GPSTR: ಸಾಮಾನ್ಯ ವರ್ಗದಲ್ಲಿ ನೇಮಕಾತಿ ಹೊಂದಿದ GPSTR ಪದವೀಧರ ಪ್ರಾಥಮಿಕ(6-8)ಶಿಕ್ಷಕರಿಗೆ ಸಿಂದುತ್ವ ಪ್ರಮಾಣ ಪತ್ರ ಕಡ್ಡಾಯ ಗೊಳಿಸದೆ ನೇಮಕಾತಿ ಆದೇಶ ನೀಡುವ ಕುರಿತು-2025.
GPSTR: 2022ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (GPSTR.6 ರಿಂದ 8ನೇ ತರಗತಿ) ಹುದ್ದೆಗೆ ಸಾಮಾನ್ಯ ವರ್ಗದಲ್ಲಿ (General Merit) ಆಯ್ಕೆಯಾದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮಾನ್ಯ ಕರ್ನಾಟಕ ರಾಜ್ಯ ಆಡಳಿತ ಮಂಡಳಿ, ಬೆಂಗಳೂರು ಪೀಠವು ದಿನಾಂಕ: 08.04.2024 ರಂದು ನೀಡಿರುವ ತೀರ್ಪಿನನ್ನಯ ಸಿಂಧುತ್ವ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸದೆ ಸದರಿ ಪ್ರಮಾಣ ಪತ್ರದಿಂದ ವಿನಾಯಿತಿ ನೀಡಿ ನೇಮಕಾತಿ ಆದೇಶ ನೀಡುವ ಕುರಿತು.
-
Click here…
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ (1)ರ ಮನವಿ ಪತ್ರಗಳಲ್ಲಿ 2022ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (GPSTR.6 ರಿಂದ 8ನೇ ತರಗತಿ) ಹುದ್ದೆಗೆ ಹಿಂದುಳಿದ ವರ್ಗಗಳ ಮೀಸಲಾತಿಯಡಿ ಅರ್ಜಿ ಸಲ್ಲಿಸಿ ಸಾಮಾನ್ಯ ವರ್ಗದಡಿ ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿದ್ದು, ಮಾನ್ಯ ಕರ್ನಾಟಕ ರಾಜ್ಯ ಆಡಳಿತ ಮಂಡಳಿ, ಬೆಂಗಳೂರು ಪೀಠವು ಅರ್ಜಿ : 5126/2023 C/w 5127/2023, 5128/2023, 5129/2023, 5135/2023, 5136/2023, 5148/2023, 5149/2023, 5150/2023, 5355/2023, 5356/2023 2 5357/20230 ಪ್ರಕರಣಗಳಲ್ಲಿ ದಿನಾಂಕ: 08.04.2024 ರಂದು ನೀಡಿರುವ ತೀರ್ಪಿನನ್ವಯ ಸಿಂಧುತ್ವ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸದೆ ಸದರಿ ಪ್ರಮಾಣ ಪತ್ರಗಳಿಂದ ವಿನಾಯಿತಿ ನೀಡಿ ನೇಮಕಾತಿ ಆದೇಶಗಳನ್ನು ನೀಡುವಂತೆ ಅಭ್ಯರ್ಥಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿರುತ್ತಾರೆ.
ಮಾನ್ಯ ನ್ಯಾಯಮಂಡಳಿಯು ದಿನಾಂಕ: 08.04.2024 ರಂದು ನೀಡಿರುವ ತೀರ್ಪಿನನ್ವಯ ಸಾಮಾನ್ಯ ವರ್ಗದಡಿ ಆಯ್ಕೆಯಾದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಸಿಂಧುತ್ವ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸದೆ ಸದರಿ ಪ್ರಮಾಣ ಪತ್ರದಿಂದ ವಿನಾಯಿತಿ ನೀಡಿ ನೇಮಕಾತಿ ಆದೇಶಗಳನ್ನು ನೀಡುವ ಕುರಿತಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಭಿಪ್ರಾಯವನ್ನು ಪಡೆಯಲಾಗಿರುತ್ತದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಕಾನೂನು ಇಲಾಖೆಯ ಅಭಿಪ್ರಾಯ ಪಡೆದು ಹಿಂದುಳಿದ ವರ್ಗಗಳ ಮೀಸಲಾತಿಯಡಿ ಅರ್ಜಿ ಸಲ್ಲಿಸಿ ಸದರಿ ಮೀಸಲಾತಿಯ ಯಾವುದೇ ಸೌಲಭ್ಯವನ್ನು ಪಡೆಯದಿದ್ದರೆ ಅವರಿಗೆ ಸಿಂಧುತ್ವವನ್ನು ಕಡ್ಡಾಯಗೊಳಿಸಬಾರದು ಎಂದು ಅಭಿಪ್ರಾಯ ನೀಡಿರುತ್ತದೆ(GPSTR).
-
Click here…
ಅದರಂತೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ನೀಡಿರುವ ಅಭಿಪ್ರಾಯದನ್ವಯ ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಉಲ್ಲೇಖ(2)ರ ಆದೇಶವನ್ನು ಅನುಷ್ಠಾನಗೊಳಿಸುವ ಬಗ್ಗೆ ಪರಿಶೀಲಿಸಲಾಗಿದೆ. ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯಿಂದ ಆದೇಶ ಪಡೆದಿರುವ ಅಭ್ಯರ್ಥಿಗಳಿಗೆ ಹಾಗೂ ಇದೇ ರೀತಿಯ ಸಮನಾಂತರ ಪ್ರಕರಣಗಳಲ್ಲಿನ ಎಲ್ಲ ಅಭ್ಯರ್ಥಿಗಳಿಗೆ ಏಕ ಪ್ರಕಾರವಾಗಿ ಅನ್ವಯವಾಗುವಂತೆ ಈ ಕೆಳಗಿನಂತೆ ಕ್ರಮ ವಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಮಗೆ ತಿಳಿಸಲು ನಿರ್ದೇಶಿತಳಾಗಿದ್ದೇನೆ.
1 thought on “GPSTR: ಸಾಮಾನ್ಯ ವರ್ಗದಲ್ಲಿ ನೇಮಕಾತಿ ಹೊಂದಿದ GPSTR ಪದವೀಧರ ಪ್ರಾಥಮಿಕ(6-8)ಶಿಕ್ಷಕರಿಗೆ ಸಿಂದುತ್ವ ಪ್ರಮಾಣ ಪತ್ರ ಕಡ್ಡಾಯ ಗೊಳಿಸದೆ ನೇಮಕಾತಿ ಆದೇಶ ನೀಡುವ ಕುರಿತು-2025.”