Home loan: ಈ 4 ಸಲಹೆ ಪಾಲಿಸಿದರೆ ಗೃಹ ಸಾಲದ EMI ಕಡಿಮೆ ಮಾಡಿಕೊಳ್ಳಲು ಈ 4 ಸಲಹೆ ಪಾಲಿಸಿದರೆ ಸಾಕು.

Home loan: ಈ 4 ಸಲಹೆ ಪಾಲಿಸಿದರೆ ಗೃಹ ಸಾಲದ EMI ಕಡಿಮೆ ಮಾಡಿಕೊಳ್ಳಲು ಈ 4 ಸಲಹೆ ಪಾಲಿಸಿದರೆ ಸಾಕು.

Home loan

Home loan:ಈ ಗೃಹ ಸಾಲ ಇಲ್ಲದ ಮನೆಯೇ ಇಲ್ಲ ಎಂಬಂತೆ ಆಗಿದೆ ಈಗಿನ ದಿನಗಳಲ್ಲಿ. ಈಗ ಗೃಹ ಸಾಲದ(Home loan) EMI ಬಡ್ಡಿದರವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬ ಸಂಗತಿ ನಿಮಗೆ ಗೊತ್ತೇ.. ಇದೀಗ RBI ರೆಪೋ ದರವನ್ನು ಪರಿಷ್ಕರಿಸಿರುವುದರಿಂದ ಬ್ಯಾಂಕ್ಗಳು ಸಹ ಬಡ್ಡಿ ದರವನ್ನು ಪರಿಷ್ಕರಿಸುತ್ತವೆ. ಆದರೆ ಯಾರು ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುತ್ತಾರೆಯೋ ಅವರು ಈ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ.ನಿಮಗೆ ಕಡಿಮೆ ಕ್ರೆಡಿಟ್ ಸ್ಕೋರ್ ಇದ್ದು, ನಿಮ್ಮ ಗೃಹ ಸಾಲದ(Home loan)ಬಡ್ಡಿದರ ಇನ್ನೂ ಕಡಿಮೆಯಾಗಿರದಿದ್ದರೆ ನಿಮಗೆ ಕೆಲವು ದಾರಿಗಳಿವೆ. ಈ ಕೆಳಗಿನ ನಾಲ್ಕು ಸಲಹೆಗಳನ್ನು ಪಾಲಿಸಿದರೆ EMI ಕಡಿಮೆ ಮಾಡಿಕೊಳ್ಳಬಹುದು.

1. ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್‌ ಪರಿಶೀಲಿಸಿ.

ಕಳೆದ 2-3 ವರ್ಷಗಳಲ್ಲಿ ನೀವು ನಿಯಮಿತವಾಗಿ EMIಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದ್ದರೆ ಹಾಗೂ ಡಿಫಾಲ್ಟ್ ಆಗಿರದಿದ್ದರೆ ಇಷ್ಟು ಹೊತ್ತಿಗೆ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗಿರುತ್ತದೆ. ನಿಮ್ಮ ಸಿಬಿಲ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚಾಗಿದೆಯೇ ಎಂಬುದನ್ನು ಪರಿಶೀಲಿಸಿ. ಹೆಚ್ಚಾಗಿದ್ದರೆ ಮುಂದಿನ ಹಂತಕ್ಕೆ ತೆರಳಿ. ಇಲ್ಲವೇ ನಿಮ್ಮ ಸಿಬಿಲ್ ಸ್ಕೋರ್ ಹೆಚ್ಚಿಸಲು ಪ್ರಯತ್ನಿಸಿ.

2.ನಿಮ್ಮ ಗೃಹ ಸಾಲದ(Home loan)ಬಡ್ಡಿ ದರ ಚೆಕ್ ಮಾಡಿ.

