E-Khata: BBMP ಎಡವಟ್ಟು, ಬೆಂಗಳೂರಿನ ಈ ಕಾರಣಕ್ಕೆ ಸಾವಿರಾರು ಆಸ್ತಿದಾರರಿಗೆ ಈ ಕಾರಣಕ್ಕೆ ಸಂಕಷ್ಟ!
E-Khata:ಬೆಂಗಳೂರಿನಲ್ಲಿ ಆಸ್ತಿಗಳ ಮಾರಾಟದ ಸಮಯದಲ್ಲಿ ಮೋಸವಾಗಬಾರದು ಮತ್ತು ಆಸ್ತಿ ವ್ಯಾಪ್ತಿಯಿಂದ ಹೊರಗೆ ಉಳಿದಿರುವ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರಬೇಕು ಎನ್ನುವ ಉದ್ದೇಶದಿಂದ ಇ – ಖಾತಾವನ್ನು(E-Khata) ಕಡ್ಡಾಯ ಮಾಡಲಾಗಿದೆ. ಆದರೆ, ಬಿಬಿಎಂಪಿಯು ಇ ಖಾತಾ(E-Khata) ವಿತರಣೆಯ ಮಾಡುವುದಕ್ಕೆ ಮುಂಚೆ ಮಾಡಿರುವ ಕೆಲಸ ಇದೀಗ ಬೆಂಗಳೂರಿನ ಸಾವಿರಾರು ಆಸ್ತಿದಾರರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಅದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬೆಂಗಳೂರಿನ ಅಂದಾಜು 24 ಲಕ್ಷ ಆಸ್ತಿದಾರರಿಗೆ ಇ – ಖಾತಾ(E-Khata) ನೀಡುವುದಕ್ಕೆ ಮುಂದಾಗಿದ್ದು. ಕಳೆದ ಒಂದು ವರ್ಷದಿಂದಲೂ ಇ ಖಾತಾ(E-Khata)ವಿತರಣೆಗೆ ಬೇಕಾದ ಸಿದ್ಧತೆ ಮಾಡಿಕೊಂಡಿದ್ದು. ಈಗಲೂ ಬೆಂಗಳೂರಿನ ಆಸ್ತಿದಾರರಿಗೆ ಇ ಖಾತಾ ವಿತರಣೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಇಲ್ಲಿಯವರೆಗೆ BBMPಯ ಕಂದಾಯ ವಿಭಾಗದ ಅಧಿಕಾರಿಗಳು ಅಂದಾಜು 3.5 ಲಕ್ಷ ಆಸ್ತಿಗಳಿಗೆ ಇ ಖಾತಾ ವಿತರಣೆ ಮಾಡಿದ್ದಾರೆ. ಆದರೆ ಈ ರೀತಿ ಖಾತಾಗಳನ್ನು ವಿತರಣೆ ಮಾಡುವುದಕ್ಕೂ ಮುಂಚೆ ಭಾರೀ ಎಡವಟ್ಟು ಮಾಡಿದ್ದು. ಅದು ಆಸ್ತಿದಾರರ ದಾಖಲೆ ಮತ್ತು ಮಾಹಿತಿಯ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಹೌದು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಎಲ್ಲಾ ಆಸ್ತಿಗಳಿಗೂ ಇ ಖಾತಾ(E-Khata)ವನ್ನು ಕಡ್ಡಾಯ ಮಾಡಲಾಗಿದೆ. ಆಸ್ತಿಗಳ ಡಿಜಿಟಲ್ ಪ್ರಕ್ರಿಯೆ ಇ ಖಾತಾ ಆಗಿದೆ. ಬೆಂಗಳೂರಿನಲ್ಲಿ 2024ರಲ್ಲಿ ಇ-ಖಾತಾ(E-Khata)ಗಳನ್ನು ಕೊಡುವುದಕ್ಕೆ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣ ಪ್ರಕ್ರಿಯೆ ಶುರು ಮಾಡಿದೆ. ಆದರೆ ಇದಕ್ಕೂ ಮೊದಲು ಬಿಬಿಎಂಪಿ 2022ರಲ್ಲಿ ಪ್ರಾಯೋಗಿಕ ಇ ಖಾತಾ ವಿತರಣೆ ಮಾಡುವಾಗ ಮಾಡಿದ್ದ ಕೆಲಸ ಇದೀಗ 30,000 ಸಾವಿರಕ್ಕೂ ಹೆಚ್ಚು ಆಸ್ತಿದಾರರಿಗೆ ಸಂಕಷ್ಟವನ್ನು ತಂದೊಡ್ಡುವ ಸಾಧ್ಯತೆ ಇದೆ. ಈ ಸಂಬಂಧ TH ವರದಿ ಮಾಡಿದೆ.
