8th Pay Commission: ಫಿಟ್‌ಮೆಂಟ್ ಹೆಚ್ಚಾದರೆ ನೌಕರರ ಕನಿಷ್ಠ ವೇತನ ಎಷ್ಟು ಏರಿಕೆ, ವೇತನ ಬದಲಾವಣೆ ಲೆಕ್ಕಾಚಾರ-2025.

8th Pay Commission: ಫಿಟ್‌ಮೆಂಟ್ ಹೆಚ್ಚಾದರೆ ನೌಕರರ ಕನಿಷ್ಠ ವೇತನ ಎಷ್ಟು ಏರಿಕೆ, ವೇತನ ಬದಲಾವಣೆ ಲೆಕ್ಕಾಚಾರ-2025.

8th Pay Commission

8th Pay Commission:ಕೇಂದ್ರ ಸರ್ಕಾರ ಜಾರಿಗೆ ತಂದ 7th Pay Commission ವೇತನ ಆಯೋಗದ ಅವಧಿ ಇನ್ನೇನು ಪೂರ್ಣಗೊಳ್ಳುತ್ತಿದೆ. ಈ ಕಾರಣದಿಂದ ಕೋಟ್ಯಾಂತರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಬಹುನಿರೀಕ್ಷೆಯ 8th Pay Commission ಜಾರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಜನವರಿ 16ರಂದು ಅನುಮೋದನೆ ನೀಡಿ ಸುಮಾರು 50 ಲಕ್ಷ ನೌಕರರು ಮತ್ತು 65 ಲಕ್ಷ ಪಿಂಚಣಿದಾರರಿಗೆ ಶುಭ ಸುದ್ದಿ ನೀಡಲಾಗಿದೆ.

ಇದೀಗ 8ನೇ ವೇತನ ಆಯೋಗ ಜಾರಿಯಾದರೆ ಎಷ್ಟೆಲ್ಲಾ ವೇತನ, ಭತ್ಯೆಗಳು ಹೆಚ್ಚಾಗಬಹುದು. ಹಾಲಿ ವೇತನ ಆಯೋಗದಲ್ಲಿ ಹೆಚ್ಚು ವೇತನ ಪಡೆಯುತ್ತಿರುವವರು ಯಾರು, ಮುಖ್ಯವಾಗಿ ಫಿಟ್‌ಮೆಂಟ್ ಅಂಶ ಹೆಚ್ಚಾದರೆ ಏನೆಲ್ಲಾ ಬದಲಾವಣೆ ಆಗಲಿದೆ ಎಂದು ತಿಳಿಯೋಣ.

2016 ಜನವರಿಯಂದು 7ನೇ ವೇತನ ಆಯೋಗ ಅನುಷ್ಠಾನಕ್ಕೆ ಬಂದಿದೆ. ಕೆಲವು ಸೂತ್ರಗಳ ಮೇಲೆ, ಶಿಫಾರಸು ಪರಿಗಣಿಸಿ ಆಯೋಗ ಜಾರಿಗೊಳಿಸಲಾಗಿದೆ. ಇದು 2026ರ ಕ್ಕೆ ಕೊನೆಗೊಳ್ಳುತ್ತಿದ್ದಂತೆ 8ನೇ ವೇತನ ಆಯೋಗ ಜಾರಿಗೆ ಬರಬೇಕಿದೆ. ಇದಕ್ಕೆ ಅನುಮೋದನೆ ನೀಡಲಾಗಿದೆ. ಇದರ ಅಡಿಯಲ್ಲಿ ನೌಕರರ ವೇತನ ₹51,480ಗೆ ಏರಿಕೆ ಆಗಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.

ಹೌದು, 7 ನೇ ವೇತನ ಆಯೋಗಡಿ ಫಿಟ್‌ಮೆಂಟ್ ಅಂಶದ ಮೇಲೆ ನೌಕರರಿಗೆ ಕನಿಷ್ಠ ವೇತನ ಮಾಸಿಕ 18,000 ರೂ.ಗಳಿಗೆ ಹೆಚ್ಚಾಯಿತು. ಇನ್ನೂ ಅಪೆಕ್ಸ್ ಸ್ಕೇಲ್‌ಗೆ ತಿಂಗಳಿಗೆ 2,25,000 ರೂ. ಇದ್ದರೆ, ಅದೇ ವೇತನ ಆಯೋಗದಡಿ ಕ್ಯಾಬಿನೆಟ್ ಕಾರ್ಯದರ್ಶಿ ಮತ್ತು ಇತರ ಕೆಲವರಿಗೆ ಮಾಸಿಕ 2,50,000 ರೂ. ವೇತನ ಇದೆ.

8th Pay Commission: 3 ಫಿಟ್‌ಮೆಂಟ್ ಅಂಶಗಳು.

