-: ವಿಷಯ :-
ವಿಶ್ವಸಂಸ್ಥೆಯ ವಿಶ್ವ ಹವಮಾನ ಸಂಸ್ಥೆ ತನ್ನ ವಾರ್ಷಿಕ ಹವಮಾನ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.
-: ಈ ವರದಿಯ ಪ್ರಮುಖ ಅಂಶಗಳು :-
* 2023 ಇದುವರೆಗೆ ದಾಖಲಾದ ಅತ್ಯಂತ ಹೆಚ್ಚು ತಾಪಮಾನವಾದ ವರ್ಷ ಎಂದು ಸೂಚಿಸುವ ಪ್ರಾಥಮಿಕ ದತ್ತಾಂಶವನ್ನು ಇದು ಧೃಡಪಡಿಸಿದೆ.
* ಭೂಮಂಡಲದಲ್ಲಿನ ತಾಪಮಾನದ ಏರಿಕೆಯು ಕೈಗಾರಿಕಾ ಕ್ರಾಂತಿಗೂ ಮೊದಲಿನ ಮಟ್ಟದ ತಾಪಮಾನಕ್ಕೆ ಹೋಲಿಸಿದರೆ 1.5 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಇರಬೇಕು ಎಂಬ ಗುರಿಯಿದೆ.
* ಆದರೆ ವರದಿಯ ಪ್ರಕಾರ 2023 ರಲ್ಲಿ ಸರಾಸರಿ ತಾಪಮಾನ ಏರಿಕೆ 1.45 ಡಿಗ್ರಿ ಸೆಲ್ಸಿಯಸ್ ನಷ್ಟಿದ್ದು ಇದು ಅತಿ ಆಂತಕಕ್ಕೆ ಕಾರಣವಾಗಿದೆ.
* ತಾಪಮಾನದ ದಶಕ :- ಕಳೆದ ದಶಕ ಅತ್ಯಂತ ಹೆಚ್ಚು ತಾಪಮಾನದ ದಶಕವಾಗಿದೆ.
* ಕಳೆದ ವರ್ಷದಲ್ಲಿ ವಿಶ್ವದಲ್ಲಿ ಹಸಿರು ಮನೆಯ ಅನಿಲಗಳಾದ ಕಾರ್ಬನ್ ಡೈ ಆಕ್ಸೈಡ್, ಮಿಥೇನ್,ಮತ್ತು ನೈಟ್ರಿಸ್ ಆಕ್ಸೈಡಗಳ ಹೊರ ಸೂಸುವಿಕೆಯು ದಾಖಲೆಯ ಮಟ್ಟದಲ್ಲಿ ಹೆಚ್ಚಾಗಿದೆ.
* 2023 ರಲ್ಲಿ ಭೂಮಿಯ ಶೇ. 90 ರಷ್ಟು ಸಾಗರ ಪ್ರದೇಶಗಳು ಉಷ್ಣ ಮಾರುತ ಕಂಡಿದೆ. ಇದರ ಪರಿಣಾಮವಾಗಿ ಸ್ವಿಜರ್ಲೆಂಡಿನ್ ಅಲೈನ್ ಹಿಮ ಪರ್ವತದಲ್ಲಿ ಎರಡು ವರ್ಷದಲ್ಲಿ ಶೇ.20 ರಷ್ಟು ಹಿಮ ಕರಗಿದೆ.
* ಇನ್ನು ಈ ಹಿಮ ಕರಗುವಿಕೆ, ಸಮುದ್ರದ ಉಷ್ಣತೆಯಿಂದಾಗಿ ಸಮುದ್ರ ಮಟ್ಟ ಏರಿಕೆಯಾಗಿದೆ. ಹವಳದ ದ್ವೀಪಗಳು ಕಳೆ ಗುಂದುತ್ತಿವೆ. ಜಲಚರಗಳು ನಶಿಸುತ್ತಿವೆ ಎಂದು ವರದಿ ಆತಂಕಕಾರಿ ಅಂಶಗಳನ್ನು ಹೊರಹಾಕಿದೆ.
-: ವಿಶ್ವ ಹವಮಾನ ಸಂಸ್ಥೆಯ ಬಗ್ಗೆ ತಿಳಿಯಿರಿ :-
* ಇದು ವಿಶ್ವ ಸಂಸ್ಥೆಯ ಪ್ರಮುಖ ಸಂಸ್ಥೆಯಾಗಿದ್ದು ಮಾರ್ಚ್ 23 1950 ರಲ್ಲಿ ಇದನ್ನು ಸ್ಥಾಪಿಸಲಾಯಿತು.
* ಹಾಗಾಗಿ ಮಾರ್ಚ 23 ಅನ್ನು ವಿಶ್ವ ಹವಮಾನ ದಿನ ಎಂದು ಆಚರಿಸಲಾಗುತ್ತದೆ.
* ಈ ಸಂಸ್ಥೆಯು ಹವಮಾನ,ಭೌಗೋಳಿಕ ವಿಜ್ಞಾನ ಹಾಗೂ ಆಪರೇಷನಲ್ ಹೈಡ್ರಾಲಜಿ ವಿಷಯಗಳ ಬಗ್ಗೆ ಅಧ್ಯಯನಗಳನ್ನು ಕೈಗೊಳ್ಳುವ ಕಾರ್ಯವನ್ನು ಮಾಡುತ್ತಾ ಬಂದಿದೆ.
* ಪ್ರಧಾನ ಕಚೇರಿ :- ಜಿನಿವಾ ಸ್ವಿಟ್ಜರ್ಲೆಂಡ್
* ಸದಸ್ಯ ರಾಷ್ಟ್ರಗಳು :- 191