BBMPಯು ಬೆಂಗಳೂರಿನ ಆಸ್ತಿಗಳಿಗೆ ಇ ಖಾತಾ (E-Khata)ಕಡ್ಡಾಯ ಮಾಡಿದೆ. ಮೊದಲು ಬೆಂಗಳೂರಿನಲ್ಲಿ ಆಸ್ತಿಗಳಿಗೆ ಇ – ಖಾತಾ ವಿತರಿಸಲಾಯಿತು. ಅದಾದ ನಂತರ ರಾಜ್ಯದಾದ್ಯಂತ ಆಸ್ತಿಗಳಿಗೆ ಇ ಖಾತಾ ವಿತರಣೆ ಮಾಡುವುದನ್ನು ಕಡ್ಡಾಯ ಮಾಡಲಾಯಿತು. ಆದರೆ 2022ರಲ್ಲಿ ಈ ಯೋಜನೆಯ ಭಾಗವಾಗಿ ಡಿಜಿಟಲ್ ಖಾತಾ ಪ್ರಮಾಣಪತ್ರಗಳನ್ನು ನೀಡುವಾಗ ಆಸ್ತಿಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗಿದೆ. ಅಂದಾಜಿನ ಪ್ರಕಾರ 30,000 ಆಸ್ತಿ ದಾಖಲೆಗಳು ಇದರಲ್ಲಿ ಇವೆ. ಆದರೆ, ಈ ದಾಖಲೆಗಳು / ಇ-ಖಾತಾಗಳು(E-Khata) ನಕಲಿಗೆ ಕಾರಣವಾಗಬಹುದು ಎನ್ನುವ ಆತಂಕ ಎದುರಾಗಿದೆ.
2022 ರಲ್ಲಿ BBMP ಆಸ್ತಿ ಮಾಲೀಕರ ಆಸ್ತಿಯನ್ನು ಡಿಜಿಟಲೀಕರಣ ಮಾಡುವಾಗ ಅಥವಾ ಇ-ಖಾತಾ ಆಯ್ಕೆಯನ್ನು ಕಡ್ಡಾಯ ಮಾಡಿತ್ತು. ಇದೀಗ ಆಸ್ತಿಗಳ ಮಾರಾಟಕ್ಕೆ ಇ ಖಾತಾವನ್ನು ಕಡ್ಡಾಯ ಮಾಡಲಾಗಿದೆ. ಈ ಹಿಂದೆ ಅರ್ಜಿದಾರರು ಸಬ್-ರಿಜಿಸ್ಟ್ರಾರ್ ಕಚೇರಿಗಳಲ್ಲಿ ಅಗತ್ಯ ದಾಖಲೆಗಳನ್ನು ಹಸ್ತಚಾಲಿತವಾಗಿ ಸಲ್ಲಿಸಬೇಕಾಗಿತ್ತು. ಅದಾದ ಮೇಲೆ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇ-ಖಾತಾ ವಿತರಣೆ ಮಾಡಲು ಅಪ್‌ಲೋಡ್ ಮಾಡಲಾಗಿತ್ತು. ಈಗ ಆಸ್ತಿ ಮಾಲೀಕರು ಕರಡು ಇ-ಖಾತಾವನ್ನು ಡೌನ್‌ಲೋಡ್ ಮಾಡಿದ ನಂತರ ನೇರವಾಗಿ ಇ-ಖಾತಾ ವೆಬ್‌ಸೈಟ್‌ನಲ್ಲಿ ತಮ್ಮ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗಿದೆ.
ಈ ಲೋಪವನ್ನು BBMPಯ ಕಂದಾಯ ವಿಭಾಗದ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಆದರೆ, ಆತಂಕಪಡುವ ಅಗತ್ಯವಿಲ್ಲ. ಈ ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಭರವಸೆ ನೀಡಿದ್ದಾರೆ.