8th Pay Commission

ವೇತನ ಸಮಿತಿಯು ಫಿಟ್‌ಮೆಂಟ್ ಅಂಶವನ್ನು 1.92 ರಿಂದ 2.86 ಆಧರಿಸಿದೆ. ಸದ್ಯ 2.86 ಫಿಟ್‌ಮೆಂಟ್ ಅಂಶ ಆಧರಿಸಿ ವೇತನ, ಭತ್ಯೆ ಪರಿಷ್ಕರಣೆ ಮಾಡಬೇಕು ಎಂದು ನೌಕರರ ಒಕ್ಕೂಟವು ಕೇಂದ್ರಕ್ಕೆ ಮನವಿ ಮಾಡಿದೆ. 8ನೇ ವೇತನ ಆಯೋಗ ಜಾರಿ ವೇಳೆ 2.86 ಫಿಟ್‌ಮೆಂಟ್ ಅಂಶ ಪರಿಗಣಿಸಲು ಗ್ರಿನ್ ಸಿಗ್ನಲ್ ಸಿಕ್ಕರೆ ಸರ್ಕಾರಿ ಉದ್ಯೋಗಿಗಳ ಮಾಸಿಕ ಕನಿಷ್ಠ ಮೂಲ ವೇತನ 18,000 ರೂ.ನಿಂದ 51,480 ರೂ.ಗೆ ಹೆಚ್ಚಾಗಲಿದೆ. ಇತ್ತ ಕನಿಷ್ಠ ಪಿಂಚಣಿ ಮೊತ್ತ ಹಾಲಿ 9,000 ರೂ.ನಿಂದ 25,740 ರೂ.ಗೆ ಹೆಚ್ಚಾಗಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ.

ಈ ಹಿಂದೆ 7ನೇ ವೇತನ ಆಯೋಗ ಫಿಟ್‌ಮೆಂಟ್ ಅಂಶವನ್ನು 2.57 ಪರಿಗಣಿಸಲು ಶೀಫಾರಸು ಮಾಡಿತ್ತು. 8ನೇ ವೇತನ ಆಯೋಗ ಜಾರಿಗೆ ವೇಳೆ ಈಗಾಗಲೇ  3 ಫಿಟ್‌ಮೆಂಟ್ ಅಂಶ ಕುರಿತು ಶಿಫಾರಸು ಸಲ್ಲಿಕೆ ಆಗಿದೆ. ಫಿಟ್‌ಮೆಂಟ್ ಅಂಶ 1.92, 2ನೇಯದ್ದು 2.8 ಮತ್ತು 2.86 ಫಿಟ್‌ಮೆಂಟ್ ಆದರಿಸಿ ವೇತನ ಹೆಚ್ಚಿಸಲು ಕೋರಲಾಗಿತ್ತು.

8th Pay Commission: ಫಿಟ್‌ಮೆಂಟ್ ಅಡಿ ಮೂರು ಹಂತಗಳಲ್ಲಿ ವೇತನ ಏರಿಕೆ?

8ನೇ ವೇತನ ಆಯೋಗದ ಅಡಿ ಫಿಟ್‌ಮೆಂಟ್ ಅಂಶ 2.8 ಪರಿಗಣಿಸಿದರೆ ಮೂಲ ವೇತನವು ಹಂತ 1 ಉದ್ಯೋಗಿಗಳಿಗೆ 37,440 ರೂ. ಹೆಚ್ಚಾಗಲಿದ್ದು, ಹಂಕ 10 ಉದ್ಯೋಗಿಗಳಿಗೆ ವೇತನ 1,16,688 ರೂ.ಗೆ ಹೆಚ್ಚಾಗಲಿದೆ. ಅದೇ ರೀತಿ ಫಿಟ್‌ಮೆಂಟ್ ಅಂಶ 2.86 ಅನುಸರಿಸಿದರೆ ಹಂತ 1 ಉದ್ಯೋಗಿಗಳಿಗೆ 51,480 ರೂ. ಹಾಗೂ ಹಂತ 10 ಉದ್ಯೋಗಿಗಳಿಗೆ 1,60,446 ರೂಪಾಯಿಗೆ ಏರಿಕೆ ಆಗುವ ನಿರೀಕ್ಷೆಗಳು ಇವೆ.

ಈ ಬಗ್ಗೆ ನೌಕರರು ಮತ್ತು ಪಿಂಚಣಿದಾರರು ಸರ್ಕಾರ ಅನುಮೋದನೆ ನೀಡಿದಾಗಿನಿಂತ ಲೆಕ್ಕ ಹಾಕುತ್ತಲೇ ಇದ್ದಾರೆ. ಸದ್ಯ ಮುಂದಿನ ದಿನಗಳಲ್ಲಿ ಅಧಿಕೃತ ಅಂಕಿ ಸಂಖ್ಯೆಗಳು ಗೊತ್ತಾಗಲಿವೆ.

WhatsApp Group Join Now
Telegram Group Join Now

Leave a Comment