ನಿಮ್ಮ ಬ್ಯಾಂಕ್‌ನ ಅಥವಾ ನೀವು ಸಾಲ ಪಡೆದ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ನಿಮಗೆ ಅವರು ಎಷ್ಟು ಬಡ್ಡಿದರ ವಿಧಿಸುತ್ತಿದ್ದಾರೆ ಎಂದು ನೋಡಿ. ನಿಮ್ಮ ಕ್ರೆಡಿಟ್ ಸ್ಕೋರ್ 750 + ಇದ್ದರೆ ಮತ್ತು ಬ್ಯಾಂಕ್ ಈಗಾಗಲೇ ನಿಮಗೆ ಕನಿಷ್ಠ ಬಡ್ಡಿ ದರ ವಿಧಿಸುತ್ತಿದ್ದರೆ ಬೇರೇನೂ ಮಾಡುವ ಅಗತ್ಯವಿಲ್ಲ, ಖುಷಿಪಡಿ. ಆದರೆ ಒಂದು ವೇಳೆ ಹಾಗಿಲ್ಲದಿದ್ದರೆ ಮುಂದಿನ ಹಂತಕ್ಕೆ ತೆರಳಿ(Home loan).

3.ಬಡ್ಡಿ ದರ ಕಡಿಮೆ ಮಾಡಲು ಬ್ಯಾಂಕ್‌ಗೆ ಮನವಿ ಮಾಡಿ.

ನಿಮ್ಮ ಕ್ರೆಡಿಟ್ ಸ್ಕೋರ್ ಜಾಸ್ತಿಯಾಗಿದೆ ಮತ್ತು RBI ರೆಪೋ ದರ ಕಡಿಮೆ ಮಾಡಿರುವುದರಿಂದ ಬಡ್ಡಿ ದರ ಕಡಿಮೆ ಮಾಡಲು ನಿಮ್ಮ ಬ್ಯಾಂಕ್‌ಗೆ ಇಮೇಲ್ ಮುಖಾಂತರ ಅಥವಾ ನೇರವಾಗಿ ಭೇಟಿ ನೀಡಿ ತಿಳಿಸಿ. ಬಡ್ಡಿ ದರ ಕಡಿಮೆ ಮಾಡಲು ವಿನಂತಿಸಿ. ಬ್ಯಾಂಕ್ ನಿರಾಕರಿಸಿದರೆ ನೀವು ಸಾಲ ವರ್ಗಾಯಿಸುವುದಾಗಿ ತಿಳಿಸಿ. ಬಹುತೇಕ ಯಾವುದೇ ಬ್ಯಾಂಕುಗಳೂ ತಮ್ಮ ಹಳೆಯ ಮತ್ತು ಒಳ್ಳೆಯ ಗ್ರಾಹಕರನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಆದ್ದರಿಂದ ಅವರು ನಿಮ್ಮ ಮಾತಿಗೆ ಒಪ್ಪಿದರೂ ಒಪ್ಪಬಹುದು. ಒಪ್ಪದಿದ್ದರೆ ನಾಲ್ಕನೇ ಹೆಜ್ಜೆ ಇಡಿ.

4.ಗೃಹ ಸಾಲ(Home loan)ವನ್ನು ವರ್ಗಾಯಿಸಿ.

ನಿಮಗೆ ಕಡಿಮೆ ಬಡ್ಡಿ ದರ ನಿಗದಿಪಡಿಸದಿದ್ದರೆ ನೀವು ನಿಮ್ಮ ಸಾಲವನ್ನು ಬೇರೆ ಇನ್ನೊಂದು ಬ್ಯಾಂಕ್‌ಗೆ ವರ್ಗಾಯಿಸಬಹುದು. ಈ ಹಂತ ಬಂದರೆ ಸ್ವಲ್ಪ ಸಂಶೋಧನೆ ಮಾಡಿ ಕಡಿಮೆ ಬಡ್ಡಿ ದರ ನೀಡುವ ಬೇರೆ ಬ್ಯಾಂಕ್ ಅನ್ನು ಸಂಪರ್ಕಿಸಿ. ಸಾಲ ವರ್ಗಾವಣೆ ಸಂದರ್ಭ ಪ್ರೊಸೆಸಿಂಗ್ ಫೀ ಮತ್ತು ಇತರ ಶುಲ್ಕ ಬೀಳಬಹುದು. ಈ ಶುಲ್ಕ ಮನ್ನಾ ಮಾಡಲು ಕೇಳಿಕೊಳ್ಳಬಹುದು.

WhatsApp Group Join Now
Telegram Group Join Now