ ಆಧಾರ್ ಮಿಸ್ ಮ್ಯಾಚ್.

scholarship Aadhaar: ವಿದ್ಯಾರ್ಥಿ ವೇತನಕ್ಕೆ ಆಧಾರ್ ಅಡ್ಡಿ,18 ಲಕ್ಷ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ | 8 ಲಕ್ಷ ವಿದ್ಯಾರ್ಥಿಗಳ ಆಧಾರ್ ಮಿಸ್ ಮ್ಯಾಚ್.

Aadhaar

scholarship Aadhaar:ರಾಜ್ಯದ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ 18 ಲಕ್ಷ ವಿದ್ಯಾರ್ಥಿಗಳ ಆಧಾರ್(Aadhaar) ಸಂಖ್ಯೆ ಜೋಡಣೆ ಮಾಡದೇ ಇರುವುದು ಮತ್ತು 8 ಲಕ್ಷ ವಿದ್ಯಾರ್ಥಿಗಳ ಹೆಸರಿಗೆ ತಾಳೆ ಆಗದೆ ಇರುವುದು ಬೆಳಕಿಗೆ ಬಂದಿದೆ. ಇದು ವಿದ್ಯಾರ್ಥಿ ವೇತನ ಸೇರಿ ಸರಕಾರದ ವಿವಿದ ಸೌಲಭ್ಯ ಪಡೆಯಲು ಮಕ್ಕಳಿಗೆ ಅಡ್ಡಿಯಾಗಿದೆ.

ಹೆಸರು ಆಧಾರ್( Aadhaar)ಕಾರ್ಡ್‌ನಲ್ಲಿರು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮಳೆ ಶಿಫಾರಸು

ಈಗಾಗಲೇ ವಿದ್ಯಾರ್ಥಿಗಳ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ (ಸ್ಯಾಟ್ಸ್) ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಆಧಾರ್(Aadhaar)ಮೌಲೀಕರಣ ಪೂರ್ಣಗೊಳಿಸಲು 2 ವರ್ಷಗಳಿಂದ ಅವಕಾಶ ನೀಡಲಾಗಿದೆ. ಜನವರಿ 23ರ ತನಕ ಲಭ್ಯವಾದ ದತ್ತಾಂಶಗಳ ಪ್ರಕಾರ, ರಾಜ್ಯದ 1.04 ಕೋಟಿ ವಿದ್ಯಾರ್ಥಿಗಳಲ್ಲಿ 78 ಲಕ್ಷ ವಿದ್ಯಾರ್ಥಿಗಳ ಆಧಾ‌ರ್(Aadhaar) ಮೌಲೀಕರಣ ಪೂರ್ಣಗೊಂಡಿದೆ. ಇನ್ನೂ 18 ಲಕ್ಷ ಮಕ್ಕಳ ಆಧಾ‌ರ್ ನಂಬರ್ ಮೌಲೀಕರಣ no

ಜತೆಗೆ ಸುಮಾರು 3 ಲಕ್ಷ ಮಕ್ಕಳ ಆಧಾರ್ ಮೌಲೀಕರಣ ಮಾಡಿದ್ದರೂ ಆಧಾ‌ರ್ ಮತ್ತು ಸ್ಯಾಟ್ ನಲ್ಲಿ ವಿದ್ಯಾರ್ಥಿಗಳ ಹೆಸರು ತಾಳೆಯಾಗದ ಕಾರಣ ಮೌಲೀಕರಣ ವಿಫಲವೆಂದು ಪರಿಗಣಿಸಲಾಗಿದೆ. ಈ ಬಗ್ಗೆ ವಿಶೇಷ ಶಿಬಿರ ನಡೆಸುವಂತೆ ಶಿಕ್ಷಣ ಇಲಾಖೆ ಕಟ್ಟಪ್ಪಣೆ ಹೊರಡಿಸಿದ್ದರೂ ಸಾಕಾರವಾಗುತ್ತಿಲ್ಲ

ವಿದ್ಯಾರ್ಥಿ ವೇತನ ಅರ್ಜಿ ಬಾಕಿ(scholarship Aadhaar).

ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನಕ್ಕೆ ಸಂಬಂಧಿ ಸಿದಂತೆ ಇದುವರೆಗೆ 2.60 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಬಾಕಿ ಇರುವುದು ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳ ಪೋಷಕರಿಗೆ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ಸೂಕ್ತ ಮಾರ್ಗದರ್ಶನ ನೀಡುವಂತೆಯೂ ಎಲ್ಲ ಶಾಲೆಗಳಿಗೆ ಶಿಕ್ಷಣ ಇಲಾಖೆ ಸೂಚಿಸಿದೆ.

ವಿಶೇಷ ಶಿಬಿರ.

ವಿದ್ಯಾರ್ಥಿಗಳಿಗೆ ಆಧಾ‌ರ್ ಇದ್ದು, ಸ್ಟಾಟ್ಸ್ ತಂತ್ರಾಂಶದಲ್ಲಿ ಮೌಲೀಕರಣ ಆಗದೇ ಇದ್ದಲ್ಲಿ ಪೋಷಕರಿಂದ ಆಧಾರ ಮಾಹಿತಿ ಪಡೆದು ತಂತ್ರಾಂಶದಲ್ಲಿ ಮೌಲೀಕರಣ ಮಾಡಬೇಕು. ಹೆಚ್ಚು ಬಾಕಿ ಇರುವ ಶಾಲೆಗಳಲ್ಲಿ ವಿಶೇಷ ಶಿಬಿರಗಳನ್ನು ಹಮ್ಮಿಕೊಳ್ಳಬೇಕು. ಈ ಕಾರ್ಯಕ್ಕೆ ನೋಡಲ್‌ ಅಧಿಕಾರಿಯನ್ನೂ ನಿಯೋಜಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಲ್ಲಿ ವಿಶೇಷ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿಯ ಶಾಲಾ ಶಿಕ್ಷಣದ ಅಪರ ಆಯುಕ್ತ ಡಾ. ಎಸ್. ಪ್ರಕಾಶ್ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.

ಶಿಸ್ತು ಕ್ರಮಕ್ಕೆ ನಿರ್ಧಾರ.

26 ಲಕ್ಷ ಮಕ್ಕಳ ಆಧಾ‌ರ್( Aadhaar)ಮೌಲೀಕರಣ ತಂತ್ರಾಂಶದಲ್ಲಿ ಬಾಕಿ ಇರುವುದರಿಂದ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಮತ್ತು ಹಿದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿ ವಿವಿಧ ಇಲಾಖೆಗಳ ವಿದ್ಯಾರ್ಥಿ ವೇತನಕ್ಕೆ  ಅರ್ಜಿ ಹಾಕಲು ಆಗುತ್ತಿಲ್ಲ. ಆಧಾರ್ ಲಿಂಕ್ ವಿಳಂಬಕ್ಕೆ ಕಾರಣರಾದವರ ವಿರುದ್ಧಶಿಸ್ತು ಕ್ರಮಕ್ಕೆ ಸರಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ತೊಂದರೆ ಏನು?

ಈಗ ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಕೆಲಸ ನಡೆಯುತ್ತಿದೆ. ಶಿಕ್ಷಕರು ಇದರಲ್ಲಿ ಮಗ್ನರಾಗಿದ್ದಾರೆ. ವಿದ್ಯಾರ್ಥಿಗಳ ಹೆಸರಿನ ಸ್ಪೆಲಿಂಗ್ ದೋಷದಿಂದ ಮ್ಯಾಚ್ ಆಗುತ್ತಿಲ್ಲ. ಇದು ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಅದಕ್ಕಾಗಿ ಆಧಾರ್ ತಿದ್ದುಪಡಿ ಮಾಡಿಕೊಂಡು ಬರುವಂತೆ ಪಾಲಕರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

WhatsApp Group Join Now
Telegram Group Join Now

Leave a Comment