KPSC: ಕರ್ನಾಟಕ ಲೋಕಸೇವಾ ಆಯೋಗವು(KPSC) ಪ್ರಕಟಿಸಿರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿಗೊಳಿಸಿ, ನೇಮಕಾತಿ ಆದೇಶ ನೀಡುವ ಬಗ್ಗೆ-2025.
KPSC:ಕರ್ನಾಟಕ ಲೋಕಸೇವಾ ಆಯೋಗವು(KPSC) ಉಲ್ಲೇಖ-(1) ರ ರೀತ್ಯಾ ಪ್ರಕಟಿಸಿರುವ ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ರಾಜ್ಯವ್ಯಾಪಿ ಉಳಿಕೆ ಮೂಲ ವೃಂದದ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಆಯ್ಕೆಯಾಗಿರುವ ಕೆಳಕಂಡ ಅಭ್ಯರ್ಥಿಗಳ ವಿದ್ಯಾರ್ಹತೆ, ಮೀಸಲಾತಿ ಸಂಬಂಧಿತ ಪ್ರಮಾಣ ಪತ್ರಗಳ ನೈಜತೆ ವರದಿಗಳು ಹಾಗೂ ಪ್ರಮಾಣ ಪತ್ರಗಳು ಸಕ್ರಮ ಪ್ರಾಧಿಕಾರಗಳಿಂದ ಸ್ವೀಕೃತವಾಗಿದ್ದು ಸದರಿ ಪ್ರಮಾಣ ಪತ್ರಗಳು ಹಾಗೂ ವರದಿಗಳು ಕ್ರಮಬದ್ಧವಾಗಿರುವ ಹಿನ್ನೆಲೆಯಲ್ಲಿ, ಸಂಬಂಧಿಸಿದ ಅಭ್ಯರ್ಥಿಗಳಿಗೆ ಉಲ್ಲೇಖ-(02) ರಂತೆ ಆನ್‌ಲೈನ್ ಮೂಲಕ ಸ್ಥಳ ಆಯ್ಕೆ ಕೌನ್ಸೆಲಿಂಗ್ ನಡೆಸಲಾಗಿದ್ದು, ಅಭ್ಯರ್ಥಿಗಳು ಅವರ ಹೆಸರಿನ ಮುಂದೆ ಕಾಲಂ-6 ರಲ್ಲಿ ತಿಳಿಸಿರುವ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ.
ಅದರನ್ವಯ, ಸ್ಥಳ ಆಯ್ಕೆ ಮಾಡಿಕೊಂಡಿರುವ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಯ ಎದುರಾಗಿ ವೇತನ ಶ್ರೇಣಿ: ರೂ.44425-1125-47800-1250-52800-1375-58300-1500-64300-1650-74200-1900-83700 , ರಲ್ಲಿ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಂತೆ ನೇಮಕಾತಿ ನೀಡಿ, ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.(KPSC)
- Read more…
pm awas yojana 2025 | ಪಿಎಂ ಆವಾಸ್ ಯೋಜನೆ ಅರ್ಜಿ ಪ್ರಾರಂಭ ಬೇಗ ಅರ್ಜಿ ಸಲ್ಲಿಸಿ ಉಚಿತ ಮನೆ ಪಡೆದುಕೊಂಡಿದೆ
2 thoughts on “KPSC: ಕರ್ನಾಟಕ ಲೋಕಸೇವಾ ಆಯೋಗವು(KPSC) ಪ್ರಕಟಿಸಿರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿಗೊಳಿಸಿ, ನೇಮಕಾತಿ ಆದೇಶ ನೀಡುವ ಬಗ್ಗೆ-2025.”